HOME
CINEMA NEWS
GALLERY
TV NEWS
REVIEWS
CONTACT US
ಸಿದ್ದು ಪುರುಷರ ಪವಾಡ, ಆದರ್ಶಗಳು
ಬಹು ಕಾಲದ ನಂತರ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ‘ ಅಬ್ಬೆ ತುಮಕೂರು ಸಿದ್ದಿ ಪುರುಷ ವಿಶ್ವಾರಾಧ್ಯರು’ ಎಂಬ ಅದ್ಬುತ ಭಕ್ತಿಭಾವದ ಬ್ರಾಂಡ್ ಸಿನಿಮಾ ನೀಡಿದ್ದಾರೆ. ಶತಮಾನಗಳ ಹಿಂದೆ ಮಹಾನ್ ಸಿದ್ದಪುರುಷ ಅನಿಸಿಕೊಂಡಿದ್ದ ಅಬ್ಬೆ ತುಮಕೂರು ವಿಶ್ವಾರಾಧ್ಯರ ಹುಟ್ಟು, ಬಾಲ್ಯ, ಜೀವನ ಮತ್ತು ಪವಾಡಗಳ ಬದುಕನ್ನು ಸಾರುವ ಚಿತ್ರವಾಗಿದೆ. ಸಿದ್ದಾರೂಡ, ಸಾಯಿಬಾಬ ಅವರಂತೆ ಲೋಕ ಕಲ್ಯಾಣಕ್ಕಾಗಿ ಬದುಕು ಸಾಧಿಸಿದವರು. ಮತಗಳ ಜಗಳವನ್ನು ತೊರೆದು ಹಾಕಿ, ಒಳ್ಳೆಯದನ್ನು ಮಾಡುವುದು ಬಾಳಿಗೆ ಒಳಿತು ಅಂತ ಸಾರಿದವರು. ವಿಶ್ವರಾಧ್ಯರು ಎಂದರೆ ಶಿವನ ತದ್ರೂಪ ಎನ್ನುವಂತೆ, ಶಿವನ ಕೃಪೆಯಿಂದಲೇ ಹುಟ್ಟಿದ್ದವರು. ಸಾಮಾನ್ಯ ಮನುಷ್ಯನಾಗಿದ್ದರೂ ದೇವರ ರೂಪದಲ್ಲಿ ಜೀವನ ನಡೆಸುತ್ತಾ ಸತ್ತವರಿಗೆ ಮರು ಜೀವ, ಹಸಿದವರಿಗೆ ಆಹಾರ, ಕಣ್ಣಿಲ್ಲದವರೆಗೆ ದೃಷ್ಟಿ ಬರಿಸುವುದು, ಖಾಯಿಲೆಯಿಂದ ನರಳುತ್ತಿರುವ ರೋಗಿಗೆ ಚಿಕಿತ್ಸೆ ನೀಡಿ ವಾಸಿ ಮಾಡುತ್ತಾ ಕಾಯಕವೇ ಕೈಲಾಸವೆಂದು ನಂಬಿದ ಮಹಾನ್ ಜ್ಘಾನಿ. ಅಂದಿನ ಸಮಾಜದಲ್ಲಿ ದೇವರ ರೂಪದಂತೆ ಬದುಕಿದ್ದ ವಿಶ್ವಾರಾದ್ಯರು ಪ್ರಸಕ್ತ ಕಾಲಕ್ಕೂ ಸರಿಹೊಂದುತ್ತಾರೆಂದು ಪರಿಚಯಿಸಿರುವುದು ನಿರ್ದೇಶಕರ ಪರಿಶ್ರಮ ಎದ್ದು ಕಾಣಿಸುತ್ತದೆ.

ಭಕ್ತಿ ಪ್ರಧಾನ ಚಿತ್ರ ಆಗಿದ್ದರಿಂದ ಮನರಂಜನೆಗೆ ಸ್ವಲ್ಪ ಕೊರತೆ ಇದ್ದರೂ, ನೋಡುಗನಿಗೆ ಭಕ್ತಿಭಾವದಲ್ಲಿ ಮಿಂದಂತೆ ಆಗುತ್ತದೆ. ಪೂರ್ಣ ಚಿತ್ರದಲ್ಲಿ ವಿಶ್ವಾರಾಧ್ಯರಾಗಿ ಅದ್ಬುತ ನಟನೆ ಮಾಡಿರುವ ರಾಮ್‍ಕುಮಾರ್ ಅವರ ಆಕರ್ಷಕ ನೋಟ, ಪ್ಲಸ್ ಪಾಯಿಂಟ್ ಆಗಿದೆ. ಪತ್ನಿ ಬಸವಾಂಬಿಕೆಯಾಗಿ ಶೃತಿ, ವಿಶ್ವಾರಾಧ್ಯರ ತಂದೆಯಾಗಿ ರಮೇಶ್‍ಭಟ್, ತಾಯಿ ಪಾತ್ರದಲ್ಲಿ ಚಿತ್ರಾಶಣೈ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಬಲ್ಲಾಳ್ ಗೌಡನಾಗಿ ಗಣೇಶ್‍ರಾವ್, ರಾಮಣ್ಣನಾಗಿ ಶೋಭರಾಜ್, ಭಕ್ತರುಗಳಾಗಿ ಸಾಧುಕೋಕಿಲ,ಓಂಪ್ರಕಾಶ್‍ರಾವ್, ಹರೀಶ್, ದಿಶಾಪೂವಯ್ಯ. ಊರ ಗೌಡನಾಗಿ ಜೈಜಗದೀಶ್, ರಾಚೋಟಿ ಸ್ತ್ರೀಗಳಾಗಿ ಶ್ರೀನಿವಾಸಮೂರ್ತಿ ನೀಡಿದ ಕೆಲಸಕ್ಕೆ ಧಕ್ಕೆ ತಂದಿಲ್ಲ. ಬಲರಾಂ ಸಂಗೀತ, ಮತ್ತು ಜಿ.ಜೆ.ಕೃಷ್ಣ ಛಾಯಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಜನತೆಗೆ ವಿಶ್ವಾರಾದ್ಯರ ಪವಾಡಗಳು ತಿಳಿಯಲೆಂದು ಶ್ರೀ ಶ್ರೀ ಡಾ.ಗಂಗಾಧರ ಮಹಾಸ್ವಾಮಿಗಳು ಮತ್ತು ಮಠದ ಗೆಳಯದ ಬಳಗವು ಜಂಟಿಯಾಗಿ ನಿರ್ಮಾಣ ಮಾಡಿರುವುದು ಒಳ್ಳೆಯ ಕೆಲಸ ಎನ್ನಬಹುದಾಗಿದೆ.
ಸಿನಿ ಸರ್ಕಲ್.ಇನ್ ವಿಮರ್ಶೆ

-14/04/18

SAIPRAKASH BEGINS WORK ON HIS 99TH DIRECTORIAL FILM
D
irector Saiprakash has begun work on his 99th directorial film for which shoot is currently in progress. The film is titled Abbey Tumakurusidda Purusha Vishwaradhyaru. The film is based on the life, teachings, philosophy and the miracles of the godman. A special set of Kailasa was erected at a studio in Bengaluru on the first day of shoot. The film is Gangadhar Swamy who has also penned the story. The second schedule of the film has commenced.

 According to director Saiprakash, the godman is an avatar of Lord Shiva. The first day of shoot was shot against a green mat background in the presence of triumvirate Brahma, Vishnu and Maheshwara. The opening sequence was that of Lord Shiva promising Mother Earth that he will take an avatar to solve the worldly problems. Saikumar is portraying the role of the godman. The film also stars Shruthi, Srinivasa Murthy, Chitra Shenoy, Ramesh Bhat, Sadhu Kokila and Omprakash Rao among others. The third schedule of the film will start in August.

Balaram will be scoring the music to Srichandra’s lyrics. J G Krishna is the cameraman.
-5/07/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/