HOME
CINEMA NEWS
GALLERY
TV NEWS
REVIEWS
CONTACT US
ಧನಂಜಯ್ ಮೆಥಡ್ ಆ್ಯಕ್ಟರ್ - ಆರ್‍ಜಿವಿ
ಟಗರು ಚಿತ್ರದಲ್ಲಿ ಡಾಲಿ ಹೆಸರಿನ ಮೂಲಕ ಉತ್ತಂಗಕ್ಕೆ ಹೋಗುತ್ತಿರುವ ಧನಂಜಯ್ ಮೊದಲ ಬಾರಿ ನಾಲ್ಕು ಭಾಷೆಗಳಲ್ಲಿ ನಟಿಸಿರುವ ‘ಭೈರವಗೀತ’ ಚಿತ್ರದ ಟ್ರೈಲರ್ ಇತ್ತೀಚೆಗೆ ಜಿಟಿ ಮಾಲ್‍ದಲ್ಲಿ ಬಿಡುಗಡೆ ಗೊಂಡಿತು. ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರಾಮ್‍ಗೋಪಾಲ್‍ವರ್ಮ, ತಡವಾಗಿ ಬರುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೆನೆ. 22 ವರ್ಷದ ಸಿದ್ದಾರ್ಥ ಎಂದೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರುವುದಿಲ್ಲ. ಅವರ ಪ್ರತಿಭೆಯನ್ನು ಶೋದಿಸಿದ್ದು, ಸೋಲು ಕಂಡಿಲ್ಲವೆಂದು ಭಾವಿಸುತ್ತೇನೆ. ಧನಂಜಯ್ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಲ್ಲುವಂತಹ ನಟ. ಈ ಚಿತ್ರದ ಮೂಲಕ ಅವರು ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಪರಿಚಯವಾಗುತ್ತಿದ್ದಾರೆ. ಯಾವುದೇ ಪಾತ್ರಗಳನ್ನು ನೋಡುವಾಗ ಅದನ್ನು ನಿರ್ವಹಿಸುವ ನಟನ ಸಾಮಥ್ರ್ಯ, ದೌರ್ಬಲ್ಯವನ್ನು ಸೂಕ್ಷವಾಗಿ ನೋಡುತ್ತೇನೆ. ಒಬ್ಬ ನಟನಿಗೆ ಅವನದ್ದೆ ಆದ ಒಂದಷ್ಟು ಇತಿಮಿತಿಗಳು ಇರುತ್ತವೆ. ಅದರಲ್ಲಿ ಇವರು ಒಬ್ಬ ಮೆಥಡ್ ನಟ. ಚಿತ್ರವು 90ರ ದಶಕ ರಾಯಲ ಸೀಮಾದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದೆ. ಮೇಲ್ಷೋಟಕ್ಕೆ ವೈಲೆಂಟ್ ಆಗಿದ್ದರೂ ಅದರ ಹಿಂದೆ ಒಂದು ಸುಂದರ ಪ್ರೇಮಕತೆ ಇದೆ. ಜನರ ಬದುಕಿನ ಹೋರಾಟ, ಸಮಾಜದ ಎರಡು ವರ್ಗಗಳ ನಡುವಿನ ಸಂಘರ್ಷವಿದೆ. ನಮ್ಮ ನಡುವೆ ನಡೆದ ಕತೆಯಾಗಿದ್ದರಿಂದ ಜನರಿಗೆ ಬೇಗ ತಲುಪುತ್ತದೆ ಎಂಬ ಆಶಾಭಾವನೆ ಇದೆ ಎಂದರು .

ಟಗರುಗಿಂತ ಕ್ರೂರವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರ ಆದೇಶದಂತೆ ಲಿಪ್‍ಲಾಕ್ ದೃಶ್ಯದಲ್ಲಿ ನಟನೆ ಮಾಡಲಾಗಿದೆ. ಮೊದಲಬಾರಿ ಬೇರೆ ಭಾಷೆಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಎಂಬುದು ಧನಂಜಯ್ ಖುಷಿಯ ನುಡಿ.
ಆರ್‍ಜಿವಿ ಅವರಿಂದ ಕರೆ ಬಂದಾಗ ನಂಬಲಾಗಲಿಲ್ಲ. ನಂತರ ಏಳು ಹಾಡು ಬರೆಯಲು ಅವಕಾಶ ಮಾಡಿಕೊಟ್ಟರು. ಆಯಾಮ ಹೊರಗಡೆ ಆದರೆ, ವ್ಯಾಯಾಮ ಚಿತ್ರದೊಳಗಿದೆ. ಸಮಾಜದಲ್ಲಿ ಮುಖವಾಡ ಇರುವ ಜನರನ್ನು ಇದರಲ್ಲಿ ತೋರಿಸಲಾಗಿದೆ É್ಲೀಷಣೆಯನ್ನು ಸಾಹಿತಿ ಕೆ.ಕಲ್ಯಾಣ್ ನೀಡಿದರು.

ಆರ್‍ಜಿವಿ ಅವರು ನನಗೆ ಮೆಂಟರ್ ಆಗಿದ್ದಾರೆ. ಅವರ ಪ್ರೋತ್ಸಾಹದಿಂದಲೇ ಅವರದೆ ಮೂರು ಚಿತ್ರಗಳಿಗೆ ಸಂಕಲನ ಮಾಡಲಾಯಿತು. ಸ್ವಾಭಾವಿಕ ನೈಸರ್ಗಿಕ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಅಂತಾರೆ ನಿರ್ದೇಶಕ ಸಿದ್ದಾರ್ಥ್.
ನಾಯಕಿಯ ತಂದೆ ಬಾಲ್‍ರಾಜ್‍ವಾಡಿ, ಬಾಮಾ ಹರೀಶ್, ಕೆ.ಪಿ.ಶ್ರೀಕಾಂತ್ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಇದೇ ಸಮಯದಲ್ಲಿ ಕನ್ನಡ, ತೆಲುಗು ಟ್ರೈಲರ್‍ನ್ನು ತೋರಿಸಲಾಯಿತು. ನಾಯಕಿ ಇರಾ ಅನುಪಸ್ಥಿತಿಗೆ ಕಾರಣ ತಿಳಿಯಲಿಲ್ಲ. ಆರ್‍ಜಿವಿ ಮತ್ತು ಭಾಸ್ಕರ್‍ರಿಶಿ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ಇದೇ 22 ರಂದು ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
6/11/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore