HOME
CINEMA NEWS
GALLERY
TV NEWS
REVIEWS
CONTACT US
ದಯವಿಟ್ಟು ಅಡಚಣೆಗಾಗಿ ಕ್ಷಮಿಸಿ
ಚಾನಲ್‍ಗಳಲ್ಲಿ, ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ‘ಅಡೆಚಣೆಗಾಗಿ ಕ್ಷಮಿಸಿ’ ಎಂದು ಹೇಳುವುದು ಪ್ರತೀತಿಯಾಗಿದೆ. ಈಗ ಇದರ ಹೆಸರಿನಲ್ಲೆ ಸೆಸ್ಪನ್ಸ್ ಥ್ರಿಲ್ಲರ್ ಚಿತ್ರವೊಂದು ತೆರೆಗೆ ಬರಲು ತಯಾರಾಗಿದೆ. ಹನ್ನೆರಡು ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡ ಹಿನ್ನಲೆಯಲ್ಲಿ ಸಿನಿಮಾಕ್ಕೆ ಕತೆ, ಸಾಹಿತ್ಯ, ಸಾಹಸ ಜೊತೆಗೆ ಚೂಚ್ಚಲಬಾರಿ ನಿರ್ದೇಶನ ಮಾಡಿರುವುದು ಭರತ್.ಎಸ್.ನಾವುಂದ. ಇವರು ಹೇಳುವಂತೆ ಕಾಲೇಜಿನ ಒಂದಷ್ಟು ಸಿನಿಮಾಮೋಹಿಗಳು ಸೇರಿಕೊಂಡು ಒಂದು ಹಂತದವರಗೆ ಚಿತ್ರೀಕರಣ ಮುಗಿಸಿ ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಮುಂದೆ ಬೇರೆಯವರು ನಮ್ಮ ಸಿನಿಮಾವನ್ನು ಟೇಕಾಫ್ ಮಾಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದಾರೆ.

ಕತೆಗೆ ಪೂರಕವಾಗಿ ಶೀರ್ಷಿಕೆ ಇಡಲಾಗಿಲ್ಲ. ಚಿತ್ರಕತೆಗೆ ಅನುಗುಣವಾಗಿ ಇದನ್ನೆ ಬಳಸಲಾಗಿದೆ. ಹದಿನಾಲ್ಕು ಪಾತ್ರಗಳ ಸುತ್ತ ಕತೆ ಸಾಗಲಿದ್ದು, ಪ್ರತಿ ಪಾತ್ರಕ್ಕೂ ಅದರದೆ ಆದ ಪ್ರಾಮುಖ್ಯತೆ ಇರಲಿದೆ. ಒಂದು ನೈಜ ಘಟನೆಗೆ ಚಿತ್ರಕ್ಕೆ ಸ್ಪೂರ್ತಿಯಾಗಿದೆ. ಭೂತಕಾಲ, ವರ್ತಮಾನ ಕಾಲದಂತೆ ಎರಡು ರೀತಿಯಲ್ಲಿ ಚಿತ್ರಕತೆ ಸಾಗುತ್ತದೆ. ನೋಡಗನ ಆಲೋಚನೆಯನ್ನು ಮುರಿದು ಹಾಕುವ ಸನ್ನಿವೇಶಗಳು ಬರುವುದು ಪ್ಲಸ್ ಪಾಯಿಂಟ್. ಸ್ಲಂನಲ್ಲಿ ವಾಸಿಸುವ ಜನರು ಒಳ್ಳೇದು, ಕೆಟ್ಟದ್ದನ್ನು ಮಾಡಿದಾಗ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಶೇಕಡ 80 ರಷ್ಟು ರಾತ್ರಿಯಲ್ಲಿ ಕತೆಯು ನಡೆಯುತ್ತದೆ. ಮಡಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‍ನವರು ಎ ಪ್ರಮಾಣಪತ್ರ ನೀಡಿದ್ದಾರೆಂದು ವಿವರ ಬಿಚ್ಚಿಟ್ಟರು.

ತಾರಗಣದಲ್ಲಿ ಪ್ರದೀಪ್‍ವರ್ಮ, ಶ್ರೀಧರ್, ಶ್ರೀನಿವಾಸಪ್ರಭು, ಶಿವು, ಅರ್ಪಿತಾಗೌಡ, ಮೇಘ, ಪ್ರೀತಿ ಮುಂತಾದವರು ನಟಿಸಿದ್ದಾರೆ. ಇವರ ಪೈಕಿ ಪ್ರದೀಪ್‍ವರ್ಮ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಜೊತೆಗೆ ಮುಖ್ಯ ಪಾತ್ರದಲ್ಲಿ ಮೂರು ಗೆಟಪ್‍ಗಳಾದ ಚಾಲಕ, ತನಿಖಾದಿಕಾರಿ ಕಡೆಯದನ್ನು ಚಿತ್ರದಲ್ಲಿ ನೋಡಬೇಕು ಅಂತಾರೆ. ಇವರ ತಂದೆ ಹಿರಿಯ ಸಂಗೀತ ನಿರ್ದೇಶಕ ಸದ್ಬುಣಮೂರ್ತಿ ನಿರ್ಮಾಪಕರು. ಇವರಿಗೆ ಸಾಥ್ ನೀಡಲು ಮಧುಸೂದನ್‍ಶ್ರೀನಿವಾಸ್, ಭಾರ್ಗವಿಕಿಶೋರ್, ನಾಗೇಶ್‍ಕುಮಾರ್‍ಕುಂದಾಪುರ ಮತ್ತು ಭರತ್‍ನಾವುಂದ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.

ಪ್ರಚಾರದ ಮೊದಲ ಹಂತದವಾಗಿ ಚಿತ್ರದ ಟ್ರೈಲರ್ ಹಾಗೂ ಲಿರಿಕಲ್ ವಿಡಿಯೋವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಲೋಕಾರ್ಪಣೆ ಮಾಡಿ, ಕೆಲಸ ತಂಡದವರದು, ಫಲಿತಾಂಶ ಜನರಿಗೆ ಬಿಟ್ಟದ್ದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿ ಬಂಡವಾಳ ವಾಪಸ್ಸು ಬರಲೆಂದು ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
12/12/18ಅಡಚಣೆಗಾಗಿ ಕ್ಷಮಿಸಿ ಟೀಸರ್ ಬಿಡುಗಡೆ
ಕಳೆದ ಹನ್ನೆರಡು ವರ್ಷಗಳಿಂದ ಎಸ್.ಮಹೇಂದರ್, ಪಿ.ಎನ್. ಸತ್ಯ ಮುಂತಾದವರ ಜೊತೆ ಕೆಲಸ ಮಾಡಿ ಅನುಭವವಿರುವ ಭರತ್.ಎಸ್.ನಾವುಂದ್ ಸಿನಿಮಾಕ್ಕೆ ಕತೆ,ಚಿತ್ರಕತೆ,ಸಂಭಾಷಣೆ,ಗೀತರಚನೆ, ಸಾಹಸ ಜೊತೆಗೆ ಮೊದಲಬಾರಿ ನಿರ್ದೇಶನ ಮಾಡಿರುವ ‘ಅಡಚಣೆಗಾಗಿ ಕ್ಷಮಿಸಿ’ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರವಿದೆ. ಮಡಿಕೇರಿಯಲ್ಲಿ 22 ದಿನಗಳ ಹಾಗೂ ಬೆಂಗಳೂರಿನಲ್ಲಿ 10ದಿನಗಳ ಚಿತ್ರೀಕರಣ ನಡೆದಿದೆ. ರವಿವರ್ಮ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನವಿದೆ.

ಐದು ಹಾಡುಗಳಿಗೆ ಸಂಗೀತ ಒದಗಿಸಿರುವ ಎಸ್.ಪ್ರದೀಪ್‍ವರ್ಮ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಎರಡು ಜವಬ್ದಾರಿಗಳನ್ನು ಹೊತ್ತು ಕೊಂಡಿದ್ದಾರೆ. ಇವರ ಕುರಿತು ಹೇಳುವುದಾದರೆ ಕಳೆದ 20ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೀಬೋರ್ಡ್ ವಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್‍ವರ್ಮ ಅವರು ಕಾವೇರಿ ನಗರ, ಸ್ಟೈಲ್‍ಕಿಂಗ್, ದಿ ಟೆರರಿಸ್ಟ್ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ತಾರಗಣದಲ್ಲಿ ಶಿವಮಂಜು, ಕೆ.ಎಸ್.ಶ್ರೀಧರ್, ಶ್ರೀನಿವಾಸಪ್ರಭು, ಅರ್ಪಿತಾಗೌಡ, ಮೇಘ, ವಿದ್ಯಾಕುಲಕರ್ಣಿ, ಶ್ರೀನಿವಾಸ್, ಸುಶೀಲ್‍ಕುಮಾರ್ ಮುಂತಾದವರ ನಟನೆ ಇದೆ. ಶ್ರೀಭೂಮಿಕ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಸದ್ಗುಣಮೂರ್ತಿ ನಿರ್ಮಿಸಿದ್ದಾರೆ. ಮಧುಸೂಧನ್, ಶ್ರೀನಿವಾಸ್, ಭಾರ್ಗವಿ ಕಿಶೋರ್, ನಾಗೇಶ್ ಕುಮಾರ್ ಈ ಚಿತ್ರದ ಸಹ ನಿರ್ಮಾಪಕರು. ಪ್ರಚಾರದ ಮೊದಲ ಹಂತವಾಗಿ ಟೀಸರ್ ಇದೇ ತಿಂಗಳ 10ರಂದು ಪವರ್‍ಸ್ಟಾರ್ ಪುನೀತ್‍ರಾಜಕುಮಾರ್ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
6/12/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore