HOME
CINEMA NEWS
GALLERY
TV NEWS
REVIEWS
CONTACT US
ಮೈಸೂರಿನಲ್ಲಿ ಫಿಲಿಂ ಸಿಟಿ, ರಾಮನಗರದಲ್ಲಿ ಫಿಲಿಂ ಯೂನಿವರ್ಸಿಟಿ – ಮುಖ್ಯಮಂತ್ರಿ
ಫಿಲಿಂ ಸಿಟಿ ಮೈಸೂರು, ರಾಮನಗರ ಎಂಬ ಗೊಂದಲಕ್ಕೆ ಮುಖ್ಯ ಮಂತ್ರಿಗಳು ತೆರೆ ಏಳೆದಿದ್ದಾರೆ. ನಟ, ರಾಜಕಾರಣಿ ಅಂಬರೀಷ್ ಶ್ರದ್ದಾಂಜಲಿ ‘ಅಂಬಿಗೆ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಈಗಾಗಲೇ ಸಿದ್ದರಾಮಯ್ಯ ಕ್ಷೇತ್ರದಲ್ಲಿ ನೂರು ಎಕರೆ ಜಾಗವನ್ನು ಇದಕ್ಕೆ ಅಂತಲೇ ಮೀಸಲಿಡಲಾಗಿದೆ. ಇದರಲ್ಲಿ ಫಿಲಿಂ ಸಿಟಿಯನ್ನು ತೆರೆಯಲಾಗುವುದು. ಅದರಂತೆ ಮುಂದಿನ ಪೀಳಿಗೆಗೆ ಅನುಕೂಲವಾಗಲೆಂದು ರಾಮನಗರದಲ್ಲಿ ಫಿಲಿಂ ಯೂನಿವರ್ಸಿಟಿ ಸ್ಥಾಪಿಸಲು ಸರ್ಕಾರದ ಯೋಜನೆಯಾಗಿದೆ. ಇವರೆಡಕ್ಕೂ ಡಾ.ರಾಜಕುಮಾರ್, ಅಂಬರೀಷ್ ಹೆಸರಿಡಲಾಗುವುದು. ಡಾ.ರಾಜ್‍ಕುಮಾರ್, ಅಂಬರೀಷ್ ನಿಧನರಾದ ಸಂದರ್ಭದಲ್ಲಿ ಮುಖ್ಯ ಮಂತ್ರಿಯಾಗಿದ್ದು ಅದೃಷ್ಟವೋ, ದುರಾದೃಷ್ಟವೋ ತಿಳಿಯದಾಗಿದೆ. ರಾಜ್‍ಕುಮಾರ್ ನಿಧನರಾದ ಸುದ್ದಿಯು ಅಭಿಮಾನಿಗಳಿಗೆ ತಿಳಿದ ನಂತರ ಸರ್ಕಾರಕ್ಕೆ ಗೊತ್ತಾಗಿದ್ದರಿಂದ ಭದ್ರತಾ ವ್ಯವಸ್ಥೆ ಕಾಪಾಡುವುದರಲ್ಲಿ ವಿಫಲರಾಗಿದ್ದೇವು. ಅಂಬರೀಷ್ ವಿಷಯದಲ್ಲಿ ಹಾಗಾಗಲಿಲ್ಲ. ಎಲ್ಲವನ್ನು ವ್ಯವಸ್ಥಿತವಾಗಿ ನೋಡಿಕೊಂಡಿದ್ದರಿಂದ ಅಹಿತಕರ ಘಟನೆಗಳು ನಡೆದಿಲ್ಲ. ತೆಲುಗು ‘ರೆಬಲ್’ ಚಿತ್ರದ ಹಕ್ಕುಗಳನ್ನು ತೆಗೆದುಕೊಂಡು, ಕನ್ನಡದಲ್ಲಿ ನಿಖಿಲ್‍ಕುಮಾರ್, ಅಂಬರೀಷ್ ಹಾಕಿಕೊಂಡು ಸಿನಿಮಾ ನಿರ್ಮಾಣ ಮಾಡಬೇಕಾಗಿತ್ತು. ಕಾರಣಾಂತರದಿಂದ ಆಗಲಿಲ್ಲ. ಅಂಬಿರೀಷ್ ಹುಡುಗಾಟ ಅವರ ಹುಟ್ಟುಗುಣ. ಅವರು ನಮ್ಮಿಂದ ದೂರವಿದ್ದರೂ ನಮ್ಮಗಳ ಹೃದಯದಲ್ಲಿ ಶಾಶ್ವತವಾಗಿ ಇದ್ದಾರೆಂದು ಹೇಳುತ್ತಾ ಹೋದರು.

ಇದಕ್ಕೂ ಮುನ್ನ ಸಿದ್ದರಾಮಯ್ಯ ಮಾತನಾಡುತ್ತಾ 1973ರಿಂದ ಅಂಬರೀಷ್ ಒಡನಾಟವಿತ್ತು. ಅವರ ಮಾತು ಒರಟು ಆಗಿದ್ದರೂ, ಹೃದಯ ಮೃದುವಾಗಿತ್ತು. ಎಲ್ಲರನ್ನು ಒಂದೇ ರೀತಿ ಕಾಣುತ್ತಾ, ತಾರತಮ್ಯ ಇರದೆ ಇರುವುದು ವಿಶೇಷ ಗುಣವಾಗಿತ್ತು. ಬಯಸದೆ ನಟ, ರಾಜಕಾರಣಿಯಾಗಿ ಎತ್ತರಕ್ಕೆ ಹೋದರು. ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಯಾವುದೇ ಸಮಸ್ಯೆ ಬಂದರೂ ಈಡೇರಿಸುವ ಸಾಮಥ್ರ್ಯ ಅವರಲ್ಲಿತ್ತು. ಮೈಸೂರಿನಲ್ಲಿ ಫಿಲಿಂ ಸಿಟಿಗೆ ಅಂತಲೇ ನನ್ನ ಕ್ಷೇತ್ರದಲ್ಲಿ ನೂರಾರು ಎಕರೆ ಜಾಗ ನೀಡಲಾಗಿದೆ. ಅದಕ್ಕೆ ಅಂಬರೀಷ್ ಹೆಸರಿಡಬೇಕೆಂದು ಸರ್ಕಾರವನ್ನು ಕೋರಿಕೊಂಡರು.

27 ವರ್ಷ ಅವರೊಂದಿಗೆ ಜೀವನ ನಡೆಸಲಾಗಿದೆ ಅಂತ ಮಾತು ಶುರುಮಾಡಿದ ಸುಮಲತಾಅಂಬರೀಷ್ ಭಗವದ್ಗಗೀತೆ ಸಾಲುಗಳನ್ನು ಉಲ್ಲೇಖಿಸಿ, 47 ವರ್ಷಗಳ ಕಾಲ ನಿರ್ಮಾಪಕರು, ನಿರ್ದೇಶಕರು ಒಳ್ಳೆಯ ಪಾತ್ರಗಳನ್ನು ನೀಡಿದಂತೆ, ಅಭಿಮಾನಿಗಳು ಅವರನ್ನು ಎತ್ತರಕ್ಕೆ ಕರೆದುಕೊಂಡು ಹೋಗಿದ್ದಾರೆ. ಯಜಮಾನರ ಸುಂದರವಾದ ಮಾತುಗಳು ಅಭಿಮಾನಿಗಳು, ರಾಜಕಾರಣಿಗಳಿಗೆ ಬೇಸರ ತರಿಸುತ್ತಿರಲಿಲ್ಲ. ಅವರು ಗಂಡ, ಸ್ನೇಹಿತ, ತಂದೆ, ಗೆಳಯನಾಗಿ ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು. ರಾಜನಾಗಿ ಬಂದು ರಾಜನಾಗಿ ಹೋಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಟ್ಟದಲ್ಲಿ ಚೆನ್ನಾಗಿ ನಿರ್ವಹಿಸಿದ್ದಕ್ಕೆ ಮುಖ್ಯಮಂತ್ರಿಗಳು ನಮಸ್ಕರಿಸುತ್ತೇನೆಂದು ಗದ್ಗದಿತರಾದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮಾಜಿ ಸಚಿವ ದಿನೇಶ್‍ಗುಂಡರಾವ್, ಶಿವರಾಜ್‍ಕುಮಾರ್, ಜಯಂತಿ, ಬಿ.ಸರೋಜದೇವಿ, ದೊಡ್ಡಣ್ಣ, ವಿಧಾನ ಪರಿಷತ್ ಸದಸ್ಯ ಜಿ.ಶರವಣ, ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ, ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ನಾಗೇಂದ್ರಪ್ರಸಾದ್, ಜಗ್ಗೇಶ್, ಉಮಾಶ್ರೀ, ರಾಘವೇಂದ್ರರಾಜ್‍ಕುಮಾರ್, ಪುತ್ರ ಅಭಿಷೇಕ್‍ಅಂಬರೀಷ್ , ಸಾರಾಗೋವಿಂದು, ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಇನ್ನು ಅನೇಕ ಮಹನೀಯರು ಅಂಬರೀಷ್‍ನ್ನು ಗುಣಗಾನ ಮಾಡಿದರು.
ಸಿನಿ ಸರ್ಕಲ್.ಇನ್ ನ್ಯೂಸ್
1/12/18


ಪಂಚಭೂತಗಳಲ್ಲಿ ಲೀನರಾದ ಡಾ.ಅಂಬರೀಷ್
ಶನಿವಾರ ರಾತ್ರಿ ಹೃದಯಘಾತದಿಂದ ನಿಧನರಾದ ಡಾ.ಅಂಬರೀಷ್ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂ ಹಾಗೂ ಮಂಡ್ಯಾ ಜನತೆಗೆ ದರ್ಶನಕ್ಕಾಗಿ ಇಡಲಾಗಿತ್ತು. ಸೋಮವಾರ ಮಧ್ಯಾಹ್ನ 3.45 ರಿಂದ ಶುರುವಾದ ಅಂತಿಮ ಕ್ರಿಯೆಯು ಸಂಜೆ 6.45ಕ್ಕೆ ಪತ್ನಿ ಸುಮಲತಾಅಂಬರೀಷ್ ಅವರಿಂದ ಕಡೆಯ ದರ್ಶನ ಹಾಗೂ ಪುತ್ರ ಅಭಿಷೇಕ್ ಅಪ್ಪನ ದೇಹಕ್ಕೆ ಬೆಂಕಿ ಇಡುವುದರೊಂದಿಗೆ ವಿಧಿವಿಧಾನಗಳು ಪೂರ್ಣಗೊಂಡವು. ಇದೇ ಸಂದರ್ಭದಲ್ಲಿ ಸರ್ಕಾರಿ ಗೌರವಗಳನ್ನು ಅರ್ಪಿಸುವ ಸಲುವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ರವಿಚಂದ್ರನ್, ಶಿವರಾಜ್‍ಕುಮಾರ್, ಅರ್ಜುನ್ ಸರ್ಜಾ, ಪುನೀತ್‍ರಾಜ್‍ಕುಮಾರ್, ದರ್ಶನ್, ಯಶ್, ಜಯಪ್ರದ, ಮೋಹನ್‍ಬಾಬು ಸೇರಿದಂತೆ ಬಹುತೇಕ ಕಲಾವಿದರು, ಮೂರು ಪಕ್ಷದ ಹಾಲಿ, ಮಾಜಿ ಮುಖ್ಯ ಮಂತ್ರಿಗಳು, ಸಚಿವರು, ಕೇಂದ್ರ ಮಾಜಿ ಸಚಿವ ಸುಶಿಲ್‍ಕುಮಾರ್‍ಶಿಂದೆ, ಇತರೆ ಗಣ್ಯ ವಕ್ತಿಗಳು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ಅಂಬರೀಷ್ ಜೀವನ ಕುರಿತ ‘ಕರ್ಣನ ಸಂಪತ್ತು’ ಚಿತ್ರಕ್ಕೆ ನಿರ್ದೇಶಕ ಶಾಂತರಾಂ, ಸೋದರ ಮುರಳಿಕೃಷ್ಣ ನಿರ್ಮಾಣ ಮಾಡಿದ್ದು, ಕೆ.ಎಸ್.ಅಶ್ವಥ್, ತಾರಾ, ಹೊನ್ನವಳ್ಳಿಕೃಷ್ಣ ನಟಿಸಿರುವ ಸಿನಿಮಾದ ಮಹೂರ್ತವು ಮೇ 6, 1991 ನಡೆದಿತ್ತು. 16 ವರ್ಷಗಳ ನಂತರ ಅಂದರೆ ಮೇ 6, 2005ರಂದು ತೆರೆ ಕಂಡು ಯಶಸ್ವಿಯಾಗಿತ್ತು. ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
28/11/18\
ರಾಘವೇಂದ್ರ ಚಿತ್ರವಾಣಿಯ ಜನಕ ಆ.ಗಿ. ಸುಧೀಂದ್ರ ರವರ ನಿರ್ಮಾಣದ
"ಒಲವಿನ ಉಡುಗೊರೆ" ಚಿತ್ರದ ಮೂಲಕ ಸುಧೀಂದ್ರ ರವರನ್ನು ನಿರ್ಮಾಪಕನ ಪಟ್ಟಕ್ಕೆ ಕೂರಿಸಿದ ಕಲಿಯುಗದ ಕರ್ಣ ಕನ್ನಡ ಚಿತ್ರರಂಗದ ಹಿರಿಯಣ್ಣ ರೆಬಲ್ ಸ್ಟಾರ್ ಅಂಬರೀಶ್ ರವರ ಅಗಲಿಕೆಯಿಂದ ನಮ್ಮ ಕುಟುಂಬದ ಹಾಗೂ ನಮ್ಮೆಲ್ಲರ ಮನಸ್ಸು ಆಘಾತ ದಿಂದ ದುಃಖಿತವಾಗಿದೆ. ಅಂಬರೀಶ್ ರವರ ಆತ್ಮಕ್ಕೆ ಭಕ್ತಿ ಪೂರ್ವಕ ಶ್ರದ್ಧಾಂಜಲಿ
ಶ್ರೀ ರಾಘವೇಂದ್ರ ಚಿತ್ರವಾಣಿ
ಸುಧೀಂದ್ರ ವೆಂಕಟೇಶ್, ಸುನೀಲ್ ಹಾಗೂ ವಾಸು.
ಸಿನಿ ಸರ್ಕಲ್.ಇನ್ ನ್ಯೂಸ್
26/11/18

ಕನ್ನಡಿಗರ ಪ್ರೀತಿಯ ರೆಬಲ್ ಸ್ಟಾರ್ ಅಂಬರೀಶ್ ರವರು ನಮ್ಮನ್ನೆಲ್ಲಾ ಅಗಲಿರುವುದು ವಿಷಾದದ ಸಂಗತಿ.
ಅವರು ನಮ್ಮ ಚಿತ್ರರಂಗದ ಯಜಮಾನ ಸ್ಥಾನದಲ್ಲಿದ್ದರು
ಈಗ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ನಾವೆಲ್ಲರೂ ತಬ್ಬಲಿಯಾಗಿದ್ದೇವೆ ನಾನು ಅವರ ಅಭಿಮಾನಿಯಾಗಿದ್ದು ಅವರ ಸಿನಿಮಾಗಳ ಸ್ಪೂರ್ತಿ ಯಿಂದಲೇ ನಾನು ಚಿತ್ರರಂಗಕ್ಕೆ ಒಬ್ಬ ನಿರ್ಮಾಪಕನಾಗಿ ಬಂದು ಹೆಬ್ಬುಲಿಯಂತ ಸಿನಿಮಾ ನಿರ್ಮಾಪಕ ನಾಗಿದ್ದೇನೆ.

ಇಂದು ನನ್ನ ಆರಾಧ್ಯ ನಾಯಕ ನನ್ನು ಕಳೆದುಕೊಂಡು ದುಃಖಿತನಾಗಿದ್ದೇನೆ ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ
ಇಂತಿ ದುಃಖಿತ ಅಭಿಮಾನಿ ರಘುನಾಥ್
SRV ಪ್ರೊಡಕ್ಷನ್ಸ್
ಸಿನಿ ಸರ್ಕಲ್.ಇನ್ ನ್ಯೂಸ್
26/11/18


ಬೆಳ್ಳಿರಥದಲಿ ಸೂರ್ಯ ತಂದ ಒಂದು ಕಿರಣ ಇಂದು ನಮಗಿಲ್ಲವಾಯ್ತು.
ಅಸ್ತಂಗತಗೊಂಡಿದ್ದು ಅಂಬಿ ಅಲ್ಲ ಒಬ್ಬ ರಾಜ,ಕರ್ನಾಟಕದ ಮಹಾರಾಜ !ಒಂದು ದೊಡ್ಡ ರಾಜ ದರ್ಬಾರು,ಅಂಬಾರಿಯ ಗಜನಡೆ.ಕನ್ನಡದ ಕವಚ,ನವರಸದ ಒಂದು ಅಸಲಿ ಮುಖ.ಅಡಿಗಡಿಗೆ ಧೂಳೆಬ್ಬಿಸೊ ಧೈತ್ಯ ಜೀವನವ  ಸಂತೋಷವಾಗಿ ಮಡಿಲ ತುಂಬಾ ಎತ್ತಾಡಿಸಿದ ಭೂತಾಯಿಗೆ ನನ ನಮನ.ಇಲ್ಲವಾಗಿದ್ದು ಒಂದು ಲೆಜೆಂಡ್, ೧೯ ನೆ ಪುರಾಣ !ಒಂದು ತುಂಬು ಜೀವನ.ನಮ್ಮೊಳಗಿದ್ದ ಒಬ್ಬ ರೆಬೆಲ್ ಸ್ಟಾರ್,ಎಲ್ಲರ ಮಹಾನ್ ದೋಸ್ತ್ ,
ಹಲವರ ಅಂಬಿ ಕೆಲವರ ಅಂಬಿಗ,ಮನೆಮಂದಿಯ ಅಮರನಾಥ್ , ಪ್ರೀತಿ ಮಳೆಯಲ್ಲಿ ಎಲ್ಲರ ತೊಯ್ಸಿದ ಅಂಬರೀಶ !
ಹಬ್ಬಗಳೆ ನಾಚುವಂತೆ ಬದುಕಿದ್ದ ನಿಮ್ಮ ಜೀವನವ

ಯಾರೂ ನಕಲು ಮಾಡಲಾಗದು..‌ನಿಮಗೆ ನೀವೆ ಸಾಟಿ .ಈ ಕನ್ಡಡ ಮಣ್ಣಿನ ವಾಸನೆ ನಿಮ್ಮನ್ನು ಬಿಡದು ಮತ್ತೆ ಇಲ್ಲೆ ಬರುವರಿದ್ದೀರಿ...ತಾಯಿ ತೊಟ್ಟಿಲು ಲಾಲಿ
ಜೊತೆಗೆ ನಿಮ್ಮ ದೋಸ್ತ್ ಗಳು ,ನಿಮ್ಮ ಅಚ್ಚುಮೆಚ್ಚಿನ ಮಂಡ್ಯ ಮಾತುಗಳು ನಿಮ್ಮ ನಿರೀಕ್ಷೆಯಲ್ಲಿ ,ಬನ್ನಿ.
ಕರ್ನಾಟಕದ ಮುಖ್ಯಮಂತ್ರಿ ಆಗೊ ಆಸೆ ಕೈಗೂಡೊವರೆಗೆ ಈ ಮಣ್ಣಿಂದ ನಿಮಗೆ ನಿರ್ಗಮನ ವಿಲ್ಲ.ಪಾತ್ರ ರೆಡಿ ಇದೆ.ಬಣ್ಣಹಚ್ಚ ಬನ್ನಿ.
ಓಂ ಶಾಂತಿ ಓಂ. ಕೆ.ವಿ .ರಾಜು ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್ ಸಿನಿ ಸರ್ಕಲ್.ಇನ್
26/11/18

ಚಿರನಿದ್ರೆಗೆ ಜಾರಿದ ಅಂಬರೀಷ್
ಕನ್ನಡ ಚಿತ್ರರಂಗದ ಹಿರಿಯ ನಟ, ರಾಜಕಾರಿಣಿ, ಮಾಜಿ ಸಚಿವ ಅಂಬರೀಷ್ ಹೃದಯಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಭಿಮಾನಿಗಳ ಪಾಲಿಗೆ ಕಲಿಯುಗದ ಕರ್ಣ, ರೆಬಲ್ ಸ್ಟಾರ್. ಚಿತ್ರರಂಗದವರಿಗೆ ಹಿರಿಯಣ್ಣನಾಗಿದ್ದ ಅಂಬರೀಷ್ ಆಲಿಯಾಸ್ ಅಮರನಾಥ್ ಅವರ 66 ವರ್ಷಗಳ ವರ್ಣಮಯ ಬದುಕು ಶನಿವಾರ ರಾತ್ರಿ ಅಮರವಾಯಿತು. ಕೆಲ ತಿಂಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಅವರನ್ನು ಅಗಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ರಿಂದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಡ್ಯಾದ ಜನರಿಗೋಸ್ಕರ ಮೃತದೇಹವನ್ನು ಅಲ್ಲಿಗೂ ತೆಗೆದುಕೊಂಡಲು ಹೋಗಲು ಚಿಂತನೆ ನಡೆಸಿದ್ದಾರೆ. ವಿದೇಶದಲ್ಲಿ ಚಿತ್ರೀಕರಣದಲ್ಲಿರುವ ದರ್ಶನ್ ವಿಷಯ ತಿಳಿದು ನಗರಕ್ಕೆ ವಾಪಸಾಗುತ್ತಿದ್ದಾರೆ.

ರೆಬೆಲ್ ಸ್ಟಾರ್ ಎಂದೇ ಹೆಸರಾಗಿದ್ದ ಅಂಬರೀಷ್ ರಾಜಕೀಯವನ್ನು ಪ್ರವೇಶಿಸಿ ಕೇಂದ್ರ ಸಚಿವರಾಗಿದ್ದ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಉದ್ಬವವಾದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅನಾರೋಗ್ಯ ಕಾರಣದಿಂದ ಇತ್ತೀಚಿನ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಕಲಾವಿದರ ಸಂಘಕ್ಕೆ ಜಾಗ ಕಲ್ಪಿಸಲು ಇವರ ಶ್ರಮ ಅಪಾರವಾಗಿದೆ. ತಮಿಳು, ತೆಲುಗು, ಹಿಂದಿ ಸೇರಿದಂತೆ ಎಲ್ಲಾ ಕಲಾವಿದರಿಗೂ ಸ್ನೇಹದಿಂದ ಇದ್ದ, ರೆಬಲ್ ಅವರ ನಿಧನದಿಂದ ಸ್ಯಾಂಡಲ್‍ವುಡ್‍ಗೆ ಅಪಾರ ನಷ್ಟ ಉಂಟಾಗಿದೆ. ಕಳೆದ ತಿಂಗಳು ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಕೊನೆಯಾಗಿತ್ತು. ಅವರ ಅಭಿನಯಿಸಿರುವ ‘ಕುರುಕ್ಷೇತ್ರ’ ಕೊನೆ ಚಿತ್ರವಾಗಿದೆ. ಅಂಬರೀಷ್ ಅವರ ಆತ್ಮಕ್ಕೆ ಸದ್ಗತಿ ದೊರಕಲೆಂದು ‘ಸಿನಿ ಸರ್ಕಲ್.ಇನ್ ನ್ಯೂಸ್’ ದೇವರಲ್ಲಿ ಪ್ರಾರ್ಥಿಸುತ್ತದೆ.
ಸಿನಿ ಸರ್ಕಲ್.ಇನ್ ನ್ಯೂಸ್
26/11/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore