HOME
CINEMA NEWS
GALLERY
TV NEWS
REVIEWS
CONTACT US

ಕರಾಳ ರಾತ್ರಿಗೆ ಮಾರುಹೋದ ಪ್ರೇಕ್ಷಕ ದೇವರು
‘ಆ ಕರಾಳ ರಾತ್ರಿ’ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ದಯಾಳ್‍ಪದ್ಮನಾಬನ್ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ಕೂಡಿಟ್ಟ ಹಣದಿಂದ ನಿರ್ಮಾಣ ಮಾಡಿದ್ದೇನೆ ಅಂಥಾ ಭಾವುಕರಾಗಿದ್ದರು. ತೆರೆಕಂಡು ಐದು ದಿನಗಳಲ್ಲೆ ಎಲ್ಲಾ ಕಡೆಗಳಿಂದ ಪ್ರಶಂಸೆ ಬಂದು ಗಳಿಕೆಯಲ್ಲಿ ಮುಂದೆ ಇದೆ ಎಂದು ಸಂತೋಷಕೂಟದಲ್ಲಿ ನಿರ್ದೇಶಕರು ಸಂತಸವನ್ನು ಹಂಚಿಕೊಳ್ಳುತ್ತಿದ್ದರು. ಈ ಚಿತ್ರದಿಂದ ಹಣ,ಕೀರ್ತಿ ಎರಡು ಒಟ್ಟಿಗೆ ಬಂದಿದೆ. ಕರ್ನಾಟಕದ ಚಿತ್ರಕ್ಕೆ ಆಸ್ಕರ್ ಸಿಗುವ ನಂಬಿಕೆ ಇದೆ ಎಂದರು. ಗಾಳಿಪಟ ನಂತರ ಇವರ ನಿರ್ದೇಶನದಲ್ಲಿ ಕೆಲಸ ಮಾಡುವ ಅವಕಾಶ ಒದಗಿಬಂತು. ಸಂಬಂದಗಳು ರೀಲ್‍ನಲ್ಲಿರುವಂತೆ ರಿಯಲ್‍ನಲ್ಲಿಯೂ ಇದೆ . ಸಟ್‍ನಲ್ಲಿ ಕೆಲವು ಸಲ ನನ್ನ ನಟನೆ ನೋಡಿ ಅವರ ಮನಸ್ಸು ಕದಡಿತ್ತು. ಇಂತಹುದೆ ಪ್ರಯತ್ನ ಮುಂದುವರೆಯಲಿ ಶುಭವಾಗಲಿ ಎಂಬುದು ರಂಗಾಯಣರಘು ಖುಷಿಯ ನುಡಿ.

ಪ್ರಾಮಾಣಿಕ ಶ್ರಮ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ನಕರಾತ್ಮಕ ವಿಮರ್ಶೆ ಯಾವುದೇ ಪತ್ರಿಕೆಗಳಿಂದ ಬಂದಿಲ್ಲ. ರಾಜಮೌಳಿ ತಂಡದಲ್ಲಿ ಒಂದು ದಿವಸ ಕೆಲಸ ಮಾಡದ್ದೇನೆ. ಅಂತಹುದೆ ವಾತವರಣ ದಯಾಳ್ ಅವರಲ್ಲಿ ಕಂಡುಬಂತು. ರಂಗಾಯಣರಘು ಅವರೊಂದಿಗೆ ನಟಿಸಿದ್ದು ಮರೆಯಲಾಗದ ಅನುಭವ ಎಂಬುದು ನಾಯಕ ಜೆಕೆ ಮಾತು. ಇಂಗ್ಲೀಷ್‍ನಲ್ಲಿ ಸಬ್ ಟೈಟಲ್ ಹಾಕಲು ಸೆನ್ಸಾರ್‍ನವರು ತಕರಾರು ಮಾಡುತ್ತಾರೆ. ಇದರಿಂದ ಕನ್ನಡೇತರರಿಗೆ ಅರ್ಥವಾಗುವುದಾದರೂ ಹೇಗೆ ಈ ವರ್ತನೆಯನ್ನು ಅಧಿಕಾರಿಗಳು ಬದಲಿಸಬೇಕೆಂದು ಅಭಿಪ್ರಾಯಪಟ್ಟರು ಸಂಕಲನಕಾರ ಶ್ರೀಕ್ರೇಜಿಮೈಂಡ್ಸ್. ಹಾಡಿನ ಸಾಲು ಹಾಗೂ ಸಂಗೀತವನ್ನು ಆಲಿಸಿರುವ ಜನರಿಂದ ನನಗೆ ಗುರುತು ಸಿಕ್ಕಂತೆ ಆಯಿತು ಎನ್ನುತ್ತಾರೆ ಸಂಗೀತ ಸಂಯೋಜಿಸಿರುವ ಗಣೇಶ್‍ನಾರಾಯಣ್.
ಕರ್ನಾಟಕದಿಂದ ದೆಹಲಿಗೆ ಕರಾಳರಾತ್ರಿ ಸಂಚರಿಸಲಿದೆ. ಮುಂದಿನವಾರದಿಂದ 50 ಕೇಂದ್ರಗಳು ಹೆಚ್ಚಾಗಿದೆ ಎಂದು ಕುರುಡನಾಗಿ ಅಭಿನಯಿಸಿರುವ ನವರಸನ್ ಹೇಳಿದರು. 80 ಚಿತ್ರಗಳಲ್ಲಿ ಅಭಿನಯಿಸಿದ್ದರೂ ಈ ಸಿನಿಮಾ ನೀಡಿದಷ್ಟು ಖುಷಿ ಬೇರೆ ಯಾವುದು ನೀಡಿಲ್ಲವೆಂದು ಪ್ರೀಮಿಯರ್ ಷೋ ನಂತರ ನಡೆದ ಘಟನೆಯನ್ನು ನೆನಪು ಮಾಡಿಕೊಂಡರು ವೀಣಾಸುಂದರ್ ಗಾಂದಿನಗರದ ಸ್ಟಾರ್ ವಿತರಕ ಜಯಣ್ಣ ಕಂಬೈನ್ಸ್ ಮುಂದೆ ಬಂದು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಅಕ್ಕ ಸಮ್ಮೇಳದಿಂದ ಆಹ್ವಾನ ಬಂದಿದೆ. ಇದರಿಂದ ಖುಷಿ ದುಪ್ಪಟ್ಟು ಆಗಿದೆ ಎಂದರು ಸಹ ನಿರ್ಮಾಪಕ ಅವಿನಾಶ್. ಸದರಿ ಸಂತೋಷವನ್ನು ಅನುಭವಿಸಲು ನಾಯಕಿ ಅನುಪಮಗೌಡರಿಗೆ ಅವಕಾಶ ಸಿಗಲಿಲ್ಲ ಅಂದರೆ ಗೈರುಹಾಜರಿ ಆಗಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
18/07/18
ಹಿತವಾದ ಕರಾಳ ರಾತ್ರಿ\
ಮೋಹನ್‍ಹಬ್ಬು ವಿರಚಿತ ನಾಟಕವು ‘ಆ ಕರಾಳ ರಾತ್ರಿ’ ಚಿತ್ರವಾಗಿ ಮೂಡಿಬಂದಿದೆ. 80ರ ಕಾಲಘಟ್ಟದಲ್ಲಿ ಕತೆಯು ನಡೆಯಲಿರುವುದರಿಂದ ಅಂದಿನ ಕಾಸ್ಟ್ಯೂಮ್‍ಗಳು ದೃಶ್ಯಗಳಲ್ಲಿ ಕಾಣಿಸುತ್ತವೆ. ಟೈಟಲ್ ಇರುವಂತೆ ಹೆಚ್ಚು ಸನ್ನಿವೇಶಗಳು ರಾತ್ರಿ ಹೊತ್ತು ನಡೆಯುತ್ತದೆ. ಗ್ರಾಮದಿಂದ ಮೂರು ಕಿ.ಮೀ ದೂರದ ಸಣ್ಣದಾದ ಮನೆಯಲ್ಲಿ ಗಂಡ-ಹೆಂಡತಿ ಹಾಗೂ ವಯಸ್ಸಿಗೆ ಬಂದಿರುವ ಮಗಳು. ಬಡತನದಲ್ಲಿದ್ದರೂ ಸುಖಿ ಕುಟುಂಬ. ಅಲ್ಲಿಗೆ ಒಬ್ಬ ಅಪರಿಚತ ವ್ಯಕ್ತಿ ಆಗಮನ. ಆತ ತಂಗಲು ಅನುಮತಿ ಕೇಳುತ್ತಾನೆ. ಇವನ ವ್ಯಕ್ತಿತ್ವ, ಗುಣಗಳನ್ನು ಕಂಡು ಮನೆಯಲ್ಲಿ ಇರಲು ಅವಕಾಶ ಮಾಡಿಕೊಡುತ್ತಾರೆ. ಮುಂದೆ ಈತನಲ್ಲಿ ಹಣ, ಒಡವೆ ಇರುವುದನ್ನು ಕಂಡ ಮೂವರ ಬುದ್ದಿ ಕೆಟ್ಟ ಕಡೆಗೆ ವಾಲುತ್ತದೆ. ದುರಾಲೋಚನೆಯಿಂದ ಧೈರ್ಯ ಮಾಡಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಅದರಿಂದ ಅವರು ಅನುಭವಿಸುವ ಯಾತನೆಗಳು, ಅವರ ಯೋಜನೆ ಕೈಗೂಡುತ್ತಾ? ಎಂಬುದನ್ನು ಹೇಳಿದರೆ ಮಜಾ ಸಿಗೋಲ್ಲ. ರಾತ್ರಿಯ ಸವಿಯನ್ನು ಚಿತ್ರಮಂದಿರದಲ್ಲೆ ಅನುಭವಿಸಿದರೆ ಚೆಂದ.

ಸಧುಭಿರುಚಿಯ ಚಿತ್ರಗಳಿಗೆ ಹೇಳಿ ಮಾಡಿಸಿರುವ ನಿರ್ದೇಶಕ ದಯಾಳ್‍ಪದ್ಮನಾಭನ್ ಇಲ್ಲಿಯೂ ತಮ್ಮದೆ ಛಾಪಿನಲ್ಲಿ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾರೆ. ಪ್ರಾರಂಭದಲ್ಲಿ ಸ್ಪಲ್ಪಮಟ್ಟಿಗೆ ಉದ್ದ ಅನಿಸಿದರೂ, ವಿರಾಮದ ನಂತರ ಪ್ರೇಕ್ಷಕ ಮೊಬೈಲ್ ನೋಡಲು ಅವಕಾಶ ಕೊಡುವುದಿಲ್ಲ. ಅಂತಹ ಸೀನ್‍ಗಳು ಬರುತ್ತಾ ಸೀಟಿನಿಂದ ಮುಂದಕ್ಕೆ ಬರುವಂತೆ ಮಾಡುತ್ತದೆ. ಈ ರೀತಿ ಇರಬಹುದೆಂದು ಊಹೆ ಮಾಡಿದರೆ, ಅದು ಬೇರೆಯದೆ ರೂಪ ಪಡೆದುಕೊಳ್ಳುತ್ತದೆ. ಇಂತಹ ಅನೂಹ್ಯ ದೃಶ್ಯಗಳು ಬರುವುದಕ್ಕೆ ನಿರ್ದೇಶಕರ ಶ್ರಮ ತೆರೆ ಮೇಲೆ ಕಾಣಿಸಿಕೊಳ್ಳುತ್ತದೆ. ಮೊದಲ ಸೀನ್‍ದಲ್ಲೆ ಪೂರ್ತಿ ಚಿತ್ರ ನೋಡುವಂತೆ ಕುತೂಹಲ ಹುಟ್ಟಿಸುತ್ತದೆ. ಬೆಲ್‍ಬಾಟಂ ಪ್ಯಾಂಟ್, ಕೈಗೆ ಉಂಗುರಗಳನ್ನು ಹಾಕಿಕೊಂಡು ಮೃಧು ಸ್ವಭಾವದವನಾಗಿ ಜೆಕೆ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅನುಪಮಾಗೌಡರಿಗೆ ಮೊದಲ ಚಿತ್ರವಾಗಿದ್ದರೂ ಗಂಭೀರ ನೋಟ, ರಗಡ್ ಸಂಭಾಷಣೆಗಳಿಂದ ಇಷ್ಟವಾಗುತ್ತಾರೆ. ರಂಗಾಯಣರಘು, ವೀಣಾಸುಂದರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರ್ಥಪೂರ್ಣ ಸಂಭಾಷಣೆ ಬರೆದಿರುವ ನವೀನ್‍ಕೃಷ್ಣ ಬುಡುಬುಡುಕೆ ಪಾತ್ರ, ಕುರುಡನಾಗಿ ನವರಸನ್ ಹಾಗೇ ಬಂದು ಹೋಗುತ್ತಾರೆ. ಪಿಕೆಹೆಚ್ ದಾಸ್ ಕ್ಯಾಮಾರಗೆ ಪೂರಕವಾಗಿ ಹಿನ್ನಲೆ ಸಂಗೀತ ಒದಗಿಸಿರುವ ಗಣೇಶ್‍ನಾರಾಯಣ್ ಕೆಲಸ ಅಚ್ಚುಕಟ್ಟಾಗಿದೆ. ಒಟ್ಟಾರೆ ಕರಾಳ ರಾತ್ರಿಯು ಸಂತಸವನ್ನು ನೀಡುತ್ತದೆ.
ನಿರ್ಮಾಣ: ದಯಾಳ್‍ಪದ್ಮನಾಭನ್, ಅವಿನಾಶ್.ಯು.ಶೆಟ್ಟಿ
**** ಸಿನಿ ಸರ್ಕಲ್.ಇನ್ ವಿಮರ್ಶೆ
13/07/18

ಸಿನಿಮಾ ನೋಡಿದರು ಹಣ ಹೂಡಿದರು
ಫೆಬ್ರವರಿ 19 ಮಹೂರ್ತ, ಮಾರ್ಚ್ 5 ಚಿತ್ರೀಕರಣ ಶುರು, 15 ಕುಂಬಳಕಾಯಿ, ಏಪ್ರಿಲ್ ಪೋಸ್ಟ್ ಪ್ರೊಡಕ್ಷನ್ ಕೆಲಸ, ಜೂನ್ 15 ಮೊದಲ ಪ್ರತಿ, 18ಕ್ಕೆ ಬಿಡುಗಡೆ ಇವಿಷ್ಟು ನಿರ್ದೇಶಕ, ನಿರ್ಮಾಪಕ ದಯಾಳ್‍ಪದ್ಮನಾಭ್ ಹಾಕಿಕೊಂಡಿದ್ದ ಪರಿವಿಡಿ. ಎಲ್ಲವು ಅಂದುಕೊಂಡಂತೆ ಆಗಿದೆ. ಆದರೆ ಬಿಡುಗಡೆ ಮಾತ್ರ ಎರಡು ವಾರ ಮುಂದೂಡಿದೆ. ಅದಕ್ಕೆ ಪ್ರಾಣಿದಯಾ ಮಂಡಳಿ ಕಾರಣವಂತೆ. ಕೊನೆ ಹಂತದಲ್ಲಿ ನಿರ್ಮಾಪಕರಿಗೆ ವಿಟಮಿನ್ ಎಂ ಕೊರತೆಯಾಗಿದೆ. ಸಾರಾಂಶ ಚೆನ್ನಾಗಿದೆ. ದೃಡ ವಿಶ್ವಾಸದಿಂದ ಸಿನಿಮಾಸಕ್ತ ಟೆಕ್ಕಿಗಳು, ಪರಿಚಿತರೊಬ್ಬರಿಗೆ ಸಿನಿಮಾವನ್ನು ತೋರಿಸಿದ್ದಾರೆ. ಟೆಕ್ಕಿಗಳು ಮುಂದಿನ ಚಿತ್ರ ನಿರ್ದೇಶಿಸಲು ಮುಂಗಡ ನೀಡಿದರೆ, ಮತೋಬ್ಬರು ತೆರೆಗೆ ತರಲು ಸಹಾಯ ಮಾಡಿದ್ದಾರೆ. ಅಲ್ಲದೆ ಗಾಂಧಿನಗರದ ಬಹುತೇಕ ಚಿತ್ರಮಂದಿರಗಳ ಉಸ್ತುವಾರಿ ವಹಿಸಿಕೊಂಡಿರುವ ಜ್ಘಾನೇಶ್ವರ್‍ಐತಾಳ್ ತುಣುಕುಗಳನ್ನು ನೋಡಿ ಟಾಕೀಸ್ ನೀಡಿರುವುದು ತಂಡಕ್ಕೆ ಆನೆ ಬಲ ಬಂದಿದೆಯಂತೆ.

ತಾರಗಣದಲ್ಲಿ ಜೆಕೆ ನಾಯಕ, ಬಿಗ್‍ಬಾಸ್ ಖ್ಯಾತಿಯ ಅನುಪಮಾಗೌಡ ನಾಯಕಿಯಾಗಿ ಮೊದಲ ಚಿತ್ರ. ಉಳಿದಂತೆ ರಂಗಾಯಣರಘು, ವೀಣಾಸುಂದರ್, ನವರಸನ್ ಮತ್ತು ನವೀನ್‍ಕೃಷ್ಣ ಬುಡಬುಡಕೆ ಪಾತ್ರ ಮಾಡಿರುವ ಜೊತಗೆ ಸಂಭಾಷಣೆಗೆ ಮಾತುಗಳನ್ನು ಪೋಣಿಸಿದ್ದಾರೆ. ಸಹ ನಿರ್ಮಾಪಕ ಅವಿನಾಶ್, ಮೋಹನ್‍ಹಬ್ಬು ಕತೆ, ಸಂಗೀತ ಗಣೇಶ್‍ನಾರಾಯಣ್, ಸಂಕಲನ ಕ್ರೇಜಿಮೈಂಡ್ಸ್, ಛಾಯಗ್ರಹಣ ಪಿಕೆಹೆಚ್.ದಾಸ್, ಸಾಹಿತ್ಯ ತಂಗಾಳಿನಾಗರಾಜ್ ಅವರದಾಗಿದೆ. ಮೂಡಿಗೆರೆ ಸಮೀಪ ಬಾಳೂರು ಗ್ರಾಮದ ಪುರಾತನ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. 1.45 ಗಂಟೆಯ ಚಿತ್ರವು ಜುಲೈ 13ರಂದು ತೆರೆ ಕಾಣುತ್ತಿದ್ದು, ಮೂರು ದಿವಸ ಮುಂಚಿತವಾಗಿ ಮಾದ್ಯಮದವರಿಗೆ ವಿಶೇಷ ಪ್ರದರ್ಶನವನ್ನು ಏರ್ಪಾಟು ಮಾಡಲಾಗಿದೆಯಂತೆ.
ಸಿನಿ ಸರ್ಕಲ್.ಇನ್ ನ್ಯೂಸ್
4/07/18
ಜುಲೈ ಆರರಂದು ಆ ಕರಾಳ ರಾತ್ರ್ರಿ
ನಿರ್ದೇಶಕ ದಯಾಳ್ ಪದ್ಮನಾಬನ್ ಬಿಗ್ ಬಾಸ್ ಮೆನೆಯಿಂದ ಹೊರಬಂದ ನಂತರ ಎರಡು ಚಿತ್ರಗಳ ಪೈಕಿ ‘ ಆ ಕರಾಳ ರಾತ್ರಿ’. ಚಿತ್ರವು ಬಿಡುಗಡೆಗೆ ಸಿದ್ದಗೊಂಡಿದೆ. ಸೆಸ್ಪನ್ಸ್, ಥ್ರಿಲ್ಲರ್ ಕತೆಯಲ್ಲಿ ಸನ್ನವೇಶಗಳು ಬೇರೆಯದೆ ಆಕಾರದಲ್ಲಿ ಸಾಗುವುದು ವಿಶೇಷವಾಗಿದೆ. ದುರಾಸೆ ಹಾಗೂ ಭಾವನಾತ್ಮಕ ಅಂಶಗಳು ಫ್ಲಾಶ್‍ಬ್ಯಾಕ್‍ನಲ್ಲಿ ಕುರುಡ ಸೇರಿದಂತೆ ನಾಲ್ಕು ಪಾತ್ರಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಕತೆಯು 1961ರಂತೆ ಇರಲಾಗಿದ್ದರೂ, 1981ರ ಕಾಲಘಟ್ಟಕ್ಕೆ ಅನುಗುಣವಾಗುವಂತೆ ಚಿತ್ರಕತೆಯನ್ನು ಮಾರ್ಪಟು ಮಾಡಲಾಗಿದೆ.

ದೊಡ್ಡ ಬೆಂಕಿ ಹತ್ತಿಕೊಳ್ಳುವುದರೊಂದಿಗೆ ಕತೆ ತೆರೆದುಕೊಳ್ಳುತ್ತದೆ. ಮೂಡಿಗೆರೆ ಸಮೀಪ ಬಾಳೂರು ಎನ್ನುವ ಗ್ರಾಮದ ಪುರಾತನ ಮನೆಯನ್ನು ಸನ್ನಿವೇಶಕ್ಕೆ ಅನುಗುಣವಾಗಿ ಕೆಲವೊಂದು ಬದಲಾವಣೆ ಮಾಡಿಕೊಂಡು 15 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾರಗಣದಲ್ಲಿ ಜೆಕೆ, ವೀಣಾಸುಂದರ್, ರಂಗಾಯಣರಘು, ಅನುಪಮಗೌಡ, ನವರಸನ್ ನಟನೆ ಇದೆ. ತಂಗಾಳಿನಾಗರಾಜ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಗಣೇಶ್‍ನಾರಾಯಣ್ ಸಂಗೀತ, ಸಂಭಾಷಣೆ ಪೋಣಿಸುವ ಜೊತೆ ಸಣ್ಣ ಪಾತ್ರದಲ್ಲಿ ನವೀನ್‍ಕೃಷ್ಣ, ಕತೆ ಮೋಹನ್‍ಹಬ್ಬು, ಸಹನಿರ್ಮಾಪಕರು ಅವಿನಾಶ್.ಯು.ಶೆಟ್ಟಿ ಅವರದಾಗಿದೆ. ಕಳೆದವಾರ ಉಪೇಂದ್ರ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
9/06/18


ರಾತ್ರಿಯಲ್ಲಿ ಕರಾಳ ರಾತ್ರಿ ಹಾಡುಗಳು
ಚಂದನವನದಲ್ಲಿ ಗುರು ಶಿಷ್ಯರ ಸಂಬಂದಗಳು ಚೆನ್ನಾಗಿದೆ ಎಂಬುದಕ್ಕೆ ‘ಆ ಕರಾಳ ರಾತ್ರಿ’ ಚಿತ್ರದ ಧ್ವನಿಸಾಂದ್ರಿಕೆ ಲೋಕಾರ್ಪಣೆ ಕಾರ್ಯಕ್ರಮ ಸಾಕ್ಷಿಯಾಗಿತ್ತು. ನಿರ್ಮಾಪಕ, ನಿರ್ದೇಶಕ ದಯಾಳ್‍ಪದ್ಮನಾಭನ್ ಹೇಳುವಂತೆ ಉಪೇಂದ್ರ ಸರ್ ಬಳಿ ಹೆಚ್‍ಟುಓ ಚಿತ್ರದಲ್ಲಿ ಕೆಲಸ ಮಾಡಲು ಸೇರಿಕೊಂಡ ನಂತರ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿಯಲಾಗಿದೆ. ತಾಳ್ಮೆ ಅಂತ ಇದ್ದರೆ ಅವರಿಂದ ಬಳುವಳಿಯಾಗಿ ಬಂದಿದ್ದು. ಇಂದು ವೇದಿಕೆ ಮೇಲೆ ಈ ಮಟ್ಟಕ್ಕೆ ಇದ್ದೇನೆ ಎಂದರೆ ಅದಕ್ಕೆ ಕಾರಣ ಉಪ್ಪಿಸರ್. 2014 ರಿಂದ 17ರ ವರೆಗಿನ ದುಡಿದ ಹಣವನ್ನು ಸಿನಿಮಾಗೆ ಹೂಡಲಾಗಿದೆ. ಮೋಹನ್‍ಹಬ್ಬು ಅವರ ನಾಟಕವನ್ನು ಚಿತ್ರವನ್ನಾಗಿಸಿದೆ. 13 ದಿನಗಳಲ್ಲಿ ಮುಗಿಸಿದ ಚಿತ್ರೀಕರಣವನ್ನು,ಹಿನ್ನಲೆ ಸಂಗೀತ ಒದಗಿಸಲು 45 ದಿವಸ ತೆಗೆದುಕೊಂಡಿದ್ದಾರೆ. ಈ ಚಿತ್ರದ ನಂತರ ನಾಯಕ ಜೆಕೆ ಏನು ಎಂಬುದು ತಿಳಿಯಲಿದೆ. ನಾಯಕಿ ಅನುಪಮಗೌಡ ಭವಿಷ್ಯದಲ್ಲಿ ಚಿತ್ರರಂಗಕ್ಕೆ ಆಸ್ತಿಯಾಗುತ್ತಾರೆ. ಮಂಕುತಿಮ್ಮನ ಕಗ್ಗವನ್ನು ಒಂದು ಹಾಡಿಗೆ ಬಳಸಲಾಗಿದೆ ಎಂದರು.

ದಯಾಳ್ ಸರ್ ಅವರ ಬಳಿ ಕೆಲಸ ಕಲಿತಿದ್ದು, ಅವರು ಹೇಳಿಕೊಟ್ಟ ವಿದ್ಯೆಯಿಂದ ಇಂದು ನಿರ್ದೇಶಕ, ನಿರ್ಮಾಪಕನಾಗಿ ಉಪ್ಪಿ ಸರ್ ಎರಡು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದೇನೆ. ಹೆಣ್ಣು ಮಕ್ಕಳ ಅಭಿಮಾನಿಯಾಗಿರುವ ಜಿಕೆ ಚಿತ್ರವು ಹಿಟ್ ಆಗಲಿ ಅಂತಾರೆ ಆರ್.ಚಂದ್ರು.

ಉಪ್ಪಿ ಸರ್ ಚಿತ್ರಗಳನ್ನು ನೋಡುತ್ತಾ, ಎ ಚಿತ್ರದ ಕಾಸ್ಟ್ಯೂಮ್‍ನ್ನು ಹೊಲೆಸಿಕೊಂಡು ಡೈಲಾಗ್‍ಗಳನ್ನು ಹೇಳುತ್ತಿದ್ದೆ. ಇಂದು ಅವರ ಸಮ್ಮುಖದಲ್ಲಿ ಮಾತನಾಡುತ್ತಿರುವುದು ಖುಷಿ ತಂದಿದೆ. ಬಿಗ್‍ಬಾಸ್‍ನಲ್ಲಿ ದಯಾಳ್ ಸರ್ ಅವರೊಂದಿಗೆ ಮಾತನಾಡುವಾಗ ಮನಸ್ಸಿನಲ್ಲಿ ಇವರು ಸಾಕಷ್ಟು ಸಿನಿಮಾ ಮಾಡಿದ್ದಾರೆ. ನನಗೊಂದು ಅವಕಾಶ ನೀಡಲಿಲ್ಲವೆಂದು ಕಾಡುತ್ತಿತ್ತು. ಮನೆಯಿಂದ ಹೊರಬಂದ ಬಳಿಕ ಒಳ್ಳೆ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ನಾಯಕ-ನಾಯಕಿ ಇರದೆ, ತಂತ್ರಜ್ಘರ ಸಿನಿಮಾವಾಗಿದ್ದರಿಂದ ಎರಡು ಅವರುಗಳೇ ಆಗಿರುತ್ತಾರೆ ಎಂದು ಜೆಕೆ ಹೇಳಿದರು.

ಬಿಗ್‍ಬಾಸ್ ಮನೆಯಲ್ಲಿ ಇರುವಾಗಲೇ ಕಮಿಟ್ ಆಗಿದ್ದೆ. ರಾತ್ರಿ ಹಗಲು ಎನ್ನದೆ ಚಿತ್ರೀಕರಣ ನಡೆಸಿದ್ದಾರೆ ಅಂತ ಅನುಭವಗಳನ್ನು ಹಂಚಿಕೊಂಡರು ನಾಯಕಿ ಅನುಪಮಗೌಡ.
ಇದಕ್ಕೂ ಮುನ್ನ ಮಾತನಾಡಿದ ಉಪೇಂದ್ರ ಹೆಚ್‍ಟುಓ ಸಮಯದಿಂದಲೂ ದಯಾಳ್ ಏನಾದರೊಂದು ಮಾಡುತ್ತಲೆ ಇರುತ್ತಾರೆ. ಕೇಸ್ ಹಾಕ್ತಾರೆ, ಪ್ರಶಸ್ತಿ ಪಡೆಯುತ್ತಾರೆ, ಚಿತ್ರಗಳನ್ನು ಮಾಡುತ್ತಾ ಇರುತ್ತಾರೆ. ಅದರಂತೆ ಆ ಕರಾಳ ರಾತ್ರಿ ಎನ್ನುವ ಅದ್ಬುತ ಚಿತ್ರ ಮಾಡಿದ್ದಾರೆ. ಸೆಸ್ಪನ್ಸ್, ಹಾರರ್ ಇರಲಿದ್ದು, ದೆವ್ವ ಇಲ್ಲ ಅಂತ ಮೈಕ್‍ನ್ನು ಹಸ್ತಾಂತರಿಸಿದರು.

ಸಹ ನಿರ್ಮಾಪಕ ಅವಿನಾಶ್.ಯು.ಶೆಟ್ಟಿ, ಛಾಯಗ್ರಾಹಕ ಪಿ.ಕೆ.ಹೆಚ್.ದಾಸ್, ಸಂಗೀತ ನಿರ್ದಶಕ ಗಣೇಶ್‍ನಾರಾಯಣ್, ಸಂಕಲನಕಾರ ಶ್ರೀ ಕ್ರೇಜಿಮೈಂಡ್ಸ್, ಸಿನಿಪಂಡಿತರು ಹಾಜರಿದ್ದರು. ಚಿತ್ರದಲ್ಲಿ ಒಂದು ಪಾತ್ರ ಮಾಡಿ, ಸಂಭಾಷಣೆ ಬರೆದಿರುವ ನವೀನ್‍ಕೃಷ್ಣ ಬುಡುಬುಡುಕೆ ವೇಷದಲ್ಲಿ ನಿರೂಪಣೆ ಮಾಡಿದ್ದು ಗಮನ ಸೆಳೆಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/06/18

ಕ್ರೈಮ್ ಥ್ರಿಲ್ಲರ್ ಮಾದರಿಯ ಆ ಕರಾಳ ರಾತ್ರಿ
ನಿರ್ದೇಶಕ ದಯಾಳ್ ಪದ್ಮನಾಬನ್ ಬಿಗ್ ಬಾಸ್ ಮೆನೆಯಿಂದ ಹೊರಬಂದ ನಂತರ ಎರಡು ಚಿತ್ರಗಳನ್ನು ಮಾಡಲು ಸ್ಕೆಚ್ ಹಾಕಿಕೊಂಡು ಕಲಾವಿದರುಗಳನ್ನು ಆಯ್ಕೆ ಮಾಡಿದ್ದಾರೆ. ಮೊದಲನೆಯದು ‘ ಆ ಕರಾಳ ರಾತ್ರಿ’. . ಶೀರ್ಷಿಕೆ ಕೇಳಿದಾಗ ಇದೊಂದು ಸೆಸ್ಪನ್ಸ್, ಥ್ರಿಲ್ಲರ್ ಅಂದುಕೊಂಡರೆ ನಿಮ್ಮೆ ಊಹೆ ಸರಿಯಾಗಿರುತ್ತದೆ. ಎಲ್ಲಾ ಸಿನಿಮಾಗಳಲ್ಲಿ ಇವರೆಡು ಒಂದೇ ಆಕಾರದಲ್ಲಿ ಸಾಗಿದರೆ, ಇದರಲ್ಲಿ ಬೇರೆಯದೆ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ದುರಾಸೆ ಹಾಗೂ ಭಾವನಾತ್ಮಕ ಅಂಶಗಳು ಫ್ಲಾಶ್‍ಬ್ಯಾಕ್‍ನಲ್ಲಿ ಕುರುಡ ಸೇರಿದಂತೆ ನಾಲ್ಕು ಪಾತ್ರಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಕತೆಯು 1961ರಂತೆ ಇರಲಾಗಿದ್ದರೂ, 1981ರ ಕಾಲಘಟ್ಟಕ್ಕೆ ಅನುಗುಣವಾಗುವಂತೆ ಚಿತ್ರಕತೆಯನ್ನು ಮಾರ್ಪಟು ಮಾಡಲಾಗಿದೆ.

ದೊಡ್ಡ ಬೆಂಕಿ ಹತ್ತಿಕೊಳ್ಳುವುದರೊಂದಿಗೆ ಕತೆ ತೆರೆದುಕೊಳ್ಳುತ್ತದೆ. ಮೂಡಿಗೆರೆ ಸಮೀಪ ಬಾಳೂರು ಎನ್ನುವ ಗ್ರಾಮದಲ್ಲಿ ಪುರಾತನ ಮನೆ ಸನ್ನಿವೇಶಕ್ಕೆ ಹೇಳಿ ಮಾಡಿಸದಂತೆ ಇರುವುದರಿಂದ ಕೆಲವೊಂದು ಬದಲಾವಣೆ ಮಾಡಿಕೊಂಡು 15 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗುವುದು. ತಾರಗಣದಲ್ಲಿ ಜೆಕೆ, ವೀಣಾಸುಂದರ್, ರಂಗಾಯಣರಘು, ಅನುಪಮಗೌಡ, ನವರಸನ್ ನಟನೆ ಇದೆ. ತಂಗಾಳಿನಾಗರಾಜ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಗಣೇಶ್‍ನಾರಾಯಣ್ ಸಂಗಿತ, ಸಂಭಾಷಣೆ ಪೋಣಿಸುವ ಜೊತೆ ಸಣ್ಣ ಪಾತ್ರದಲ್ಲಿ ನವೀನ್‍ಕೃಷ್ಣ, ಕತೆ ಮೋಹನ್‍ಹಬ್ಬು, ಸಹನಿರ್ಮಾಪಕರು ಅವಿನಾಶ್.ಯು.ಶೆಟ್ಟಿ ಅವರದಾಗಿದೆ.
ಚಿತ್ರಗಳು; ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-20/02/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore