HOME
CINEMA NEWS
GALLERY
TV NEWS
REVIEWS
CONTACT US
ಸಾಹಸ ,ಕುತೂಹಲದ ಆಗಂತುಕ
ಓಜೆಸ್ ಸಿನಿಮಾ ನಿರ್ಮಾಪಕ ರಜತ್‍ರಘುನಾಥ್ ಈ ಬಾರಿ ‘’ಆಗಂತುಕ’’ ಚಿತ್ರಕ್ಕೆ ಕತೆ ಬರೆದು ನಿರ್ಮಾಣ ಮಾಡುವ ಜೊತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕತೆಯು ಕಾಡಿನ ಹಿನ್ನಲೆಯಲ್ಲಿ ನಡೆಯಲಿದ್ದು, ಸೆಸ್ಪೆನ್ಸ್, ಥ್ರಿಲ್ಲರ್ ಕುತೂಹಲ ಅಂಶಗಳು ಇರಲಿದೆ. ಕಾಡಿನಲ್ಲಿ 10 ಜನರ ತಂಡವೊಂದು ಸಾಹಸ ಮಾಡುವಾಗ ಪೋಲೀಸರು ಮಧ್ಯ ಪ್ರವೇಶಿಸುತ್ತಾರೆ. ಇದರಿಂದ ಮುಂದೇನು ಆಗುತ್ತದೆ ಎಂಬುದನ್ನು ಸಿನಿಮಾ ನೋಡಬೇಕಂತೆ. ಮಳೆಯ ವಾತವತಣ ಅವಶ್ಯಕವಾಗಿರುವುದರಿಂದ ಸಕಲೇಶಪುರ, ಮಡಕೇರಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಹಾಗೂ ಒಂದು ಹಾಡಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ. ಮೈತ್ರಿಯಾಗೌಡ ಮೊದಲಬಾರಿ ಕಡಕ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಮತ್ತು ಒಂದು ಗೀತೆಯನ್ನು ಹಾಡುತ್ತಿರುವುದು ಮತ್ತು ಮೂರು ಫೈಟ್‍ಗಳು ಇರಲಿರುವುದರಿಂದ ಸಾಹಸ ನಿರ್ದೇಶಕರ ಬಳಿ ಹೊಡೆದಾಟದ ತಾಲೀಮುಗಳನ್ನು ಮಾಡುತ್ತಿರುವುದು ವಿಶೇಷ. ಉಳಿದಂತೆ ತಾರಗಣದಲ್ಲಿ ಸಾಗರಿಕಗೌಡ, ಗುರುಬಿಂದಾಸ್, ಆಶಾ.ವಿ, ಮಹ್ಮದ್‍ಅಫ್ಜಲ್, ಸ್ವಾತಿ.ಎಸ್., ದುಬೈರಫೀಕ್, ಜ್ಯೂ.ನರಸಿಂಹರಾಜು, ಡಿಂಗ್ರಿನಾಗರಾಜ್, ಶೋಭ, ಸೋನು, ಮಾಸ್ಟರ್ ಮೋಹನ್‍ಸಂಯುಕ್ತ, ಹಾಸ್ಯ ಪಾತ್ರದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಶಿವಮಂಜು ನಟನೆ ಇದೆ.

ಕಾಮತರಾಜ್.ಎಸ್.ಕೆ ಮತ್ತು ಅನಿಗೌಡ ಸಾಹಿತ್ಯದ ನಾಲ್ಕು ಗೀತೆಗಳಿಗೆ ಜಾರ್ಜ್‍ತಾಮಸ್ ಸಂಗೀತ ಸಂಯೋಜಿಸುತ್ತಿದ್ದಾರ. ಒಂದು ಐಟಂ ಗೀತೆ ಇರಲಿದ್ದು, ಇದಕ್ಕೆ ಯಾರು ಹೆಜ್ಜೆ ಹಾಕಲಿದ್ದಾರೆಂಬದನ್ನು ತಂಡವು ಗೌಪ್ಯವಾಗಿಟ್ಟಿದೆ. ಚಿತ್ರೆಕತೆ-ಸಂಭಾಷಣೆ ಸಿ.ಜೆ.ವರ್ಧನ್, ಛಾಯಗ್ರಹಣ ಪಿ.ವಿ.ಆರ್.ಸ್ವಾಮಿ, ಸಾಹಸ ವೈಲೆಂಟ್‍ವೇಲು-ಭರತ್, ನೃತ್ಯ ಹರೀಶ್-ಬಾಲ ನಿರ್ವಹಿಸುತ್ತಿದ್ದಾರೆ. ಮೊದಲ ದೃಶ್ಯಕ್ಕೆ ಸೌಂದರ್ಯ ಕಟ್ಟಡಗಳ ಮಾಲೀಕ ಸೌಂದರ್ಯ ಜಗದೀಶ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಯೋಗಿ ತಾಯಿ ಅಂಬುಜ, ಸಿನಿಪಂಡಿತರು ಆಗಮಿಸಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
13/05/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore