HOME
CINEMA NEWS
GALLERY
TV NEWS
REVIEWS
CONTACT US
ಬಿಡುಗಡೆಗೆ ಸಿದ್ದ ಅಯನ
ಸಾಫ್ಟ್‍ವೇರ್ ಉದ್ಯೋಗಿಗಳು ಸೇರಿಕೊಂಡು ಸಿದ್ದಪಡಿಸಿರುವ ‘ಅಯನ’ ಚಿತ್ರದ ಬಜೆಟ್ ಕಡಿಮೆ ಇರುವುದರಿಂದ ಮಲ್ಟಿಪ್ಲೆಕ್ಸ್‍ಗಳಲ್ಲಿ ಬಿಡಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಸಿನಿಮಾವು ಇಷ್ಟವಾಗಿ ಮಾತಿನ ಮೂಲಕ ಪ್ರಚಾರ ಸಿಕ್ಕರೆ, ಚಿತ್ರಮಂದಿರಗಳಲ್ಲಿ ಜನರಿಗೆ ತೋರಿಸಲಾಗುವುದು. ಟೆಕ್ಕಿಗಳ ವೃತ್ತಿ, ಹಣಕಾಸಿನ ಸಮಸ್ಯೆಗಳು ಬಂದಾಗ ಅವರ ವೈಯಕ್ತಿಕ ಬದುಕಿನಲ್ಲಿ ಏರುಪೇರು ಆಗುತ್ತದೆ. ಇಂತಹ ಘಟನೆಗಳು ಸಾಮಾನ್ಯವಾಗಿ ಕೆಲಸಕ್ಕೆ ಹೋಗುವವರ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಇವುಗಳನ್ನು ಹೆಕ್ಕಿಕೊಂಡು ಅದಕ್ಕೊಂದು ಚೆಂದದ ಕಲ್ಪನೆ ಕತೆಯನ್ನು ಸೃಷ್ಟಿಸಿ ತೆರೆ ಮೇಲೆ ಮೂಡಿಸುವ ಪ್ರಯತ್ನವನ್ನು ಮಾಡಿರುವುದು ಬೆಳಗಾಂ ಮೂಲದ ನಿರ್ದೇಶಕ ಗಂಗಾಧರಸಾಲಿಮಠ. ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಳ್ಳಲು ಹುಂಬತನದಿಂದ ಇನ್‍ಫೋಸಿಸ್ ಕಂಪನಿಗೆ ಬೆನ್ನು ತೋರಿಸಿ ಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ. ಇದಕ್ಕೆ ಅವರು ತೆಗೆದುಕೊಂಡ ಸಮಯ 18 ತಿಂಗಳು.

ರಂಗಭೂಮಿ ನಟ ದೀಪಕ್‍ಸುಬ್ರಮಣ್ಯ ವಾಣ ಜ್ಯೋದ್ಯಮಿ ಆಗಬೇಕೆಂದು ಕನಸು ಕಂಡು, ಕಾಣದ ಹಿಂದೆ ಬೆನ್ನು ಹತ್ತಿ ಹೋದಾಗ ಏನು ಆಗುತ್ತೆ ಎಂಬುದರ ಪಾತ್ರದಲ್ಲಿ ನಾಯಕ. ಹಿರಿಯ ಕಲಾವಿದ ರಾಜರಾಂಗಿರಿಯಾನ್ ಮೊಮ್ಮಗಳಾದ ಅಪೂರ್ವಸೋಮ ನಟಿಯಾಗಬೇಕಂಬ ಪಸೆಯಿಂದ ಉನ್ನತ ಹುದ್ದೆಯನ್ನು ತ್ಯಜಿಸಿ ಚಿತ್ರರಂಗದಲ್ಲಿ ಉಳಿಯಲು ಸಾಹಸ ಮಾಡಿರುವ ಈಕೆ ನಾಯಕಿಯಾಗಿ ಮೊದಲ ಅನುಭವ. ದಂಪತಿಗಳ ಬದುಕು ಬಿರುಕುಗೊಂಡಾಗ ಗೆಳತನದಲ್ಲಿ ಭಾಗಿಯಾಗುವ ಪಾತ್ರದಲ್ಲಿ ನಾಗಶ್ರೀ, ಶ್ರೀಹರ್ಷ, ಕಾರ್ತಿಕ್, ಗೌತಂಶ್ರೀಧರ್ ಇದ್ದಾರೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವೆಂದು ಬಣ ್ಣಸಿಕೊಳ್ಳಲು ತಂದೆ-ಮಗನ ಬಾಂದವ್ಯವನ್ನು ತೋರಿಸುವ ಸಲುವಾಗಿ ರಮೇಶ್‍ಭಟ್ ನಟನೆ ಇದೆ. ಛಾಯಗ್ರಹಣ ವರುಣ್.ಡಿ.ಕೆ, ನಾಲ್ಕು ಹಾಡುಗಳಿಗೆ ಸಂಗೀತ ಶ್ರೀಯಂಶ್‍ಶ್ರೀರಾಮ್, ಸಂಕಲನ ರವಿಕುಮಾರ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಬಸವರಾಜಕೇಡರ್, ಭರತ್‍ಕಾಟ್, ಕೃಷ್ಣವರ್ಚಿಗಲ್, ಗಂಗಾಧರಸಾಲಿಮಠ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿಮಾವನ್ನು ವೀಕ್ಷಿಸಿರುವ ಜೇಕಬ್‍ವರ್ಗಿಸ್ ತಂಡಕ್ಕೆ ಪ್ರೋತ್ಸಾಹ ನೀಡಲು ವಿತರಣೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇದೇ ಶುಕ್ರವಾರದಂದು ಅಯನ ತೆರೆಗೆ ಬರಲಿದೆ.
-Cine Circle News
-3/09/17


AYANA TO RELEASE IN SEPTEMBER
K
annada film Ayana is set to be released in September. With this film, Gangadhara Salimath, who hails from Belagavi and was working with Infosys, makes debut as a full-fledged director in Kannada film industry.
Gangadhara Salimath, like a few Infosys employees, has quit the job to become the director. He has written the script and directed it apart from being one of the producers.

“It is the story of a techie. It highlights the techie will have to face love, friendship, marriage and other things in his life journey. This film also showcases how techie will feel when he undergoes depression and trauma,’’ director Salimath said.

Deepak Subramanya, a theatre artiste from Basavapattana, is the hero while Apoorva Sumanth is the heroine in this film.
Divya, Adi, Nagashree, Karthik Ananthpadmanabha are the other star cast. All of them are acting in this film for the first time. M S Sriram from Kerala has scored music for six songs in this film. Varun D K is the cinematographer while Ravikumar M is the editor. Some of the technicians, who worked for Kannada films such as Thithi, Lucia, have worked for this film. Basavaraj Kedad, Bharath Kaat, Krishnavarchagal have supported Gangadhara Salimath to make this film. Its shooting was held in Bengaluru, Goa, Chikmagalur and Mangalore. As of now, the film Ayana is waiting for a certificate from the Regional Censor Board. It is expected to be released in September.
-Cine Circle News
-9/08/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/