HOME
CINEMA NEWS
GALLERY
TV NEWS
REVIEWS
CONTACT US
ನಾವೆಲ್ಲರೂ ಒಂದೇ
ಭಾರತೀಯ ಚಿತ್ರರಂಗಕ್ಕೆ 80 ವರ್ಷಗಳು ತುಂಬಿದೆ. 80,90ರ ದಶಕದಲ್ಲಿ ರಸಿಕರನ್ನು ತಮ್ಮ ಚಿತ್ರಗಳ ಮೂಲಕ ಖುಷಿ ಪಡಿಸಿದ್ದ ಕಲಾವಿದರು ಈಗ ಹೇಗಿದ್ದಾರೆ ಎಂಬುದು ತಿಳಿಯದು. ಇವರೆಲ್ಲರೂ ಪ್ರತಿ ವರ್ಷ ಒಂದು ಕಡೆ ಸೇರಿ ವೈಯಕ್ತಿಕ, ಚಿತ್ರರಂಗದ ವಿಷಯಗಳನ್ನು ಹೇಳಿಕೊಂಡು ಖುಷಿ ಪಡುತ್ತಾರೆ. ಇವೆಲ್ಲವು ಎರಡು ಮೂರು ದಿವಸ ನಡೆಯಲಿದೆಯಂತೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಿ ಹಾಗೂ ಬಾಲಿವುಡ್ ನಟ-ನಟಿಯರು ಭಾಗವಹಿಸುತ್ತಾರೆ. ಈ ಸಂಪ್ರದಾಯವು 2009ರಿಂದ ಚಾಚೂ ತಪ್ಪದೆ ನಡೆದುಕೊಂಡು ಬರುತ್ತಿದೆ. ಅದರಂತೆ ಈ ಬಾರಿಯ ಸಂತೋಷಕೂಟದಲ್ಲಿ ಚಿರಂಜೀವಿ, ವೆಂಕಟೇಶ್, ಜಾಕಿಶ್ರಾಫ್, ಸುಹಾಸಿನಿ, ಶರತ್‍ಕುಮಾರ್, ರಾಧಿಕಾ, ಭಾಗ್ಯರಾಜ್, ಸುಮಲತಾಅಂಬರೀಷ್, ಖುಷ್ಬೂ, ರಮ್ಯಾಕೃಷ್ಣ, ಜಯಸುಧ, ರೇವತಿ ಮಿಕ್ಕಂತೆ 25ಕ್ಕು ಹೆಚ್ಚು ತಾರೆಯರು ಪಾಲ್ಗೋಂಡು ಪಾರ್ಟಿಯನ್ನು ರಂಗೇರಿಸಿದ್ದಾರೆ.

ಪ್ರತಿ ವರ್ಷ ಫ್ಯಾಶನ್ ó ಷೋ ನಡೆಯಲಿದ್ದು, ಈ ಬಾರಿ ಪುರಷರ ಷೋದಲ್ಲಿ ಮೆಗಾಸ್ಟಾರ್ ಚಿರಂಜೀವಿ ವಿನ್ ಆಗಿದ್ದಾರೆ. ಅಂದಹಾಗೆ ಈ ಪಾರ್ಟಿಯು ಮಹಾಬಲಿಪುರಂನಲ್ಲಿರುವ ರೆಸಾರ್ಟ್‍ನಲ್ಲಿ ಅದ್ದೂರಿಯಾಗಿ ನಡೆಯಿತು. ಕಲಾವಿದರ ಭಾವಚಿತ್ರಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಇದೇ ಗುಣಗಳನ್ನು ಪ್ರಚಲಿತ ಕಲಾವಿದರು ನಡೆಸಿದರೆ ಹೇಗೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.
-9/01/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\