HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿಯಲ್ಲಿ ನಂಬಿಕೆ ಹೊರಟುಹೋದಾಗ....
ಸಾಕಷ್ಟು ಪ್ರೇಮಕಥೆಗಳ ವೈಫಲ್ಯಕ್ಕೆ ಕಾರಣವಾಗುವುದು ಪೋಷಕರು ವಿರೋಧಿಸಿದಾಗ ಅದುಬಿಟ್ಟರೆ ಪ್ರೇಮಿಗಳ ನಡುವೆ ಅಪನಂಬಿಕೆ ಹುಟ್ಟಿಕೊಂಡಾಗ. ಇದರಲ್ಲಿ ಎರಡನೇ ಅಂಶವನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರವೇ ಆ ಎರಡು ವರ್ಷಗಳು. ಲವ್ ಬ್ರೇಕಪ್ ಆದ ಪ್ರೇಮಿಗಳ ಕೊನೇ ಭೇಟಿಯಿಂದ ಆರಂಭವಾಗುವ ಈ ಚಿತ್ರದಲ್ಲಿ ಅವರ ಜೀವನದಲ್ಲಿ ನಡೆದ ಹಿಂದಿನ ಪ್ರೇಮ ಕಥಾನಕವನ್ನು ನಿರ್ದೆಶಕರು ತೆರೆದಿಡುತ್ತಾ ಹೋಗುತ್ತಾರೆ. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯದ ಕಾರಣ ಹೇಳುವ ಹೊತ್ತಿಗೆ ಚಿತ್ರ ಕ್ಲೈಮ್ಯಾಕ್ಸ್ ಹಂತ ತಲುಪಿರುತ್ತದೆ. ಇದು ಈ ಶುಕ್ರವಾರ ಬಿಡುಗಡೆಯಾದ ಆ ಎರಡು ವರ್ಷಗಳು ಚಿತ್ರದ ಕಥಾಹಂದರ. ವರ್ಷ(ಅಮಿತಾ ಕುಲಾಲ್) ಹಾಗೂ ವರುಣ್(ರೇಣುಕ್) ಪಾತ್ರಗಳ ಸುತ್ತ ಈ ಚಿತ್ರದ ಕಥೆಯನ್ನು ನಿರ್ದೇಶಕ ಮಧುಸೂದನ್ ಹೆಣೆದಿದ್ದಾರೆ. ಕನ್ನಡದಲ್ಲಿ ಒಂದು ವಿನೂತನ ಪ್ರಯತ್ನ ಎಂದು ಹೇಳಬಹುದಾದ ಆ ಎರಡು ವರ್ಷಗಳು ಚಿತ್ರದಲ್ಲಿ ಬಹುತೇಕ ಹೊಸಬರೇ ಕೆಲಸ ಮಾಡಿದ್ದಾರೆ. ಬಿ.ಮಧುಸೂದನ್ ಮೊದಲಬಾರಿಗೆ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ.

ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರೇಣುಕ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ನಾಯಕಿಯಾಗಿ ಚೆಲುವೆ ಅಮಿತಾ ಕುಲಾಲ್ ಕಾಣ ಸಿಕೊಂಡಿದ್ದಾರೆ. ಹಿರಿಯ ನಟ ರಾಮಕೃಷ್ಣ ಹಾಗೂ ಚಿಂದೋಡಿ ತ್ರಿವೇಣ ಅವರ ಜೋಡಿ ಈ ಚಿತ್ರದ ಮತ್ತೊಂದು ಹೈಲೈಟ್. ಅವರಿಬ್ಬರ ಪಾತ್ರಗಳು ಈ ಯುವ ಪ್ರೇಮಿಗಳಿಗೆ ಸ್ಪೂರ್ಥಿದಾಯಕವಾಗಿ ಮೂಡಿಬಂದಿವೆ. ತನ್ನದೆಲ್ಲವನ್ನೂ ಗೆಳೆಯನಿಗೆ ಅರ್ಪಿಸಿದ ನಾಯಕಿ ಆತನನ್ನು ತಿರಸ್ಕರಿಸುವಾಗ ಇನ್ನೂ ಸ್ವಲ್ಪ ಯೋಚಿಸಬಹುದಿತ್ತು. ಆದರೆ ಹುಡುಗಿಯರಲ್ಲಿ ಸತ್ಯಾಸತ್ಯತೆಯನ್ನು ಗ್ರಹಿಸುವ ಶಕ್ತಿ ಕಡಿಮೆಯಿರುತ್ತದೆ. ಆ ಕಾರಣದಿಂದ ಇದನ್ನು ಒಪ್ಪಬಹುದು.

ಒಟ್ಟಾರೆ, ಈಗಿನ ಕಾಲದ ಯುವಪ್ರೇಮಿಗಳು ಈ ಚಿತ್ರವನ್ನು ತಪ್ಪದೇ ವೀಕ್ಷಿಸಬೇಕು. ಪ್ರೇಮಿಗಳ ಮಧ್ಯೆ ಪರಸ್ಪರ ಹೊಂದಾಣ ಕೆ ಇಲ್ಲದಿದ್ದರೆ ಏನೇನಾಗುತ್ತದೆ ಎಂಬುದಕ್ಕೆ ಈ ಚಿತ್ರ ಒಂದು ಸ್ಪಷ್ಟ ಉದಾಹರಣೆ ಮಧ್ಯಮ ವರ್ಗದ ಕುಟುಂಬದಿಂದ ಬಂದ ಯುವಕನಾಗಿ ರೇಣುಕ್ ವೀಕ್ಷಕರ ಗಮನ ಸೆಳೆಯುತ್ತಾರೆ. ಸಂಸಾರದ ಜವಾಬ್ದಾರಿ ಹೊತ್ತ ಯುವಕನ ತಳಮಳ, ಜೊತೆಗೆ ತನ್ನ ಪ್ರೀತಿಯನ್ನೂ ಕಾಪಾಡಿಕೊಂಡು ಹೋಗುವ ಸಂದರ್ಭದಲ್ಲಿ ಎದುರಾಗುವ ಅಡ್ಡಿ-ಆತಂಕಗಳು. ಪ್ರೇಮಿಗಳಿಬ್ಬರು ಕದ್ದುಮುಚ್ಚಿ ಒಂದಾಗುವುದು, ಇದೆಲ್ಲ ಈಗಿನ ಕಾಲದ ಸಮಾಜದಲ್ಲಿ ಸಹಜವಾಗಿ ನಡೆಯುತ್ತಿರುವ ಘಟನೆಗಳೇ ಆಗಿವೆ. ಅದನ್ನು ನಿರ್ದೇಶಕ ಮಧುಸೂದನ್ ಅವರು ತೆರೆಮೇಲೆ ತೋರಿಸಿದ್ದಾರೆ. ಸಿನಿಮಾ ನೋಡುವ ಬಹುತೇಕರು ಆ ಎರಡು ಪಾತ್ರಗಳಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ.

ಚಿತ್ರದಲ್ಲಿ ನಾಯಕ ಒಬ್ಬ ಅಸಹಾಯಕ ಮದ್ಯಮ ವರ್ಗದ ಯುವಕರ ಪ್ರತಿನಿಯಾಗಿ ಕಂಡುಬಂದರೆ, ನಾಯಕಿ ಹೊರಗಿನ ಪ್ರಪಂಚಕ್ಕೆ ಮಾರುಹೋಗುವ ಈಗಿನ ಕಾಲದ ಯುವತಿಯರ ಪ್ರತಿರೂಪವಾಗಿ ಕಂಡುಬರುತ್ತಾರೆ. ಇದಿಷ್ಟು ಕಥೆಯನ್ನು ಎರಡು ವರ್ಷಗಳ ಕಾಲಾವಯಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಚಿತ್ರದಲ್ಲಿ ಬರುವ ಎಲ್ಲಾ ಹಾಡುಗಳು ನೆನಪಲ್ಲುಳಿಯುತ್ತವೆ. ಅನೂಪ್ ಸಿಳೀನ್ ಅವರ ಮ್ಯಾಜಿಕಲ್ ಕಂಪೆÇೀಜ್ ಚಿತ್ರಕ್ಕೆ ಪ್ಲಸ್ ಆಗಿದೆ.
-29/07/17

AA ERADU VARSHAGALU TO RELEASE AT 50 SCREENS
K
annada film Aa Eradu Varshagalu is set to release shortly at around 50 screens, including 15 single screen theatres across the state.
Aa Eradu Varshagalu, a romantic love story, is written and directed by B Madhusudan and produced by Rishika Madhusudan under Abhimatha Productions banner while J Anoop Seelin scored music for this movie.

Renuk Mathad and Ameeta are the main lead pair while Ramakrishna, Amitha Kulal and Triveni are the other important start cast in this film.
“Before taking direction of this film, I used to direct tele serials. Aa Eradu Varshagalu is a love story and different from other films based on love and romance. In this film, both hero and heroine break up their love and finally join hands to lead life. It reflects teenage,’’ said director Madhusudhan.

He said the distributor Manjunatha Gowda alias Jack Manju has encouraged and supported the film. “Jack Manju helped us a lot in getting theatres for screening. He provided us the much-needed guidance on the release of Aa Eradu Varshagalu,’’ he said.
The director said that he has realized the importance of having God Father in Kannada film industry. “We did not have a God Father since we are new to Gandhinagar. Now, we have realized how important it is to have a God Father,’’ he said.

Gururaj Kulkarni said that he knew Madhusudhan for a quite a long time. “I was the producer for tele serial Pallavi Anupallavi directed by Madhusudhan. After watching the tele serial, I became Madhusudhan’s fan,’’ Kulkarni said.

Hero Rnuk Mathad said that he learnt a lot during the shooting of Aa Eradu Varshagalu. “It was a good experience for me. I learnt a lot,’’ Renuk said.

Heroine Ameeta said she was waiting for the release of this film. “I am nervous now. I am waiting for watching this film in theatre,’’ Ameeta said.
-Cine Circle News
-26/07/17ಪಲ್ಲವಿ ಚರಣಗಳಿಗೆ ಹೃದಯ ಕೆಲಸ ಮಾಡುತ್ತದೆ - ಹಂಸಲೇಖಾ
ನಾದಬ್ರಹ್ಮ ಹಂಸಲೇಖಾ ಇರುವ ಕಡೆ ಆಡುಭಾಷೆಗಳು, ಮಾತುಗಳಿಗೆ ಬರವಿರುವುದಿಲ್ಲ. ಅದರಂತೆ ಹೊಸಬರ ‘ಆ ಎರಡು ವರ್ಷಗಳು’ ಚಿತ್ರದ ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆ ಮಾಡಿ ಎಲ್ಲರಿಗಿಂತ ಹೆಚ್ಚು ಮಾತನಾಡಿದರು. ಇದಕ್ಕಿಂತ ಮೊದಲು ಚಿತ್ರದ ಮೂರು ಹಾಡುಗಳನ್ನು ತೋರಿಸಲಾಯಿತು. ನಾಯಕ ರೇಣುಕ್ ಮಾತನಾಡುತ್ತಾ ಅನುರೂಪ ಧಾರವಾಹಿಯಿಂದ ನಿರ್ದೇಶಕರೊಂದಿಗೆ ಕೆಲಸ ಮಾಡಿರುವುದರ ಕಾರಣ ಅವರು ಸಿನಿಮಾರಂಗಕ್ಕೂ ಪರಿಚಯಿಸಿದ್ದಾರೆ. ಮಧ್ಯಮ ವರ್ಗದ ಹುಡುಗ ಪ್ರೀತಿಯಲ್ಲಿ ನೋವು ಕಂಡಾಗ ಅವನ ವೈಯಕ್ತಿಕ ಜೀವನ, ವೃತ್ತಿಯಲ್ಲಿ ಹೇಗೆ ಸ್ಥಿತ್ಯಂತರಗಳು ಆಗುತ್ತವೆ. ಅದನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ತಿಳಿಯಲು ಸಿನಿಮಾ ನೋಡಿ ಎಂದರು. ಮೂರು ಧಾರವಾಹಿಗಳನ್ನು ನಿರ್ದೇಶನ,ನಿರ್ಮಾಣ ಮಾಡಿದ ಅನುಭವದಿಂದ ಚಿತ್ರ ಮಾಡಲು ಧೈರ್ಯ ಬಂತು. ಕತೆಯಲ್ಲಿ ನಾಯಕಿ ಹೆಸರು ವರ್ಷ, ಆಕೆ ಎರಡು ವರ್ಷ ವರುಣ್‍ನಿಂದ ದೂರವಾದಾಗ ಹೇಗೆ ಪ್ರತಿಕ್ರಿಯ ಬರುತ್ತದೆ ಎಂಬುದು ಕತೆಯ ತಿರುಳು ಎಂದಷ್ಟೇ ಹೇಳಿದ್ದು ರಚಿಸಿ, ಆಕ್ಷನ್ ಕಟ್ ಹೇಳಿರುವ ಬಿ.ಮಧುಸೂದನ್. ನಲವತ್ತು ವರ್ಷದ ಅನುಭವದಲ್ಲಿ ಈ ಎರಡು ವರ್ಷಗಳು ಮುಖ್ಯವಾಗಿದೆ. ಬಬ್ರುವಾಹನದಿಂದ ಈ ಚಿತ್ರದವರೆಗೆ ನೆನಪುಗಳು ಸಾಕಷ್ಟು ಇವೆ. ಅದರಲ್ಲೂ ಇಂತಹ ಮುಗ್ದ ಮುಖಗಳನ್ನು ನೋಡುವಾಗ ಖುಷಿ ಕೊಟ್ಟಿತ್ತು. ಮಲೆನಾಡಿನ ಪರಿಸರವನ್ನು ಛಾಯಗ್ರಾಗಕ ರವಿಕಿಶೋರ್ ಅದ್ಬುತವಾಗಿ ಸೆರೆ ಹಿಡಿದಿದ್ದಾರೆ. ಪರ್ವತವಾಣ ರವರ ಸಾಕಷ್ಟು ಡೈಲಾಗ್‍ಗಳನ್ನು ಹೇಳಿಸಿದ್ದಾರೆ. ಹೊಸಬರ ಹುಮ್ಮಸ್ಸು, ಅನುಭವ ನೋಡುತ್ತಿದ್ದರೆ ಹಿರಿಯ ನಟ ಹಾಗಿದ್ದಕ್ಕೆ ಹೆಮ್ಮೆ ಅನಿಸಿದೆ ಅಂತಾರೆ ರಾಮಕೃಷ್ಣ.

ಗುರುಗಳು ಮುಂದೆ ಮಾತನಾಡಲು ಭಯವಾಗುತ್ತದೆ. ಅವರ ಶಾಲೆ ಬದುಕನ್ನು ಕಲಿಸುತ್ತದೆ. ನಾಸ್ತಿಕನಾಗಿರುವ ನಾನು ಹಂಸಲೇಖ ಸರ್ ನನ್ನ ದೇವರು. ಮೇಘಮಾಲೆ ರಾಗವನ್ನು ಇದರಲ್ಲಿ ಸೇರಿಸಿಕೊಂಡಿದ್ದೇನೆ. ಎಲ್ಲ ಗುರುಗಳ ಆಶಿರ್ವಾದವೆಂದು ವಿಧೇಯತೆ ತೋರಿಸಿದ್ದು ಸಂಗೀತ ನಿರ್ದೇಶಕ ಅನೂಪ್ ಸೀಳನ್. ಮತ್ತೋಬ್ಬ ಶಿಷ್ಯ ಗೆಳಯನ ಮಾತಿಗೆ ಷರಾ ಬರೆದು ಅವರ ಹಾಡುಗಳನ್ನು ನೋಡಿಕೊಂಡೆ ಇಂದು ಸಾಹಿತಿಯಾಗಿರುವುದು. ಆಡು ಮುಪ್ಪಿದ ಸೊಪ್ಪಿಲ್ಲ. ಅದು ಸರ್‍ಗೆ ಹೋಲುತ್ತದೆ. ಹಾಡುಗಳಲ್ಲಿ ಸಾಧ್ಯವಾದಷ್ಟು ಕನ್ನಡ ಪದಗಳನ್ನು ಬಳಸುತ್ತೇನೆ. ನಿರ್ದೇಶಕರಿಗೆ ಅರ್ಥವಾಗದಿದ್ದರೆ, ಅವರನ್ನು ಮನವೋಲಿಸಿ ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತೇನೆ. ಲಾಹಿರಿ ಪದ ಸರ್‍ರವರ ಹಿಂದಿನ ಚಿತ್ರದ ಪದವನ್ನು ತೆಗೆದುಕೊಂಡಿದ್ದೇನೆ ಎಂದು ಮುಕ್ತಕಂಠದಿಂದ ಹೇಳಿಕೊಂಡರು ಐದು ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ಅರಸು ಅಂತಾರೆ. ನಾಯಕಿ ಅಮಿತಾಕುಲಾಲ್ ನನ್ನ ಹೃದಯದ ಬಡಿತ ನಿಮಗೆಲ್ಲರಿಗೂ ಕೇಳಿಸ್ತಾ ಇರಬಹುದು. ವಿದ್ಯಾರ್ಥಿಯಾದ ನನಗೆ ಲೇಖನದಲ್ಲಿ ಆಸಕ್ತಿ. ಭವಿಷ್ಯವನ್ನು ತಲೆಕಡೆಸಿಕೊಳ್ಳಲ್ಲ. ವೃತ್ತಿಯಲ್ಲಿ ಶಿಸ್ತು ಅಂತ ನಂಬಿರುವಾಗ ಪ್ರೀತಿ ವಿಘಟನೆಗೊಂಡು ತಿರುವುಗಳು ಆಗುತ್ತವೆ. ಮುಂದೆ ಚಿತ್ರ ನೋಡಿ ಅಂತ ಬಾಲಿಶದಂತೆ ಎಲ್ಲರಿಗೂ ಥ್ಯಾಂಕ್ಸ್ ಎಂದರು.

ಅವಸಾನದಲ್ಲಿ ಹಂಸಲೇಖಾರಿಗೆ ಮೈಕ್ ತಲುಪಿದಾಗ ಅವರ ಅರ್ಥಪೂರ್ಣ ಮಾತುಗಳು ಹೀಗಿತ್ತು: ಆ ಎರಡು ವರ್ಷ ಯಶಸ್ವಿಯಾಗಿ ಮುಂದಿನ ಆ ಕೆಲವು ಚಿತ್ರಗಳಲ್ಲಿ ಇದು ಸೇರಿಕೊಳ್ಳಲಿ. ಸಾಂಪ್ರತ ಚಂದನವನ ಅಪ್ಯಾಯಮಾನವಾಗಿದೆ. ನಿರ್ಮಾಪಕರು ದುಡ್ಡು ಇಟ್ಟುಕೊಂಡು ಚಂದನವನದ ಗೇಟಿಗೆ ಬಂದು ದುಡ್ಡನ್ನು ಸುರಿಯುತ್ತಿದ್ದಾರೆ. ತಂತ್ರಜ್ಘರು ಖುಷಿಯಾಗಿ ಕೆಲಸ ಮಾಡಿ ಹಣವನ್ನು ಪಡೆಯುತ್ತ್ತಿದ್ದಾರೆ. ವರ್ಷಕ್ಕೆ 200 ಕ್ಕೂ ಹೆಚ್ಚು ಚಿತ್ರಗಳು ಬರುತ್ತಿರುವುದು ನೋಡಿದರೆ ರೋಮಾಂಚನವಾಗುತ್ತದೆ. ಇದನ್ನು ನೋಡಿದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗವು ಗಟ್ಟಿಯಾಗಿ ಬೇರೂರಿದೆ. ಅಷ್ಟು ಪ್ರಮಾಣದ ಚಿತ್ರಗಳಿಗೆ ಕತೆಗಳು, ದೃಶ್ಯಗಳು, ಹಾಡುಗಳು, ಮಟ್ಟುಗಳು, ತಂತ್ರಜ್ಘಾನಗಳು ಎಲ್ಲಿಂದ ತರುವುದು. ಗತಕಾಲದಲ್ಲಿ ಕನ್ನಡ ಚಿತ್ರಗಳು ವರ್ಷಕ್ಕೆ 5 ಬಿಡುಗಡೆಯಾಗುತ್ತಿದ್ದವು. ನಂತರ ಶಿಷ್ಯನ ಕೆಲಸವನ್ನು ಕೊಂಡಾಡುತ್ತಾ, ನನ್ನ ಹತ್ತಿರ ಸಹಾಯಕನಾಗಿದ್ದರೆ ಇಂದು ಸಂಗೀತ ನಿರ್ದೇಶಕ ಆಗುತ್ತಿರಲಿಲ್ಲ. ಅವನು ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದಾನೆ. ನಮ್ಮ ಗರಡಿಯಲ್ಲಿ ಬಂದವರನ್ನು ಶಿಸ್ತಿನಲ್ಲಿ ಇಡುವುದು, ಕೆಲಸ ಕಲಿಸಿ ಆಚೆ ಕಳಿಸುವುದು. ಅವನ ಬೆಳವಣ ಗೆ ನೋಡಿ ತುಂಬಾ ಸಂತೋಷವಾಗಿದೆ ಎಂದು ಗುರುರಾಜನಾಯ್ಡು ಕಂಪನಿಯಲ್ಲಿ ಇರುವಾಗ ನಡೆದ ಪ್ರಸಂಗವನ್ನು ನೆನಪಿಸಿಕೊಂಡು, ಆಗಮಿಸಿದ್ದ ಹಿರಿಯ ಕಲಾವಿದೆ ಸತ್ಯವತಿ, ವಸಂತಕುಮಾರ್ ದಂಪತಿಗಳಿಗೆ ನಮಸ್ಕರಿಸಿದರು. ಚಿತ್ರರಂಗಕ್ಕೆ ಬಂದಮೇಲೆ ತಾಂತ್ರಿಕವಾಗಿ, ವ್ಯವಹಾರಿಕವಾಗಿ ತಿಳಿದುಕೊಳ್ಳಬೇಕು. ಆದರೆ ನಾವುಗಳು ಸಾಂಸ್ಕ್ರತಿಕವಾಗಿ ಬೆಳೆಯೋದನ್ನು ಬಿಟ್ಟು, ವ್ಯವಹಾರದ ಮೇಲೆ ಗಮನ ಹರಿಸುತ್ತಿದ್ದೇವೆ. ಇಂದು ಕಲಾವಿದರು, ತಂತ್ರಜ್ಘರು ಬುದ್ದಿವಂತರಾಗಿದ್ದಾರೆ. ಆದರೆ ಔಟ್‍ಪುಟ್ ಎಲ್ಲಿ. ಅದಕ್ಕೆ ಸಂಸ್ಕ್ರತಿಯನ್ನು ಉಳಿಸಿಕೊಳ್ಳಬೇಕು. ಹಿಂದಿನ ಚಿತ್ರದ ಹಾಡುಗಳು ಇಂದಿಗೂ ಪ್ರಸಿದ್ದಿಯಾಗಿದೆ ಎಂದರೆ ಅದರಲ್ಲಿ ಕಲ್ಚರ್ ಇದೆ. ಅದನ್ನು ನಾವು ಮುಂದುವರೆಸಬೇಕು. ನಮಗೆ ರಂಗಭೂಮಿ ದೊಡ್ಡ ಶಾಲೆಯಾಗಿತ್ತು. ಇಂದಿನವರಿಗೆ ಕಿರುತೆರೆ ಸ್ಕೂಲ್ ಆಗಿದೆ. ಮನೋಹರ್ ಹಾಡು ಕರಿಯಾ ಐ ಲವ್ ಯು ಹಾಡನ್ನು ಕೊರಿಯಾ ದೇಶದವರು ರಾಷ್ಟ್ರಗೀತೆ ಮಾಡಿಕೊಂಡಿದ್ದಾರೆಂದು ಹೇಳಿದಾಗ ಅವರು ಸೋಜಿಗ ವ್ಯಕ್ತಪಡಿಸಿದರು. ನಾಯಕಿಗೆ ಸುಂದರ ಮೈಕಟ್ಟು ಇರುವುದರಿಂದ ಒಳ್ಳೆ ನಟಿಯಾಗುತ್ತಾಳೆ. ಆಕೆಯನ್ನು ಕೊರಿಯಾ ದೇಶಕ್ಕೆ ಹೋಲಿಸಿ ಎಲ್ಲರಿಗೂ ಶಾರ್ಕ್ ಕೊಟ್ಟಿರುತ್ತಾಳೆಂದು ಜಪಾನ್ ದೇಶದ ಘಟನೆ ಹೇಳಿದರು. ಗೆಳಯ ಕೃಷ್ಣನಾಡಿಗ್ ಮುವತ್ತು ವರ್ಷದಿಂದ ಏನನ್ನು ಕೇಳದೆ, ಇಂದು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬರಬೇಕು ಎಂದಾಗ ಇಲ್ಲ ಎನ್ನಲು ಮನಸ್ಸು ಬರಲಿಲ್ಲ. ಅದಕ್ಕಾಗಿ ಮಂಡ್ಯಾಕ್ಕೆ ಹೋಗದೆ ಇಲ್ಲಿಗೆ ಬಂದದ್ದು, ಹಿರಿಯ ದಂಪತಿಗಳನ್ನು ನೋಡಿದಂತೆ ಆಯಿತು ಎಂದು ಅವ್ಯಾಹತ ಮಾತಿಗೆ ವಿರಾಮ ಹಾಕಿದರು. ಮಗಳು ರಿಷಿಕಾಮಧುಸೂದನ್ ಹೆಸರಿನ ನಿರ್ಮಾಣದ ಚಿತ್ರವು ಬಿಡುಗಡೆ ಹಂತದಲ್ಲಿದೆ.
-5/07/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/