HOME
CINEMA NEWS
GALLERY
TV NEWS
REVIEWS
CONTACT US
ಬೆಟ್ಟದ ದಾರಿ ಹಾಡುಗಳು ಬಾಕಿ
ಹಳ್ಳಿ ಮಕ್ಕಳ ಸಾಹಸದ ಕಥಾನಕವನ್ನು ಹೊಂದಿರುವ ‘ಬೆಟ್ಟದ ದಾರಿ’ ಚಿತ್ರದ ಚಿತ್ರೀಕರಣ ಶಿವಗಂಗೆ, ಚನ್ನಪಟ್ಟಣ, ಬಿಜಾಪುರ ಹಾಗೂ ಉತ್ತನಾಳ್ ಸುತ್ತಮುತ್ತ ಚಿತ್ರೀಕರಣ ನಡೆಸಿ ಇದೀಗ ಮಾತಿನ ಭಾಗದ ಹಾಗೂ ಒಂದು ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದ ಮೂರು ಹಾಡುಗಳ ಚಿತ್ರೀಕರಣ ಏಪ್ರಿಲ್ ತಿಂಗಳಲ್ಲಿ ಬಿಜಾಪುರದ ಸುತ್ತಮುತ್ತ ನಡೆಸಲಾಗುವುದು. ಈ ಹಿಂದೆ ಬಂಗಾರಿ, ಶಿವನಪಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಾ ಚಂದ್ರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಹೀರಾಲಾಲ್ ಮೂವೀಸ್ ಲಾಂಛನದಲ್ಲಿ ಚಂದ್ರಕಲಾ.ಟಿ.ಆರ್.ಮತ್ತು ಮಂಜುನಾಥನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಅರ್ಜುನ್ (ಕಿಟ್ಟಿ) ಸಂಕಲನ, ಡಾ: ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹಾಗೂ ವಿಜಯ ಭರಮ ಸಾಗರ ಸಾಹಿತ್ಯವಿದೆ. ಮಾ|| ನಿಶಾಂತ್ ಟಿ.ರಾಥೋಡ್ ಮಾ.ಅಂಕಿತ ನವನಿಧಿ, ಬೇಬಿ ಲಕ್ಷ್ಮಿ ಶ್ರೀ. ಮಾ|| ರಂಗನಾಥ್ ಯಾದವ್, ಮಾ|| ರೋಹಿತ್, ಮಾ|| ವಿಜ್ಞೇಶ, ಬೇಬಿ ಮಾನ್ಯತ, ಎಂ.ನಾಯಕ್, ಮನ್‍ದೀಪ್ ರಾಯ್ ರಮೇಶ್ ಭಟ್, ಉಮೇಶ್, ಮೈಸೂರ್ ಮಲ್ಲೇಶ್, ನಿಶಿತ ರಾಘವೇಂದ್ರ, ಗಂಗಾಧರ್ ಗೌಡ ಆರ್.ನಾಗೇಶ್ ಮುಂತಾದವರ ತಾರಾಬಳಗವಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
10/03/18

ಮಕ್ಕಳಿಂದ ನೀರಿನ ಸಮಸ್ಯೆಗೆ ಮುಕ್ತಿ
ಕಾವೇರಿ, ಮಹಾದಾಯಿ ಯೋಜನೆ ಇವುಗಳು ನೀರಿನ ವಿಷಯಕ್ಕೆ ಸಂಬಂದಿಸಿದೆ. ಇದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ರಾಜಕೀಯದ ಕೆಸರಾಟದಿಂದ ಮುಂದೇ ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ. ‘ಬೆಟ್ಟದ ದಾರಿ’ ಎನ್ನುವ ಮಕ್ಕಳ ಸಿನಿಮಾದ ಕತೆಯು ನೀರಿನದ್ದೆ ಆಗಿದೆ. ಕಾಲ್ಪನಿಕ ಬರದ ಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ. ಇದಕ್ಕೆ ಅಲ್ಲಿನ ಮುಖಂಡರು , ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ. ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡು ಚಾಣಾಕ್ಷತನದಿಂದ ಇದಕ್ಕೆ ಪರಿಹಾರ ಕಂಡುಹಿಡಿದು ಜನರು ನಿರಾಳರಾಗುವಂತೆ ಮಾಡುತ್ತಾರೆ. ಚಿಣ್ಣರುಗಳು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಚಿತ್ರ ನೋಡಬೇಕು ಎನ್ನುತ್ತಾರೆ ರಚನೆ,ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನದ ಪಾರುಪಥ್ಯವಹಿಸಿಕೊಂಡಿರುವ ಮಾ.ಚಂದ್ರು. ಇವರು ಈ ಹಿಂದೆ ಬಂಗಾರಿ ಎನ್ನುವ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಿಜಾಪುರದ ಬಸವನಬಾಗೇವಾಡಿ, ದೊಡ್ಡಬಳ್ಳಾಪುರ, ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ತಾರಬಳಗದಲ್ಲಿ ಪುಟಾಣ ಗಳಾದ ನಿಶಾಂತ್.ಟಿ.ರಾಠೋಡ್, ಅಂಕಿತ್‍ನವನಿಧಿ, ಲಕ್ಷೀಶ್ರೀ, ವಿಘ್ನೇಶ್, ಮಾನ್ಯತಾ.ಎಂ.ನಾಯಕ್, ರಂಗಸ್ವಾಮಿ, ರೋಹಿತ್‍ಗೌಡ ಇವರುಗಳೊಂದಿಗೆ ಹಿರಿ ಕಲಾವಿದರಾದ ರಮೇಶ್‍ಭಟ್, ಬ್ಯಾಂಕ್ ಜನಾರ್ಧನ್, ಉಮೇಶ್, ಗಂಗಾಧರಗೌಡ ನಟಿಸುತ್ತಿದ್ದಾರೆ. ಹಳ್ಳಿ ಉದ್ದಾರಕ್ಕಾಗಿ ಶ್ರಮ ಪಡುವ ಪಾತ್ರದಲ್ಲಿ ನಾಗೇಶ್ ಅವರಿಗೆ ಅಭಿನಯ ಹೊಸ ಅನುಭವ. ಮಕ್ಕಳಿಗೆ ನಟನೆ ಬಗ್ಗೆ ತರಭೇತಿ ಶಿಬರ ಏರ್ಪಡಿಸಿ ಕ್ಯಾಮಾರ ಮುಂದೆ ನಿಲ್ಲಿಸುತ್ತಿದ್ದಾರಂತೆ. ಡಾ.ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಮತ್ತು ಪತ್ರಕರ್ತ ವಿಜಯಭರಮಸಾಗರ ವಿರಚಿತ ಒಟ್ಟು ನಾಲ್ಕು ಗೀತೆಗಳಿಗೆ ವೀರ್‍ಸಮರ್ಥ್ ಸಂಗೀತ ಸಂಯೋಜನೆ ಇದೆ. ಛಾಯಗ್ರಹಣ ನಂದಕುಮಾರ್, ಸಂಕಲನ ಅರ್ಜುನ್, ನೃತ್ಯ ಕಂಬಿರಾಜ್ ಅವರದಾಗಿದೆ. ಮೂಕಹಕ್ಕಿ ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದ ಚಂದ್ರಕಲಾ.ಟಿ.ಆರ್ ಇವರು ಸಹೋದರ ಮಂಜುನಾಥ್.ಹೆಚ್.ನಾಯಕ್ ಅವರೊಂದಿಗೆ ಜಂಟಿಯಾಗಿ ಎರಡನೆ ಪ್ರಯತ್ನ ಎನ್ನುವಂತೆ ಸುಮಾರು ನಲವತ್ತು ಲಕ್ಷದಲ್ಲಿ ಮುಗಿಸಲು ಮತ್ತು ಮೇ ತಿಂಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು. ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-24/01/18

ಬೆಟ್ಟದ ದಾರಿಯಲ್ಲಿ ಬೆಳ್ಳಕ್ಕಿಗಳ ಹಾಡು
ಬಂಗಾರಿ, ಶಿವನಪಾದ Àಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಮಾ. ಚಂದ್ರು ‘ಬೆಟ್ಟದ ದಾರಿ’ ಮಕ್ಕಳ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಳ್ಳಿಯೊಂದರ ಅಭಿವೃದ್ಧಿಗಾಗಿ ತುಂಟ ಹುಡುಗರು ಹೇಗೆ ತಮ್ಮ ಕೊಡುಗೆಯನ್ನು ನೀಡಿದರು ಎಂಬ ಕಥಾ ಹಂದg ಇರಲಿದೆ. ದೇಸೀಯ ಕ್ರೀಡೆಗಳಾದ ಕುಂಟಬಿಲ್ಲೆ, ಬುಗುರಿಯಾಟ, ಚಿನ್ನು ದಾಂಡು ನಂಥಾ ಆಟಗಳನ್ನು ಬಳಸಲಾಗುತ್ತಿದೆ. ಸಿನಿಮಾ ಪತ್ರಕರ್ತ ವಿಜಯ್‍ಭರಮಸಾಗರ ರಚಿಸಿರುವ ‘ಬೆಳ್ಳಕ್ಕಿ ಸಾಲಂತೆ ಹಾರಾಡೋ ಆಸೆ ಈಗ’ ಎಂಬ ಹಾಡು ಸೇರಿದಂತೆ ನಾಲ್ಕು ಹಾಡುಗಳನ್ನು ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು. ಬಿಜಾಪುರ, ಬಸವನಬಾಗೇವಾಡಿ ಹಾಗೂ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ.

ಹೀರಾ ಲಾಲ್ ಮೂವೀಸ್ ಸಂಸ್ಥೆಯಲ್ಲಿ ಚಂದ್ರಕಲಾ ಟಿ.ಆರ್., ಮಂಜುನಾಥ ಹೆಚ್. ನಾಯ್ಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಸಾಹಿತ್ಯವಿದೆ. ಮುರಳಿ ನೃತ್ಯ ನಿರ್ದೇಶನವಿದೆ. ಮುಖ್ಯ ಪಾತ್ರದಲ್ಲಿ ಮಾ. ನಿಶಾಂತ್ ಟಿ. ರಾಥೋಡ್, ಲಕ್ಷ್ಮಿಶ್ರೀ, ರಂಗನಾಥ್ ಯಾದವ್, ಅಮೋಘ ನವನಿಧಿ ತಾರಾಬಳಗದಲ್ಲಿದ್ದು, ಉಳಿತ ಕಲಾವಿದರು ಮತ್ತು ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಮೂಕಹಕ್ಕಿ ನಿರ್ಮಾಣ ಮಾಡಿರುವ ಚಂದ್ರಕಲಾ ರಾಠೋಡ್ ಬಂಡವಾಳ ಹೂಡುತ್ತಿದ್ದಾರೆ.

-20/12/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore