HOME
CINEMA NEWS
GALLERY
TV NEWS
REVIEWS
CONTACT US

ವಿದೇಶದಲ್ಲಿ `ಅಂಬಿ ನಿಂಗೆ ವಯಸಾಯ್ತೋ' ಮರು ಬಿಡುಗಡೆ
ಕನ್ನಡದ ಮೇರುನಟ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಅಭಿಮಾನಿಗಳ ಸೃತಿಪಟಲದಲ್ಲಿ `ಅಂಬಿ ನಿಂಗೆ ವಯಸಾಯ್ತೋ' ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ. ಅನಾರೋಗ್ಯ ಕಾಡುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಚಿತ್ರವನ್ನು ವಿದೇಶಗಳಲ್ಲಿ ಮತ್ತೆ ಬಿಡುಗಡೆ ಮಾಡಬೇಕೆಂದು ಅಲ್ಲಿನ ಅಂಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅದಕ್ಕೆ ಮಣಿದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
`ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮೂಲಕವೇ ವಿದೇಶದಲ್ಲಿರೋ ಕನ್ನಡಿಗರಿಗೆ ಕರ್ಣನನ್ನು ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಡಲು ಜಾಕ್ ಮಂಜು ಮುಂದಾಗಿದ್ದಾರೆ. ಈ ಮೂಲಕವೇ ಅಂಬರೀಶ್ ಅವರು ಬದುಕಿದ ರೀತಿಯನ್ನು ಗೌರವಿಸುವ, ಅವರ ಆದರ್ಶಗಳನ್ನು ಪರಿಪಾಲಿಸುವ ನಿರ್ಧಾರವೊಂದನ್ನೂ ಜಾಕ್ ಮಂಜು ಪ್ರಕಟಿಸಿದ್ದಾರೆ.

ವಿದೇಶಗಳಲ್ಲಿ  ಅಂಬಿ ನಿಂಗೆ ವಯಸಾಯ್ತೋ ಬಿಡುಗಡೆಯಿಂದ ಬಂದ ಹಣವನ್ನು ಬಡವರ ಕಲ್ಯಾಣಕ್ಕಾಗಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಜೀವನದುದ್ದಕ್ಕೂ ಕೊಡುಗೈ ದಾನಕ್ಕೆ ಹೆಸರಾಗಿದ್ದ ಅಂಬರೀಶ್ ಅವರ ಆದರ್ಶಗಳನ್ನು ಪಾಲಿಸುತ್ತಿರುವ ನಿರ್ಮಾಪಕರ ಕಾರ್ಯ ನಿಜಕ್ಕೂ ಶ್ಲಾಘನೀಯ.
28/11/18
ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ವೀಕ್ಷಿಸಿದರು ಪವರ್ ಸ್ಟಾರ್!
ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೆ ಮುಂದುವರೆದಿದೆ. ಅತ್ತ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ಸ್ಯಾಂಡಲ್‍ವುಡ್ ತಾರೆಯರೆಲ್ಲ ಸರದಿಯೋಪಾದಿಯಲ್ಲಿ ನೋಡುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೂ ಕೂಡಾ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.

ವಾರದ ಹಿಂದೆಯೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡಲು ಕಾತರರಾಗಿರೋದಾಗಿ ಪುನೀತ್ ಹೇಳಿಕೊಂಡಿದ್ದರು. ಇದೀಗ ಕಡೆಗೂ ಈ ಚಿತ್ರವನ್ನು ನೋಡಿರುವ ಪವರ್‍ಸ್ಟಾರ್ ಖುಷಿಗೊಂಡಿದ್ದಾರೆ. ಅವರು ಅಪಾರವಾಗಿ ಗೌರವಿಸೋ ಅಂಬರೀಶ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ನಿರ್ದೇಶಕ ಗುರುದತ್ತ ಗಾಣಿಗ ಕಾರ್ಯವೈಖರಿಯನ್ನು ಮೆಚ್ಚಿಕೊಳ್ಳುತ್ತಲೇ ಇಂಥಾ ಚೆಂದದ ಚಿತ್ರವೊಂದನ್ನು ನಿರ್ಮಾಣ ಮಾಡಿರುವ ಜಾಕ್ ಮಂಜು ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಇತ್ತೀಚೆಗೆ ಈ ಚಿತ್ರವನ್ನು ನೋಡಿ ಪ್ರೀತಿಯ ಮಾತುಗಳನ್ನಾಡಿದ್ದರು. ಈಗಾಗಲೇ ಹಲವು ತಾರೆಯರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ನೋಡುವ ಹಾದಿಯಲ್ಲಿದ್ದಾರೆ.
7/10/18
ಅಂಬಿ ರಿಯಲ್‍ನಲ್ಲಿ ಲೆವಲ್, ರೀಲ್‍ನಲ್ಲಿ ರೆಬಲ್
ಬಹಳ ವರ್ಷಗಳ ನಂತರ ಅಂಬರೀಷ್ ಅಭಿನಯಿಸಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವು ಎಲ್ಲಾ ಹಂತಗಳಲ್ಲಿ ಆಭಿಮಾನಿಗಳಿಗೆ ಖುಷಿಯಾಗಿದೆ. ವಯಸ್ಸಿಗೆ ತಕ್ಕಂತ ಪಾತ್ರದಲ್ಲಿ ಅಭಿನಯಿರುವ ರೆಬೆಲ್ ಸಿನಿಮಾ ಪೂರ್ತಿ ಆವರಿಸಿಕೊಂಡಿದ್ದಾರೆ. ಧೀರ್ಘ ವರ್ಷಗಳ ಕಾಲ ಸಿನಿಮಾದಲ್ಲಿ ಫೈಟರ್ ಹೆಸರು ಸಂಪಾದಿಸಿರುವ ಅಂಬಿಗೆ ನಿವೃತ್ತಿ ನಂತರ ವಿಧುರನಾಗಿದ್ದರಿಂದ ಸುಪುತ್ರ, ಮೊಮ್ಮಕ್ಕಳೊಂದಿಗೆ ಸುಖದಿಂದ ಇರುತ್ತಾರೆ. ಎಲ್ಲರ ಮನೆಯಲ್ಲಿ ನಡೆಯುವಂತೆ ಸಣ್ಣ ಮನಸ್ತಾಪ, ಆರೋಗ್ಯಕರ ಜಗಳ, ಬೇಸರ ಇಲ್ಲಿಯೂ ಇರುತ್ತದೆ. ಅದನ್ನು ನೋಡುಗನಿಗೆ ಬೇಸರವಾಗದಂತೆ ಸನ್ನಿವೇಶಗಳು ಸಾಗುವುದು ಪ್ಲಸ್ ಪಾಯಿಂಟ್ ಆಗಿದೆ. ಮೊದಲ ನೋಟ, ಮೊದಲ ಕ್ರಶ್, ಮೊದಲ ಕೆಲಸ, ಮೊದಲ ಸಂಬಳ ಹೀಗೆ ಎಲ್ಲಾ ಮೊದಲುಗಳು ನೆನಪಿಸುವ ಅಂಬಿ ಜೀವನ ಚರಿತ್ರೆಯನ್ನು ನವಿರಾಗಿ ತೋರಿಸಲಾಗಿದೆ. ಯುವಕನಾಗಿದ್ದಾಗ ಅಂಬಿ ಇರುವ ಪಾತ್ರವನ್ನು ಸುದೀಪ್ ಸುಲಲಿತವಾಗಿ ಅಭಿನಯಿಸಿ, ಒಂದು ಹಾಡು, ಫೈಟ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ಜೋಡಿಯಾಗಿ ಶೃತಿಹರಿಹರನ್‍ಗೆ ಅವಕಾಶ ಕಡಿಮೆ. ಆದರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ವಿರಾಮದ ನಂತರ ಬರುವ ಮಾಜಿ ಲವ್ವರ್ ಆಗಿ ಸುಹಾಸಿನಿ ಒಂದಷ್ಟು ಹೊತ್ತು ತೆರೆ ಮೇಲೆ ಕಾಣಿಸಿಕೊಂಡು ಚಿತ್ರಕ್ಕೆ ಮೆರೆಗು ತಂದುಕೊಡುತ್ತಾರೆ. ಇಬ್ಬರಿಗೂ ಮೊಮ್ಮಕ್ಕಳು ಇರುವುದರಿಂದ ತೂಕದ ಮಾತುಗಳು ಸನ್ನಿವೇಶಕ್ಕೆ ಅನುಗುಣವಾಗಿದೆ. ಮಗನಾಗಿ ದಿಲೀಪ್ ಇವರ ಅಭಿನಯವನ್ನು ಹೇಳುವ ಹಾಗಿಲ್ಲ. ನವತಾರೆ ವೀಣಾಪೊನ್ನಪ್ಪ ನಾಟಕದಲ್ಲಿ ಬಂದುಹೋಗುವ ಸೊಸೆ ಪಾತ್ರ. ಡ್ರಾಮ ಜ್ಯೂನಿಯರ್ಸ್ ಪುಟ್ಟ ಕಲಾವಿದ, ಕಾಮಿಡಿ ಕಿಲಾಡಿಗಳು ವಿಜೇತ ಶಿವರಾಜ್.ಕೆ.ಆರ್.ಪೇಟೆ, ಬ್ರಹ್ನಗಂಟು ಧಾರವಾಹಿ ನಾಯಕಿ ಅವಕಾಶ ಪಡೆದುಕೊಂಡಿದ್ದಾರೆ. ಅರ್ಜುನ್‍ಜನ್ಯಾ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಚಿತ್ರಕತೆಯನ್ನು ರಚಿಸಿರುವ ಸುದೀಪ್‍ಗೆ ಮೆಚ್ಚುಗೆಯಾಗುವಂತೆ ಮೊದಲ ಬಾರಿ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿರುವ ಗುರುದತ್‍ಗಾಣಿಗ ಭವಿಷ್ಯದಲ್ಲಿ ಉತ್ತಮ ನಿರ್ದೇಶಕರಾಗುವ ಲಕ್ಷಣಗಳು ಗೋಚರಿಸಿದೆ. ಜಿಬಿನ್‍ಜೇಕಬ್ ಛಾಯಗ್ರಹಣ, ರವಿವರ್ಮ-ಥ್ರಿಲ್ಲರ್‍ಮಂಜು ಸಾಹಸ, ಕಿರಣ್ ಸಂಕಲನ ಇವೆಲ್ಲಕ್ಕೂ ಪೂರಕವಾಗಿದೆ. ನಿರ್ಮಾಪಕ ಜಾಕ್‍ಮಂಜುಗೆ ಲಾಭ ತಂದುಕೊಡಲಿದೆ ಎನ್ನಬಹುದು.
ಸಿನಿ ಸರ್ಕಲ್.ಇನ್ ವಿಮರ್ಶೆ
29/05/18

ಅಂಬರೀಷ್‍ರನ್ನು ಮೋಹನ್‍ಲಾಲ್‍ಗೆ ಹೋಲಿಸಿದ ಸುಹಾಸಿನಿ
‘’ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಅಂತಿಮ ಸುದ್ದಿಗೋಷ್ಟಿಗೆ ಸುಹಾಸಿನಿ ಆಗಮಿಸಿದ್ದರು. ಸರದಿಯಂತೆ ಮೊದಲು ಮಾತನಾಡಿದ ಹಿರಿಯ ನಟಿ ಪ್ರಾರಂಭದಲ್ಲಿ ಕರೆ ಬಂದಾಗ ವಿದೇಶದಲ್ಲಿದ್ದೆ. ಹಾಗೂ ಹೀಗೂ ಫ್ಲೈಟ್ ಕ್ಯಾಚ್ ಮಾಡಿಕೊಂಡು ಚಿತ್ರದಲ್ಲಿ ಅಂಬರೀಷ್ ಅವರ ಜೋಡಿಯಾಗಿ ನಟಿಸಿರುವುದು ಖುಷಿ ತಂದಿದೆ. ಕನಸಿನಲ್ಲಿ ನನ್ನ ಪಾತ್ರವು ತೆರೆದುಕೊಳ್ಳುತ್ತದೆ. ಅವರ ನಟನೆಯನ್ನು ನೋಡುತ್ತಿರುವಾಗ ಮೋಹನ್‍ಲಾಲ್ ನೆನಪಿಗೆ ಬರುತ್ತಾರೆ. ಅವರಂತೆ ಅದ್ಬುತ ನಟ. 1980ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದು ಹಲವು ಚಿತ್ರಗಳಲ್ಲಿ ನಟಿಸಲಾಯಿತು. ಗಳತಿ ಸುಮಲತಾ ಅವರೊಂದಿಗೆ ಹೆಚ್ಚು ಸಮಯ ಕಳೆದದ್ದು ಮರೆಯಲಾಗದ ಅನುಭವ ಎಂದರು.

ಮೇಡಂ ಚಿಕ್ಕವರಿದ್ದಾಗ ನಂದಿನಿ ಹೆಸರಿನಲ್ಲಿ ಕಾಣಿಸಿಕೊಂಡಿದ್ದೇನೆ. ಆಗಿನ ಕಾಲದ ಹೆಣ್ಣುಮಕ್ಕಳು ಎದುರಿಸಿದ ಸನ್ನಿವೇಶಗಳು ಇರಲಿದೆ. ಅಂಕಲ್ ಯುವಕನಾಗಿದ್ದ ಪಾತ್ರವನ್ನು ಸುದೀಪ್ ಸರ್ ನಿರ್ವಹಿಸಿದ್ದಾರೆ. ನಮ್ಮದು ಫ್ಲಾಶ್‍ಬ್ಯಾಕ್‍ದಲ್ಲಿ ಬರುತ್ತದೆಂದು ವಿವರವನ್ನು ಬಿಚ್ಚಟ್ಟರು ಶೃತಿಹರಿಹರನ್. ಚಿಕ್ಕ ನಟಿಗೆ ದೊಡ್ಡ ಅವಕಾಶ ಸಿಕ್ಕಿದ್ದು ಈ ಜನ್ಮದ ಪುಣ್ಯ ಅಂತಾರೆ ಸೊಸೆ ಪಾತ್ರ ಮಾಡಿರುವ ವೀಣಾಪೊನ್ನಪ್ಪ.

ಜೀವನದ ಅನುಭವವಿಲ್ಲದೆ, ಕಾರ್ಪೋರೇಟ್ ಜಗತ್ತಿನಲ್ಲಿದ್ದು ಹಣದ ವ್ಯಾಮೋಹದ ಹಿಂದೆ ಹೋಗಿ ಅಪ್ಪನ ವಿರುದ್ದ ಸೆಣೆಸುತ್ತೇನೆ. ಇಂತಹ ದಿಗ್ಗಜ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದು ಜನ್ಮ ಸಾರ್ಥಕವಾಯಿತು ಎಂಬುದು ದಿಲೀಪ್‍ರಾಜ್ ಖುಷಿಯ ನುಡಿ. ಹದಿನೈದು ವರ್ಷ ಮಕ್ಕಳಾಗದೆ ಇರುವವರಿಗೆ ಮಗು ಬಂದರೆ ಹೇಗೆ ನೆಮ್ಮದಿಯಾಗುತ್ತದೋ ಅದೇ ತರಹ ನನಗೂ ಆಗಿದೆ. ಸುದೀಪ್ ಸರ್ ಗೆಳಯನಾಗಿ ನಟನೆ ಮಾಡಲಾಗಿದೆ ಅಂತ ಶಿವರಾಜ್.ಕೆ.ಆರ್.ಪೇಟೆ ಹೇಳಿದರು.

ಅಂಬರೀಷ್ ಸರ್ ಮೊದಲ ಚಿತ್ರಕ್ಕೆ ಸಂಗೀತ ಒದಗಿಸಲಾಗಿದೆ. ಜೋಗಿಪ್ರೇಮ್ ಸಾಹಿತ್ಯದ ಜಲೀಲ ಹಾಡು ತುಂಬಾ ಹಿಟ್ ಆಗಿದೆ. ಅಂಕಲ್ ದೃಶ್ಯಕ್ಕೆ ಹಿನ್ನಲೆ ಸಂಗೀತ ಒದಗಿಸುವಾಗ ಕಣ್ಣು ಒದ್ದೆಯಾಗುತ್ತಿತ್ತು. ನಾನು ಈ ಹಂತಕ್ಕೆ ಬರಲು ಸುದೀಪ್ ಕಾರಣವೆಂದು ಸ್ಮರಿಸಿದರು ಸಂಗೀತ ನಿರ್ದೇಶಕ ಅರ್ಜುನ್‍ಜನ್ಯಾ.

ಎರಡನೆ ಬಾರಿ ನಮ್ಮ ಚಿತ್ರದಲ್ಲಿ ಸುಹಾಸಿನಿ ಅವರು ನಟಿಸಿದ್ದಾರೆ. ಚಿತ್ರ ಶುರುವಾದಾಗ ಯಾವ ಕಲಾವಿದರು ಬೇಕು ಅಂತ ನಿರ್ಧಾರ ಮಾಡಿದಂತೆ ಎಲ್ಲರು ಸಮಯ ಹೊಂದಿಸಿಕೊಂಡು ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಹೊಸಬರಿಗೆ ಅವಕಾಶ ನೀಡಿದಂತೆ ಈ ಚಿತ್ರದಲ್ಲಿ ನಿರ್ದೇಶಕರನ್ನು ಪರಿಚಯಿಸಲಾಗಿದೆ. ಇಪ್ಪತ್ತು ವರ್ಷದ ನಂತರ ಅಂಬರೀಷ್ ಸರ್ ರಾತ್ರಿ ಹೊತ್ತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸುದೀಪ್ ಅವರಿಂದ ಚಿತ್ರರಂಗ ಪ್ರವೇಶಿಸಿದ್ದು, ಅವರಿಂದ ಸಿನಿಮಾ ಇಲ್ಲಿಯವರೆಗೂ ಬಂದಿದೆ. ಜೀವನದಲ್ಲಿ ಮುಂದೆ ಒಳ್ಳೆ ಚಿತ್ರ ಮಾಡಿದರೂ, ಇದಕ್ಕಿಂತ ದೊಡ್ಡ ಸಿನಿಮಾ ಮಾಡೋದಕ್ಕೆ ಆಗೋಲ್ಲ. ದುಬೈ, ಸಿಂಗಪೂರ್ ಹೂರತು ಪಡಿಸಿ ಉಳಿದಂತೆ ವಿದೇಶದಲ್ಲಿ ಬಿಡುಗಡೆ ಮಾಡುವ ಜವಬ್ದಾರಿಯನ್ನು ಗುರುಕಿರಣ್ ವಹಿಸಿಕೊಂಡಿದ್ದಾರೆ. 28ರಂದು 250+ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ರಾಜ್ಯ ಅಲ್ಲದೆ ಬೇರೆ ಕಡೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅಂಬರೀಷ್ ಅವರೊಂದಿಗೆ ಒಂದು ವರ್ಷ ಸಂಪರ್ಕದಲ್ಲಿ ಇರುವುದು ಮರೆಯಲಾಗದು ಎಂದು ನಿರ್ಮಾಪಕ ಜಾಕ್‍ಮಂಜು ಹೇಳುತ್ತಾ ಹೋದರು.

ಚೆನ್ನೈನಿಂದ ನೇರವಾಗಿ ಗೋಷ್ಟಿಗೆ ಆಗಮಿಸಿದ ನಿರ್ದೇಶಕ ಗುರುದತ್‍ಗಾಣಿಗ ಹೇಳುವಂತೆ ಸಿನಿಮಾ ನೋಡುವಾಗ, ನಾನು ಹೇಗಿದ್ದೆ, ಹೇಗಾದೆ, ಏನು ನಡಿತಾ ಇದೆ ಎಲ್ಲವು ಕಣ್ಣ ಮುಂದೆ ಬಂದವು. ಲೆಜೆಂಡ್ ಕಲಾವಿದರ ಜೊತೆ ಕೆಲಸ ಮಾಡಿದ್ದು ಜೀವನದಲ್ಲಿ ಮರೆಯಲಿಕ್ಕೆ ಸಾದ್ಯವಿಲ್ಲವೆಂದು ಕಲಾವಿದರು, ತಂತ್ರಜ್ಘರನ್ನು ನೆನಪಿಸಿಕೊಳ್ಳುತ್ತಾ ದೀರ್ಘಕಾಲದ ಮಾತಿಗೆ ವಿರಾಮ ಹಾಕಿದರು.

ಎಲ್ಲರ ನಂತರ ಮೈಕ್ ಅಂಬರೀಷ್ ಕೇ ಸೇರಿತು. ಅವರ ನುಡಿಗಳು ಹೀಗಿತ್ತು: ಕಲಾವಿದರು, ಮಾದ್ಯಮದವರು ಒಂದೇ ನಾಣ್ಯದ ಸುಂದರ ಮುಖಗಳಂತೆ. ರಜನಿ ಫೋನ್ ಮಾಡಿ ಈ ಸಿನಿಮಾ ಮಾಡಲು ಹೇಳಿದರು. ಚಿತ್ರ ನೋಡಿದಾಗ ಪಾತ್ರ ಮಾಡಲು ಇಷ್ಟವಾಯಿತು. ಒಬ್ಬ ನಿರ್ಮಾಪಕರು ಮುಂದೆ ಬಂದರು. ಅವರ ವರ್ತನೆ ಸರಿಬರಲಿಲ್ಲ. ಮುಂದೆ ಸುದೀಪ್ ಬೆನ್ನಲುಬಾಗಿ ಬಂದರು. ನನ್ನ ಹಾಕ್ಕೊಂದು ಸಿನಿಮಾ ಮಾಡೋದು ಕಷ್ಟ. ಆದರೂ ಇವೆರಲ್ಲರೂ ತಾಳ್ಮೆಯಿಂದ ಮುಗಿಸಿದ್ದಾರೆ. ಹೊರಗಡೆ ಅಂಬರೀಷ್, ಸೆಟ್‍ಗೆ ಬಂದಾಗ ಕಲಾವಿದ. ಹೆದರಬೇಡವೆಂದು ನಿರ್ದೇಶಕರಿಗೆ ಹೇಳುತ್ತಿದ್ದೆ. ಒಳ್ಳೆ ಚಿತ್ರವಾಗಿದ್ದರಿಂದ ಪ್ರಚಾರ ಮಾಡುವ ಅಗತ್ಯವಿಲ್ಲ. 200 ಚಿತ್ರದಲ್ಲಿ ನಟಿಸಿದ್ದರೂ ಇದರಲ್ಲಿರುವ ಕರೆಂಟ್ ಬೇರೆಯಲ್ಲಿ ಕಂಡಿಲ್ಲ. ಇದೇ ನನ್ನದು ಕಡೆ ಚಿತ್ರ ಆಗಬಹುದು ಎಂದಾಗ, ಮಾದ್ಯಮದ ಕಡೆಯಿಂದ ಆರೋಗ್ಯಕರ ಆಕ್ಷೇಪ ವ್ಯಕ್ತವಾದಾಗ ಮುಂದೆ ಒಳ್ಳೆ ಪಾತ್ರ ಬಂದರೆ ನಟಿಸಲು ಅಡ್ಡಿ ಇಲ್ಲ ಎನ್ನುವಲ್ಲಿಗೆ ಮಾತಿನ ಮಂಟಪಕ್ಕೆ ತೆರೆ ಬಿತ್ತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/09/18
ಅಂಬಿ ನಿಂಗ್ ವಯಸ್ಸಾಯ್ತೋ ಮೊದಲ ಮಾತುಗಳು
ತಮಿಳಿನಲ್ಲಿ ಯಶಸ್ವಿಯಾಗಿದ್ದ ಚಿತ್ರವು ಕನ್ನಡದಲ್ಲಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಎನ್ನುವ ಶೀರ್ಷಿಕೆಯಲ್ಲಿ ಬರುತ್ತಿರುವ ಸುದ್ದಿಯು ತಿಳಿದಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ ಕಾರಣ ಪ್ರಚಾರದ ಸಲುವಾಗಿ ಮೊದಲಬಾರಿ ತಂಡವು ಸಿನಿಮಾದ ಹಲವು ವಿಷಯಗಳನ್ನು ಹಂಚಿಕೊಂಡಿತು. ಮೈಕ್ ತೆಗೆದುಕೊಂಡ ನಿರ್ದೇಶಕ 26ರ ಹರೆಯ ಗುರುದತ್‍ಗಾಣಿಗ ತಮ್ಮ ಮಾತಿನಲ್ಲಿ ಕುಂದಾಪುರದಿಂದ ಬಂದು ಸುದೀಪ್ ಅವರಲ್ಲಿ ಕೆಲಸ ಕಲಿತೆ. ಅವರು ದೊಡ್ಡ ಚಿತ್ರಕ್ಕೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದಾರೆ. ಮೂಲ ಕತೆಗಿಂತ ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಕುತೂಹಲ ಮೂಡಸಲಿದೆ ಎಂದರು.

ಸ್ವಾತಿಮುತ್ತು ಅವಧಿಯಲ್ಲಿ ಸುದೀಪ್‍ರಿಂದ ಚಿತ್ರರಂಗದ ವಿಭಾಗಗಳನ್ನು ಅರಿತು ಐದು ಚಿತ್ರಗಳನ್ನು ನಿರ್ಮಾಣ ಮಾಡಲಾಯಿತು. ಅವರೇ ಕರೆದು ನಿರ್ಮಿಸಲು ಹೇಳಿರುವುದು ಅಮೃತಕ್ಕಿಂತ ಹೆಚ್ಚು ಎನ್ನಬಹುದು. ಸುದೀಪ್ ಪಾತ್ರದಲ್ಲಿ ತಲ್ಲೀನರಾಗಿ 23 ದಿವಸ ತಂಡದೊಂದಿಗೆ ಇದ್ದರು. ಇದೇ ತಿಂಗಳು ಕೊನೆವಾರದಂದು ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ. ಬೆಂಗಳೂರು, ಕೇರಳ, ಊಟಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ಮಾಪಕ ಜಾಕ್‍ಮಂಜು ಮಾಹಿತಿ ನೀಡಿದರು.

22 ವರ್ಷಗಳ ಹಿಂದೆ ಇದೇ ಹಾಲ್‍ನಲ್ಲಿ ಬ್ರಹ್ಮ ಚಿತ್ರದ ಗೋಷ್ಟಿ ನಡೆದಿತ್ತು. ಕಾಕತಾಳೀಯ ಎಂಬಂತೆ ಅದೇ ಜಾಗದಲ್ಲಿ ಸೇರಿದ್ದೇವೆ. ಅಂಬಿ ಮಾಮ ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಶೂಟಿಂಗ್ ಮುಗಿಸಲಾಗಿದೆ. ಅವರು ಕ್ಯಾಮಾರ ಮುಂದೆ ನಿಂತರೆ ನಟನಾಗುತ್ತಿದ್ದರು. ಅಂಬಿ ಮಾಮ ಚಿಕ್ಕವರಿದ್ದಾಗ ಪ್ರೀತಿ ಕಂತುಗಳಲ್ಲಿ ಕಾಣಿಸಿಕೊಂಡಿದ್ದು, 35 ನಿಮಿಷ ಬರಲಿದೆ. ಜೋಡಿಯಾಗಿ ಶೃತಿಹರಿಹರನ್ ಇದ್ದಾರೆ. ಹಾಗಂತ ಅವರನ್ನು ಅನುಕರಿಸಿಲ್ಲ. ಸುಹಾಸಿನಿ ಮೇಡಂ ಅಭಿನಯ ಸೂಪರ್. ಅರ್ಜುನ್‍ಜನ್ಯಾ ಒಳ್ಳೆ ಹಾಡುಗಳನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರಿಗೆ ಏನು ಸಲ್ಲಬೇಕೋ ಅದನ್ನು ನೀಡಲಾಗಿದೆ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರವಾದರು ಸುದೀಪ್ .

ಅವಸಾನದಲ್ಲಿ ಮೈಕ್ ಅಂಬರೀಷ್ ಕೈ ಸೇರಿತು. ಹಳಬರು, ಹೊಸಬರು ಇದ್ದಾರೆ. ದಿಲೀಪ್ ಮಗನಾಗಿ ನಟಿಸಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡುವುದು ಕಷ್ಟ. ಸುದೀಪ್‍ಗೆ ಚಿಕ್ಕ ವಯಸ್ಸಿನಿಂದ ನಟನಾಗುವ ಆಸೆ ಇತ್ತು. ಕಾರಣಾಂತರದಿಂದ ಎರಡು ಚಿತ್ರಗಳು ನಿಂತು ಹೋದವು. ಸ್ಪರ್ಶ ಮೂಲಕ ಜನರಿಗೆ ಪರಿಚಿತರಾದರು. ನನ್ನ ವಯಸ್ಸಿಗೆ ತಕ್ಕಂತೆ ಪಾತ್ರ ನೀಡಿದ್ದಾರೆ. ನಿರ್ಮಾಪಕರ ನಟನಾಗಿರುವುದರಿಂದ ಇಷ್ಟ ವರ್ಷ ಇರಲು ಸಾದ್ಯವಾಯಿತು. 500 ರೂ.ಗೆ ಖಳನಾಯಕನಾಗಿ ಅಭಿನಯಿಸಿ, ಮುಂದೆ ಪೋಷಕನಟ,ನಾಯಕ, ಜನನಾಯಕನಾಗಿ ನಿಮ್ಮ ಮುಂದೆ ಇದ್ದೇನೆ. ನೀವುಗಳು ಸಿನಿಮಾ ನೋಡಿ ನನಗೆ ವಯಸ್ಸಾಯ್ತಾ ಅಂತ ಹೇಳುಬೇಕು ಎಂದು ನಕ್ಕರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/08/17
ಅಂಬರೀಷ್ ಅವರ ಯೌವ್ವನದ ದಿನಗಳಲ್ಲಿ ಸುದೀಪ್ ಹೀಗೆ ಕಾಣಿಸ್ತಾರೆ
ಅಂಬರೀಷ್ ಮತ್ತು ಸುದೀಪ್ ಅಭಿನಯದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಕಳೆದ ವಾರ ಅಂಬರೀಷ್ ಅವರ ಯೌವ್ವನದ ದಿನಗಳಲ್ಲಿ ಸುದೀಪ್ ಕಾಣಿಸಿಕೊಂಡಿದ್ದರಿಂದ, ಆ ಭಾಗದ ಚಿತ್ರೀಕರಣದಲ್ಲಿ ಶೃತಿಹರಿಹರನ್ ಜೊತೆ ಇರುವ ಸ್ಟಿಲ್‍ಗಳು ಹೊರಬಂದಿದ್ದು ಅಭಿಮಾನಿಗಳು ಖುಷಿ ಆಗಿದ್ದಾರೆ. ಶೃತಿ ಅವರು ಪಕ್ಕಾ ದಾವಣಿಯಲ್ಲಿ ಮಿಂಚುತ್ತಿದ್ದರೆ, ಸುದೀಪ್ 70 ಕಾಲದ ಶರ್ಟ್,ಪ್ಯಾಂಟ್ ಹಾಕಿಕೊಂಡು ಟವಲ್‍ನ್ನು ಎದೆ ಮೇಲೆ ಇಟ್ಟುಕೊಂಡಿರುವುದು, ಮತ್ತೊಂದರಲ್ಲಿ ಹುಲ್ಲುಗಾವಲಿನ ಮಧ್ಯೆ ನಿಂತುಕೊಂಡು ಇಬ್ಬರು ಮೇಲೆ ನೋಡುತ್ತಿರುವ ಸ್ಟಿಲ್‍ಗಳು ನೋಡುವುದಕ್ಕೆ ಖುಷಿ ಕೊಡುತ್ತದೆ. ಇವರುಗಳು ಯಂಗ್ ಆಗಿ ಕಾಣಿಸುತ್ತಿರುವುದರಿಂದ ಫ್ಲಾಷ್ ಬ್ಯಾಕ್ ಸ್ಟೋರಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಉಳಿದಂತೆ ಅಂಬರೀಷ್‍ಗೆ ಜೋಡಿಯಾಗಿ ಸುಹಾಸಿನಿ, ಮುನಿ ಮುಂತಾದವರು ನಟಿಸಿದ್ದಾರೆ. ಸಂಗೀತ ಅರ್ಜುನ್‍ಜನ್ಯಾ, ಛಾಯಗ್ರಹಣ ಜೆಬಿನ್‍ಜಾಕೋಬ್ ಅವರದಾಗಿದೆ. ಅಂದುಕೊಂಡಂತೆ ಆದರೆ ಆಗಸ್ಟ್‍ನಲ್ಲಿ ತೆರೆ ಕಾಣುವ ಸಂಭವವಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
1/07/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore