HOME
CINEMA NEWS
GALLERY
TV NEWS
REVIEWS
CONTACT US

ನಿಗೂಢಗಳ ಕಡಲ ತೀರ
ಶ್ರೀಮಂತನಾಗಿರುವ ಮಾಡೆಲ್ ಫೋಟೋಗ್ರಾಫರ್ ಸುತ್ತ ನಡೆಯುವ ಕಥೆಯಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ..ಹಿರಿಯ ನಿರ್ದೇಶಕ ವಿ.ಉಮಾಕಾಂತ್ ಒಂದು ಗ್ಯಾಪ್ ನ ನಂತರ ಕೌತುಕಮಯ ಚಿತ್ರವೊಂದನ್ನು ಕಟ್ಟಿ ಕೊಟ್ಟಿದ್ದಾರೆ.. ಸೈಕೋ ಮಾದರಿಯ ಇಮೇಜ್ ನ್ನು ನಾಯಕನಿಗೆ ನೀಡಿ ಅದರಿಂದ ಹೊರಬರುವ ಬೆಳವಣಿಗೆಯಲ್ಲಿ ಕಡಲ ತಡಿಯ ಜೀವನಕ್ರಮ, ಅಲ್ಲಿನ ಸಾಂಸ್ಕೃತಿಕ ಹೆಜ್ಜೆಗಳು ಗೋಚರವಾಗುತ್ತವೆ.. ವಂಶಿಕೃಷ್ಣ ಮನೋಹರ್ ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕ ಜೊತೆಗೆ ಒಂದು ದ್ವೀಪವವನ್ನೇ ಹೊಂದಿದ ಶ್ರೀಮಂತ. ಆತನಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಬರುತ್ತದೆ.. ಇದೇ ವೇಳೆ ಸಂದರ್ಶನಕ್ಕೆ ಬರುವ ಪತ್ರಕರ್ತೆ ಮೇಲೆ ಪೇಮವಾಗಿ ಮದುವೆಯೂ ಆಗುತ್ತದೆ.. ಮುಂದಿನದು ಸಸ್ಪೆನ್ಸ್..

ಕೃಷ್ಣೇಗೌಡ ಲೀಲಾಜಾಲವಾಗಿ ನಟಿಸಿದ್ದಾರೆ. ವೈಷ್ಣವಿ ಮೆನನ್ ನಟನೆ ಮತ್ತು ಗ್ಲಾಮರ್ ಎರಡರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಸುಂದರ್ ವೀಣಾ ನಟನೆ ನಾರ್ಹ.ಎಂ.ಆರ್.ಸೀನು ಛಾಯಾಗ್ರಾಹಣ ಕಡಲ ತೀರದ ಸೌಂದರ್ಯ ವನ್ನು ಮೊಗೆದು ಕೊಡುತ್ತದೆ..
ಚಿತ್ರ ಅರಬ್ಬಿ ಕಡಲ ತೀರದಲ್ಲಿ
ನಿರ್ಮಾಪಕ ಕೃಷ್ಣೇಗೌಡ
ನಿರ್ದೇಶನ ವಿ.ಉಮಾಕಾಂತ್
16.03.19

ತೆರೆಗೆ ಸಿದ್ದ ಅರಬ್ಬಿ ಕಡಲ ತೀರದಲ್ಲಿ
ತಮಿಳುನಾಡಿನಲ್ಲಿ ನಡೆದ ಕತೆವುಳ್ಳ ‘ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಕುತೂಹಲ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದು, ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ. ಕಡಲ ತೀರದಲ್ಲಿ ಅಪ್ಪನ ಭವ್ಯ ಬಂಗಲೆಯ ಅಧಿಪತಿಯಾಗಿದ್ದರೂ ಅಲ್ಲಿಗೆ ಹೋಗದೆ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಒಮ್ಮೆ ತಾನು ಮೆಚ್ಚಿದ ಹುಡುಗಿಗೆ ತಾಳಿ ಕಟ್ಟುವ ಮುನ್ನವೆ ಕೊಲೆಯಾಗುತ್ತಾಳೆ. ಮುಂದೆ ಖಿನ್ನತೆಗೆ ಒಳಗಾಗಿ ಮಾನಸಿಕ ರೋಗಿಯೆಂದು ವ್ಯವಸ್ಥೆಯಲ್ಲಿ ಬಿಂಬಿತವಾಗುತ್ತಾನೆ. ಇದರಿಂದ ಹೊರಬರಲು ಹೊಸ ಬದುಕನ್ನು ಕಟ್ಟಿಕೊಳ್ಳಲು ಮತ್ತೋಂದು ಹುಡುಗಿಯ ಪ್ರವೇಶವಾಗುತ್ತದೆ. ಆಕೆಯೊಂದಿಗೆ ಚಂದದ ಬದುಕು ಕಟ್ಟಿಕೊಂಡು ಸುಖ ಜೀವನ ನಡೆಸುವ ಸಂಭ್ರಮದಲ್ಲಿ ಇರುವಾಗಲೇ ನಂಬಲು ಸಾಧ್ಯವಾಗದ ಘಟನೆಯೊಂದು ಶುರುವಾಗಿ ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಅವೆಲ್ಲವು ಏನು ಎಂಬುದು ಸಿನಿಮಾದಲ್ಲಿ ತೋರಿಸಲಾಗಿದೆ.

ಕೃಷ್ಣಗೌಡ ಫೋಟೋಗ್ರಾಫರ್ ಪಾತ್ರಕ್ಕೆ ನಾಯಕ ಮತ್ತು ನಿರ್ಮಾಪಕ. ಪತ್ರಕರ್ತೆಯಾಗಿ ವೈಷ್ಣವಿ ಮತ್ತು ಮಾಡೆಲ್‍ದಲ್ಲಿ ಹೆಸರು ಮಾಡಿರುವ ಪಾತ್ರದಲ್ಲಿ ಹೊಸ ಪ್ರತಿಭೆ ರಂಜೀತಾ ನಾಯಕಿಯರು. ಉಳಿದಂತೆ ರಮೇಶ್‍ಭಟ್, ಮನೆ ಕೆಲಸದವನಾಗಿ ಮತ್ತು ಯಕ್ಷಗಾನಕ್ಕೆ ಹೆಜ್ಜೆ ಹಾಕಿರುವ ಸುಂದರ್, ಬಿರಾದಾರ್ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಸ್ನೇಹಪ್ರಿಯ ನಾಗರಾಜ್ ರೀಲ್‍ನಲ್ಲೂ ಅದೇ ರೀತಿಯ ಪಾತ್ರಕ್ಕೆ ಮೊದಲ ಬಾರಿ ನಟನೆ ಮಾಡಿರುವುದು ವಿಶೇಷ. ವಿ.ಉಮಾಕಾಂತ್ 16ನೇ ಚಿತ್ರಕ್ಕೆ ರಚನೆ. ನಿರ್ದೇಶನ ಮಾಡಿದ್ದಾರೆ. ಕಡಲತೀರದ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದರಿಂದ ಬೆಂಗಳೂರು, ಹುಬ್ಬಳ್ಳಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಎ.ಟಿ.ರವೀಶ್. ಸಿನಿಮಾವು ಶುಕ್ರವಾರದಂದು ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/03/19
ಕೊಯಮತ್ತೂರು ಘಟನೆ ಕನ್ನಡ ಚಿತ್ರ
2016 ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ‘ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಕುತೂಹಲ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದು, ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ. ಕಡಲ ತೀರದಲ್ಲಿ ಅಪ್ಪನ ಭವ್ಯ ಬಂಗಲೆಯ ಅಧಿಪತಿಯಾಗಿದ್ದರೂ ಅಲ್ಲಿಗೆ ಹೋಗದೆ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಒಮ್ಮೆ ತಾನು ಮೆಚ್ಚಿದ ಹುಡುಗಿಗೆ ತಾಳಿ ಕಟ್ಟುವ ಮುನ್ನವೆ ಕೊಲೆಯಾಗುತ್ತಾಳೆ. ಮುಂದೆ ಖಿನ್ನತೆಗೆ ಒಳಗಾಗಿ ಮಾನಸಿಕ ರೋಗಿಯೆಂದು ವ್ಯವಸ್ಥೆಯಲ್ಲಿ ಬಿಂಬಿತವಾಗುತ್ತಾನೆ. ಇದರಿಂದ ಹೊರಬರಲು ಹೊಸ ಬದುಕನ್ನು ಕಟ್ಟಿಕೊಳ್ಳಲು ಮತ್ತೋಂದು ಹುಡುಗಿಯ ಪ್ರವೇಶವಾಗುತ್ತದೆ. ಆಕೆಯೊಂದಿಗೆ ಚಂದದ ಬದುಕು ಕಟ್ಟಿಕೊಂಡು ಸುಖ ಜೀವನ ನಡೆಸುವ ಸಂಭ್ರಮದಲ್ಲಿ ಇರುವಾಗಲೇ ನಂಬಲು ಸಾಧ್ಯವಾಗದ ಘಟನೆಯೊಂದು ಶುರುವಾಗಿ ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಅವೆಲ್ಲವು ಏನು ಎಂಬುದು ಸಿನಿಮಾದಲ್ಲಿ ತೋರಿಸಲಾಗಿದೆ.

ಬಣ್ಣದ ಹೆಜ್ಜೆ ನಿರ್ಮಾಣ ಮಾಡಿ ಅಂದಿಗೆ 60 ಲಕ್ಷ ಕಳೆದುಕೊಂಡಿದ್ದ ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ದೀರ್ಘ ಕಾಲದ ಗ್ಯಾಪ್ ನಂತರ ಹಣ ಹೂಡುವುದರ ಜೊತೆಗೆ ಫೋಟೋಗ್ರಾಫರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪತ್ರಕರ್ತೆಯಾಗಿ ವೈಷ್ಣವಿ ಮತ್ತು ಮಾಡೆಲ್‍ದಲ್ಲಿ ಹೆಸರು ಮಾಡಿರುವ ಪಾತ್ರದಲ್ಲಿ ಹೊಸ ಪ್ರತಿಭೆ ರಂಜೀತಾ ನಾಯಕಿಯರು. ಉಳಿದಂತೆ ರಮೇಶ್‍ಭಟ್, ಮನೆ ಕೆಲಸದವನಾಗಿ ಮತ್ತು ಯಕ್ಷಗಾನಕ್ಕೆ ಹೆಜ್ಜೆ ಹಾಕಿರುವ ಸುಂದರ್, ಬಿರಾದಾರ್ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಸ್ನೇಹಪ್ರಿಯ ನಾಗರಾಜ್ ರೀಲ್‍ನಲ್ಲೂ ಅದೇ ರೀತಿಯ ಪಾತ್ರಕ್ಕೆ ಮೊದಲ ಬಾರಿ ನಟನೆ ಮಾಡಿರುವುದು ವಿಶೇಷ.

ಅನುರಾಗಸಂಗಮ, ಮದುವೆ ಇನ್ನು ಅನೇಕ ಸದುಭಿರುಚಿಯ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ವಿ.ಉಮಾಕಾಂತ್ ಇಂದಿನ ಯುವಕರೇ ನಾಳಿನ ಪ್ರಜೆಗಳು ಎನ್ನುವಂತೆ 16ನೇ ಚಿತ್ರಕ್ಕೆ ರಚನೆ. ನಿರ್ದೇಶನ ಮಾಡಿದ್ದಾರೆ. ಕಡಲತೀರದ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದರಿಂದ ಬೆಂಗಳೂರು, ಹುಬ್ಬಳ್ಳಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಹಾಡಿಗೆ ಸಂಗೀತ ಒದಗಿಸಿರುವ ಎ.ಟಿ.ರವೀಶ್‍ಗೆ ರಿರೆರ್ಕಾಡಿಂಗ್ ಮಾಡಿರುವುದು ಛಾಲೆಂಜಿಂಗ್ ಆಗಿದೆಯಂತೆ. ಸಿನಿಮಾವು ಇದೇ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.

ಸ್ನೇಹಪ್ರಿಯ ನಾಗರಾಜ್ ಹೊಸ ಅವತಾರ..
ಬರಹಗಾರ, ಪತ್ರಕರ್ತ ರಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಹಿರಿಯ ಸಿನಿಮಾ ಪತ್ರಕರ್ತ ಸ್ನೇಹಪ್ರಿಯ ನಾಗರಾಜ್ ಬಣ್ಣದ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ.. ಈಗಾಗಲೇ ಹಲವು ಸಿನಿಮಾಗಳಿಗೆ ಗೀತ ಸಾಹಿತ್ಯ ರಚಿಸಿರುವ ಸ್ನೇಹಪ್ರಿಯ, ವಿ.ಉಮಾಕಾಂತ್ ನಿರ್ದೇಶನದ 'ಅರಬ್ಬಿ ಕಡಲ ತೀರದಲ್ಲಿ..' ಚಿತ್ರದ ಮೂಲಕ ನಟನೆಗೆ ಮನಸ್ಸು ಮಾಡಿದ್ದಾರೆ.
ಹಾಗೆ ನೋಡಿದರೆ ಈ ಚಿತ್ರದಲ್ಲಿ ಅವರು ತಮ್ಮ ನಿಜ ಜೀವನದ ಪಾತ್ರವನ್ನೇ ಮಾಡಿದ್ದರೂ ಅವರೊಳಗೊಬ್ಬ ಕಲಾವಿದ ಇದ್ದಾನೆ ಎಂಬುದು ಚಿತ್ರದ ಮೂಲಕವೇ ಸಾಬೀತಾಗಲಿದೆ. ಅರಬ್ಬಿ ಕಡಲ ತೀರದಲ್ಲಿ ಚಿತ್ರದ ಮುಖ್ಯ ಪಾತ್ರಧಾರಿ ಹಾಗೂ ನಿರ್ಮಾಪಕ ಕೃಷ್ಣೇಗೌಡ ಅವರೊಂದಿಗಿನ ಒಡನಾಟದಿಂದ ಈ ಪಾತ್ರ ಮಾಡುವುದು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಪಾತ್ರಗಳನ್ನು ಕೊಟ್ಟರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ಈ ಚಿತ್ರ ಕೊಟ್ಟಿದೆ ಎಂಬುದು ಸ್ನೇಹಪ್ರಿಯರ ಆತ್ಮವಿಶ್ವಾಸದ ನುಡಿ..
ಬರಹಗಾರರಾಗಿ ಈಗಾಗಲೇ ಹಲವು ಪುಸ್ತಕಗಳನ್ನು ಬರೆದು ಹೆಸರಾಗಿರುವ ಅವರು ನಟನೆಯಲ್ಲಿಯೂ ಭವಿಷ್ಯ ಹುಡುಕುತ್ತಿದ್ದಾರೆ..
ಕನ್ನಡದ ಹೆಸರಾಂತ ನಟ ದ್ವಾರಕೀಶ್ ಅವರ ಕುರಿತ 'ದೊಡ್ಡವರೆಲ್ಲಾ ಜಾಣರಲ್ಲ..' ಎಂಬುದು ಸ್ನೇಹಪ್ರಿಯರ ಜನಪ್ರಿಯ ಕೃತಿ. ಕಥೆ ಕಾದಂಬರಿ ಕೂಡ ಬರೆದಿರುವ ಅವರು ಮುಂದೆ ಚಿತ್ರ ನಿರ್ದೇಶನ ಮಾಡುವ ಆಶಯದಲ್ಲಿ ವಿಶೇಷ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ..
ಪ್ರಸ್ತುತ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕ ಹಾಗೂ ಸಿನಿಮಾ ಪುರವಣಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸ್ನೇಹಪ್ರಿಯ ನಾಗರಾಜ್ ನಮ್ಮ ನಡುವಿನ ಸಹೃದಯ ನಡವಳಿಕೆ ಇರುವ ವ್ಯಕ್ತಿ ಎಂದರೆ ಅಂದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ..
ಸಿನಿ ಸರ್ಕಲ್.ಇನ್ ನ್ಯೂಸ್
11/03/19


ಕೃಷ್ಣೇಗೌಡರ ಅರಬ್ಬಿ ಕಡಲ ತೀರದಲ್ಲಿ
ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿರುವ ಕೃಷ್ಣೇಗೌಡ ಬಹುಕಾಲದ ನಂತರ ‘ಅರಬ್ಬಿ ಕಡಲ ತೀರದಲ್ಲಿ’ ಚಿತ್ರವನ್ನು ನಿರ್ಮಾಣ ಮಾಡುವದರ ಜೊತೆಗೆ ಫೋಟೋಗ್ರಾಫರ್ ಪಾತ್ರಕ್ಕೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಪತ್ರಕರ್ತೆಯಾಗಿ ವೈಷ್ಣವಿ ಮತ್ತು ಮಾಡೆಲ್‍ದಲ್ಲಿ ಹೆಸರು ಮಾಡಿರುವ ಪಾತ್ರದಲ್ಲಿ ಹೊಸ ಪ್ರತಿಭೆ ರಂಜೀತಾ ನಾಯಕಿಯರು. ಉಳಿದಂತೆ ರಮೇಶ್‍ಭಟ್, ಮನೆ ಕೆಲಸದವನಾಗಿ ಮತ್ತು ಯಕ್ಷಗಾನಕ್ಕೆ ಹೆಜ್ಜೆ ಹಾಕಿರುವ ಸುಂದರ್, ಬಿರಾದಾರ್ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಸ್ನೇಹಪ್ರಿಯಾ ನಾಗರಾಜ್ ರಿಪೋರ್ಟರ್ ಪಾತ್ರಕ್ಕೆ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ.

ಕತೆ ಕುರಿತು ಹೇಳುವುದಾದರೆ ಮೂರು ವರ್ಷಗಳ ಹಿಂದೆ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದು, ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ. ಕಡಲ ತೀರದಲ್ಲಿ ಅಪ್ಪನ ಭವ್ಯ ಬಂಗಲೆಯ ಅಧಿಪತಿಯಾಗಿದ್ದರೂ ಅಲ್ಲಿಗೆ ಹೋಗದೆ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಒಮ್ಮೆ ತಾನು ಮೆಚ್ಚಿದ ಹುಡುಗಿಗೆ ತಾಳಿ ಕಟ್ಟುವ ಮುನ್ನವೆ ಕೊಲೆಯಾಗುತ್ತಾಳೆ. ಮುಂದೆ ಖಿನ್ನತೆಗೆ ಒಳಗಾಗಿ ಮಾನಸಿಕ ರೋಗಿಯೆಂದು ವ್ಯವಸ್ಥೆಯಲ್ಲಿ ಬಿಂಬಿತವಾಗುತ್ತಾನೆ. ಇದರಿಂದ ಹೊರಬರಲು ಹೊಸ ಬದುಕನ್ನು ಕಟ್ಟಿಕೊಳ್ಳಲು ಮತ್ತೋಂದು ಹುಡುಗಿಯ ಪ್ರವೇಶವಾಗುತ್ತದೆ. ಆಕೆಯೊಂದಿಗೆ ಚಂದದ ಬದುಕು ಕಟ್ಟಿಕೊಂಡು ಸುಖ ಜೀವನ ನಡೆಸುವ ಸಂಭ್ರಮದಲ್ಲಿ ಇರುವಾಗಲೇ ನಂಬಲು ಸಾಧ್ಯವಾಗದ ಘಟನೆಯೊಂದು ಶುರುವಾಗಿ ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಮುಂದೇನು ಎನ್ನುವುದನ್ನು ಸಿನಿಮಾ ನೋಡಬೇಕಾಗಿದೆ.

ಅನುಭವಿ ನಿರ್ದೇಶಕ ವಿ.ಉಮಾಕಾಂತ್ 16ನೇ ಚಿತ್ರಕ್ಕೆ ರಚನೆ. ನಿರ್ದೇಶನ ಮಾಡಿದ್ದಾರೆ. ಕಡಲತೀರದ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದರಿಂದ ಬೆಂಗಳೂರು, ಹುಬ್ಬಳ್ಳಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಹಾಡಿಗೆ ಎ.ಟಿ.ರವೀಶ್ ಸಂಗೀತವಿದೆ. ಹಿರಿಯ ಪೋಲೀಸ್ ಅಧಿಕಾರಿ ನಂಜುಂಡಸ್ವಾಮಿ ಟ್ರೈಲರ್‍ಗೆ ಚಾಲನೆ ನೀಡಿದರೆ, ಹಿತೈಷಿಗಳು ಸಮಾರಂಭದಲ್ಲಿ ಸಾಕ್ಷಿಯಾಗಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
29/01/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore