HOME
CINEMA NEWS
GALLERY
TV NEWS
REVIEWS
CONTACT US
ಅಯೋಗ್ಯ ಹೇಗಿದ್ದಾ ಹೇಗಾದಾ ಗೊತ್ತಾ?
ಅದೊಂದು ಗ್ರಾಮ. ಅಲ್ಲಿ ಪಂಚಾಯತಿ ಅಧ್ಯಕ್ಷನದೆ ಕಾರುಬಾರು. ಒಬ್ಬಳು ಮನೆಯ ಮುಂದೆ ಮೋರಿ ಇದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಆರೋಗ್ಯ ಹದಗೆಡುತ್ತಿದೆ. ಸರಿಪಡಿಸಿಕೊಳ್ಳಿರೆಂದು ಅಧ್ಯಕ್ಷರನ್ನು ಕೋರಿಕೊಳ್ಳುತ್ತಾಳೆ. ಇದಕ್ಕೆ ಸ್ಪಂದನೆ ಕೊಡದೆ ನಿಂದಿಸಿ, ಕಾಲಿನಿಂದ ಒದ್ದು ಕಳುಹಿಸುತ್ತಾನೆ. ಇದನ್ನು ನೋಡಿದ ಬಾಲಕ ದೊಡ್ಡವನಾದ ಮೇಲೆ ಇದೇ ಸ್ಥಾನಕ್ಕೆ ಬರಬೇಕೆಂದು ಪಣತೊಟ್ಟಂತೆ ಅಧ್ಯಕ್ಷನಾಗುವುದೇ ‘ಅಯೋಗ್ಯ’ ಚಿತ್ರದ ಒಂದು ಏಳೆಯ ಕತೆಯಾಗಿದೆ. ಹಾಗಂತ ಇಷ್ಟೇ ಎಂದು ಹೇಳಿದರೆ ತಪ್ಪಾಗುತ್ತದೆ. ಸಿನಿಮಾದಲ್ಲಿ ಅಯೋಗ್ಯ ಅಂತ ಕರೆಯುವ ಜನರು, ಮುಂದೆ ಅವರ ಪರವಾಗಿ ನಿಂತಾಗ ಯೋಗ್ಯ ಅನಿಸಿಕೊಳ್ಳುತ್ತಾನೆ. ಮಧ್ಯೆ ಒಂದಷ್ಟು ಪ್ರೀತಿ, ಹಾಸ್ಯ, ಹಳ್ಳಿ ವಾತವರಣ, ಅಲ್ಲಿನ ಸೊಗಡು, ರಾಜಕೀಯ ಕೆಸರಾಟ, ಹಬ್ಬದ ಜಾತ್ರೆಗಳು ಇವೆಲ್ಲವು ಕತೆಯಲ್ಲಿ ಹಾಸು ಹೊಕ್ಕಾಗಿರುವುದುರಿಂದ ನೋಡುಗರಿಗೆ ಬೇಸರ ತರಿಸುವುದಿಲ್ಲ. ರಾಜಕೀಯದ ಖಳನಾಯಕ ಬಚ್ಚೇಗೌಡ, ಪ್ರೇಮಕತೆಯ ನಾಯಕ ಸಿದ್ದೇಗೌಡ ಇವರಿಬ್ಬರ ಜುಗಲ್‍ಬಂದಿ ನೋಡುವುದೇ ಖುಷಿ ಕೊಡುತ್ತದೆ.

ನಾಯಕ ಸತೀಶ್‍ನೀನಾಸಂ ಮಂಡ್ಯದ ಭಾಷೆಯಲ್ಲಿ ಸುಲಲಿತವಾಗಿ ಅಭಿನಯಿಸಿ ಡ್ಯಾನ್ಸ್, ಫೈಟ್‍ನಲ್ಲಿ ಮಿಂಚಿದ್ದು, ಮತ್ತಷ್ಟು ತಾರಕಕ್ಕೆ ಹೋಗಿದ್ದಾರೆ ಎನ್ನಬಹುದು. ಮೊದಲಬಾರಿ ಮಂಡ್ಯಾ ಧಾಟಿಯಲ್ಲಿ ಡಬ್ ಮಾಡಿರುವ ರಚಿತಾರಾಮ್ ಹಳ್ಳಿ ಹುಡುಗಿಯಾಗಿ ಪರದೆ ಮೇಲೆ ಚೆಂದ ಕಾಣಿಸುವುದು ಅಲ್ಲದೆ ಅಭಿನಯದಲ್ಲಿ ಹಿಂದೆ ಬಿದ್ದಿಲ್ಲ. ನಗಿಸಲು ದಡಿಯಗಿರಿ, ಶಿವರಾಜ್.ಕೆ.ಆರ್.ಪೇಟೆ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಅರುಣ್‍ಬಾಲರಾಜ್, ಸುಂದರರಾಜ್ ಕೊಟ್ಟ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಮಾಸ್ತಿಮಂಜು ಮತ್ತು ಶರತ್ ಚಕ್ರವರ್ತಿ ಕಡಕ್ ಸಂಭಾಷಣೆಗಳು ಶಿಳ್ಳೆ ಹೊಡೆಸುತ್ತವೆ. ಚೇತನ್‍ಕುಮಾರ್ ಸಾಹಿತ್ಯದಲ್ಲಿ ಅರ್ಜುನ್ ಜನ್ಯಾ ಸಂಗೀತದ ಎರಡು ಹಾಡುಗಳು ನೆನಪಿನಲ್ಲಿ ಉಳಿಯುತ್ತದೆ. ಯೋಗರಾಜಭಟ್, ಸೂರಿ ಶಿಷ್ಯನೆಂದು ಹೇಳಿಕೊಂಡಿರುವ ನಿರ್ದೇಶಕ ಎಸ್.ಮಹೇಶ್‍ಕುಮಾರ್ ಪ್ರಥಮ ಪ್ರಯತ್ನದಲ್ಲೆ ಸಿಕ್ಸರ್ ಬಾರಿಸಿದ್ದಾರೆ. ಪ್ರೀತಮ್‍ತೆಗ್ಗಿನಮನೆ ಛಾಯಗ್ರಹಣ ಇದಕ್ಕೆಲ್ಲಾ ಪೂರಕವಾಗಿದೆ.
ನಿರ್ಮಾಣ: ಟಿ.ಆರ್.ಚಂದ್ರಶೇಖರ್
ಸಿನಿ ಸರ್ಕಲ್.ಇನ್ ವಿಮರ್ಶೆ
***
18/08/18
ಬಿಡುಗಡೆಗೆ ಮುನ್ನ ಅಯೋಗ್ಯ ಅರ್ಧ ಸೇಫ್
ಚಂದನವನಲ್ಲಿ ಸದ್ಯದ ಪರಿಸ್ಥಿತಿ ಹಾಕಿದ ಬಂಡವಾಳ ಬಂದರೆ ಸಾಕು ಎನ್ನುವ ನಿರ್ಮಾಪಕರು ಇದ್ದಾರೆ. ಸೋಜಿಗ ಎಂದರೆ ‘ಅಯೋಗ್ಯ’ ಚಿತ್ರವು ಬಿಡುಗಡೆಗೆ ಮುಂಚಿತವಾಗಿ ಅರ್ಧ ಹಣ ವಾಪಸ್ಸು ಬಂದಿದೆ ಅಂತ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಒಂದು ಯಶಸ್ಸು ಕಂಡಿರುವುದಾಗಿ ಧ್ವನಿಸಾಂದ್ರಿಕೆ ಅನಾವರಣದಲ್ಲಿ ನೆಮ್ಮದಿಯಿಂದ ಹೇಳಿಕೊಂಡರು. ಮಾತು ಮುಂದುವರೆಸಿದ ನಿರ್ಮಾಪಕರು ಗ್ರಾಮೀಣ ಹಿನ್ನಲೆಯ ಕತೆಯಲ್ಲಿ ಹಾಸ್ಯ, ಉತ್ತಮ ಸಂದೇಶ, ಮನರಂಜನೆ ಎಲ್ಲವು ಸೊಗಸಾಗಿ ಮೂಡಿಬಂದಿದೆ. ಸೆನ್ಸಾರ್ ಸದಸ್ಯರೊಬ್ಬರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲಾ ನೀನಾಸಂಸತೀಶ್, ರಚಿತಾರಾಮ್. ಮಹೇಶ್‍ಕುಮಾರ್ ಕಾರಣಿಭೂತರಾಗಿದ್ದಾರೆ. ಕಾಪೋರೇಟ್ ಸ್ಟೈಲ್‍ನಲ್ಲಿ 250+ ಚಿತ್ರಮಂದಿರ ಹಾಗೂ ವಿದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಿಂದ ಎರಡನೆ ಚಿತ್ರವಾಗಿದ್ದು, ಮುಂದೆ ಬೀರ್‍ಬಲ್, ಜಾನ್‍ಸೀನಾ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬರಲಿದೆ ಎಂದರು.

ಟೈಟಲ್ ಇಷ್ಟವಾಗಿ, ಕೇರ್‍ಲೆಸ್ ಆಗಿ ಕತೆ ಕೇಳುತ್ತಾ, ಕೊನೆಗೆ ಖುಷಿಯಿಂದ ಉರುಳಾಡಿದೆ. ಮೊದಲ ನಿರ್ಮಾಪಕರು ಮಹೂರ್ತ ಹಿಂದಿನ ದಿನದಂದು ಹಿಂದೆ ಸರಿದಾಗ ದೇವರಂತೆ ಬಂದು ಕೊರತೆ ಮಾಡದಂತೆ ಚಿತ್ರ ಮುಗಿಸಿದ್ದಾರೆ. ಆತ್ಮಹತ್ಯೆ ಹಂತಕ್ಕೆ ಹೋಗಿದ್ದ ಗೆಳಯ ಮಹೇಶ್‍ಕುಮಾರ್‍ಗೆ ಧೈರ್ಯ ಹೇಳಲಾಗಿತ್ತು. ರಚಿತರಾಮ್ ನಾಯಕಿಯಾಗಿ ಬಂದದ್ದು ಅಯೋಗ್ಯನಿಗೆ ಕಳೆ ಬಂದಿತು ಎಂದು ನೀನಾಸಂಸತೀಶ್ ಹೇಳಿದರು.

ಅಂಬರೀಷ್, ಪುನೀತ್, ಶ್ರೀಮುರಳಿ, ಧ್ರುವಸರ್ಜಾ ತಲಾ ಒಂದು ಗೀತೆಯನ್ನು ಬಿಡುಗಡೆ ಮಾಡಿರುವುದಕ್ಕೆ ಥ್ಯಾಂಕ್ಸ್, ಮಂಡ್ಯಾ ಭಾಷೆಯಲ್ಲಿ ಡಬ್ ಮಾಡಿದ್ದೇನೆ. ಏನಮ್ಮಿ ಗೀತೆ ಹಿಟ್ ಆಗಿರುವುದು ಪ್ಲಸ್ ಪಾಯಿಂಟ್. ನಿರ್ದೇಶಕರು ಸೆಟ್‍ನಲ್ಲಿ ಭಯ ಹುಟ್ಟಿಸುತ್ತಿದ್ದರು. ಕೊಂಚ ಗೊಂದಲವಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳುತ್ತಿದ್ದರು. ಆದರೆ ನಿರ್ಮಾಪಕರು ಮಾತ್ರ ತಣ್ಣಗೆ ಇರುತ್ತಿದ್ದರು. ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಾಗ ಸತೀಶ್ ಹಾಗೆ, ಹೀಗೆ ಎಂದು ಹೇಳಿದ್ದರು. ಎಲ್ಲಾ ಸ್ಟಾರ್ ಕಲಾವಿದರ ಜೊತೆ ನಟಿಸಿದ್ದೇನೆ. ಅವರುಗಳು ಎಲ್ಲಿಯೂ ಬಿಲ್ಡ್‍ಪ್ ತೋರಿಸಿಲ್ಲ. ಅದರಂತೆ ಸತೀಶ್ ಇದ್ದರು. ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಇನ್ನು ಮುಂದೆ ಜೀವನದಲ್ಲಿ ಈ ಪದ ಬಳಸಬಾರದೆಂದು ತಿಳಿವಳಿಕೆ ಹೇಳಿದ್ದು ರಚಿತರಾಮ್.

30 ದಿನದಲ್ಲಿ 56 ಲಕ್ಷ ಜನರು ವೀಕ್ಷಣೆ ಮಾಡಿರುವುದು ರೆಕಾರ್ಡ್ ಅಗಿದೆ ಎಂದು ಆನಂದ್‍ಆಡಿಯೋದ ಆನಂದ್ ಹೇಳಿದರು.. ಚಿತ್ರರಂಗದಲ್ಲಿ ಆಶ್ರಯ, ವಿದ್ಯೆ, ಅನ್ನ ನೀಡಿದ ಭಟ್ಟರು, ಸೂರಿ ಅವರ ಆರ್ಶಿವಾದದಿಂದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಎಲ್ಲಾ ಪಾತ್ರಗಳು ಚೆನ್ನಾಗಿ ಬಂದಿವೆ. ಕಲಾವಿದರು, ತಂತ್ರಜ್ಘರ ಪ್ರೋತ್ಸಾಹವನ್ನು ನೆನಸಬೇಕಾಗಿದೆ. ನಿರ್ಮಾಪಕರು ನನ್ನ ದಾರಿಗೆ ದೇವರಾಗಿ ಬಂದರು ಎಂದು ಭಾವುಕರಾದರು ನಿರ್ದೇಶಕ ಎಸ್.ಮಹೇಶ್‍ಕುಮಾರ್
ಹೋಲಿಗೆಯವನಾಗಿ ತಬಲನಾಣಿ, ಮಟನ್ ಆಗಿ ಶಿವರಾಜ್.ಕೆ.ಆರ್.ಪೇಟೆ, ಛಾಯಗ್ರಾಹಕ ಪ್ರೀತಮ್‍ತಗ್ಗಿನಮನೆ, ಸಂಭಾಷಣೆಗಾರ ಶರತ್‍ಚಕ್ರವರ್ತಿ ಉಪಸ್ತಿತರಿದ್ದು ಸಂತಸ ಹಂಚಿಕೊಂಡರು. ಚಿತ್ರವು ಇದೇ ಶುಕ್ರವಾರದಂದು ತೆರೆ ಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/08/18

ಅಯೋಗ್ಯ 17ರಂದು ಮೋಕ್ಷ\
ಚಮಕ್ ನಿರ್ಮಾಣ ಮಾಡಿದ್ದ ಹೆಸರಾಂತ ಉದ್ಯಮಿ ಟಿ.ಆರ್.ಚಂದ್ರಶೇಖರ್ ಅವರ ಎರಡನೆ ಚಿತ್ರ ‘ಅಯೋಗ್ಯ’ ಸಿನಿಮಾದ ‘ಬೆಳದಿಂಗಳ ನೀನೆನಮ್ಮಿ’, ‘ನೀನ್ ಪ್ರೀತಿ ಆಸ್ತಿ ಕಂಡ್ಲಾ’ ‘ಏನಮ್ಮಿ ಏನಮ್ಮಿ’ ಹಾಡುಗಳು ಬಿಡುಗಡೆಯಾಧ ಕೆಲವೆ ದಿನಗಳಲ್ಲಿ ಲಕ್ಷಾಂತರ ಜನರು ಆಲಿಸಿದ್ದಾರೆ. ಮೊನ್ನೆ ಪುನೀತ್‍ರಾಜ್‍ಕುಮಾರ್ ‘ಹಿಂದೆ ಹಿಂದೆ ಹೋಗು’ ಮೊದಲ ವಿಡಿಯೋ ಗೀತೆಯನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಎಸ್.ಮಹೇಶ್‍ಕುಮಾರ್ ಮೋದಲ ನಿರ್ದೇಶನದ ಕತೆಯಲ್ಲಿ ನಾಯಕ ಉಡಾಫೆಯಾಗಿದ್ದರಿಂದ ಗ್ರಾಮದಲ್ಲಿ ಎಲ್ಲರೂ ಅಯೋಗ್ಯ ಅಂತ ಅಡ್ಡ ಹೆಸರಿನಿಂದ ಕರೆಯುತ್ತಿರುತ್ತಾರೆ. ಮುಂದೆ ಗ್ರಾಮ ಪಂಚಾಯತ್‍ಗೆ ಆಯ್ಕೆಯಾಗಿ ಯಾವ ರೀತಿಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುತ್ತಾನೆ ಎಂಬುದು ಸಿನಿಮಾದ ತಿರುಳು. ತಾರಗಣದಲ್ಲಿ ನೀನಾಸಂ ಸತೀಶ್, ರಚಿತಾರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್‍ಜನ್ಯಾ ಸಂಗೀತದ ಹಾಡುಗಳು ವೈರಲ್ ಆಗಿದೆ. ಚಿತ್ರವು ಇದೇ ಶುಕ್ರವಾರದಂದು ರಾಜ್ಯದ್ಯಂತ ಅಲ್ಲದೆ ಹೊರದೇಶಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/08/18

ಸೆನ್ಸಾರ್ ಅಂಗಳದಲ್ಲಿ ಅಯೋಗ್ಯ
ಚಮಕ್ ನಿರ್ಮಾಣ ಮಾಡಿದ್ದ ಹೆಸರಾಂತ ಉದ್ಯಮಿ ಟಿ.ಆರ್.ಚಂದ್ರಶೇಖರ್ ಅವರ ಎರಡನೆ ಚಿತ್ರ ‘ಅಯೋಗ್ಯ’ ಸಿನಿಮಾದ ‘ಬೆಳದಿಂಗಳ ನೀನೆನಮ್ಮಿ’, ‘ನೀನ್ ಪ್ರೀತಿ ಆಸ್ತಿ ಕಂಡ್ಲಾ’ ‘ಏನಮ್ಮಿ ಏನಮ್ಮಿ’ ಹಾಡುಗಳು ಬಿಡುಗಡೆಯಾಧ ಕೆಲವೆ ದಿನಗಳಲ್ಲಿ ಲಕ್ಷಾಂತರ ಜನರು ಆಲಿಸಿದ್ದಾರೆ. ಮೊನ್ನೆ ಪುನೀತ್‍ರಾಜ್‍ಕುಮಾರ್ ‘ಹಿಂದೆ ಹಿಂದೆ ಹೋಗು’ ಮೊದಲ ವಿಡಿಯೋ ಗೀತೆಯನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಎಸ್.ಮಹೇಶ್‍ಕುಮಾರ್ ಮೋದಲ ನಿರ್ದೇಶನದ ಕತೆಯಲ್ಲಿ ನಾಯಕ ಉಡಾಫೆಯಾಗಿದ್ದರಿಂದ ಗ್ರಾಮದಲ್ಲಿ ಎಲ್ಲರೂ ಅಯೋಗ್ಯ ಅಂತ ಅಡ್ಡ ಹೆಸರಿನಿಂದ ಕರೆಯುತ್ತಿರುತ್ತಾರೆ. ಮುಂದೆ ಗ್ರಾಮ ಪಂಚಾಯತ್‍ಗೆ ಆಯ್ಕೆಯಾಗಿ ಯಾವ ರೀತಿಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುತ್ತಾನೆ ಎಂಬುದು ಸಿನಿಮಾದ ತಿರುಳು. ತಾರಗಣದಲ್ಲಿ ನೀನಾಸಂ ಸತೀಶ್, ರಚಿತಾರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್‍ಜನ್ಯಾ ಸಂಗೀತದ ಹಾಡುಗಳು ವೈರಲ್ ಆಗಿದೆ. ಚಿತ್ರವು ಸುಮಾರು 300 ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ ಎಂದು ನಿರ್ದೆಶಕರು ಹೇಳಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
3/08/18ಅಯೋಗ್ಯ ಹಾಡನ್ನು ಮೆಚ್ಚಿಕೊಂಡ ಪುನೀತ್‍ರಾಜ್‍ಕುಮಾರ್
‘ಅಯೋಗ್ಯ’ ಚಿತ್ರದ ‘ಬೆಳದಿಂಗಳ ನೀನೆನಮ್ಮಿ’, ‘ನೀನ್ ಪ್ರೀತಿ ಆಸ್ತಿ ಕಂಡ್ಲಾ’ ‘ಏನಮ್ಮಿ ಏನಮ್ಮಿ’ ಹಾಡುಗಳು ಬಿಡುಗಡೆಯಾಧ ಕೆಲವೆ ದಿನಗಳಲ್ಲಿ ಲಕ್ಷಾಂತರ ಜನರು ಆಲಿಸಿದ್ದಾರೆ. ಮೊನ್ನೆ ಪುನೀತ್‍ರಾಜ್‍ಕುಮಾರ್ ‘ಹಿಂದೆ ಹಿಂದೆ ಹೋಗು’ ಮೊದಲ ವಿಡಿಯೋ ಗೀತೆಯನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಎಸ್.ಮಹೇಶ್‍ಕುಮಾರ್ ಮೋದಲ ನಿರ್ದೇಶನ, ಟಿ.ಆರ್.ಚಂದ್ರಶೇಖರ್ ಎರಡನೆ ನಿರ್ಮಾಣದ ಕತೆಯಲ್ಲಿ ನಾಯಕ ಉಡಾಫೆಯಾಗಿದ್ದರಿಂದ ಗ್ರಾಮದಲ್ಲಿ ಎಲ್ಲರೂ ಅಯೋಗ್ಯ ಅಂತ ಅಡ್ಡ ಹೆಸರಿನಿಂದ ಕರೆಯುತ್ತಿರುತ್ತಾರೆ. ಮುಂದೆ ಗ್ರಾಮ ಪಂಚಾಯತ್‍ಗೆ ಆಯ್ಕೆಯಾಗಿ ಯಾವ ರೀತಿಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುತ್ತಾನೆ ಎಂಬುದು ಸಿನಿಮಾದ ತಿರುಳು. ತಾರಗಣದಲ್ಲಿ ನೀನಾಸಂ ಸತೀಶ್, ರಚಿತಾರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್‍ಜನ್ಯಾ ಸಂಗೀತದ ಹಾಡುಗಳು ವೈರಲ್ ಆಗಿದೆ. ಚಿತ್ರವು ಆಗಸ್ಟ್ ತಿಂಗಳು ತೆರೆಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
27/07/18
ಅಯೋಗ್ಯ ಮತ್ತು ಗ್ರಾಮ ಪಂಚಾಯತ್ ಸದಸ್ಯ
ಎಸ್.ಮಹೇಶ್‍ಕುಮಾರ್ ಮೋದಲ ನಿರ್ದೇಶನ, ಟಿ.ಆರ್.ಚಂದ್ರಶೇಖರ್ ಎರಡನೆ ನಿರ್ಮಾಣದ ಚಿತ್ರ ‘ಅಯೋಗ್ಯ’ ಅಡಿಬರಹದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಎಂದು ಹೇಳಿಕೊಂಡಿದೆ. ಟೈಟಲ್, ಟ್ಯಾಗ್‍ಲೈನನ್ನು ಸೃಷ್ಟಿ ಸಂಸ್ಥೆಯಿಂದ ಕಾನೂನಿನಂತೆ ಪಡೆದುಕೊಂಡು ಚಿತ್ರೀಕರಣ ಮುಗಿಸಿ ಸದ್ಯ ಚಿತ್ರೀಕರಣೊತ್ತರ ಕೆಲಸದಲ್ಲಿ ಬ್ಯುಸಿ ಇದೆ. ಹೇಳಿಕೇಳಿ ಶೀರ್ಷಿಕೆ ಸೂಕ್ಷವಾಗಿದ್ದು, ಜೊತೆಗೆ ಉಪ ಶೀರ್ಷಿಕೆಯು ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿದೆ. ಇದರಿಂದ ಮೈಸೂರು ಭಾಗದ ಕನ್ನಡ ಸಂಘದವರು, ಗ್ರಾಮ ಪಂಚಾಯತ್ ಸದಸ್ಯರುಗಳು ಆಕ್ಷೇಪ ವ್ಯಕ್ತ ಪಡಿಸಿ ಖಾರವಾದ ದೂರನ್ನು ವಾಣಿಜ್ಯ ಮಂಡಳಿಗೆ ನೀಡಿದ್ದಾರೆ. ದೂರಿನಲ್ಲಿ ಸನ್ನಿವೇಶಗಳು ಸದಸ್ಯರನ್ನು ಅಗೌರವದಿಂದ ತೋರಿಸುವಂತೆ ಇರಕೂಡದು. ಬಿಡುಗಡೆ ಮುಂಚೆ ಮೊದಲು ಸದಸ್ಯರುಗಳಿಗೆ ತೋರಿಸಬೇಕು. ಅವರಿಂದ ಹಸಿರು ನಿಶಾನೆ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಬಹುದೆಂದು ಬೇಡಿಕೆ,ಒತ್ತಾಯವನ್ನು ತಂದಿದ್ದಾರೆ.

ಇದರಿಂದ ಎಚ್ಚೆತ್ತ್ತ ಕೊಂಡ ಚಿತ್ರತಂಡವು ಶೀರ್ಷಿಕೆಯನ್ನು ‘ಅಯೋಗ್ಯ ಮತ್ತು ಗ್ರಾಮ ಪಂಚಾಯತ್ ಸದಸ್ಯ’ ಎಂಬುದಾಗಿ ಪರಿಷ್ಕ್ರತ ಹೆಸರಿನಲ್ಲಿ ನೊಂದಣಿ ಮಾಡಿಸಲು ಮಂಡಳಿಗೆ ಪತ್ರ ನೀಡಲಾಗುವುದು. ಕರ್ನಾಟಕದಲ್ಲಿ 76350 ಸದಸ್ಯರುಗಳು ಇರಲಿದ್ದು, ಪ್ರತಿ ತಾಲ್ಲೊಕಿನಿಂದ ಆಯ್ದ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಚಿತ್ರ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಅರಿವಿಲ್ಲದೆ ಉಪಶೀರ್ಷಿಕೆಯನ್ನು ಈ ರೀತಿ ಬಳಸಿಕೊಂಡಿದ್ದಕ್ಕೆ ನಿರ್ಮಾಪಕರು ಮಾನ್ಯ ಸದಸ್ಯರಲ್ಲಿ ಕ್ಷಮೆಯನ್ನು ಕೋರಿದ್ದಾರೆ. ಕತೆಯಲ್ಲಿ ನಾಯಕ ಉಡಾಫೆಯಾಗಿದ್ದರಿಂದ ಗ್ರಾಮದಲ್ಲಿ ಎಲ್ಲರೂ ಅಯೋಗ್ಯ ಅಂತ ಅಡ್ಡ ಹೆಸರಿನಿಂದ ಕರೆಯುತ್ತಿರುತ್ತಾರೆ. ಮುಂದೆ ಗ್ರಾಮ ಪಂಚಾಯತ್‍ಗೆ ಆಯ್ಕೆಯಾಗಿ ಯಾವ ರೀತಿಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುತ್ತಾನೆ ಎಂಬುದು ಸಿನಿಮಾದ ತಿರುಳು. ತಾರಗಣದಲ್ಲಿ ನೀನಾಸಂ ಸತೀಶ್, ರಚಿತಾರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್‍ಜನ್ಯಾ ಸಂಗೀತ ಇರುವ ಚಿತ್ರವು ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/06/18AYOGYA GRAM PANCHAYAT SADASHYA MUHURAT FUNCTION HELD
S
Mahesh Kumar, who worked under well-known director Yogaraj Bhat doe many years, makes debut as a full-fledged director with the film Ayogya with a tag line – Gram Panchayat Sadashya. Its muhurat function at Kanteerava Studios on Friday afternoon.

It is being produced by Suresh while S.K. Mohan Kumar is the co-producer for this big-budget film. Satheesh Ninasam, Chikkanna, Ravi Shankar, Rangayana Raghu, Sadhu Kokila, Saritha, Tabala Nani, Bullet Prakash, Kuri Prakash, Shivaraj KR Pet are the star cast of this film.

“We have yet to select heroine for this film. There were talks with Aindrita Ray but we could not select her due to dates problem. She told us that she will be busy with another film. We have launched a search for a suitable girl to play the heroine role. We are looking for a Kannada-speaking girl. The heroine will be selected within a week,’’ said S Mahesh Kumar.

Recalling how he had struggled to become a director, Mahesh Kumar said that he got the inspiration to write this script during gram panchayat elections in Karnataka. “My mentor Yogaraj Bhat used to call me as Ayogya. It was with full of affection. I selected the same as the title of this film. I narrated the script to Yogaraj Bhat as well as director Suri. Both have appreciated it,’’ Kumar said.

When asked about the problems in the near future due to the controversial title – Ayogya with the tag line Gram Panchayat Sadashya, the director said that he had no ill-intention or ill-will against gram panchayat members. "I am sure that gram panchayat members will appreciate this film because it has a message to society stating that a freeloader or wanderer in the village can become a member of gram panchayat and does good to the village,’’ he said.

Speaking on the occasion, Satheesh Ninasam has defended the director for selecting such innovative and unique title for this film. “We have to take care of all aspects, including the success at the box office because the producers have to get back their money invested in making this film. I have no objection for this title,’’ Satheesh Ninasam said.

V Harikrishna is composing music while Preetham Thegginamane is the cinematographer. Dr K Ravi Varma is the stunt master while Murali and Kambiraju are the choreographers. Suresh Bagavanar is the art director while Masti is the dialogue writer. Shanmukh is the co-director of this film.
-Cine Circle News
-5/08/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/