HOME
CINEMA NEWS
GALLERY
TV NEWS
REVIEWS
CONTACT US

ಉದಯಟಿವಿಯಲ್ಲಿಮೊಟ್ಟ ಮೊದಲಬಾರಿಗೆ “ಅಮರ್” ಚಲನಚಿತ್ರ ನಾಳೆ ಸಂಜೆ 6.00ಕ್ಕೆ
ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆಉದಯಟಿವಿಯಲ್ಲಿ "ಅಮರ್" ಚಲನ ಚಿತ್ರ ನಾಳೆ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಅಂಬರೀಷ್‍ಅವರ ಪುತ್ರ ಅಭಿಷೇಕ್ ನಾಯಕನಾಗಿ ನಟಿಸಿರುವ ಮೊದಲಚಿತ್ರಇದಾಗಿದೆ.

ಅಂಬರೀಷ್ ಮೂಲ ಹೆಸರುಅಮರನಾಥ್. ಈ ಸಿನಿಮಾದಲ್ಲಿ ನಾಯಕನ ಹೆಸರೂಕೂಡಾಅದೇ. ಈ ಅಮರ್(ಅಭಿಷೇಕ್) ಒಮ್ಮೆ ಮಾತುಕೊಟ್ಟರೆ ಆ ಮಾತಿಗೆ ಬದ್ಧನಾಗಿರುತ್ತಾನೆ. ಇಂಥವನ ಬದುಕಿನಲ್ಲಿ ಬಾಬ್ಬಿ( ತಾನ್ಯ ಹೋಪ್)ಎಂಬ ಸುಂದರಿಯಎಂಟ್ರಿ. ಸಿನಿಮಾದ ಮಧ್ಯಂತರದಲ್ಲೇ ಈ ಪ್ರೇಮಕ್ಕೊಂದುಟ್ವಿಸ್ಟ್. ಆ ತಿರುವಿನ ನಂತರಅಮರ್ ಬದುಕಿನಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಅದೇ ಸಿನಿಮಾದಕಥೆ.
ಸಂಗೀತದ ವಿಚಾರದಲ್ಲಿಅರ್ಜುನ್‍ಜನ್ಯಉತ್ತಮ ಸ್ಕೋರ್ ಮಾಡಿದ್ದಾರೆ. ಬಹುತೇಕ ಹಾಡುಗಳು ಕಿವಿಗೆ ಇಂಪು ನೀಡುತ್ತವೆ. ಈ ಮೂಲಕ ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಎಂಬುದನ್ನು ಸಾಬೀತು ಪಡಿಸುತ್ತವೆ. ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ಮಲೆನಾಡನ್ನು ಸುಂದರವಾಗಿ ತೋರಿಸಿದ್ದಾರೆ. ಸ್ವಿಟ್ಜಲ್ಯಾಂಡ್‍ನಗಮ್ಯ ತಾಣಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ತೆರೆಯ ಮೇಲೆ ಥೇಟ್‍ಅಪ್ಪನಂತೆಅಭಿಷೇಕ್‍ಕಂಡಿದ್ದಾರೆ. ಕಣ್ಣುಗಳಂತೂ ಅಂಬರೀಶ್‍ಅವರೇಎದುರು ಬಂದು ನಿಂತಂತೆ ಮಿಟುಕುತ್ತವೆ. ತಾನ್ಯಾ ಹೋಪ್ ಸುಂದರವಾಗಿಕಾಣುವುದಲ್ಲದೇ, ಪರ್ಫಾಮೆನ್ಸ್ ನಲ್ಲಿಯೂ ಗಮನ ಸೆಳೆಯುತ್ತಾರೆ. ಚಿಕ್ಕಣ್ಣ ಮತ್ತು ಸಾಧುಕೋಕಿಲಾ ನಟನೆಯ ಹಾಸ್ಯ ದೃಶ್ಯಗಳಲ್ಲಿ ಕಷ್ಟಪಟ್ಟು ನಗಬೇಕಿದೆ. ದರ್ಶನ್‍ಅವರುಅತಿಥಿಯಾಗಿ ಬಂದರೂಇಷ್ಟವಾಗುತ್ತಾರೆ.
ನಾಗಶೇಖರ್ ನಿರ್ದೇಶನದ ಈ ಚಲನಚಿತ್ರವನ್ನುಕಿರುತರೆರೆಯಲ್ಲಿ ನೋಡುವಅವಕಾಶವನ್ನುಉದಯ ಟಿವಿ ಒದಗಿಸುತ್ತಿದೆ.

“ಅಮರ್”ನಾಳೆ ಸಂಜೆ6ಕ್ಕೆಉದಯಟಿವಿಯಲ್ಲಿ ಪ್ರಸಾರವಾಗಲಿದೆ.
9/08/19

ಅಮರ ಮಧುರ ಪ್ರೇಮ
ಮೈನಾ, ಸಂಜು ವೆಡ್ಸ್ ಗೀತಾ ನಿರ್ದೇಶನ ಮಾಡಿದ್ದ ನಾಗಶೇಖರ್ ಈ ಬಾರಿ ಅಂಬರೀಷ್ ಪುತ್ರ ಅಭಿಷೇಕ್‍ಅಂಬರೀಷ್ ಸಲುವಾಗಿ ‘ಅಮರ್’ ಚಿತ್ರಕ್ಕೆ ನಾಜೂಕಾದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಉಂಟು ಮಾಡದೆ ಒಂದು ಒಳ್ಳೆಯ ಪ್ರಯತ್ನ ಮಾಡಿದ್ದಾರೆಂದು ಹೇಳಬಹುದು. ಕಥಾನಾಯಕ ಅಮರ್ ಮತ್ತು ಬಾರ್ಬಿ(ತಾನ್ಯಹೋಪ್) ಬೈಕ್ ಓಡಿಸುವುದರಲ್ಲಿ ನಿಪುಣರು. ಇಬ್ಬರ ನಡುವೆ ಕೋಪದ ಮಾತುಗಳು ಇದ್ದರೂ, ಒಂದು ಹಂತದಲ್ಲಿ ಪ್ರೇಮಿಗಳಾಗುತ್ತಾರೆ. ಅಪ್ಪನ ಹಣದಿಂದ ಅಮರ್ ಬಿಂದಾಸ್ ಜೀವನ ನಡೆಸುತ್ತಿರುತ್ತಾನೆ. ಮಗ ದರೋಡೆಕೋರನೆಂದು ಸುಳ್ಳು ಸುದ್ದಿ ಕೇಳಿ ಬರುವಾಗ ಅಪಘಾತದಲ್ಲಿ ಸಾವಿಗೆ ತುತ್ತಾಗುತ್ತಾರೆ. ಆಕೆಯ ತಂದೆ ಅಗರ್ಭ ಶ್ರೀಮಂತ. ಪ್ರೀತಿಯ ವಿಷಯ ಬಂದಾಗ ಶ್ರೀಮಂತಿಕೆ ಅಡ್ಡ ಬರುತ್ತದೆ. ಮಗಳ ಭವಿಷ್ಯವನ್ನು ಹಸುನಾಗಿಸಲು ಅಪ್ಪನು ಸೆಂಟಿಮೆಂಟ್ ಬಾಣ ಬಿಟ್ಟಾಗ, ಅವಳಿಂದ ದೂರಹೋಗಲು ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾನೆ. ನಿಶ್ಚಿತಾರ್ಥ ನಂತರ ಮದುಮಗ ಆಕಸ್ಮಿಕವಾಗಿ ಸಾಯುತ್ತಾನೆ. ಇದರಿಂದ ವಿಚಲಿತಳಾಗಿ ಎಲ್ಲವನ್ನು ತೊರೆದು ಅಮರ್‍ನಿಂದ ದೂರ ಇರಲು ವಿದೇಶಕ್ಕೆ ಬರುತ್ತಾಳೆ. ಅಲ್ಲಿಗೂ ಬರುವ ಆತ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಸಪಲನಾಗುತ್ತಾನೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆ.

ಆರಡಿಗೂ ಎತ್ತರ ಇರುವ ಸ್ಪುರದ್ರೂಪಿ ಅಭಿಷೇಕ್‍ಅಂಬರೀಷ್ ಪ್ರಥಮ ಚಿತ್ರದಲ್ಲೆ ಅಪ್ಪನಂತೆ ಡೈಲಾಗ್ ಹೇಳುತ್ತಾ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಅಂಬರೀಷ್ ಮಾತನಾಡುತ್ತಿದ್ದ ಪದಗಳು ಇಲ್ಲಿ ಸಂಭಾಷಣೆ ರೂಪದಲ್ಲಿ ಬಂದಿದೆ. ಮೊದಲ ಚಿತ್ರವಾಗಿದ್ದರಿಂದ ಎಲ್ಲರಂತೆ ಸೈಕಲ್ ಹೊಡೆದಿರುವುದು ಕೆಲವು ದೃಶ್ಯಗಳಲ್ಲಿ ಕಂಡು ಬರುತ್ತದೆ. ನಾಯಕಿ ತಾನ್ಯಹೋಪ್ ಗ್ಲಾಮ್ ಲುಕ್‍ನಲ್ಲಿ ಚೆಂದ ಕಾಣಿಸಿ, ಬೈಕ್ ಓಡಿಸಿದ್ದಾರೆ. ದೀಪಕ್‍ಶೆಟ್ಟಿ-ಸುಧಾರಾಣಿ ಪೋಷಕರು, ನಾಯಕಿ ಅಪ್ಪನಾಗಿ ದೇವರಾಜ್, ನಗಿಸಲು ಚಿಕ್ಕಣ್ಣ, ಸಾಧುಕೋಕಿಲ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಂದು ತೂಕದ ಪಾತ್ರದಲ್ಲಿ ದರ್ಶನ್ ಇದ್ದರೆ, ನಿರೂಪ್‍ಭಂಡಾರಿ ಮೂರು ದೃಶ್ಯದಲ್ಲಿ ಬಂದು ಹೋಗುತ್ತಾರೆ. ಅರ್ಜುನ್‍ಜನ್ಯಾ ಸಂಗೀತದಲ್ಲಿ ಮರೆತು ಹೋದೆಯಾ ಹಾಡು ಗುನುಗುವಂತಿದೆ. ಸತ್ಯಹೆಗಡೆ ಸ್ವಿಟ್ಜರ್‍ಲ್ಯಾಂಡ್‍ನ್ನು ಅದ್ಬುತವಾಗಿ ಸೆರೆಹಿಡಿದಿದ್ದಾರೆ. ಚಿತ್ರವು ಚೆನ್ನಾಗಿ ಬರಲೆಂದು ಸಂದೇಶ್ ಹೇರಳವಾಗಿ ಖರ್ಚು ಮಾಡಿರುವುದು ಪರದೆ ಮೇಲೆ ಕಾಣಿಸುತ್ತದೆ. ಚಿತ್ರಮಂದಿರದಿಂದ ಹೂರಬರುವ ಮುನ್ನ ಪ್ರೇಕ್ಷಕರಿಗೆ ನಿರ್ಮಾಪಕರು ಒಂದು ಉಡುಗೊರೆಯನ್ನು ನೀಡಿದ್ದಾರೆ. ಅದು ಏನು ಅಂತ ನೀವುಗಳು ಕೊನೆವರೆಗೂ ನೋಡಿದರೆ ಗೊತ್ತಾಗಲಿದೆ.
ಸಿನಿ ಸರ್ಕಲ್.ಇನ್ ವಿಮರ್ಶೆ
***
31/05/19


ಅಮರ್ ಟಿಕೆಟ್ ಬೆಲೆ ಒಂದು ಲಕ್ಷ
ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಚಿತ್ರಗಳು ಬಿಡುಗಡೆಯಾಗುತ್ತದೆ ಎಂದರೆ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದರು. ಪುನೀತ್‍ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಮೊದಲ ದಿನದ ಊರ್ವಶಿ ಚಿತ್ರಮಂದಿರ ಬೆಳಗಿನ ಪ್ರದರ್ಶನದ ಪೂರ್ಣ ಟಿಕೆಟ್‍ನ್ನು ಒಬ್ಬರೇ ಖರೀದಿ ಮಾಡಿರುವುದು ಸುದ್ದಿಯಾಗಿತ್ತು. ಅದಕ್ಕಿಂತಲೂ ದೊಡ್ಡದಾದ ಮಾಹಿತಿಯೊಂದು ‘ಅಮರ್’ ಚಿತ್ರತಂಡದಿಂದ ಲಭ್ಯವಾಗಿದೆ. ಅಪ್ಪಟ ಅಂಬರೀಷ್ ಅಭಿಮಾನಿಯಾಗಿರುವ ದಾವಣಗೆರೆಯ ಮಂಜುನಾಥ್‍ಗುಂಡಲ್ ನರ್ತಕಿ ಟಾಕೀಸ್‍ನ ಪ್ರಥಮ ಪ್ರದರ್ಶನದ ಮೊದಲನೇ ಟಿಕೆಟ್‍ನ್ನು ಬರೋಬ್ಬರಿ ಒಂದು ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿರುವುದು ಎಲ್ಲರಿಗೂ ಅಚ್ಚರಿ, ಸಂತಸ ತಂದಿದೆ. ಕನ್ನಡ ಚಿತ್ರಗಳನ್ನು ನೋಡುವುದಿಲ್ಲವೆಂದು ಹೇಳುತ್ತಿದ್ದ ಕುಹುಕಿಗಳು ಇನ್ನು ಮುಂದಾದರೂ ಬಾಯಿಗೆ ಬೀಗ ಹಾಕಿದರೆ ಒಳ್ಳೆಯದೆಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಅಭಿಷೇಕ್‍ಅಂಬರೀಷ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದರೆ, ತಾನ್ಯಹೋಪ್ ನಾಯಕಿ. ನಿರ್ದೇಶನ ನಾಗಶೇಖರ್, ಸಂಗೀತ ಅರ್ಜುನ್‍ಜನ್ಯಾ ಅವರದಾಗಿದೆ. ಸಂದೇಶ್ ನಿರ್ಮಾಣ ಮಾಡಿರುವ ಚಿತ್ರವು ಮೇ 31ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/05/19
ಮೇ 31ಕ್ಕೆ ಅಮರ್ ಹಾಜರ್
ಅದ್ದೂರಿ ಚಿತ್ರ ‘ಅಮರ್’ ಕೊನೆಗೂ ಇದೇ 31ರಂದು ಅಂಬರೀಷ್ ಹುಟ್ಟಹಬ್ಬದಂದು ಬಿಡುಗಡೆಯಾಗುತ್ತಿದೆ. ಅಂಬರೀಷ್‍ಗೆ ಖಾಸಾ ದೋಸ್ತ್‍ಗಳಾಗಿ ಶತ್ರಘ್ನಾಸಿನ್ನಾ, ಮೋಹನ್ ಬಾಬು ಮತ್ತು ರಜನಿಕಾಂತ್ ಕೊನೆವರೆಗೂ ಇದ್ದರು. ಪುತ್ರ ಅಭಿಷೇಕ್‍ಅಂಬರೀಷ್ ನಟಿಸಿರುವ ಇದೇ ಸಿನಿಮಾಕ್ಕೆ ಕೈಲಾದಷ್ಟು ಬೆಂಬಲ ನೀಡಲು ಇವರೆಲ್ಲರೂ ಆಸಕ್ತಿ ತೋರಿಸಿದ್ದಾರೆಂದು ನಿರ್ದೇಶಕರು ಮಾಹಿತಿ ನೀಡಿದರು. ಅಂತಹ ದೊಡ್ಡ ಕಲಾವಿದರಿಗೆ ಸೂಕ್ತ ಅನಿಸುವಂತ ಪಾತ್ರ ಇರದಿದ್ದರೆ, ನ್ಯಾಯ ಒದಗಿಸಿದಂತೆ ಆಗುವುದಿಲ್ಲವೆಂಬ ಕಾರಣಕ್ಕೆ ಖುದ್ದು ಅಂಬರೀಷ್ ಇವರೆಲ್ಲರನ್ನು ಸೇರಿಸಿಕೊಳ್ಳಲು ಮನಸ್ಸು ಮಾಡಿರಲಿಲ್ಲವಂತೆ. ಅಲ್ಲದೆ ಎಲ್ಲಾ ಸ್ಟಾರ್‍ಗಳನ್ನು ಸೇರಿಸಿ ಒಂದು ಹಾಡು ಮಾಡುವ ಬಗ್ಗೆ ರೆಬಲ್‍ಸ್ಟಾರ್ ಕನಸು ಆಗಿತ್ತು ಕೂಡ. ಆದರೆ ಅವರೇ ಇಲ್ಲದ ಇಂತಹ ಹಾಡು ಅಗತ್ಯವಿಲ್ಲವೆಂದು ನಿರ್ದೇಶಕ ನಾಗಶೇಖರ್ ಕೈ ಬಿಟ್ಟಿದ್ದಾರೆ.

ಕತೆಯು ಸತ್ಯ ನೈಜ ಘಟನೆಯಾಗಿದ್ದು, 90ರ ದಶಕದಲ್ಲಿ ಪಂಚಭಾಷ ತಾರೆಯ ನಾಯಕಿಯೊಬ್ಬರ ಜೀವನದಲ್ಲಿ ನಡೆದ ಕತೆಯಾಗಿದ್ದು, ಆ ನಟಿ ಯಾರು ಎಂಬುದನ್ನು ತಂಡವು ಹೇಳದೆ ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ಚಂದನವನದಲ್ಲಿ ಮೊದಲು ಎನ್ನುವಂತೆ ಕೊಡಗು ಭಾಷೆಯ ಕಿರಿಣ್‍ಕಾವೇರಪ್ಪ ಸಾಹಿತ್ಯದ ಗೀತೆಯನ್ನು ಜೆಸ್ಸಿಗಿಫ್ಟ್ ಹಾಡಿದ್ದು, ಇದನ್ನು ವೀರಯೋಧರಿಗೆ ಅರ್ಪಿಸಲಾಗಿದೆ. 85 ದಿನಗಳ ಕಾಲ ಮಣಿಪಾಲ್, ಮೈಸೂರು, ಮಡಕೇರಿ, ಸುಲ್ತಾನ್‍ಪುರಿ, ಊಟಿ, ಸ್ವಿಟ್ಜರ್‍ಲ್ಯಾಂಡ್ , ಮಲೇಶಿಯಾ ಮತ್ತು ಕೊಯಮತ್ತೂರುದಲ್ಲಿ ರಿಯಲ್ ಬೈಕ್ ರೇಸ್ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.

ನಾಯಕ ಅಭಿಷೇಕ್‍ಅಂಬರೀಷ್, ನಾಯಕಿ ತಾನ್ಯಾಹೋಪ್. ಇವರೊಂದಿಗೆ ದೇವರಾಜ್, ಸುಧಾರಾಣಿ, ದೀಪಕ್‍ಶೆಟ್ಟಿ, ಸಾಧುಕೋಕಿಲ, ಚಿಕ್ಕಣ್ಣ, ಅರುಣ್‍ಸಾಗರ್ ಮುಂತಾದವರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ದರ್ಶನ್, ನಿರೂಪ್‍ಭಂಡಾರಿ, ಒಂದು ಹಾಡಿಗೆ ರಚಿತಾರಾಮ್ ಸೇರಿದಂತೆ ಮತ್ತಷ್ಟು ಚೆಲುವೆಯರು ಕುಣಿದಿದ್ದಾರೆ. ನಾಲ್ಕು ಹಾಡುಗಳಿಗೆ ಅರ್ಜುನ್‍ಜನ್ಯಾ ಸಂಗೀತವಿದೆ. ಛಾಯಾಗ್ರಹಣ ಸತ್ಯಾಹೆಗಡೆ, ಸಾಹಸ ಥ್ರಿಲ್ಲರ್‍ಮಂಜು-ರವಿವರ್ಮ, ಸಂಕಲನ ಶ್ರೀಕಾಂತ್ ನಿರ್ವಹಿಸಿದ್ದಾರೆ. ಎನ್.ಸಂದೇಶ್ ನಿರ್ಮಾಣ ಮಾಡಿರುವ ಸಿನಿಮಾವು ಸುಮಾರು 250 ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
20/05/19


ಅಪ್ಪನ ಹುಟ್ಟುಹಬ್ಬಕ್ಕೆ ಮಗನ ಚಿತ್ರ
ಎನ್.ಸಂದೇಶ್ ನಿರ್ಮಾಣದ, ನಾಗಶೇಖರ್ ನಿರ್ದೇಶನದ ‘ಅಮರ್’ ಚಿತ್ರ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡಿದೆ. ಮೊದಲಬಾರಿ ರೆಬಲ್‍ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್‍ಅಂಬರೀಷ್ ನಟಿಸಿದ್ದು, ನಾಯಾಕಿಯಾಗಿ ತಾನ್ಯಹೋಪ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದು, ಅವರ ಪಾತ್ರವಾದರೂ ಏನು ಎಂಬುದನ್ನು ತಂಡವು ಗೌಪ್ಯವಾಗಿಟ್ಟಿದೆ. ಉಳಿದಂತೆ ಸುಧಾರಾಣಿ, ರಂಗಿತರಂಗ ಖ್ಯಾತಿಯ ನಿರೂಪ್‍ಭಂಡಾರಿ, ಒಂದು ಟಪ್ಪಾಂಗುಚ್ಚಿ ಹಾಡಿಗೆ ರಚಿತಾರಾಮ್ ಹೆಜ್ಜೆ ಹಾಕಿದ್ದಾರೆ. ಛಾಯಾಗ್ರಹಣ ಸತ್ಯಹೆಗಡೆ, ಸಂಗೀತ ಅರ್ಜುನ್‍ಜನ್ಯಾ, ಸಂಕಲನ ದೀಪು.ಎಸ್.ಕುಮಾರ್, ಸಾಹಸ ಡಾ.ರವಿವರ್ಮ-ಥ್ರಿಲ್ಲರ್‍ಮಂಜು, ನೃತ್ಯ ಇಮ್ರಾನ್‍ಸರ್ದಾರಿಯಾ, ಕಲೆ ಮೋಹನ್.ಬಿ.ಕೆರೆ ಅವರದಾಗಿದೆ. ಅಂಬರೀಷ್ ಹುಟ್ಟಹಬ್ಬದ ಉಡುಗೊರೆಯಾಗಿ ಮೇ 31ರಂದು ಚಿತ್ರವನ್ನು ಜನರಿಗೆ ತೋರಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
21/04/19

ಅಮರ್‍ಗೆ ದರ್ಶನ್ ಸೇರ್ಪಡೆ
ಸಂದೇಶ್ ನಿರ್ಮಾಣದ, ನಾಗಶೇಖರ್ ನಿರ್ದೇಶನದ ‘ಅಮರ್’ ಚಿತ್ರಕ್ಕೆ ಆಂಜನೇಯನ ಬಾಲದಂತೆ ಕಲಾವಿದರು ಸೇರಿಕೊಳ್ಳುತ್ತಿದ್ದಾರೆ. ಈಗ ಬಂದ ಮಾಹಿತಿ ಪ್ರಕಾರ ಛಾಲೆಂಜಿಂಗ್ ಸ್ಟಾರ್ ದರ್ಶನ್ ತಂಡದಲ್ಲಿ ಸೇರಿಕೊಂಡಿದ್ದಾರೆ. ಅವರ ಪಾತ್ರವಾದರೂ ಏನು ಎಂಬುದನ್ನು ತಂಡವು ಗೌಪ್ಯವಾಗಿಟ್ಟಿದೆ. ಸೋಮವಾರ ದಿ ಕ್ಲಬ್‍ದಲ್ಲಿ ನಡೆದ ಚಿತ್ರೀಕರಣದಲ್ಲಿ ಹಾಡಿನ ಸನ್ನಿವೇಶ ಮತ್ತು ಮಾತಿನ ಭಾಗದಲ್ಲಿ ದರ್ಶನ್, ನಾಯಕ ಅಭಿಷೇಕ್‍ಅಂಬರೀಷ್, ಸುಧಾರಾಣಿ ಮತ್ತು ನಿರೂಪ್‍ಭಂಡಾರಿ ಭಾಗವಹಿಸಿದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಅಂಬರೀಷ್‍ರನ್ನು ಅಭಿಮಾನದಿಂದ ಅಪ್ಪಾಜಿ ಅಂತ ಕರೆಯುತ್ತಿದ್ದ ದರ್ಶನ್ ಅವರ ಪುತ್ರನ ಚಿತ್ರಕ್ಕೆ ಖುಷಿಯಿಂದ ಪಾಲ್ಗೋಂಡು ತಮ್ಮ ಭಾಗದ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ತಾನ್ಯಹೋಪ್ ನಾಯಕಿ. ಛಾಯಗ್ರಹಣ ಸತ್ಯಹೆಗಡೆ, ಸಂಗೀತ ಹರಿಕೃಷ್ಣ, ಸಂಕಲನ ದೀಪು.ಎಸ್.ಕುಮಾರ್, ನೃತ್ಯ ಇಮ್ರಾನ್‍ಸರ್ದಾರಿಯಾ, ಕಲೆ ಮೋಹನ್.ಬಿ.ಕೆರೆ ಅವರದಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/01/19
ಅಮರ್‍ಗೆ ರಚಿತಾರಾಮ್ ಟಪ್ಪಾಂಗುಚ್ಚಿ
ಅಭಿಷೇಕ್‍ಅಂಬರೀಷ್ ನಟನೆಯ ಚೊಚ್ಚಲ ಚಿತ್ರ ‘ಅಮರ್’ ದಿನಕ್ಕೊಂದು ಸುದ್ದಿಯಾಗುತ್ತಿದೆ. ಕಳೆದವಾರ ರಂಗಿತರಂಗ ಖ್ಯಾತಿಯ ನಿರೂಫ್‍ಭಂಡಾರಿ ಅತಿಥಿ ಪಾತ್ರ ಮಾಡಿದ್ದಾರೆಂದು ತಿಳಿದು ಬಂದಿತ್ತು. ಈಗ ರಚಿತಾರಾಮ್ ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ನಾಯಕಿ ತಾನ್ಯಹೋಪ್ ಇದ್ದರೂ ಇವರಿಗೇನು ಕೆಲಸವೆಂದು ಕೇಳಬಹುದು. ಕತೆಯಲ್ಲಿ ಒಂದು ಸಂಭ್ರಮದ ಸನ್ನಿವೇಶಕ್ಕೆ ಸೆಲಬ್ರಿಟಿಯೊಬ್ಬರು ಆಗಮಿಸುತ್ತಾರೆ. ಅದಕ್ಕಾಗಿ ಇವರನ್ನು ಆಯ್ಕೆ ಮಾಡಿರುವುದು ಅಲ್ಲದೆ ಒಂದು ಟಪ್ಪಾಂಗುಚ್ಚಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸೆಲಬ್ರಿಟಿ ಆದಕಾರಣ ರಚಿತಾರಾಮ್ ಆಗಿಯೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಗೀತೆಯ ಚಿತ್ರೀಕರಣ ನಡೆಸಲಾಗಿದೆಯಂತೆ. ನಾಗಶೇಖರ್ ನಿರ್ದೇಶನ ಸಿನಿಮಾಕ್ಕೆ ಅರ್ಜುನ್‍ಜನ್ಯಾ ಸಂಗೀತದಲ್ಲಿ ಸತ್ಯಹೆಗಡೆ ಗೀತೆಯನ್ನು ಸೆರೆಹಿಡಿದ್ದಾರೆ. ಅಂದಹಾಗೆ ಮುಕುಂದ ಮುರಾರಿಯಲ್ಲಿ ಭಾವನಾರೊಂದಿಗೆ ಹೆಜ್ಜೆ ಹಾಕಿದ್ದ ರಚಿತಾರಾಮ್ ಇಂತಹ ಅನುಭವ ಎರಡನೆಯದಾಗಿದೆ. ಸದ್ಯ ಇವರು ಉಪೇಂದ್ರ ಅಭಿನಯದ ‘ಐ ಲವ್ ಯು’, ನಿಖಿಲ್‍ಕುಮಾರ್ ಅವರ ‘ಸೀತಾರಾಮಕಲ್ಯಾಣ’ ಮಹಿಳಾ ಪ್ರಧಾನವುಳ್ಳ ‘ಏಪ್ರಿಲ್’ ಮತ್ತು ವಾಹಿನಿ ರಿಯಾಲಿಟಿ ಷೋದಲ್ಲಿ ಬ್ಯುಸಿ ಇದ್ದರೂ, ಸಮಯ ಹೊಂದಿಸಿಕೊಂಡು ಮೈಸೂರಿಗೆ ಹೋಗಿ ಬಂದಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
9/09/18
ಅತಿಹೆಚ್ಚು ಲೊಕೇಶನ್‍ಗಳಲ್ಲಿ ಅಮರ್ ಚಿತ್ರಣ
ರೆಬೆಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ನಟಿಸುತ್ತಿರುವ 'ಅಮರ್' ಚಿತ್ರವು ಅತಿಹೆಚ್ಚು ಲೊಕೇಶನ್‍ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ. ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಅಂಬರೀಶ್ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದ ಸಂದೇಶ ನಾಗರಾಜ್ ಅವರು ಈಗ ಅವರ ಪುತ್ರನ ಸಿನಿಮಾಗೆ ಹಣ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ನಾಗಶೇಖರ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. 90ರ ದಶಕದಲ್ಲಿ ನಡೆದಂಥ ಒಂದು ರಿಯಲ್ ಇನ್‍ಸಿಡೆಂಟ್ ಆಧರಿಸಿ ಈ ಚಿತ್ರಕ್ಕೆ ಕಥೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 10 ದಿನಗಳ ಶೂಟಿಂಗ್ ಮುಗಿಸಿರುವ ಚಿತ್ರತಂಡ ರಾಜ್ಯದ ಬಹುತೇಕ ಲೊಕೇಶನ್‍ಗಳಲ್ಲಿ ಚಿತ್ರೀಕರಣ ನಡೆಸಿದೆ. ಮಣಿಪಾಲದಲ್ಲಿ 7 ದಿನ, ಮಂಗಳೂರಿನಲ್ಲಿ 7 ದಿನ, ಮಡಿಕೇರಿಯಲ್ಲಿ 7 ದಿನ ಹಾಗೂ ಕೇರಳದ ಸುಲ್ತಾನ್ ಬತೇರಿಯಲ್ಲಿ 2 ದಿನಗಳ ಕಾಲ ಚಿತ್ರೀಕರಣ ಮಾಡಿದೆ. ಅಲ್ಲದೆ ಊಟಿಯಲ್ಲಿ 6 ದಿನ ಮತ್ತು ಮೈಸೂರಿನಲ್ಲಿ 2 ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ವಿಶೇಷ ಎಂದರೆ ಈ ಎಲ್ಲಾ ಚಿತ್ರೀಕರಣ ಸಮಯದಲ್ಲಿ ಮಳೆ ಇವರನ್ನು ಹಿಂಬಾಲಿಸಿದೆ.

ಈಗಾಗಲೇ 50 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಅಮರ್ ತಂಡ ಮುಂದಿನ ಷೆಡ್ಯೂಲ್‍ನಲ್ಲಿ ಜೈಪುರದಲ್ಲಿ 5 ದಿನ ಸ್ಕೂಟರ್ ರೇಸ್ ಚಿತ್ರೀಕರಣ ಹಾಗೂ ಹೊರದೇಶದಲ್ಲಿ ಪ್ರಮುಖ ಮಾತಿನ ಭಾಗದ ಚಿತ್ರೀಕರಣ ನಡೆಸುವ ಪ್ಲಾನ್ ಹಾಕಿಕೊಂಡಿದೆ. ಅಲ್ಲದೆ ಚಿತ್ರದ ಕೊನೇಭಾಗವನ್ನು ಬೆಂಗಳೂರಿನಲ್ಲಿ 10 ದಿನಗಳ ಕಾಲ ಚಿತ್ರೀಕರಿಸಲಿದೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿಯಿದೆ. ಸಾಮಾನ್ಯವಾಗಿ ಎಲ್ಲರೂ ಹಾಡುಗಳ ಚಿತ್ರಣಕ್ಕೆ ಫಾರಿನ್‍ಗೆ ಹೋಗುತ್ತಾರೆ. ಆದರೆ ಚಿತ್ರಕಥೆಗೆ ಫಾರಿನ್ ಲೊಕೇಶನ್ ಅಗತ್ಯವಾಗಿತ್ತು ಎನ್ನುವ ಕಾರಣಕ್ಕೆ ಚಿತ್ರತಂಡ ವಿದೇಶದಲ್ಲಿ ಚಿತ್ರೀಕರಣ ನಡೆಸಲಿದೆ. ಈ ಚಿತ್ರದಲ್ಲಿ ಬೈಕ್‍ರೇಸ್ ಪ್ರಮುಖ ಭಾಗವಾಗಿ ಮೂಡಿಬಂದಿದೆ. ಗೋ ಗ್ರೀನ್ ಎನ್ನುವ ಮರಗಿಡ ಬೆಳೆಸಿ ಕಾನ್ಸೆಪ್ಟ್ ಅಡಿ, 50 ಜನ ರಿಯಲ್ ಬೈಕರ್ಸ್ ಈ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇದೆ. ನಾಗಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜಾಲಿಬಾಸ್ಟಿನ್, ಪಾಡ್ಯನ್ ಅವರ ಸಾಹಸ, ಮೋಹನ್ ಬಿ.ಕೆರೆ ಅವರ ಕಲೆ, ದೀಪು ಎಸ್.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಅಭಿಷೇಕ್, ತಾನ್ಯಾ ಹೋಪ್, ಚಿಕ್ಕಣ್ಣ, ಸುಧಾರಾಣಿ, ದೀಪಕ್ ಶೆಟ್ಟಿ, ಸಾಧುಕೋಕಿಲ ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.
25/08/18
ಮದ್ಯಮ ವರ್ಗದ ಹುಡುಗ ಅಮರ್
ಅಂಬರೀಷ್ ಸುಪುತ್ರ ಅಭಿಷೇಕ್‍ಅಂಬರೀಷ್ ಅಭಿನಯದ ‘ಅಮರ್’’ ಚಿತ್ರದ ಮಹೂರ್ತ ಸಮಾರಂಭವು ತಿರುಮಲಗಿರಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮೊದಲ ದೃಶ್ಯವನ್ನು ಯಶಸ್ವಿಯಾಗಿ ಮುಗಿಸಿದ ನಂತರ ತಂಡವು ಮಾತಿಗೆ ಕುಳಿತುಕೊಂಡಿತು. ಮೈಕ್ ತೆಗೆದುಕೊಂಡ ಅಂಬರೀಷ್ ನಿರ್ಮಾಪಕರ ಮೊದಲ ಚಿತ್ರ ಮಣ್ಣಿನದೋಣಿ. ನನ್ನ ಮಗನ ಚಿತ್ರಕ್ಕೆ ಅವರೇ ನಿರ್ಮಾಪಕ ಆಗಿರುವುದು ಸಂತಸ ತಂದಿದೆ. ನಿರ್ದೇಶಕರಿಗೆ ಯಾವುದೇ ಸಲಹೆ ನೀಡಿಲ್ಲ. ಒಳ್ಳೆ ಸಿನಿಮಾ ಮಾಡುವುದು ಅವರ ಜವವ್ದಾರಿಯಾಗಿದೆ. ನಟನಾಗಿ ಎಲ್ಲಾ ಸುಖವನ್ನು ಅನುಭವಿಸಿದ್ದೇನೆ. ಆದರೆ ಪ್ರಸಕ್ತ ಚಿತ್ರರಂಗ ಸುಖದಿಂದ ಇಲ್ಲ. ನಾನಿದ್ದರೆ ಅವನು ಅಭಿನಯಿಸಲು ಹಿಂಜರಿಯುತ್ತಾನೆ. ಅದಕ್ಕೆ ಆ ಕಡೆ ತಲೆ ಹಾಕೊಲ್ಲ. ಅಂಬರೀಷ್ ಮಗ, ನಿರ್ಮಾಪಕರು ಪರಿಚಯಸ್ಥರು ಇರುವುದು ಹೊರಗಡೆ. ಸೆಟ್‍ಗೆ ಹೋದಾಗ ನಿರ್ದೇಶಕರ ನಟನಾಗಬೇಕೆಂದು ಮಗನಿಗೆ ಕಿವಿಮಾತು ಹೇಳಿದ್ದೇನೆಂದು ಹಳೆಯ ನೆನಪುಗಳನ್ನು ಹೇಳುತ್ತಾ ನಗಸಿದರು.

ಕಲಾವಿದರಿಗೆ ಅಭಿಮಾನಿಗಳು ಮುಖ್ಯವಾಗಿರುತ್ತಾರೆ. ಅವರೆ ನಮಗೆ ಲೈಫ್ ಟೈಮ್ ಆಗಿರೋದು. ಅವರಿಗೆ ಪೈಪ್‍ಲೈನ್‍ಆಗಿ ಮಾದ್ಯಮದವರು ಇರುತ್ತಾರೆ. ನಮಗೆ ನೀಡಿದ ಪ್ರೋತ್ಸಾಹ ಅವನಿಗೆ ನೀಡಬೇಕು. ಒಬ್ಬ ಬುದ್ದಿವಂತ ನಿರ್ದೇಶಕ, ಉತ್ತಮ ನಿರ್ಮಾಪಕ ಇದ್ದರೆ ಒಳ್ಳೆ ಸಿನಿಮಾ ಆಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು ಸುಮಲತಾಅಂಬರೀಷ್.

ಇದಕ್ಕೂ ಮುನ್ನ ನಿರ್ದೇಶಕ ನಾಗಶೇಖರ್ ಮಾತನಾಡಿ, ವೃತ್ತಿ ಬದುಕಿನಲ್ಲಿ ಇಂದು ಮಹತ್ವದ ದಿನವಾಗಿದೆ. ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳದವನಿಗೆ ಇಂದು ಅವರ ಮಗನ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ಅದೃಷ್ಟವೆನ್ನಬಹುದು. ಸುಮಲತಾ ಮೇಡಂ, ನಿರ್ಮಾಪಕರು ಶೀರ್ಷಿಕೆ ನೀಡಿದರು. ಅ ಅಕ್ಷರದಿಂದ ಬಿಡುಗಡೆಯಾಗಿರುವ ಸಿನಿಮಾಗಳು ಹಿಟ್ ಆಗಿದೆ. ಅದರಂತೆ ಇದನ್ನೆ ಇಡಲಾಗಿದೆ. ಮದ್ಯಮ ವರ್ಗದ ಹುಡುಗನ ಅಮರಪ್ರೇಮ ಕತೆಯಲ್ಲಿ ಲವ್, ಆಕ್ಷನ್, ಸೆಂಟಿಮೆಂಟ್ಸ್, ಎಮೋಶನ್ಸ್ ಹೀಗೆ ಎಲ್ಲಾ ಅಂಶಗಳು ಇರಲಿದೆ. ಸಂಗೀತ ಅರ್ಜುನ್‍ಜನ್ಯಾ. ಛಾಯಗ್ರಾಹಕ ಸತ್ಯಹೆಗಡೆ, ನೃತ್ಯ ಇಮ್ರಾನ್‍ಸರ್ದಾರಿಯಾ, ಸಂಕಲನ ದೀಪು.ಎಸ್.ಕುಮಾರ್ ಮತ್ತು ಕಲಾನಿರ್ದೇಶನ ಮೋಹನ್.ಬಿ.ಕೆರೆ ಅವರುಗಳು ಇರುವುದರಿಂದ ಸೂಪರ್ ಹಿಟ್ ಆಗುತ್ತದೆಂಬ ವಿಶ್ವಾಸವಿದೆ. ಮುಂದಿನ ವಿವರಗಳನ್ನು ಜೂನ್ ತಿಂಗಳಲ್ಲಿ ಅದ್ದೂರಿಯಾಗಿ ಲಾಂಚ್ ಮಾಡುವಾಗ ಹೇಳುವುದಾಗಿ ತಿಳಿಸಿದರು.

ಅಭಿನಯಕ್ಕೆ ತಯಾರಿ ಮಾಡಿಕೊಂಡಿದ್ದೇನೆ. ಕಷ್ಟಪಟ್ಟು ಮಾಡುತ್ತೇನೆ ಎಂದಷ್ಟೇ ಹೇಳಿದರು ನಾಯಕ ಅಭಿಷೇಕ್‍ಅಂಬರೀಷ್ . ನಾಯಕಿ ತಾನ್ಯಹೋಪ್ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು.

ಸಿನಿಮಾ-ರಾಜಕೀಯಕ್ಕೆ ಬರುವ ಮುಂಚೆ ಅಂಬರೀಷ್ 50 ವರ್ಷದ ಪರಿಚಯದವರಾಗಿದ್ದಾರೆ. ಮಣ್ಣಿನದೋಣಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಚಿತ್ರರಂಗಕ್ಕೆ ಬರಬೇಡವೆಂದು ಬುದ್ದಿ ಹೇಳಿದ್ದರು. ಅವರ ಮಾತನ್ನು ಕೇಳದೆ ನಿರ್ಮಾಣ ಮಾಡಿದ ಚಿತ್ರವು 100 ದಿನ ಪ್ರದರ್ಶನ ಕಂಡಿತು. ಇಂದು ಅವರ ಮಗನ ಚಿತ್ರಕ್ಕೆ ಮಗ ಸಂದೇಶ್‍ಗೆ ಜವಬ್ದಾರಿ ನೀಡಿದ್ದೇನೆ. ಇದು ಒಂಥರ ಕಾಕತಾಳೀಯ ಎನ್ನಬಹುದು ಎಂದು ಸಂದೇಶ್‍ನಾಗರಾಜ್ ಖುಷಿ ಹಂಚಿಕೊಂಡರು.

ಮುಂದಿನ ತಿಂಗಳು ನಾಯಕನನ್ನು ಪರಿಚಯಿಸುವ ಕಾರ್ಯಕ್ರಮಕ್ಕೆ ಟಾಲಿವುಡ್, ಕಾಲಿವುಡ್, ಮಾಲಿವುಡ್‍ನಿಂದ ಸ್ಟಾರ್ ಕಲಾವಿದರು ಆಗಮಿಸುವ ನಿರೀಕ್ಷೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/05/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore