HOME
CINEMA NEWS
GALLERY
TV NEWS
REVIEWS
CONTACT US
ಅಂಬಿ ನಮನದಿಂದ ಸಮರ್ಥನಂ ಸಂಸ್ಥೆಗೆ ನೆರವು
ಇಪ್ಪತ್ತೆರಡು ವರ್ಷಗಳ ಹಿಂದೆ ಪ್ರಾರಂಭಗೊಂಡ ಸಮರ್ಥನಂ ಅಂಗವಿಕಲರ ಸಂಸ್ಥೆಯು ಲಾಭದಾಯಕವಲ್ಲದ ಸೇವಾ ಸಂಸ್ಥೆಯು ಬೆಂಗಳೂರಿನ ಜೆ.ಪಿ.ನಗರ ಮತ್ತು ಕರ್ನಾಟಕದ ಇತರೆ ಜಿಲ್ಲೆಗಳು ಅಲ್ಲದೆ ರಾಜ್ಯ, ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ವಿಕಲ ಚೇತನರ ಪುನವರ್ಸತಿ, ವಿಶೇಷ ಶಾಲೆ, ಶಿಕ್ಷಣ, ಊಟ ವಸತಿ, ಅಂಧರ ಕ್ರಿಕೆಟ್, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುತ್ತಾ ಅವರುಗಳು ಜೀವನದಲ್ಲಿ ಸ್ವಾವಲಂಬಿಯಾಗಲು ವಿವಿಧ ತರಭೇತಿಗಳನ್ನು ನೀಡಿ ವಿಕಲಚೇತನರ ಉನ್ನತಿಗೆ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ನಗರದಲ್ಲಿ ವಿಕಲಚೇತನ ಸ್ನೇಹಮಯಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಇದರ ವೆಚ್ಚ ಸುಮಾರು ಆರು ಕೋಟಿ ಆಗಲಿದೆ.

ಇದೇ ಏರಿಯಾದಲ್ಲಿದ್ದ ಅಂಬರೀಷ್ ಅವರು ಅಧಿಕಾರದಲ್ಲಿದ್ದಾಗ ಸಾಕಷ್ಟು ಸಹಾಯ ಮಾಡಿದ್ದಾರೆ. ಅದರಿಂದಲೇ ವಿಕಲಚೇತನ ಕಲಾವಿದರ ಅಭ್ಯಾಸ ಭಾಗಕ್ಕೆ ಇವರ ಹೆಸರನ್ನು ಇಡಲು ನಿರ್ಣಯ ತೆಗೆದುಕೊಂಡಿದ್ದಾರೆ. ಕಟ್ಟಡ ಮುಂದುವರೆಸಲು ಹಣದ ಕೊರತೆ ಎದುರಾಗಿದೆ. ಅದರಿಂದಲೇ ‘ಅಂಬಿ ನಮನ’ ಎನ್ನುವ ಕಾರ್ಯಕ್ರಮವನ್ನು ಏರ್ಪಡಿಸಿ ಇದರಲ್ಲಿ ಬಂದಂತ ಹಣವನ್ನು ಬಿಲ್ಡಿಂಗ್ ಫಂಡ್‍ಗೆ ನೀಡಲಾಗುವುದು. ಸದರಿ ಕಾರ್ಯಕ್ರಮಕ್ಕೆ ಸುಪ್ರಸಿದ್ದ ಗಾಯಕ ಎಸ್.ಬಿ.ಬಾಲಸುಬ್ರಮಣ್ಯಂ ಅವರೊಂದಿಗೆ ಹೆಸರಾಂತ ಗಾಯಕ, ಗಾಯಕಿಯರು, ಸ್ಟಾರ್ ಕಲಾವಿದರು ಆಗಮಿಸುವ ನಿರೀಕ್ಷೆ ಇದೆ. ಹಿರಿಯ ನಟ ಶಿವರಾಂ ನೇತೃತ್ವದಲ್ಲಿ ವಿಶೇಷ ರಸಮಂಜರಿ ಹಾಗೂ ಅಲ್ಲಿನ ಮಕ್ಕಳಿಂದ ನೃತ್ಯವು ನಡೆಯಲಿರುವುದು ವಿಶೇಷ. ಪ್ರವೇಶ ದರ ರೂ.2000,1000 ಮತ್ತು 500. ಮಾರ್ಚ್ 3ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಐದು ಗಂಟೆಗಳ ಕಾಲ ಸಮಾರಂಭವು ನಡೆಯಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/02/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore