HOME
CINEMA NEWS
GALLERY
TV NEWS
REVIEWS
CONTACT US
ಬೆಂಕಿಯ ಬಲೆ ಪ್ರೀತಿಯ ಕೊಲೆ
80ರ ದಶಕದಲ್ಲಿ ‘ಬೆಂಕಿಯ ಬಲೆ’ ಸಾಂಸರಿಕ ಸಿನಿಮಾ ತರೆಕಂಡು ಹಿಟ್ ಆಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಕಾರ್ಯನಿರತವಾಗಿದೆ. ಇದರಲ್ಲಿ ಹಲವು ವಿಶೇಷತೆಗಳು ಕೂಡಿದೆ. ಕತೆ,ಚಿತ್ರಕತೆ, ಸಾಹಿತ್ಯ, ನಿರ್ಮಾಪಕ,ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ಮೈಸೂರಿನ ಶಿವಾಜಿ ಹೇಳುವುದಿಷ್ಟು: ನನಗೆ ಯಾವುದೇ ರೀತಿಯ ಚಿತ್ರರಂಗದ ಅನುಭವವಿಲ್ಲ. ಚಿತ್ರಕ್ಕೆ ಸ್ಕ್ರಿಪ್ಟ್ ಬರೆದುಕೊಂಡಿಲ್ಲ. ಶೂಟಿಂಗ್ ಜಾಗಕ್ಕೆ ಹೋದಾಗ ಅಲ್ಲಿಯೇ ನಾನು ಈ ಡೈಲಾಗ್ ಹೇಳುತ್ತೇನೆ. ನೀವು ಇದನ್ನು ಹೇಳಿ ಎಂದು ಮಾತನಾಡಿಕೊಂಡು ಚಿತ್ರೀಕರಿಸಿದ್ದೇವೆ. ಒಂದು ಬ್ಲಾಕ್ ಮ್ಯಾಜಿಕ್ ಕ್ಯಾಮರಾ ಎರಡು ಥರ್ಮಾಕೋಲ್ ಬಳಸಲಾಗಿ, ನಮಗೆ ಬೇಕಾದಂತೆ ಚಿತ್ರೀಕರಿಸಲಾಗಿದೆ. ನನ್ನದೆ ಕತೆಯಾಗಿದ್ದರಿಂದ ಏನು ಮಾಡಬೇಕೆಂದು ಮುಂಚೆಯೆ ತಿಳಿದುಕೊಂಡು, ಅದರಂತೆ ಮುಂದುವರೆದೆ. ಅದಕ್ಕೆ ಕಲಾವಿದರು ಪ್ರೋತ್ಸಾಹ ನೀಡಿದರು. ಹೆಸರು ಮಾಡಿರುವ ಕಲಾವಿದರು ಆ ಊಟ ಬೇಕು, ಕ್ಯಾರವಾನ್ ತರಿಸಿ ಎಂದು ನಿರ್ಭಂದ ಹಾಕುತ್ತಾರೆ. ಅದಕ್ಕಾಗಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಹುಡುಗಿ ಕೈಕೊಟ್ಟಾಗ ಬೇಸರದಲ್ಲಿ ದುಶ್ಚಟಕ್ಕಾಗಿ ಬೀಳುವ ಹುಡುಗರಿಗೆ ಸಂದೇಶವನ್ನು ಹೇಳಲಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಕ್ಯಾನ್ಸರ್ ರೋಗಿಯನ್ನು ಭೇಟಿಯಾಗಿ ರೂ.10 ನೀಡಿದರೆ ನಿಮ್ಮ ಸಾರ್ಥಕವಾಗುತ್ತದೆ.

ಆಡಿಯೋ ಸಿಡಿ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ಸರ್ಕಾರವು ಈ ಬಾರಿ ಚಂದನವನವು 85 ವರ್ಷ ತುಂಬಿದ ಸಂದರ್ಭದಲ್ಲಿ ಲಾಲ್‍ಬಾಗ್‍ದಲ್ಲಿ ಚಿತ್ರರಂಗದ ಇತಿಹಾಸ ಕುರಿತ ಫಲಪುಷ್ಪ ಪ್ರದರ್ಶನ ಏರ್ಪಾಟು ಮಾಡಿದೆ. ಎಲ್ಲರೂ ಅದನ್ನು ವೀಕ್ಷಿಸಬಹುದು. ಸಂಗೀತ, ಕಲೆ ಯಾರ ಸ್ವತ್ತು ಅಲ್ಲ. ಚಾಮುಂಡೇಶ್ವರಿ ಸ್ಟುಡಿಯೋಗೆ ಇತಿಹಾಸವಿದೆ. ಶ್ರದ್ದೆ, ಭಕ್ತಿಯಿಂದ ಸಿನಿಮಾ ಮಾಡಿದ್ದಲ್ಲಿ ಗೆಲುವು ಖಚಿತ ಎಂದರು.

ಜೇಡರಬಲೆ, ಬೆಂಕಿಯಬಲೆ ಚಿತ್ರದಂತೆ ಇದು ಯಶಸ್ಸು ಗಳಿಸಲಿ. ವಿಜಯರಾಘವೇಂದ್ರ ಗುಣಗಳನ್ನು ಅನುಕರಿಸಿ ಬಿಗ್‍ಬಾಸ್‍ನಲ್ಲಿ ವಿಜೇತನಾದೆ ಅಂತ ಪ್ರಥಮ್ ಹೇಳಿದರು. ಆಶಕ್ತ ಕಲಾವಿದರಾದ ಸತ್ಯಜಿತ್, ರೇಣುಕಾಪ್ರಸಾದ್ ಅವರುಗಳಿಗೆ ಉಚಿತವಾಗಿ ಸೈಟ್‍ನ್ನು ಕೊಡುತ್ತಿದ್ದಾರೆ. ಚಿತ್ರರಂಗದವರಿಗೆ ಅಂತಲೇ ನಿರ್ಮಾಪಕರು ಲೇಔಟ್ ಮಾಡಿರುವುದು ಸಂತಸದ ವಿಷಯ ಅಂತ ಉಮೇಶ್‍ಬಣಕಾರ್ ಹೇಳಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿಯ ಶಿಲ್ಪಶ್ರೀನಿವಾಸ್, ರಾಮ್‍ನಾರಾಯಣ್, ಜೂಮ್‍ರವಿ ಮುಂತಾದವರು ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು.

ಕಲಾವಿದರುಗಳಾದ ನಾಯಕಿ ಪ್ರೀತಿಮಡಕೇರಿ, ಪ್ರಿಯಾಪಾಂಡೆ, ಪವಿತ್ರಾ, ಸುಮಾಗೌಡ ಪಾತ್ರದ ಪರಿಚಯ ಮಾಡಿಕೊಂಡರು. ಶಿವಾಜಿ ನಿರ್ಮಾಣದಲ್ಲಿ ಕ್ರೈಂ, ಮಂಡ್ಯಾ ಟು ಸಿಂಗಾಪುರ್ ಸಿನಿಮಾಗಳು ಸಿದ್ದಗೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/08/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore