HOME
CINEMA NEWS
GALLERY
TV NEWS
REVIEWS
CONTACT US
ಅಥರ್ವ ಮಾಸ್‍ಗೆ ಮಾಸ್ ಕ್ಲಾಸ್‍ಗೆ ಕ್ಲಾಸ್
ಅರ್ಜುನ್‍ಸರ್ಜಾ ಸಂಬಂದಿ ಪವನ್‍ತೇಜಾ ಅಭಿನಯದ ‘ಅಥರ್ವ’ ದಲ್ಲಿ ಎಲ್ಲಾ ಅಂಶಗಳು ಇರಲಿದ್ದು ನೋಡುಗನಿಗೆ ರಸದೌತಣ ನೀಡಲಿದೆ. ಕತೆಯಲ್ಲಿ ನಾಯಕ ಕಾಲೇಜು ವಿದ್ಯಾರ್ಥಿ. ಓದಿಗಿಂತ ಹೆಚ್ಚು ಇನ್ನೊಬ್ಬರ ನೋವಿನಲ್ಲಿ ಭಾಗಿಯಾಗಿ, ಸಾದ್ಯವಾದರೆ ಅವರಿಗೆ ಸಹಾಹ ಮಾಡುವ ಗುಣವುಳ್ಳವನು. ಎಲ್ಲರ ಕೆಲಸ ಮಾಡುತ್ತಿರುವಾಗ ನಾಯಕಿಯನ್ನು ಕಂಡು ಅವಳ ಹಿಂದೆ ಬೀಳುತ್ತಾನೆ. ಇದರ ಮದ್ಯೆ ಸ್ನೇಹಿತೆಯ ಕಷ್ಟ ಪರಿಹರಿಸಿ ಒಳ್ಳೆ ಹುಡುಗ ಅನಿಸಿಕೊಳ್ಳುತ್ತಾನೆ. ಇದರಿಂದ ಇಬ್ಬರು ಹತ್ತಿರವಾಗಿ, ಪ್ರೀತಿ ವಿಷಯ ಹೇಳಬೇಕು ಅಷ್ಟರಲ್ಲಿಯೇ ಇಬ್ಬರು ಸ್ನೇಹಿತೆಯರು ಕಾಣೆಯಾಗುತ್ತಾರೆ. ಅದಕ್ಕೆ ಕಾರಣ ಈತನೇ ಎಂದು ಅವಳು ತಿಳಿದುಕೊಳ್ಳುತ್ತಾಳೆ. ಅಲ್ಲಿಂದ ಕತೆ ಬೇರೆ ಕಡೆ ತಿರುವು ಪಡೆದುಕೊಂಡು ಕುತೂಹಲ ಮೂಡಿಸುತ್ತದೆ. ಮುಂದೇನು ಆಗುತ್ತದೆ ಎಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ.

ಹೊಸದಾಗಿ ನಾಯಕನನ್ನು ಪರಿಚಯಿಸಿರುವ ಕಾರಣ ಪವನ್‍ತೇಜ ಅವರನ್ನು ಎಲ್ಲಾ ಅಂಶಗಳನ್ನು ತೋರಿಸಲು ಪ್ರಯತ್ನ ಮಾಡಿದ್ದಾರೆ. ಸನಂಶೆಟ್ಟಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ಖಳನಟನಾಗಿ ಯಶ್‍ಶೆಟ್ಟಿ ಮಿಂಚಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಇಂತಹ ಪಾತ್ರಗಳು ಸಿಕ್ಕರೂ ಅಡ್ಡಿಯಿಲ್ಲ ಎನ್ನಬಹುದು. ರಂಗಾಯಣರಘು, ತಾರಾ ತಮ್ಮ ಕೆಲಸಕ್ಕೆ ಮೋಸಮಾಡಿಲ್ಲ. ರಾಘವೇಂದ್ರ ಸಂಗೀತದಲ್ಲಿ ಕಾರ್ಮೋಡದ ಗೀತೆ ಮೆಲುಕು ಹಾಕುವಂತಿದೆ. ನಿರ್ದೇಶಕ ಅರುಣ್ ಮಾಸ್ ಕಡೆಗೆ ಗಮನ ಹರಿಸುವುದು ಪರದೆ ಮೇಲೆ ಕಾಣಿಸುತ್ತದೆ. ವಿಕ್ರಂಮೋರ್-ಪುಷ್ಪರಾಜ್ ಸಾಹಸ ಜೊತೆಗೆ ಫಿನ್ನಿಕೊರಿಯನ್ ಹಿನ್ನಲೆ ಸಂಗೀತ ಪೂರಕವಾಗಿದೆ.
ನಿರ್ಮಾಪಕ: ವಿನಯ್‍ಕುಮಾರ್.ಹೆಚ್, ಸಹ ನಿರ್ಮಾಪಕ: ರಕ್ಷಯ್.ಎಸ್.ಐ
*** ಸಿನಿ ಸರ್ಕಲ್.ಇನ್ ನ್ಯೂಸ್
16/07/18
ಅಥರ್ವನ ಆರ್ಭಟ ಶುರು
ಆಕ್ಷನ್ ಕಿಂಗ್ ಅರ್ಜುನ್‍ಸರ್ಜಾ ಕುಟುಂಬದ ಕುಡಿ ಪವನ್‍ತೇಜಾ ಅಭಿನಯದ ಮೊದಲ ಚಿತ್ರ ‘’ಅಥರ್ವ’’ ಬಿಡುಗಡೆಗೆ ಸಿದ್ದವಾಗಿದೆ. ನರಸಿಂಹಸ್ವಾಮಿಯ ಮತ್ತೋಂದು ಹೆಸರು ಶೀರ್ಷಿಕೆಯಾಗಿದೆ. ರಂಗಭೂಮಿಯಿಂದ ಬಂದವರಾಗಿದ್ದರಿಂದ ನಟನೆ ಸುಲಭವಾಗಿದ್ದರೂ, ಪಾತ್ರದ ಸಲುವಾಗಿ ಎರಡು ವರ್ಷ ತಾಲೀಮು ನಡೆಸಿ ಕ್ಯಾಮಾರ ಮುಂದೆ ನಿಂತಿದ್ದಾರೆ. ಜವಬ್ದಾರಿ ಹುಡುಗನಾಗಿ, ಮಾತಾಡಿದರೆ 100 ಅರ್ಥ, ನೋಡಿದರೆ 1000 ಗ್ರಹಿಸುವ ಶಕ್ತಿ, ಏನೇ ಮಾಡಿದರೂ ಯೋಚಸಿ ಮುನ್ನುಗುವ ಹೈದ. ವಿಷಯ ತಿಳಿದು ಮುಂದೆ ಹೋಗುವ, ಹೀಗೆ ನಾನಾ ಏರಿಳಿತಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ, ಪತ್ರಕರ್ತ ವಿದ್ಯಾರ್ಥಿಯಾಗಿ ಯಾವುದಕ್ಕೂ ಹೆದರದೆ ಘಟನೆಗಳನ್ನು ಎದುರಿಸುವ ಬೆಂಗಳೂರಿನ ಸನಂಶೆಟ್ಟಿಗೆ ನಾಯಕಿಯಾಗಿ ಕನ್ನಡದಲ್ಲಿ ಮೊದಲ ಚಿತ್ರ. ಮುಖ್ಯ ಖಳನಟನಾಗಿ ಯಶಸ್‍ಶೆಟ್ಟಿ ಉಳಿದಂತೆ ಸುಚೇಂದ್ರಪ್ರಸಾದ್, ರಂಗಾಯಣರಘು, ಮುಂತಾದವರ ತಾರಬಳಗವಿದೆ.

ಅರುಣ್‍ಗೆ ನಿರ್ದೇಶಕನಾಗಿ ಪ್ರಥಮ ಅನುಭವ. ನಾಲ್ಕು ಸುಮಧುರ ಹಾಡುಗಳಿಗೆ ಆರ್.ರಾಘವೇಂದ್ರ ರಾಗ ಸಂಯೋಜಿಸಿದ್ದಾರೆ. ಇದರ ಪೈಕಿ ಬಾಹುಬಲಿ ಖ್ಯಾತಿಯ ಕಾಲಭೈರವ ಹಾಡಿರುವ ಭಕ್ತಿಗೀತೆ ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಬೆಂಗಳೂರು, ಮೈಸೂರು, ಮಂಡ್ಯಾ, ಕೋಲಾರ, ಚಿಕ್ಕಮಗಳೂರು ಕಡೆಗಳಲ್ಲಿ 65 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ವಿಕ್ರಂಮೋರ್-ಪುಷ್ಪರಾಜ್ ಸಾಹಸ ಜೊತೆಗೆ ಫಿನ್ನಿಕೊರಿಯನ್ ಹಿನ್ನಲೆ ಸಂಗೀತ ನಿರ್ವಹಿಸಿರುವುದು ವಿಶೇಷವಾಗಿದೆ. ವಿನಯ್‍ಕುಮಾರ್.ಹೆಚ್ ನಿರ್ಮಾಪಕರು ಹಾಗೂ ರಕ್ಷಯ್.ಎಸ್.ವಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಗಾಂಧಿನಗರ ಸ್ಟಾರ್ ನಿರ್ಮಾಪಕ,ವಿತರಕ ಜಯಣ್ಣ ಕಂಬೈನ್ಸ್ ಮುಖಾಂತರ 120 ಚಿತ್ರಮಂದಿರಗಳು ಮತ್ತು 35 ಮಲ್ಟಿಪ್ಲೆಕ್ಸ್‍ಗಳಲ್ಲಿ ಶುಕ್ರವಾರದಂದು ಅಥರ್ವನ ಅಬ್ಬರವನ್ನು ಕಾಣಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
10/07/18ಮತ್ತೋಂದು ಸರ್ಜಾ ಕುಟುಂಬದ ಕುಡಿ
ಅರ್ಜುನ್‍ಸರ್ಜಾ ಕುಟುಂಬದ ಇಬ್ಬರು ಸದ್ಯ ಸ್ಟಾರ್ ನಟರಾಗಿರುವುದು ತಿಳಿದಿದೆ. ಇದರ ಸಾಲಿಗೆ ಪವನ್‍ತೇಜ ಸೇರ್ಪಡೆಯಾಗಿದ್ದಾರೆ. ‘ಅಥರ್ವ’ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಆಡಿಯೋ ಸಿಡಿಯನ್ನು ಚಿರಂಜೀವಿಸರ್ಜಾ, ಧ್ರುವಸರ್ಜಾ ಬಿಡುಗಡೆ ಮಾಡಿ ಸೋದರ ಎತ್ತರಕ್ಕೆ ಬೆಳಯಲಿ ಎಂದು ಶುಭ ಹಾರೈಸಿದರು. ಸಂಬಂದಗಳ ಸುಳಿಯಲ್ಲಿ ಸಿಲುಕಿಕೊಂಡ ಪ್ರೇಮಕತೆಯಲ್ಲಿ ಕಮರ್ಷಿಯಲ್ ಅಂಶಗಳು ಇರಲಿದೆ. ಮಾಧ್ಯಮದ ಸಹಕಾರ ಬೇಕೆಂದು ಕೋರಿಕೊಂಡಿದ್ದು ನೂತನ ನಿರ್ದೇಶಕ ಅರುಣ್. ಪ್ರಾರಂಭದಿಂದಲೂ ಮುಕ್ತಾಯದ ಹಂತದವರೆಗೆ ಚಿರಂಜೀವಿ ಅಣ್ಣ ಧೈರ್ಯ, ಪ್ರೋತ್ಸಾಹ ನೀಡಿದ್ದರಿಂದಲೇ ಅಭಿನಯಿಸಲು ಸುಲಭವಾಯಿತು ಎಂದು ಕಾಲಿಗೆ ಬಿದ್ದು ನಮಸ್ಕರಿಸಿದರು ಪವನ್‍ತೇಜಾ. ಬೆಂಗಳೂರಿನ ಸನಂಶೆಟ್ಟಿ ಈಗಾಗಲೇ ತೆಲುಗು, ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಕನ್ನಡದಲ್ಲಿ ಮೊದಲ ಚಿತ್ರವಂತೆ.

ಪುಟ್ಟಪಾತ್ರವಾದರೂ ನೋಡುಗರನ್ನು ಕಾಡುತ್ತದೆ. ಆಂಜನೇಯಸ್ವಾಮಿ ಇವರ ಕುಟುಂಬವನ್ನು ಕಾಪಾಡುತ್ತಿದೆ. ಪೊಗರು ಸಿನಿಮಾಕ್ಕೆ ಧ್ರುವ 35 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಒಳ್ಳಯದಾಗಲಿ ಎನ್ನುತ್ತಾರೆ ತಾರಾ. ಹಾಡುಗಳನ್ನು ಬಾಂಬೆ, ಚೆನ್ನೈ, ಕೇರಳ ಕಡೆಗಳಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ಎರಡು ಗೀತೆಗಳನ್ನು ಹೊರಬಿಡಲಾಗಿದ್ದು, ಉಳಿದ ಮೂರು ಸದ್ಯದಲ್ಲೆ ಬಿಡುಗಡೆ ಮಾಡಲಾಗುವುದೆಂದು ಸಂಗೀತ ನಿರ್ದೇಶಕ ರಾಘವೇಂದ್ರ.ವಿ ಮಾಹಿತಿ ಒದಗಿಸಿದರು. ವಿನಯ್‍ಕುಮಾರ್.ಹೆಚ್ ಮತ್ತು ರಕ್ಷಯ್.ಎಸ್.ಪಿ. ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ತರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/06/18ಸರ್ಜಾ ಕುಟುಂಬದ ಮತ್ತೋಂದು ಕುಡಿ
ಆಕ್ಷನ್ ಕಿಂಗ್ ಅರ್ಜುನ್‍ಸರ್ಜಾ ಕುಟುಂಬದಿಂದ ಪವನ್‍ತೇಜ ಎನ್ನುವ ಸ್ಪುರದ್ರೂಪಿ ನಟ ಚಿತ್ರರಂಗಕ್ಕೆ ‘ಅಥರ್ವ’ ಸಿನಿಮಾದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮಂಡ್ಯಾ, ಕನಕಪುರ ತಟಗಳಲ್ಲಿ 65 ದಿನಗಳ ಕಾಲ ಚಿತ್ರೀಕರಣ ಮುಗಿಸಿ ಸುದ್ದಿ ಮಾಡಲು ಮೊದಲ ಬಾರಿ ಮಾದ್ಯಮದ ಮುಂದೆ ತಂಡವು ಹಾಜರಾಗಿತ್ತು. ಮೊದಲು ಮಾತನಾಡಿದ ಪವನ್‍ತೇಜ ಕಾಲೇಜಿನಲ್ಲಿ ಇರುವಾಗಲೆ 25ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದೆ. ನಂತರ ರಂಗಾಯಣದಲ್ಲಿ ಒಂದು ವರ್ಷಗಳ ಕಾಲ ತರಭೇತಿ ಪಡೆದುಕೊಂಡು, ಅಂದುಕೊಂಡಂತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಅರ್ಜುನ್‍ಸರ್ಜಾ ಮಾಮಾ ಪ್ರೇರಣೆ, ಅವರ ಆರ್ಶಿವಾದದಿಂದ ಇಲ್ಲಿಯೆ ಮುಂದುವರೆಯುವ ಬಯಕೆ ಇದೆ. ಮೂರು ಶೇಡ್‍ಗಳಲ್ಲಿ ಕಾಣ ಸಿಕೊಳ್ಳಲಿದ್ದು, ಒಂದು ಪಾತ್ರದ ಸಲುವಾಗಿ 15 ಕೆಜಿ ತೂಕ ಕಡಿಮೆ ಮಾಡಿಕೊಳ್ಳಬೇಕಾಯಿತು. ಶ್ರೀ ಲಕ್ಷೀ ನರಸಿಂಹ ಸ್ವಾಮಿಗೆ ಇದೇ ಹೆಸರಿನಿಂದ ಕರೆಯುತ್ತಾರೆ ಎಂದು ಸಣ್ಣದಾಗಿ ಪಾತ್ರದ ಪರಿಚಯ ಮಾಡಿಕೊಂಡರು. ಬೆಂಗಳೂರಿನ ಹುಡುಗಿ ಸನಂಶೆಟ್ಟಿ ಅಂತ ಕನ್ನಡದಲ್ಲಿ ಮಾತನಾಡುತ್ತಾ, ಇಲ್ಲಿಯವರೆಗೂ ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ 14 ಚಿತ್ರಗಳಲ್ಲಿ ನಟಿಸಿದ್ದೇನೆ. ಮೊದಲ ಬಾರಿ ಕನ್ನಡದಲ್ಲಿ ಅವಕಾಶ ಸಿಕ್ಕಿದೆ. ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಸಮಾಜದ ದುಶ್ಚಟಗಳ ವಿಷಯದ ಕುರಿತು ಸಂಶೋದನೆ ನಡೆಸುವ ಸಂದರ್ಭದಲ್ಲಿ ನಾಯಕ ಇದೇ ಹಾದಿಯಲ್ಲಿರುವುದನ್ನು ಕಂಡು ದ್ವೇಷಿಸುತ್ತೇನೆ. ಮುಂದೇನು ಅಂತ ಸಿನಿಮಾ ನೋಡಿ ಅಂತಾರೆ.

ಖಳನಾಯಕನಾಗಿ ಯಶ್‍ವಂತ್‍ಶೆಟ್ಟಿ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡು ನಿರ್ದೇಶಕರ ಕೆಲಸವನ್ನು ಕೊಂಡಾಡಿದರು. ನಾಲ್ಕು ಕಿರುಚಿತ್ರಗಳನ್ನು ನಿರ್ದೇಶಿಸಿ ಮೊದಲಬಾರಿ ಹಿರಿತೆರೆಗೆ ಆಕ್ಷನ್ ಕಟ್ ಹೇಳಲಾಗಿದೆ. ಬದುಕು ಮತ್ತು ಸಾವಿನ ನಡುವಿನ ಅಂತರವನ್ನು ಅಥರ್ವ ಎನ್ನುವುದುಂಟು. ಭೂಮಿಗೆ ಬಂದಾಗ ಸಾವು ಹೇಗೆ ಬರುತ್ತದೆ ಅಂತ ಬಲ್ಲವರಾರು ಎಂಬುದು ಸಿನಿಮಾ ತಿರುಳು. ತಂಡದಲ್ಲಿ ತಾರಾ, ರಂಗಾಯಣರಘು, ಧಮೇಂದ್ರಅರಸ್, ಸುಚೇಂದ್ರಪ್ರಸಾದ್, ಸಿಲ್ಲಿಲಲ್ಲಿ ಶ್ರೀನಿವಾಸಗೌಡ ಇದ್ದಾರೆಂದು ಮಾಹಿತಿ ಬಿಚ್ಚ್ಚಿಟ್ಟರು ನಿರ್ದೇಶಕ ಅರುಣ್. ಸಂಗೀತ ರಾಘವೇಂದ್ರ, ್ಣ ಹಿನ್ನಲೆಸಂಗೀತ ವಿಜೇತಕೃಷ್ಣ, ಸಂಭಾಷಣೆ ಸಂತೋಷ್‍ಮಂದಿನಮನೆ ಮತ್ತು ಶಿವಸೇನಾ ಛಾಯಗ್ರಹಣ ಇವರೆಲ್ಲರೂ ಹೊಸ ಪ್ರಯತ್ನವೆಂದು ಹೇಳಿಕೊಂಡರು. ರಕ್ಷಿತ್.ಎಸ್.ವಿ ಮತ್ತು ವಿನಯ್‍ಕುಮಾರ್ ನಿರ್ಮಾಪಕರುಗಳಾಗಿ ಗಾಂದಿನಗರದಲ್ಲಿ ಗುರುತಿಸಿಕೊಂಡಿದ್ದಾರೆ.
-10/12/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore