HOME
CINEMA NEWS
GALLERY
TV NEWS
REVIEWS
CONTACT US

ಹಾಡುಗಳು ಹೂರಬಂದ ಬಿಎಂಡಬ್ಲ್ಯೂ
ಹೊಸ ಚಿತ್ರ ‘ಬಿಎಂಡಬ್ಲ್ಯೂ’ ಕಾರು ಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಬೆಂಗಳೂರು ಬಾಯ್ಸ್ ಅಂಡ್ ವುಮೆನ್ಸ್ ಕಾಲೇಜ್‍ನ್ನು ಚಿಕ್ಕದಾಗಿ ಇದೇ ಹೆಸರಿನಲ್ಲಿ ಕರೆಯುತ್ತಾರಂತೆ. ಕಾಲೇಜಿನಲ್ಲಿ ಹುಡುಗ-ಹುಡಗಿಯರ ತುಂಟಾಟ, ಚೆಲ್ಲಾಟ, ಪ್ರೀತಿ, ಒಳ್ಳೇದು-ಕೆಟ್ಟದ್ದು ಇವೆಲ್ಲಾವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಅದಕ್ಕೆ ಫನ್ ಅನ್‍ಲಿಮಿಟೆಡ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿದ್ದಾರೆ. ಕತೆ-ಚಿತ್ರಕತೆ-ನಿರ್ದೇಶನ ಮತ್ತು ಮೂರು ಹಾಡುಗಳಿಗೆ ಸಾಹಿತ್ಯ ಒದಗಿಸಿರುವುದು ಗಂಧರ್ವರಾಯರಾವುತ್. ಇವರ ಪುತ್ರ ಶ್ರೀರಾಂಗಂಧರ್ವ ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಜೊತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮುಖ್ಯ ಪಾತ್ರದಲ್ಲಿ ಪ್ರವೀಣ್, ಆಕಾಶ್‍ಸಿಂಗ್‍ರಜಪೂತ್ ನಗಿಸಲು ಚಿಕ್ಕಣ್ಣ, ಇವರೊಂದಿಗೆ ಪ್ರಿಯಾಂಕಮಲ್ನಾಡ್, ಅನುಷಾರೈ, ಏಕ್ತಾರಾಥೋಡ್ ಮುಂತಾದವರು ಅಭಿನಯಿಸಿದ್ದಾರೆ.

ಸಾಹಿತಿ ಗೌರವ್ ಪೆನ್ನು ಎರಡು ಗೀತೆಗಳಿಗೆ ಕೆಲಸ ಮಾಡಿದೆ. ಛಾಯಗ್ರಹಣ ಜಿ.ಎಸ್.ವಾಲಿ, ಸೂರಜ್ ಸಂಕಲನ, ನೃತ್ಯ ಮುರಳಿ ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆಯು ಓರಿಯನ್ ಮಾಲ್‍ನಲ್ಲಿ ಲೋಕಾರ್ಪಣೆಗೊಂಡಿತು. ನಿರ್ದೇಶಕರ ಸಿನಿಮಾ ಪ್ರೀತಿ, ಅವರು ಒಂಥರ ಓಂಪ್ರಕಾಶ್‍ರಾವ್ ತರಹ. ಅವರಂತೆ ಎತ್ತರಕ್ಕೆ ಬೆಳೆಯಲಿ. ಪಾತ್ರದಲ್ಲಿ ಪ್ರವೀಣ್ ಗೆಳೆಯನ ಹುಡುಗಿಯನ್ನು ಫ್ಲರ್ಟ್ ಮಾಡುತ್ತಾನೆ. ಅದನ್ನು ನಿಜಜೀವನದಲ್ಲಿ ಮಾಡಬೇಡ, ಬೇರೆ ತಟ್ಟೆಯಲ್ಲಿರುವ ಅನ್ನಕ್ಕೆ ಕೈ ಹಾಕಬೇಡಬೆಂದು ಅವರನ್ನು ಕಾಲೆಳೆದು, ದುಡ್ಡು ಕೊಟ್ಟು ಸಿಡಿ ಖರೀದಿ ಮಾಡಿದರು ಪ್ರಥಮ್. ನಿರ್ಮಾಪಕ ಜಗದೀಶ್‍ಪುರುಶೋತ್ತಮ್ ಸಿನಿಮಾ ಟಿಕೆಟ್ ಅಂಬಾಸಿಡರ್ ಕಾರ್ ಬೆಲೆಯಷ್ಟೆ ಇರುತ್ತದೆ ಎಂದರು. ಕಾರ್ಯಕ್ರಮದಲ್ಲಿ ನಿರೂಪಕಿಯ ಹಾಸ್ಯ ಪ್ರಶ್ನೆಗಳಿಗೆ ಕಲಾವಿದರು ಉತ್ತರ ನೀಡಿದರೆ, ಸ್ಪರ್ಶರೇಖಾ, ಜಾಕ್‍ಮಂಜು ಉಪಸ್ತಿತರಿದ್ದರು. ಇದಕ್ಕೂ ಮುನ್ನ ಐದು ಹಾಡುಗಳು ದೊಡ್ಡ ಪರದೆ ಮೇಲೆ ಪ್ರದರ್ಶನಗೊಂಡಿತು.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-24/01/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore