HOME
CINEMA NEWS
GALLERY
TV NEWS
REVIEWS
CONTACT US

CHILDREN’S FILM BOMBEYAATA PROMOTES COMMUNAL HARMONY
C
hildren’s film Bombeyaata which is based on Vatsala Mohan’s story is directed by Mohan Kumar K N. Omprakash is the cameraman and Kempraj is the editor. Dr Prakash Sontakke has composed the music.

The film is about a village school going kids who want to install a Ganesha idol. But, Sajjad is one guy who doesn’t join the gang because he is a Muslim. Sajjad’s father is an idol maker who also makes dolls. Sajjad prepares a clay model of Lord Ganesha but there is stiff opposition from his family for doing so. Sajjad becomes quiet. While school kids bring home the Ganesha idol due to heavy rain the idol gets immersed. The kids now approach Sajjad who readily gives them the Ganesha idol that he has made and thus the film ends on communal harmony between Hindus and Muslims.
-27/01/16

ಸಹಿಷ್ಣುತೆ ಸಾರುವ ಬೊಂಬೆಯಾಟ
ದೇಶದಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಸಹಿಷ್ಣುತೆಯನ್ನು ಸಾರಿ ಹೇಳುವ ಪ್ರಯತ್ನದ ಕಥಾ ಹಂದರವಿರುವ ಚಿತ್ರ "ಬೊಂಬೆಯಾಟ". ಸದ್ದುಗದ್ದಲಿವಲ್ಲದೆ ಚಿತ್ರೀಕರಣ ಮುಗಿಸಿದೆ.

ಕೆ.ಎನ್.ಮೋಹನ್ ಕುಮಾರ್ ನಿರ್ದೇಶನದ ಈ ಚಿತ್ರ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ಮತ್ತು ಅಮೇರಿಕಾದ ಕಿಡ್ಸ್ ಫೆಸ್ಟ್ ಉತ್ಸವದಲ್ಲಿ ಪ್ರದರ್ಶನ ಕಾಣಲು ಆಯ್ಕೆಯಾಗಿದೆ. ಅವರಿಗೆ ಬೆಂಗ್ಳೂರು ಟಾಕೀಸ್ ನಿರ್ಮಾಣದ ಜವಬ್ದಾರಿ ಹೊತ್ತಿದೆ.ನಿರ್ದೇಶಕರ ಪತ್ನಿ ಡಾ.ವತ್ಸಲಾ ಮೋಹನ್ ಅವರ ಕಥೆ ಚಿತ್ರಕ್ಕಿದೆ.

ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಕುರಿತು ಹೇಳಿಕೊಳ್ಳಲು ಕಳೆದವಾರ ಚಿತ್ರತಂಡ ಮಾದ್ಯಮದ ಮುಂದೆ ಮುಖಾಮುಖಿಯಾಗಿತ್ತು. ಮೊದಲು ಮಾತಿಗಿಳಿದ ನಿರ್ದೇಶಕ ಮೋಹನ್ ಕುಮಾರ್ ೧೯೯೧ರ ಬಳಿಕ ಎರಡನೇ ಬಾರಿಗೆ ಮಾಧ್ಯಮ ಮುಂದೆ ಬಂದಿದ್ದೇನೆ .ಸಿನಿಮಾ ಮಾಡುವುದು ಸುಲಭ. ಒಳ್ಳೆಯ ಸಿನಿಮಾ ಮಾಡುವುದು ಕಷ್ಟ,ಹಹಳಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಎದುರಾದ ಅಡೆ ತಡೆ ದಾಟಿ ಮುನ್ನೆಡೆದಿದ್ದೇವೆ. ಇದೇ ಮೊದಲ ಬಾರಿಗೆ ಶ್ರವಣಬೆಳಗೊಳವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಲ್ಮಶವಿರುವುದಿಲ್ಲ ಆದರೆ ದೊಡ್ಡವರು ಬೇಧ ಬಾವ ಮಾಡುತ್ತೇವೆ. ಗಣೇಶನ ಹಿನ್ನೆಲೆಯಲ್ಲಿ ಹಿಂದು ಮತ್ತು ಮುಸ್ಲಿಂ ಹುಡುಗರ ನಡುವೆ ನಡೆಯುವ ಕಥೆ ಇದು. ಚಿತ್ರದಲ್ಲಿ ಪ್ರಕೃತಿಯೇ ದೇವರೆಂದು ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ವಿವರ ನೀಡಿದರು.

ಕಥೆ ಬರೆದಿರುವ ವತ್ಸಲಾ ಮೋಹನ್, ಸಂಗೀತ ನಿರ್ದೇಶಕ ಡಾ.ಪ್ರಕಾಶ್ ಸೊಂಟಕ್ಕೆ, ಸಂಕಲನಕಾರ ಬಿ.ಎಸ್ ಕೆಂಪರಾಜ್,ನೃತ್ಯ ನಿರ್ದೇಶಕ ವಿಶಾಲ್ ರಾಜ್ ಸೇರಿದಂತೆ ಇಡೀ ತಂಡ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿತು.
-26/01/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore