HOME
CINEMA NEWS
GALLERY
TV NEWS
REVIEWS
CONTACT US
ಅಜ್ಜನಾದ ದತ್ತಣ್ಣನಿಗೆ ಪ್ರಶಸ್ತಿ?
‘ಅಜ್ಜ’ ಚಿತ್ರದಲ್ಲಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಹಿರಿಯ ನಟ ದತ್ತಣ್ಣ ಅವರಿಗೆ ಈ ಸಾಲಿನ ಪ್ರಶಸ್ತಿ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬುದವಾರ ನಡೆದ ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ತಂಡವು ಇದೇ ಮಾತನ್ನು ಹೇಳಿಕೊಂಡಿತು. ನಿರ್ದೇಶಕರ ಅಜ್ಜ ಕಾದಂಬರಿ ಆಧಾರಿತವಾಗಿದ್ದು ಹಾರರ್, ಥ್ರಿಲ್ಲರ್, ಮಿಸ್ಟರಿಯಲ್ಲಿ ಸಾಮಾಜಿಕ ಕಳಕಳಿ ಇರುವ ಕತೆಯಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಕನಿಷ್ಟ ಒಂದು ಅವಧಿಗಾದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸಬೇಕೆಂದು ಸರ್ಕಾರವು ಆದೇಶ ಹೊರಡಿಸುತ್ತದೆ. ನಾಲ್ಕು ವೈದ್ಯರು ಮೂಲಭೂತ ಸೌಕರ್ಯವಿಲ್ಲದ ಸ್ಥಳಕ್ಕೆ ಶುಶ್ರೂಷೆ ಮಾಡಲು ಹೋದಾಗ ದುರಂತಕ್ಕೆ ಸಿಕ್ಕಿಹಾಕಿ ಕೊಳ್ತಾರೆ. ಅಲ್ಲಿ ಅಜ್ಜ, ಮೊಮ್ಮಗಳು ಸಿಗುತ್ತಾರೆ. ಮುಂದೇನು ಎನ್ನುವುದನ್ನು ಸಿನಿಮಾ ನೋಡಬೇಕು. ಕೊಡಗು, ಕಾರವಾರ, ಉಡುಪಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವೇಮಗಲ್ ಜಗನ್ನಾಥ್ ಮಾಹಿತಿ ಬಿಚ್ಚಿಟ್ಟರು.

ವಾಸ್ತವ ಭ್ರಮೆ ಇವುಗಳಲ್ಲಿ ಗಂಡ-ಹೆಂಡತಿ ಅನ್ನೋನ್ಯತೆ, ಮಗ-ತಂದೆ ಸಂಬಂದ, ಇವತ್ತಿನ ಯುವ ಜನಾಂಗದ ಪ್ರತಿನಿದಿಯಾಗಿ ಮಗ. ತಾತ ಉಳಿದುಕೊಂಡಿರುವ ಜಾಗವನ್ನು ಕಬಳಿಸಲು ದುರುಳರ ತಂಡವೊಂದು ಬರುವುದು. ನಮ್ಮ ಕಾಲಘಟ್ಟದ ರಾಜಕೀಯ, ಯುವ ಪೀಳಿಗೆಯು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ. ಪ್ರಶಸ್ತಿ ವಿಷಯಕ್ಕೆ ಬರುವುದಾದರೆ ಅದು ಜನರಿಗೆ ಬಿಟ್ಟಿದ್ದು. ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆಂದು ಚಂಡನ್ನು ವರ್ಗಾಯಿಸಿದರು ದತ್ತಣ್ಣ.
ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಸಾಯಿಕಿರಣ್, ಮೊಮ್ಮಗಳಾಗಿ ಪೃಥ್ವಿಶ್ರೀ, ಖಳನಟ ಲತೀಶ್‍ಮಡಕೇರಿ ಉಪಸ್ತಿತರಿದ್ದರು. ತಾರಗಣದಲ್ಲಿ ರಾಜ್‍ಪ್ರವೀಣ್, ದೀಪಕ್‍ರಾಜ್, ಅಶ್ವಿನಿ, ಮಾದುರಿ ಶಶಿಕುಮಾರ್ ನಟನೆ ಇದೆ. ವಕೀಲ ಮೈಸೂರಿನ ಕೆ.ಪಿ. ಚಿದಾನಂದ್ ನಿರ್ಮಾಪಕರಾಗಿದ್ದು, ನವಂಬರ್ ಕೊನೆವಾರದಂದು ಸುಮಾರು 70 ಕೇಂದ್ರಗಳಲ್ಲಿ ಅಜ್ಜನನ್ನು ನೋಡಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
24/11/18
ಅಜ್ಜನ ಹಾಡುಗಳ ಸಮಯ
‘ಅಜ್ಜ’ ಚಿತ್ರದ ಹೆಸರು ಕೇಳಿದಾಗ ಇದೊಂದು ತಾತ,ಮೊಮ್ಮಗಳ ಸಂಬಂದ ಇರಬಹುದು ಅಂತ ಭಾವಿಸುತ್ತಾರೆ. ಅದರಂತೆ ಹಾರರ್, ಥ್ರಿಲ್ಲರ್, ಮಿಸ್ಟರ್‍ದಲ್ಲಿ ಸಾಮಾಜಿಕ ಕಳಕಳಿ ಇರುವ ಕತೆಯಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಕನಿಷ್ಟ ಒಂದು ಅವಧಿಗಾದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸಬೇಕೆಂದು ಸರ್ಕಾರವು ಆದೇಶ ಹೊರಡಿಸಿದೆ. ನಾಲ್ಕು ವೈದ್ಯರು ಮೂಲಭೂತ ಸೌಕರ್ಯವಿಲ್ಲದ ಸ್ಥಳಕ್ಕೆ ಶುಶ್ರೂಷೆ ಮಾಡಲು ಹೋದಾಗ ದುರಂತಕ್ಕೆ ಸಿಕ್ಕಿಹಾಕಿ ಕೊಳ್ತಾರೆ. ಅಲ್ಲಿ ಅಜ್ಜ, ಮೊಮ್ಮಗಳು ಸಿಗುತ್ತಾರೆ. ಮುಂದೇನು ಎನ್ನುವುದನ್ನು ಸಿನಿಮಾ ನೋಡಬೇಕು. ಕೊಡಗು, ಕಾರವಾರ, ಉಡುಪಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವೇಮಗಲ್ ಜಗನ್ನಾಥ್ ಮಾಹಿತಿ ಬಿಚ್ಚಿಟ್ಟರು.

ಯಾವ ಜಾನರ್ ಕತೆ ಇರಬಹುದೆಂದು ನಿರ್ದೇಶಕರನ್ನು ಕೇಳಿದಾಗ, ಅವರು ಹೇಳಿದ ಪಾತ್ರದ ವೈಶಿಷ್ಟ್ಯ ವಿಶೇಷವಾಗಿತ್ತು. ಪ್ರಭೇದ ವಿಶಿಷ್ಟವಾಗಿದೆ. ಮೊಮ್ಮಗಳ ಸಂಬಂದದ ಜೊತೆಗೆ ಅಲ್ಲಲ್ಲಿ ಶಾಕ್ ನೀಡಿದ್ದಾರೆ. ಚಿತ್ರೀಕರಣಕ್ಕಾಗಿ ಕೊಡಗುದಲ್ಲಿ ಪುರಾತನ ಅತಿಥಿ ಗೃಹವನ್ನು ಮುಂಗಡವಾಗಿ ಕಾಯ್ದರಿಸಲಾಗಿದ್ದು, ಕೊನೆ ಘಳಿಗೆಯಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೊಡಲಿಲ್ಲ. ಮುಂದೆ ಯಾವುದೇ ಚಿತ್ರಕ್ಕೆ ಇಂತಹ ಅವಘಡಗಳು ಆಗದಂತೆ ವಾಣಿಜ್ಯ ಮಂಡಳಿಯವರು ಮಧ್ಯಸ್ತಿಕೆ ವಹಿಸಬೇಕೆಂದು ಅಜ್ಜನ ಪಾತ್ರ ಮಾಡಿರುವ ದತ್ತಣ್ಣ ಕೋರಿಕೊಂಡರು.

ಇದಕ್ಕೆ ಸ್ಪಂದಿಸಿದ ಅಧ್ಯಕ್ಷರಾದ ಎಸ್.ಎ.ಚಿನ್ನೆಗೌಡ ಶೂಟಿಂಗ್ ಹೋಗುವ ಮುಂಚೆ ಕಚೇರಿಗೆ ತಿಳಿಸಿದಲ್ಲಿ ಸರ್ಕಾರದ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ದತ್ತಣ್ಣ ಸೌಮ್ಯತೆ, ಸರಳತೆ, ನಯ, ವಿನಯದಿಂದ ಹೆಸರು ಮಾಡಿದ್ದಾರೆ. ರಂಗಭೂಮಿಯಿಂದ ಬಂದವರು. ಡಾ.ರಾಜ್‍ಕುಮಾರ್ ಪ್ರಶಸ್ತಿಗಳು ಸಾಕಷ್ಟು ಬಂದಿವೆ. ಬೇರೆಯವರಿಗೆ ಕೊಡಿ ಎಂದು ಹೇಳುತ್ತಿದ್ದರು. ದತ್ತಣ್ಣ ಅವರಿಗೆ ಅದೇ ರೀತಿ ಆಗಿದೆ ಎಂದರು. ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಲು ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂಬುದು ಸಾಯಿಕಿರಣ್ ಮಾತು.

ತಾರಗಣದಲ್ಲಿ ನಿರ್ಮಾಪಕರ ಪುತ್ರಿ ಬೇಬಿಪೃಥ್ವಿ, ರಾಜ್‍ಪ್ರವೀಣ್, ದೀಪಕ್‍ರಾಜ್, ಅಶ್ವಿನಿ, ಮಾದುರಿ ಶಶಿಕುಮಾರ್ ನಟನೆ ಇದೆ. ವಕೀಲ ಮೈಸೂರಿನ ಕೆ.ಪಿ. ಚಿದಾನಂದ್ ನಿರ್ಮಾಪಕರಾಗಿ ಹೊಸ ಅನುಭವ ವೆಂದು ಹೇಳಿಕೊಂಡರು. ಟೋಟೆಲ್ ಕನ್ನಡ ಸಂಸ್ಥೆಯು ಮೊದಲ ಬಾರಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
7/08/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore