HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿಯ ಸಂಕೇತ ಅಭಿಸಾರಿಕೆ
ನಾನು ನಿನ್ನನ್ನು ಮಾತಾಡಿಸಿಲ್ಲ. ಹಾಗಿದ್ದರೂ ನೀನು ಹಿಂದೆ ಬಿದ್ದರೆ ನನ್ನ ತಪ್ಪಾ ಎಂದು ಆಕೆ ಹೇಳುವಷ್ಟರಲ್ಲಿ ‘ಅಭಿಸಾರಿಕೆ’ ಚಿತ್ರದ ಕತೆಯು ಒಂದು ಹಂತಕ್ಕೆ ಬಂದಿರುತ್ತದೆ. ಪ್ರಿಯನನ್ನು ಕೂಡಲು ಸಂಕೇತಸ್ಥಾನಕ್ಕೆ ಹೋಗುವ ಹೆಣ್ಣು ಎಂಬುದಕ್ಕೆ ‘ಅಭಿಸಾರಿಕೆ’ ಪದವನ್ನು ಬಳಸುತ್ತಾರೆ. ಚಿತ್ರದಲ್ಲಿ ಅಭಿ ಪ್ರೇಮಿಯಾಗಿದ್ದು, ಸಾರಿಕೆ ಪ್ರಿಯತಮೆ ಆಗಿರುತ್ತಾಳೆ. ಲವ್ ಶುರುವಾದರೆ ಮನೆಕಡೆಯಿಂದ ತೊಂದರೆ ಬರುವುದುಂಟು. ಕತೆಯಲ್ಲಿ ಇಬ್ಬರಲ್ಲೂ ಪ್ರೀತಿ ಮೂಡಿದಾಗ, ವಿಲನ್ ಇರುವಂತೆ ಇದರಲ್ಲೂ ಮತ್ತೋಬ್ಬ ಎಂಟ್ರಿಕೊಡುತ್ತಾನೆ. ಇದರಿಂದ ಸಾಕಷ್ಟು ತಿರುವುಗಳು ಬರುತ್ತದೆ. ಹಾಗಂತ ಇಬ್ಬರಿಗೂ ಫೈಟ್ ಆಗುವುದಿಲ್ಲ. ಒಂದು ಹಂತದಲ್ಲಿ ಖಳನಾಯಕ ಎದುರಾಳಿಯಿಂದ ಮರ್ಡರ್ ಆಗುತ್ತಾನೆ. ಇದನ್ನು ತಪ್ಪಿಸುವ ಅವಕಾಶ ನಾಯಕನಿಗೆ ಇದ್ದರೂ, ಬಿಟ್ಟುಹೋಗಿದ್ದರಿಂದ ಮುಂದೆ ಯಾವ ರೀತಿ ತೊಂದರೆ ಕೊಡುತ್ತಾನೆ. ಅದಕ್ಕೆ ಪರಿಹಾರವೇನು ಎಂಬುದನ್ನು ಅಸಾ ನೋಡಿದಾಗ ತಿಳಿಯುತ್ತದೆ. ಹಾರರ್, ಥ್ರಿಲ್ಲರ್ ಸನ್ನಿವೇಶಗಳು ಹೊಸತನದಿಂದ ಮೂಡಿ ಬಂದಿರುವುದು ಪ್ಲಸ್ ಪಾಯಿಂಟ್ ಆಗಿದೆ. ನೋಡುಗನಿಗೆ ವಿಭಿನ್ನ ರೀತಿಯಲ್ಲಿ ಖುಷಿ ಕೊಡುತ್ತದೆ.

ಮೇಘ ಆಲಿಯಾಸ್ ಮೇಘನ ಚಿತ್ರದಲ್ಲಿ ನಟಿಸಿದ್ದ ತೇಜ್‍ಗೌಡ, ನಾಯಕನಾಗಿ ಎರಡನೆ ಪ್ರಯತ್ನದಲ್ಲಿ ಆಕ್ಷನ್, ಲುಕ್‍ನಲ್ಲಿ ನಟನೆಗೆ ಮೋಸಮಾಡಿಲ್ಲ. ರಂಗಭೂಮಿ ಕಲಾವಿದ ಯಶವಂತ್‍ಶೆಟ್ಟಿ ಖಳನಾಗಿ ಭವಿಷ್ಯದಲ್ಲಿ ಉತ್ತಮ ಅವಕಾಶ ಸಿಗುವಂತೆ ಪಾತ್ರದಲ್ಲಿ ಅಭಿನಯ ಮಾಡಿರುವುದು ಪರದೆ ಮೇಲೆ ಕಾಣಿಸುತ್ತದೆ. ಮೊದಲ ಚಿತ್ರವಾಗಿದ್ದರೂ ನಾಯಕಿ ಸೋನಾಲ್‍ಮಂತೆರೋ ಭಯಪಡುವ ದೃಶ್ಯದಲ್ಲಿ ಗಮನ ಸೆಳಯುತ್ತಾರೆ. ಅಲ್ಲದೆ ಹಾಡಿನಲ್ಲಿ ಗ್ಲಾಮರ್ ಲುಕ್‍ನಲ್ಲಿ ಚೆಂದ ಕಾಣಿಸುತ್ತಾರೆ. ಉಳಿದಂತೆ ಅಶೋಕ್, ರಚನಾ, ಗಿರಿ, ಶಾಲಿನಿ, ಚಂದ್ರಕಲಾಮೋಹನ್ ಕೊಟ್ಟ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಎ.ಎಸ್.ಮಧುಸೂಧನ್ ನಿರ್ದೇಶನದ ಸಿನಿಮಾವು ಪೈಸಾ ವಸೂಲ್ ಎನ್ನಬಹುದು. ಕರಣ್.ಬಿ.ಕೃಪಾ ಸಂಗೀತಕ್ಕೆ ಬೆನಕರಾಜು ಛಾಯಗ್ರಹಣ ಪೂರಕವಾಗಿದೆ. ಕುಲು ಮನಾಲಿಯಲ್ಲಿ ಚಿತ್ರೀಕರಿಸಿರುವ ಗೀತೆ ಸೊಗಸಾಗಿದೆ. ಸಂಕಲನ ಲಿಂಗರಾಜು, ಸಾಹಸ ಕುಂಗುಫುಚಂದ್ರು, ನೃತ್ಯ ರಘು-ಪ್ರಭುಶ್ರೀನಿವಾಸ್ ಅವರದಾಗಿದೆ. ಹಾರರ್, ಥ್ರಿಲ್ಲರ್ ಮೋಹಿಗಳಿಗೆ ಚಿತ್ರವು ಖಂಡಿತ ಇಷ್ಟವಾಗುತ್ತದೆ.
ನಿರ್ಮಾಪಕರು: ಶಿವಕುಮಾರ್.ಕೆ, ಮಧುಸೂಧನ್.ಎ.ಎಸ್.,ಪ್ರಶಾಂತ್‍ಕೊಡ್ಗೆದರ್
ಸಿನಿ ಸರ್ಕಲ್.ಇನ್ ವಿಮರ್ಶೆ
***
10/08/18
ವಿನೂತನ ಚಿತ್ರಕತೆ ಅಭಿಸಾರಿಕೆ
ಪ್ರಿಯನನ್ನು ಕೂಡಲು ಸಂಕೇತಸ್ಥಾನಕ್ಕೆ ಹೋಗುವ ಹೆಣ್ಣು ಎಂಬುದಕ್ಕೆ ‘ಅಭಿಸಾರಿಕೆ’ ಪದವನ್ನು ಬಳಸುತ್ತಾರೆ. ಇದೇ ಹೆಸರಿನ ಚಿತ್ರದಲ್ಲಿ ನಾಯಕ ಅಭಿ, ಸಾರಿಕೆ ನಾಯಕಿಯಾಗಿರುತ್ತಾರೆ. ಮೊದಲ ಬಾರಿ ನಿರ್ದೇಶನ ಹಾಗೂ ಪಾಲುದಾರರಾಗಿರುವ ಎ.ಎಸ್.ಮಧುಸೂಧನ್ ಹೇಳುವಂತೆ ಚಿತ್ರಕತೆ ವಿಭಿನ್ನವಾಗಿದ್ದು, ಅದನ್ನು ತಿಳಿಯಲು ಸಿನಿಮಾ ನೋಡಬೇಕು ಅಂತಾರೆ. ಇಬ್ಬರು ಪ್ರೀತಿಯಲ್ಲಿ ಬಿದ್ದಾಗ ಇವರ ದಾರಿಗೆ ಅಡ್ಡಿಪಡಿಸುವ ಖಳನಾಯಕ, ಮಧ್ಯದಲ್ಲೊಂದು ಮತ್ತೋಂದು ಹುಡುಗಿ ಪ್ರವೇಶ. ಮಹಿಳಾ ಪ್ರಧಾನ ಸೆಸ್ಪನ್ಸ್, ಥ್ರಿಲ್ಲರ್ ಕತೆಯಲ್ಲಿ ನಾಯಕ ತೇಜು ಕೆಲಸಕ್ಕೆ ಹುಡುಗನಾಗಿ ಹೊಸ ಅನುಭವ. ಸುನಾಲ್‍ಮಂತೇರೋ ನಾಯಕಿಯಾಗಿ ಮೊದಲ ಚಿತ್ರವಾಗಿದ್ದು, ಇದರ ಮೂಲಕ ಸಾಕಷ್ಟು ಅವಕಾಶಗಳು ಸಿಕ್ಕಿದೆಯಂತೆ. ಮಧ್ಯಮ ವರ್ಗದ ಕಾಲೇಜು ಹುಡುಗಿಯಾಗಿ ಭಾವನೆಗಳನ್ನು ತುಂಬಿಕೊಂಡಿರುವ ಪಾತ್ರ. ಉಪನಾಯಕಿಯಾಗಿ ರಚನಾ. ಸೈಕೋ ರೀತಿಯಲ್ಲಿ ವಿಚಿತ್ರವಾಗಿ ಮಾತನಾಡುತ್ತಾ ಅವಳು ತನ್ನದಾಗಬೇಕೆಂದು ಹಾತೊರೆಯುವ ಪಾತ್ರದಲ್ಲಿ ಯಶವಂತ್‍ಶೆಟ್ಟಿ ವಿಲನ್. ಉಳಿದಂತೆ ಬಿಗ್‍ಬಾಸ್ ಶಾಲಿನಿ, ಗಿರಿ, ಚಂದ್ರಕುಮಾರಿ, ಅಶೋಕ್‍ವಾರಿಯಾ ನಟಿಸಿದ್ದಾರೆ. ಬೆಂಗಳೂರು ಹಾಗೂ ಒಂದು ಹಾಡನ್ನು ಕುಲು ಮನಾಲಿಯಲ್ಲಿ ಚಿತ್ರೀಕರಿಸಲಾಗಿದೆ. ಚಿನ್ಮಯ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಚೆನ್ನೈನ ಕರಣ್.ಬಿ.ಕೃಪಾ ಸಂಗೀತ ಸಂಯೋಜಿಸಿದ್ದಾರೆ.

ಫೆಬ್ರವರಿಯಲ್ಲಿ ಛಾಯಗ್ರಹಣ ಬೆನಕರಾಜು-ವೇಲುಮುರುಗನ್, ಸಂಕಲನ ಲಿಂಗರಾಜು, ಸಾಹಸ ಕುಂಗುಫುಚಂದ್ರು, ನೃತ್ಯ ರಘು-ಪ್ರಭುಶ್ರೀನಿವಾಸ್ ಅವರದಾಗಿದೆ. ಪ್ರಚಾರದ ಸಲುವಾಗಿ ಒಂದು ಪ್ರೋಮೋಷನ್ ಸಾಂಗ್‍ದಲ್ಲಿ ಕಾವ್ಯಗೌಡ, ದರ್ಶತ್‍ಗೌಡ ಹೆಜ್ಜೆ ಹಾಕಿದ್ದಾರೆ, ಶಿವಕುಮಾರ್.ಕೆ ಮತ್ತು ಪ್ರಶಾಂತ್‍ಕೊಡ್ಗೆದಾರ್ ನಿರ್ಮಾಣ ಮಾಡಿರುವ ಚಿತ್ರವು ಮಾರ್ಸ್ ಸುರೇಶ್ ಮುಖಾಂತರ ಸುಮಾರು 80ಕ್ಕೂ ಕೇಂದ್ರಗಳಲ್ಲಿ ಶುಕ್ರವಾರದಂದು ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/08/18ಪ್ರಚಾರದ ಗೀತೆಯಲ್ಲಿ ಚಿತ್ರದ ಮಾಹಿತಿ
ವಿಭಿನ್ನ ಚಿತ್ರ ‘ಅಭಿಸಾರಿಕೆ’ ತೆರೆಗೆ ಬರಲು ಸನ್ನಿಹಿತವಾಗಿರುವುದರಿಂದ ತಂಡವು ಪ್ರಚಾರದ ಸಲುವಾಗಿಯೇ ಒಂದು ಪ್ರಮೋಶನಲ್ ಗೀತೆಯನ್ನು ಸಿದ್ದಪಡಿಸಿದೆ. ಮೆಲೋಡಿ ಜೊತೆಗೆ ಫಾಸ್ಟ್ ಸಂಗೀತ ಸಂಯೋಜಿಸುವುದು ವಿಶೇಷವಾಗಿದೆ. ಕರಣ್.ಬಿ.ಕೃಪ ಸಂಗೀತದ ಹಾಡಿಗೆ ದರ್ಶಿತ್, ಕಾವ್ಯಜೋಡಿ ಹೆಜ್ಜೆ ಹಾಕಿದ್ದಾರೆ. ಗೀತೆಯ ಸಾಹಿತ್ಯವು ಚಿತ್ರದ ಸಾರಾಂಶವನ್ನು ಹೇಳುತ್ತದೆ. ಇದೇ ವಾರದಂದು ಟ್ರೈಲರ್, ಗೀತೆಯನ್ನು ಏಕಕಾಲಕ್ಕೆ ಯೂಟ್ಯೂಬ್ ಬಿಡಲಾಗುತ್ತಿದೆ. ಯಶ್‍ಶೆಟ್ಟಿ, ತೇಜ್ ನಾಯಕರು, ಸೋನಾಲ್‍ಮಾಂತೆರಿಯೋ ನಾಯಕಿ. ಇವರೊಂದಿಗೆ ಚಂದ್ರಕಲಾಮೋಹನ್, ಶಾಲಿನಿ, ಅಶೋಕ್‍ವರ್ಯ, ಗಿರಿ, ರಚನಾ ಮುಂತಾದವರ ನಟನೆ ಇದೆ. ಮಧುಸೂದನ್ ನಿರ್ದೇಶನ ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು. ಛಾಯಗ್ರಹಣ ಬೆನಕರಾಜು-ವೇಲುಮುರುಗನ್, ಸಂಕಲನ ಲಿಂಗರಾಜು.ಕೆ.ಆರ್, ನೃತ್ಯ ರಘು-ಪ್ರಭುಶ್ರೀನಿವಾಸ್, ಸಾಹಿತ್ಯ ಚಿನ್ಮಯ್, ಸಾಹಸ ಕುಂಗುಫುಚಂದ್ರು,. ಮೊದಲಬಾರಿ ನಿರ್ಮಾಣ ಮಾಡಿರುವ ಶಿವಕುಮಾರ್.ಕೆ, ಪ್ರಶಾಂತ್‍ಕೊಡ್ಗೆದರ್ ಅವರ ಚಿತ್ರವು ಮುಂದಿನ ತಿಂಗಳು 11ರಂದು ರಾಜ್ಯದ್ಯಂತ ಬಿಡುಗಡೆ ಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
24/07/18
ಬಿಡುಗಡೆಗೊಂಡ ಅಭಿಸಾರಿಕೆ ಹಾಡುಗಳು
ಪ್ರಿಯನನ್ನು ಕೂಡಲು ಸಂಕೇತಸ್ಥಾನಕ್ಕೆ ಹೋಗುವ ಹೆಣ್ಣು ಎಂಬುದಕ್ಕೆ ‘ಅಭಿಸಾರಿಕೆ’ ಪದವನ್ನು ಬಳಸುತ್ತಾರೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಆತನ ಹೆಸರು ಹೆಸರು ಅಭಿ, ಆಕೆ ಸಾರಿಕೆ. ಇಬ್ಬರು ಪ್ರೀತಿಯಲ್ಲಿ ಬಿದ್ದಾಗ ಇವರ ದಾರಿಗೆ ಅಡ್ಡಿಪಡಿಸುವ ಖಳನಾಯಕ, ಮಧ್ಯದಲ್ಲೊಂದು ಮತ್ತೋಂದು ಹುಡುಗಿ ಪ್ರವೇಶ. ಮಹಿಳಾ ಪ್ರಧಾನ ಸೆಸ್ಪನ್ಸ್, ಥ್ರಿಲ್ಲರ್ ಕತೆಯಲ್ಲಿ ತೇಜು ನಾಯಕನಾಗಿ ಹೊಸ ಅನುಭವ. ಸುನಾಲ್‍ಮಂತೇರೋ ನಾಯಕಿಯಾಗಿ ಮೂರನೆ ಚಿತ್ರ. ಉಪನಾಯಕಿಯಾಗಿ ರಚನಾ. ಸೈಕೋ ರೀತಿಯಲ್ಲಿ ವಿಚಿತ್ರವಾಗಿ ಮಾತನಾಡುತ್ತಾ ಅವಳು ತನ್ನದಾಗಬೇಕೆಂದು ಹಾತೊರೆಯುವ ಪಾತ್ರದಲ್ಲಿ ಯಶಸ್‍ಶೆಟ್ಟಿ ವಿಲನ್. ಚಿನ್ಮಯ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಚೆನ್ನೈನ ಕರಣ್.ಬಿ.ಕೃಪಾ ಸಂಗೀತ ಸಂಯೋಜಿಸಿದ್ದಾರೆ. ಎ.ಎಸ್.ಮಧುಸೂಧನ್ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಪಾಲುದಾರರು.

ಚಿತ್ರದ ಮೊದಲ ಹಂತದ ಪ್ರಚಾರಕ್ಕಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ನಿರ್ಮಾಪಕರ ಹಿತೈಷಿಗಳಾಗಿದ್ದ ಹಿರಿಯ ನಟಿ ಅಭಿನಯ, ಬಿಗ್ ಬಾಸ್ ಖ್ಯಾತಿ ಜೆಕೆ, ರವಿಕಿರಣ್, ವಿತರಕ ಮಹೇಶ್‍ಕೊಠಾರಿ ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದರು. ಛಾಯಗ್ರಹಣ ಬೆನಕರಾಜು-ವೇಲುಮುರುಗನ್, ಸಂಕಲನ ಲಿಂಗರಾಜು, ಸಾಹಸ ಕುಂಗುಫುಚಂದ್ರು, ನೃತ್ಯ ರಘು-ಪ್ರಭುಶ್ರೀನಿವಾಸ್ ಅವರದಾಗಿದೆ. ಕಾರ್ಯಕ್ರಮದಲ್ಲಿ ನಾಯಕ ಗೈರುಹಾಜರಿದ್ದರೆ, ಎಲ್ಲವು ಮುಗಿದ ನಂತರ ನಾಯಕಿ ಹಾಜರಾಗಿ ಅದು-ಇದು ಹೇಳಿ ಪಾತ್ರದ ವಿವರ ತಿಳಿಸಲಿಲ್ಲ. ಶಿವಕುಮಾರ್.ಕೆ ಮತ್ತು ಪ್ರಶಾಂತ್‍ಕೊಡ್ಗೆದಾರ್ ನಿರ್ಮಾಣ ಮಾಡಿರುವ ಚಿತ್ರವು ಏಪ್ರಿಲ್‍ನಲ್ಲಿ ತೆರೆಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್. ಇನ್ ನ್ಯೂಸ್
-11/02/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore