HOME
CINEMA NEWS
GALLERY
TV NEWS
REVIEWS
CONTACT US
ಫ್ಯಾಂಟಸಿ ಕತೆಗೆ ಮಾಡ್ರನ್ ಟಚ್
‘ಅನುಷ್ಕಾ’ ಚಿತ್ರವನ್ನು ನೋಡುತ್ತಿದ್ದವರಿಗೆ ಇದು ಫ್ಯಾಂಟಸಿ, ಕ್ರೈಮ್, ಪೌರಾಣಿಕ, ಥ್ರಿಲ್ಲರ್ ಕತೆಯಾ ಎಂದು ಭಾಸವಾಗುವುದುಂಟು. ಮಧುಚಂದ್ರಕ್ಕೆ ಹೊರಟ ನವದಂಪತಿಗಳಿಗೆ ದಾರಿಯಲ್ಲೆ ಕಂಟಕ ಶುರುವಾಗುತ್ತದೆ. ಹೇಗೋ ಅದರಿಂದ ತಪ್ಪಿಸಿಕೊಂಡು ಬಂಗಲೆಗೆ ಹೋದಾಗ ಅಲ್ಲಿಯೂ ಅವಘಡಗಳು ಆವರಿಸಿಕೊಳ್ಳುತ್ತದೆ. ಇವರಿಬ್ಬರನ್ನು ಆಕ್ರಮಣ ಮಾಡಲು ಕಾರಣವೇನು? ಇದರ ಹಿಂದಿನ ಹಿನ್ನಲೆ ಏನು. ಎಂಬಂತಹ ಕುತೂಹಲಕ್ಕೆ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ. ಬಂಗಲೆ ಹೊರಗಡೆ ಇದ್ದಕ್ಕಿದ್ದಂತೆ ಹೆಣ್ಣು ದೆವ್ವ ಬರುತ್ತದೆ. ಒಳಗೆ ಬಂದಾಗ ಆತನಿಗೆ ಇದು ಆವರಿಸಿಕೊಂಡಿರುತ್ತದೆ. ಇದರಿಂದ ಸಿನಿಮಾ ತೆರೆದುಕೊಂಡು ಪೌರಾಣಿಕದಲ್ಲಿ ಅನುಷ್ಕದೇವಿ ರಾಣಿ ಕಾಣಿಸಿಕೊಳ್ಳುತ್ತಾರೆ. ಊರಿನ ಜನರಿಗೆ ಉಪಕಾರಿಯಾಗಿದ್ದು, ದುರಳರಿಂದ ಸಾಯುತ್ತಾಳೆ. ಆದರೆ ಅವಳ ಆತ್ಮವು ಬಂಗೆಲಯಲ್ಲಿ ಇದ್ದು, ಇಲ್ಲಿಗೆ ಬರುವವರಿಗೆಲ್ಲಾ ರಕ್ಷಣೆ ನೀಡುತ್ತಾ ಕಾಟ ಕೊಡುವವರಿಗೆ ಪ್ರಾಣ ತೆಗೆಯುತ್ತಾಳೆ. ಇತ್ತ ಕಡೆ ಮಾಡ್ರೆನ್ ಡ್ರಾಮಾದಲ್ಲಿ ಮೋಸ ನಡೆಯುತ್ತದೆ. ಇದರ ಮಧ್ಯೆ ಕಿಡ್ನಿ ದಂಧೆ ಬಂದು ಹೋಗುತ್ತದೆ.

ನಾಯಕಿ ಅಮೃತ ಎರಡು ಶೇಡ್‍ಗಳಲ್ಲಿ ಕಾಣಸಿಕೊಂಡಿದ್ದಾರೆ. ಒಂದು ಹಾಡಿನಲ್ಲಿ ಗ್ಲಾಮರ್ ಲುಕ್‍ನಲ್ಲಿ ಖುಷಿಕೊಟ್ಟರೆ, ರಾಣಿಯಾಗಿ ಅಬ್ಬರಿಸಿ ಬೊಬ್ಬರಿಸಿದ್ದಾರೆ. ನಾಯಕ ರೂಪೇಶ್‍ಶೆಟ್ಟಿಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಕೆಟ್ಟ ಅಪ್ಪನಾಗಿ ಬಾರಾಜ್‍ವಾಡಿ ಅಭಿನಯ ಚೆನ್ನಾಗಿದೆ. ನಗಿಸುವ ಸಾಧುಕೋಕಿಲಾಗೆ ಒಂದು ಹಾಡು ಕೊಟ್ಟಿದ್ದಾರೆ,. ಪದೇ ಪದೇ ಟೈಟಲ್ ಸಾಂಗ್ ಬರುವುದು ತುಸು ಬೋರ್ ಅನಿಸುತ್ತದೆ. ಇದನ್ನು ಹೂರತುಪಡಿಸಿದರೆ ಚಿತ್ರವು ಪೈಸಾ ವಸೂಲ್ ಎನ್ನಬಹುದು. ಕತೆ ಬರೆದಿರುವ ದೇವರಾಜ್‍ಕುಮಾರ್ ನಿರ್ದೇಶನದಲ್ಲಿ ಸೈ ಅನಿಸಿಕೊಂಡಿದ್ದಾರೆ. ಪಾತ್ರಧಾರಿಗಳ ಅಭಿನಯ, ತಂತ್ರಜ್ಘರ ಕುಶಲತೆ ಕೆಲಸವನ್ನು ಹೊಗಳುವುದಕ್ಕಿಂತ ನೋಡಿ ಅರಗಿಸಿಕೊಳ್ಳುವುದು ಚೆಂದ ಅನಿಸುತ್ತದೆ.
ನಿರ್ಮಾಣ: ಎಸ್.ಕೆ.ಗಂಗಾಧರ್
ಸಿನಿ ಸರ್ಕಲ್.ಇನ್ ವಿಮರ್ಶೆ
10/05/19

ನೂರ ಮೂವತ್ತು ಕೇಂದ್ರಗಳಲ್ಲಿ ಅನುಷ್ಕ ಆರ್ಭಟ
ಥ್ರಿಲ್ಲರ್ ಫ್ಯಾಂಟಸಿ ಕುರಿತ ‘ಅನುಷ್ಕ’ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಟ್ರೈಲರ್‍ಗಳು ಎಲ್ಲಾ ಕಡೆಗಳಲ್ಲಿ ಸದ್ದು ಮಾಡುತ್ತಿದೆ. ನೈಜ ಘಟನೆ ಆಧಾರದ ಪ್ರೇರಣೆಯೊಂದಿಗೆ ಕತೆಯನ್ನು ಬರೆಯಲಾಗಿದೆ. ಬೇರೆ ಭಾಷೆಯವರು ಆಕ್ಷನ್ ಅಂಶಗಳನ್ನು ಇಷ್ಟಪಡುವ ಕಾರಣ ಅದರಂತೆ ಟ್ರೈಲರ್‍ನ್ನು ಸಿದ್ದಪಡಿಸಲಾಗಿದೆ. ಐವತ್ತೈದು ದಿನಗಳ ಕಾಲ ಮೈಸೂರು, ಬೆಂಗಳೂರು, ಅರಸಿಕೆರೆ, ಸಾವನದುರ್ಗ ಮತ್ತು ಒಂದು ಗೀತೆಯನ್ನು ಬ್ಯಾಂಕಾಕ್‍ದಲ್ಲಿ ಚಿತ್ರೀಕರಿಸಲಾಗಿದೆ. ರೂಪೇಶ್‍ಶೆಟ್ಟಿ ಮೂರನೇ ಬಾರಿ ನಿರ್ದೇಶಕರ ಸಿನಿಮಾದಲ್ಲಿ ನಾಯಕನಾಗಿ, ಒಂದು ಶೇಡ್‍ದಲ್ಲಿ ಖಳನಾಗಿ ನಟಿಸಿದ್ದಾರೆ. ನಾಯಕಿ ಅಮೃತಅಯ್ಯಂಗಾರ್ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ಅನೂಷಿ ದೇವಿರಾಣಿ ಕಾಲಘಟ್ಟದಲ್ಲಿ ಈಕೆಯ ವಿರುದ್ದ ಯಾರು ಬರ್ತಾರೆ, ಅನ್ಯಾಯದ ವಿರುದ್ದ ಏನು ಮಾಡ್ತಾಳೆ ಎಂಬುದು 25 ನಿಮಿಷಗಳ ಕಾಲ ಬರುತ್ತದೆ. ಕ್ಲೈಮಾಕ್ಸ್‍ನಲ್ಲಿ ಇವರ ಅಭಿನಯವು ಪ್ರೇಕ್ಷಕರಿಗೆ ಗುಂಗು ಹಿಡಿಸುತ್ತದಂತೆ. ಕತೆ ರಚಿಸಿ ನಿರ್ದೇಶನ ಮಾಡಿರುವ ದೇವರಾಜ್‍ಕುಮಾರ್‍ಗೆ ಮೂರನೇ ಅನುಭವ.

ಸಂಭಾಷಣೆ ಮತ್ತು ಒಂದು ಹಾಡಿಗೆ ಸಾಹಿತ್ಯವನ್ನು ಮಹರ್ಷಿ ಬರೆದಿದ್ದಾರೆ. ಸಂಕಲನ ಶ್ರೀಧರ್, ಸಂಗೀತ ವಿಕ್ರಂಸೆಲ್ವ, ಛಾಯಾಗ್ರಹಣ ವೀನಸ್‍ಮೂರ್ತಿ ಅವರದಾಗಿದೆ. ಧಾರವಾಹಿ ನಿರ್ಮಾಣ ಮಾಡಿರುವ ಎಸ್.ಕೆ.ಗಂಗಾದರ್ ಸಿನಿಮಾ ಕೃಷಿಗೆ ಬಂಡವಾಳ ಹೂಡಿರುವುದು ಹೊಸ ಅನುಭವ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವನ್ನು ಲಿಖಿತ್‍ಫಿಲಿಂಸ್‍ನ ರಮೇಶ್‍ಬಾಬು ಇದೇ ಶುಕ್ರವಾರದಂದು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/05/19

ಬಿಡುಗಡೆ ಹಾದಿಯಲ್ಲಿ ಅನುಷ್ಕ
ಅದ್ದೂರಿ ಚಿತ್ರ ‘ಅನುಷ್ಕ’ ಟ್ರೈಲರ್ ಕಳೆದ ತಿಂಗಳು ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದ ಪ್ರಶಂಸೆ ಸಿಕ್ಕಿದೆ. ಐವತ್ತೈದು ದಿನಗಳ ಕಾಲ ಮೈಸೂರು, ಬೆಂಗಳೂರು, ಅರಸಿಕೆರೆ, ಸಾವನದುರ್ಗ ಮತ್ತು ಒಂದು ಗೀತೆಯನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿದೆ. ಅಮೃತಅಯ್ಯಂಗಾರ್ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ತಯಾರಿಗಾಗಿ ಕುದರೆ ಸವಾರಿ, ಕತ್ತಿ ವರಸೆ ತರಭೇತಿ ಪಡೆದು ಕ್ಯಾಮಾರ ಮುಂದೆ ನಿಂತಿರುವುದು ವಿಶೇಷ. ನಾಯಕ ರೂಪೇಶ್‍ಶೆಟ್ಟಿ ಮೂರನೇ ಬಾರಿ ನಿರ್ದೇಶಕ ದೇವರಾಜ್‍ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ತಮಿಳುನಾಡಿನ ಅನೂಷಿ ದೇವಿರಾಣಿ ಕಾಲಘಟ್ಟದಲ್ಲಿ ಈಕೆಯ ವಿರುದ್ದ ಯಾರು ಬರ್ತಾರೆ, ಅನ್ಯಾಯದ ವಿರುದ್ದ ಏನು ಮಾಡ್ತಾಳೆ ಎಂಬುದು 25 ನಿಮಿಷಗಳ ಕಾಲ ಬರುತ್ತದೆ. ಧಾರವಾಹಿಗಳನ್ನು ನಿರ್ಮಾಣ ಮಾಡಿದ ಅನುಭವ ಇರುವ ಎಸ್.ಕೆ.ಗಂಗಾದರ್ ಚಿತ್ರಕ್ಕೆ ಬಂಡವಾಳ ಹೂಡಿರುವುದು ಹೊಸ ಅನುಭವ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಸಿದ್ದಗೊಂಡಿರುವ ಚಿತ್ರವು ಮುಂದಿನ ತಿಂಗಳು 10ರಂದು ತೆರೆಗೆ ಬರುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
21/04/19

ಥ್ರಿಲ್ಲರ್ ಫ್ಯಾಂಟಸಿಯ ಅನುಷ್ಕ
ಅದ್ದೂರಿ ಚಿತ್ರ ‘ಅನುಷ್ಕ’ ಟ್ರೈಲರ್‍ನ್ನು ಜೋಗಿ ಪ್ರೇಮ್ ಬಿಡುಗಡೆ ಮಾಡಬೇಕಿತ್ತು. ಅವರ ಸಂಬಂದಿಕರ ಸಾವು ಆಗಿದ್ದರಿಂದ ಬರುವುದು ತಡವಾಗುತ್ತದೆಂದು ಸಂದೇಶ ರವಾನಿಸಿದ್ದರಿಂದ ನಿರ್ದೇಶಕರೇ ತುಣುಕುಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿ ನೈಜ ಘಟನೆ ಆಧಾರದ ಪ್ರೇರಣೆಯೊಂದಿಗೆ ಕತೆಯನ್ನು ಬರೆಯಲಾಗಿದೆ. ಬೇರೆ ಭಾಷೆಯವರು ಆಕ್ಷನ್ ಅಂಶಗಳನ್ನು ಇಷ್ಟಪಡುವ ಕಾರಣ ಇದರ ಟ್ರೈಲರ್‍ನ್ನು ಸಿದ್ದಪಡಿಸಲಾಗಿದೆ. ಐವತ್ತೈದು ದಿನಗಳ ಕಾಲ ಮೈಸೂರು, ಬೆಂಗಳೂರು, ಅರಸಿಕೆರೆ, ಸಾವನದುರ್ಗ ಮತ್ತು ಒಂದು ಗೀತೆಯನ್ನು ವಿದೇಶದಲ್ಲಿ ನಿರ್ಮಾಪಕರ ಸಹಕಾರದಿಂದ ಚಿತ್ರೀಕರಿಸಲಾಗಿದೆ. ಅಮೃತಅಯ್ಯಂಗಾರ್ ಅವರಿಗೆ ಸೆಟ್‍ನಲ್ಲಿ ದೃಶ್ಯಗಳು ಚೆನ್ನಾಗಿ ಬರಲೆಂದು ಸಾಕಷ್ಟು ತೊಂದರೆ ನೀಡಿದ್ದೇನೆ. ಬಿಡುಗಡೆಯಾದ ಮೇಲೆ ಅವರಿಗೆ ಇದು ಮೈಲಿ ಗಲ್ಲು ಆಗುತ್ತದೆ. ರೂಪೇಶ್‍ಶೆಟ್ಟಿ ಮೂರನೇ ಬಾರಿ ನಮ್ಮ ತಂಡದೊಂದಿಗೆ ನಟಿಸಿದ್ದಾರೆ. ತಮಿಳುನಾಡಿನ ಅನೂಷಿ ದೇವಿರಾಣಿ ಕಾಲಘಟ್ಟದಲ್ಲಿ ಈಕೆಯ ವಿರುದ್ದ ಯಾರು ಬರ್ತಾರೆ, ಅನ್ಯಾಯದ ವಿರುದ್ದ ಏನು ಮಾಡ್ತಾಳೆ ಎಂಬುದು 25 ನಿಮಿಷಗಳ ಕಾಲ ಬರುತ್ತದೆ. ತುಣುಕುಗಳನ್ನು ಅನುಷ್ಕಾಶೆಟ್ಟಿ ಅನಾವರಣಗೊಳಿಸಬೇಕಿತ್ತು. ಅವರು ಬ್ಯುಸಿ ಇರುವುದರಿಂದ ತಂಡಕ್ಕೆ ಒಳ್ಳೆಯದಾಗಲೆಂದು ಶುಭ ಹಾರೈಸಿದ್ದಾರೆ. ಅದಕ್ಕಾಗಿ ಅವರ ಭಾವಚಿತ್ರವನ್ನು ಬಳಸಲಾಗಿದೆ ಎಂದರು. ನಿರ್ದೇಶಕ ಹಿಂದಿನ ಚಿತ್ರ ಡೆಂಜರ್ ಜೋನ್‍ದಲ್ಲಿ ಮೆಲೋಡಿ ಹಾಡು ಹಿಟ್ ಆಗಿತ್ತು. ಅದರಂತೆ ಇದರಲ್ಲಿ ಒಂದು ಗೀತೆ ಸಲುವಾಗಿ ಆಡಿಯೋ ಹಕ್ಕುಗಳನ್ನು ಖರೀದಿಸಲಾಗಿದೆ ಅಂತಾರೆ ಆನಂದ್ ಆಡಿಯೋದ ಶ್ಯಾಂ.

ಪ್ರಾರಂಭದಲ್ಲಿ ಹೆಸರು ಕೇಳಿದಾಗ ಭಯ ಕಾಡಿತ್ತು. ಪಾತ್ರದ ತಯಾರಿಗಾಗಿ ಕುದರೆ ಸವಾರಿ, ಕತ್ತಿ ವರಸೆ ಕಲಿತುಕೊಂಡೆ. ಪ್ರಾರಂಭದಲ್ಲಿ ಸಣ್ಣ ಸಿನಿಮಾ ಅಂದುಕೊಂಡಿದ್ದು ಹೋಗ್ತಾ ಹೋಗ್ತಾ ದೊಡ್ಡದು ಆಯಿತು. ಮಿಕ್ಕಿದ್ದನ್ನು ಚಿತ್ರಮಂದಿರದಲ್ಲಿ ನೋಡಿ ಅಂತ ನಾಯಕಿ ಅಮೃತಅಯ್ಯಂಗಾರ್ ಕೋರಿಕೊಂಡರು. ನಿರ್ಮಾಪಕ ಎಸ್.ಕೆ.ಗಂಗಾದರ್ ಶಿಷ್ಟಚಾರದಲ್ಲಿ ತೊಡಗಿಕೊಂಡಿದ್ದರಿಂದ ಹೆಚ್ಚೇನು ಮಾತನಾಡಲಿಲ್ಲ. ಮೂರು ಬಾರಿ ನಿರ್ದೇಶಕರು ಅವಕಾಶ ಮಾಡಿಕೊಟ್ಟಿದ್ದಾರೆ. ಇಷ್ಟಕ್ಕೆಲ್ಲಾ ಅವರೇ ಕಾರಣಿಭೂತರು. ಸ್ಪಲ್ಪ ಮಟ್ಟಿಗೆ ಖಳನಾಗಿ ಕಾಣಸಿಕೊಂಡಿದ್ದೇನೆಂದು ರೂಪೇಶ್‍ಶೆಟ್ಟಿ ಹೇಳಿದರು. ತಂಡಕ್ಕೆ ಶುಭ ಹಾರೈಸಲು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ, ಕಾರ್ಯದರ್ಶಿ ಬಾ.ಮ.ಹರೀಶ್ ಮುಂತಾದವರು ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/03/19


ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಅನುಷ್ಕಾ ಟೀಸರ್ ಬಿಡುಗಡೆ
ಮಹಿಳಾ ಪ್ರಧಾನ ಚಿತ್ರವೆಂದು ಹೇಳಲಾಗಿರುವ ‘ಅನುಷ್ಕ’ ಚಿತ್ರದ ನಾಯಕಿ ಅಮೃತಅಯ್ಯಂಗಾರ್ ಮೂರು ರೀತಿಯ ಪಾತ್ರಗಳಲ್ಲಿ ನಟಿಸಿರುವ ಕತೆಯು ಮೂರು ಆಯಾಮಗಳಲ್ಲಿ ಸಾಗುತ್ತದೆ. ಧರ್ಮದುರ್ಗ ಸಾಮ್ರಾಜ್ಯದ ರಾಣಿ ಜನರನ್ನು ಹೇಗೆ ರಕ್ಷಿಸುತ್ತಾಳೆ, ಅವರಿಗಾಗಿ ಯಾವ ರೀತಿಯ ತ್ಯಾಗ ಮಾಡುತ್ತಾಳೆ. ಮಧುಚಂದ್ರಕ್ಕೆಂದು ನವದಂಪತಿಗಳ ಪಯಣ, ಕೊನೆಯದಾಗಿ ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯಗಳ ವಿರುದ್ದ್ದ ಹೋರಾಡುವ ದಿಟ್ಟ ಹೆಣ್ಣಿನ ಕಥನ. ಇವೆಲ್ಲವು ಕ್ಲೈಮಾಕ್ಸ್‍ದಲ್ಲಿ ಯಾವ ರೀತಿ ಕೂಡಿಕೊಳ್ಳುತ್ತದೆ ಎಂಬುದು ಒಂದು ಏಳೆಯ ಥ್ರಿಲ್ಲರ್ ಫ್ಯಾಂಟಸಿ ಸಿನಿಮಾದ ಸಾರಾಂಶವಾಗಿದೆ. ಅರಸಿಕೆರೆ, ತಾವರೆಕೆರೆ, ಶ್ರೀರಂಗಪಟ್ಟಣ, ಬೆಂಗಳೂರು, ಮೈಸೂರು ಮತ್ತು ಒಂದು ಮಾದಕ ಗೀತೆಯನ್ನು ಬ್ಯಾಂಕಾಕ್‍ದಲ್ಲಿ ಚಿತ್ರೀಕರಿಸಲಾಗಿದೆ.

ರಚನೆ, ನಿರ್ದೇಶನ ಮಾಡಿರುವ ದೇವರಾಜ್‍ಕುಮಾರ್‍ಗೆ ಮೂರನೆ ಪ್ರಯತ್ನವಂತೆ. ನಾಲ್ಕು ಹಾಡುಗಳಿಗೆ ವಿಕ್ರಂಸೆಲ್ವ ಸಂಗೀತ, ವೀನಸ್‍ಮೂರ್ತಿ ಛಾಯಗ್ರಹಣ, ವೈಎಸ್.ಶ್ರೀಧರ್ ಸಂಕಲನ, ನವೀನ್‍ನಾಯಕ್ ಕಾರ್ಯಕಾರಿ ನಿರ್ಮಾಪಕರು. ವಾಹಿನಿಗೆ ಸತ್ಯಂ ಶಿವಂ ಸುಂದರಂ ಧಾರವಾಹಿಯನ್ನು ನಿರ್ಮಾಣ ಮಾಡಿರುವ ನೇಕಾರ ಎಸ್.ಕೆ.ಗಂಗಾಧರ್ ಇಲ್ಲಿಯ ತನಕ ಮೂರು ಕೋಟಿ ವೆಚ್ಚ ಮಾಡಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಚಿತ್ರದ ಮೊದಲ ಟೀಸರ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾರ್ಚ್ 9ರಂದು ಟೀಸರ್ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
6/03/19

ಅನುಷ್ಕ ಟೀಸರ್‍ನ್ನು ಅನುಷ್ಕಾಶೆಟ್ಟಿ ಬಿಡುಗಡೆ ಮಾಡುತ್ತಾರಾ ?
ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ‘ಅನುಷ್ಕ’ ಚಿತ್ರದ ಟೀಸರ್‍ನ್ನು ಟಾಲಿವುಡ್ ಪ್ರಖ್ಯಾತ ನಟಿ ಕನ್ನಡತಿ ಅನುಷ್ಕಾಶೆಟ್ಟಿ ಬಿಡುಗಡೆ ಮಾಡುತ್ತಾರೆಂದು ನಿರ್ದೇಶಕ ದೇವರಾಜ್‍ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ಫಲಪ್ರದವಾಗಿದೆ. ಬಹುಶ: ಹೈದರಾಬಾದ್ ಅಥವಾ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಅಂತಾರೆ. ಕತೆಯ ಕುರಿತು ಹೇಳುವುದಾದರೆ ಮೂರು ಆಯಾಮಗಳಲ್ಲಿ ಸಿನಿಮಾ ಸಾಗುತ್ತದೆ. ಧರ್ಮದುರ್ಗ ಸಾಮ್ರಾಜ್ಯದ ರಾಣಿ ಜನರನ್ನು ಹೇಗೆ ರಕ್ಷಿಸುತ್ತಾಳೆ, ಅವರಿಗಾಗಿ ಯಾವ ರೀತಿಯ ತ್ಯಾಗ ಮಾಡುತ್ತಾಳೆ. ಮಧುಚಂದ್ರಕ್ಕೆಂದು ನವದಂಪತಿಗಳ ಪಯಣ, ಕೊನೆಯದಾಗಿ ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯಗಳ ವಿರುದ್ದ್ದ ಹೋರಾಡುವ ದಿಟ್ಟ ಹೆಣ್ಣಿನ ಕಥನ. ಇವೆಲ್ಲವು ಕ್ಲೈಮಾಕ್ಸ್‍ದಲ್ಲಿ ಯಾವ ರೀತಿ ಕೂಡಿಕೊಳ್ಳುತ್ತದೆ ಎಂಬುದು ಒಂದು ಏಳೆಯ ಥ್ರಿಲ್ಲರ್ ಫ್ಯಾಂಟಸಿ ಸಿನಿಮಾದ ಸಾರಾಂಶವಾಗಿದೆ. ಅರಸಿಕೆರೆ, ತಾವರೆಕೆರೆ, ಶ್ರೀರಂಗಪಟ್ಟಣ, ಬೆಂಗಳೂರು, ಮೈಸೂರು ಮತ್ತು ಒಂದು ಮಾದಕ ಗೀತೆಯನ್ನು ಬ್ಯಾಂಕಾಕ್‍ದಲ್ಲಿ ಚಿತ್ರೀಕರಿಸಲಾಗಿದೆ.

ನಾಯಕನಾಗಿ ಸ್ಪಲ್ಪಮಟ್ಟಿಗೆ ನೆಗಟೀವ್ ಶೇಡ್‍ನಲ್ಲಿ ಅಭಿನಯಿಸಿರುವುದು ರೂಪೇಶ್‍ಶೆಟ್ಟಿ. ಮೈಸೂರಿನ ಅಮೃತಅಯ್ಯಂಗಾರ್ ಮೂರು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಣಿಯಾಗಿದ್ದರಿಂದ ಯುದ್ದದಲ್ಲಿ ಶತ್ರುಗಳೊಂದಿಗೆ ಹೋರಾಡಬೇಕಾಗಿದೆ. ಅದರನ್ವಯ ಕುದುರೆಸವಾರಿ, ಕತ್ತಿವರಸೆ ತರಭೇತಿಯನ್ನು ಪಡೆದುಕೊಂಡಿದ್ದಾರೆ. ಮಗನ ಕಳ್ಳ ಅಪ್ಪನಾಗಿ ಬಲರಾಜುವಾಡಿ ನಟನೆ ಇದೆ. ಚಿತ್ರಕತೆ ಬರೆದಿರುವ ಕಡ್ಡಿಪುಡಿಶಾಂತರಾಜು ಎಪ್ಪತ್ತು ವರ್ಷದ ಮುದುಕನಾಗಿ ಕಾಣಿಸಿಕೊಂಡಿದ್ದಾರೆ. ನಾಲ್ಕು ಹಾಡುಗಳಿಗೆ ವಿಕ್ರಂಸೆಲ್ವ ಸಂಗೀತ, ವೀನಸ್‍ಮೂರ್ತಿ ಛಾಯಗ್ರಹಣ, ವೈಎಸ್.ಶ್ರೀಧರ್ ಸಂಕಲನ, ನವೀನ್‍ನಾಯಕ್ ಕಾರ್ಯಕಾರಿ ನಿರ್ಮಾಪಕರು. ವಾಹಿನಿಗೆ ಸತ್ಯಂ ಶಿವಂ ಸುಂದರಂ ಧಾರವಾಹಿಯನ್ನು ನಿರ್ಮಾಣ ಮಾಡಿರುವ ನೇಕಾರ ಎಸ್.ಕೆ.ಗಂಗಾಧರ್ ಇಲ್ಲಿಯ ತನಕ ಮೂರು ಕೋಟಿ ವೆಚ್ಚ ಮಾಡಿದ್ದಾರೆ. ಅಂದುಕೊಂಡಂತೆ ಆದಲ್ಲಿ ದೀಪಾವಳಿಗೆ ಅನುಷ್ಕಾಳ ಆರ್ಭಟವನ್ನು ನೋಡಬಹುದಂತೆ.
ಸಿನಿ ಸರ್ಕಲ್.ಇನ್ ನ್ಯೂಸ್
2/09/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore