HOME
CINEMA NEWS
GALLERY
TV NEWS
REVIEWS
CONTACT US

ನಿರ್ದೇಶಕನಾಗುವುದು ಕೇಕ್ ಮಾಡುವಷ್ಟು ಸುಲಭ ಅಲ್ಲ\
ಹೊಸಬರೆ ಸೇರಿಕೊಂಡು ಸಿದ್ದಪಡಿಸಿರುವ ‘ಆ್ಯಪಲ್ ಕೇಕ್’ ಚಿತ್ರದ ಹೆಸರು ಕೇವಲ ಸಿಂಬಾಲಿಕ್ ಆಗಿದೆ. ಯುವಕರ ಸಾಹಸದ ಬದುಕಿನ ಸಂಕೇತ. ಸೋತು ಗೆದ್ದಾಗ ಆಗುವ ಸಿಹಿ ಸಂಭ್ರಮವೇ ಒಂದು ಏಳೆಯ ಸಾರಾಂಶವಾಗಿದೆ. ನಿರ್ದೇಶರು ಮತ್ತು ನಿರ್ಮಾಪಕರ ನಡುವೆ ಇರುವ ಗಾಂದಿನಗರದ ಕತೆಯನ್ನೇ ಆಯ್ದುಕೊಂಡಿದೆ. ಕಲಾವಿದ, ನಿರ್ದೇಶಕರಾಗಬೇಕು ಅಂತ ಕನಸನ್ನು ಹೊತ್ತುಕೊಂಡು ಬರುವವರಿಗೆ ನಡೆಯುವುದೇ ಬೇರೆಯಾಗಿರುತ್ತದೆ. ಅದನ್ನು ಏಳೆ ಏಳೆಯಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಾಕಷ್ಟು ನೋವು ನಲಿವು ಅನುಭವಿಸಲೇಬೇಕು. ಹಾಗೆ ಅನುಭವಿಸಿ ಗೆದ್ದಾಗ ಸಿಗುವುದು ಆ್ಯಪಲ್ ಕೇಕ್. ನಾಲ್ವರು ಯುವಕರ ಪಾತ್ರಗಳ ಮೂಲಕ ಸಿನಿಮಾ ಸಾಗುತ್ತದೆ.  

ಸೋತು ಗೆದ್ದಾಗ ಬದುಕು ಸಿಹಿ ಎನ್ನುವುದು ಈ ಚಿತ್ರದ ಒನ್‌ಲೈನ್ ಸ್ಟೋರಿ. ಕೇಕ್ ನೋಡುವುದಕ್ಕೆ ಮಾತ್ರ ಇಷ್ಟ , ಸವಿಯುವುದಕ್ಕೆ ತುಸು ಕಷ್ಟ. ನಾಲ್ವರು ಯುವಕರು, ನಟರಾಗಿ ಅವಕಾಶ ಗಿಟ್ಟಿಸಿಕೊಳ್ಳಬೇಕೆನ್ನುವ ಇಬ್ಬರು ಕಾಮಿಡಿ ಕಲಾವಿದರು, ನಟಿಯಾಗಿ ಮಿಂಚಲು ಪರದಾಡುವ ನಾಯಕಿ. ಆ ಮೂರು ಕತೆಗಳು ಪ್ರತ್ಯೇಕ ದಾರಿಯಲ್ಲಿ ಸಾಗುತ್ತದೆ ಚಿತ್ರ ಕತೆ. ಕ್ಲೈಮಾಕ್ಸ್‍ದಲ್ಲಿ ಎಲ್ಲವು ಒಂದು ಕಡೆ ಸೇರುತ್ತದೆ. ಒಬ್ಬೊಬ್ಬರಿಗೂ ಒಂದೊಂದು ಹಿನ್ನೆಲೆಯಿದೆ. ಅವರೆಲ್ಲ ಒಂದಲ್ಲೊಂದು ಕಾರಣಕ್ಕೆ ಹಳ್ಳಿ ಬಿಟ್ಟು ದವರು. ಮಾನ, ಅವಮಾನ. ಅನುಭವಿಸಿ, ಕಷ್ಟ ನಷ್ಟ ಕಂಡು ಕೊನೆಗೆ ಏನಾದರೂ ಸಾಧಿಸಬೇಕೆಂದು ಗಾಂಧಿನಗರಕ್ಕೆ ಬಂದವರು. ಆದರೂ ನಿರ್ದೇಶಕರಾಗಬೇಕೆಂದು ಬಂದ ಅವರದು ಹುಚ್ಚು ಸಾಹಸದ ಪಯಣ. ಅವರೆಲ್ಲ ಇಲ್ಲಿ ಏಳು -ಬೀಳು, ಮಾನ-ಅವಮಾನ ಅನುಭವಿಸಿ, ಕೊನೆಗೆ ಅವುಗಳನ್ನೇ ಸವಾಲು ಆಗಿ ಸ್ವೀಕರಿಸಿ, ಹೇಗೆ ಸೋತು ಗೆಲ್ಲುತ್ತಾರೆನ್ನುವುದು ಚಿತ್ರ.

ನಿರ್ದೇಶನದ ಜತೆಗೆ ನಟನೆಯನ್ನು ಮಾಡಿರುವ ರಂಜಿತ್‍ಕುಮಾರ್‍ಗೌಡ ಎರಡಲ್ಲೂ ಭರವಸೆ ಮೂಡಿಸುತ್ತಾರೆ. ಇವರೊಂದಿಗೆ ನಿರ್ಮಾಪಕ ಅರವಿಂದ್‍ಕುಮಾರ್‍ಗೌಡ, ವಿಜಯ್‍ಶಂಕರ್, ಮತ್ತು ಕೃಷ್ಣ ಅಣಗಿ ನಾಯಕರು. ತಮ್ಮದೇ ಅನುಭದಂತೆ ಕತೆಯನ್ನು ಕಟ್ಟಿಕೊಡುಲ್ಲಿ ಅಷ್ಟು ನಟರ ಅಭಿನಯವಿದೆ. ಶುಭರಕ್ಷಾ ನಿರ್ದೇಶಕರ ನಟಿ ಮಾತ್ರ.ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬಹುದಾಗಿತ್ತಾದರೂ, ಹೇಳಿದಷ್ಟನ್ನು ಚಾಚು ತಪ್ಪದೇ ಒಪ್ಪಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಪೂರಕವಾಗಿದೆ. ನಿರಂಜನ್ ಬಾಬು ಛಾಯಾಗ್ರಹಣ ಅಚ್ಚುಕಟ್ಟಾಗಿದೆ.
ಸಿನಿ ಸರ್ಕಲ್.ಇನ್ ವಿಮರ್ಶೆ
***
25/11/18






ಚಿತ್ರಮಂದಿರದಲ್ಲಿ ಆ್ಯಪಲ್ ಕೇಕ್
ಬೇಕರಿಯಲ್ಲಿ ಉಳಿದಿರುವ ಪದಾರ್ಥಗಳನ್ನು ಸೇರಿಸಿಕೊಂಡು ‘ಆ್ಯಪಲ್ ಕೇಕ್’ನ್ನು ಮಾಡುವುದು ತಿಳಿದಿರುವ ವಿಷಯವಾಗಿದೆ. ಹಾಗಂತ ತಿರಸ್ಕ್ರತವಾದ ಪದಾರ್ಥಗಳು ಆಗಿರುವುದಿಲ್ಲ. ಹೊಸಬರೇ ಸೇರಿಕೊಂಡು ಇದೇ ಹೆಸರಿನಲ್ಲಿ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಎಲ್ಲರಿಂದ ಅವಮಾನಕ್ಕೆ ಗುರಿಯಾಗಿದ್ದ ಮಂಗಳೂರು, ಉತ್ತರ ಕರ್ನಾಟಕ, ಮಂಡ್ಯಾ ಮತ್ತು ಬೆಂಗಳೂರು ಕಡೆಗಳಿಂದ ನಾಲ್ಕು ಹುಡುಗರು ಸಾಧನೆ ಮಾಡಲು ಬೆಂಗಳೂರಿಗೆ ಬರುತ್ತಾರೆ. ಒಂದು ಹಂತದಲ್ಲಿ ಎಲ್ಲರೂ ಭೇಟಿಯಾಗುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ನಡೆದ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆಯನ್ನು ಬರೆಯಲಾಗಿದೆ. ಎಲ್ಲಾ ಭಾವನೆಗಳು ಸುಳ್ಳು ಆಗಿರುವುದಿಲ್ಲ. ತಾಯಿ, ಗೆಳತನ , ದಿನನಿತ್ಯದ ವ್ಯಕ್ತಿತ್ವದ ವೈಭವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನೋಡುಗನಿಗೆ ಒಂದಲ್ಲಾ ಒಂದು ದೃಶ್ಯವು ತನ್ನದೆ ಎಂದು ಅನಿಸುತ್ತದಂತೆ.

ವಿಜಯ್‍ಶಂಕರ್, ಕೃಷ್ಣಹನಗಿ, ನಿರ್ದೇಶಕ ರಂಜಿತ್‍ಕುಮಾರ್‍ಗೌಡ, ನಿರ್ಮಾಪಕ ಅರವಿಂದ್‍ಕುಮಾರ್‍ಗೌಡ ಯುವಕರುಗಳಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಶುಭರಕ್ಷ ಇವರೊಂದಿಗೆ ಚೈತ್ರಶೆಟ್ಟಿ, ರಂಗಸ್ವಾಮಿ, ಹರಿಚಂದ್ರ, ವಿಶಾಲ್‍ಗೌಡ, ಕೀರ್ತಿಚಂದ್ರಶೇಖರ್ ನಟನೆ ಇದೆ. ಡಾ.ನಾಗೇಂದ್ರಪ್ರಸಾದ್, ಪ್ರಮೋದ್‍ಆಚಾರ್ಯ ಸಾಹಿತ್ಯದ ಗೀತೆಗಳಿಗೆ ಶ್ರೀಧರ್‍ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸೆನ್ಸಾರ್ ಆಗಿರುವುದು ವಿಶೇಷವಾಗಿದೆ. ಕನ್ನಡದಲ್ಲಿ ಸಿನಿಮಾವು ಇದೇ 23ರಂದು ಸುಮಾರು 80 ಕೇಂದ್ರಗಳಲ್ಲಿ ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/11/18




ಆ್ಯಪಲ್ ಕೇಕ್ ತಿನ್ನುವುದಲ್ಲ, ನೋಡುವುದು
ಬೇಕರಿಯಲ್ಲಿ ಉಳಿದಿರುವ ಪದಾರ್ಥಗಳನ್ನು ಸೇರಿಸಿಕೊಂಡು ‘ಆ್ಯಪಲ್ ಕೇಕ್’ನ್ನು ಮಾಡುವುದು ತಿಳಿದಿರುವ ವಿಷಯವಾಗಿದೆ. ಹಾಗಂತ ತಿರಸ್ಕ್ರತವಾದ ಪದಾರ್ಥಗಳು ಆಗಿರುವುದಿಲ್ಲ. ಹೊಸಬರೇ ಸೇರಿಕೊಂಡು ಇದೇ ಹೆಸರಿನಲ್ಲಿ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಎಲ್ಲರಿಂದ ಅವಮಾನಕ್ಕೆ ಗುರಿಯಾಗಿದ್ದ ಮಂಗಳೂರು, ಉತ್ತರ ಕರ್ನಾಟಕ, ಮಂಡ್ಯಾ ಮತ್ತು ಬೆಂಗಳೂರು ಕಡೆಗಳಿಂದ ನಾಲ್ಕು ಹುಡುಗರು ಸಾಧನೆ ಮಾಡಲು ಬೆಂಗಳೂರಿಗೆ ಬರುತ್ತಾರೆ. ಒಂದು ಹಂತದಲ್ಲಿ ಎಲ್ಲರೂ ಭೇಟಿಯಾಗುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ನಡೆದ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆಯನ್ನು ಬರೆಯಲಾಗಿದೆ. ಎಲ್ಲಾ ಭಾವನೆಗಳು ಸುಳ್ಳು ಆಗಿರುವುದಿಲ್ಲ. ತಾಯಿ, ಗೆಳತನ , ದಿನನಿತ್ಯದ ವ್ಯಕ್ತಿತ್ವದ ವೈಭವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನೋಡುಗನಿಗೆ ಒಂದಲ್ಲಾ ಒಂದು ದೃಶ್ಯವು ತನ್ನದೆ ಎಂದು ಅನಿಸುತ್ತದಂತೆ.

ವಿಜಯ್‍ಶಂಕರ್, ಕೃಷ್ಣಹನಗಿ, ನಿರ್ದೇಶಕ ರಂಜಿತ್‍ಕುಮಾರ್‍ಗೌಡ, ನಿರ್ಮಾಪಕ ಅರವಿಂದ್‍ಕುಮಾರ್‍ಗೌಡ ಯುವಕರುಗಳಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಶುಭರಕ್ಷ ಇವರೊಂದಿಗೆ ಚೈತ್ರಶೆಟ್ಟಿ, ರಂಗಸ್ವಾಮಿ, ಹರಿಚಂದ್ರ, ವಿಶಾಲ್‍ಗೌಡ, ಕೀರ್ತಿಚಂದ್ರಶೇಖರ್ ನಟನೆ ಇದೆ. ಡಾ.ನಾಗೇಂದ್ರಪ್ರಸಾದ್, ಪ್ರಮೋದ್‍ಆಚಾರ್ಯ ಸಾಹಿತ್ಯದ ಗೀತೆಗಳಿಗೆ ಶ್ರೀಧರ್‍ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಪ್ರಸಕ್ತ ನಿರ್ದೇಶರುಗಳಾಗಿ ಬ್ಯುಸಿ ಇರುವ ಮಾದೇಶ, ವಿಕ್ಟರಿವಾಸು, ಎಂ.ಎಸ್.ರಮೇಶ್, ಶಿವಮಣಿ, ಓಂಪ್ರಕಾಶ್‍ರಾವ್ ಮತ್ತು ನಿರ್ಮಾಪಕ ರಾಮು ಇವರೆಲ್ಲಾ ಒಂದು ಕಾಲದಲ್ಲಿ ದೂರದ ಊರಿನಿಂದ ಕನಸುಗಳನ್ನು ಕಟ್ಟಿಕೊಂಡು ನಗರಕ್ಕೆ ಬಂದವರು. ಚಿತ್ರದ ಕತೆಯು ಇದೇ ರೀತಿಯಲ್ಲಿ ಇರುವುದರಿಂದ ಡಾ.ನಾಗೇಂದ್ರಪ್ರಸಾದ್ ಸಲಹೆಯಂತೆ ಇವರಿಂದಲೇ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಅನುಭವ ಇಲ್ಲದಿದ್ದರೂ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸೆನ್ಸಾರ್ ಮಾಡಿಸಿರುವ ಸಾಹಸಿ ಹುಡುಗರು ಸದ್ಯದಲ್ಲೆ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/10/18










For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore