HOME
CINEMA NEWS
GALLERY
TV NEWS
REVIEWS
CONTACT US
ಡಾ.ರಾಜ್‍ಕುಮಾರ್ ಮೆಚ್ಚಿ ಹೊಗಳಿದ ಕಥೆ
ವರನಟ ಡಾ.ರಾಜ್‍ಕುಮಾರ್ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿದ ಸಂದರ್ಭದಲ್ಲಿ ಬೆಟ್ಟದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾಗ ಆಧ್ಯಾತ್ಮಿಕ ಹಸಿವು ಇದೆ ಎಂದು ಹೇಳಿದ್ದಾರೆ. ಇದೇ ಸಮಯವೆಂದು ಇವರ ಜೊತೆಗೆ ಒಬ್ಬರೆ ಇದ್ದ ವ್ಯಕ್ತಿಯು ಒಂದು ಕತೆ ಹೇಳಿದ್ದಾರೆ. ಬಹಳ ಚೆನ್ನಾಗಿದೆ ಎಂದು ಅಣ್ಣಾವ್ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದು ಕಟ್ ಮಾಡಿದರೆ ಇಂದು ‘ಆಕಳಂಕ’ ಚಿತ್ರವಾಗಿದೆ. ವರನಟನಿಗೆ ಕತೆ ಹೇಳಿದ್ದು, ಅದಕ್ಕೆ ಚಿತ್ರಕತೆ,ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿದ್ದು ಒಬ್ಬರೇ ಅದು ಹಿರಿಯ ಸಾಹಿತಿ ಸಿ.ವಿ.ಶಿವಶಂಕರ್. ಕನ್ನಡದ ಸಾರ ಇರುವ ಸೂಪರ್ ಹಿಟ್ ಹಾಡುಗಳನ್ನು ಆಲಿಸಿದರೆ ಇವರು ಕಣ್ಣ ಮುಂದೆ ಬರುತ್ತಾರೆ. ದುರಳ ವ್ಯಕ್ತಿಯೊಬ್ಬನು ಧರ್ಮರಾಯನ ಪಾದ ತೋರಿಸುವುದಾಗಿ ವೃದ್ದರನ್ನು ದೂರದ ಸ್ಥಳಕ್ಕೆ ಕರೆದುಕೊಂಡು ಅಲ್ಲಿಯೇ ಬಿಟ್ಟು ಬರುವುದೇ ಈತನ ಕಾಯಕ. ಹೀಗೆ ಮಾಡುವಾಗ ಒಂದು ಹಂತದಲ್ಲಿ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದು ಮನಸ್ಸು ಪರಿವರ್ತನೆಯಾಗಿ ಕಳಂಕರಹಿತನಾಗುವುದೇ ಕತೆಯ ಸಾರಾಂಶವಾಗಿದೆ.

ನಿರ್ದೇಶಕರ ಎರಡನೆ ಪುತ್ರ ಲಕ್ಷಣ ನಾಯಕ. ಇವರ ತಾಯಿಯಾಗಿ ಗಿರಿಜಾಲೋಕೇಶ್ ಎರಡು ಹಾಡುಗಳಲ್ಲಿ ಕಾಣಿಸಿಕೊಂಡಿದ್ದು, ಬಾಲೆಯಾಗಿದ್ದಾಗ ಸಿವಿ ಶಿವಶಂಕರ್ ಅವರಿಂದ ನೃತ್ಯ ಕಲಿತಿದ್ದರಿಂದ ಗುರುಗಳ ಚಿತ್ರದಲ್ಲಿ ನಟನೆ ಮಾಡಿದ್ದು ಖುಷಿ ತಂದಿದೆಯಂತೆ. ತಾರಗಣದಲ್ಲಿ ಮಣಿಮಾರನ್, ದೊಡ್ಡಣ್ಣ, ದತ್ತಣ್ಣ, ವಸುಧ, ಬೆಂಗಳೂರುನಾಗೇಶ್, ಆಂಜನಪ್ಪ, ಗಣೇಶ್‍ರಾವ್ ಅಭಿನಯಿಸಿದ್ದಾರೆ. ಮೈಸೂರು, ಮೇಕೆದಾಟು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಒಂಬತ್ತು ಹಾಡುಗಳಿಗೆ ಎಂ.ಎಸ್.ಸತ್ಯು ಪುತ್ರ ಶಿವಸತ್ಯ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ಸಂಕಲನ, ವೆಂಕಟ್ ಛಾಯಗ್ರಹಣ, ಕೌರವವೆಂಕಟೇಶ್ ಸಾಹಸವಿದೆ. ಹಿರಿಯರಿಂದ ನಿರ್ದೇಶನ ಮಾಡಿಸುವ ಹಂಬಲದಿಂದ ಗೋವಿಂದರಾಜ್ ನಿರ್ಮಾಣ ಮಾಡಿರುವ ಸಿನಿಮಾವು ಸದ್ಯದಲ್ಲೆ ತೆರೆಕಾಣಲಿದೆ. ಪ್ರಚಾರದ ಸಲುವಾಗಿ ಎರಡು ಹಾಡುಗಳು ಮತ್ತು ಟ್ರೈಲರ್‍ನ್ನು ಮಾದ್ಯಮದವರಿಗೆ ತೋರಿಸಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/07/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore