HOME
CINEMA NEWS
GALLERY
TV NEWS
REVIEWS
CONTACT US
`ಅರ್ಜುನ್ ಗೌಡ' ಚಿತ್ರದಲ್ಲಿ ರಾಹುಲ್ ದೇವ್
ನಿರ್ಮಾಪಕ ರಾಮು ಅವರು ನಿರ್ಮುಸುತ್ತಿರುವ `ಅರ್ಜುನ್ ಗೌಡ` ಚಿತ್ರದಲ್ಲಿ ಬಹುಭಾಷ ನಟ ರಾಹುಲ್ ದೇವ್ ಮುಖ್ಯ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಇವರು ಅಭಿನಯಿಸಿದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಅಪಾರವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೆಟ್‍ನಲ್ಲಿ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದ್ದು, ಮಾಸ್ ಮಾದ ಸಾಹಸ ನಿರ್ದೇಶನ ಮಾಡಿದ್ದಾರೆ.

ಪ್ರಜ್ವಲ್ ದೇವರಾಜ್ ಈ ಚಿತ್ರದ ನಾಯಕಾರಾಗಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಯಾಗಲಿದ್ದು, ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ.

ಶಂಕರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಧರ್ಮವಿಶ್ ಅವರ ಸಂಗೀತ ನಿರ್ದೇಶನವಿದೆ. ಜೈಆನಂದ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜ್ವಲ್ ಅವರು ಈ ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ಬಾಕ್ಸರ್ ಪಾತ್ರ ನಿರ್ವಹಿಸಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಜ್ವಲ್ ದೇವರಾಜ್, ಪ್ರಿಯಾಂಕ ತಿಮ್ಮೇಶ್, ಸಾಧುಕೋಕಿಲ, ರಾಹುಲ್ ದೇವ್, ರೇಖ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
7/12/19
ಅರ್ಜುನ್‍ರೆಡ್ಡಿಅಲ್ಲಅರ್ಜುನ್‍ಗೌಡ
‘ಅರ್ಜುನ್‍ಗೌಡ’ ಚಿತ್ರದಟೀಸರ್ ಬಿಡುಗಡೆಗೊಂಡ ನಂತರತಂಡವುಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ನಿರ್ದೇಶಕಶಂಕರ್ ಹೇಳುವಂತೆ 65 ದಿನಗಳ ಕಾಲ ಬೆಂಗಳೂರು, ಮಂಗಳೂರು, ಊಟಿ, ಚಿಕ್ಕಮಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡನ್ನು ಸಿಂಗಪೂರ್, ಮೆಲೇಶಿಯಾ, ಥೈಲ್ಯಾಂಡ್ ಶೂಟ್ ಮಾಡಲುಯೋಜನೆ ಹಾಕಲಾಗಿದೆ. ಇದೊಂದುರೋಮ್ಯಾಂಟಿಕ್‍ಆಕ್ಷನ್‍ಚಿತ್ರವೆನ್ನಬಹುದು.ಸಾಮಾನ್ಯ ಮನುಷ್ಯ ನಾರ್ಮಲ್ ಆಗಿ ಇರಬಾರದು.ಬೇರೆತರಹಇರಬೇಕು.ಮುಂದಿನ ದಿನಗಳಲ್ಲಿ ಟ್ರೈಲರ್, ಹಾಡುಗಳ ಅನಾವರಣಗೊಳ್ಳಲಿದೆ ಎಂದರು.

ಸಂಕೀರ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಜಗಮೊಂಡಾ.ಏನೇ ಮಾಡಿದರೂ ಸರಿಯಾಗಿ ಮಾಡುವ, ಯಾರಿಗೂಕೇರ್ ಮಾಡದ ಹುಡುಗ.ಕಿಕ್ ಬಾಕ್ಷಿಂಗ್‍ತರಭೇತಿ ಪಡೆಯುತ್ತಿರುತ್ತೇನೆ. ಮೂರುಗೆಟಪ್‍ನಲ್ಲಿಇರಲಿದ್ದು, ಒಂದು ಹಂತದಲ್ಲಿಅಮ್ಮನಿಗೆತೊಂದರೆಯಾದಾಗ ಸಹಾಯ ಮಾಡುತ್ತೇನೆಂದು ನಾಯಕ ಪ್ರಜ್ವಲ್‍ದೇವರಾಜ್ ಹೇಳಿದರು.ಬೋಲ್ಡಾ ಆಗಿ ನಾಯಕಿ ಪ್ರಿಯಾಂಕಾತಿಮ್ಮೇಶ್, ವಾಹಿನಿ ಒಡತಿ, ನಾಯಕನಅಮ್ಮನಾಗಿ ಸ್ವರ್ಶಾರೇಖಾ, ಪ್ರಕಾಶ್‍ನಟನ ಪಾತ್ರದ ಪರಿಚಯ ಮಾಡಿಕೊಂಡರು. ರಾಘವೇಂದ್ರಕಾಮತ್, ಶಂಕರ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಧರ್ಮವಿಶ್ ಸಂಗೀತ ಸಂಯೋಜಸಿದ್ದಾರೆ. ಛಾಯಾಗ್ರಹಣಜೈಆನಂದ್, ನೃತ್ಯ ಮೋಹನ್, ಸಾಹಸ ಮಾಸ್‍ಮಾದ, ಸಂಕಲನ ಕಿಟ್ಟು, ಕಲೆ ಈಶ್ವರಿಕುಮಾರ್‍ಅವರದಾಗಿದೆ. ಸೌಂಡ್‍ಚೆನ್ನಾಗಿದೆಅಂತಇದನ್ನೆಇಡಲಾಗಿದೆ.ಮೂರು ನಿಮಿಷದ ನಾಯಕನ ಪರಿಚಯದ ಹಾಡಿನಲ್ಲಿ ಫೈಟ್‍ಜೊತೆಗೆ 50 ಬೈಕ್, 10 ಕಾರುಗಳನ್ನು ಜಖಂ ಮಾಡಲಾಗಿದೆ.ಸೆಪ್ಟಂಬರ್‍ದಲ್ಲಿ ಬಿಡುಗಡೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆಅಂತಾರೆ ನಿರ್ಮಾಪಕರಾಮು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
2/08/19


ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ `ಅರ್ಜುನ್ ಗೌಡ' ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆ
ನಿರ್ಮಾಪಕ ರಾಮು ಅವರು ನಿರ್ಮುಸುತ್ತಿರುವ `ಅರ್ಜುನ್ ಗೌಡ` ಚಿತ್ರದ ಆ್ಯಕ್ಷನ್ ಟೀಸರ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಯಿತು. ಪ್ರಜ್ವಲ್ ನಾಯಕಾರಾಗಿ ನಟಿಸುತ್ತಿರುವ ಈ ಚಿತ್ರದ ಟೀಸರನ್ನು ಡೈನಾಮಿಕ್ ಸ್ಟಾರ್ ದೇವರಾಜ್ ಬಿಡುಗಡೆ ಮಾಡಿದರು. ರಾಮು ಅವರು ನಿರ್ಮಿಸಿದ್ದ `ಲಾಕಪ್‍ಡೆತ್` ಮೊದಲಾದ ಚಿತ್ರಗಳಲ್ಲಿ ದೇವರಾಜ್ ಅವರು ಅಭಿನಯಿಸಿದ್ದರು. ಈಗ ಅವರದೇ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ `ಅರ್ಜುನ್ ಗೌಡ` ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ನಾಯಕರಾಗಿ ಅಭಿನಯಿಸುತ್ತಿದ್ದು, ದೇವರಾಜ್ ಅವರೆ ಟೀಸರ್ ಬಿಡುಗಡೆ ಮಾಡಿರುವುದು ವಿಶೇಷ.

ಶಂಕರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜೈಆನಂದ್ ಅವರ ಛಾಯಾಗ್ರಹಣವಿದೆ. ಅರ್ಜುನ್ ಕಿಟ್ಟು ಸಂಕಲನ, ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜ್ವಲ್ ದೇವರಾಜ್, ಪ್ರಿಯಾಂಕ ತಿಮ್ಮೇಶ್, ಸಾಧುಕೋಕಿಲ, ರೇಖ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
4/07/19

ರಾಮು ಬ್ಯಾನರ್‍ನಿಂದ ಮತ್ತೋಂದು ಅದ್ದೂರಿ ಚಿತ್ರ
ಟಾಲಿವುಡ್‍ನಲ್ಲಿ ಅರ್ಜುನ್‍ರೆಡ್ಡಿ ಚಿತ್ರವು ಹಿಟ್ ಆಗಿತ್ತು. ಈಗ ಚಂದನವನದಲ್ಲಿ ‘ಅರ್ಜುನ್ ಗೌಡ’ ಎನ್ನುವ ಚಿತ್ರವೊಂದು ಸೆಟ್ಟೇರಲಿದೆ. ಹಾಗಂತ ರಿಮೇಕ್ ಆಗಿರುವುದಿಲ್ಲವೆಂದು ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಲಕ್ಕಿ ಶಂಕರ್ ಹೇಳಿಕೊಂಡಿದ್ದಾರೆ. ಇವರು ಈ ಹಿಂದೆ 90, ದೇವ್ರಾಣೆ ಮುಂತಾದ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಶೀರ್ಷಿಕೆ ಹೆಸರಿನಲ್ಲಿ ಪ್ರಜ್ವಲ್‍ದೇವರಾಜ್ ಮೂರು ಗೆಟಪ್‍ಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯ ಪಾತ್ರದಲ್ಲಿ ಮುಗ್ದತೆ ಇರುವುದರಿಂದ ಸೂಕ್ತ ಕಲಾವಿದೆಯನ್ನು ಆಯ್ಕೆ ಮಾಡಲು ಸಿದ್ದತೆಗಳು ನಡೆಯುತ್ತಿವೆ. ಸಿನಿಮಾದಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳು ಬರಲಿರುವುದರಿಂದ ಮೂರು ಸಾಹಸ ನಿರ್ದೇಶಕರುಗಳು ಕೆಲಸ ಮಾಡಲಿರುವುದು ವಿಶೇಷ. ಜೈಆನಂದ್ ಛಾಯಗ್ರಹಣ, ಧರ್ಮವಿಶ್ ಸಂಗೀತ ಸಂಯೋಜನೆ ಇದೆ. ಲಾಕಪ್‍ಡೆತ್, ಎಕೆ 47, ಸಿಂಹದಮರಿ ಚಿತ್ರಗಳನ್ನು ನಿರ್ಮಾಣ ಮಾಡಿ ಕೋಟಿ ನಿರ್ಮಾಪಕರೆಂದು ಗುರುತಿಸಿಕೊಂಡಿರುವ ರಾಮು ಅವರು ರಾಮು ಎಂಟರ್ ಪ್ರೈಸಸ್ ಮುಖಾಂತರ ಮತ್ತೋಮ್ಮೆ ಸಾಹಸಕ್ಕೆ ಕೈ ಹಾಕಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ಮಹೂರ್ತ ಅಚರಿಸಿಕೊಳ್ಳುವ ನಿರೀಕ್ಷೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/05/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore