HOME
CINEMA NEWS
GALLERY
TV NEWS
REVIEWS
CONTACT US

ವಿಶ್ವ ಚಲನಚಿತ್ರೋತ್ಸವದಲ್ಲಿಅಮೃತಮತಿ
ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಅಮೃತಮತಿ’ ಸಿನಿಮಾವು ನೋಯ್ಡಾದ ನಾಲ್ಕನೇ ಭಾರತೀಯ ವಿಶ್ವ ಚಲನ ಚಿತ್ರೋತ್ಸವ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆಆಯ್ಕೆಯಾಗಿದೆ. ಶೀರ್ಷಿಕೆ ಹೆಸರಿನಲ್ಲಿ ಹರಿಪ್ರಿಯಾ ನಟನೆಮಾಡಿದ್ದಾರೆ.ಐತಿಹಾಸಿಕ ಕತೆಯಲ್ಲಿಕಿಶೋರ್‍ಯಶೋಧರನಾಗಿ, ತಿಲಕ್ ಅಷ್ಟಾವಂಕನಾಗಿ ಕಾಣಿಸಿಕೊಂಡಿದ್ದಾರೆ. 13ನೇ ಶತಮಾನದಜನ್ನಕವಿ ರಚಿಸಿದ ‘ಯಶೋಧರಚರಿತೆ’ ಕಾವ್ಯದಲ್ಲಿಎರಡು ವಿಭಿನ್ನ ನೆಲೆಗಳ ಮುಖಾಮುಖಿ ಮತ್ತು ವೈರುದ್ಯಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.

ಅಮೃತಮತಿ ಮತ್ತುಅರಮನೆ ವ್ಯವಸ್ಥೆಯ ನಡುವಿನ ಮುಖ್ಯಕಥನದಲ್ಲಿದ್ದ ಕೆಲವು ಅಂಶಗಳಿಗೆ ಉತ್ತರ ಹುಡುಕುತ್ತಾ ಮರು ವ್ಯಾಖ್ಯಾನದ ಹೊಸ ರೂಪ ನೀಡಲಾಗಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.ತಾರಗಣದಲ್ಲಿ ಸುಂದರರಾಜ್, ಪ್ರಮೀಳಾಜೋಷಾಯ್, ಸುಪ್ರಿಯಾರಾವ್, ಅಂಬರೀಷ್‍ಸಾರಂಗಿ, ವತ್ಸಲಾಮೋಹನ್ ಮುಂತಾದವರು ನಟಿಸಿದ್ದಾರೆ. ಶಮಿತಾಮಲ್ನಾಡ್ ಸಂಗೀತ, ಸುರೇಶ್‍ಅರಸ್ ಸಂಕಲನ, ನಾಗರಾಜಅದವಾನಿ ಛಾಯಾಗ್ರಹಣವಿದೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ‘ಇಂಚರ ಪುಟ್ಟಣ್ಣ ಪ್ರೊಡಕ್ಷನ್’ ಸಂಸ್ಥೆಯಿಂದ ಚೊಚ್ಚಲಬಾರಿ ನಿರ್ಮಾಣ ಮಾಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
25/03/20

ಅಮೃತಮತಿಹಾಡುಗಳ ಸಮಯ
ಬರಗೂರುರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಅಮೃತಮತಿ’ ಚಿತ್ರದ ಹೆಸರಿನಲ್ಲಿ ಹರಿಪ್ರಿಯಾ ನಟನೆಮಾಡಿದ್ದಾರೆ. ಐತಿಹಾಸಿಕ ಕತೆಯಲ್ಲಿಕಿಶೋರ್‍ಯಶೋಧರನಾಗಿ ಕಾಣಿಸಿಕೊಂಡಿದ್ದಾರೆ. 13ನೇ ಶತಮಾನದಜನ್ನಕವಿ ರಚಿಸಿದ ‘ಯಶೋಧರಚರಿತೆ’ ಕಾವ್ಯವನ್ನು ಆಧರಿಸಿದೆ.ಯುವರಾಜಯಶೋಧರನ ಪತ್ನಿಅಮೃತಮತಿಯುಒಂದು ದಿನ ಕುದುರೆ ಲಾಯದಉಸ್ತುವಾರಿ ಅಷ್ಟಾವಂಕನ ಹಾಡಿಗೆ ಮೋಹಿತಳಾಗುತ್ತಾಳೆ.ಅದುಯಶೋಧರನಿಗೆಗೊತ್ತಾಗಿಅವರಿಬ್ಬರನ್ನುಕೊಲ್ಲಲುಯತ್ನಿಸುತ್ತಾನೆ. ಆದರೆಅದು ಸಾಧ್ಯವಾಗುವುದಿಲ್ಲ. ಕೊನೆಗೆ ಆಕೆಯೇಗಂಡ ಹಾಗೂ ಅತ್ತೆ ಮಾವಂದಿರ ಸಾವಿಗೆ ಕಾರಣಳಾಗುತ್ತಾಳೆ. ಆನಂತರ ಜನ್ಮಾಂತರಗಳಲ್ಲಿ ಮರುಹುಟ್ಟುಪಡೆಯುತ್ತಾರೆನ್ನುವುದು ಮೂಲ ಕತೆಯ ಸಾರಾಂಶವಾಗಿದೆ. ಹೀಗೆ ಎರಡು ವಿಭಿನ್ನ ನೆಲೆಗಳ ಮುಖಾಮುಖಿ ಮತ್ತು ವೈರುದ್ಯಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.

ಅಮೃತಮತಿ ಮತ್ತುಅರಮನೆ ವ್ಯವಸ್ಥೆಯ ನಡುವಿನ ಮುಖ್ಯಕಥನದಲ್ಲಿದ್ದ ಕೆಲವು ಅಂಶಗಳಿಗೆ ಉತ್ತರ ಹುಡುಕುತ್ತಾ ಮರು ವ್ಯಾಖ್ಯಾನದ ಹೊಸ ರೂಪ ನೀಡಲಾಗಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.ತಾರಗಣದಲ್ಲಿ ಸುಂದರರಾಜ್, ಪ್ರಮೀಳಾಜೋಷಾಯ್, ಸುಪ್ರಿಯಾರಾವ್, ಅಂಬರೀಷ್‍ಸಾರಂಗಿ, ವತ್ಸಲಾಮೋಹನ್ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳ ಶಮಿತಾಮಲ್ನಾಡ್ ಸಂಗೀತದಲ್ಲಿಕನ್ನಡ ಕೋಗಿಲೆ ಖ್ಯಾತಿಯ ಖಾಸಿಂ ಒಂದುಗೀತೆ ಹಾಡಿದ್ದಾರೆ.ಎಂಎಲ್‍ಸಿ ಪುಟ್ಟಣ್ಣನವರು ‘ಇಂಚರ ಪುಟ್ಟಣ್ಣ ಪ್ರೊಡಕ್ಷನ್’ ಸಂಸ್ಥೆಯಿಂದ ಚೊಚ್ಚಲಬಾರಿ ನಿರ್ಮಾಣ ಮಾಡಿದ್ದಾರೆ.ಶನಿವಾರದಂದುಜರುಗಿದಧ್ವನಿಸಾಂದ್ರಿಕೆಜನಾರ್ಪಣೆಕಾರ್ಯಕ್ರಮದಲ್ಲಿ 2018ರ ಶ್ರೇಷ್ಟನಟ ಪ್ರಶಸ್ತಿಗೆ ಭಾಜನರಾಗಿರುವರಾಘವೇಂದ್ರರಾಜ್‍ಕುಮಾರ್‍ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದರಾಘಣ್ಣಅಪ್ಪಾಜಿಗೆದಾದಫಾಲ್ಕೇ ಪ್ರಶಸ್ತಿ ಬಂದ ಸಮಯದಲ್ಲಿ ರಾಷ್ಟ್ರಪತಿಗಳು ಗೌರವಿಸಿದಾಗ ಅವರುಕಣ್ಣು ಮುಚ್ಚಿಕೊಂಡಿದ್ದರು. ನಂತರಇದರ ಬಗ್ಗೆ ವಿವರಣೆ ಕೇಳಿದಾಗ ಕವಿರತ್ನ ಕಾಳಿದಾಸದಲ್ಲಿ ಕಾಳಿದಾಸನು ವಿದ್ಯಾದಾನ ಮಾಡಿದದೇವಿ ಪಾದಕಮಲಗಳಿಗೆ ಅರ್ಪಿಸುತ್ತಾನೆ. ಅದರಂತೆತಾನು ಸಹ ಎಲ್ಲವನ್ನುಆಕೆಯ ಪಾದಕ್ಕೆಅರ್ಪಿಸಲುಕಣ್ಣು ಮುಚ್ಚಿಕೊಂಡಿದ್ದೇನೆಂದು ಹೇಳಿದ್ದರು. ಇಂದು ಹಿರಿಯರು ಆರ್ಶಿವಾದ ಮಾಡಿರುವುದರಿಂದಜವಬ್ದಾರಿ ಹೆಚ್ಚಾಗಿದೆಎಂದರು.ಸಿನಿಮಾವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
1/02/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore