HOME
CINEMA NEWS
GALLERY
TV NEWS
REVIEWS
CONTACT US
ಆದಿಯ ಕತೆ ಮತ್ತು ವ್ಯಥೆ
ಈಗಿನ ಕಾಲದ ಹುಡುಗರಿಗೆ ಮದುವೆ ಮಾಡಿ ಮೊದಲ ರಾತ್ರಿಯನ್ನು ಅನುಭವಿಸಲು ಬಿಡದೆ ಹೋದಾಗ ಏನೇನು ಸ್ವಾರಸ್ಯಗಳು ನಡೆಯುತ್ತವೆ ಎಂದು ‘ಆದಿ ಪುರಾಣ’ ಚಿತ್ರದಲ್ಲಿ ಮನರಂಜನೆಯ ಮೂಲಕ ಹೇಳಲಾಗಿದೆ. ಹಾಗಂತ ಬೇರೆ ಏನು ಇಲ್ಲವೆಂದು ಹೇಳಲಾಗುವುದಿಲ್ಲ. ಪ್ರಾರಂಭದಲ್ಲಿ ಎರಡರ್ಥದ ಸಂಭಾಷಣೆಗಳು ಬರುವುದರಿಂದ ಇದೊಂದು ಆ ತರಹದ ಸಿನಿಮಾ ಅಂದುಕೊಂಡರೆ, ಕತೆಯೊಳಗೆ ಒಂದು ಅರ್ಥಪೂರ್ಣ ಆಶಯವನ್ನು ಹೇಳಿದ್ದಾರೆ. ಮೊದಲರ್ಧ ಆಮೆಯಂತೆ ಸಾಗಲಿದ್ದು, ವಿರಾಮದ ನಂತರ ಪುರಾಣಕ್ಕೆ ತಾಕತ್ತು ಬರುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡಿದರೆ ಆಗುವ ತಳಮಳ, ತಲ್ಲಣ, ತವಕ ಎಲ್ಲವನ್ನು ನಯವಾಗಿ, ಕನಸು ಕಾಣುತ್ತಿರುವ ಪಡ್ಡೆಗಳಿಗೆ ಮನವೆನಿಸುವ ದೃಶ್ಯಗಳು ಇರುವುದು ಮುದ ಕೊಡುತ್ತದೆ. ನಿಜವಾದ ಮದುವೆಯಂತೆ ಶಾಸ್ತ್ರೋಕ್ತವಾಗಿ ಎಲ್ಲವನ್ನು ತೋರಿಸಿ, ಕಲ್ಯಾಣ ಮಂಟಪದಲ್ಲಿ ನೋಡುಗ ಇರುವಂತೆ ಮಾಡುವಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣಿಸುತ್ತದೆ. ಉಳಿದಂತೆ ಕಚೇರಿ, ಮನೆ ಬಾರು ಇಷ್ಟರಲ್ಲೆ ಕತೆಯನ್ನು ಸೃಷ್ಟಿಸಿರುವುದು ಪ್ಲಸ್ ಪಾಯಿಂಟ್ ಎನ್ನಬಹುದು.

ನಾಯಕ ಶಶಾಂಕ್ ಕೆಲವೊಂದು ಕಡೆ ಸೈಕಲ್ ಹೊಡೆದಿದ್ದಾರೆ. ಮೊದಲ ಚಿತ್ರವಾಗಿದ್ದರಿಂದ ಊಫಿ ಮಾಡಬಹುದು. ನಾಯಕಿಯರ ಪೈಕಿ ಅಹಲ್ಯಸುರೇಶ್ ನಗುತ್ತಾ ಆಕರ್ಷಿಸಿದರೆ, ಮೋಕ್ಷಕುಶಾಲ್ ಗ್ಲಾಮರಸ್ ಆಗಿ ತರೆ ಮೇಲೆ ಮಿಂಚಿದ್ದಾರೆ. ರಂಗಾಯಣರಘು ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ. ನಾಯಕನ ಪೋಷಕರಾಗಿ ನಾಗೇಂದ್ರಷಾ-ವತ್ಸಲಾಮೋಹನ್ ಚೆಂದ ಕಾಣಿಸುತ್ತಾರೆ. ಉಳಿದಂತೆ ಕರಿಸುಬ್ಬು, ನವೀನ್‍ಸಾಗರ್ ನಟನೆ ಇದೆ. ವಿಕ್ರಮ್‍ವಸಿಷ್ಟ, ಚಂದನವಸಿಷ್ಟ ಹಾಡಿನಲ್ಲಿ ದಮ್ ಇರುವುದಿಲ್ಲ. ಸಿದ್ದಾರ್ಥ್‍ಕಾಮತ್ ಹಿನ್ನಲೆ ಸಂಗೀತ ಅಲ್ಲಲ್ಲಿ ಸೊರಗಿದೆ. ಗುರು ಪ್ರಸಾದ್ ಛಾಯಗ್ರಹಣ ಪೂರಕವಾಗಿದೆ. ಇದೆಲ್ಲವನ್ನು ಬದಿಗಿಟ್ಟು ಕತೆ, ಚಿತ್ರಕತೆ ಬರೆದು ಸಂಕಲನ, ನಿರ್ದೇಶನ ಮಾಡಿರುವ ಮೋಹನ್‍ಕಾಮಾಕ್ಷಿ ಕೆಲಸ ಅಚ್ಚುಕಟ್ಟಾಗಿದೆ.
ನಿರ್ಮಾಣ: ಶಮಂತ್
ಸಿನಿ ಸರ್ಕಲ್.ಇನ್ ವಿಮರ್ಶೆ
***
7/10/18
ಎ ಫಾರ್ ಆದಿ ಪುರಾಣ
ಕನ್ನಡ ಚಿತ್ರಗಳಿಗೆ ಸೆನ್ಸಾರ್ ಮಂಡಳಿಯಿಂದ ತೊಂದರೆಗಳು ಆಗುತ್ತಲೆ ಇದೆ. ಸಣ್ಣ ಪುಟ್ಟ ದೃಶ್ಯಗಳು ಇದ್ದರೂ ಚರ್ಚೆ ನಡೆಸದೆ ಕಟ್ ಮಾಡಿ ಅಂತಾರೆ, ಇಲ್ಲವೆ ಎ ಪ್ರಮಾಣಪತ್ರ ನೀಡುತ್ತಾರೆ. ಅದೇ ಅನುಭವ ‘ಆದಿ ಪುರಾಣ’ ಚಿತ್ರಕ್ಕೆ ಆಗಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಮೋಹನ್‍ಕಾಮಾಕ್ಷಿ ಸೆನ್ಸಾರ್‍ನವರು ಚಿತ್ರ ಚೆನ್ನಾಗಿ ಬಂದಿದೆ. ಎ ಕೊಡುತ್ತೇವೆ ಅಂತಾರೆ. ರವಿಚಂದ್ರನ್ ಹಾಡನ್ನು ಐದು ಸೆಕೆಂಡ್ ಬಳಸಲಾಗಿದೆ. ಆ ಚಿತ್ರವು ಯು ಆಗಿತ್ತು. ಅದನ್ನೆ ಬಳಿಸಿದರೆ ಎ ನೀಡಿದರು. ಆರ್‍ಸಿಗೆ ಹೋಗೋಣವೆಂದರೆ ಈಗಾಗಲೇ ತಡವಾಗಿದೆ. ಮತ್ತೆ ಸಾಕಷ್ಟು ಹಣ ಖರ್ಚಾಗುತ್ತೆ. ವಿಧಿ ಇಲ್ಲದೆ ಅದರಲ್ಲೆ ತೃಪ್ತಿ ಪಡಬೇಕಾಯಿತು. ಅದಕ್ಕಾಗಿ ಎ ಫಾರ್ ಆಲ್ ಎಂದುಕೊಂಡು ಬಿಡುಗಡೆ ಮಾಡುತಿದ್ದೇವೆ ಎಂದರು.

ಒಂದಷ್ಟು ನಿರ್ಮಾಪಕರುಗಳನ್ನು ಸೇರಿಸಿಕೊಂಡು ಇವರ ವಿರುದ್ದ ಹೋರಾಡಿದ್ದೆ ನಮಗೆ ಮುಳುವಾಗಿದೆ. ಚಿತ್ರಕ್ಕೆ ಜನರೇ ತೀರ್ಪು ಕೊಡಬೇಕು ಎನ್ನುವ ಉದ್ದೇಶದಿಂದ ಗಾಂಧಿಜಯಂತಿ ದಿನದಂದು ಉಚಿತ ಪ್ರದರ್ಶನ ಏರ್ಪಡಿಸಲು ಚಿಂತನೆ ನಡೆಸಲಾಗಿದೆ. ಜನಗಳ ತೀರ್ಮಾನ ಅಂತಿಮವಾಗಲಿದೆ. ಬರುವ ಐದರಂದು ಸುಮಾರು 65 ಕೇಂದ್ರಗಳಲ್ಲಿ ಬಡುಗಡೆಯಾಗಲಿದೆ ಎಂದು ನಿರ್ಮಾಪಕ ಶಮಂತ್ ಅಳಲನ್ನು ತೋಡಿಕೊಂಡರು.

ಅಣ್ಣ ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದೇನೆ. ಇಬ್ಬರು ನಾಯಕಿಯರೊಂದಿಗೆ ಚುಂಬನ ದೃಶ್ಯದಲ್ಲಿ ಭಾಗವಹಿಸಿದ್ದು ಕಷ್ಟದ ಕೆಲಸ. ಜೀವನದಲ್ಲಿ ಇದೇ ಫಸ್ಟ್ ಟೈಮ್. ಐದು ಟೇಕ್‍ನಲ್ಲಿ ಮುಗಿಯಿತು ಎಂದು ಶಶಾಂಕ್ ಹೇಳುವಾಗ ನಾಯಕಿ ಅಹಲ್ಯಸುರೇಶ್ ತಲೆ ಕೆಳಗೆ ಮಾಡಿ ನಗುತ್ತಿದ್ದರು. ಅಂದಹಾಗೆ ಇವರದು ಭರತನಾಟ್ಯ ಪ್ರವೀಣೆ, ಬ್ರಾಹ್ಮಣ ಹುಡುಗಿ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೋಬ್ಬ ನಾಯಕಿ ಮೋಕ್ಷ ನಟನೆ ಇದೆ. 70ರ ದಶಕದ ಕ್ಯಾಬರೆ ಹಾಡಿನಂತೆ ಚಿತ್ರದಲ್ಲಿ ಒಂದು ಗೀತೆ ಇರುವುದು ವಿಶೇಷವಾಗಿದೆಯಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
25/09/18ಆದಿಪುರಾಣಕ್ಕೆ ಉಪೇಂದ್ರ ಮೆಚ್ಚುಗೆ
ಕಾಶಿನಾಥ್ ಚಿತ್ರಗಳ ಸ್ಪೂರ್ತಿಯಿಂದ ಸಿದ್ದಗೊಂಡಿರುವ ‘ಆದಿ ಪುರಾಣ’ ಚಿತ್ರದ ಟ್ರೈಲರ್ ಅವರಿಂದಲೇ ಬಿಡುಗಡೆ ಮಾಡಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಅವರು ಇಹಲೋಕ ತ್ಯಜಿಸಿದ ಕಾರಣ ಶಿಷ್ಯ ಉಪೇಂದ್ರ ಗುರುಗಳ ಪರವಾಗಿ ಲೋಕಾರ್ಪಣೆ ಮಾಡಿ ತಂಡದ ಕೆಲಸವನ್ನು ಶ್ಲಾಘಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಮದ್ಯಮ ವರ್ಗದ ಹುಡುಗನ ಇಂಜಿನಿಯರಿಂಗ್ ನಿಂದ ಮದುವೆ. ಪೋಷಕರಿಗೆ ಮಗ ಓದು ಮುಗಿದರೆ ಸಾಕು, ಮುಂದೆ ಕೆಲಸ ಸಿಗಬೇಕು ಅಂತಯೇ ಒಳ್ಳೆ ಹುಡುಗಿ ಸಿಗಬೇಕೆಂಬ ಬಯಕೆ ಇದ್ದೇ ಇರುತ್ತದೆ. ಇಂತಹುದೆ ಹಲವು ಘಟನೆಗಳನ್ನು ಹೆಕ್ಕಿಕೊಂಡು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ನೂರಾರು ಚಿತ್ರಗಳಿಗೆ ಸಂಕಲನ ಮಾಡಿದ ಅನುಭವ ಇರುವ ಮೋಹನ್‍ಕಾಮಾಕ್ಷಿ ಕತೆ, ಚಿತ್ರಕತೆ, ಸಂಕಲನ ಜೊತೆಗೆ ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ವಿಕ್ರಂ-ಸಿದ್ದಾರ್ಥ-ಚಂದನ ನಾಲ್ಕು ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ವಿಕ್ರಂ ರಂಗಭೂಮಿ ನಟ ಆಗಿರುವುದರಿಂದ ಎರಡು ಗೀತೆಗೆ ಸಾಹಿತ್ಯ ರಚಿಸಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನಿರ್ಮಾಪಕರ ಸೋದರ ಶಶಾಂಕ್ ಮೊನ್ನೆ ಇಂಜನಿಯರಿಂಗ್ ಮುಗಿಸಿದ್ದು ರೀಲ್‍ನಲ್ಲಿ ಅದೇ ಪಾತ್ರಕ್ಕೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ನಾಯಕಿಯರು ಇರಲಿದ್ದು ಸಂಪ್ರದಾಯಸ್ಥ ಹುಡುಗಿಯಾಗಿ ಅಹಲ್ಯಸುರೇಶ್ ಮತ್ತು ಟೆಕ್ಕಿ ಕಂಪೆನಿಯಲ್ಲಿ ಟೀಂ ಲೀಡರ್, ಪ್ರೀತಿ ಕಂಡರೆ ಅಸಹ್ಯ ಪಡುವ ಪಾತ್ರದಲ್ಲಿ ಮೋಕ್ಷಕುಶಾಲ್. ನಾಯಕನ ತಾಯಿ ಪಾತ್ರಕ್ಕೆ ವತ್ಸಲಾಮೋಹನ್, ತಂದೆ ನಾಗೇಂದ್ರಶಾ ನಟನೆ ಇದೆ. ಶಕ್ತಿವೇಲ್ ಸಹ ನಿರ್ಮಾಪಕರಾಗಿ ಹಾಸ್ಯ ದೃಶ್ಯಕ್ಕೆ ಕ್ಯಾಮಾರು ಮುಂದೆ ನಿಂತಿದ್ದಾರೆ. ಶಮಂತ್ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ದಿನಗಳಲ್ಲಿ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ. ಜುಲೈ ಕೊನೆವಾರದಲ್ಲಿ ಸಿನಿಮಾವು ತೆರೆ ಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
24/06/18
ADI PURANA SHOOTING IN PROGRESS
P
roducer Shamanth K, who made two Kannada films – Preethi Kithabhu and Melody – is launching his brother Shashank K as hero with the film Adi Purana, a romantic comedy and family entertainer.

Mohan Kamakshi, who worked as an editor for 12 years in Kannada film industry, is the director for Adi Purana. “Adi Purana is a romantic comedy and the audience will be able to relate to it even though the title is centuries old. The script demanded new faces. That’s why we have roped in some new talent. We also have senior actors in supporting roles. I happened to see Shashank at a studio while editing a Kannada film. I asked him whether he is interested in acting. Later, I discussed about it with his brother Shashank. He has acted well in this film,’’ said Mohan Kamakshi.

The director has planned to complete the shooting of this film in 35 days in and around Bengaluru and Mysuru. “We have divided its shooting into three schedules. The last schedule will be exclusively for picturisation of songs in August,’’ he said.
According to him, the script work of Adi Purana commenced in October 2016 and completed in April 2017.
“I am studying 3rd year mechanical engineering at Dr Ambedkar Engineering College. I have put up seven kgs for this film. I had basic training in film acting under the guidance of Bukkapatnam Vasu,’’ said Shashank.
The team has planned a 35-day shooting schedule around Bengalur, Mysuru and KRS Dam.

Ahalya Suresh and Moksha Kushal are the heroines while Rangayana Raghu, Nagendra Shah, Karisubbu, Vatsala Mohan, Shakthi Vel, Sameer, Aditya Bharadwaj, Gem Shivu and Radha are in the star cast. Vikaram Vasisht, Chandana Vasisht and Siddarth Kamath have scored music for this film.
-16/07/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore