HOME
CINEMA NEWS
GALLERY
TV NEWS
REVIEWS
CONTACT US
ಚಿತ್ರಮಂದಿರದಲ್ಲಿ ಆ್ಯಪಲ್ ಕೇಕ್
ಬೇಕರಿಯಲ್ಲಿ ಉಳಿದಿರುವ ಪದಾರ್ಥಗಳನ್ನು ಸೇರಿಸಿಕೊಂಡು ‘ಆ್ಯಪಲ್ ಕೇಕ್’ನ್ನು ಮಾಡುವುದು ತಿಳಿದಿರುವ ವಿಷಯವಾಗಿದೆ. ಹಾಗಂತ ತಿರಸ್ಕ್ರತವಾದ ಪದಾರ್ಥಗಳು ಆಗಿರುವುದಿಲ್ಲ. ಹೊಸಬರೇ ಸೇರಿಕೊಂಡು ಇದೇ ಹೆಸರಿನಲ್ಲಿ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಎಲ್ಲರಿಂದ ಅವಮಾನಕ್ಕೆ ಗುರಿಯಾಗಿದ್ದ ಮಂಗಳೂರು, ಉತ್ತರ ಕರ್ನಾಟಕ, ಮಂಡ್ಯಾ ಮತ್ತು ಬೆಂಗಳೂರು ಕಡೆಗಳಿಂದ ನಾಲ್ಕು ಹುಡುಗರು ಸಾಧನೆ ಮಾಡಲು ಬೆಂಗಳೂರಿಗೆ ಬರುತ್ತಾರೆ. ಒಂದು ಹಂತದಲ್ಲಿ ಎಲ್ಲರೂ ಭೇಟಿಯಾಗುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ನಡೆದ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆಯನ್ನು ಬರೆಯಲಾಗಿದೆ. ಎಲ್ಲಾ ಭಾವನೆಗಳು ಸುಳ್ಳು ಆಗಿರುವುದಿಲ್ಲ. ತಾಯಿ, ಗೆಳತನ , ದಿನನಿತ್ಯದ ವ್ಯಕ್ತಿತ್ವದ ವೈಭವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನೋಡುಗನಿಗೆ ಒಂದಲ್ಲಾ ಒಂದು ದೃಶ್ಯವು ತನ್ನದೆ ಎಂದು ಅನಿಸುತ್ತದಂತೆ.

ವಿಜಯ್‍ಶಂಕರ್, ಕೃಷ್ಣಹನಗಿ, ನಿರ್ದೇಶಕ ರಂಜಿತ್‍ಕುಮಾರ್‍ಗೌಡ, ನಿರ್ಮಾಪಕ ಅರವಿಂದ್‍ಕುಮಾರ್‍ಗೌಡ ಯುವಕರುಗಳಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಶುಭರಕ್ಷ ಇವರೊಂದಿಗೆ ಚೈತ್ರಶೆಟ್ಟಿ, ರಂಗಸ್ವಾಮಿ, ಹರಿಚಂದ್ರ, ವಿಶಾಲ್‍ಗೌಡ, ಕೀರ್ತಿಚಂದ್ರಶೇಖರ್ ನಟನೆ ಇದೆ. ಡಾ.ನಾಗೇಂದ್ರಪ್ರಸಾದ್, ಪ್ರಮೋದ್‍ಆಚಾರ್ಯ ಸಾಹಿತ್ಯದ ಗೀತೆಗಳಿಗೆ ಶ್ರೀಧರ್‍ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸೆನ್ಸಾರ್ ಆಗಿರುವುದು ವಿಶೇಷವಾಗಿದೆ. ಕನ್ನಡದಲ್ಲಿ ಸಿನಿಮಾವು ಇದೇ 23ರಂದು ಸುಮಾರು 80 ಕೇಂದ್ರಗಳಲ್ಲಿ ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/11/18
ಆ್ಯಪಲ್ ಕೇಕ್ ತಿನ್ನುವುದಲ್ಲ, ನೋಡುವುದು
ಬೇಕರಿಯಲ್ಲಿ ಉಳಿದಿರುವ ಪದಾರ್ಥಗಳನ್ನು ಸೇರಿಸಿಕೊಂಡು ‘ಆ್ಯಪಲ್ ಕೇಕ್’ನ್ನು ಮಾಡುವುದು ತಿಳಿದಿರುವ ವಿಷಯವಾಗಿದೆ. ಹಾಗಂತ ತಿರಸ್ಕ್ರತವಾದ ಪದಾರ್ಥಗಳು ಆಗಿರುವುದಿಲ್ಲ. ಹೊಸಬರೇ ಸೇರಿಕೊಂಡು ಇದೇ ಹೆಸರಿನಲ್ಲಿ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಎಲ್ಲರಿಂದ ಅವಮಾನಕ್ಕೆ ಗುರಿಯಾಗಿದ್ದ ಮಂಗಳೂರು, ಉತ್ತರ ಕರ್ನಾಟಕ, ಮಂಡ್ಯಾ ಮತ್ತು ಬೆಂಗಳೂರು ಕಡೆಗಳಿಂದ ನಾಲ್ಕು ಹುಡುಗರು ಸಾಧನೆ ಮಾಡಲು ಬೆಂಗಳೂರಿಗೆ ಬರುತ್ತಾರೆ. ಒಂದು ಹಂತದಲ್ಲಿ ಎಲ್ಲರೂ ಭೇಟಿಯಾಗುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ನಡೆದ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆಯನ್ನು ಬರೆಯಲಾಗಿದೆ. ಎಲ್ಲಾ ಭಾವನೆಗಳು ಸುಳ್ಳು ಆಗಿರುವುದಿಲ್ಲ. ತಾಯಿ, ಗೆಳತನ , ದಿನನಿತ್ಯದ ವ್ಯಕ್ತಿತ್ವದ ವೈಭವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನೋಡುಗನಿಗೆ ಒಂದಲ್ಲಾ ಒಂದು ದೃಶ್ಯವು ತನ್ನದೆ ಎಂದು ಅನಿಸುತ್ತದಂತೆ.

ವಿಜಯ್‍ಶಂಕರ್, ಕೃಷ್ಣಹನಗಿ, ನಿರ್ದೇಶಕ ರಂಜಿತ್‍ಕುಮಾರ್‍ಗೌಡ, ನಿರ್ಮಾಪಕ ಅರವಿಂದ್‍ಕುಮಾರ್‍ಗೌಡ ಯುವಕರುಗಳಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಶುಭರಕ್ಷ ಇವರೊಂದಿಗೆ ಚೈತ್ರಶೆಟ್ಟಿ, ರಂಗಸ್ವಾಮಿ, ಹರಿಚಂದ್ರ, ವಿಶಾಲ್‍ಗೌಡ, ಕೀರ್ತಿಚಂದ್ರಶೇಖರ್ ನಟನೆ ಇದೆ. ಡಾ.ನಾಗೇಂದ್ರಪ್ರಸಾದ್, ಪ್ರಮೋದ್‍ಆಚಾರ್ಯ ಸಾಹಿತ್ಯದ ಗೀತೆಗಳಿಗೆ ಶ್ರೀಧರ್‍ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಪ್ರಸಕ್ತ ನಿರ್ದೇಶರುಗಳಾಗಿ ಬ್ಯುಸಿ ಇರುವ ಮಾದೇಶ, ವಿಕ್ಟರಿವಾಸು, ಎಂ.ಎಸ್.ರಮೇಶ್, ಶಿವಮಣಿ, ಓಂಪ್ರಕಾಶ್‍ರಾವ್ ಮತ್ತು ನಿರ್ಮಾಪಕ ರಾಮು ಇವರೆಲ್ಲಾ ಒಂದು ಕಾಲದಲ್ಲಿ ದೂರದ ಊರಿನಿಂದ ಕನಸುಗಳನ್ನು ಕಟ್ಟಿಕೊಂಡು ನಗರಕ್ಕೆ ಬಂದವರು. ಚಿತ್ರದ ಕತೆಯು ಇದೇ ರೀತಿಯಲ್ಲಿ ಇರುವುದರಿಂದ ಡಾ.ನಾಗೇಂದ್ರಪ್ರಸಾದ್ ಸಲಹೆಯಂತೆ ಇವರಿಂದಲೇ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಅನುಭವ ಇಲ್ಲದಿದ್ದರೂ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸೆನ್ಸಾರ್ ಮಾಡಿಸಿರುವ ಸಾಹಸಿ ಹುಡುಗರು ಸದ್ಯದಲ್ಲೆ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/10/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore