HOME
CINEMA NEWS
GALLERY
TV NEWS
REVIEWS
CONTACT US
ಅಸತೋಮ ಅಮ್ಮ ಸದ್ಗಮಯ ಸಂಬಂದ, ಶಿಕ್ಷಣ ವ್ಯವಸ್ಥೆ
ದೇವರ ಶ್ಲೋಕ ‘ಅಸತೋಮ ಸದ್ಗಮಯ’ವನ್ನು ಶೀರ್ಷಿಕೆಯಾಗಿ ಬಳಿಸಿಕೊಂಡು ಅದಕ್ಕೊಂದು ಚೆಂದದ ಕತೆಯನ್ನು ಏಣೆಯಲಾಗಿದೆ. ವಿದೇಶಿ ಸ್ಥಳ ಫಿನ್‍ಲ್ಯಾಂಡ್‍ನಿಂದ ಅಮ್ಮನನ್ನು ಹುಡುಕುತ್ತ ತಾಯ್ನಾಡಿಗೆ ಬರುವ ನಾಯಕಿ, ಮತ್ತೋಂದು ಕಡೆ ಹೆತ್ತವರನ್ನು ತೊರೆದು ಫಾರಿನ್‍ಗೆ ಹೊರಟು ನಿಂತ ಜೋಡಿ. ಎರಡು ವೈರುದ್ಯ ಮನಸ್ಥಿತಿಗಳು ಒಂದು ಹಂತದಲ್ಲಿ ಸಂದಿಸುತ್ತದೆ. ಇದರ ಮದ್ಯೆ ನಾಯಕಿಯ ಹುಡುಕಾಟದಲ್ಲಿ ಜೋಡಿಗಳು ಕೈ ಜೋಡಿಸುತ್ತಾರೆ. ಈ ಅಲೆದಾಟದಲ್ಲಿ ಅಚಾತುರ್ಯವಾಗಿ ಜರುಗುವ ಘಟನೆಗಳು ಕತೆಗೆ ತಿರುವು ಕೊಡುತ್ತದೆ. ಮುಖ್ಯವಾಗಿ ಸಿನಿಮಾದಲ್ಲಿ ಇರುವುದು ಅಮ್ಮನ ಹುಡುಕಾಟ, ಸಂಬಂದಗಳು ಇದರ ಮದ್ಯೆ ಶಿಕ್ಷಣದಲ್ಲಿ ಮಾಫಿಯಾ. ಖಾಸಗಿಯವರ ಲಾಬಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪುತ್ತದೆ. ಇಂಗ್ಲೀಷ್ ಶಾಲೆಯಲ್ಲಿ ರ್ಯಾಂಕ್‍ಗಳ ಲೆಕ್ಕದಲ್ಲಿ ಮಕ್ಕಳ ಸ್ವತಂತ್ರವನ್ನು ಕೊಂದುಹಾಕುವ ಬಗ್ಗೆ ಹೇಳುತ್ತಾ ಹೋಗುತ್ತದೆ. ಬಾಯಿ ಪಾಠದ ಕಲಿಕೆ ಕೇವಲ ಶಿಕ್ಷಣ ಅಷ್ಟೇ. ಅದು ಕಲಿಕೆ ಅಲ್ಲ. ನಿಜವಾದ ಕಲಿಕೆ ಸಂಬಂದಗಳು ಎಂದು ನಿರೂಪಿಸಿರುವುದು ಚಿತ್ರಕ್ಕೆ ಮೆರುಗು ತಂದಿದೆ. ಶಿಕ್ಷಣ ವ್ಯವಸ್ಥೆ ಟ್ರ್ಯಾಕ್ ತೆರೆದುಕೊಂಡರೂ ಬೇಗನೆ ಮುಗಿಯುತ್ತದೆ.

ಸಂಬಂದ, ಭಾವನೆಗಳು, ಆಸೆ ಇವೆಲ್ಲವನ್ನು ಹತೋಟಿಯಲ್ಲಿ ಇರುವಂತೆ ಕತೆ ಬರೆದಿರುವ ನಿರ್ದೇಶಕ ರಾಜೇಶ್‍ವೇಣೂರು ಮೊದಲ ಪ್ರಯತ್ನದಲ್ಲಿಯೇ ಸೈ ಅನಿಸಿಕೊಂಡಿದ್ದಾರೆ. ಕಿರುತೆರೆ ನಟ ಕಿರಣ್‍ರಾಜ್ ನಾಯಕನಾಗಿ ಮೊದಲ ಚಿತ್ರ. ರಾಧಿಕಾಚೇತನ್ ನಾಯಕಿಯಾಗಿ ಚಿತ್ರವನ್ನು ಮುನ್ನೆಡಸಿಕೊಂಡುವ ಹೋಗುವ ಜವಬ್ದಾರಿಯನ್ನು ಅದ್ಬುತವಾಗಿ ನಿರ್ವಹಿಸಿದ್ದಾರೆ. ಜೋಡಿಯಾಗಿ ಲಾಸ್ಯ ಮಂಡ್ಯಾ ಭಾಷೆಯಲ್ಲಿ ವಿದೇಶ ವ್ಯಾಮೋಹಕ್ಕೆ ಒಳಗಾಗುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬೇಬಿ ಚಿತ್ರಾಲಿಯಿಂದ ದೊಡ್ಡವರ ಮಾತುಗಳನ್ನು ಹೇಳಿಸಿದ್ದಾರೆ. ವಹಾಬ್‍ಸಲೀಮ್ ಸಾಹಿತ್ಯ-ಸಂಗೀತದಲ್ಲಿ ಮೂರು ಹಾಡುಗಳು ಕೇಳಬಲ್.
ಸಿನಿ ಸರ್ಕಲ್.ಇನ್ ವಿಮರ್ಶೆ
7/07/18
ಜನರ ಎದುರು ಅಸತೋಮ ಸದ್ಗಮಯ
ಅಂದುಕೊಂಡಂತೆ ಆಗಿದ್ದರೆ, ‘ಅಸತೋಮ ಸದ್ಗಮಯ’ ಚಿತ್ರವು ಎರಡು ತಿಂಗಳ ಹಿಂದೆ ಬಿಡುಗಡೆಯಾಗಬೇಕಿತ್ತು. ನಿರ್ಮಾಪಕ ಅಶ್ವಿನ್.ಜಿ.ಪರೋರ ಚುನಾವಣೆಯಲ್ಲಿ ಪಕ್ಷದ ಪರವಾಗಿ ಓಡಾಟ ಮಾಡಿದ್ದರಿಂದ ಚಿತ್ರದ ಕಡೆ ಗಮನ ಹರಿಸಿಲ್ಲ. ಅದಕ್ಕಾಗಿ ತಡವಾಗಿದೆಯಂತೆ. ಕತೆಯಲ್ಲಿ ಹಾರರ್ ಅಂಶಗಳು, ಶಿಕ್ಷಣ ವ್ಯವಸ್ಥೆ ಜೊತೆಗೆ ಮಕ್ಕಳು, ಹೆತ್ತವರು ನೋಡಲೇಬೇಕಾಗಿದೆ. ಪ್ರಸಕ್ತ ತಲೆಮಾರಿನವರು ಇಂಟಲಿಜೆನ್ಸ್‍ಗೆ ಬೆಲೆ ಕೊಡುವಂತೆ, ಕುಟುಂಬದ ಕಡೆ ಗಮನ ಹರಿಸುವುದಿಲ್ಲ.. ದಕ್ಷಿಣಕನ್ನಡ ಜಿಲ್ಲೆಯ ಭಾಗಗಳು, ಮಂಡ್ಯಾ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾವುಗಳು 35 ಅಂಕಗಳನ್ನು ಪಡೆದುಕೊಂಡು ಸಂಬಂದಗಳನ್ನು ಉಳಿಸಿಕೊಂಡಿದ್ದೇವೆ. ಇಂದು ಶೇಕಡ 95 ಅಂಕಗಳನ್ನು ಪಡೆದವರು ವ್ಯಾಟ್ಸ್‍ಪ್, ಮಸೇಜ್ ಮುಖಾಂತರ ಪೋಷಕರ ಸಂಬಂದವನ್ನು ಹೊಂದಿರುತ್ತಾರೆ ಮತ್ತು ಬುದ್ದಿವಂತಿಕೆ-ಭಾವನೆಗಳು ಎರಡನ್ನು ಜೀವನದಲ್ಲಿ ಸರಿಯಾಗಿ ತೆಗೆದುಕೊಳ್ಳ್ಳಬೇಕು ಎಂದು ಸಂದೇಶದಲ್ಲಿ ಹೇಳಲಾಗಿದೆ. ರಾಜೇಶ್‍ವೇಣೂರು ಕತೆ ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ ಚಿತ್ರಕ್ಕೆ ವಹಾಬ್‍ಸಲೀಂ ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿದ್ದಾರೆ.

ಫಿನ್‍ಲ್ಯಾಂಡ್‍ನಿಂದ ಭಾರತಕ್ಕೆ ಮೂಲ ಹುಡುಕಿಕೊಂಡು ಬರುವ ರಾಧಿಕಾಚೇತನ್ ಮುಖ್ಯ ಪಾತ್ರ. ಮಂಡ್ಯಾದಲ್ಲಿ ಇದ್ದರೂ ಯಾವಗಲೂ ವಿದೇಶದ ವ್ಯಾಮೋಹ. ಅಲ್ಪಸ್ವಲ್ಪ ತಿಳಿದಿದ್ದರೂ ಎಲ್ಲಾ ಗೊತ್ತಿರುವಂತೆ ಧೋರಣೆ ಗುಣ. ಸೋಷಿಯಲ್ ಮಿಡಿಯಾ ನೋಡಿಕೊಂಡು ಅದರಂತೆ ಇರಲು ಆಸೆ ಪಡುವ, ಒಂಥರ ಜಾಣಪೆದ್ದು ಇದ್ದಂತೆ ಇರುವ ಲಾಸ್ಯ ನಾಯಕಿಯಾಗಿ ಹೊಸ ಅನುಭವ. ಹಿನ್ನಲೆ ಸಂಗೀತ ಮಣಿಕಾಂತ್‍ಕದ್ರಿ, ಛಾಯಗ್ರಹಣ ಕಿಶನ್, ಕಾರ್ಯನಿರ್ವಾಹಕ ನಿರ್ಮಾಪಕರಾಗಿರುವ ವಿಕ್ರಂ ಕೆಲಸದ ಜೊತೆಗೆ ಖಳನಾಯಕನಾಗಿ ಎರಡು ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ನಾಯಕ ರಾಜ್‍ಕಿರಣ್‍ಗೆ ಐದನೇ ತಾರೀಖು ಹುಟ್ಟುಹಬ್ಬ. ಆರರಂದು ಸುಮಾರು 70 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿರುವ ಕಾರಣ ಈ ಸಿನಿಮಾವು ಉಡುಗೊರೆ ಅಂತ ಭಾವಿಸಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
7/03/18


ಹಿಟ್ ಆಯಿತು "ಅಸತೋಮ ಸದ್ಗಮಯ" ಚಿತ್ರದ ಟ್ರೇಲರ್
"ಅಸತೋಮ ಸದ್ಗಮಯ" ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಸಿಕ್ಕಿರುವ ರೆಸ್ಪಾನ್ಸ್‍ಗೆ ಚಿತ್ರತಂಡ ಈಗಗಾಗಲೆ ಫುಲ್ ಖುಷಿಯಾಗಿದೆ. ಟ್ರೇಲರ್ ನೋಡುವಾಗ ಇದೊಂದು ಎಜುಕೇಶನ್ ಸಿಸ್ಟಂ ಬಗ್ಗೆ ಮಾಡಿರುವಂತಹ ಸಿನೆಮಾ, ಹೆತ್ತವರು ಮತ್ತು ಮಕ್ಕಳ ಸಂಬಂದದ ಬಗ್ಗೆ, ಮುಚ್ಚುತ್ತಿರುವ ಸರಕಾರಿ ಶಾಲೆಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ ಎಂಬುದು ತಿಳಿಯುತ್ತದೆ. ಜೊತೆಗೆ ಹಾರರ್, ಸಸ್ಪೆನ್ಸ್, ರೊಮ್ಯಾನ್ಸ್ ಕೂಡ ಇರುವುದರಿಂದ ಇದು ಬರೀ ಮೆಸೇಜ್ ಸಿನೆಮಾವಲ್ಲದೆ ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್‍ನಿಂದ ಕೂಡಿರುವಂತಹ ಸಿನೆಮಾ ಎಂಬುದು ತಿಳಿಯುತ್ತದೆ. ಟ್ರೇಲರ್‍ಗೆ ಕನ್ನಡ ಚಿತ್ರರಂಗದ ತಾರೆಯರಾದ, ಶರಣ್, ಚಂದನ್ ಶೆಟ್ಟಿ, ಕಿರಿಕ್ ಕೀರ್ತಿ, ಇಂದ್ರಜಿತ್ ಲಂಕೇಶ್, ಪ್ರಥಮ್ ಮುಂತಾದವರು ಉತ್ತಮ ಪ್ರತಿಕ್ರೀಯಯನ್ನ ನೀಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. "ಅಸತೋಮ ಸದ್ಗಮಯ" ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ನಿಧಾನವಾಗಿ ಕನ್ನಡ ಸಂಗೀತ ಪ್ರೇಮಿಗಳನ್ನ ಆಕರ್ಷಿಸುತ್ತಿದೆ. ಚಿತ್ರದ ಎಲ್ಲಾ ಹಾಡುಗಳು ಉತ್ತಮವಾಗಿದ್ದು, ವಿಜಯ್ ಪ್ರಕಾಶ್ ಹಾಡಿರುವಂತಹ ಸ್ಕ್ರಿಪ್ಟ್ ಬರೆದೋನು ಹಾಡು ಹಾಗೂ ಓ ಸಂಜೆ ಹಾಡಿನ ಬಗ್ಗೆ ಬಹಳಷ್ಟು ಮಂದಿ ಸ್ವತಹ ಫೋನ್ ಮಾಡಿ ಹೇಳುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ರಾಧಿಕಾ ಚೇತನ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನ ಐಕೇರ್ ಬ್ಯಾನರಿನಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿದ್ದು, ರಾಜೇಶ್ ವೇಣೂರ್ ನಿರ್ದೇಶಿಸುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
12/04/18ಅಸತೋಮ ಸದ್ಗಮಯ ಗಾನಲಹರಿ
ವಿನೂತನ ಶೀರ್ಷಿಕೆ ‘ಅಸತೋಮ ಸದ್ಗಮಯ’ ಚಿತ್ರದ ಧ್ವನಿಸಾಂದ್ರಿಕೆಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಂಡಿತು. ಈ ಸಂದರ್ಭದಲ್ಲಿ ತಂಡ ಹಾಗೂ ಅತಿಥಿಗಳ ಮಾತುಗಳನ್ನು ಓದುಗರಿಗಾಗಿ ಸಾದರಪಡಿಸಲಾಗುತ್ತಿದೆ.
ರಾಜೇಶ್‍ವೇಣೂರು, ಕತೆ,ಚಿತ್ರಕತೆ,ನಿರ್ದೇಶನ: ಟ್ರೈಲರ್‍ದಲ್ಲಿ ಹಾರರ್ ಅಂಶಗಳು, ಶಿಕ್ಷಣ ವ್ಯವಸ್ಥೆ ಎಲ್ಲವು ಇರಲಿದೆ. ಮಕ್ಕಳು, ಹೆತ್ತವರು ನೋಡಲೇಬೇಕಾಗಿದೆ. ಬುದ್ದಿವಂತಿಕೆ-ಭಾವನೆಗಳು ಎರಡನ್ನು ಚೆನ್ನಾಗಿ ತೋರಿಸಲಾಗಿದೆ. ಪ್ರಸಕ್ತ ತಲೆಮಾರಿನವರು ಇಂಟಲಿಜೆನ್ಸ್‍ಗೆ ಬೆಲೆ ಕೊಡುವಂತೆ, ಕುಟುಂಬದ ಕಡೆ ಗಮನ ಹರಿಸುವುದಿಲ್ಲ. ವಹಾಬ್‍ಸಲೀಂ ಅದ್ಬುತ ಸಾಹಿತ್ಯ, ಸಂಗೀತ ಒದಗಿಸಿದ್ದಾರೆ.

ಅಶ್ವಿನ್.ಜೊಸ್ಸಿ ಪಿರೇರಾ, ನಿರ್ಮಾಪಕರು: ಮಂಗಳೂರಿನಲ್ಲಿ ಚಿತ್ರದ ಕಾರ್ಯಕ್ರಮ ನಡೆಸಿದಾಗ 2000 ಜನರು ಆಗಮಿಸಿದ್ದರು. ದುಬೈನಲ್ಲಿ ಕನ್ನಡದ ಸಿನಿಮಾದ ಟ್ರೈಲರ್ ಮೊದಲಬಾರಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರುನಲ್ಲಿ ಪರಿಚಯದವರು ಕಡಿಮೆ ಇರುವುದರಿಂದ ಮಾದ್ಯಮದವರು ನಮ್ಮ ಚಿತ್ರವನ್ನು ಎತ್ತಿ ಹಿಡಿದಲ್ಲಿ ಮತ್ತೋಂದು ಚಿತ್ರ ಮಾಡಲು ಅನುಕೂಲವಾಗುತ್ತದೆ. ದಕ್ಷಿಣಕನ್ನಡ ಜಿಲ್ಲೆಯ ಭಾಗಗಳು, ಮಂಡ್ಯಾ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾವುಗಳೂ 35 ಅಂಕಗಳನ್ನು ಪಡೆದುಕೊಂಡು ಸಂಬಂದಗಳನ್ನು ಉಳಿಸಿಕೊಂಡಿದ್ದೇವೆ. ಇಂದು ಶೇಕಡ 95 ಅಂಕಗಳನ್ನು ಪಡೆದವರು ವ್ಯಾಟ್ಸ್‍ಪ್, ಮಸೇಜ್ ಮುಖಾಂತರ ಪೋಷಕರ ಸಂಬಂದವನ್ನು ಹೊಂದಿರುತ್ತಾರೆ ದುಬೈನಲ್ಲಿರುವ ದೀಪಕ್,ಪ್ರದೀಪ್ ಹಾಸ್ಯ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಮುಸ್ಲಿಂ ರಾಷ್ಟ್ರಗಳು, ಯೆಸ್, ಯುಕೆ, ಸಿಂಗಪೂರ್ ಕಡೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದು. ಕರ್ನಾಟಕದಲ್ಲಿ ಏಪ್ರಿಲ್ ಕೊನೆವಾರದಲ್ಲಿ ತೆರೆಕಾಣಿಸಲು ಯೋಜನೆ ಹಾಕಲಾಗಿದೆ.

ಚಂದನ್‍ಶೆಟ್ಟಿ: ಲಾಸ್ಯಗೋಸ್ಕರ ಬಂದಿರುವೆ. ಬಿಗ್‍ಬಾಸ್‍ನಲ್ಲಿದ್ದಾಗ ಹೊರಗಿನ ಜಗತ್ತು ಹೇಗಿದೆ ಅಂತ ಸುದ್ದಿ ಹೇಳುತ್ತಿದ್ದರು. ಪ್ರತಿ ಬಾರಿ ನಾನು ಇರಬೇಕೆಂದು ಶಿಪಾರಸ್ಸು ಮಾಡುತ್ತಿದ್ದರು. ಟೈಟಲ್ ಹಿಂದೂ ಸಂಪ್ರದಾಯದ ಪ್ರಸಿದ್ದ ಶ್ಲೋಕವಾಗಿ. ಕತ್ತಲೆಯಿಂದ ಬೆಳಕಿನಡೆಗೆ ಎನ್ನುವಂತೆ ಚಿತ್ರವು ಅದೇ ರೀತಿಯಾಗಲಿ.

ರಾಧಿಕಾಚೇತನ್, ನಾಯಕಿ: ಫಿನ್‍ಲ್ಯಾಂಡ್‍ನಿಂದ ಭಾರತಕ್ಕೆ ಮೂಲ ಹುಡುಕಿಕೊಂಡು ಬರುವ ಪಾತ್ರದಲ್ಲಿ ನಟಿಸಲಾಗಿದೆ. ಕತೆಯಲ್ಲಿ ಎಲ್ಲಾ ಅಂಶಗಳು ಇರುವುದರಿಂದ ನೋಡಗರಿಗೆ ಇಷ್ಟವಾಗಬಹುದು.
ಲಾಸ್ಯ, ನಾಯಕಿ: ಬಿಗ್‍ಬಾಸ್ ಮನೆಗೆ ಹೋಗುವ ಮುನ್ನ ಅವಕಾಶ ಬಂದಿತ್ತು. ನಾಯಕಿಯಾಗಿ ಮೊದಲ ಚಿತ್ರ. ಮಂಡ್ಯಾದಲ್ಲಿ ಇದ್ದರೂ ಯಾವಗಲೂ ವಿದೇಶದ ವ್ಯಾಮೋಹ. ಅಲ್ಪಸ್ವಲ್ಪ ತಿಳಿದಿದ್ದರೂ ಎಲ್ಲಾ ಗೊತ್ತಿರುವಂತೆ ಧೋರಣೆ ಗುಣ. ಸೋಷಿಯಲ್ ಮಿಡಿಯಾ ನೋಡಿಕೊಂಡು ಅದರಂತೆ ಇರಲು ಆಸೆ ಪಡುತ್ತಿರುತ್ತೇನೆ. ಒಂಥರ ಜಾಣಪೆದ್ದು ಇದ್ದಂತೆ. ಬುದ್ದಿವಂತಿಕೆ-ಭಾವನೆಗಳು ಎರಡನ್ನು ಜೀವನದಲ್ಲಿ ಸರಿಯಾಗಿ ತೆಗೆದುಕೊಳ್ಳುವುದು ಎಂಬುದಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.

ಮನುಗೌಡ: ನಿರ್ಮಾಪಕರು ಅಪ್ಪನಿಗೆ ಪರಿಚಯದವರಾಗಿದ್ದಾರೆ. ಪ್ರಾರಂಭದಲ್ಲಿ ಸಿನಿಮಾ ಮಾಡುತ್ತೇನೆಂದು ಹೇಳಿದಾಗ ಎಚ್ಚರದಿಂದ ಹೆಜ್ಜೆಯನ್ನು ಮುಂದುವರೆಸಿ ಎಂದು ಹೇಳಲಾಗಿತ್ತು. ಎಲ್ಲೆ ಇದ್ದರೂ ನಾವು ದೂರದಿಂದ ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಆಗುವ ಮಜವೇ ಬೇರೆಯಾಗಿರುತ್ತೆ.

ಆಸಿಫ್‍ಇಕ್ಬಾಲ್: ಗಳಯ ನಿರ್ಮಾಣ ಮಾಡಿರುವ ಚಿತ್ರವನ್ನು ಸ್ಪಿಡನ್, ಬಹಾರಿನ್, ಕೌತರ್ ಮುಂತಾದ ಕಡೆಗಳಲ್ಲಿ ಕನ್ನಡ ಚಿತ್ರಗಳನ್ನು ಅಲ್ಲಿನ ಜನರಿಗೆ ತೋರಿಸಲಾಗುವುದು. ಅಲ್ಲಿನವರು ನಮ್ಮ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
04/04/18
ದುಬೈನಲ್ಲಿ ಬಿಡುಗಡೆಯಾಯಿತು ಅಸತೋಮ ಸದ್ಗಮಯ ಚಿತ್ರದ ಟ್ರೇಲರ್
ರಾಜೇಶ್ ವೇಣೂರು ನಿರ್ದೇಶನದಲ್ಲಿ ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿರುವ “ಅಸತೋಮ ಸದ್ಗಮಯ” ಚಿತ್ರದ ಟ್ರೇಲರ್ ಮಾರ್ಚ್ 23ರಂದು, ದುಬೈನ್ ಹೋಟೇಲ್ ಫಾರ್ಚೂನ್ ಪ್ಲಾಜಾದಲ್ಲಿ ಬಿಡುಗಡೆಗೊಂಡಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್‍ನ ಮಾಲಕರಾದ ಪ್ರವೀಣ್ ಶೆಟ್ಟಿಯವರು ಈ ಟ್ರೇಲರನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಕನ್ನಡದ ಚಿತ್ರವನ್ನು ದುಬೈಗೆ ತಂದು ಟ್ರೇಲರ್ ರಿಲೀಸ್ ಮಾಡ್ತಾ ಇರೋದು ಕನ್ನಡಿಗರಾದ ನಮಗೆಲ್ಲರಿಗೂ ತುಂಬಾ ಸಂತೋಷದ ವಿಚಾರ. ಈ ಚಿತ್ರ ಮನರಂಜನೆ ಜೊತೆಗೆ ಉತ್ತಮ ಮೆಸೇಜ್ ಇರುವಂತಹ ಚಿತ್ರ ಎಂದು ಟ್ರೇಲರ್ ನೋಡುವಾಗ ಅರ್ಥವಾಗುತ್ತದೆ. ಈ ಚಿತ್ರ ಯಶಸ್ವಿಯಾಗಿ, ಕರ್ನಾಟಕದಾದ್ಯಂತ ಮನೆಮಾತಾಗಲಿ ಎಂದು ಹಾರೈಸಿದರು. ನಂತರ ಮಾತನಾಡಿದ ಜೈನ್ ಮಿಲನ್ ಅದ್ಯಕ್ಷರಾದ ದೇವ್ ಕುಮಾರ್ ಕಾಂಬ್ಳಿಯವರು, ಚಿತ್ರದ ಹೆಸರು ತುಂಬಾ ಅರ್ಥಗರ್ಬಿತವಾಗಿದೆ, ಟ್ರೇಲರ್ ನೋಡುವಾಗ ಇದರಲ್ಲಿ ಸರಕಾರಿ ಶಾಲೆಗಳ ಅವನತಿ ಬಗ್ಗೆ ಪ್ರಸ್ತಾಪವಿರುವುದು ಗೋಚರಿಸುತ್ತದೆ, ನಾನು ಕೂಡಾ ಸರ್ಕಾರಿ ಶಾಲೆಯಲ್ಲೇ ಓದಿರೋನು ಆದರೆ ದೇವರು ನನಗೆ ಯಾವುದರಲ್ಲೂ ಕಮ್ಮಿ ಮಾಡಿಲ್ಲ, ಈ ಚಿತ್ರ ಯಶಸ್ವಿಯಾಗಿ ನೂರು ದಿನ ಪೂರೈಸಲಿ ಎಂದು ಶುಭ ಹಾರೈಸಿದರು.

ಅರುಣ್ ಮುತುಗಡೂರ್ ಮಾತನಾಡಿ, “ಅಸತೋಮ ಸದ್ಗಮಯ” ಎನ್ನುವ ಶಬ್ದ ಕೇಳುವಾಗಲೇ ನಮ್ಮ ನೆನಪು ಶಾಲದಿನಗಳೆಡೆಗೆ ಜಾರುತ್ತದೆ. ಯಾಕೆಂದರೆ ಓದುವಾಗ ನಮ್ಮ ದಿನಚರಿ ಪ್ರಾರಂಭವಾಗುತ್ತಿದ್ದದ್ದೇ ಅಸತೋಮ ಸದ್ಗಮಯ ಮಂತ್ರದಿಂದ, ಈ ಚಿತ್ರದಲ್ಲಿ ಕೂಡ ಸರ್ಕಾರಿ ಶಾಲೆಯ ಪ್ರಸ್ತಾಪವಿರುವುದರಿಂದ, ಈ ಟೈಟಲ್ ಸೂಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಸಿವೊ ಅಧ್ಯಕ್ಷರಾದ ಹಾಗೂ ನ್ಯೂಸ್‍ಕರ್ನಾಟಕ ಸಲಹೆಗಾರರಾದ ವಲೇರಿಯನ್ ಅಲ್ಮೇಡ, ಉದ್ಯಮಿ ಜೋಸೇಫ್ ಮಥಾಯಸ್, ಸಂಧ್ಯಾ ಕ್ರಿಯೇಶನ್ಸ್‍ನ ಶೋದನ್ ಪ್ರಸಾದ್ ಅತಿಥಿಗಳಾಗಿ ಬಾಗವಹಿಸಿದ್ದರು.
ಚಿತ್ರದ ನಿರ್ಮಾಪಕರಾದ ಅಶ್ವಿನ್ ಪಿರೇರಾ ಮಾತನಾಡಿ, ಕನ್ನಡ ಚಿತ್ರಗಳಾಗಲೀ ಅಥವಾ ಯಾವುದೇ ಕನ್ನಡ ಕಾರ್ಯಕ್ರಮಗಳಿಗೆ ನೀವು ನೀಡಿದ ಪ್ರೋತ್ಸಾಹ, ನಮ್ಮನ್ನು ಟ್ರೇಲರ್ ಬಿಡುಗಡೆಗೆ ಇಲ್ಲಿಯ ತನಕ ಕರೆದುಕೊಂಡು ಬಂದಿದೆ. ನಮ್ಮ ಚಿತ್ರಕ್ಕೂ ಇದೇ ತರಹ ಪ್ರೋತ್ಸಾಹ ನೀಡಬೇಕಾಗಿ ಕೇಳಿಕೊಂಡರು.

ಆರತಿ ಅಡಿಗರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಅಸತೋಮ ಸದ್ಗಮಯ ಚಿತ್ರದ ಟ್ರೇಲರ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
https://www.youtube.com/watch?v=ViHXTEQOF0E&feature=youtu.be
ಸಿನಿ ಸರ್ಕಲ್.ಇನ್ ನ್ಯೂಸ್
28/03/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore