HOME
CINEMA NEWS
GALLERY
TV NEWS
REVIEWS
CONTACT US
ಪಾರಿವಾಳ,ಪ್ರೀತಿ ಮತ್ತು ರೌಡಿಸಂ
ಶಿವಲಿಂಗ ಚಿತ್ರದಲ್ಲಿ ಪಾರಿವಾಳ ಒಂದು ಹಾಡು ಮತ್ತು ಎರಡು ಮೂರು ದೃಶ್ಯಗಳಲ್ಲಿ ಕಾಣಿಸಿಕೊಂಡಿತ್ತು. ಅದೇ ‘ಬಜಾರ್’ ಚಿತ್ರದ ಕತೆ ಇದೇ ಪಕ್ಷಿ ಸುತ್ತ ಸಾಗುತ್ತದೆ. ನಿರ್ದೇಶಕ ಸಿಂಪಲ್‍ಸುನಿ ಹೇಳುವಂತೆ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಪಾರಿವಾಳದ ರೇಸ್ ಇಟ್ಟುಕೊಂಡು ಯಾವ ಸಿನಿಮಾವು ಬಂದಿಲ್ಲ. ಅಂತಹದ್ದೊಂದು ಪ್ರಯತ್ನ ಮಾಡಲಾಗಿದೆ. ಕುದರೆ ಓಡಿಸುವವನಿಗೆ ಜಾಕಿ ಎಂದು ಕರೆಯುತ್ತಾರೆ. ಪಾರಿವಾಳ ಸಾಕುವವನನ್ನು ಶೋಕ್ದಾರ್ ಎನ್ನುವುದುಂಟು. ಸಿನಿಮಾದಲ್ಲಿ ಪಕ್ಷಿಗಳ ಸ್ಪರ್ಧೆ ಜೊತೆಗೆ ಭೂಗತಲೋಕ, ಪ್ರೀತಿ ಎಲ್ಲವು ಇದೆ. ಪಾರಿ ಮತ್ತು ಹುಡುಗಿ ಪಾರಿಜಾತ ಈತನ ಬದುಕಿನಲ್ಲಿ ಬಂದಾಗ ಏನೇನು ಆಗುತ್ತದೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ತರಭೇತಿ ಪಡೆದ ಹಾಗೂ ರೇಸ್‍ನಲ್ಲಿ ಭಾಗವಹಿಸಿದ ಪಾರಿವಾಳಗಳನ್ನು ಬಳಸಲಾಗಿದೆ. ಅದು ಎಲ್ಲರಂತೆ ಇರುವುದಿಲ್ಲ. ತುಂಬಾ ಮೂಡಿಯಾಗಿರುತ್ತದೆ. ಅದಕ್ಕಾಗಿ ಹೆಣ್ಣು ಪಾರಿವಾಳವನ್ನು ಹತ್ತಿರ ಬಿಟ್ಟು ಚಿತ್ರೀಕರಣ ನಡೆಸಿದ್ದು ಕಷ್ಟ ಏನಿಸಿತ್ತು. ಲೈಟ್ ಬಳಸದೆ ಕೃತಕ ಬೆಳಕಿನಲ್ಲಿ ಸೆರೆಹಿಡಿಯಲಾಗಿದೆ. ಇನ್ನು ಮುಂದೆ ಬಜಾರ್‍ನ್ನು ಜನಗಳ ಮುಂದೆ ಬಿಡಲಾಗುತ್ತಿದೆ. ಅವರು ಏನೇನು ತೆಗೆದುಕೊಳ್ಳುತ್ತಾರೋ ಎಂಬುದು ಬಿಡುಗಡೆ ನಂತರ ತಿಳಿಯಲಿದೆ ಅಂತಾರೆ.

ನಾಯಕ ಧನ್ವೀರ್‍ಗೆ ನಟನೆ ಹೊಸ ಅನುಭವ. ಚಿಕ್ಕವಯಸ್ಸಿನಲ್ಲಿಯೇ ಅಜ್ಜನಿಂದ ಬಳುವಳಿಯಾಗಿ ಬಂದ ರಂಗಭೂಮಿ ಕಲೆ ಕ್ಯಾಮಾರ ಮುಂದೆ ನಿಲ್ಲಲು ಸಹಕಾರಿಯಾಗಿದೆ. ಒಂದು ಹಾಡಿಗೆ ಸಿಕ್ಸ್ ಪ್ಯಾಕ್ ಅವಶ್ಯಕವಾಗಿದ್ದ ಕಾರಣ ದೇಹಕ್ಕೆ ತಾಲೀಮು ನಡೆಸಿ ನಿರ್ದೇಶಕರು ಹೇಳಿದಂತೆ ಮಾಡಿದ್ದಾರೆ. ಕಲ್ಕಿ ಅನ್ನೋ ಹೆಸರಿನಲ್ಲಿ ಅನಾಥ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ಹುಡುಗಿಯಾಗಿ ಅದಿತಿಪ್ರಭುದೇವ ನಾಯಕಿ. ಸೆಟ್ಲ್‍ಮೆಂಟ್ ಯಜಮಾನನಾಗಿ ಶರತ್‍ಲೋಹಿತಾಶ್ವ, ಇವರೊಂದಿಗೆ ಸಾಧುಕೋಕಿಲ, ದಿಲೀಪ್ ಮುಂತಾದವರು ನಟಿಸಿದ್ದಾರೆ. ಕೆಜಿಎಫ್ ಖ್ಯಾತಿಯ ರವಿಬಸ್ರೂರು ಸಂಗೀತ, ಸಂತೋಷ್‍ರೈ ಪಾತಾಜೆ ಛಾಯಗ್ರಹಣ, ಜಯಸಿಂಹ-ಪ್ರಸನ್ನ ಕತೆ, ಕಾರ್ಯಕಾರಿ ನಿರ್ಮಾಪಕ ಶಿವಧ್ವಜ್ ಇದ್ದಾರೆ. ಮಗನನ್ನು ನಾಯಕ ಮಾಡುವ ಸಲುವಾಗಿ ಮಾಗಡಿ ಮೂಲದ ತಿಮ್ಮೇಗೌಡ ಸುಮಾರು ಐದು ಕೋಟಿ ಖರ್ಚು ಮಾಡಿದ್ದಾರೆ. ವಿತರಕ ಸುಪ್ರಿತ್ ಮುಖಾಂತರ ಅಂದಾಜು 100 ಕೇಂದ್ರಗಳಲ್ಲಿ ಇದೇ ತಿಂಗಳು ಹನ್ನೊಂದರಂದು ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
5/01/19


ಬಜಾರ್‍ಗೆ ಬಂದಿಳಿದ ದರ್ಶನ್
ಹೊಸಬರಿಗೆ ಧೈರ್ಯ ತುಂಬುವ ದರ್ಶನ್ ‘ಬಜಾರ್’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ಆಗಮಿಸಿದ್ದರು. ಹೊಸಬರ ಜೊತೆಗೆ ನಾನು ಸಹ ಹೊಸಬ ನಾಗಿರುತ್ತೇನೆ. ಸುಂದರ ಪ್ರೀತಿ ಕತೆಯಲ್ಲಿ ಪಾರಿವಾಳ ರೇಸ್‍ಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಚೌಕ, ಶಿವಲಿಂಗ ಚಿತ್ರಗಳಲ್ಲಿ ಸ್ವಲ್ಪ ತೋರಿಸಲಾಗಿತ್ತು. ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಲಾಗಿದೆ. ಕ್ಲೈಮಾಕ್ಸ್‍ದಲ್ಲಿ 500 ಪಾರಿವಾಳಗಳನ್ನು ಇಟ್ಟುಕೊಂಡು ಶೂಟ್ ಮಾಡಿದ್ದು ಮರೆಯಲಾಗದ ಅನುಭವ. ಚಮಕ್ ನಂತರ ಅದ್ದೂರಿ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಖುಷಿ ತಂದಿದೆ ಎಂದು ಸುನಿ ಹೇಳಿಕೊಂಡರು. ನಾಯಕ ಧನ್‍ವೀರ್ ಸಿನಿಮಾದ ಒಂದು ಡೈಲಾಗ್ ಹೇಳಿದಾಗ ಶಿಳ್ಳೆ ಶಬ್ದ ಕೇಳಿಬಂತು.

ಥೈಲ್ಯಾಂಡ್‍ಗೆ ಹೋಗಿದ್ದು ಸುಂದರ ನೆನಪು ಆಗಿದೆ ಅಂತ ಹಾಡಿಗೆ ನರ್ತನ ಮಾಡಿದರು ನಾಯಕಿ ಅದಿತಿಪ್ರಭುದೇವ. ನಿರ್ಮಾಪಕ ತಿಮ್ಮೆಗೌಡ, ಸಂಗೀತ ನಿರ್ದೇಶಕ ರವಿಬಸ್ರೂರು, ಕಾರ್ಯಕಾರಿ ನಿರ್ಮಾಪಕ ಶಿವಧ್ವಜ್ ಕೆಲವೊಂದು ಮಾಹಿತಿಗಳನ್ನು ಬಿಚ್ಚಿಟ್ಟರು. ನಂತರ ದರ್ಶನ್ ಚಿತ್ರದ ಟೀಸರ್, ಧ್ವನಿಸಾಂದ್ರಿಕೆ ಅನಾವರಣಗೊಳಿಸುತ್ತಾ, ಧನ್‍ವೀರ್‍ಗೆ ಸ್ವಾಗತ. ಪರದೆ ಮೇಲೆ ಚೆಂದ ಕಾಣಿಸುತ್ತಾರೆ. ಪಾರಿವಾಳ ರೇಸ್‍ನ್ನು ಇಟ್ಟುಕೊಂಡು ರೌಡಿಸಂ ಕತೆಯನ್ನು ಹೇಳಲು ಹೊರಟ್ಟಿದ್ದಾರೆ. ಮೂವತ್ತು ವರ್ಷಗಳ ಕೆಳಗೆ ನಾನು ಸಹ ಇದನ್ನು ಸಾಕಿದ್ದೆ. ಇದರಿಂದ ರೌಡಿಸಂ ಮಾಡುವ ಕೆಟ್ಟ ಶೋಕಿ ಇದೆ. ನಿರ್ದೇಶಕರು ಸಮುದ್ರದ ಎದುರಾಗಿ ಈಜುತ್ತಾ ಹೋಗುತ್ತಾರೆ. ತಂಡಕ್ಕೆ ಒಳ್ಳೆಯದಾಗಲಿ ಅಂದಾಗ ಅಭಿಮಾನಿಗಳು ಚೀರಾಟ, ಜೈಕಾರ ಹಾಕಿದರು.
ಸಿನಿ ಸರ್ಕಲ್.ಇನ್ ನ್ಯೂಸ್
16/08/18


ಬಜಾರ್ ಎರಡನೇ ಟೀಸರ್ ಬಿಡುಗಡೆ
‘ಬಜಾರ್’ ಚಿತ್ರದ ಮೊದಲನೆ ಟೀಸರ್ ಮಹೂರ್ತ ದಿನದಂದು ತೋರಿಸಲಾಗಿತ್ತು. ಈಗ ಚಿತ್ರೀಕರಣ ಮುಗಿದು ಬಿಡುಗಡೆ ಹಂತಕ್ಕೆ ಬಂದಿರುವ ಕಾರಣ ಪ್ರಚಾರದ ಸಲುವಾಗಿ ಎರಡನೆ ಟೀಸರ್‍ನ್ನು ಮಾದ್ಯಮದವರಿಗೆ ತೋರಿಸಲಾಗಿ ತಂಡವು ಮಾತುಗಳನ್ನು ಹಂಚಿಕೊಂಡಿತು. ಸರದಿಯಂತೆ ರಚನೆ,ನಿರ್ದೇಶನ ಮಾಡಿರುವ ಸುನಿ ಮಾತನಾಡಿ ಸುಂದರ ಪ್ರೀತಿ ಕತೆ ಜೊತೆಗೆ ಪಾರಿವಾಳ ರೇಸ್‍ಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಎಲ್ಲಾ ಪ್ರಾಣಿಗಳು ಮಾತು ಕೇಳುತ್ತವೆ. ಇದನ್ನು ಪಳಗಿಸುವುದು ಕಷ್ಟ. ಮನಸ್ಸು ಹತೋಟಿಯಲ್ಲಿ ಇದ್ದರೆ ಮಾತ್ರ ನಾವು ಹೇಳಿದಂತೆ ಕೇಳುತ್ತದೆ. ಇದನ್ನು ಸಾಕುವವನಿಗೆ ಶೇಕ್‍ದಾರ್ ಎನ್ನುತ್ತಾರೆ. ಪಾರಿವಾಳ ರೇಸ್ ನಡೆಯುವ ಜಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದು ಸಿನಿಮಾದಲ್ಲಿ ಹದಿನೈದು ನಿಮಷ ಬರಲಿದೆ. ನಾಯಕಿ ಹೆಸರು ಪಾರಿಜಾತ. ನಾಯಕನ ಸಿಕ್ಸ್ ಪ್ಯಾಕ್ ತೋರಿಸುವ ಸಲುವಾಗಿ ನಾಯಕಿ ಕನಸಿನಲ್ಲಿ ಬರುವ ಹಾಡನ್ನು ಥೈಲ್ಯಾಂಡ್‍ನಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯದಲ್ಲೆ ಆಡಿಯೋ ಬಿಡುಗಡೆ ಮಾಡಲಾಗುವುದು ಎಂಬುದರ ಮಾಹಿತಿ ನೀಡಿದರು.

ಅಪ್ಪನ ಸಹಕಾರದಿಂದ ನಾಯಕನಾಗಿ ಪಾದಾರ್ಪಣೆ ಮಾಡಿದ್ದೇನೆ. ರೋಮಾನ್ಸ್, ಫೈಟ್ ಎರಡರಲ್ಲಿ ಆಕ್ಷನ್ ಮಾಡಿದ್ದು ಇಷ್ಟವಾಗಿದೆ ಎಂದು ನಾಯಕ ಧನ್‍ವೀರ್ ಹೇಳಿಕೊಂಡರು. ಮಧ್ಯಮವರ್ಗದ ಹುಡುಗಿಯಾಗಿ ಪಾರು ಹೆಸರಿನಲ್ಲಿ ಕಾಣಸಿಕೊಂಡಿದ್ದೇನೆ. ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುವ ಪಾತ್ರವೆಂದು ಪರಿಚಯಿಸಿಕೊಂಡರು ನಾಯಕಿ ಅದಿತಿಪ್ರಭುದೇವ.

ಬೇರೆ ಬೇರೆ ಶೇಡ್‍ಗಳಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ಒದಗಿಸಲಾಗಿದೆ ಎನ್ನುವುದು ರವಿಬಸ್ರೂರು ಮಾತು. ಎಲ್ಲವನ್ನು ಕಾರ್ಪೋರೇಟ್ ಶೈಲಿಯಲ್ಲಿ ಅಂದರೆ ಕಾನೂನು ರೀತಿ ಲಿಖಿತ ಮೂಲಕ ದರಪಟ್ಟಿಯನ್ನು ಕರೆದು ವೆಚ್ಚ ಮಾಡಿರುವುದರಿಂದ ಶೇಕಡ 30ರಷ್ಟು ನಿರ್ಮಾಣದಲ್ಲಿ ಉಳಿತಾಯವಾಗಿದೆ. ಇದೇ ರೀತಿ ಮಾಡಿದಲ್ಲಿ ಮುಂದೆ ಅನಾಹತಗಳು ಆಗುವುದಿಲ್ಲವೆಂದು ಬಜೆಟ್ ವಿವರ ನಿರ್ಮಾಪಕರಿಗೆ ಗೊತ್ತಿದೆ ಅಂತ ಹೊಸ ರೀತಿಯಲ್ಲಿ ಕಾರ್ಯಕಾರಿ ನಿರ್ವಹಣೆ ಜವಬ್ದಾರಿಯನ್ನು ಹೊತ್ತುಕೊಂಡಿರುವ ಶಿವಧ್ವಜ್ ವಿವರ ನೀಡಿದರು.
ಚಿಕ್ಕ ವಯಸ್ಸಿನಲ್ಲೆ ಮಗನ ಅಭಿನಯವನ್ನು ಕಂಡು ನಿರ್ಮಾಣ ಮಾಡಲಾಯಿತು. 2014ರಿಂದ ಸೂಕ್ತ ಕತೆಗಾಗಿ ಹುಡುಕಾಟ ನಡೆಸಲಾಗಿತ್ತು. ನಿರ್ದೇಶಕರು ಹೇಳಿದ ಕತೆ ಕೇಳಿ ಐದು ಕೋಟಿ ಖರ್ಚು ಮಾಡಿದ್ದೇನೆ ಎಂದು ಧೈರ್ಯದಿಂದ ಹೇಳಿದ್ದು ತಿಮ್ಮೆಗೌಡ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/07/18


ಪ್ರೀತಿ, ಪಾರಿವಾಳ, ಪಾರಿಜಾತ
ಚಮಕ್ ಯಶಸ್ಸಿನ ಗುಂಗಿನಲ್ಲೆ ನಿರ್ದೇಶಕ ಸುನಿ ‘ಬಜಾರ್’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನೀನು ಸೋತರೆ ಅವನು ಗೆದ್ದಂತೆ, ಅವನು ಸತ್ತರೆ ನೀನು ಗೆದ್ದಂತೆ. ಸಾವು ಪಕ್ಕಾ, ನೀನು ಎಲ್ಲೀದ್ದೀಯಾ ಅಂತ ವಿರೋಧಿ ಬಣಗಳು ಕನ್ನಡ,ತಮಿಳು ಭಾಷೆಯಲ್ಲಿ ಡೈಲಾಗ್ ಹೊಡೆದಾಗ, ಮತ್ತೋಂದು ಕಡೆ ನಾಯಕ ಮೂಟೆ ಚೀಲದಲ್ಲಿ ಮಚ್ಚುಗಳನ್ನು ಕೆಳಗೆ ಬೀಳಿಸುತ್ತಾನೆ. ನಂತರ ಎಲ್ಲವನ್ನು ಮತ್ತ್ತೆ ಮೂಟೆ ಚೀಲಕ್ಕೆ ಕಟ್ಟಿ ಹಾಕಿ ಬುಲೆಟ್‍ನಲ್ಲಿ ಹೋಗುವ ಮುಂಚೆ ನಾನು ರೌಡಿ ಅಲ್ಲ, ಅಮ್ಮ ಆಯುಧ ಪೂಜೆಗೆ ಮಚ್ಚುಗಳನ್ನು ತಟ್ಟಿಸಿಕೊಂಡು ಬರಲು ಹೇಳಿದ್ದಾರೆಂದು ಹೊರಡುವ ಎರಡೂವರೆ ನಿಮಿಷದ ಟ್ರೈಲರ್ ತೋರಿಸದ ನಂತರ ತಂಡವು ಮಾತಿಗೆ ಕುಳಿತುಕೊಂಡಿತು. ಮೈಕ್ ತೆಗೆದುಕೊಂಡ ಸುನಿ ಪಾರಿವಾಳಕ್ಕೆ ಬೇರೊಂದು ಭಾಷೆಯಲ್ಲಿ ಕಲ್ಕಿ, ಮಾರೀಚಾ ಅಂತ ಕರೆಯುವುದುಂಟು. ಬೆಂಗಳೂರಿನ ಕೆಲವೊಂದು ಭಾಗ, ತಮಿಳುನಾಡು, ಆಂಧ್ರಗಳಲ್ಲಿ ಪಾರಿವಾಳ ಸ್ಪರ್ಧೆ ನಡೆಯುತ್ತದೆ. ಇದನ್ನು ಸಾಕುವವನಿಗೆ ಶೇಕ್‍ದಾರ್ ಅಂತ ಕರೆಯುತ್ತಾರೆ. ಕತೆಯು ಪ್ರೀತಿ, ಪಾರಿವಾಳ, ರೌಡಿಸಂ ಸುತ್ತ ಸಾಗುತ್ತದೆ. ಬೆಂಗಳೂರು ಮತ್ತು ಹಾಡುಗಳಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ ಎಂದರು.

ಬಜಾರ್‍ನಲ್ಲಿ ತುಂಬಾ ಜನ ಇದ್ದಾರೆ. ಸಾಧಿಸಿ ತೋರಿಸ್ತಿನಿ ಅಂತ ಕೋರಿಕೊಂಡರು ನವನಟ ಧನ್‍ವೀರ್. ಪಾರಿಜಾತ ಹೆಸರಿನಲ್ಲಿ ಕಾಣ ಸಿಕೊಳ್ಳುತ್ತಿದ್ದೇನೆಂದು ನಕ್ಕರು ನಾಯಕಿ ಅದಿತಿಪ್ರಭುದೇವ. ಪಾರಿವಾಳಗಳು ನಮ್ಮ ಮಾತನ್ನು ಕೇಳುವುದಿಲ್ಲ. ಇದರ ಸ್ಪರ್ಧೆಯನ್ನು ಸೆರೆಹಿಡಿಯುವುದು ಛಾಲೆಂಜ್ ಆಗಿದೆ ಎಂಬುದು ಸಂತೋಷ್‍ರೈ ಪಾತಾಜೆ ನುಡಿ. ಸೃಷ್ಟಿಸಿಕೊಂಡು ಕತೆ ಬರೆಯಲಾಗಿದೆ ಎಂದು ಹೇಳಿದರು ಎಂ.ಎಲ್.ಪ್ರಸನ್ನ. ನಾಲ್ಕು ಹಾಡುಗಳಿಗೆ ರವಿಬಸ್ರೂರು ಸಂಗೀತ ಒದಗಿಸುತ್ತಿರುವುದಾಗಿ ಮಾಹಿತಿ ನೀಡಿದರು. ಮಾಗಡಿ ಮೂಲದ ತಿಮ್ಮೆಗೌಡರ ತಂದೆ ರಂಗಭೂಮಿ ಕಲಾವಿದರು ಆಗಿರುವುದರಿಂದ ಮೊಮ್ಮಗನಿಗೆ ಅದೇ ರುಚಿ ಬಂದಿರುವ ಕಾರಣ ನಿರ್ಮಾಣ ಮಾಡುತ್ತಿರುವುದು ಖುಷಿ ತಂದಿದೆ ಅಂತಾರೆ. ನಟ,ನಿರ್ದೇಶಕ ಶಿವಧ್ವಜ್ ಪ್ರೊಡಕ್ಷನ್ ಡಿಸೈನ್ ಹುದ್ದಯನ್ನು ಅಲಂಕರಿಸಿದ್ದೇನೆ ಉಳಿದ ತಾರಗಣ ಸದ್ಯದಲ್ಲೆ ಮುಗಿಯಲಿದೆ ಎಂಬ ಮಾತು ಕೇಳಿಬಂತು. ಇದಕ್ಕೂ ಮುನ್ನ ಮಹೂರ್ತ ಸಮಾರಂಭಕ್ಕೆ ಆಗಮಿಸಿದ ಪುನೀತ್‍ರಾಜ್‍ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-14/01/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore