HOME
CINEMA NEWS
GALLERY
TV NEWS
REVIEWS
CONTACT US
ಎರಡು ಬಾರಿ ಚಿತ್ರೀಕರಣಗೊಂಡ ಕ್ಲೈಮಾಕ್ಸ್
ಒಂದಷ್ಟು ರಹಸ್ಯಗಳು ಬಿಟ್ಟು ಕೊಳ್ತಿವೆ. ಅದರಲ್ಲಿ ಯಾವುದು ಸತ್ಯ, ಸುಳ್ಳು ಗೊತ್ತಿಲ್ಲವೆಂದು ಸಂಭಾಷಣೆ ಬರುವ ‘ಅನುಕ್ತ’ ಚಿತ್ರದ ಟೀಸರ್ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು. ಕತೆಯು ಮಂಗಳೂರು ಪರಿಸರದಲ್ಲಿ ನಡೆಯಲಿರುವುದರಿಂದ ಅಲ್ಲಿನ ವಾದ್ಯಗಳನ್ನು ಹೆಚ್ಚಾಗಿ ಬಳಸಲಾಗಿದೆ ಎಂಬುದಾಗಿ ಸಂಗೀತ ನಿರ್ದೇಶಕ ನೊಬಿಲ್‍ಪೌಲ್ ಹೇಳಿದರು. ಮೊದಲಬಾರಿ ಥ್ರಿಲ್ಲರ್ ಚಿತ್ರಕ್ಕೆ ಸಂಕಲನ ಮಾಡಿರುವುದು ಹೊಸ ಅನುಭವ ಅಂತಾರೆ ಎನ್.ಎಂ.ವಿಶ್ವ. ಬೆಂಗಳೂರು-ಮಂಗಳೂರು ಎರಡು ಭಾಷೆಯನ್ನು ಒಟ್ಟುಗೊಡಿಸಲಾಗಿದೆ ಎಂದು ಸಂಭಾಷಣೆಗಾರ ನವೀನ್‍ಶರ್ಮ ಮಾಹಿತಿ ನೀಡಿದರು. ಕ್ರೈಮ್ ಬ್ರಾಂಚ್ ಅಧಿಕಾರಿಯಾಗಿ ಯಾವ ರೀತಿ ನಿಭಾಯಿಸುತ್ತೇನೆಂದು ಸಿನಿಮಾ ನೋಡಿ ಎಂದಷ್ಟೇ ಹೇಳಿದ್ದು ನಾಯಕ ಕಾರ್ತಿಕ್‍ಅತ್ತಾವರ್, ಜೊತೆಗೆ ಕತೆಯಲ್ಲಿ ಇವರ ಪಾಲು ಇದೆ.

ತೆಲುಗು, ತಮಿಳುದಲ್ಲಿ ಹೆಚ್ಚು ಬ್ಯುಸಿ ಇರುವ ಕನ್ನಡಿಗ ಸಂಪತ್‍ರಾಜ್ ಗ್ಯಾಪ್ ನಂತರ ಚಿತ್ರದಲ್ಲಿ ವಿನೂತನ ಪಾತ್ರದಲ್ಲಿ ನಟಿಸಿದ್ದು, ಅವರು ಅನುಕ್ತ ಕುರಿತ ಮಾತುಗಳು ಹೀಗಿತ್ತು: ನಿರ್ದೇಶಕರು ಹೇಳಿದ ಒಂದು ಏಳೆಯ ಕತೆ ಹಿಡಿಸಿತು. ಅಂದುಕೊಂಡಂತೆ ಕ್ಲೈಮಾಕ್ಸ್ ಇದ್ದರೆ ಕಾಲ್‍ಶೀಟ್ ಕೊಡುವುದು ಬೇಡ ಅಂತ ನಿರ್ಧರಿಸಲಾಗಿತ್ತು. ಎರಡನೆ ಬಾರಿ ಬಂದಾಗ ಬೇರೆ ರೀತಿಯ ದೃಶ್ಯ ವಿವರಿಸಿದ್ದು ಚೆನ್ನಾಗಿತ್ತು. ಕೊನೆ ಭಾಗವು ಸರಿಯಾಗಿ ಬಂದಿಲ್ಲೆವೆಂದು ಕಾಡಿತು. ನಂತರ ನಿರ್ದೇಶಕರಿಗೆ ಮನವರಿಕೆ ಮಾಡಿದಂತೆ, ಎರಡನೆ ಬಾರಿ ನಟಿಸಿದ್ದು, ಅದ್ಬುತವಾಗಿ ಬಂದಿದೆ. ಆ ದೃಶ್ಯವು ಇಡೀ ಚಿತ್ರಕ್ಕೆ ಕಳಸ ಇಟ್ಟಂತೆ ಆಗಿದೆ. ನೋಡುಗರು ಇದೇ ಆಗುತ್ತದೆಂದು ಯೋಚಿಸಿದರೆ, ಬೇರೆ ಯಾಗಿರುತ್ತದೆ. ಮುಂದೆ ಸನ್ನಿವೇಶವು ಇಲ್ಲೆ ಇರುತ್ತದೆಂದು ಹೇಳಿದರೆ, ಬೇರೆ ಕಡೆಗೆ ತಗೆದುಕೊಂಡು ಹೋಗುತ್ತದೆ. ಪ್ರತಿ ದೃಶ್ಯವನ್ನು ಏನು , ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದಿದ್ದಾರೆ. ತಂಡವು ಮುಂಚಿತವಾಗಿ ಪಕ್ಕಾ ಯೋಜನೆ ಹಾಕಿಕೊಂಡಿದ್ದರಿಂದಲೇ ಇದೆಲ್ಲಾವು ಸಾಧ್ಯವಾಗಿದೆ ಅಂತ ತಂತ್ರಜ್ಘರನ್ನು ಹೊಗಳಿದರು.

32 ದಿವಸ ಚಿತ್ರೀಕರಣವನ್ನು ಬ್ರಹ್ಮಾವರದಲ್ಲಿರುವ 500 ವರ್ಷದ ಪುರಾತನ ಮನೆ, ಕರಾವಳಿಯ ಸುಂದರತಾಣಗಳು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಂಪತ್‍ರಾಜ್ ಸಹಕಾರದಿಂದಲೇ ಎಲ್ಲವು ನಡೆಯಿತು ಎಂದು ನಿರ್ದೇಶಕ ಅಶ್ವತ್‍ಸ್ಯಾಮುಯೆಲ್ ತಿಳಿಸಿದರು. ಸಂತೋಷ್‍ಕುಮಾರ್, ಕಾರ್ತಿಕ್ ಕತೆಯೆಂಬ ಸಣ್ಣಗಿಡವನ್ನು ತಂದಾಗ, ಅದಕ್ಕೆ ನೀರು ಹಾಕಿ ಮರವಾಗುವಂತೆ ಮಾಡಿದ್ದು ನಿರ್ದೇಶಕರು. ಅದಕ್ಕೆ ಫಲ ನೀಡಿದ್ದು ಕಲಾವಿದರು. ಈಗ ಹಣ್ಣಾಗಿದೆ. ಅದನ್ನು ಸಮಾಜದವರು ಅಂದರೆ ಪ್ರೇಕ್ಷಕರು ತಿಂದು ರುಚಿಯನ್ನು ಹೇಳಬೇಕೆಂದು ನಿರ್ಮಾಪಕ ಹರೀಶ್‍ಬಂಗೇರ ಕೋರಿದರು. ಸಿದ್ಲುಂಗುಶ್ರೀಧರ್, ಸಂಗೀತಭಟ್, ಅನುಪ್ರಭಾಕರ್ ನಟಿಸಿರುವ ಚಿತ್ರವು ಮುಂದಿನ ತಿಂಗಳು ಬಿಡೆಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
17/09/18
ಅಪರಾಧ ಕುರಿತ ಅನುಕ್ತ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅನುಕ್ತ’ ಚಿತ್ರವು ತೆರೆಗೆ ಬರಲು ಕಾರ್ಯನಿರತವಾಗಿದೆ. ಹೇಳದಂತ ಎನ್ನುವುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಒಂದು ಕನಸು ಬಿದ್ದರೆ ಅದರರ್ಥ ಏನು, ಯಾಕೆ ಎಂದು ನೆನಪಿಸಿಕೊಳ್ಳ್ಳಬೇಕಾಗಿದೆ. ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಹಿನ್ನಲೆಯ ಜೊತೆ ಕುತೂಹಲ, ಥ್ರಿಲ್ಲರ್‍ನ್ನು ಪತ್ತೆದಾರಿ ಮಾದರಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬಾಂಬೆಯ ಸೋನಿ ವಾಹಿನಿಯಲ್ಲಿ ಸಂಕಲನ, ನಿರ್ದೇಶನ ನಂತರ ದುಬೈದಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿರುವ ಕನ್ನಡಿಗ ಅಶ್ವಥ್‍ಸ್ಯಾಮುಯಲ್ ಚಿತ್ರಕತೆ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಬ್ರಹ್ಮಾವರದಲ್ಲಿರುವ 500 ವರ್ಷದ ಪುರಾತನ ಮನೆ, ಕರಾವಳಿಯ ಸುಂದರತಾಣಗಳು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ನೋಬಿನ್‍ಪೌಲ್ ಸಂಗೀತ , ಸಂತೋಷ್‍ಕುಮಾರ್‍ಕೊಂಚಾಡಿ-ಕಾರ್ತಿಕ್‍ಅತ್ತಾವರ್ ಕತೆಗೆ ನವೀನ್‍ಶರ್ಮಾ ಮತ್ತು ಕಿರಣ್‍ಶೆಟ್ಟಿ ಮಾತುಗಳನ್ನು ಪೋಣಿಸಿದ್ದಾರೆ.

ನಾಯಕನಾಗಿ ಸಂತೋಷ್‍ಕುಮಾರ್‍ಕೊಂಚಾಡಿ, ಮತ್ತೋಂದು ಮುಖ್ಯ ಪಾತ್ರದಲ್ಲಿ ಕಾಲಿವುಡ್, ಟಾಲಿವುಡ್‍ನಲ್ಲಿ ಹೆಸರು ಮಾಡಿರುವ ಕರ್ನಾಟಕದ ಸಂಪತ್‍ರಾಜ್ ನಟನೆ ಇದೆ. ತಾರಬಳಗದಲ್ಲಿ ಸಂಗೀತಾಭಟ್, ಅನುಪ್ರಭಾಕರ್, ಶ್ರೀಧರ್, ಉಷಾಭಂಡಾರಿ, ಚಿದಾನಂದಪೂಜಾರಿ, ಅನಿಲ್ ನೀನಾಸಂ, ರಮೇಶ್‍ರೈ ಅಭಿನಯಿಸಿದ್ದಾರೆ. ಛಾಯಗ್ರಹಣ ಮನೋಹರ್‍ಜೋಷಿ, ಸಂಕಲನ ಎನ್.ಎಂ.ವಿಶ್ವ ಅವರದಾಗಿದೆ. ಉಡುಪಿಯ ನಿರ್ಮಾಪಕರಾದ ಶ್ರೀಹರಿಬಂಗೇರ ಸದ್ಯ ದುಬೈದಲ್ಲಿ ನೆಲಸಿದ್ದು, 1.71 ಲಕ್ಷ ಕನ್ನಡಿಗರು ಇರುವುದರಿಂದ ಅಲ್ಲಿಯೇ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಟ್ರೈಲರ್‍ನ್ನು ಲೋಕಾರ್ಪಣೆ ಮಾಡಲು ಸಿದ್ದತೆಗಳನ್ನು ತಂಡವು ಮಾಡಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/09/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore