HOME
CINEMA NEWS
GALLERY
TV NEWS
REVIEWS
CONTACT US
ಶಿವರಾಜ್‍ಕುಮಾರ್ ಆಯುಷ್ಮಾನ್‍ಭವ
ದ್ವಾರಕೀಶ್ ಬ್ಯಾನರ್, ಐವತ್ತೆರಡನೇ ನಿರ್ಮಾಣದ ‘ಆಯುಷ್ಮಾನ್‍ಭವ’ ಚಿತ್ರ ಮೊದಲ ಸುದ್ದಿಗೋಷ್ಟಿ ಇತ್ತೀಚೆಗೆ ನಡೆಯಿತು. ಗುರುಕಿರಣ್ ಮಾತನಾಡಿಇಷ್ಟದ ನಾಯಕ ನಟ ಶಿವಣ್ಣ.ಸತ್ಯಇನ್ ಲವ್ ಐವತ್ತನೇಚಿತ್ರವಾಗಿತ್ತು.ಈಗ ನೂರು ಸಂಖ್ಯೆಗೂಅವರದೇಆಗಿರುವುದು ಸುಕೃತಎನ್ನಬಹುದು. ಈ ಸಿನಿಮಾದ ಮೇಲೆ ಜಾಸ್ತಿ ಭರವಸೆಇಟ್ಟುಕೊಂಡು ಬನ್ನಿರೆಂದು ಹೇಳಲು ಇಷ್ಟಪಡುತ್ತೇನೆ. ಚಿತ್ರರಂಗಕ್ಕೆ ಪರಿಚಯಿಸಿದ ಉಪೇಂದ್ರ, ಕೆಲಸ ಕಲಿಸಿಕೊಟ್ಟ ವಿ.ಮನೋಹರ್‍ಅವರಿಂದಇಲ್ಲಿಯತನಕ ಬಂದಿದ್ದೇನೆಂದು ನೆನಪು ಮಾಡಿಕೊಂಡರು.

ಐವತ್ತು ವರ್ಷದಲ್ಲಿ ಏಳುಬೀಳುಗಳನ್ನು ಕಾಣುತ್ತಾಒಬ್ಬನೆದೋಣಿಯಲ್ಲಿ ಪ್ರಯಾಣ ಮಾಡಿದ್ದೇನೆ. ಇದು ಅಷ್ಟು ಸುಲಭವಲ್ಲ. ಭಾರತದ ಕೆಲವೇ ಸಂಸ್ಥೆಗಳಲ್ಲಿ ದ್ವಾರಕೀಶ್ ಸಂಸ್ಥೆಯು ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ನಿರ್ಮಾಪಕಎಂದು ವರದಪ್ಪ-ಡಾ.ರಾಜ್‍ಕುಮಾರ್ ಮೇಯರ್‍ಮುತ್ತಣ್ಣ ಮೂಲಕ ಬುನಾದಿ ಹಾಕಿದ್ದರಿಂದಲೇರಜನಿಕಾಂತ್, ವಿಷ್ಣುವರ್ಧನ್, ಶಂಕರ್‍ನಾಗ್, ಅಂಬರೀಷ್‍ಅವರಚಿತ್ರಗಳಿಗೆ ಬಂಡವಾಳ ಹೂಡಲು ಅವಕಾಶ ಒದಗಿಬಂತು. ಆಗಿನ ಕಾಲದಲ್ಲಿ ಬಜೆಟ್ ಹಾಕಿ ಸಿನಿಮಾ ಮಾಡಿದವರಲ್ಲ. ಹಾಗಂತ ಲೆಕ್ಕಹಾಕಿದ್ದರೆ ಸಿಂಗಪೂರ್‍ದಲ್ಲಿ ರಾಜಕುಳ್ಳ, ಆಫ್ರಿಕಾದಲ್ಲಿ ಶೀಲಾ ಬರುತ್ತಿರಲಿಲ್ಲ. ಮದ್ರಾಸ್‍ನ ವಾಹಿನಿ ಸ್ಟುಡಿಯೋದಲ್ಲಿ ನನ್ನದೆ ನಾಯಕತ್ವದ ‘ಪ್ರಚಂಡಕುಳ್ಳ’ಕ್ಕೆ 12 ಫ್ಲೋರ್‍ನಲ್ಲಿ ಸೆಟ್ ಹಾಕಿ ಶೂಟ್ ಮಾಡಲಾಗಿತ್ತು. ನನ್ನ ಬದುಕು ಇಸಿಜಿ ತರಹಇದೆ.ಸಿನಿಮಾ ನೋಡಿದ್ದೇನೆ. ನಿರ್ದೇಶಕರು ಕೆ.ಬಾಲಚಂದರ್, ಶಿವರಾಜ್‍ಕುಮಾರ್ ಕಮಲಹಾಸನ್‍ರಂತೆ, ರಚಿತಾರಾಮ್ ಶ್ರೀದೇವಿಯಂತೆ ಪರದೆ ಮೇಲೆ ಕಂಡು ಬರುತ್ತಾರೆ. ಶಿವಣ್ಣ ಪ್ರಾಮಾಣಿಕ ವ್ಯಕ್ತಿ, ಕೇವಲ ಎರಡೂವರೆ ದಿವಸದಲ್ಲಿಡಬ್ಬಿಂಗ್ ಮುಗಿಸಿದ್ದಾರೆಎಂದುದ್ವಾರಕೀಶ್ ಹೊಗಳಿದರು.

ಶಿವರಾಜ್‍ಕುಮಾರ್, ಗುರುಕಿರಣ್, ಪಿ.ವಾಸು, ಹಿರಿಯ ಸಂಸ್ಥೆ, ಅನಂತ್‍ನಾಗ್ ಇವರುಗಳು ಇರುವುದರಿಂದ ಲೆಜೆಂಡ್ ಸಿನಿಮಾಎನ್ನಬಹುದು. ಇಪ್ಪತ್ತೇಳು ವರ್ಷಕ್ಕೆಇಂತಹ ನುರಿತತಂಡದಲ್ಲಿಇರುವುದು. ಪ್ರ್ರತಿಭೆತೋರಿಸಲು, ಎಲ್ಲದಕ್ಕಿಂದ ಹೆಚ್ಚಾಗಿ ಶಿವಣ್ಣ ಅವರೊಂದಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಅವಕಾಶ ಸಿಕ್ಕಿದ್ದು ಮರೆಯಲಿಕ್ಕೆ ಸಾದ್ಯವಿಲ್ಲ ಎಂದರುರಚಿತಾರಾಮ್.

ಯುವಕಲಾವಿದರುಚೆನ್ನಾಗಿ ನಟಿಸಿದ್ದಾರೆ.ಮತ್ತೆರಡುಕತೆ ಕೇಳಿದ್ದೇನೆ. ಇವರಿಂದಲೇ ಸಿನಿಮಾ ಮಾಡಿಸುತ್ತೇನೆ.ಕಾಡಿನಲ್ಲಿರಚಿತಾರಾಮ್‍ಅವರನ್ನುಚೆನ್ನಾಗಿ ಓಡಿಸಿದ್ದೇನೆ. ದೃಶ್ಯವು ಸಹಜವಾಗಿ ಬರಲೆಂದು ಈ ರೀತಿ ಮಾಡಲಾಯಿತು. ಗುರುಕಿರಣ್ ಕಾಂಬಿನೇಶನ್‍ದಲ್ಲಿ ಬಂದಿರುವ ಹಾಡುಗಳು ಹಿಟ್‍ಆಗಿದೆ. ಸಾಧುಕೋಕಿಲ ತಡವಾಗಿ ಬಂದರೂ ಒಳ್ಳೆ ನಟ, ಪಿ.ವಾಸು ಅವರ ನಿರ್ದೇಶನದಲ್ಲಿಎರಡನೇ ಬಾರಿ ಅಭಿನಯಿಸಿದ್ದೇನೆ. ಅವರುಎಲ್ಲಿಯೂ ಲಾಜಿಕ್‍ನ್ನು ಬಿಟ್ಟುಕೊಟ್ಟಿಲ್ಲ. ಮನುಷ್ಯನ ಬದುಕಿನ ಪಯಣದಲ್ಲಿ ಭಾವನೆಗಳು ಬರುತ್ತವೆ. ಅದು ಒಳ್ಳೇದು,ಕೆಟ್ಟದ್ದು ಇರುತ್ತದೆ. ಅದರಲ್ಲಿ ಸಿಲುಕಿಕೊಂಡು ಹೇಗೆ ಒದ್ದಾಡುತ್ತಾ, ತಪ್ಪು ಮಾಡಿದಂತೆ ಭಾಸವಾಗುತ್ತದೆ.ಜೊತೆಗೆ ಸಂಗೀತಪ್ರಧಾನವಾಗಿದೆಎಂದು ಶಿವರಾಜ್‍ಕುಮಾರ್ ಹೇಳಿದರು.

ಇಪ್ಪತ್ತು ವರ್ಷದಿಂದ ಶಿವಣ್ಣ ಅವರೊಂದಿಗೆಚಿತ್ರ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು.ಹಿಂದಿನ ಸಿನಿಮಾಸಾಧಾರಣವ್ಯಾಪಾರವಾಗಿತ್ತು.ಅಪ್ಪ ಹೇಳಿದಂತೆ ಶಿವಣ್ಣ ಅವರನ್ನುಸಂಪರ್ಕಿಸಲಾಗಿ ಕೇವಲ ಇಪ್ಪತ್ತು ನಿಮಷದಲ್ಲಿಕತೆ ಕೇಳಿ ಓಕೆ ಮಾಡಿದರು. ಐದು ಹಾಡುಗಳುಇರಲಿದೆಎಂದು ನಿರ್ಮಾಪಕಯೋಗೀಶ್‍ದ್ವಾರಕೀಶ್ ಮಾಹಿತಿ ನೀಡಿದರು ನಿಧಿಸುಬ್ಬಯ್ಯು, ಸಾಧುಕೋಕಿಲ, ಛಾಯಾಗ್ರಾಹಕ ಪಿ.ಕೆ.ಹೆಚ್.ದಾಸ್ ಉಪಸ್ತಿತರಿದ್ದು ಅನುಭವಗಳನ್ನು ಹಂಚಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
28/09/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore