HOME
CINEMA NEWS
GALLERY
TV NEWS
REVIEWS
CONTACT US
ಬೆಲ್‍ಬಾಟಂಗೆ 100 ದಿನದ ಸಂಭ್ರಮ
ರೆಟ್ರೋ ಶೈಲಿ ಕತೆ ಹೊಂದಿರುವ ‘ಬೆಲ್‍ಬಾಟಂ’ ಚಿತ್ರವನ್ನು ಪ್ರೇಕ್ಷಕರು ಅಪ್ಪಿಕೊಂಡಿದ್ದರಿಂದ ಯಾವುದೇ ಅಡೆತಡೆ ಇಲ್ಲದೆ ಸರಾಗವಾಗಿ ಶತದಿನ ಪ್ರದರ್ಶನಗೊಂಡಿದೆ. ಡಿಕ್ಟೆಟಿವ್ ದಿವಾಕರನಾಗಿ ಮೊದಲಬಾರಿ ನಾಯಕನಾಗಿ ರಿಶಬ್‍ಶೆಟ್ಟಿ, ನಾಯಕಿ ಹರಿಪ್ರಿಯಾ ನಟಿಸಿದ್ದು, ಉಳಿದಂತೆ ಯೋಗರಾಜ್‍ಭಟ್, ಶಿವಮಣಿ, ಪ್ರಮೋದ್‍ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಜಯತೀರ್ಥ ನಿರ್ದೇಶನದ ಸಿನಿಮಾಕ್ಕೆ ಅಜನೀಶ್‍ಲೋಕನಾಥ್ ಸಂಗೀತದ ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಕತೆ ಟಿ.ಕೆ.ದಯಾನಂದ್, ಸಂಭಾಷಣೆ ರಘುನಿಡುವಳ್ಳಿ, ಛಾಯಾಗ್ರಹಣ ಅರವಿಂದ್‍ಕಶ್ಯಪ್, ಸಂಕಲನ ಕೆ.ಎಂ.ಪ್ರಕಾಶ್ ಅವರದಾಗಿದೆ. ರಂಗಭೂಮಿ ಪ್ರತಿಭೆ ಸಂತೋಷ್‍ಕುಮಾರ್ .ಕೆ.ಸಿ. ನಿರ್ಮಾಣ ಮಾಡುವ ಜೊತೆಗೆ ಭ್ರಷ್ಟ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಒಳ್ಳೆಯ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭುಗಳು ಕೈ ಬಿಡುವುದಿಲ್ಲ ಎಂಬುದಕ್ಕೆ ಬೆಲ್‍ಬಾಟಂ ಸಾಕ್ಷಿಯಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
25/05/19

ಯಶಸ್ಸಿನ ಹಾದಿಯಲ್ಲಿ ಬೆಲ್ ಬಾಟಂ
80ರ ದಶಕದ ಕತೆಯನ್ನು ಹೋಲುವ ‘ಬೆಲ್ ಬಾಟಂ’ ಸತತ ಐವತ್ತು ದಿನಗಳನ್ನು ಮುಗಿಸಿ, ಮುಂದುವರೆಯುತ್ತಿದೆ. ಇದರನ್ವಯ ಸಂತೋಷಕೂಟದಲ್ಲಿ ತಂಡವು ಮಾದ್ಯಮದ ಎದುರು ಹಾಜರಾಗಿದ್ದರು. ನಾಯಕ ರಿಶಬ್‍ಶೆಟ್ಟಿ ಮಾತನಾಡಿ ಒಳ್ಳೆ ಸಿನಿಮಾ ಮಾಡಬೇಕಂಬ ಗುರಿಯಿತ್ತು. ನೂರು ಜನರ ತಂಡದಲ್ಲಿ ಮುಖ್ಯಸ್ಥರು ವೇದಿಕೆ ಹಂಚಿಕೊಂಡಿದ್ದೇವೆ. ಶತದಿನದಲ್ಲಿ ಎಲ್ಲರು ಬರುತ್ತಾರೆ. ಜನರು ನಮ್ಮ ಚಿತ್ರವನ್ನು ಕಿರೀಟದಂತೆ ಹೊತ್ತುಕೊಂಡು ಹೋಗಿದ್ದಾರೆ. ನಿಗದಿತ ಹಣದಲ್ಲಿ ನಿರ್ಮಾಪಕರು ಮುಗಿಸುವ ಯೋಜನೆ ಹಾಕಿಕೊಂಡಿದ್ದರಿಂದ ಬೇರೆ ಭಾಷೆಗೆ ಹೋಗಲು ಪ್ರಯತ್ನ ಮಾಡಲಿಲ್ಲ. ಮೂರು ಭಾಷೆಯಲ್ಲಿ ಬರಲಿದ್ದು, ಮರಾಠಿ ನಿರ್ಮಾಪಕರು ಆಸಕ್ತಿ ತೋರಿಸಿದ್ದಾರೆ. ಬೆಲ್‍ಬಾಟಂ ಕೆಲಸ ಮಾತಾಡಿದೆ. ಮುಂದೆ ಜವಬ್ದಾರಿ ಹೆಚ್ಚಾಗಿ ಒಳ್ಳೆ ಚಿತ್ರ ಕೊಡ್ತೆವೆ. ಯೋಗರಾಜ್‍ಭಟ್ಟರು ಪಂಚತಂತ್ರ ಸಿನಿಮಾ ಪ್ರಚಾರ ಸಲುವಾಗಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪಕ್ಕದ ಪರದೆಯಲ್ಲಿ ನಮ್ಮದು ಪ್ರದರ್ಶನವಾಗುತ್ತಿತ್ತು. ಅಲ್ಲಿಯೂ ಹೋಗಿ ಜನರೊಂದಿಗೆ ಬೆರೆತು ಸಹಕಾರಿಯಾಗಿರುವುದು ಅವರ ದೊಡ್ಡ ಗುಣ. ಇದರೊಂದಿಗೆ ನನಗೆ ಹ್ಯಾಟ್ರಿಕ್ ಗೆಲುವು ಆಗಿದೆ ಎಂದರು.

ಜನರಿಗೆ ಮಾದ್ಯಮದವರು ಆಹ್ವಾನಪತ್ರ್ರಿಕೆ ಎನ್ನುವಂತೆ ಮೂಲೆ ಮೂಲೆಗಳಲ್ಲಿ ಸುದ್ದಿಯನ್ನು ತಲುಪಿಸಿದರು. ಇಲ್ಲಿಯತನಕ ಸುಖಕರ ಪಯಣದಲ್ಲಿ ಐವತ್ತು ದಿನಗಳು ಹೋಗಿದ್ದೆ ಗೊತ್ತಾಗಲಿಲ್ಲ. ಸದ್ಯ 50 ಕೇಂದ್ರಗಳಲ್ಲಿ ಇರಲಿದ್ದು, ಬೆಂಗಳೂರಿನಲ್ಲಿ 38 ಸಂಖ್ಯೆಯ ಪ್ರದರ್ಶನವಾಗುತ್ತ್ತಿದೆ. ಮುಂದಿನವಾರದಿಂದ ಹೋಬಳಿಗಳಲ್ಲಿ ಬಿಡುಗಡೆ ಮಾಡುವುದಾಗಿ ವಿತರಕ ಜಯಣ್ಣ ಹೇಳಿದ್ದಾರೆ. ಸಾಮಾನ್ಯವಾಗಿ ತೆರೆ ಕಾಣುವ ಹೊತ್ತಿಗೆ ಚಿತ್ರತಂಡದವರು ಚದುರಿಹೋಗುತ್ತಾರೆ. ಇದರಲ್ಲಿ ಹಾಗಾಗದೇ ಪ್ರಾರಂಭದಿಂದಲೂ ಎಲ್ಲರೂ ಒಟ್ಟಿಗೆ ಇದ್ದೇವೆ. ನೂರನೇ ದಿವಸ ಸಮಾರಂಭದಲ್ಲೂ ಪುನ: ಭೇಟಿ ಮಾಡುತ್ತೇವೆ. ತಮಿಳಿನಲ್ಲಿ ರಿಮೇಕ್ ಮಾಡಲು ಸಿದ್ದತೆಗಳು ನಡೆಯುತ್ತಿದ್ದು, ಶಿವಮಣಿ ಇಲ್ಲಿ ಮಾಡಿದ ಪಾತ್ರವನ್ನು ಅಲ್ಲಿಯೂ ಮಾಡಲು ಕರೆ ಬಂದಿದೆ ಎಂಬುದು ನಿರ್ದೇಶಕ ಜಯತೀರ್ಥ ಖುಷಿ ನುಡಿ.

ಎಲ್ಲೆ ಹೋದರೂ ಕುಸುಮ ಅಂತಗುರುತು ಹಿಡಿಯುತ್ತಾರೆ. ವರ್ಷದ ಮೊದಲ ಸಿನಿಮಾ ಹಿಟ್ ಆಗಿದೆ. ರಿಶಬ್‍ರನ್ನು ಕೂರಿಸಿಕೊಂಡು ಸುವೇಗ ಚಲಾಯಿಸಿದ್ದು ಇಷ್ಟದ ದೃಶ್ಯವಾಗಿತ್ತು. ಫಿಲಿಂ ಫೇರ್‍ಗೆ ಸಂಬಂದಪಟ್ಟಂತೆ ಸೌತ್ ಇಂಡಿಯಾದಲ್ಲಿ ಕನ್ನಡ ಸಿನಿಮಾಕ್ಕೆ ಇದನ್ನು ಸೂಚಿಸಿ, ಭಾರತದ ನಾಯಕಿಯರಿಗೆ ಪೈಕಿ ವೋಟ್ ಮಾಡಿದಂತೆ, ನನ್ನದು ಶೇಕಡ 54 ರಷ್ಟು ಅಂಕಬಂದಿದೆ ಎಂದು ನಾಯಕಿ ಹರಿಪ್ರಿಯಾ ಹೇಳಿದರು. ಚಿತ್ರವು ಮುಗಿದ ಮೇಲೆ ಯಾರು ಸಿಗದೆ ಕಣ್ಮರೆಯಾಗುತ್ತಾರೆ. ನಮಗೆ ಶುರುವಿನಿಂದ ಇಲ್ಲಿಯತನಕ ನಮ್ಮ ಜೊತೆಗೆ ಇರುವುದು ದೊಡ್ಡ ಶಕ್ತಿ. ಅದಕ್ಕೆ ಈ ಮಟ್ಟದ ಗೆಲುವು ಎನ್ನಬಹುದು ಎಂದು ನಿರ್ಮಾಪಕ ಸಂತೋಷ್‍ಕುಮಾರ್ ತಿಳಿಸಿದರು. ಕತೆಗಾರ ಟಿ.ಕೆ.ದಯಾನಂದ್, ನಟನೆ-ಕಾರ್ಯಕಾರಿ ನಿರ್ಮಾಪಕ ಪ್ರಮೋದ್‍ಶೆಟ್ಟಿ, ಸಂಭಾಷಣೆ ರಘುನಿಡುವಳ್ಳಿ, ಶಿವಮಣಿ, ಸತೀಶ್‍ಚಂದ್ರ, ಡಿಂಗ್ರಿ, ಸುನಿಲ್. ಛಾಯಾಗ್ರಾಹಕ ಅರವಿಂದ್‍ಕಶ್ಯಪ್, ಪ್ರೀತಿ,, ಕಲಾ ನಿರ್ದೇಶಕ ಧರಣಿ ಮುಂತಾದವರು ಸಂತಸವನ್ನು ತೋರ್ಪಡಿಸಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/04/19ಹೊರ ದೇಶಗಳಲ್ಲಿ ಬೆಲ್ ಬಾಟಂಗೆ ಬೇಡಿಕೆ
ರಾಜ್ಯದಲ್ಲಿ ‘ಬೆಲ್ ಬಾಟಂ’ ಚಿತ್ರವನ್ನು ಜನರು ಇಷ್ಟಪಟ್ಟಂತೆ ದೂರದ ದೇಶಗಳಲ್ಲಿ ಚಿತ್ರಕ್ಕೆ ಬೇಡಿಕೆ ಬಂದಿದೆ ಅಂತ ಕಾರ್ಯಕಾರಿ ನಿರ್ಮಾಪಕ ಪ್ರಮೋದ್‍ಶೆಟ್ಟಿ ಗೆಲುವಿನ ಪಾರ್ಟಿಯಲ್ಲಿ ಮಾಹಿತಿ ನೀಡುತ್ತಿದ್ದರು. ಅವರು ಹೇಳುವಂತೆ ಮೊದಲವಾರದಲ್ಲೇ ಒಂದೂ ಮುಕ್ಕಾಲು ಕೋಟಿ ಶೇರ್ ಬಂದಿದ್ದು, ನಿರ್ಮಾಪಕರು ಸೇಫ್ ಆಗಿದ್ದಾರೆ. ವಾಹಿನಿಗೆ ಎರಡು ಕೋಟಿಗೆ ಮಾರಾಟವಾಗಿದೆ ಎಂಬುದರ ಮಾಹಿತಿ ನೀಡಿದರು. ಇದಕ್ಕೂ ಮುನ್ನ ತಂಡವು ಮಾತುಗಳನ್ನು ಹಂಚಿದಕೊಂಡಿತು.

ಆಚಾರ ವಿಚಾರವಾಗಿ, ವಿಚಾರ ಪ್ರಚಾರವಾಗಿ ಸಾರ್ಥಕತೆ ಸಿಕ್ಕಿದೆ ಎಂದು ನಾಯಕ ರಿಶಬ್‍ಶೆಟ್ಟಿ ಸಂತೋಷಕೂಟದಲ್ಲಿ ಹೇಳುತ್ತಿದ್ದರು. ಅವರ ಪ್ರಕಾರ ಚಿತ್ರವು ರೆಕಾರ್ಡ್ ಮಾಡುವುದು ಬೇಡ. ಜನರಿಗೆ ತಲುಪಿದರೆ ಸಾಕು ಎಂದು ಕೊಂಡಿದ್ದೇವು. ಧರಣಿ ಕಲಾ ನಿರ್ದೇಶನ ಕಣ್ಣಿಗೆ ಹಬ್ಬ ನೀಡಿದರೆ, ರಘುನಿಡುವಳ್ಳಿ ಸಂಭಾಷಣೆಗೆ ಜನರು ಬಾಯಿ ತೆರೆಯುತ್ತಿದ್ದರು. ಹಿರಿಯರಾದ ಶಿವಮಣಿ, ಯೋಗರಾಜಭಟ್ ಅವರಿಂದ ಪ್ರತಿ ಸಿನಿಮಾದಲ್ಲಿ ಕಲಿಯುವುದು ಸಾಕಷ್ಟು ಇರುತ್ತದೆ. ಪತ್ರಕೆಗಳಲ್ಲಿ ಒಳ್ಳೆ ವಿಮರ್ಶೆ ಬರೆದು ಅದನ್ನು ಜನರಿಗೆ ತಲುಪಿಸಿದ್ದಕ್ಕೆ ಮೊದಲನೆಯದಾಗಿ ಮಾದ್ಯಮದವರಿಗೆ ವಂದನೆಗಳು ಎಂದರು ರಿಶಬ್‍ಶೆಟ್ಟಿ .

ಬೆಂಕಿಪೊಟ್ಟಣ-ಬ್ಯೂಟಿಫುಲ್ ಮನಸುಗಳು ಚಿತ್ರಗಳ ಬೆಸುಗೆಯಿಂದ ಇದು ಹುಟ್ಟಿಕೊಳ್ಳಲು ಕಾರಣವಾಯಿತು. ಟಾಕೀಸ್‍ದಲ್ಲಿ ಹಿರಿಯ ನಾಗರೀಕರು ದೃಶಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದನ್ನು ನೋಡಿದಾಗ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಿದೆ. ನಿರ್ಮಾಪಕರು ಸೇರಿದಂತೆ ಬಹುಪಾಲು ರಂಗಭೂಮಿ ಕಲಾವಿದರು ಇರುವುದು ಪ್ಲಸ್ ಪಾಯಿಂಟ್. ಉಘೇ ಉಘೇ ಮಾಂತಮಲ್ಲಯ್ಯ, ಮಂಟೆಸ್ವಾಮಿ ಹಾಡುಗಳು ಸನ್ನಿವೇಶಕ್ಕೆ ಪೂರಕವಾಗಿದೆ. ಪ್ರಾರಂಭದಲ್ಲಿ ಹಾಕಿದ ಹಣ ವಾಪಸ್ಸು ಬಂದರೆ ಸಾಕೆಂದು ಅಂದುಕೊಂಡಿದ್ದವು. ಈಗ ನಿರ್ಮಾಪಕರು ಹೆಚ್ಚು ನೆಮ್ಮದಿಯಲ್ಲಿರುವುದು ತಂಡಕ್ಕೆ ಉತ್ಸಾಹ ಬಂದಿದೆ ಎನ್ನುತ್ತಾರೆ ನಿರ್ದೇಶಕ ಜಯತೀರ್ಥ.

ನಾಯಕ,ನಾಯಕಿ ಸನ್ನಿವೇಶದಲ್ಲಿ ಭೂಮಿ ಮೇಲೆ ಬಿದ್ದ ಮೀನನ್ನು ಕಾಪಾಡುವಂತೆ, ಸಿನಿಮಾವು ಅದೇ ರೀತಿ ಆಗಿದೆ. ಬೇಷರತ್ ಆಗಿ ಜನರು ಸ್ವೀಕಾರ ಮಾಡಿದ್ದಾರೆ. ಹೊಸ ಬರಹಗಾರರು ಬಂದಲ್ಲಿ ಇಂತಹ ಸಿನಿಮಾಗಳು ಹುಟ್ಟಿಕೊಳ್ಳಲು ಸಾದ್ಯವಾಗುತ್ತದೆ. ಕತೆಯಿಂದ ಚಿತ್ರಕ್ಕೆ ಶಕ್ತಿ ಬಂದಿದೆ. ಎಲ್ಲರಿಗೂ ರೆಡ್ ಕಾರ್ಪೆಟ್ ಸಿಕ್ಕಂತೆ ಆಗಿದೆ ಎಂದು ಶಿವಮಣಿ ಹೇಳುತ್ತಾ ಹೋದರು.

ಗೆಳಯರ ಬಳಿ ನಿರ್ಮಾಪಕನೆಂದು ಬಿಲ್ಡಪ್ ಕೊಡುತ್ತಿದ್ದೆ. ಬಿಡುಗಡೆ ಸನಿಹ ಬಂದ ದಿನದಲ್ಲಿ ದುಗಡ ಶುರುವಾಯಿತು. ಬ್ಯೂಟಿಫುಲ್ ಮನಸುಗಳ ತಂಡ ಇರುವುದರಿಂದ ಪ್ರಥಮ ಪ್ರಯತ್ನದಲ್ಲೆ ಪುಟ್ಟ ಗೆಲುವು ಬಂದಿದೆ. ಮುಂದೆಯೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ಕೊಡಬೇಕೆಂಬ ಆಸೆ ಇದೆ ಎಂಬುದು ಭ್ರಷ್ಟ ಪೋಲೀಸ್ ಅಧಿಕಾರಿಯಾಗಿ ನಟನೆ ಮಾಡಿರುವ ಕೆ.ಸಿ.ಸಂತೋಷ್‍ಕುಮಾರ್ ಸಂತೋಷದ ನುಡಿಯಾಗಿತ್ತು.ಸಗಣಿಪಿಂಟು ಸುಜಯ್‍ಶಾಸ್ತ್ರೀ, ಗೆಳಯ ಪಿ.ಡಿ.ಸತೀಶ್, ಪ್ರೊಡಕ್ಷನ್ ಮ್ಯಾನೆಜರ್ ಶಶಿಕುಮಾರ್, ರಘುನಿಡುವಳ್ಳಿ ಮುಂತಾದವರು ಸಂತಸದಲ್ಲಿ ಭಾಗಿಯಾಗಿದ್ದರು. ನಾಯಕಿ ಹರಿಪ್ರಿಯಾ ಮಲೇಶಿಯಾದಲ್ಲಿ ಇದ್ದ ಕಾರಣ ಅವರ ಅನುಪಸ್ಥಿತಿ ಇತ್ತು.
ಸಿನಿ ಸರ್ಕಲ್.ಇನ್ ನ್ಯೂಸ್
25/02/19
80ರ ಕಾಲಘಟ್ಟ ನೆನಪಿಸುವ ಬೆಲ್‍ಬಾಟಂ
ಪ್ರಚಲಿತ ಯುವ ಜನಾಂಗಕ್ಕೆ 80ರ ಕಾಲಘಟ್ಟವು ಹೇಗಿರುತ್ತದೆಂದು ತಿಳಿದಿರುವುದಿಲ್ಲ. ಅಂದಿನ ಜನರ ನಡವಳಿಕೆ, ವಾತವರಣ, ಪರಿಸರ, ಮುಂತಾದವುಗಳನ್ನು ‘ಬೆಲ್ ಬಾಟಂ’ ಚಿತ್ರದಲ್ಲಿ ಹಾಗೆಯೇ ಚಿತ್ರೀಕರಿಸಿದ್ದಾರೆ. ಲಗಾಯ್ತಿನಲ್ಲಿ ಪತ್ತೆದಾರಿ ಕಾದಂಬರಿಗಳು ಪ್ರಸಿದ್ದಿಯಾಗಿದ್ದವು. ಅದರಂತೆ ಕಾಲ್ಪನಿಕ ಜಿಲ್ಲೆಯ ಮೂರು ಪೋಲೀಸ್ ಠಾಣೆಗಳಲ್ಲಿ ದರೋಡೆ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಸುರಕ್ಷತಾ ಪೆಟ್ಟಿಗೆಯಲ್ಲಿ ಲಾಕ್ ಮಾಡಿ ಕೀ ಇನ್ಸೆಪೆಕ್ಟರ್ ಜೇಬಿನಲ್ಲಿ ಇರುತ್ತದೆ. ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯ್ದರೂ ಬೆಳಿಗ್ಗೆ ಹೊತ್ತಿಗೆ ಅದು ಕಳ್ಳತನವಾಗಿರುತ್ತದೆ. ಇದು ಹೇಗೆ, ಯಾವ ರೀತಿ, ಯಾರು ಮಾಡಿದರು, ಹಿನ್ನಲೆ ಏನು, ಶೀರ್ಷಿಕೆಗೂ ಇದಕ್ಕೂ ಏನು ಸಂಬಂದ ಎಂಬುದನ್ನು ಪತ್ತೆದಾರಿಕೆಯಲ್ಲಿ ಕಂಡುಹಿಡಿಯುವುದನ್ನು ತಿಳಿಯಲು ಸಿನಿಮಾ ನೋಡಬಹುದು. ಆಗಿನ ಕಾಲದಲ್ಲಿ ಹೀಗಿನಂತೆ ತಂತ್ರಜ್ಘಾನ ಬೆಳೆದಿರಲಿಲ್ಲ. ಸುದ್ದಿಯು ಕಪ್ಪುಬಿಳಿಪು ಟಿವಿ, ರೇಡಿಯೋ, ಕೆಲವು ಪತ್ರಿಕೆಗಳಲ್ಲಿ ಬರುತ್ತಿತ್ತು. ಜನರು ಅದನ್ನೆ ನಂಬಿಕೊಳ್ಳುತ್ತಿದ್ದರು. ಠಾಣೆಯಲ್ಲಿ ನಡೆಯುವ ಸನ್ನಿವೇಶಗಳನ್ನು ಹಸಿ ಹಸಿಯಾಗಿ ತೋರಿಸಿರುವುದು. ನಿಜಕ್ಕೂ ಹೀಗೇ ನಡೆಯುತ್ತದೆಯಾ ಎಂಬ ಪ್ರಶ್ನೆ ಕಾಡುವಂತೆ ನೋಡುಗನಿಗೆ ಆಗುತ್ತದೆ.

ಡಿಟ್ಕೆಟೀವ್ ದಿವಾಕರನಾಗಿ ರಿಶಬ್‍ಶೆಟ್ಟ ಮೊದಲಬಾರಿ ನಾಯಕನಾಗಿ ಪೂರ್ಣ ಜವಬ್ದಾರಿಯನ್ನು ಹೆಗಲಮೇಲೆ ಹೊತ್ತುಕೊಂಡಿದ್ದಾರೆ. ಅವರ ಏರ್‍ಸ್ಟೈಲ್, ಕಾಸ್ಟ್ಯೂಮ್, ಲುಕ್ ಎಲ್ಲವು ಚೆಂದ ಕಾಣಿಸುತ್ತದೆ, ಚಂದನವನಕ್ಕೆ ಮತ್ತೋಬ್ಬ ನಾಯಕಸಿಕ್ಕಂತೆ ಆಗಿದೆ. ನಾಯಕಿ ಹರಿಪ್ರಿಯಾ ಚೂಟಿದಾರ್‍ದಲ್ಲಿ ಪಕ್ಕದ್ಮನೆ ಹೆಣ್ಣುಮಗಳಂತೆ ಚೆಂದ ಕಾಣಿಸುತ್ತಾರೆ. ಮೂವರ ಹೆಂಡರ ಪತಿ ಮರಕುಟುಕ ನಾಗಿ ಯೋಗರಾಜಭಟ್ ಕಡಿಮೆ ದೃಶ್ಯದಲ್ಲಿ ಬಂದರೂ ಮಿಂಚಿದ್ದಾರೆ. ಅಪ್ಪನ ಪಾತ್ರದಲ್ಲಿ ಅಚ್ಯುತಕುಮಾರ್, ಭ್ರಷ್ಟ ಪೋಲೀಸ್ ಅಧಿಕಾರಿ ಪ್ರಮೋದ್‍ಶೆಟ್ಟಿ ನಟನೆಯ ಬಗ್ಗೆ ಹೇಳುವ ಹಾಗಿಲ್ಲ. ಉಳದಿಂತೆ ಸುಜಯ್‍ಶಾಸ್ತ್ರೀ, ಶಿವಮಣಿ ಮುಂತಾದವರು ಕೊಟ್ಟ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ದಯಾನಂದ ಬರೆದ ಕತೆಯನ್ನು ಅದ್ಬುತವಾಗಿ ತೆರೆ ಮೇಲೆ ತಂದಿರುವ ನಿರ್ದೇಶಕ ಜಯತೀರ್ಥ ಸಾಹಸವನ್ನು ನಿಜಕ್ಕೂ ಮೆಚ್ಚತಕ್ಕದ್ದು. ಅಜನೀಶ್‍ಲೋಕನಾಥ್ ಸಂಗೀತ, ಅರವಿಂದ್‍ಕಶ್ಯಪ್ ಸೆರೆಹಿಡಿದಿರುವ ಸುಂದರ ತಾಣಗಳು ಪ್ಲಸ್ ಪಾಯಿಂಟ್ ಆಗಿದೆ. ರಘುನಿಡುವಳ್ಳಿ ಸಂಭಾಷಣೆ ಕಚಗುಳಿ ತರಿಸುತ್ತದೆ. ನಿರ್ಮಾಪಕ ಸಂತೋಷ್‍ಕುಮಾರ್.ಕೆ.ಸಿ ಮೂವರು ಇನ್ಸೆಪೆಕ್ಟರ್‍ಗಳಲ್ಲಿ ಒಬ್ಬರಾಗಿ ನಟಿಸಿರುವುದು ಮತ್ತೋಂದು ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಾರೆ ಬೆಲ್ ಬಾಟಂನ್ನು ಸವಿಯಲು ಅಡ್ಡಿಯೇನಿಲ್ಲ.
ಸಿನಿ ಸರ್ಕಲ್.ಇನ್ ವಿಮರ್ಶೆ
****
17/02/19ಫೆಬ್ರವರಿ ಎರಡನೆ ವಾರಕ್ಕೆ ಬೆಲ್ ಬಾಟಂ
ಕೋಲಾರದಲ್ಲಿ ನಡೆದ ಪ್ರಕರಣವನ್ನು ಪುಸ್ತಕದಲ್ಲಿ ಬರೆದಿದ್ದಾರೆ. ಆ ಕಾಲ ಘಟ್ಟದ ಬಣ್ಣ, ಶಕ್ತಿ, ಶೈಲಿ, ವಸ್ತ್ರ ಸಿದ್ದಪಡಿಸಲಾಗಿದೆ. ಆಗಿನ ಕಾಲದ ಒಂದೊಂದು ನೆನಪುಗಳು ನೋಡುಗನಿಗೆ ಕುತೂಹಲ ಮೂಡಿಸುತ್ತದೆ. ಇವೆಲ್ಲವು ‘ಬೆಲ್ ಬಾಟಂ’ ಚಿತ್ರದ ಕತೆಯು ಥ್ರಿಲ್ಲರ್ ಆಧಾರದ ಮೇಲೆ ತರ್ಕಶಾಸ್ತ್ರದಂತೆ ಮಾಡಲಾಗಿದೆ. ಡಿಟೆಕ್‍ಟೀವ್ ದಿವಾಕರ, ಬೆಲ್‍ಬಾಟಂಗೂ ಸಂಬಂದವಿದೆ. ಅದನ್ನು ಚಿತ್ರಮಂದಿರದಲ್ಲಿ ನೋಡಿದರೆ ಗೊತ್ತಾಗುತ್ತದೆ. ನಾಯಕನಾಗಿ ರಿಶಬ್‍ಶೆಟ್ಟಿ, ನಾಯಕಿ ಹರಿಪ್ರಿಯ, ಇನ್ಸ್‍ಪೆಕ್ಟರ್ ಪಾತ್ರದಲ್ಲಿ ಪ್ರಮೋದ್‍ಶೆಟ್ಟಿ ನಟಿಸಿದ್ದಾರೆ. ಸಾಮಾನ್ಯವಾಗಿ ಉತ್ಪನ್ನಗಳನ್ನು ಚಿತ್ರಗಳಲ್ಲಿ ಜಾಹಿರಾತು ಮೂಲಕ ಮಾರಾಟ ಮಾಡುತ್ತಾರೆ. ಸೋಜಿಗ ಎನ್ನುವಂತೆ ಹಳೇ ಉತ್ಪನ್ನಗಳ ಭಾವಚಿತ್ರಗಳನ್ನು ಬಳಸಿಕೊಂಡು ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ. ಇಂತಹ ಅನನ್ಯ ಊಹೆಗೆ ಕಾರಣಕರ್ತರು ಕತೆಗಾರ ಟಿ.ಕೆ.ದಯಾನಂದ್.

ನಿರ್ದೇಶಕ ಜಯತೀರ್ಥ ಸೆನ್ಸಾರ್ ಮಾಡಿಸುವುದರಲ್ಲಿ ಬ್ಯುಸಿ ಇದ್ದ ಕಾರಣ ಟ್ರೈಲರ್ ಕೆಲಸವನ್ನು ರಿಶಬ್‍ಶೆಟ್ಟಿ ಮಾಡಿರುವುದು ವೈರಲ್ ಆಗಿದೆ. ಆನಂದ್ ಆಡಿಯೋದವರು ಹರಿಕಥೆವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ನಾಲ್ಕು ಹಾಡುಗಳಿಗೆ ಬಿ.ಅಜನೀಶ್‍ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಸನ್ನಿವೇಶಕ್ಕೆ ಬೇಕಾಗುವ ಸಂಭಾಷಣೆಗಳನ್ನು ನಲ್ಲಿತಂಗ ಹರಿಕಥೆಯ ಡೈಲಾಗ್‍ಗಳನ್ನು ಆಲಿಸಿ ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕೆ.ಸಿ.ಸಂತೋಷ್‍ಕುಮಾರ್ ನಿರ್ಮಾಣ ಮಾಡಿರುವ ಚಿತ್ರವು ಫೆಬ್ರವರಿ 15ರಂದು ತೆರೆ ಕಾಣಲಿದೆ
ಸಿನಿ ಸರ್ಕಲ್.ಇನ್ ನ್ಯೂಸ್
26/01/19ಬೆಲ್ ಬಾಟಂದಲ್ಲಿ ಗುರುರಾಜನಾಯ್ಡು ಧ್ವನಿ
ಪ್ರತಿಯೊಂದು ಚಿತ್ರವನ್ನು ಜನರಿಗೆ ತಲುಪಿಸಲು ಚಿತ್ರತಂಡದವರು ವಿನೂತನ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆ ಪೈಕಿ ಆಡಿಯೋ, ಟೀಸರ್ ಬಿಡುಗಡೆಯು ಮುಖ್ಯವಾಗಿರುತ್ತದೆ. ಇದರಿಂದಲೇ ಸಾಕಷ್ಟು ಮಾಹಿತಿಗಳು ಎಲ್ಲರಿಗೂ ತಲುಪುತ್ತದೆ. ಅದರಂತೆ ‘ಬೆಲ್ ಬಾಟಂ’ ಚಿತ್ರದ ತುಣುಕುಗಳನ್ನು ಇತ್ತೀಚೆಗೆ ಮಾದ್ಯಮದವರಿಗೆ ತೋರಿಸಲಾಯಿತು. ಅದರಲ್ಲಿ ಪಂಡಿತ್ ಹರಿಕಥಾ ವಿದ್ವಾನ್ ಗುರುರಾಜನಾಯ್ಡು ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಕೆಲವು ಸನ್ನಿವೇಶಗಳಲ್ಲಿ ಇವರ ಧ್ವನಿಯ ಮೂಲಕ ಕತೆಯು ಸಾಗುತ್ತದೆ. ಕೊನೆಯಲ್ಲಿ ಒಂದು ಮೊಟ್ಟೆ ಖ್ಯಾತಿ ರಾಜ್.ಬಿ.ಶೆಟ್ಟಿ ಸಹ ದೃಶ್ಯಕ್ಕೆ ಡಬ್ಬಿಂಗ್ ಮಾಡಿದ್ದಾರೆ.

ನಿರ್ದೇಶಕ ಜಯತೀರ್ಥ ಚಿತ್ರವನ್ನು ಬಣ್ಣಿಸಿದ ಪರಿ ಹೀಗಿತ್ತು:
ಕೋಲಾರದಲ್ಲಿ ನಡೆದ ಪ್ರಕರಣವನ್ನು ಪುಸ್ತಕದಲ್ಲಿ ಬರೆದಿದ್ದಾರೆ. ಆ ಕಾಲ ಘಟ್ಟದ ಬಣ್ಣ, ಶಕ್ತಿ, ಶೈಲಿ, ವಸ್ತ್ರ ಸಿದ್ದಪಡಿಸಿದ್ದು ಛಾಲೆಂಜಿಂಗ್ ಆಗಿತ್ತು. ಆಗಿನ ಕಾಲದ ಒಂದೊಂದು ನೆನಪುಗಳು ನೋಡುಗನಿಗೆ ಕುತೂಹಲ ಮೂಡಿಸುತ್ತದೆ. ಥ್ರಿಲ್ಲರ್ ಆಧಾರದ ಮೇಲೆ ತರ್ಕಶಾಸ್ತ್ರದಂತೆ ಮಾಡಲಾಗಿದೆ. ಡಿಟೆಕ್‍ಟೀವ್ ದಿವಾಕರ, ಬೆಲ್‍ಬಾಟಂಗೂ ಸಂಬಂದವಿದೆ. ಅದನ್ನು ಚಿತ್ರಮಂದಿರದಲ್ಲಿ ನೋಡಿದರೆ ಗೊತ್ತಾಗುತ್ತದೆ. ಇನ್ಸ್‍ಪೆಕ್ಟರ್ ಪಾತ್ರ ಮಾಡಿರುವ ಪ್ರಮೋದ್‍ಶೆಟ್ಟಿ ಅಭಿನಯವನ್ನು ಮೆಚ್ಚಿಕೊಂಡಿರುವ ತಮಿಳು ನಿರ್ದೇಶಕರು ಸದರಿ ಪಾತ್ರವನ್ನು ಅವರಿಂದಲೇ ಮಾಡಿಸಲು ನಾಯಕ ಆಯ್ಕೆಯಾಗುವ ಮುನ್ನ ಇವರನ್ನು ಕಾಯ್ದರಿಸಿದ್ದಾರೆ. ತುಣುಕುಗಳು ಲೋಕಾರ್ಪಣೆಗೊಂಡು ನಲವತ್ತೈದು ನಿಮಿಷದಲ್ಲಿ 30000 ವೀಕ್ಷಣೆ ಆಗಿರುವುದು ತಂಡಕ್ಕೆ ಖುಷಿ ತಂದಿದೆ. ಸಾಮಾನ್ಯವಾಗಿ ಉತ್ಪನ್ನಗಳನ್ನು ಚಿತ್ರಗಳಲ್ಲಿ ಜಾಹಿರಾತು ಮೂಲಕ ಮಾರಾಟ ಮಾಡುತ್ತಾರೆ. ಸೋಜಿಗ ಎನ್ನುವಂತೆ ಹಳೇ ಉತ್ಪನ್ನಗಳ ಭಾವಚಿತ್ರಗಳನ್ನು ಬಳಸಿಕೊಂಡು ನಮ್ಮ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ. ಇಂತಹ ಅನನ್ಯ ಊಹೆಗೆ ಕಾರಣಕರ್ತರು ಕತೆಗಾರ ಟಿ.ಕೆ.ದಯಾನಂದ್.
ನಿರ್ದೇಶಕರು ಸೆನ್ಸಾರ್ ಮಾಡಿಸುವುದರಲ್ಲಿ ಬ್ಯುಸಿ ಇದ್ದ ಕಾರಣ ಟ್ರೈಲರ್ ಕೆಲಸವನ್ನು ನನಗೆ ಒಪ್ಪಿಸಿದ್ದರು. ತಲೆಗೆ ಹುಳ ಬಿಟ್ಟುಕೊಂಡಂತೆ 25ನೇ ವರ್ಷನ್‍ದಲ್ಲಿ ಅಂತಿಮವಾಗಿ ಸಿದ್ದಪಡಿಸಲಾಯಿತು. ‘ಏನೋ ಬೇಕು’ ಹಾಡು ಎಲ್ಲಾ ಕಡೆ ವೈರಲ್ ಆಗಿದೆ. ಒಂದು ಚಿತ್ರ ಗೆದ್ದರೆ ನಿರ್ಮಾಪಕರಿಂದ ನೂರು ಜನ ಗೆದ್ದಂತೆ. ಅದರಿಂದಲೇ ಮೊದಲು ಅವರ ಬಂಡವಾಳ ವಾಪಸ್ಸು ಬರಬೇಕು. ಆನಂದ್ ಆಡಿಯೋದವರು ಹರಿಕಥೆವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ನಾಲ್ಕು ಹಾಡುಗಳಿಗೆ ಬಿ.ಅಜನೀಶ್‍ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಇನ್ನೆನಿದ್ದರೂ ಪ್ರೇಕ್ಷಕರಿಗೆ ಬಿಟ್ಟದ್ದು ಎನ್ನುತ್ತಾರೆ ನಾಯಕ ರಿಶಬ್‍ಶೆಟ್ಟಿ.

ಸಿನಿಮಾ ಸನ್ನಿವೇಶಕ್ಕೆ ಬೇಕಾಗುವ ಸಂಭಾಷಣೆಗಳನ್ನು ನಲ್ಲಿತಂಗ ಹರಿಕಥೆಯ ಡೈಲಾಗ್‍ಗಳನ್ನು ಆಲಿಸಿ ಬರೆಯಲಾಗಿದೆ ಎಂದು ಮಾಹಿತಿಯನ್ನು ರಘುನಿಡುವಳ್ಳಿ ಬಿಚ್ಚಿಟ್ಟರು. ನಾಯಕಿ ಹರಿಪ್ರಿಯಾ ಅವರು ಗಂಟಲು ತೊಂದರೆ ಹಾಗೂ ಶೂಟಿಂಗ್‍ದಲ್ಲಿ ತೊಡಗಿಕೊಂಡಿದ್ದರಿಂದ ಕ್ಷಮೆ ಇರಲಿ ಅಂತ ಸಂದೇಶವನ್ನು ರವಾನಿಸಿದ್ದರು. ನಿರ್ಮಾಪಕ ಕೆ.ಸಿ.ಸಂತೋಷ್‍ಕುಮಾರ್ ಮಾತೃಶ್ರೀರವರು ಟ್ರೈಲರ್‍ಗೆ ಚಾಲನೆ ನೀಡಿದರು. ಸದ್ಯ ಸೆನ್ಸಾರ್ ಬಾಗಿಲಿಗೆ ಬಂದಿದ್ದು, ಶೀಘ್ರದಲ್ಲೆ ತೆರೆಗೆ ಬರುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/01/19
ಬೆಲ್ ಬಾಟಂಚಿತ್ರದಲ್ಲಿಐದು ನಿರ್ದೇಶಕರುಗಳು
ಜಯತೀರ್ಥ ನಿರ್ದೇಶನದ ‘ಬೆಲ್‍ಬಾಟಂ’ ಚಿತ್ರದಲ್ಲಿಐದು ನಿರ್ದೇಶಕರುಗಳು ಭಾಗಿಯಾಗಿರುವುದು ವಿಶೇಷವಾಗಿದೆ, ಪ್ರಚಾರದ ಮೊದಲ ಹಂತವಾಗಿ ‘ಏತಕೆ’ ವಿಡಿಯೋಗೀತೆ ಮತ್ತುಟ್ರೈಲರ್‍ಕಲಾವಿದರ ಸಂಘದಲ್ಲಿಅನಾವರಣಗೊಂಡಿತು. 80ರಕಾಲಘಟ್ಟದಂತೆಇರುವ ಹಾಡಿನಲ್ಲಿಕಲಾವಿದರಕಾಸ್ಟ್ಯೂಮ್‍ಅದೇರೀತಿಇರಲಿದ್ದು ನೋಡಲು ಖುಷಿ ನೀಡಿತು. ದೊಡ್ಡಗ್ಲಾಸ್‍ಒಂದುಒಡೆದುಅದರಲ್ಲಿರುವ ಮೀನುಗಳು ರಸ್ತೆಯಲ್ಲಿ ಬಿದ್ದಾಗ, ನಾಯಕ ಮೀನುಗಳನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ, ಅಲ್ಲಿಗೆ ಬರುವ ನಾಯಕಿತನ್ನ ಬಾಯಲ್ಲಿಇರಲಾದ ನೀರನ್ನುಆತನ ಕೈಗೆ ಹಾಕುವುದರೊಂದಿಗೆ ಪ್ರೀತಿ ಶುರುವಾಗುವ ಸನ್ನಿವೇಶಗಳು ಹಾಡಿನಲ್ಲಿಕಂಡುಬಂದವು.

ನಂತರ ಮಾತನಾಡಿದ ನಿರ್ದೇಶಕರುಒಂದು ವರ್ಷದ ಪಯಣ ಮರೆಯಲಿಕ್ಕೆಆಗದು. ನಿರ್ದೇಶಕರುಗಳಾದ ರಿಶಬ್‍ಶೆಟ್ಟಿ, ಯೋಗರಾಜಭಟ್, ಶಿವಮಣಿ ಅಭಿನಯಿಸಿರುವುದು ಚಿತ್ರಕ್ಕೆ ಮರೆಗುತಂದಿದೆ. ಏತಕೆ ಹಾಡಿಗೆ ಭೂಷಣ್ ನೃತ್ಯದಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ರಿಶಬ್‍ಶೆಟ್ಟಿ ಪತ್ನಿ ಪ್ರಗತಿಜೋಗ್, ಸಾಗರ್‍ದಲ್ಲಿಫೋಟೋ ಶೂಟನ್ನು ಮಾಡಲು ಸಹಕಾರ ನೀಡಿದರು. ತಮಿಳಿಗೆ ರಿಮೇಕ್ ಮಾಡಲು ಬೇಡಿಕೆ ಬಂದಿರುವುದು ಸಂತಸತಂದಿದೆ. ಜನವರಿಯಲ್ಲಿ ಬಿಡುಗಡೆ ಮಾಡಲುಯೋಜನೆ ಹಾಕಲಾಗಿದೆಎಂದರು.

ರಿಕ್ಕಿ ಸಂದರ್ಭದಲ್ಲಿರಿಶಬ್‍ಶೆಟ್ಟಿಅವರೊಂದಿಗೆ ಕೆಲಸ ಮಾಡುವಾಗ ಮುಂದೆಇವರಿಗೆಜೋಡಿಯಾಗಿಅಭಿನಯಿಸುತ್ತೇನೆಂದು ತಿಳಿದಿರಲಿಲ್ಲ. ಜಯತೀರ್ಥಅವರುಇವರೇ ನಾಯಕಎಂದು ಹೇಳಿದಾಗ ಆಶ್ಚರ್ಯವಾಯಿತು. ಕುಸುಮಾ ಹೆಸರಿನಲ್ಲಿತನಿಖಾದಿಕಾರಿಯಾಗಿ ಹಲವು ಕುತೂಹಲಗಳನ್ನು ನೀಡುತ್ತೆನೆ. ಚಿತ್ರೀಕರಣ ಸಂದರ್ಭದಲ್ಲಿಅಮ್ಮನಿಗೆಆರೋಗ್ಯ ಸರಿಯಿಲ್ಲದೆ ಹೋದಾಗ ನಿರ್ಮಾಪಕರ ಸೋದರ ವೈದ್ಯರಾಗಿ ಶುಶ್ರೂಷೆ ನೀಡಿದರುಎಂದು ಹರಿಪ್ರಿಯಾತಂಡವನ್ನು ಶ್ಲಾಘಿಸಿದರು.

ಡಾ.ರಾಜ್‍ಕುಮಾರ್‍ಅವರ ಬಾನಿಗೊಂದುಎಲ್ಲಿದೆ ಹಾಡನ್ನು ನೋಡುವಾಗಕಾರು ಚಾಲನೆ ಮಾಡುವುದನ್ನುಕಲಿಯಬೇಕೆಂದು ಬಾಲಕನಾಗಿದ್ದಾಗಲೇ ಅನಿಸಿತು. ದಿವಾಕರನಾಗಿಕಾಣಿಸಿಕೊಂಡಿದ್ದು ಸೆಟ್‍ನಲ್ಲಿ ಹರಿಪ್ರಿಯಾರ್ಯಾಗಿಂಗ್ ಮಾಡುತ್ತಿದ್ದರು. ಆ ಕಾಲ ಘಟ್ಟದಕತೆಯಾಗಿದ್ದರಿಂದ ಹಳೆಯ ಕಾದಂಬರಿಗಳನ್ನು ಓದುತ್ತಿದ್ದೆಅಂತರಿಶಬ್‍ಶೆಟ್ಟಿ ಹೇಳಿದರು.

ಶಿವಮಣಿ, ಕತೆಗಾರದಯಾನಂದ್, ಸಂಭಾಷಣೆಕಾರ ರಘುನಿಡುವಳ್ಳಿ, ಭೂಷಣ್, ನಿರ್ಮಾಪಕ ಸಂತೋಷ್‍ಕುಮಾರ್, ಕಾರ್ಯಕಾರಿ ನಿರ್ಮಾಪಕ ಪ್ರಮೋದ್‍ಶೆಟ್ಟಿ ಉಪಸ್ತಿತರಿದ್ದು ಅನುಭವಗಳನ್ನು ಹಂಚಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
29/12/18


80ರ ಕಾಲಘಟ್ಟದ ಬೆಲ್‍ಬಾಟಂ
ಹೊಸ ಚಿತ್ರ ‘ಬೆಲ್ ಬಾಟಂ’ದಲ್ಲಿ ಹಲವು ವಿಶೇಷತೆಗಳು ಇವೆ. ನಟನಾಗಬೇಕೆಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಿಶಬ್‍ಶೆಟ್ಟಿ ರಿಕ್ಕಿ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಅವರ ಆಸೆಯಂತೆ ಈ ಚಿತ್ರದ ಮೂಲಕ ನಾಯಕನಾಗಿ ಕಾಣ ಸಿಕೊಳ್ಳುತ್ತಿದ್ದಾರೆ. ರಂಗಭೂಮಿ ಕಲಾವಿದ, ಸಹಾಯಕ ನಿರ್ದೇಶಕನಾಗಿದ್ದ ಸಂತೋಷ್‍ಕುಮಾರ್.ಕೆ.ಸಿ ನಿರ್ಮಾಪಕರಾಗಿ ಪರಿಚಯವಾಗುತ್ತಿದ್ದಾರೆ. ಪ್ರತಿ ಚಿತ್ರದಲ್ಲಿ ವಿಭಿನ್ನತೆಯನ್ನು ತೋರಿಸುತ್ತಿರುವ ನಿರ್ದೇಶಕ ಜಯತೀರ್ಥ ಅವರ ಮತ್ತೋಂದು ಪ್ರಯತ್ನ. ಟಿ..ಕೆ.ದಯಾನಂದ್ ವಿರಚಿತ ಕತೆಯನ್ನು ಪತ್ತೇದಾರಿ ಕಾದಂಬರಿಗಳ ಕತೆಗಾರರಿಗೆ ಅರ್ಪಿಸಲಾಗುತ್ತಿದೆ. ಕಿರಿಕ್ ಪಾರ್ಟಿಯಲ್ಲಿ ಕೆಲಸ ಮಾಡಿದ್ದ ಅರವಿಂದ್‍ಕಶ್ಯಪ್ ಸ್ವತಂತ್ರ ಛಾಯಗ್ರಾಹಕ. ನಿರ್ದೇಶಕರಾಗಿದ್ದ ಶಿವಮಣ ಮತ್ತೋಮ್ಮೆ ನಾಯಕನನ್ನು ದಾರಿತಪ್ಪಿಸುವ ಮೋಡಿನಂಜಪ್ಪನಾಗಿ ಅಭಿನಯಿಸುತ್ತಿದ್ದಾರೆ. ಎರಡು ಹಾಡುಗಳಿಗೆ ಅಜನೀಶ್‍ಲೋಕನಾಥ್ ಸಂಗೀತ ಸಂಯೋಜನೆ ಇದೆ. ತಂಡದವರೆಲ್ಲರೂ ರಂಗಭೂಮಿಯಿಂದ ಬಂದವರಾಗಿದ್ದಾರೆ.

ಸಿನಿಮಾ ಕುರಿತು ಹೇಳುವದಾದರೆ 80ರ ದಶಕದಲ್ಲಿ ತನಿಖೆಯನ್ನು ಯಾವ ರೀತಿ ನಡೆಸುತ್ತಿದ್ದರು ಎಂಬುದರ ಚಿತ್ರಣವನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಅಂತಹುದೆ ಸ್ಥಳಗಳಾದ ಬನವಾಸಿ, ಶಿವಮೊಗ್ಗ, ಉಡುಪಿ, ಜೋಗ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸುವ ಇರಾದೆ ಇದೆ. ನಾಯಕ ಡಿಟೆಕ್ಟಿವ್ ದಿವಾಕರನಾಗಿ ಒಂದು ಕೇಸ್‍ನ್ನು ಯಾವ ರೀತಿ ತನಿಖೆ ನಡೆಸುತ್ತಾನೆ ಎಂಬುದನ್ನು ಥ್ರಿಲ್ ಮೂಲಕ ಹೇಳಲಾಗುತ್ತದೆ. ಚಿತ್ರದಲ್ಲಿ ಗೂಬೆ ಕೂಡ ರೂಪಕವಾಗಿ ಕಾಣ ಸುತ್ತದೆ. ಅಲ್ಲದೆ ನಾಯಕಿಯ ಜಡೆ, ನಾಯಕನ ಮೀಸೆ ಇವೆಲ್ಲವು ಸ್ಪೆಷಲ್ ಆಗಿ ಬರುತ್ತದೆ. ಕುಸುಮಳಾಗಿ ತನಿಖೆ ನಡೆಸುವಾಗ ಗೊಂದಲ, ಅವಘಡಗಳನ್ನು ಕೊಡುವ ಪಾತ್ರದಲ್ಲಿ ಹರಿಪ್ರಿಯಾ ನಾಯಕಿ. ಹೀಗೆ ಗೂಬೆಖಾನ್, ರೇಡಿಯೋರಾಜ, ಮರಪಿಂಟೋ ಹೆಸರುಗಳಲ್ಲಿ ಇತರೆ ಕಲಾವಿದರು ನಟಿಸುತ್ತಿದ್ದಾರೆ. ಪ್ರಮೋದ್‍ಶೆಟ್ಟಿ ಪೋಲೀಸ್ ಇನ್ಸೆಪೆಕ್ಟರ್ ಪಾತ್ರದ ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗಿ ತೊಡಗಿಕೊಂಡಿದ್ದಾರೆ. ಗೋಲ್ಡನ್ ಹಾರ್ಸ್ ಬ್ಯಾನರ್ ಮೂಲಕ ನಿರ್ಮಾಣವಾಗುತ್ತಿದೆ. ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಹೂರ್ತ ಸಮಾರಂಭವು ಸರಳವಾಗಿ ನಡೆಯಿತು.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-30/01/18
ನಿಷ್ಟೆ, ಶ್ರಮ ಉಳಿಸಿಕೊಂಡರೆ ಫೈಲ್ ಆಗೋಲ್ಲ - ಹರಿಪ್ರಿಯಾ
ಚಿತ್ರರಂಗದಲ್ಲಿ ಎಲ್ಲರಿಂದಲೂ ನಿಷ್ಟ್ಟೆ ಉಳಿಸಿಕೊಂಡು, ಶ್ರಮದಿಂದ ಕೆಲಸ ಮಾಡಿದಾಗ ಜೀವನದಲ್ಲಿ ಫೈಲ್ ಎನ್ನುವ ಮಾತು ಬರೋಲ್ಲ ಅಂತ ಕಿವಿಮಾತು ಹೇಳಿದ್ದು ಚಂದನವನದ ಬ್ಯುಸಿ ತಾರೆ ಹರಿಪ್ರಿಯಾ. ಅವರು ‘ಬೆಲ್‍ಬಾಟಂ’ ಮಹೂರ್ತದ ನಂತರ ಪ್ರತಕರ್ತರೊಂದಿಗೆ ಮಾತನಾಡುತ್ತಿದ್ದರು. ಮೊದಲಬಾರಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ ಅವರೊಂದಿಗೆ ಜಯಸಿಂಹ ಚಿತ್ರದಲ್ಲಿ ನಟಿಸಿ ಅಲ್ಲಿಯೂ ಹೆಸರು ಮಾಡುತ್ತಿದ್ದಾರೆ. ಹುಟ್ಟಿ, ಬೆಳದ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಬ್ರಾಹ್ಮಣರು ತಿಲಕವಿಟ್ಟು ಆರ್ಶಿವಾದ ಮಾಡಿದ್ದಾರೆ. ಮರೆವಣ ಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಾನು ಓದಿದ ಶಾಲೆ, ಗೆಳತಿಯರು, ಅಂಗಡಿಗಳು ಎಲ್ಲವು ನೆನಪಿಗೆ ಬರುತ್ತಿದ್ದವು. ಈಗ ಮನೆ ಇಲ್ಲ. ಈ ವರ್ಷ ಸಂಹಾರ, ಕಥಾಸಂಗಮ, ಸೂಜಿದಾರ, ಕುರುಕ್ರೇತ್ರ, ಲೈಫ್ ಜೊತೆ ಒಂದು ಸೆಲ್ಪಿಯಲ್ಲಿ ನಟಿಸಿರುವ 8-9 ಚಿತ್ರಗಳು ಬಿಡುಗಡೆಯಾಗುತ್ತದೆ. ಕನಕದಲ್ಲಿ ವಿಧುವೆ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ನೀರ್‍ದೋಸೆಯಲ್ಲಿ ನಟಿಸಿದ ನಂತರ ಅಂತಹುದೆ ಪಾತ್ರಗಳನ್ನು ಮಾಡಲು ದೊಡ್ಡ ಬ್ಯಾನರ್‍ನಿಂದ ಕರೆ ಬಂದಿತ್ತು. ಅಂತಹ ಪಾತ್ರ ಮುಗಿದ ಅದ್ಯಾಯ ಎನ್ನುತ್ತಾರೆ.

ನಟಿಯರನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಹರಿಪ್ರಿಯಾ ಹೇಳಿಕೆ ಈ ರೀತಿ ಇದೆ. ಎರಡು ಕಡೆ ತಪ್ಪುಗಳು ಆದಾಗ ದೋಷಿಸುವುದು ಸರಿಯಲ್ಲ. ನಾವುಗಳು ಸರಿಯಾಗಿ ಇದ್ದಲ್ಲಿ ಇದೆಲ್ಲಾ ನಡೆಯುವುದಿಲ್ಲ. ಇಂತಹ ಘಟನೆಗಳು ನನಗೆ ನಡೆದಿಲ್ಲ. ಕೆಲವರು ಅವಕಾಶಗಳಿ ಸಿಗಲಿ ಅಂತ ಮೋಹಕ್ಕೆ ಒಳಗಾಗಬಹುದು. ಇದರಿಂದ ಇತರೆಯವರಿಗೂ ತೊಂದರೆಯಾಗುತ್ತದೆ. ಕಳ್ಳರಸಂತೆ ನಿರ್ದೇಶಕಿ ಸುಮನಕಿತ್ತೂರು ಅವರಿಂದ ಯಶ್,ನಾನು ನಟನೆ ತರಭೇತಿಯನ್ನು ಪಡೆದುಕೊಂಡಿದ್ದೇವೆ. ಕಲಾವಿದೆಯಾಗಿ ಯಾವ ರೀತಿ ಇರಬೇಕೆಂದು ಆ ಚಿತ್ರದಿಂದ ತಿಳಿಯಿತು. ಸಂಹಾರದಲ್ಲಿ ನೆಗಟೀವ್ ರೋಲ್‍ನಲ್ಲಿ ಕಾಣ ಸಿಕೊಂಡಿದ್ದೇನೆ. ತೆಲುಗು ಸಿನಿಮಾಗೆ ಡಬ್ ಮಾಡಿರುವುದು ಖುಷಿಯಾಗಿದೆ. ಅಭಿನಯಕ್ಕೆ ಕಾಲಿಟ್ಟಾಗ 16 ವರ್ಷ. ಈ ಹತ್ತು ವರ್ಷಗಳಲ್ಲಿ 35 ಚಿತ್ರಗಳು ಖಾತೆ ಸೇರಿದೆ. ಚುನಾವಣಾ ಪ್ರಚಾರಕ್ಕೆ ಕರೆ ಬಂದಲ್ಲಿ ಹೋಗುವುದಾಗಿ ನಗುತ್ತಾ ಹೇಳುತ್ತಾರೆ ಹರಿಪ್ರಿಯಾ.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-30/01/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore