HOME
CINEMA NEWS
GALLERY
TV NEWS
REVIEWS
CONTACT US
ಪರಿಸರ ಬೆಳಸಿ, ಉಳಿಸಿ
ಮನುಷ್ಯನಿಗೆ ದೇವರು ಕೊಟ್ಟ ವರ ಪ್ರಕೃತಿ. ಅನಾದಿ ಕಾಲದಿಂದಲೂ ನಿರಂತರವಾಗಿ ಬರುತ್ತಿರುವುದರಿಂದ ಎಲ್ಲರಿಗೂ ನೆಮ್ಮದಿ ನೀಡುತ್ತಿದೆ. ಆದರೆ ನಾವುಗಳು ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ದುರುಳರು ಹಾಳು ಮಾಡುತ್ತಿರುವುದು ಖಂಡನೀಯವಾಗಿದೆ. ಪ್ರಕೃತಿ ಮನಸ್ಸು ಮಾಡಿದಲ್ಲಿ ಯಾವ ಹಂತಕ್ಕೆ ಬೇಕಾದರೂ ತೆಗೆದುಕೊಂಡು ಹೋಗುತ್ತದೆ. ಇಂತಹುದೆ ವಿಷಯಗಳನ್ನು ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನವನ್ನು ‘ಆಸೂಚಭೂ’ ಸಿನಿಮಾದಲ್ಲಿ ಮಾಡಿದ್ದಾರೆ. ಆಕಾಶ ಸೂರ್ಯ ಚಂದ್ರ ಭೂಮಿ ಹೆಸರು ದೊಡ್ಡದಾಗಿರುವುದರಿಂದ ಪ್ರೇಕ್ಷಕರಿಗೆ ಸುಲಭವಾಗಿ ಕರೆಯಲು ಚಿಕ್ಕದಾಗಿ ಮೊದಲ ಅಕ್ಷರವನ್ನು ಬಳಸಿಕೊಂಡಿದ್ದಾರೆ. ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ನೋಡಿಕೊಂಡರೆ ನೆಮ್ಮದಿ, ಆರೋಗ್ಯ ತುಂಬಿಕೊಂಡು ಬದುಕು ಸುಂದರವಾಗಿರುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಇದೆಲ್ಲಾಕ್ಕೂ ಸೂತ್ರದಾರರು ಎಸ್.ಎಲ್.ಮಂಜುನಾಥ್.

ಸಿನಿಮಾ ಪೂರ್ತಿ ಕಲಾವಿದರಾದ ಲಕ್ಷಣ, ಬಿ.ಕೆ.ಗೋವಿಂದು ಎರಡು ಪಾತ್ರಗಳಾಗಿ ಕಾಣ ಸಿಕೊಂಡರೆ, ಕೆಲವೊಂದು ದೃಶ್ಯಗಳಲ್ಲಿ ಪ್ರಕ್ಥತಿ ಮಾತನಾಡುತ್ತದೆ. ಅದು ಹೇಗೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದಂತೆ. ಎರಡು ಹಾಡುಗಳಿಗೆ ರಾಜ್‍ಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ಸಿಎಸ್.ಸುರೇಶ್-ಮಾರುತಿ, ಸಂಕಲನ ಶ್ರೀಜವಳಿ ನಿರ್ವಹಿಸಿದ್ದಾರೆ. ಮಡಕೇರಿ, ಕುಶಾಲನಗರ, ನಾಮದ್‍ಚಿಲುಮೆ, ದೇವರಾಯನದುರ್ಗ, ಮಿನಿ ಅಬ್ಬೆಫಾಲ್ಸ್, ತುಮಕೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಿ.ಕಿ.ಗೋವಿಂದು, ವಿಜಯಭಾಸ್ಕರ್, ಶಂಕರಬಾಬು, ಆಟೋರಾಜು ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಯು ಪ್ರಮಾಣ ಪಡೆದುಕೊಂಡಿರುವ ಸಿನಿಮಾವು ನವೆಂಬರ್ ತಿಂಗಳಲ್ಲಿ ತೆರೆ ಕಾಣುವ ಸಾದ್ಯತೆ ಇದೆ.
-12/10/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore