HOME
CINEMA NEWS
GALLERY
TV NEWS
REVIEWS
CONTACT US
ಭರಾಟೆಗೆ ಮೂವರು ನಿರ್ದೇಶಕರುಗಳ ಸಾಥ್
‘ಭರಾಟೆ’ ಚಿತ್ರದ ಮೂರನೇಗೀತೆ ಹೀರೋಇಂಟ್ರಡಕ್ಷನ್ ಸಾಂಗ್‍ನ್ನು ನಿರ್ದೇಶಕರುಗಳಾದ ಮಹೇಶ್‍ಕುಮಾರ್, ನರ್ತನ್, ತರುಣ್‍ಸುಧೀರ್ ಅನಾವರಣಗೊಳಿಸಿದರು.ಅರ್ಜುನ್‍ಜನ್ಯಾ ಸಂಗೀತ ಮತ್ತು ಮುರಳಿ ನೃತ್ಯಇರಲಿದೆ.‘ಹೀ ಇಸ್ ಎ ಗೈಡೋ, ರಾಜಸ್ಥಾನ್ ಪೈಡೋ’ ಹಾಡಿಗೆಚಂದನ್‍ಶೆಟ್ಟಿಧ್ವನಿಯಾಗಿದ್ದಾರೆ.ದೃಶ್ಯದಲ್ಲಿಗಿರಿ, ಅಲೋಕ್ ಹಾಡುವಗೀತೆಗೆ ನಾಯಕ ಮುರಳಿ ವಿಭಿನ್ನ ಲುಕ್, ಕಾಸ್ಟ್ಯೂಮ್‍ದಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಗಳೆಯನ ಚಿತ್ರ ಬರುತ್ತಿದೆಎಂದರೆ ನಮಗೆ ಎಚ್ಚರಿಕೆಯಘಂಟೆಇದ್ದಂತೆ.ನಾವುಗಳು ಅದಕ್ಕಿಂತಲೂ ಹೆಚ್ಚಾಗಿ ತೋರಿಸಲು ಶ್ರಮ ವಹಿಸಬೇಕಾಗುತ್ತದೆ.ಅವನು ಪೂರ್ಣಕಮರ್ಷಿಯಲ್‍ಜಾಗಕ್ಕೆಅಂತಲೇಚಿತ್ರ ಮಾಡುತ್ತಾನೆಂದುತರುಣ್‍ಸುದೀರ್ ಹೇಳಿದರು.ನಿರ್ದೇಶಕಚೇತನ್‍ಕುಮಾರ್ ಮಾತನಾಡಿ ಮೂವರಿಂದಲೇ ಸಾಂಗ್‍ನ್ನು ಅನಾವರಣಗೊಳಿಸಬೇಕೆಂಬ ಆಸೆ ಇತ್ತು.ಹೀರೋಇಂಟ್ರಡಕ್ಷನ್ ಸಾಂಗ್ ಬರೆಯುವುದುಅಂದರೆ ಖುಷಿ.ಅದರಲ್ಲೂ ಪಾತ್ರವನ್ನು ವರ್ಣಿಸವುದುಇನ್ನಷ್ಟು ಶಕ್ತಿ ಕೊಡುತ್ತದೆ.ಚಂದನ್‍ಶೆಟ್ಟಿ ಕೇಳಿದಾಕ್ಷಣ ಬಂದುಕಂಠದಾನ ಮಾಡಿದ್ದಾರೆ.ರಾಜಸ್ತಾನದ ಬಿಸಿಲು ಲೆಕ್ಕಿಸದೆ ಶ್ರೀಮುರಳಿ ತುಂಬ ಪ್ರೋತ್ಸಾಹಕೊಟ್ಟರು.ಅದಕ್ಕಾಗಿಕಲರ್‍ಫುಲ್ ಆಗಿ ಬಂದಿದೆ.ಮೊದಲಬಾರಿ ಸಹೋದರರಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪಒಟ್ಟಿಗೆತೆರೆ ಹಂಚಿಕೊಂಡಿದ್ದಾರೆಎಂದರು.

ಹಾಡನ್ನು ನೋಡಿದ ಮೇಲೆ ಇನ್ನಷ್ಟುಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಾವುಗಳು ಎಷ್ಟೇ ಕಷ್ಟಪಟ್ಟರೂಅದಕ್ಕೆಲ್ಲಾಕಾರಣಚಿತ್ರತಂಡ.ಎಲ್ಲಾಕ್ರೆಡಿಟ್‍ಟೀಮ್‍ಗೆ ಸಲ್ಲಬೇಕು.ಎರಡು ಹಾಡನ್ನು ಗೆಲ್ಲಿಸಿದ್ದಕ್ಕೆ ಥ್ಯಾಂಕ್ಸ್.ಮೂರನೆಯದನ್ನು ನಿಮಗೆ ಒಪ್ಪಿಸಿದ್ದೇವೆ, ನೋಡಿ ಹರಸಿ ಎಂದು ಶ್ರೀಮುರಳಿ ಹೇಳಿದರು.ನಾಯಕಿಶ್ರೀಲೀಲಾ ನಟಿಸಿರುವ ಚಿತ್ರವು ಮುಂದಿನ ತಿಂಗಳು ಹದಿನೆಂಟರಂದು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
25/09/19

ವೇದಿಕೆ ಒಂದು ಕಾರ್ಯಕ್ರಮ ಎರಡು
ಶ್ರೀಮುರಳಿ 37ನೇ ಹುಟ್ಟುಹಬ್ಬಕ್ಕೆ ಅವರ ಅಭಿನಯದ ಎರಡು ಚಿತ್ರಗಳ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಿತು. ಮೊದಲಿಗೆ ‘ಭರಾಟೆ’ ಚಿತ್ರದ ಟೀಸರ್, ತರುವಾಯ ‘ಮದಗಜ’ ಸಿನಿಮಾದ ಟೈಟಲ್ ಅನಾವರಣವನ್ನು ದರ್ಶನ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಬಾಕ್ಸ್ ಆಫೀಸ್ ಸುಲ್ತನ್ ಭರಾಟೆ ನಿರ್ದೇಶಕ ಚೇತನ್‍ಕುಮಾರ್ ಚಿತ್ರಾನ್ನ ತಿಂದು ಈ ಲೆವಲ್‍ಗೆ ಸಿನಿಮಾ ನೀಡುತ್ತಾರೆ. ಇನ್ನೆನಾದರೂ ಚಿಕನ್ ಸೇವಿಸಿದರೆ ಎಂತಹ ಚಿತ್ರ ನೀಡಬಹುದು. ಅವರದು ಮಾತು ಕಡಿಮೆ ಕೆಲಸ ಜಾಸ್ತಿ ಎಂದು ಹೇಳಿದ್ದಾರೆ. ಉಗ್ರಂ ಚಿತ್ರ ಬಿಡುಗಡೆಯಾದಾಗ ನಾನಿಲ್ಲ ಅಂತ ಹೊಟ್ಟೆ ಉರಿಯಿತು. ಮದಗಜ ಟೈಟಲ್ ಯಾರಾದ್ರೆ ಏನು. ಅದು ಕನ್ನಡ ಸಿನಿಮಾ ಅಷ್ಟೇ. ಶೀರ್ಷಿಕೆಯನ್ನು ಯಾರೋ ನೊಂದಣಿ ಮಾಡಿಸುತ್ತಾರೆ. ಅದು ಯಾರಿಗೂ ಒಲಿಯುತ್ತೆ. ಅದೃಷ್ಟದ ತುಪ್ಪ ಇವರಿಗೆ ಒಲಿದಿದೆ. ಈ ಸಿನಿಮಾವು ನನಗೆ ಹೊಟ್ಟೆ ಉರಿಯುವಂತೆ ಯಶಸ್ಸು ಗಳಿಸಲಿ ಅಂತ ಹಾರೈಸಿದರು.

ಪ್ರಾರಂಭದಲ್ಲಿ ಮೈಕ್ ತೆಗೆದುಕೊಂಡ ನಿರ್ದೇಶಕ ಚೇತನ್‍ಕುಮಾರ್ ಹಿಂದಿನ ಎರಡು ಸಿನಿಮಾಗಳು ಆಕ್ಷನ್, ಕುಟುಂಬ ಸಮೇತ ನೋಡಬಹುದಂತಿತ್ತು. ಇದರಲ್ಲಿ ಅದಕ್ಕಿಂತ ಶೇಕಡ ಒಂದರಷ್ಟು ಕಡಿಮೆ ಇಲ್ಲದಂತೆ ಏನು ಹೇಳಬೇಕೋ ಅದೆಲ್ಲವನ್ನು ಭರಾಟೆಯಲ್ಲಿ ತೋರಿಸಲಾಗಿದೆ. ಮೇ ಮೊದಲವಾರ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದರು. ನಾಯಕಿ ಶ್ರೀಲೀಲಾ ಹೆಚ್ಚೇನು ಹೇಳಲಿಲ್ಲ.

ಮದಗಜ ನಿರ್ದೇಶಕ ಮಹೇಶ್‍ಕುಮಾರ್.ಎಸ್ ಹೇಳುವಂತೆ ಟೈಟಲ್ ವಿವಾದವನ್ನು ಬಗೆಹರಿಸುವಲ್ಲಿ ದರ್ಶನ್ ಮಧ್ಯಸ್ತಿಕೆ ವಹಿಸಿಕೊಂಡಿದ್ದರಿಂದ ಎಲ್ಲವು ಸುಸೂತ್ರವಾಗಿ ಮುಗಿದಿದೆ. ಅದಕ್ಕಾಗಿ ಯಜಮಾನರಿಗೆ ಥ್ಯಾಂಕ್ಸ್ ಎಂದರು.

ಹೊಟ್ಟೆ ಹಸಿದವರಿಗೆ ದರ್ಶನ್ ಯಾವಾಗಲೂ ಅನ್ನ ಹಾಕ್ತಾರೆ. ಅದನ್ನು ಯಾರಿಗೂ ಹೇಳುವುದಿಲ್ಲ. ರಾಮಮೂರ್ತಿ ಬಳಿಇದ್ದ ಟೈಟಲ್‍ನ್ನು ಮನದಟ್ಟು ಮಾಡಿಸಿ ನಮಗೆ ಕೊಡಿಸಿದ್ದಾರೆ. ಅವರು ಒಂಥರ ಆಲದಮರ ಇದ್ದಂತೆ. ಅದರ ನೆರಳಿನಲ್ಲಿ ಸಾವಿರಾರು ಕಲಾವಿದರು ಬದುಕುತ್ತಿದ್ದಾರೆಂದು ನಿರ್ಮಾಪಕ ಉಮಾಪತಿ ಹೊಗಳಿಗೆ ಮಾತನ್ನು ಮೀಸಲಿಟ್ಟರು. ಇಬ್ಬರ ಸ್ಟಾರ್ ನಟರ ಹಾಡಿಗೆ ನೃತ್ಯ ತಂಡವು ಡ್ಯಾನ್ಸ್ ಮಾಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿತು.
ಸಿನಿ ಸರ್ಕಲ್.ಇನ್ ನ್ಯೂಸ್
19/12/18


ಭರಾಟೆಗೆ ರಾಜಸ್ಥಾನ್‍ದಲ್ಲಿ ಫೋಟೋ ಶೂಟ್
ಮಫ್ತಿ ನಂತರ ಶ್ರೀಮುರಳಿ ‘ಭರಾಟೆ’ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸುದ್ದಿ ಹರಡಿತ್ತು. ಅದರಂತೆ ಭರ್ಜರಿ ಚೇತನ್‍ಕುಮಾರ್ ನಿರ್ದೇಶನದಲ್ಲಿ ಚಿತ್ರದ ಫೋಟೋ ಶೂಟ್ ದೂರದ ರಾಜಾಸ್ತಾನ್‍ದಲ್ಲಿ ಸದ್ದಿಲ್ಲದೆ ಮುಗಿಸಿದೆ. ಆಗಸ್ಟ್ 15ರಂದು ಫಸ್ಟ್ ಲುಕ್ ರಿವೀಲ್ ಮಾಡುತ್ತವೆಂದು ಹೇಳಿಕೊಂಡಿದ್ದ ತಂಡವು ನಾಲ್ಕು ದಿನಗಳ ಮುಂಚಿತವಾಗಿ ಪೋಟೋವನ್ನು ಬಿಡಲಾಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲಿನ ಸಾಂಪ್ರದಾಯಿಕ ಕಾಸ್ಟ್ಯೂಮ್‍ದಲ್ಲಿ ಶ್ರೀಮುರಳಿ, ನಾಯಕಿ ಶ್ರೀಲೀಲಾ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಿಂದಿನ ಬಹದ್ದೂರ್, ಭರ್ಜರಿ ಕತೆಯ ಛಾಯೆ ಇದರಲ್ಲಿ ಇರಕೂಡದೆಂದು ನಿರ್ಧಸಿರುವ ನಿರ್ದೇಶಕರು ಹೊಸ ಗೆಟಪ್‍ದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರಂತೆ.

ಇವರ ಚಿತ್ರಗಳಿಗೆ ಹಾಡುಗಳು ಹೆಚ್ಚು ಮಹತ್ವ ಇರುವಂತೆ ಭರಾಟೆಯಲ್ಲಿ ಅದು ಮುಂದುವರೆಯಲಿದೆ. ಇದಕ್ಕೆ ತಕ್ಕಂತೆ ಅರ್ಜುನ್‍ಜನ್ಯಾ ರಾಗಗಳನ್ನು ಹೊಸೆಯುವುದರಲ್ಲಿ ತಲ್ಲೀನರಾಗಿದ್ದಾರೆ. ಕತೆಯು ರಾಜಸ್ಥಾನ ಹಿನ್ನಲೆಯಾಗಿದ್ದರಿಂದ ಇದೇ 21ರಿಂದ ಸೆಪ್ಟಂಬರ್ 9 ರ ವರೆವಿಗೆ ಅಲ್ಲಿನ ಸುಂದರ ತಾಣಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಒಂಬತ್ತು ಖಳನಾಯಕರುಗಳು ಇರುವುದು ವಿಶೇಷವಾಗಿದೆ. ಭುವನ್‍ಗೌಡ ಛಾಯಗ್ರಹಣದ ಚಿತ್ರಕ್ಕೆ ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಸ್ವಾತಂತ್ರ ದಿನಾಚರಣೆಯಂದು ಹುಬ್ಬಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವೃತ್ತದಲ್ಲಿ ಮೋಷನ್ ಪಿಕ್ಚರ್ ಬಿಡುಗಡೆ ಮಾಡಲು ಸಿದ್ದತೆಗಳು ನಡೆದಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/08/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore