HOME
CINEMA NEWS
GALLERY
TV NEWS
REVIEWS
CONTACT US

ಬಯಸುವುದೇ ಒಂದು ದೈವ ಬರೆಯುವುದು ಮತ್ತೋಂದು
ಹಿರಿಯ ನಿರ್ದೇಶಕ ದೊರೆ-ಭಗವಾನ್ ಇಪ್ಪತ್ತಾರು ವರ್ಷಗಳ ನಂತರ ಕತೆ, ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಆಡುವ ಗೊಂಬೆ’ ಚಿತ್ರವನ್ನು ನೋಡುವಾಗ ಕಸ್ತೂರಿನಿವಾಸ, ಹೊಸಬೆಳಕು, ಎರಡು ಕನಸು ಚಿತ್ರಗಳು ನೆನಪಿಗೆ ಬರುತ್ತವೆ. ಇವೆಲ್ಲಕ್ಕೂ ಆಕ್ಷನ್ ಕಟ್ ಹೇಳಿದ್ದು ಇದೇ ಜೋಡಿಗಳು. ಹಾಗಂತ ಇದರ ಕತೆ ಆಗಿರುವುದಿಲ್ಲ. ಭಗವಾನ್ ಇಡಲಾದ ಶಾಟ್ಸ್‍ಗಳು ನೋಡಿಗರಿಗೆ ಹಿತವೆನಿಸುತ್ತದೆ. ಕಸ್ತೂರಿನಿವಾಸದಲ್ಲಿ ಡಾ.ರಾಜ್‍ಕುಮಾರ್ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಈಗಿನ ತಲೆಮಾರಿಗೆ ತಕ್ಕಂತೆ ಇದರಲ್ಲಿ ನಾಯಕನಿಗೆ ಯಾರು ಒಲಿಯುವುದಿಲ್ಲ. ಅದಕ್ಕೆ ಹೇಳುವುದು ನಾವು ಅಂದುಕೊಂಡಂತೆ ಆಗುವುದಿಲ್ಲ. ಎಲ್ಲವು ಮೇಲೊಬ್ಬ ಸೂತ್ರಧಾರ ಆಡಿಸಿದಂತೆ ನಾವೆಲ್ಲಾ ಆಡುವ ಗೊಂಬೆಗಳಂತೆ ಇರಬೇಕಾಗುತ್ತದೆ. ಕತೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಸುಖ ಸಂಸಾರದಲ್ಲಿ ಬಾಮೈದ ಇರುತ್ತಾನೆ. ಆಕೆಗೆ ಮೊದಲ ಮಗಳನ್ನು ತಮ್ಮನಿಗೆ ಕೊಟ್ಟು ಮದುವೆ ಮಾಡಿಸುವ ಬಯಕೆ. ಅದು ಆಗುವ ಸಂದರ್ಭದಲ್ಲಿ ತಿರುವು ಪಡೆದುಕೊಳ್ಳುತ್ತದೆ. ಕೊನೆಗೆ ಎರಡನೆ ಮಗಳನ್ನು ಒಪ್ಪಿಸಿದಾಗ ಮತ್ತೋಂದು ಕುತೂಹಲ ಸನ್ನಿವೇಶಗಳು ಬರುತ್ತವೆ. ಇದಕ್ಕೂ ಮುನ್ನ ಪ್ರೀತಿಸಿದವಳನ್ನು ಮದುವೆ ಆಗುತ್ತಾನಾ ಅದು ಆಗದು? ಇದರ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಒಮ್ಮೆ ನೋಡಿ ಬರುವುದಾದರೆ ಯಾವ ಅಡ್ಡಿಯೂ ಇಲ್ಲ.

ಹಿರಿಯ ತಂದೆಯಾಗಿ ಅನಂತ್‍ನಾಗ್ ಅಭಿನಯನ್ನು ಹೇಳುವ ಆಗಿಲ್ಲ. ಮೊದಲಬಾರಿ ಇವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಸುಧಾಬೆಳವಾಡಿ ಮುಗ್ದೆ, ಅಳುಮುಂಜಿಯಾಗಿ ಅಮ್ಮನ ಪಾತ್ರಕ್ಕೆ ಸೂಟ್ ಆಗಿದ್ದಾರೆ. ಭಾವನೆಗಳನ್ನು ತೋರ್ಪಡಿಸುವ ಸಂಚಾರಿವಿಜಯ್‍ಗೆ ಪೂರ್ಣ ಅವಕಾಶ ಸಿಕ್ಕಿದ್ದರಿಂದ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹೊಸ ನಾಯಕಿಯರಾದ ನಿರೋಷಶೆಟ್ಟಿ, ರಿಷಿತಾಮಲ್ನಾಡ್, ದಿಶಾಕೃಷ್ಣಯ್ಯ ನಟನೆಯಲ್ಲಿ ಇನ್ನು ಪಳಗಬೇಕು. ಹೇಮಂತ್‍ಕುಮಾರ್ ಸಂಗೀತದಲ್ಲಿ ಡಾ.ಶಿವರಾಜ್‍ಕುಮಾರ್, ರಾಘವೇಂದ್ರರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್ ಮತ್ತು ವಿಜಯರಾಘವೇಂದ್ರ ಹಾಡಿರುವ ಗೀತೆಗಳು ಕೇಳುವಂತಿದೆ. 85ರ ಹರೆಯದಲ್ಲಿ ಸುಂದರ ಸಾಂಸಾರಿಕ ಚಿತ್ರವನ್ನು ನೀಡಿರುವ ನಿರ್ದೇಶಕರ ಶ್ರಮವನ್ನು ನಿಜಕ್ಕೂ ಮೆಚ್ಚಲೇ ಬೇಕು. ಹೊಡಿ, ಬಡಿ, ಫೈಟು ಇವುಗಳ ಮಧ್ಯೆ ನವಿರಾದ ಸಿನಿಮಾ ಇದಾಗಿದೆ.
ನಿರ್ಮಾಪಕರು: ಎ.ಶಿವಪ್ಪ-ಕೆ.ವೇಣುಗೋಪಾಲ
ಸಿನಿ ಸರ್ಕಲ್.ಇನ್ ವಿಮರ್ಶೆ
***
5/01/19

ಗೊಂಬೆಗಳ ಮಾತುಗಳು
‘ಆಡುವ ಗೊಂಬೆ’ ವರ್ಷದ ಮೊದಲವಾರದಂದುತೆರೆಕಾಣುತ್ತಿದೆ. ಆ ಉದ್ದೇಶದಿಂದಲೇಚಿತ್ರತಂಡವು ಶನಿವಾರ ಸುದ್ದಿಗೋಷ್ಟಿ ಕರೆದಿತ್ತು.ಮೈಕ್‍ತೆಗೆದುಕೊಂಡ ನಿರ್ದೇಶಕ ಭಗವಾನ್ ಈಗಿನ ತಲೆಮಾರಿಗೆ ಹೇಳಿಕೊಳ್ಳುವಂತಕತೆಇದೆ. ಹಣೆಬರಹ ನಮ್ಮಜೀವನದಲ್ಲಿ ಹೇಗೆ ಆಟ ಆಡಿಸುತ್ತದೆಎಂಬುದನ್ನು ಹೇಳಲಾಗಿದೆ. ಈಗಿನವರಿಗೆಡ್ಯಾನ್ಸ್, ಫೈಟ್, ಕುಡಿತಎಲ್ಲವು ಬೇಕಾಗಿದೆ.ಆದರೆ ನಮ್ಮ ಸಿನಿಮಾದಲ್ಲಿಇದೆಲ್ಲಾಇರುವುದಿಲ್ಲ. 2.10 ಗಂಟೆಚಿತ್ರದಲ್ಲಿ ಸಾಕಷ್ಟು ತಿರುವುಗಳು ಕೂಡಿದೆ.ಗಿಮಿಕ್ ಮಾಡದೆ ಸನ್ನಿವೇಶಗಳು ನೋಡುಗರಿಗೆಕುತೂಹಲ ಹುಟ್ಟಿಸುತ್ತದೆಎಂಬುದರ ವಿಶ್ಲೇಷಣೆ ನೀಡಿದರು.
2018ರ ಕೊನೆ ಚಿತ್ರ ನಾತಿಚರಾಮಿ, 2019ರ ಪ್ರಾರಂಭದ ಸಿನಿಮಾಇದಾಗಿದೆ. ಆಡುವಗೊಂಬೆಕಸ್ತೂರಿ ನಿವಾಸ ಮುಂದುವರೆದ ಭಾಗಎನ್ನಬಹದು.ಸೆಟ್‍ನಲ್ಲಿಅನಂತ್‍ನಾಗ್, ಸುಧಾಬೆಳವಾಡಿ ಅವರಿಂದ ಸಾಕಷ್ಟು ಕಲಿತುಕೊಂಡೆ.ಈಗಿನ ಸಮಾಜಕ್ಕೆ ಪೂರಕವಾಗಿರುವಚಿತ್ರವೆಂದು ನಾಯಕ ಸಂಚಾರಿವಿಜಯ್ ಬಣ್ಣನೆ ಮಾಡಿದರು.

ನಿರ್ದೆಶಕರು 45 ನಿಮಿಷ ಕತೆ ಹೇಳಿದ ರೀತಿ ಸೊಗಸಾಗಿತ್ತು. ಇಳಿ ವಯಸ್ಸಿನಲ್ಲೂ ಅವರ ಶ್ರದ್ದೆ, ಪ್ರಾಮಾಣಿಕತೆ ಈಗಿನ ನಿರ್ದೇಶಕರು ನೋಡಿಕಲಿಯಬೇಕು. ಹಣೆಬರಹವೇ ನಾಯಕಎನ್ನಬಹುದು. ಮ್ಯಾನ್ ಪ್ರಪೋಸಸ್, ಗಾಡ್‍ಡಿಸ್‍ಪೋಸಸ್‍ಇರುವಂತೆಎಲ್ಲವುಅಡಗಿದೆಎಂದು ಸುಧಾಬೆಳವಾಡಿ ತಿಳಿಸಿದರು.

ಭಗವಾನ್ ಸರ್‍ಅವರೊಂದಿಗೆ ಮೂರು ತಿಂಗಳು ಕೆಲಸ ಮಾಡಿದ್ದು ಖುಷಿ ತಂದಿದೆ. ಡಾ.ರಾಜ್‍ಕುಮಾರ್ ಮೂವರು ಮಕ್ಕಳು ಹಾಡಿರುವುದು ಪ್ಲಸ್ ಪಾಯಿಂಟ್‍ಅಂತ ಸಂಗೀತ ಒದಗಿಸಿರುವ ಹೇಮಂತ್‍ಕುಮಾರ್ ಹೇಳಿದರು. ನಿರ್ಮಾಪಕ ಶಿವಪ್ಪ ಪುತ್ರ ಸತೀಶ್ ಸಿನಿಮಾ ಹುಟ್ಟಿದ್ದನ್ನು ನೆನಪು ಮಾಡಿಕೊಂಡು, ಇದುಒಂಥರಾಕ್ರೌಡ್ ಫಂಡಿಂಗ್‍ಚಿತ್ರವೆನ್ನಬಹದು.ಚಾಮುಂಡೇಶ್ವರಿ ಸ್ಟುಡಿಯೋದರಾಜಲಕ್ಷೀಷಡಗೋಪಾಲನ್ ಪಾಲುದಾರರು.ಸರ್ ನಿರ್ದೇಶನದ 50ನೇ ಚಿತ್ರವನ್ನುಜನರು ಸ್ವೀಕರಿಸುತ್ತಾರೆಂಬ ನಂಬಿಕೆ ಇದೆಎಂದರು. ಸಂಕಲನಕಾರಗಣೇಶ್, ಕೋರಿಯೋಗ್ರಾಫರ್‍ತ್ರಿಭುವನ್, ರಶಿತಾಮಲ್ನಾಡ್, ಅನರುದ್ದ,ಮಂಜುನಾತ್ ಮುಂತಾದವರು ಉಪಸ್ತಿತರಿದ್ದು ಮಾಹಿತಿ ಹಂಚಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/12/182019ರಲ್ಲಿ ಗೊಂಬೆ ಆಡಲಿದೆ
ಬರೋಬ್ಬರಿ 22 ವರ್ಷಗಳ ನಂತರ ಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಹಿರಿಯ ನಿರ್ದೇಶಕ ಭಗವಾನ್ ಅವರ 50ನೇ ಚಿತ್ರ ‘ಆಡುವಗೊಂಬೆ’ದಲ್ಲಿ ಮನುಷ್ಯ ಬಯಸುವುದು ಒಂದು, ದೈವ ಬರೆಯುವುದೇ ಒಂದು ಎನ್ನುವ ಅಂಶ ಒಂದು ಏಳೆಯ ಕತೆಯಾಗಿದೆ. ಶಿವರಾಜ್‍ಕುಮಾರ್, ರಾಘವೇಂದ್ರರಾಜಕುಮಾರ್ ಮತ್ತು ಪುನೀತ್‍ರಾಜಕುಮಾರ್ ಹಾಡಿರುವುದು ದಾಖಲೆಗೆ ಸಾಕ್ಷಿಯಾಗಿದೆ. ಜೊತೆಗೆ ಇನ್ನೊಂದು ಹಾಡನ್ನು ವಿಜಯರಾಘವೇಂದ್ರ ಹಾಡಿದ್ದಾರೆ. ಈ ಮೂಲಕ ಡಾ.ರಾಜ್‍ಕುಮಾರ್ ಕುಟುಂಬದ ನಾಲ್ವರು ಚಿತ್ರದಲ್ಲಿ ತೊಡಗಿಕೊಂಡಂತಾಗಿದೆ. ಹದಿನಾರು ವರ್ಷಗಳ ನಂತರ ರಾಘಣ್ಣ ಹಾಡಿರುವ ‘ಆಡಿಸಿ ನೋಡು ಬೀಳಿಸಿ ನೋಡು’ ಗೀತೆ ಎಲ್ಲಾ ಕಡೆಗಳಿಂದ ಪ್ರಶಂಸೆ ಸಿಕ್ಕಿದೆ. ಮುಖ್ಯ ಪಾತ್ರದಲ್ಲಿ ಅನಂತನಾಗ್, ಸಂಚಾರಿವಿಜಯ್, ಸುಧಾಬೆಳವಾಡಿ ಮುಂತಾದವರ ನಟನೆ ಇದೆ. ಸಂಗೀತ ಹೇಮಂತ್, ಛಾಯಗ್ರಹಣ ಗಣೇಶ್, ನೃತ್ಯ ಮಾಲೂರುಶ್ರೀನಿವಾಸ್ ಅವರದಾಗಿದೆ. ಭಗವಾನ್ ಶಿಷ್ಯ ಸತೀಶ್ ತಂದೆ ಎ.ಶಿವಪ್ಪ ನಿರ್ಮಾಣ, ಅದರಂತೆ ಮತ್ತೋಬ್ಬ ಶಿಷ್ಯ ಕೆ.ವೇಣುಗೋಪಾಲ್ ಪಾಲುದಾರರಾಗಿದ್ದಾರೆ. ಚಾಮುಂಡೇಶ್ವರಿ ಸ್ಟುಡಿಯೋದ ರಾಜಲಕ್ಷೀಷಡಗೋಪಾಲನ್ ಸಹ ನಿರ್ಮಾಪಕಿಯಾಗಿರುವ ಸಿನಿಮಾವು ಜನವರಿ ನಾಲ್ಕರಂದು ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
22/12/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore