HOME
CINEMA NEWS
GALLERY
TV NEWS
REVIEWS
CONTACT US

ಇದೇತಿಂಗಳು ಆನೆಬಲ ನಿಮ್ಮ ಮುಂದೆ
ದೇಸಿಕತೆ ಹೊಂದಿರುವ ‘ಆನೆಬಲ’ ಚಿತ್ರಕ್ಕೆ ಸೂನಗಹಳ್ಳಿ ರಾಜುಕತೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‍ಕಟ್ ಹೇಳಿದ್ದಾರೆ. ಇಲ್ಲಿಯವರೆಗೂಯಾರೂಟಚ್ ಮಾಡದ ಮುದ್ದೆಯ ಹಿಂದೆ ಮತ್ತು ಮುಂದೆ ಆಗುವ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಕಿರಾತಕ, ತಿಥಿ ನಂತರ ಸಕ್ಕರೆ ನಾಡಿನಜನರ ಬದುಕಿನಚಿತ್ರಣ, ಅಲ್ಲಿನ ಪ್ರಾಕೃತಿಕ ಸೌಂದರ್ಯ, ಜನಪದ ಸಂಸ್ಕ್ರತಿ, ಸೋಬಾನ ಪದಗಳ ಬಳಕೆ, ಗ್ರಾಮೀಣ ಪರಿಸರವನ್ನು ನೋಡಬಹುದು. 120ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದು, ನಾಯಕ ಹೂರತುಪಡಿಸಿ, ಶೇಕಡ 90ರಷ್ಟು ಹೊಸಬರಾಗಿದ್ದು, ಅವರೇ ಪಾತ್ರಕ್ಕೆಧ್ವನಿ ನೀಡಿದ್ದಾರೆ. ಈ ಪೈಕಿ 120 ವರ್ಷದ ಹಿರಿಯ ಮುತ್ಸದ್ದಿ ವಳಗೆರೆಹಳ್ಳಿಗೌರಮ್ಮ ನಟಿಸುವಜೊತೆಗೆಡಬ್ ಮಾಡಿಅಚ್ಚರಿ ಮೂಡಿಸಿದ್ದಾರೆ.ಸಹಜತೆತುಂಬದೆ ನೈಜತೆಗೆ ಹೆಚ್ಚು ಒತ್ತುಕೊಡಲಾಗಿದೆ. ಮುದ್ದೆಕುರಿತಂತೆಡಾ.ವಿ.ನಾಗೇಂದ್ರಪ್ರಸಾದ್ ವಿಶೇಷವಾಗಿ ಹಾಡು ಬರೆದಿರುವುದುಚಿತ್ರಕ್ಕೆ ಮೆರೆಗುತಂದಿದೆ.ಪೂರ್ಣಚಂದ್ರತೇಜಸ್ವಿ ಸಂಗೀತವಿದೆ.

ಕನ್ನಡ ಭಾಷೆ ಬಗ್ಗೆ ಅಭಿಮಾನಇರುವಯುವಕನಾಗಿ ಸಾಗರ್ ನಾಯಕ. ಹಳ್ಳಿಯ ಜಂಬದ ಹುಡುಗಿಯಾಗಿರಕ್ಷಿತಾ ನಾಯಕಿ. ಇವರೊಂದಿಗೆಗೌತಂ, ಚಿರಂಜೀವಿ, ಹರೀಶ್‍ಶೆಟ್ಟಿ, ಕೀಲಾರಉದಯ್, ಸುಮಾ, ರೂಪ ಮತ್ತುಕಾಮಿಡಿ ಕಿಲಾಡಿಗಳು ಖ್ಯಾತಿಯ ಮುತ್ತುರಾಜು ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಜಿ.ಟಿ.ಬೆಟ್ಟೇಗೌಡಕೀಲಾರ, ಸಂಕಲನ ಬಿ.ಎಸ್.ಕೆಂಪರಾಜು, ನೃತ್ಯ ಕಲೈ, ಸಾಹಸ ಅಲ್ಟಿಮೇಟ್‍ಶಿವು ಅವರದಾಗಿದೆ. ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳ್ಳಿ ರೈತನಾಗಿದ್ದು, ಜಿಲ್ಲೆಯ ಕಲೆ,ಸಂಸ್ಕ್ರತಿಎತ್ತಿ ಹಿಡಿಯುವ ಸಲುವಾಗಿ ಬಂಡವಾಳ ಹೂಡಿದ್ದಾರೆ. ಪ್ರಚಾರದ ಸಲುವಾಗಿ ಮುಂಗಾರುಮಳೆ ನಿರ್ಮಾಪಕಈ.ಕೃಷ್ಣಪ್ಪ ಬಾಮೈದ ನಿರ್ಮಾಣ ಮಾಡಿರುವಚಿತ್ರದಟ್ರೈಲರ್‍ನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/02/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore