HOME
CINEMA NEWS
GALLERY
TV NEWS
REVIEWS
CONTACT US
ಅಮೃತ್‍ಅಪಾರ್ಟ್‍ಮೆಂಟ್ಸ್‍ದಲ್ಲಿಎರಡು ಗೀತೆಗಳು
ಪ್ರಚಲಿತ ಸಿಲಿಕಾನ್ ಸಿಟಿಯ ಟೆಕ್ಕಿ ದಂಪತಿಗಳ ಧೋರಣೆ ಬುದ್ದಿ ಕತೆ ಹೊಂದಿರುವ ‘ಅಮೃತ್‍ಅಪಾರ್ಟ್‍ಮೆಂಟ್ಸ್’ ಚಿತ್ರದಎರಡು ಹಾಡುಗಳ ಧ್ವನಿಮುದ್ರಣಕಾರ್ಯಇತ್ತೀಚೆಗೆ ನಡೆಯಿತು. ಡಾ.ಬಿ.ಆರ್.ಪೋಲೀಸ್‍ಪಾಟೀಲ್ ಬರೆದಿರುವ‘ನಾವ್ ಬಂದೇವ್ ಬೆಂಗಳೂರು ನೋಡುದುಕ್ಕ್’ ಜಾನಪದ ಶೈಲಿಯ ಸಾಹಿತ್ಯಕ್ಕೆರಾಜ್ಯ ಪ್ರಶಸ್ತಿ ವಿಜೇತತೇಜಸ್‍ಹರಿದಾಸ್‍ಗೀತೆಗೆಧ್ವನಿಯಾಗಿದ್ದಾರೆ. ಎರಡನೆಯದಾಗಿಗಂಡ-ಹೆಂಡತಿ ಮೊದಲ ನೋಟದಲ್ಲಿಯೇ ಶುರುವಾಗುವತಮ್ಮ ಪ್ರೇಮದ ಘಳಿಗೆಗಳನ್ನು ನೆನಪಿಸಿಕೊಳ್ಳುವಂತ ‘ಶುರುವಾಗಬೇಕು ಮತ್ತೋಮ್ಮೆ ನಮ್ಮ ಒಲವು’ ಸಾಲುಗಳಿಗೆ ಕೆ.ಕಲ್ಯಾಣ್ ಲೇಖನಿ ಕೆಲಸ ಮಾಡಿದೆ. ಅಜಯ್‍ವಾರಿಯರ್-ವಾಣಿಹರಿಕೃಷ್ಣ ಕಂಠಸಿರಿಯಲ್ಲಿ ಮೂಡಿಬಂದಿದ್ದುಎಸ್.ಡಿ.ಅರವಿಂದ್ ಸಂಗೀತ ಸಂಯೋಜಿಸಿದ್ದಾರೆ.

ತಾರಕ್‍ಪೊನ್ನಪ್ಪ ನಾಯಕ. ಊರ್ವಶಿ ಗೋವರ್ಧನ್ ನಾಯಕಿ. ಖಡಕ್ ಎಸಿಪಿಯಾಗಿ ಮಾನಸಜೋಷಿ, ಇವರೊಂದಿಗೆಸೀತಾಕೋಟೆ, ಬಾಲಾಜಿಮನೋಹರ್, ಸಂಪತ್‍ಕುಮಾರ್, ಸಿತಾರ, ಜಗದೀಶಜಾಲ, ಶ್ರವಣ್‍ಐತಾಳ್, ಅರುಣಮೂರ್ತಿ, ರಾಜುನೀನಾಸಂ, ಶಂಕರ್ ಮುಂತಾದವರಅಭಿನಯವಿದೆ. ಜಿ9 ಕಮ್ಯುನಿಕೇಶನ್, ಮಿಡೀಯಾಅಂಡ್‍ಎಂಟರ್‍ಟೈನ್‍ಮೆಂಟ್ ಮೂಲಕ ಮೂರು ಚಿತ್ರಗಳನ್ನು ನಿರ್ಮಾಣ ಮಾಡಿದ ಸಂವೇದನೆಯಿಂದಗುರುರಾಜಕುಲಕರ್ಣಿ ಮೊದಲಬಾರಿರಚನೆ,ನಿರ್ದೇಶನಜೊತೆಗೆ ಬಂಡವಾಳ ಹೂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
19/03/20

ಟೆಕ್ಕಿಗಳಕಥೆ-ವ್ಯಥೆ
ಟೆಕ್ಕದಂಪತಿ ಮತ್ತುಥ್ರಿಲ್ಲರ್‍ಕತೆ ಹೊಂದಿರುವ ‘ಅಮೃತ್‍ಅಪಾಟ್ರ್ಮೆಂಟ್ಸ್’ ಚಿತ್ರವುಕೊನೆಯ ಹಂತದ ಸಂಖಲನ ನಡೆಯುತ್ತಿದೆ. ಸಿನಿಮಾಕುರಿತು ಹೇಳುವುದಾದರೆ ಹೊಸ ದಂಪತಿಗಳು ಇದೇಅಪಾಟ್ರ್ಮೆಂಟ್ಸ್‍ಗೆ ಬರುತ್ತಾರೆ. ಪ್ರಾರಂಭದಲ್ಲಿಎಲ್ಲವುಚೆನ್ನಾಗಿರುತ್ತದೆ. ಮೈಸೂರಿನವ ಶುದ್ದ ಸಸ್ಯಹಾರಿ.ಉತ್ತರ ಭಾರತದ ಆಕೆ ಮಾಂಸಹಾರಿ.ಮುಂದೆಊಹಿಸಲಾರದಂತಘಟನೆ ನಡೆದಾಗಇಬ್ಬರು ವಿಚಲಿತರಾಗುತ್ತಾರೆ. ನಡೆದಂತ ಸಣ್ಣಘಟನೆಗೆ ಸಾಕ್ಷಿಯಾಗುತ್ತಾರೆ.ತನಿಖೆಯಲ್ಲಿ ಸಾಕ್ಷಿಗೆ ಸಹಕರಿಸಿದರೆ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟಂತೆಆಗುತ್ತದೆ. ಹೀಗೆ ಎರಡನ್ನುಹೇಗೆ ನಿರ್ವಹಿಸುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.

ತಾರಕ್‍ಪೊನ್ನಪ್ಪ ನಾಯಕ. ಊರ್ವಶಿ ಗೋವರ್ಧನ್ ನಾಯಕಿ. ಖಡಕ್ ಎಸಿಪಿಯಾಗಿ ಮಾನಸಜೋಷಿ, ಇವರಿಗೆ ಬುದ್ದಿವಾದ ಹೇಳುವ ವಕೀಲೆ ಸೀತಾಕೋಟೆ, ಅಂಬಿ ಅಭಿಮಾನಿ ಆಟೋಚಾಲಕನಾಗಿ ಬಾಲಾಜಿಮನೋಹರ್, ಮತ್ತೋಂದು ಮುಖ್ಯ ಪಾತ್ರದಲ್ಲಿ ಸಂಪತ್‍ಕುಮಾರ್‍ಇವರೊಂದಿಗೆ ಸಿತಾರ, ಜಗದೀಶಜಾಲ, ಶ್ರವಣ್‍ಐತಾಳ್, ಅರುಣಮೂರ್ತಿ, ರಾಜುನೀನಾಸಂ, ಶಂಕರ್ ಮುಂತಾದವರಅಭಿನಯವಿದೆ. ಮೂರು ಚಿತ್ರಗಳನ್ನು ನಿರ್ಮಾಣ ಮಾಡಿದ ಸಂವೇದನೆಯಿಂದಗುರುರಾಜಕುಲಕರ್ಣಿ ಮೊದಲಬಾರಿರಚನೆ,ನಿರ್ದೇಶನಜೊತೆಗೆ ಬಂಡವಾಳ ಹೂಡಿದ್ದಾರೆ. ಕೆ.ಕಲ್ಯಾಣ್,ವಿ.ಮನೋಹರ್ ಮತ್ತುಡಾ.ಬಿ.ಆರ್.ಪೋಲೀಸ್ ಪಾಟೇಲ್ ಸಾಹಿತ್ಯದ ಮೂರು ಗೀತೆಗಳಿಗೆ ಎಸ್.ಡಿ.ಅರವಿಂದ್ ಸಂಗೀತ ಸಂಯೋಜಿಸಿದ್ದಾರೆ, ಛಾಯಾಗ್ರಹಣಅರ್ಜುನ್‍ಅಜಿತ್, ಸಂಕಲನ ಕೆಂಪರಾಜಅರಸ್‍ಅವರದಾಗಿದೆ. ಸುನೀಲ.ಆರ್.ಡಿ ಹಾಗೂ ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರು.
ಸಿನಿ ಸರ್ಕಲ್.ಇನ್ ನ್ಯೂಸ್
21/09/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore