HOME
CINEMA NEWS
GALLERY
TV NEWS
REVIEWS
CONTACT US
ಅಂಜನಿಪುತ್ರ ಅಭಿಮಾನಿಗಳಿಗೆ ಬೋನಸ್
‘ಅಂಜನಿ ಪುತ್ರ’ ಯಶಸ್ವಿ 25 ದಿನಗಳನ್ನು ಸಂಕ್ರಾಂತಿ ಹಬ್ಬದಂದು ಪೂರೈಸಲಿದೆ. ಇದರನ್ವಯ ನಿರ್ಮಾಪಕರು ಚಿತ್ರಕ್ಕೆ ಒಂದು ಫೈಟ್, ದೃಶ್ಯಗಳನ್ನು ಸೇರಿಸಿ ಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಸನ್ನಿವೇಶಕ್ಕೆ ಸೇರ್ಪಡೆಯಾಗಿರುವ ಆರೂವರೆ ನಿಮಿಷದಲ್ಲಿ ಜಬರ್‍ದಸ್ತ್ ಆಕ್ಷನ್, ಭಾವನಾತ್ಮಕ ದೃಶ್ಯ ಮತ್ತು ಪಂಚಿಂಗ್ ಡೈಲಾಗ್‍ಗಳು ಸೇರಿರುತ್ತದೆ. ಇವೆಲ್ಲವು ವಿರಾಮದ ನಂತರ ಬರಲಿದೆಯಂತೆ. ನಿರ್ಮಾಪಕ ಎನ್.ಕುಮಾರ್ ಹೇಳುವಂತೆ ಇಲ್ಲಿಯವರೆಗೂ ಗಳಿಸಿದ್ದು ಅಸಲು ಮಾತ್ರ. ಇನ್ನು ಮುಂದೆ ಲಾಭ ಬರಲಿದೆ. ಒಟ್ಟಾರೆ ಸಿನಿಮಾದ ಅವಧಿ 2.26 ನಿಮಿಷವಾಗಿದ್ದು ಇದನ್ನು ಸೇರಿಸಲು ಎಪ್ಪತ್ತೈದು ಲಕ್ಷ ಖರ್ಚಾಗಿದೆ. ಸದ್ಯ ನಾಲ್ಕನೇ ವಾರದಲ್ಲಿ 150 ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದಾಗಿ ಮಾಹಿತಿ ನೀಡಿದರು. ಚಿತ್ರದ ಉದ್ದ ಜಾಸ್ತಿ ಇದೆಯಂದು ಕಟ್ ಮಾಡಲಾಗಿದ್ದ ದೃಶ್ಯಗಳನ್ನು ಸೇರಿಸಿ ಅಭಿಮಾನಿಗಳು ಖುಷಿ ಪಡುತ್ತಾರೆಂಬ ನಂಬಿಕೆ ಇದೆ ಎನ್ನುತ್ತಾರೆ ನಿರ್ದೇಶಕ ಹರ್ಷ. ಇಂತಹ ಪ್ರಯೋಗ ಮಾಡಿರುವುದು ಮಾಡಿರುವುದು ಇದೇ ಮೊದಲಾಗಿದೆ. ಅಂತೂ ಖುಷಿಯಾಗಿದೆ ಎಂದಷ್ಟೇ ಹೇಳಿದರು ಪುನೀತ್‍ರಾಜ್‍ಕುಮಾರ್.
ಚಿತ್ರಗಳು: ಕೆ.ಎನ್.ನಾಗೇಶ್ ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-16/01/18


ಅಂಜನಿಪುತ್ರನಿಗೆ ನ್ಯಾಯಲಯ ಗ್ರೀನ್ ಸಿಗ್ನಲ್
ವಕೀಲರಿಗೆ ಅವಮಾನ ಮಾಡಲಾದ ಸನ್ನಿವೇಶಗಳು ಇದೆಯೆಂದು ವಕೀಲಬಾಂದವರು ‘ಅಂಜನಿಪುತ್ರ’ ಸಿನಿಮಾಗೆ ನ್ಯಾಯಲಯದಿಂದ ತಡೆ ಆಜ್ಘೆಯನ್ನು ತಂದಿದ್ದರು. ನಂತರ ಸದರಿ ದೃಶ್ಯಗಳನ್ನು ತೆಗೆದುಹಾಕಿದ್ದರಿಂದ ಕೋರ್ಟ್ ಸಿನಿಮಾ ಪ್ರದರ್ಶಿಸಲು ಆದೇಶ ಹೊರಡಿಸಿತು. ಆ ಎರಡು ದಿನಗಳಲ್ಲಿ ನಡೆದ ಘಟನೆಗಳನ್ನು ಹೇಳಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಮೈಕ್ ತೆಗೆದುಕೊಂಡ ನಿರ್ದೇಶಕ ಹರ್ಷ ಚಿತ್ರವು ಸಕ್ಸಸ್ ಆಗಿದೆ. ವಿವಾದ ಉಂಟು ಮಾಡಿದ್ದ ದೃಶ್ಯವನ್ನು ತೆಗೆಯಲಾಗಿದೆ. ನಮ್ಮ ಪರವಾಗಿ ವಾದ ಮಾಡಿದ ವಕೀಲರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಒಂದು ದಿನ ಪ್ರದರ್ಶನ ನಿಂತರೆ ನಿರ್ಮಾಪಕನಿಗೆ ಕೋಟಿ ನಷ್ಟವಾಗುತ್ತದೆ. ನಾವೆಲ್ಲರೂ ಸಂವಿಧಾನ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಒಮ್ಮೆ ಸೆನ್ಸಾರ್ ಆದರೆ ಚಿತ್ರ ನಿಲ್ಲಿಸುವ ಆಗಿಲ್ಲ. ಕೆಲವರು ಇದನ್ನು ಅರಿಯದೆ ಕೋರ್ಟ್‍ನಲ್ಲಿ ದಾವೆ ಹೂಡಿ ತೊಂದರೆ ಮಾಡಿದ್ದಾರೆ. ಕೇಸ್ ನೋಡಲು ಹೋದಾಗ ವಕೀಲರು ಬಂದು ನಾವುಗಳು ಪುನೀತ್ ಅಭಿಮಾನಿಗಳು ಎಂದು ಹೇಳುತ್ತಾ ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡುವುದಿಲ್ಲವೆಂದು ಹೇಳಿದ್ದಾರೆ. ಇದರಿಂದ ಮಂಡಳಿ ಎಚ್ಚೇತು ಕೊಂಡು, ಯಾವುದೇ ಚಿತ್ರ ತಡೆ ಆಜ್ಘೆ ಮಾಡುವ ಮುನ್ನ ಸಂಬಂದಪಟ್ಟವರಿಗೆ ಚರ್ಚೆ ನಡೆಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲು ನ್ಯಾಯಲಯಕ್ಕೆ ಮನವಿ ಪತ್ರ ನೀಡಲಾಗುವುದೆಂದು ಸಾರಾಗೋವಿಂದು ಹೇಳುತ್ತಾರೆ.

ಸಮಸ್ಯೆ ಇತ್ಯರ್ಥವಾಗಿದೆ. ಸಿನಿಮಾ ಮಾಡೋದು ಪ್ರೇಕ್ಷಕರಿಗೆ. ನಂಬಿರುವ ದೇವರು, ಅಭಿಮಾನಿಗಳು ಕೈ ಬಿಟ್ಟಿಲ್ಲ. ಪ್ರಚಾರದ ಸಲುವಾಗಿ ನಿರ್ಮಾಪಕರು ಎಲ್ಲಿ ಕರೆದರೂ ಬರುತ್ತೇನೆಂದು ಪುನೀತ್‍ರಾಜ್‍ಕುಮಾರ್ ಹೇಳಿದರು. ಮೊದಲವಾರ 360 ಕೇಂದ್ರಗಳು, ಎರಡನೆ ವಾರದಲ್ಲಿ 225 ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಮಲ್ಟಿಪ್ಲೆಕ್ಸ್‍ನವರು ತೊಂದರೆ ನೀಡಿಲ್ಲ. ತುಂಬಾ ದಿನ ನಂತರ ಸಕ್ಸಸ್ ನೋಡಿದ್ದೇನೆ. ಆಗೋದೆಲ್ಲಾ ಒಳ್ಳೆಯದಕ್ಕೆ ಎನ್ನುವಂತೆ ಇನ್ನು ಮುಂದೆ ಒಳ್ಳೆಯದು ಆಗಬಹುದು. ಕ್ಲಿಷ್ಟ ಸಮಯದಲ್ಲಿ ಹಿತೈಷಿಗಳಾಗಿದ್ದವರು ಭೇಟಿ ಮಾಡಲಿಲ್ಲವೆಂದು ಖೇದ ವ್ಯಕ್ತಪಡಿಸಿದರು ನಿರ್ಮಾಪಕ ಎನ್.ಕುಮಾರ್. ಜಿಎಸ್‍ಟಿ ಬಂದರೂ ಚಿತ್ರಕ್ಕೆ ತೊಂದರೆ ಆಗಿಲ್ಲ. ಮುಂದೆಯೂ ಉತ್ತಮ ಗಳಿಕೆ ಬರುವುದರಲ್ಲಿ ಸಂದೇಶವಿಲ್ಲ ಎನ್ನುತ್ತಾರೆ ವಿತರಕ ಜಾಕ್‍ಮಂಜು. ನಾಯಕಿ ರಶ್ಮಿಕಾಮಂದಣ್ಣ ಹೆಚ್ಚೇನು ಮಾತನಾಡಲಿಲ್ಲ.
-2/01/18


ಪುನೀತ್ ಡ್ಯಾನ್ಸ್, ಫೈಟ್ ಚಿತ್ರಕ್ಕೆ ಕಳಸವಿಟ್ಟಂತೆ
ರಾಜಕುಮಾರ ಬಿಡುಗಡೆಯಾಗಿ ಒಂಬತ್ತು ತಿಂಗಳ ನಂತರ ತೆರೆಗೆ ಬಂದಿರುವ ‘’ಅಂಜನಿಪುತ್ರ’’ ಸಿನಿಮಾವು ಎಲ್ಲಾ ವಿಭಾಗದಲ್ಲಿ ಅಭಿಮಾನಿಗಳಿಗೆ ಖುಷಿ ನೀಡಿದೆ. ತಮಿಳು ಸಿನಿಮಾ ಪೂಜೈ ರಿಮೇಕ್ ಆದರೂ ದೃಶ್ಯಗಳನ್ನು ಭಟ್ಟಿ ಇಳಿಸದೆ, ಇಲ್ಲಿನ ನೇಟಿವಿಟಿಗೆ ತಕ್ಕಂತ ಅಪ್ಪು ಮ್ಯಾನರಿಸಂಗೆ ಸಾಕಷ್ಟು ಬದಲಾವಣೆ ಮಾಡಿಕೊಂಡರುವುದು ಕಾಣ ಸುತ್ತದೆ. ಕಥಾನಾಯಕ ಕುಟುಂಬದ ಪ್ರತಿಷ್ಟೆಯನ್ನು ಕಾಪಾಡಲು ಎದುರಾಳಿಗಳನ್ನು ಸೆದಬಡಿದು ಕಾಪಾಡುವ ಹಲವಾರು ಚಿತ್ರಗಳು ಬಂದಿವೆ. ಆದರೆ ಇದರಲ್ಲಿ ಇಷ್ಟವಾಗುವುದು ಪುನೀತ್ ಅಭಿನಯ ಮತ್ತು ಕುತೂಹಲ ಬರುವಂತೆ ಸೃಷ್ಟಿಸಿರುವ ಚಿತ್ರಕತೆ. ಕತೆ ಕುರಿತು ಹೇಳುವುದಾದರೆ ವಿರಾಜ್ ಮಾರುಕಟ್ಟೆಯಲ್ಲಿ ಬಡ್ಡಿ ವ್ಯಾಪಾರ ಮಾಡುವನಾಗಿರುತ್ತಾನೆ. ಅಲ್ಲೋಂದು ಹುಡುಗಿ ಪರಿಚಯವಾಗಿ ಲವ್ ಆಗುತ್ತದೆ. ಶುರುವಿನಲ್ಲಿ ಸಾಮಾನ್ಯ ಹುಡುಗನೆಂದು ಕೊಂಡಿದ್ದ ಆಕೆಗೆ ಅತನ ಗುಣಗಳ್ನು ಕಂಡು ಅಸಾಮಾನ್ಯನೆಂದು ಭಾವಿಸಿ ಪ್ರೀತಿ ಮಾಡಲು ಶುರುಮಾಡುತ್ತಾಳೆ. ಇಬ್ಬರು ಒಂದಾಗುವಾಗ ಕತೆ ಹಳ್ಳಿ ಕಡೆಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿಯವರೆಗೂ ಬಡ್ಡಿ ಹುಡುಗ ಅಂದುಕೊಂಡಿದ್ದ ಪ್ರೇಕ್ಷಕನಿಗೆ ವಿರಾಜ್ ಶ್ರೀಮಂತ ಕುಟುಂಬದ ಹುಡುಗ ಎಂದು ಗೊತ್ತಾಗುತ್ತದೆ. ಮುಗ್ದತೆಯಿಂದ ತಪ್ಪಿಗಾಗಿ ಕುಟುಂಬ ತೊರೆದು ಜೀವನಕ್ಕಾಗಿ ಸಿಟಿಯಲ್ಲಿ ಬಡ್ಡಿ ವ್ಯವಹಾರಕ್ಕೆ ಇಳದಿರವುದು ತಿಳಿಯುತ್ತದೆ. ಅವನು ಮನೆಯಿಂದ ಯಾವ ಕಾರಣಕ್ಕೆ ಹೊರಗೆ ಬಂದ, ಏತಕ್ಕಾಗಿ ಎಂಬುದು ಚಿತ್ರಮಂದಿರಕ್ಕೆ ಬಂದಲ್ಲಿ ತಿಳಿದುಕೊಳ್ಳಬಹುದು.

ಭರ್ಜರಿ ಚೇತನ್‍ಕುಮಾರ್,ರಘುನಿಡುವಳ್ಳಿ ಬರೆದಿರುವ ಸಂಭಾಷಣೆಗಳನ್ನು ಪುನೀತ್ ಸ್ಟೈಲಿಶ್ ಆಗಿ ಹೇಳಿ ರಂಜಿಸಿದ್ದಾರೆ. ಇಡಿ ಸಿನಿಮಾ ಪುನೀತ್‍ಮಯ ಕಾಣಸಿಕೊಂಡರೂ, ಅವರ ನಟನೆ, ಡ್ಯಾನ್ಸ್, ಫೈಟ್, ಹಾವಭಾವ ಎಲ್ಲವು ನೋಡುಗರಿಗೆ ಬೇಜಾರು ತರಿಸುವುದಿಲ್ಲ. ಅಮ್ಮನಾಗಿ ರಮ್ಯಕೃಷ್ಣ ಅಭಿನಯದ ಬಗ್ಗೆ ಹೇಳುವ ಆಗಿಲ್ಲ. ರಶ್ಮಿಕಾಮಂದಣ್ಣ ತೆರೆ ಮೇಲೆ ಸುಂದರವಾಗಿ ಕಾಣ ಸುತ್ತಾರೆ. ಖಳನಟರಾಗಿ ಮುಖೇಶ್‍ತಿವಾರಿ, ಅಖಿಲೇಂದ್ರಮಿಶ್ರಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿಕ್ಕಣ್ಣ, ಮಿತ್ರ, ಧರ್ಮಣ್ಣಕಡೂರು ಹಾಸ್ಯ ಸನ್ನಿವೇಶಗಳು ಕೆಲವೊಮ್ಮೆ ಇದು ಬೇಕಿತ್ತಾ ಅನಿಸುವುದುಂಟು. ರವಿಬಸ್ರೂರು ಸಂಗೀತದಲ್ಲಿ ಹಾಡುಗಳು ಒಮ್ಮೆ ಕೇಳುವಂತಿದೆ. ಸ್ವಾಮಿ ಛಾಯಗ್ರಹಣ, ರವಿವರ್ಮ ಸಾಹಸ ಹೈಲೈಟ್ ಆಗಿದೆ. ರಿಮೇಕ್ ಅಂದರೆ ನPಲು ಅಂತಾರೆ. ನಿರ್ದೇಶಕ ಎ.ಹರ್ಷ ಅದಕ್ಕೆ ಆಸ್ಪದ ನೀಡದೆ ಮೂಲ ತಿರುಳುನ್ನು ಮಾತ್ರ ತೆಗೆದುಕೊಂಡು, ತನ್ನ ಬತ್ತಳಿಕೆಯಲ್ಲಿರುವ ಬುದ್ದಿಯನ್ನು ಉಪಯೋಗಿಸಿ ಕ್ಲಾಸ್, ಮಾಸ್ ಪ್ರಿಯರಿಗೆ ಇಷ್ಟವಾಗುವಂತೆ ಮಾಡಿರುವುದು ಮತ್ತೋಂದು ಧನಾತ್ಮಕ ಅಂಶವಾಗಿದೆ.

ಸಂಸ್ಥೆ: ಎಂಎನ್‍ಕೆ ಮೂವೀಸ್, ನಿರ್ಮಾಪಕ. ಎಂ.ಎನ್.ಕುಮಾರ್
-22/12/17
ನಾಲ್ಕು ನೂರು ಕೇಂದ್ರಗಳಲ್ಲಿ ಅಂಜನಿಪುತ್ರ ಬಿಡುಗಡೆ
ಎಂಟು ತಿಂಗಳ ಕೆಳಗೆ ಶುರುಗೊಂಡ ‘ಅಂಜನಿಪುತ್ರ’ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದ್ದರಿಂದ ಮೊದಲಬಾರಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಸಮಯದ ಗೊಂದಲದಿಂದ ಒಂದು ಘಂಟೆ ತಡವಾಗಿ ಶುರುಗೊಂಡ ಗೋಷ್ಟಿಗೆ ನಿರ್ದೇಶಕ ಹರ್ಷ.ಎ ಕ್ಷಮೆ ಕೋರಿ ಚಿತ್ರದ ಕುರಿತು ಮಾತುಗಳನ್ನು ಹಂಚಿಕೊಂಡರು. ಯಾವುದೇ ದೃಶ್ಯ ಕಟ್, ಮ್ಯೂಟ್ ಮಾಡದೆ ಯುಎ ಸಿಕ್ಕಿದೆ. ಪುನೀತ್ ಸರ್ ಪರಿಚಯ ಹದಿನೇಳು ವರ್ಷ ಹಳೆಯದು. ಆದರೆ ಅವರಿಗೆ ಆಕ್ಷನ್ ಕಟ್ ಹೇಳಿರುವುದು ಇದೇ ಫಸ್ಟ್.. ಅಲ್ಲದೆ ರಂಗ ಎಸ್‍ಎಸ್‍ಎಲ್‍ಸಿ ಚಿತ್ರದ ಮೂಲಕ ನೃತ್ಯ ನಿರ್ದೇಶಕ, ಕಾಶಿ ಫ್ರಂ ವಿಲೇಜ್‍ದಲ್ಲಿ ನಟನಾಗಿ ಪಾದಾರ್ಪಣೆ, ಗೆಳೆಯರು ಚಿತ್ರದಿಂದ ನಿರ್ದೇಶನ ಇವೆಲ್ಲದಕ್ಕೂ ನಿರ್ಮಾಪಕ ಎಂ.ಎನ್.ಕುಮಾರ್ ಆಗಿರುವುದು ಕಾಕತಾಳಿಯವಾಗಿದೆ. ರವಿಬಸ್ರೂರ್ ಸಂಗೀತದಲ್ಲಿ ಎರಡು ಹಾಡುಗಳು ಹಿಟ್ ಆಗಿದೆ. ರಿಮೇಕ್ ಆಗಿದ್ದರೂ ಶೇಕಡ 40 ರಷ್ಟು ಬದಲಾವಣೆ ಮಾಡಲಾಗಿದೆ ಎಂದರು.

ಇದೇ 21ರಂದು ಬರಲು ಹಿಂದಯೇ ತೀರ್ಮಾನಿಸಲಾಗಿತ್ತು. ಆದರೆ ಸೆನ್ಸಾರ್ ಆಗಬೇಕಾದ ಕಾರಣದಿಂದ ಸುದ್ದಿಯನ್ನು ತಿಳಿಸಿರಲಿಲ್ಲ. ಹಿಂದಿನ ಚಿತ್ರಕ್ಕೆ ಆರ್ಶಿವಾದ ಮಾಡಿದಂತೆ ಇದಕ್ಕೂ ಹರಸಿ, ರಾಜಕುಮಾರ ಒಂದು ಮಟ್ಟಿಗೆ ಹಿಟ್ ಆಗಿತ್ತು. ಇದು ಅದಕ್ಕಿಂತಲೂ ಜಾಸ್ತಿ ಆಗಲಿ. ನನಗಿಂತ ಅರ್ಧ ವಯಸ್ಸಿನ ಹುಡುಗಿ ನಾಯಕಿ ಆಗಿದ್ದಾರೆ. ರಮ್ಯಕೃಷ್ಣ ಅಭಿಮಾನಿಯಾಗಿದ್ದು, ಅವರೊಂದಿಗೆ ನಟಿಸಿದ್ದು ಮರೆಯಲಾಗದ ಅನುಭವ. ಅಖಿಲೇಶ್‍ಮಿಶ್ರ, ಮುಖೇಶ್‍ತಿವಾರಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು ಪುನೀತ್‍ರಾಜ್‍ಕುಮಾರ್.

ಅಪ್ಪು ಸರ್ ಜೊತೆ ನಟಿಸಿದ್ದು ಸುಕೃತ ಎನ್ನಬಹುದು. ಅವಕಾಶ ನೀಡಿದ್ದಕ್ಕೆ ನಿರ್ಮಾಪಕ, ನಿರ್ದೇಶಕರಿಗೆ ಥ್ಯಾಂಕ್ಸ್, ಹಾಡುಗಳು ಚೆನ್ನಾಗಿವೆ. ರವಿಬಸ್ರೂರು ಅಭಿಮಾನಿ ಅಂತ ಹುಸಿನಗೆ ಚೆಲ್ಲಿದ್ದು ನಾಯಕಿ ರಶ್ಮಿಕಾಮಂದಣ್ಣಾ. ಸ್ಯಾಂಡಲ್‍ವುಡ್‍ನಲ್ಲಿ ಪ್ರತಿಭೆ ಇರುವವರನ್ನು ಗುರುತಿಸಿದ್ದಾರೆ. ನನ್ನೋಳಗಿರುವ ಪ್ರತಿಭೆಗೆ ಅವಕಾಶ ಸಿಕ್ಕಿದ್ದು ಅದೃಷ್ಟ ಅಂತಾರೆ ರವಿಬಸ್ರೂರು.

ಸಿನಿಮಾದ ಮಾಹಿತಿ ಹಂಚಿಕೊಳ್ಳುತ್ತಿರುವುದು ತಡವಾಗಿದೆ, ಇಂದು ಸಹ ಮಾಧ್ಯಮದವರನ್ನು ಕಾಯಿಸಿದ್ದಕ್ಕೆ ಕ್ಷಮೆ ಕೋರುತ್ತೇನೆಂದು ಹೇಳಿಕೊಂಡ ನಿರ್ಮಾಪಕ ಎಂ.ಎನ್.ಕುಮಾರ್, ನಿರ್ದೇಶಕರೊಂದಿಗಿನ ಸಂಬಂದ ಹಳೆಯದು. ಅದಕ್ಕೆ ಋಣ ತೀರಿಸಲು ಗುರುದಕ್ಷಿಣೆ ನೀಡಿದ್ದಾರೆ. ಸದ್ಯ 400 ಕೇಂದ್ರಗಳು ಈಗಾಗಲೆ ಕಾಯ್ದಿರಿಸಲಾಗಿದೆ. ನಿನ್ನೆ ಸೆನ್ಸಾರ್ ಆದ ಕಾರಣ ಇನ್ನು ಹೆಚ್ಚಿನ ಕೇಂದ್ರಗಳು ಸೇರಿಕೊಳ್ಳಲಿದೆ. ಮುಂದೆ ಕೆನಡಾ, ಸಿಂಗಪೂರ್, ದುಬೈ, ಸಿಂಗಪೂರ್, ಅಮೇರಿಕಾ ಸ್ಥಳಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನುವಲ್ಲಿಗೆ ಅಂದಿನ ಗೋಷ್ಟಿಗೆ ಮಂಗಳ ಹಾಡಲಾಯಿತು.
-18/12/17


ಸೋಷಿಯಲ್ ಮೀಡಿಯಾವನ್ನು ಬಳಸುವುದು ಕಡಿಮೆ - ಪುನೀತ್‍ರಾಜ್‍ಕುಮಾರ್
‘ಅಂಜನಿಪುತ್ರ’ ಪತ್ರಿಕಾಗೋಷ್ಟಿಗೆ ಆಗಮಿಸಿದ್ದ ಪುನೀತ್‍ರಾಜ್‍ಕುಮಾರ್ ಗೋಷ್ಟಿ ಮುಗಿದ ನಂತರ ಔಪಚಾರಿಕವಾಗಿ ಮಾದ್ಯಮದವರೊಂದಿಗೆ ಕಾಲಕಳೆದು ಪ್ರಶ್ನೆಗಳಿಗೆ ಖುಷಿಯಿಂದ ಉತ್ತರ ನೀಡಿದರು. ಅವರ ನುಡಿಗಳು ನಿಮಗಾಗಿ ಸಾದರಪಡಿಸಲಾಗುತ್ತಿದೆ.

• ಅಂಜನಿಪುತ್ರ ರಿಮೇಕ್ ಆದರೂ ಶೇಕಡ 40 ರಷ್ಟು ಬದಲಾವಣೆ ಮಾಡಲಾಗಿದೆ. ಚಿತ್ರ ನೋಡುವವರಿಗೆ ರಿಮೇಕ್ ಅಂತ ಗೊತ್ತಾಗುವುದಿಲ್ಲ. ನಿರ್ದೇಶಕ ಹರ್ಷ ಸ್ಟೈಲ್‍ಗೆ ಹೇಳಿ ಮಾಡಿಸಿದಂತಿದೆ. ಡೈಲಾಗ್, ಸಾಂಗ್ ಮತ್ತು ಮೇಕಿಂಗ್ ಹೊಸರೀತಿ ಇದೆ.

• ಹರ್ಷ ಅವರನ್ನು ನಿರ್ದೇಶಕರಾಗುವ ಮುನ್ನ ನೃತ್ಯಗಾರರಾಗಿ 18 ವರ್ಷ ಹಿಂದೆಯೇ ಪರಿಚಯವಾಗಿದ್ದರು. ಈಗ ಡೈರಕ್ಟರ್ ಸ್ಥಾನದಲ್ಲಿದ್ದಾರೆ. ಅದರಿಂದಲೇ ಸೆಟ್‍ನಲ್ಲಿ ನಗುತ್ತಾ ಕೆಲಸ ಮಾಡಿದ್ದರಿಂದ ಔಟ್‍ಪುಟ್ ಚೆನ್ನಾಗಿ ಬಂದಿದೆ.

• ಪೂಜೈ ಸಿನಿಮಾ ನಾನು ಮಾಡುವುದು ಅಂತ ತೀರ್ಮಾನವಾಗಿತ್ತು. ಆಮೇಲೆ ಅವರು, ಇವರು ಮಾಡ್ತಾರಂತೆ ಎಂಬುದಾಗಿ ಸುದ್ದಿ ಹರಿದಾಡಿತ್ತು. ಅಂತಿಮವಾಗಿ ನನ್ನ ಬಳಿಗೆ ಬಂದಿತು. ಹಾಗಾಗಿ ಇದನ್ನು ಮಾಡಬೇಕಾಯ್ತು. ಅಲ್ಲದೆ ಟೈಟಲ್‍ನ್ನು ನಿರ್ಮಾಪಕರು ಸೂಚಿಸಿದ್ದು. ಹೇಗಿದ್ದರೂ ಹರ್ಷ ಆಂಜನೇಯ ಭಕ್ತನಾಗಿದ್ದರಿಂದ ಖುಷಿಯಿಂದ ಎಲ್ಲರು ಒಪ್ಪಿಕೊಂಡರು.

• ರಾಜಕುಮಾರ ಸಿನಿಮಾದ ದೊಡ್ಡ ಭಾರವನ್ನು ಹೊತ್ತು ಕೊಂಡಿಲ್ಲ. ಪ್ರತಿ ಸಿನಿಮಾದಲ್ಲಿ ನನ್ನ ಶ್ರಮವನ್ನು ತೋರಿಸುತ್ತೇನೆ. ಎಲ್ಲಾ ಸಿನಿಮಾಗಳಲ್ಲಿ ಕತೆ, ಸಂಭಾಷಣೆ ಬದಲಾವಣೆ ಇರುತ್ತೆ. ಏನೇ ಆದರೂ ಪ್ರೇಕ್ಷಕರದು ಅಂತಿಮ ತೀರ್ಪು ಆಗಿರುತ್ತೆ.

• ಪಿಆರ್‍ಕೆ ಆಡಿಯೋ ಕಂಪೆನಿ ಮೂಲಕ ಮೊದಲನೆಯದಾಗಿ ಅಂಜನಿಪುತ್ರ ಬಿಡುಗಡೆ ಮಾಡಲಾಗಿದೆ. ಮುಂದೆ ಟಗರು ನಮ್ಮ ಸಂಸ್ಥೆಯಿಂದ ಹಾಡುಗಳು ಹೊರಬರುತ್ತಿವೆ. ಮುಂದಿನ ದಿನಗಳಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಲು ಯೋಜನೆ ಹಾಕಲಾಗಿದೆ.

• 2017ರಲ್ಲಿ ಅಮ್ಮನನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟ. ಅವರು ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಾಗ ನಾವುಗಳು ಅವರ ಬಳಿ ಇದ್ದೇವು. ಏನಾಗಬೇಕೋ ಅದು ಆಗುತ್ತದೆ. ನಮ್ಮಿಂದ ತಡೆಯಲಿಕ್ಕೆ ಸಾದ್ಯವಿಲ್ಲ ಅಂದುಕೊಂಡು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತೇವೆ. ಅಮ್ಮ 80+ ಸಿನಿಮಾ ನಿರ್ಮಿಸಿದ್ದರು. ಅದನ್ನು ಮುಂದುವರೆಸಿಕೊಂಡು ಹೋಗುವ ಇರಾದೆ ಇದೆ.

• ಕವಲುದಾರಿ ಶೇಕಡ 80 ರಷ್ಟು ಮುಗಿದಿದೆ. ಎರಡನೆ ಚಿತ್ರ ಜನವರಿಯಲ್ಲಿ ಶುರುವಾಗಲಿದೆ. ರಾಧಕೃಷ್ಣ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಟೈಟಲ್ ಅಂತಿಮವಾಗಿಲ್ಲ.

• ಖಾಸಗಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡೋಲ್ಲ. ನಮ್ಮ ಚಿತ್ರದ ಕುರಿತು ಒಂದಷ್ಟು ಮಾಹಿತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇನೆ. ಮೊನ್ನೆ ಶಿವಣ್ಣ, ನಾನು ಒಟ್ಟಿಗೆ ಲೈವ್‍ಗೆ ಬಂದಿದ್ದೇವು.

• ಸೋಷಿಯಲ್ ಮೀಡಿಯಾದಲ್ಲಿ ನೆಗಟೀವ್ ಅಂಶಗಳಿಗೆ ತಲೆಕಡಿಸಿಕೊಳ್ಳುವುದಿಲ್ಲ. ಅಲ್ಲದೆ ಇದನ್ನು ಉಪಯೋಗಿಸುವುದು ಕಡಿಮೆ. ಅವರವರ ಖುಷಿಗೆ ಮಾತನಾಡುತ್ತಾರೆ. ಒಬ್ಬೋಬ್ಬರಿಗೆ ಒಬ್ಬ ನಟ ಇಷ್ಟ ಆಗುತ್ತಾರೆ. ಇಲ್ಲದವರು ತೆಗಳುತ್ತಾರೆ. ಅದರ ಬಗ್ಗೆ ನಾವು ಮಾತನಾಡುವುದು ತಪ್ಪಾಗುತ್ತದೆ.

• ಮೂರು ವರ್ಷದ ನಂತರ ಕಿರುತೆರೆಗೆ ಪಾದಾರ್ಪಣೆ ಮಾಡಿರುವುದು ಖುಷಿ ತಂದಿದೆ. ಹಿಂದಿನ ರಿಯಾಲಿಟಿ ಷೋಗಿಂತ ವ್ಯತ್ಯಾಸ ಇದೆ. ಎಲ್ಲಾ ವರ್ಗದ ಜನರು ಪ್ರೀತಿಯಿಂದ ಪಾಲ್ಗೋಂಡು ಅಪ್ಪಾಜಿ ಬಗ್ಗೆ ಮಾತನಾಡುತ್ತಾರೆ. ಅವರ ಬಗ್ಗೆ ಇಷ್ಟೋಂದು ಅಭಿಮಾನ, ಗೌರವ ಇಟ್ಟುಕೊಂಡಿರುವುದು ಇಲ್ಲಿಗೆ ಬಂದಾಗ ಹೆಚ್ಚು ಗೊತ್ತಾಗುತ್ತೆ.
-18/12/17
ಸೆಲ್ಫಿ ಬಳಸಿದ ಪುನೀತ್‍ರಾಜ್‍ಕುಮಾರ್
ಸಾಮಾನ್ಯವಾಗಿ ಸ್ಟಾರ್ ನಟರೊಂದಿಗೆ ಅಭಿಮಾನಿಗಳು, ಸಿನಿಮಾಮೋಹಿಗಳು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅಪರೂಪಕ್ಕೆ ಎನ್ನುವಂತೆ ತಾರಕದಲ್ಲಿರುವ ನಟರೊಬ್ಬರು ತಾವೇ ಸೆಲ್ಫಿ ತೆಗೆದುಕೊಂಡ ಪ್ರಸಂಗ ಜರುಗಿದೆ. ವಿವರಗಳಿಗೆ ಮುಂದೆ ಓದಿ. 86ರ ಹರೆಯ ಎಸ್.ರಾಜಣ್ಣ, ನಿವೃತ್ತ ಅಧೀನಕಾರ್ಯದರ್ಶಿಗಳು, ವಿಧಾನಸೌಧ ಇವರೊಂದಿಗೆ ಶಿವರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್ 25 ವರ್ಷಗಳ ಕೆಳಗೆ ಶೆಟ್ಲ್‍ಕಾಕ್ ಆಟವನ್ನು ನಿರಂತರವಾಗಿ ಐದು ವರ್ಷಗಳ ಕಾಲ ಕರ್ನಾಟಕ ಸಚಿವಾಲಯ ಕ್ಲಬ್‍ನಲ್ಲಿ ಆಟ ಆಡಿದ್ದಾರೆ. ಕೆಲವೊಮ್ಮೆ ಇವರಿಗೆ ತರಭೇತಿ ನೀಡಿದ್ದು ಉಂಟು. ‘ಅಂಜನಿಪುತ್ರ’ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಗೆ ಪ್ರಚಾರದ ಸಲುವಾಗಿ ಪುನೀತ್‍ರಾಜ್‍ಕುಮಾರ್ ಆಗಮಿಸಿದ್ದರು. ಅಲ್ಲಿ ಇವರು ಬಂದಿರುವದನ್ನು ತಿಳಿದುಕೊಂಡು, ಅವರಲ್ಲಿಗೆ ತೆರಳಿ ಆರ್ಶಿವಾದ ಪಡೆದುಕೊಂಡು ಗತಕಾಲವನ್ನು ನೆನಪು ಮಾಡಿಕೊಂಡು ಸಂತಸ ಪಟ್ಟಿದ್ದಾರೆ.

ಹಾಗೆಯೇ ಸ್ವಾಸ್ಥ್ಯ ವಿಚಾರಿಸಿ ತಮ್ಮ ಮೊಬೈಲ್‍ನಲ್ಲಿ ಸೆಲ್ಫಿಯನ್ನು ತೆಗೆದುಕೊಂಡು ಇದನ್ನು ಶಿವಣ್ಣರಿಗೆ ತೋರಿಸುವುದಾಗಿ ಖುಷಿಯಿಂದ ಹೇಳಿದ್ದಾರೆ. ದೊಡ್ಡ ಮನೆಯಿಂದ ಬಂದವರಾಗಿದ್ದರಿಂದ ದೊಡ್ಡ ಗುಣ ಇರಬೇಕೆಂದು ಹಿರಿಯರು ಹೇಳಿರುವಂತೆ ಪುನೀತ್ ಇದನ್ನು ಅನುಸರಿಸುತ್ತಾ , ಭಾನುವಾರ ನಡೆದ ಘಟನೆ ಮತ್ತೋಮ್ಮೆ ಸಾಬೀತು ಆಗಿದ್ದು ಇತರರಿಗೂ ಮಾದರಿಯಾಗಿದೆ.
-18/12/17
ಡಾ.ರಾಜಕುಮಾರ್ ನಿಜವಾದ ಅಂಜನಿಪುತ್ರ - ಭಗವಾನ್
ಸದ್ಯ ‘ಅಂಜನಿ ಪುತ್ರ’ ಎಂದು ಪುನೀತ್‍ರಾಜ್‍ಕುಮಾರ್ ಅವರನ್ನು ಅಭಿಮಾನಿಗಳು ಕರೆಯುತ್ತಿದ್ದಾರೆ. ಆದರೆ ನಿಜವಾದ ಅಂಜನಿಪುತ್ರ ಡಾ.ರಾಜ್‍ಕುಮಾರ್ ಅಂತ ಹಿರಿಯ ನಿರ್ದೇಶಕ ಭಗವಾನ್ ಸದರಿ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಹೇಳಲು ವೇದಿಕೆಯಾಗಿತ್ತು. ಅವರು ಮಾತನಾಡುತ್ತಾ ರಾಜ್ ಕುಟುಂಬದೊಂದಿಗೆ 65 ವರ್ಷಗಳ ಅವಿನಾಭಾವ ಸಂಬಂದವಿದೆ. ರಾಜ್‍ರವರ ತಲೆಮಾರುಗಳನ್ನು ಕಂಡಿದ್ದೇನೆ. ಜೀವನದಲ್ಲಿ ಅತ್ಯಂತ ಕಷ್ಟ, ನೋವು ಕಂಡಿರುವುದು ರಾಜ್-ಪಾರ್ವತಮ್ಮ ಅಗಲಿದಾಗ. ಈಗ ಮತ್ತೋಬ್ಬ ಅಂಜನಿಪುತ್ರ ಹುಟ್ಟಿಕೊಂಡಿದ್ದಾನೆ. ಈ ಕುಟುಂಬಕ್ಕೆ ಯಶಸ್ಸು ಸದಾ ಸಿಗಲಿ ಎಂದರು. ಇದಕ್ಕೂ ಮುನ್ನ ವಿಭಿನ್ನ ರೀತಿಯಲ್ಲಿ ಎಂಟ್ರಿ ಕೊಟ್ಟ ಪುನೀತ್‍ರಾಜ್‍ಕುಮಾರ್ ಪಿಆರ್‍ಕೆ ಸ್ಪರ್ಧೆಗೆಂದು ಸ್ಥಾಪಿಸಿಲ್ಲ. ಒಳ್ಳೆ ಹಾಡುಗಳು, ಆಲ್ಬಂಗಳಿಗೆ ಪ್ರೋತ್ಸಾಹ ನೀಡಲಾಗುವುದು. ಮೊದಲ ಚಿತ್ರ ಅಂಜನಿಪುತ್ರ, ನಂತರ ಟಗರು,ಕವಲುದಾರಿ. ದೇವರು ಯಾವ ದಾರಿಯಲ್ಲಿ ನಡೆಸಿಕೊಂಡು ಹೋಗುತ್ತಾರೋ ಅದರಂತೆ ಮುಂದೆವರೆಸುತ್ತೇವೆ ಎಂದು ರಾಜ್‍ಕುಮಾರ್ ಚಿತ್ರದ ಗೀತೆಗಳ ಸಾಲನ್ನು ಹಾಡಿ ರಂಜಿಸಿದರು.

ಅಪ್ಪು ಮೊದಲನಿಂದಲೂ ಡಿಫರೆಂಟ್ ಆಗಿದ್ದಾನೆ. ಮೂರು ವರ್ಷ ಇರುವಾಗಲೆ ಬಣ್ಣ ಹಚ್ಚಿದ. ಆರು ವರ್ಷಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ. ನೀವುಗಳು ಈಗ ಪವರ್ ಅಂತ ಕೂಗುತ್ತಿದ್ದೀರಾ. ಅದನ್ನು ಕೊಟ್ಟಿದ್ದೇ ನಾನು. ಪಿಆರ್‍ಕೆದಲ್ಲಿ ಪುಟ್ಟಸ್ವಾಮಿ ಎಲ್ಲರು ಇದ್ದಾರೆ. ಇದು ಒಂಥರ ಯೂನಿಕ್ ಹೆಸರು. ಟೈಃಟಲ್‍ನಲ್ಲೆ ಪವರ್ ಇದೆ. ನಿದೇಶಕರ ಪ್ರತಿ ಚಿತ್ರದ ಶೀರ್ಷಿಕೆ ಆಂಜನೇಯ ಹೆಸರಿನೊಂದಿಗೆ ಇರುತ್ತದೆ. ಮುಂದಿನ ಚಿತ್ರ ಮೈ ನೇಮ್ ಈಸ್ ಆಂಜಿ ಇರಲಿದೆ. ಕನ್ನಡ ಚಿತ್ರಗಳನ್ನು ನೋಡಿ, ಹೊಸ ಪ್ರತಿಭೆಗಳನ್ನು ಬೆಳಸಬೇಕು ಅಂತ ಅವಲತ್ತು ಮಾಡಿಕೊಂಡಿದ್ದು ಶಿವರಾಜ್‍ಕುಮಾರ್.

ಇಂದು ಇಲ್ಲಿ ಇರುವುದಕ್ಕೆ ಪುಣ್ಯವಂತ ಎನ್ನಬಹುದು. ರಾಜ್ ಸಂಸ್ಥೆಯು ಮೊದಲ ಚಿತ್ರ ಶ್ರೀನಿವಾಸ ಕಲ್ಯಾಣ, ಮುಂದೆ ವಜ್ರೇಶ್ವರಿ ಕಂಬೈನ್ಸ್ ಪ್ರಾರಂಭ, ಇಂದು ಆಡಿಯೋ ಕಂಪೆನಿ ಶುರುವಾಗಿದೆ. ಎಲ್ಲದರಲ್ಲಿ ನಾನಿರುವುದು ಭಾಗ್ಯವಂತ ಅಲ್ಲದೆ ಬೇರೇನೂ ಹೇಳಲಾಗದು. ನಿಮ್ಮ ಸಂಸ್ಥೆಯು ಇನ್ನಷ್ಟು ತಾರಕಕ್ಕೆ ಏರಲಿ ಅಂತ ಶ್ರೇಯಸ್ಸನ್ನು ಬಯಸಿದರು ವಾಣ ಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು.

ತಾಯಿ ತಂದೆಗೂ ಮೀರಿದ ಮಗ. ರಾಜ್‍ಕುಮಾರ್ ಚಿತ್ರರಂಗಕ್ಕೆ ಮೂರು ಮಾಣ ಕ್ಯಗಳನ್ನು ನೀಡಿದ್ದಾರೆ. ನಿರ್ಮಾಪಕ ಕುಮಾರ್ ಅವರನ್ನು ಕೆಸಿಎನ್ ಕುಮಾರ್ ಅಂತ ಕರೆಯುತ್ತಾರೆ. ರಾಜ್ ಕುಟುಂಬಕ್ಕೆ ಯಶಸ್ಸು ಸಿಗಲಿ ಅಂತ ಶುಭಹಾರೈಸಿದರು ಕೆ.ಸಿ.ಎನ್.ಚಂದ್ರಶೇಖರ್.

ರಾಘವೇಂದ್ರರಾಜಕುಮಾರ್, ನಾಯಕಿ ರಶ್ಮಿಕಾಮಂದಣ್ಣ, ಸಂಗೀತ ನಿರ್ದೇಶಕ ರಾಜನ್ ಚುಟುಕು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಗವಾನ್, ರಾಜನ್ ಅವರಿಗೆ ಗೌರವಿಸಿದ ತರುವಾಯ ಟ್ರೈಲರ್ ತೋರಿಸಲಾಯಿತು. ನಿರ್ಮಾಪಕ ಎನ್.ಕುಮಾರ್, ನಿರ್ದೇಶಕ ಹರ್ಷ, ಸಾಹಸ ನಿರ್ದಶಕ ರವಿವರ್ಮಾ, ಸಂಗೀತ ನಿರ್ದೇಶಕ ರವಿಬಸ್ರೂರು, ಕಲಾವಿದರು ಹಾಜರಿದ್ದರು. ಮಾರುತಿರಾಯ ಮೇಲಿನಿಂದ ಸಿಡಿಯನ್ನು ವೇದಿಕೆಗೆ ತಂದಾಗ ಪುನೀತ್ ಅದನ್ನು ಸ್ವೀಕರಿಸಿ ಗಣ್ಯರಿಗೆ ವಿತರಣೆ ಮಾಡಿದ್ದು, ಶಿವಣ್ಣ-ಪುನೀತ್ ಒಟ್ಟಿಗೆ ಡ್ಯಾನ್ಸ್ ಮಾಡುವುದನ್ನು ನೋಡಲು ಖುಷಿಯಾಗಿತ್ತು.
-25/11/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore