HOME
CINEMA NEWS
GALLERY
TV NEWS
REVIEWS
CONTACT US
ಡಿಜಿಟಲ್‍ದಲ್ಲಿ ಭಿನ್ನ ಬಿಡುಗಡೆ
ಅಮೆಜಾನ್, ನೆಟ್‍ಫ್ಲಿಕ್ಸ್ ಮೂಲಕ ಕನ್ನಡ ಚಿತ್ರಗಳನ್ನು ಜಾಲತಾಣದಲ್ಲಿ ವೀಕ್ಷಿಸಬಹುದು. ಈಗ ಜಿ 5 ಆನ್‍ಲೈನ್ ಸಂಸ್ಥೆಯು 190 ದೇಶಗಳಲ್ಲಿ ತಮ್ಮದೆ ಆದ ವೀಕ್ಷಕರನ್ನು ಸೆಳದುಕೊಂಡಿದೆ. ಅದರಿಂದಲೇ ಹಿಂದಿ, ತಮಿಳು, ಮರಾಠಿ ತೆಲುಗು ಸೇರಿದಂತೆ ಹಲವು ಭಾಷೆಯ ಚಿತ್ರಗಳನ್ನು ಪ್ರಸಾರ ಮಾಡುತ್ತಿದೆ. ಈಗ ವಿನೂತನ ಕತೆ ಹೊಂದಿರುವ ಸೈಕಾಲಾಜಿಕಲ್ ಥ್ರಿಲ್ಲರ್ ‘ಭಿನ್ನ’ ಕನ್ನಡ ಚಿತ್ರವನ್ನು ಜಾಲತಾಣದಲ್ಲಿನೇರವಾಗಿ ಪ್ರಸಾರ ಮಾಡುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಇದರಿಂದ ನಿರ್ಮಾಪಕರಿಗೆ ವೇದಿಕೆ ಸಿಕ್ಕಂತಾಗಿ ಚಿತ್ರಮಂದಿರದ ಮಾಲೀಕರಿಂದ ಆಗುವ ಕಿರಿಕಿರಿಯಿಂದ ದೂರವಿರಬಹುದು. ಒಳ್ಳೆಯ ಅಂಶಗಳು ಇದ್ದರೆ ಯಾವುದೇ ಸ್ಟಾರ್‍ಡಮ್ ನೋಡದೆ ಚಿತ್ರವನ್ನು ತೆಗೆದುಕೊಳ್ಳುವುದಾಗಿ ಸಂಸ್ಥೆಯು ಹೇಳಿಕೊಂಡಿದೆ.

ಕತೆ,ಚಿತ್ರಕತೆ, ಸಂಕಲನ ಮತ್ತು ನಿರ್ದೇಶನ ಆದರ್ಶ್‍ಈಶ್ವರಪ್ಪ, ಸಂಗೀತ ಜೆಸ್ಸಿಕ್ಲಿಂಟನ್, ಛಾಯಾಗ್ರಹಣ ಅಂಡ್ರೂಆಯಿಲೋ, ಧ್ವನಿ ನಿತೀನ್‍ಲುಕೋಸ್ ಅವರದಾಗಿದೆ. ತಾರಗಣದಲ್ಲಿ ಸಿದ್ಧಾರ್ಥ, ಪಾಯಲ್‍ರಾಧಕೃಷ್ಣ, ಶಶಾಂಕ್‍ಪುರುಷೋತ್ತಮ್ ಮತ್ತು ಯುಟರ್ನ್ ನಿರ್ದೇಶಕರ ಪತ್ನಿ ಸೌಮ್ಯ ಅಭಿನಯಿಸಿದ್ದಾರೆ. ಚಿತ್ರಕ್ಕೆ ಯತೀಶ್‍ವೆಂಕಟೇಶ್ ಹಾಗೂ ಪರ್ಪಲ್ ಆರೋ ಫಿಲ್ಮ್ ಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/10/19

ವಿಭಿನ್ನ ರೀತಿಯಲ್ಲಿ ಭಿನ್ನ
ಚಂದನವನದಲ್ಲಿ ತಂಡದವರು ನಮ್ಮ ಚಿತ್ರವು ಭಿನ್ನವಾಗಿದೆಯೆಂದು ಹೇಳಿಕೊಳ್ಳುತ್ತಾರೆ. ಇಲ್ಲೋಂದು ಚಿತ್ರತಂಡವು ಶೀರ್ಷಿಕೆಯನ್ನು ‘ಭಿನ್ನ’ ಎಂದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಶುದ್ದಿ ನಿರ್ದೇಶನ ಮಾಡಿರುವ ಆದರ್ಶ್.ಹೆಚ್.ಈಶ್ವರಪ್ಪ ಕತೆ,ಚಿತ್ರಕತೆ, ಸಂಭಾಷಣೆ, ಸಂಕಲನದ ಉಸ್ತುವಾರಿ ತೆಗೆದುಕೊಳ್ಳುವುದರ ಜೊತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಲ್ಪನೆಯ ಕತೆಯಲ್ಲಿ ಪ್ರತಿಭಾವಂತ ನಟಿ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊತ್ತಿರುವ ನಾಯಕಿ, ತಾನು ನಟಿಸುತ್ತಿರುವ ಒಂದು ಚಿತ್ರದ ಕತೆಯನ್ನು, ನಿರ್ದೇಶಕರಿಂದ ಪಡೆದು ಊರಾಚೆ ಹೊರಡುತ್ತಾಳೆ. ಒಂದು ಏಕಾಂತವಾದ ಮನೆಯಲ್ಲಿ ಅದನ್ನು ಓದುತ್ತಾ, ತನ್ನ ನಿಜ ಜೀವನಕ್ಕೂ ಹಾಗೂ ಸಿನಿಮಾದ ಕತೆಗೂ ಬಹಳಷ್ಟು ಹೋಲಿಕೆ ಇರುವುದನ್ನು ಕಂಡು ಬೆಚ್ಚಿ ಬೀಳುತ್ತಾಳೆ. ಆಕೆಯ ಬದುಕು, ಚಿತ್ರದ ಕತೆಗೂ ಇರುವ ಸಂಬಂದವನ್ನು ಬಹಿರಂಗ ಪಡಿಸುತ್ತ ಭಿನ್ನ ಅಂತ್ಯಗೊಳ್ಳ್ಳಲಿರುವುದನ್ನು ಸೆಸ್ಪನ್ಸ್ , ಥ್ರಿಲ್ಲರ್ ಮಾದರಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ನಟಿಯಾಗಿ ಪಾಯಲ್‍ರಾಧಾಕೃಷ್ಣ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ವ್ಯವಹಾರ ಸಲಹೆಗಾರಳಾಗಿ ಲೂಸಿಯಾ ನಿರ್ದೇಶಕರ ಪತ್ನಿ ಸೌಮ್ಯ, ನಾಟಕ, ಅಭಿನಯ ತರಭೇತಿ ಹೇಳಿಕೊಡುವ ಸಿದ್ದಾರ್ಥ ನಾಯಕ, ಇವರೊಂದಿಗೆ ಶಶಾಂಕ್‍ಪುರುಷೋತ್ತಮ್ ನಟನೆ ಇದೆ. ಮಹಿಳಾ ಪ್ರಧಾನವಾಗಿರುವುದರಿಂದ ನೋಡುಗರಿಗೆ ಪುಟ್ಟಣ್ಣಕಣಗಾಲ್ ಸಿನಿಮಾ ನೋಡಿದಂತೆ ಭಾಸವಾಗುತ್ತದಂತೆ. ಹಾಡುಗಳು ಅವಶ್ಯ ಇರುವುದಿಲ್ಲ. ಸಿಂಕ್ ಸೌಂಡ್ ಮಾಡುತ್ತಿರುವುದರಿಂದ ವೆಚ್ಚವು ಕಡಿಮೆಯಾಗಲಿದೆ. ಇಂಗ್ಲೀಷ್ ಕಿರುಚಿತ್ರವನ್ನು ನೋಡಿ ಅದರ ಒಂದು ಏಳೆಯನ್ನು ತೆಗೆದುಕೊಂಡು ಚಿತ್ರಕತೆ ರಚಿಸಲಾಗಿದೆಯಂತೆ. ಬೆಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮೂಲಕ ಶ್ರೀನಿವಾಸ್ ಗೆಳಯರ ಜೊತೆ ಸೇರಿಕೊಂಡು ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಮಹೂರ್ತ ಸಮಾರಂಭಕ್ಕೆ ನಾಗತ್ತಿಹಳ್ಳಿ ಚಂದ್ರಶೇಖರ್ ಮೊದಲ ದೃಶ್ಯಕ್ಕೆ ಕ್ಲಾಪ್ ತಂಡಕ್ಕೆ ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
26/06/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore