HOME
CINEMA NEWS
GALLERY
TV NEWS
REVIEWS
CONTACT US
ಅಮ್ಮನಿಗೆ ವಿದೇಶದಲ್ಲಿ ಬೇಡಿಕೆ
ಕಳೆದ ತಿಂಗಳು ತೆರೆಕಂಡ ‘ಅಮ್ಮ ಐ ಲವ್ ಯು’ ಚಿತ್ರಕ್ಕೆ ಸ್ಪಂದಿಸಿದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಚಿರಂಜೀವಿಸರ್ಜಾ ಮೊದಲಬಾರಿ ಆಕ್ಷನ್ ಜೊತೆಗೆ ಭಾವನಾತ್ಮಕ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ತಾಯಿ ಪಾತ್ರದಲ್ಲಿ ಸಿತಾರ ಹೈಲೈಟ್. ನಾಯಕಿ ನಿಶ್ವಿಕಾನಾಯ್ಡು ಅವರಿಗೆ ಮೊದಲ ಚಿತ್ರದಲ್ಲಿ ಭವಿಷ್ಯ ಸಿಕ್ಕಿದೆ. ಚಿಕ್ಕಣ್ಣ ಇಲ್ಲಿಯವರೆಗೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರ. 12 ವರ್ಷಗಳ ನಂತರ ದ್ವಾರಕೀಶ್ ಬ್ಯಾನರ್‍ಗೆ ಕೆಲಸ ಮಾಡಿರುವ ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ನೆನಪಿನಲ್ಲಿ ಉಳಿದಿದೆ. ಆ ದಿನಗಳು ನಿರ್ದೇಶಕ ಕೆ.ಎಂ.ಚೈತನ್ಯ ಮೂರನೆ ಬಾರಿ ಬ್ಯಾನರ್‍ನಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲವು ಚಿತ್ರವು ಹಿಟ್ ಆಗುವುದಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಅಮ್ಮ ಸದ್ದು ಮಾಡಿದಂತೆ ವಿದೇಶದಲ್ಲಿ ಇದೇ ತಿಂಗಳಲ್ಲಿ ಎಲ್ಲಾ ಕಡೆ ಬಿಡುಗಡೆಯಾಗಲಿದೆ. ಪ್ರಮುಖವಾಗಿ ಕುವೈತ್, ಓಮನ್, ಯು.ಎ.ಈ, ದುಬೈ, ಶಾರ್ಜ, ಅಬುದುಬೈ ಇನ್ನಿತರ ಕೇಂದ್ರಗಳಲ್ಲಿ ಅಮ್ಮನ ಹಾರಾಟವಾಗಲಿದೆ. ಅಂತೂ ನಿರ್ಮಾಪಕ ಯೋಗೀಶ್‍ದ್ವಾರಕೀಶ್‍ಗೆ ಚೌಕದಂತೆ ಇದು ಸಹ ಹೆಚ್ಚಿನ ಮೊತ್ತದ ತೆರಿಗೆ ಪಾವಿತಿಸುವಂತೆ ಮಾಡುತ್ತಿರುವುದು ಸಂತಸದ ವಿಷಯವೆಂದು ಸಿನಿಪಂಡಿತರು ಹೇಳುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
4/07/18
ಅಮ್ಮನ ಮುಂದೆ ಎಲ್ಲವು ಶೂನ್ಯ
ವಿಶ್ವದಲ್ಲಿ ಅಮ್ಮನಿಗೋಸ್ಕರ ಮಕ್ಕಳು ಏನು ಬೇಕಾದರೂ ಮಾಡುತ್ತಾರೆ. ವಿನೂತನ ‘ಅಮ್ಮ ಐ ಲವ್ ಯೂ’ ಚಿತ್ರದಲ್ಲಿ ಅಮ್ಮನ ಆರೋಗ್ಯ ಸುಧಾರಿಸಲು ಮಗ ಸ್ವಾಮೀಜಿ ಬಳಿ ಹೋಗುತ್ತಾನೆ. ಆಕೆ ಮೊದಲಿನಂತಾಗಲೂ 48 ದಿನಗಳ ಕಾಲ ಒಬ್ಬ ಸಾಮಾನ್ಯ ಭಿಕ್ಷುಕನಾಗಬೇಕೆಂದು ಹೇಳುತ್ತಾರೆ. ಕೋಟ್ಯಾಧಿಪತಿಯಾಗಿದ್ದು ಅಮ್ಮನ ಸಲುವಾಗಿ ಭಿಕ್ಷುಕನಾಧಾಗ ಅವನ ಹರಕೆ ಫಲಿಸುತ್ತಾ ಇಲ್ಲಾವಾ ಎಂಬುದು ಒಂದು ಏಳೆಯ ಕತೆಯಾಗಿದೆ. ತಮಿಳಿನ ಪಿಚ್ಚೈಕ್ಕಾರನ್ ಅವತರಣಿಕೆಯಾದರೂ ಕನ್ನಡ ಸತ್ವಕ್ಕೆ ನಿರ್ದೇಶಕ ಕೆ.ಎಂ.ಚೈತನ್ಯ ಮೋಸಮಾಡದಂತೆ ಸನ್ನಿವೇಶಗಳನ್ನು ಪೋಣಿಸಿದ್ದಾರೆ. ಕೋಮಾದಲ್ಲಿರುವ ಅಮ್ಮನಿಗಾಗಿ ಶ್ರೀಮಂತ ಭಿಕ್ಷುಕನಾಗುವುದು ಚಂದನವನದಲ್ಲಿ ಹೊಸ ಕಲ್ಪನೆಯಾಗಿದೆ ಎಂದು ಹೇಳಬಹುದು. ತಾಯಿ-ಮಗನ ಪ್ರೀತಿ ವಾತ್ಸಲ್ಯ ಮತ್ತು ಬಾಂದವ್ಯ ಎಲ್ಲದಕ್ಕಿಂತಲೂ ನೋಡುಗನ ಮನಸ್ಸು ಕದಡಿ, ಕೆಲವು ಕಡೆ ಕಣ್ಣನ್ನು ಒದ್ದೆ ಮಾಡಿಸುತ್ತದೆ. ಭಾವನಾತ್ಮಕ ಸಂಬಂದ, ಭಾವುಕತೆಯ ಆಳವಷ್ಟೇ ಹೇಳದೆ, ಮಾನವೀಯತೆಯ ಮೌಲ್ಯವನ್ನು ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನಂಬಿಕೆ ಹಾಗೂ ದೈವ ಮನುಷ್ಯನ ಸಾರ್ವಕಾಲಿಕ ಸತ್ವ ಮತ್ತು ಸತ್ಯ ತಿಳಿಯಲು ಅಮ್ಮನನ್ನು ಒಮ್ಮೆ ನೋಡಲೇಬೇಕು.

ಆಕ್ಷನ್ ದೃಶ್ಯಗಳಲ್ಲಿ ಮಿಂಚಿರುವ ಚಿರಂಜೀವಸರ್ಜಾ ಭಿಕ್ಷುಕನಾಗಿ ಅಭಿನಯದಲ್ಲಿ ಅಷ್ಟು ತಲ್ಲೀಲವಾಗಿಲ್ಲ. ನಿಶ್ವಿಕಾನಾಯ್ಡು ಅವರದು ಮೊದಲ ಚಿತ್ರವಾಗಿದ್ದರಿಂದ ಗ್ಲಾಮರ್‍ಗೆ ಸರಿಹೊಂದುತ್ತಾರೆ ಚಿಕ್ಕಣ್ಣ ವಿಭಿನ್ನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಪ್ರಕಾಶ್‍ಬೆಳವಾಡಿ ಪ್ರಬುದ್ದ ಅಭಿನಯ, ಅಮ್ಮನಾಗಿ ಸಿತಾರಾ ಇಷ್ಟವಾಗುತ್ತಾರೆ. ಗಿರಿದ್ವಾರಕೀಶ್, ಸರ್ದಾರ್‍ಸತ್ಯ, ತರಂಗವಿಶ್ವ ಮುಂತಾದವರು ಕೊಟ್ಟ ಕೆಲಸಕ್ಕೆ ಮೋಸ ಮಾಡಿಲ್ಲ. ಗುರುಕಿರಣ್ ಹಾಡುಗಳಲ್ಲಿ ಎರಡು ನೆನಪಿನಲ್ಲಿ ಉಳಿಯುತ್ತದೆ. ಶೇಖರ್‍ಚಂದ್ರು ಛಾಯಗ್ರಹಣ ಸುಮಾರಾಗಿದೆ. ಚಿತ್ರ ನೋಡಿ ಹೊರಬಂದಾಗ ಕಳೆದುಕೊಂಡ ತಾಯಿ, ದೂರವಿರುವ ಅಮ್ಮ ಖಂಡಿತ ಕಾಡುತ್ತದೆ.
ಸಿನಿ ಸರ್ಕಲ್.ಇನ್ ವಿಮರ್ಶೆ
17/06/18
ಅಮ್ಮನ ಚಿತ್ರ 15ಕ್ಕೆ ಬಿಡುಗಡೆ
ತಮಿಳಿನ ಪಿಚ್ಚೈಕಾರನ್ ಚಿತ್ರ ಕನ್ನಡದಲ್ಲಿ ‘ಅಮ್ಮ ಐ ಲವ್ ಯು’ ಹೆಸರಿನಡಿ ರೂಪಾಂತರಗೊಂಡು ತೆರೆಗೆ ಬರಲು ಸಜ್ಜಾಗಿದೆ. ಹೆಸರೇ ಹೇಳುವಂತೆ ಅಮ್ಮನಾಗಿ ಹಿರಿಯ ನಟಿ ಸಿತಾರ ಕಾಣಿಸಿಕೊಂಡರೆ, ನಾಯಕನಾಗಿ ಚಿರಂಜೀವಿಸರ್ಜಾ, ನಾಯಕಿ ನಿಶ್ವಿಕಾನಾಯ್ಡು ಅವರಿಗೆ ಮೊದಲ ಚಿತ್ರವಾಗಿದೆ. ಶೀರ್ಷಿಕೆ ಗೀತೆಗೆ ಡಾ.ನಾಗೇಂದ್ರಪ್ರಸಾದ್ ಪೆನ್ನು ಕೆಲಸ ಮಾಡಿದರೆ, ಕವಿರಾಜ್ , ಗೌಸಿಪೀರ್ ಸಾಹಿತ್ಯದ ಗೀತೆಗಳಿಗೆ ಗುರುಕಿರಣ್ 14 ವರ್ಷದ ನಂತರ ದ್ವಾರಕೀಶ್ ಸಂಸ್ಥಯ 51ನೇ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಎಲ್ಲಾ ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶನ ಕೆ.ಎಂ.ಚೈತನ್ಯ, ಛಾಯಗ್ರಹಣ ಶೇಖರ್‍ಚಂದ್ರು, ಸಂಕಲನ ಎನ್.ಎಂ.ವಿಶ್ವ, ಸಾಹಸ ರವಿವರ್ಮ-ಗಣೇಶ್ ಅವರದಾಗಿದೆ. ತಾಯಿ-ಮಗನ ಬಾಂದವ್ಯ ಸಾರುವ ಚಿತ್ರಕ್ಕೆ ಬಿ.ಎಸ್.ದ್ವಾರಕೀಶ್-ಯೋಗೀಶ್ ದ್ವಾರಕೀಶ್ ಬುಂಗ್ಗಲೇ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಇದೇ ತಿಂಗಳು ಹದಿನೈದರಂದು ಸುಮಾರು 120 ಪ್ಲಸ್ ಚಿತ್ರಮಂದಿರಗಳಲ್ಲಿ ಮೈಸೂರು ಟಾಕೀಸ್ ಮುಖಾಂತರ ಜನರ ಎದುರು ಬರಲು ವೇದಿಕೆ ಸಿದ್ದಗೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
11/06/18

ಅಮ್ಮ ಐ ಲವ್ ಯುಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ
ಸೆಂಟಿಮೆಂಟ್ ಕತೆಯುಳ್ಳ ‘ಅಮ್ಮ ಐ ಲವ್ ಯು’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಯಾವುದೆ ದೃಶ್ಯಕ್ಕೆ ಕತ್ತರಿ ಹಾಕದೆ ಯು/ಎ ಪ್ರಮಾಣ ಪತ್ರ ನೀಡಿದೆ. ಪ್ರಚಾರದ ಮೊದಲ ಹಂತವಾಗಿ ಚಿತ್ರದ ಹಾಡುಗಳನ್ನು ಶಿವರಾಜ್‍ಕುಮಾರ್, ಉಪೇಂದ್ರ, ಪುನೀತ್‍ರಾಜ್‍ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಕವಿರಾಜ್, ಡಾ.ನಾಗೇಂದ್ರಪ್ರಸಾದ್ ಮತ್ತು ಗೌಸ್‍ಪೀರ್ ಸಾಹಿತ್ಯದ ಗೀತೆಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದು, ಎಲ್ಲಾ ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದರ ಪೈಕಿ ಸಾಧುಕೋಕಿಲ, ಸುನಿಲ್‍ಕಶ್ಯಪ್ ಅಮ್ಮನ ಹಾಡಿಗೆ ಧ್ವನಿಯಾಗಿದ್ದಾರೆ. ತಾರಗಣದಲ್ಲಿ ಚಿರಂಜೀವಿಸರ್ಜಾ, ನವನಾಯಕಿ ನಿಶ್ಚಿಕಾನಾಯ್ಡು, ಅಮ್ಮನ ಪಾತ್ರದಲ್ಲಿ ಸಿತಾರ ಮುಂತಾದವರು ನಟಿಸಿದ್ದಾರೆ. ಕೆ.ಎಂ.ಚೈತನ್ಯ ನಿರ್ದೇಶನ ಮಾಡಿರುವ ಚಿತ್ರವನ್ನು ಯೋಗೀಶ್‍ದ್ವಾರಕೀಶ್‍ಬಂಗಲೆ ನಿರ್ಮಾಣ ಮಾಡಿದ್ದಾರೆ. ದ್ವಾರಕೀಶ್ ಚಿತ್ರ ಸಂಸ್ಥಯ 51ನೇ ಸಿನಿಮಾವು ಜೂನ್ 15ರಂದು ತೆರೆ ಕಾಣುವ ಸಾಧ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
3/06/18


ಅಮ್ಮನ ಕರೆಗೆ ಸ್ಟಾರ್ ಕಲಾವಿದರ ಹಾಜರಾತಿ
ವಿಶ್ವದಲ್ಲಿ ಎಲ್ಲರು ಶರಣಾಗುವುದು ಒಬ್ಬರಿಗೆ. ಅದು ಬೆಲೆಕಟ್ಟಲಾಗದ ಅಮ್ಮ. ಅದರಂತೆ ‘ಅಮ್ಮ ಐ ಲವ್ ಯು’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಮಾಡಲು ಸ್ಟಾರ್ ಕಲಾವಿದರು ಆಗಮಿಸಿದ್ದರು. ದ್ವಾರಕೀಶ್ ಸಂಸ್ಥೆಗೆ 14 ವರ್ಷಗಳ ನಂತರ ಸಂಗೀತ ಸಂಯೋಜಿಸಿರುವ ಗುರುಕಿರಣ್ ಮತ್ತು ನಿರ್ಮಾಪಕ ಯೋಗೀಶ್‍ದ್ವಾರಕೀಶ್ ಸೇರಿಕೊಂಡು ‘ಡಿಜಿಕೆ’ (ದ್ವಾರಕೀಶ್-ಗುರುಕಿರಣ್) ಆಡಿಯೋ ಕಂಪೆನಿ ಹೊರತಂದಿದ್ದು, ಇದು ಕರ್ನಾಟಕದ ಎಲ್ಲಾ ಸಂಗೀತ ನಿರ್ದೇಶಕರ ಸಲುವಾಗಿ ತೆರೆಯಲಾಗಿದೆ ಎಂಬುದಾಗಿ ಹೇಳಿಕೊಂಡರು. ಮೊದಲ ಗೀತೆ ಬಿಡುಗಡೆ ಮಾಡಿದ ಶಿವರಾಜ್‍ಕುಮಾರ್ ಮಾತನಾಡಿ ದ್ವಾರಕೀಶ್ ಕುಟುಂಬ ಜೊತೆ ಪ್ರಾರಂಭದಿಂದಲೂ ಒಡನಾಡವಿತ್ತು. ಅವರ ಚಿತ್ರಗಳನ್ನು ನೋಡಿ ಬೆಳದವರು. ಅವರ ಸಂಸ್ಥೆಯಲ್ಲಿ ನಟಿಸುಲು ಮನಸ್ಸು ಮಾಡಿದರೂ ಕಾಲ ಕೂಡಿ ಬರಲಿಲ್ಲ. ಮುಂದಿನ ವರ್ಷ ಖಂಡಿತ ಮಾಡುತ್ತನೆ. ಅಮ್ಮನ ಹಾಡು ಇರುವ ಚಿತ್ರಗಳು ಹಿಟ್ ಆಗಿದೆ. ಬದುಕಿದ್ದಾಗ ಅಮ್ಮನ ಬೆಲೆ ಗೊತ್ತಾಗೊಲ್ಲ. ಹೋದ ಬಳಿಕ ವ್ಯಥೆ ಪಡುತ್ತೇವೆ ಎಂದು ಹೇಳುತ್ತಾ ಭಾವಕರಾದರು.

ಇದೇ ಸಂಸ್ಥೆಗೆ ಮೂರನೆ ಬಾರಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಗುರುಕಿರಣ್ ಜ್ಘಾನಕೋಶ ಇದ್ದಂತೆ. ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇನೆ ಎಂದು ಹೇಳಿದ್ದು ನಿರ್ದೇಶಕ ಕೆ.ಎಂ.ಚೈತನ್ಯ.

ಎರಡನೆ ಗೀತೆ ಬಿಡುಗಡೆ ಮಾಡಿದ ಧ್ರುವಸರ್ಜಾ ಅಮ್ಮ ಹೆಸರಿನಲ್ಲಿ ಪವರ್ ಇದೆ. ಚಿತ್ರದಲ್ಲಿ ಹಿನ್ನಲೆ ಧ್ವನಿ ನೀಡಿರುವುದು ಖುಷಿ ತಂದಿದೆ ಎಂದರು. ಮೂರನೇ ಹಾಡಿಗೆ ಚಾಲನೆ ನೀಡಿದ ಉಪೇಂದ್ರ ಅವರು ಚಿರಂಜೀವಿಸರ್ಜಾಗೆ ಇದೊಂದು ಸೂಪರ್ ಸಿನಿಮಾವಾಗಲಿದೆ. ಆಪ್ತಮಿತ್ರಗೂ ಇದೇ ರೀತಿ ಹೇಳಿದ್ದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು.

ನಾಲ್ಕನೆ ಹಾಡಿನಲ್ಲಿ ಚೌಕ ಖ್ಯಾತಿಯ ತರುಣ್‍ಸುದೀರ್ ಸಾರಥ್ಯದಲ್ಲಿ ಮೂಡಿಬಂದಿರುವ ಅಮ್ಮನ ಹಾಡಿನಲ್ಲಿ ಭಾರತೀಯ ಚಿತ್ರರಂಗದ ಕಲಾವಿದರು, ಕ್ರೀಡೆ, ರಾಜಕೀಯ, ಇವುಗಳಲ್ಲಿ ಹೆಸರು ಮಾಡಿರುವ ಸಾಧಕರು ಅಮ್ಮನೊಂದಿಗೆ ಇರುವ ಭಾವಚಿತ್ರ ತೋರಿಸಿರುವುದು ವಿಶೇಷವಾಗಿತ್ತು. ಎಲ್ಲಾ ಮಕ್ಕಳ ಮನಸ್ಸಿನಲ್ಲಿ ಇಂತಹ ಹಾಡುಗಳು ಶಾಶ್ವತವಾಗಿ ಉಳಿದಿರುತ್ತೆ. ಎಲ್ಲಾ ತಾಯಂದಿರು ಸಿನಿಮಾ ನೋಡಿ ಹರಸಬೇಕು ಎಂದು ಕೋರಿಕೊಂಡರು ಪುನೀತ್‍ರಾಜ್‍ಕುಮಾರ್.

ಐದನೇ ಹಾಗೂ ಕೊನೆ ಹಾಡನ್ನು ಹೊರತಂದ ವಿ.ಮನೋಹರ್ ಹೇಳುವಂತೆ ಶೀರ್ಷಿಕೆ ಅಪ್ಯಾಯಮಾನವಾಗಿದೆ. ತಾಯಿ, ಚಿತ್ರರಂಗ ಇರುವುದರಿಂದಲೇ ನಾವುಗಳು ಊಟ ಮಾಡುತ್ತಿರುವುದು. ಇಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸೇರುತ್ತೇವೆ ಎಂದರು.
ಚಿತ್ರಕ್ಕೆ ಕರೆ ಬಂದಾಗ ನಟಿಸಲು ಹಿಂದೇಟು ಹಾಕಿದ್ದೆ. ನಿರ್ದೇಶಕರು ಹಠ ಮಾಡಿ ಪಾತ್ರ ಮಾಡಿಸಿದ್ದಾರೆ. ಮಂಗಳೂರಿನಲ್ಲಿ ಭಿಕ್ಷಕನಂತೆ ಫುಟ್‍ಬಾತ್ ಮೇಲೆ ನಟಿಸಿದ್ದು ಮರೆಯಲಾಗದ ಅನುಭವ. ಚಿತ್ರವನ್ನು ಎಲ್ಲಾ ತಾಯಂದಿರಗೂ ಅರ್ಪಿಸುತ್ತೇನೆ ಎಂಬುದು ನಾಯಕ ಚಿರಂಜೀವಿಸರ್ಜಾ ಮಾತಾಗಿತ್ತು. ನಾಯಕಿ ನಿಶ್ವಿಕಾನಾಯ್ಡುಗೆ ಮೊದಲ ಚಿತ್ರವಾಗಿದ್ದರಿಂದ ಎಲ್ಲರು ಪ್ರೀತಿಯಿಂದ ನೋಡಿಕೊಂಡರು ಅಂತ ಸಂಭ್ರಮಿಸಿದರು.

ಅವಸಾನದಲ್ಲಿ ದ್ವಾರಕೀಶ್ ಮೈಕ್ ತೆಗೆದುಕೊಂಡು ನಾವುಗಳು ಇದ್ದೇವೆ ಎಂದರೆ ಅದಕ್ಕೆ ಚಪ್ಪಾಳೆ, ಶಿಳ್ಳೆ ಕಾರಣವಾಗಿದೆ. ಚಿತ್ರರಂಗದಲ್ಲಿ 55 ವರ್ಷ ಸಾಕಿ ಬೆಳೆಸಿದ್ದೀರಾ. ಅದೇ ರೀತಿ ಡಿಜಿಕೆ ಸಂಸ್ಥೆಗೆ ಸಹಕಾರ ನೀಡಿ ಎಂದು ಕಡಿಮೆ ಮಾತನಾಡಿದರು.
ಸುಂದರ ಕಾರ್ಯಕ್ರಮದಲ್ಲಿ ಚಿಕ್ಕಣ್ಣ, ಸಾಧುಕೋಕಿಲ, ಮೇಘನಾರಾಜ್, ಮೇಘನಾಗಾಂವ್ಕರ್, ನಿರ್ಮಾಪಕರುಗಳಾದ ಕೆ.ಮಂಜು, ಉದಯ್‍ಮೆಹ್ತಾ, ಪ್ರಿಯಾಂಕಉಪೇಂದ್ರ, ಸಿನಿಪಂಡಿತರು ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಚಿತ್ರವು ಜೂನ್ 15ರಂದು ರಾಜ್ಯದ್ಯಾಂತ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/05/18
ಜೂನ್ 15ಕ್ಕೆ ಅಮ್ಮ ಐ ಲವ್ ಯು
ತಮಿಳಿನ ಪಿಚ್ಚೈಕ್ಕಾರನ್ ಕನ್ನಡದಲ್ಲಿ ‘’ಅಮ್ಮ ಐ ಲವ್ ಯು’’ ಹೆಸರಿನಲ್ಲಿ ಚಿತ್ರವು ಸಿದ್ದಗೊಂಡಿದೆ. ಅಂದುಕೊಂಡಂತೆ ಆಗಿದ್ದರೆ ಮದರ್ಸ್ ಡೇಗೆ ಬಿಡುಗಡೆಯಾಗಬೇಕಿತ್ತು. ಐಪಿಎಲ್ ಪಂದ್ಯ, ಚುನಾವಣೆ ಇರುವ ಕಾರಣ ಮುಂದೂಡಲಾಗಿತ್ತು. ಆದರೂ ಅಮ್ಮಂದಿರ ದಿನದಂದು ಚಿತ್ರತಂಡದಿಂದ ಒಂದು ಟ್ರೇಲರ್ ಲೋಕಾರ್ಪಣೆಯಾಗಿದೆ. ಮೂಲ ಸಿನಿಮಾದಲ್ಲಿ ವಿಜಯ್‍ಆ್ಯಂಟೋನಿ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಚಿರಂಜೀವಿಸರ್ಜಾ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ನಿಶ್ವಿಕಾನಾಯ್ಡು ಅವರಿಗೆ ಮೊದಲ ಅನುಭವ, ತಾಯಿ ಪಾತ್ರಕ್ಕೆ ಸಿತಾರಾ, ಉಳಿದಂತೆ ಪ್ರಕಾಶ್‍ಬೆಳವಾಡಿ, ಗಿರಿದ್ವಾರಕೀಶ್, ಚಿಕ್ಕಣ್ಣ, ಬಿರಾದಾರ್, ರವಿಕಾಳೆ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಆ ದಿನಗಳು, ಆಟಗಾರ ಚಿತ್ರಗಳ ಖ್ಯಾತಿಯ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದರೆ, ಛಾಯಗ್ರಹಣ ಶೇಖರ್‍ಚಂದ್ರು ಅವರದಾಗಿದೆ. ಇದೇ 28ರಂದು ಹಾಡುಗಳ ಅನಾವರಣವಾಗಲಿದ್ದು, ಮುಂದಿನ ತಿಂಗಳು ಎರಡನೆವಾರದಂದು ಸುಮಾರು 150 ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಯೋಗಿದ್ವಾರಕೀಶ್ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
24/05/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore