HOME
CINEMA NEWS
GALLERY
TV NEWS
REVIEWS
CONTACT US
ಹುಡುಗಾಟಕ್ಕಿಂತ ಕಾಟವೆ ಜಾಸ್ತಿಯಾಗಿದೆ
‘ಅನ್ವೇಷಿ’ ಶೀರ್ಷಿಕೆಗೆ ಅರ್ಥ ಹುಟುಕಾಟ ಎನ್ನುತ್ತಾರೆ. ಅದರಂತೆ ಕೊನೆವರೆಗೂ ನೋಡುಗನಿಗೆ ಹುಟುಗಾಟದ ಆಟವನ್ನು ತೋರಿಸುತ್ತಾ ಗುಂಗಿ ಹುಳ ಬಿಟ್ಟಿದ್ದಾರೆ. ಚಿತ್ರದ ಕುರಿತು ಹೇಳುವುದಾದರೆ ಅತೀಂದ್ರಿಯ ಶಕ್ತಿ ಹೊಂದಿರುವ ಬಾಲಕ, ಅವನಿಗೆ ಮುಂದೆ ಏನಾಗುತ್ತದೆ ಎಂಬುದು ತಿಳಿದಿರುತ್ತದೆ. ಅದಕ್ಕಾಗಿ ಪರಿಚಿತವಲ್ಲದ ಅಮಾಯಕನನ್ನು ರಕ್ಷಿಸುತ್ತಾನೆ. ಮುಂದೆ ಹುಡುಗನ ಶಕ್ತಿಯನ್ನು ನಂಬುವ ತಿಲಕ್ ತನಗೆ, ತನ್ನ ಸ್ನೇಹಿತರಿಗೆ ಬರುವ ಅಪಾಯಕ್ಕೆ ಪರಿಹಾರ ಕಂಡುಕೊಳ್ಳಲು ಎಲ್ಲಾ ಸ್ನೇಹಿತರನ್ನು ಒಂದುಗೂಡಿಸಲು ಕಷ್ಟಪಡುತ್ತಾನೆ. ಹೀಗೆ ಸಾಗುವ ಹುಡುಕಾಟದಲ್ಲಿಯೇ ವಿರಾಮಕ್ಕೆ ಬರುತ್ತದೆ. ನಂತರ ಕತೆ ಮುಂದು ವರೆಯುತ್ತೆ. ಒಂಬತು ಸ್ನೇಹಿತರು ಅದರಲ್ಲಿ ಒಬ್ಬ ಅಮಾಯಕ. ಸದಾ ಉಳಿದವರ ರ್ಯಾಗಿಂಗ್ ದಾಳಿಗೆ ತುತ್ತಾಗಿ ಅದರಿಂದಲೆ ಪ್ರಾಣ ಬಿಡುತ್ತಾನೆ. ಸತ್ತ ಮೆಲೆ ತಂದೆ ಮಂತ್ರವಾದಿಯಿಂದ ಶಕ್ತಿ ಪಡೆದು ತನ್ನ ಸಾವಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಶುರು ಮಾಡುತ್ತಾನೆ. ಇಲ್ಲಿಂದ ಪ್ರಾರಂಭವಾಗುವುದೇ ಹಾರರ್ ದೃಶ್ಯಗಳು. ಇದನ್ನು ಅರಿತ ತಿಲಕ್ ಹದಿನೈದು ದಿವಸದಲ್ಲಿ ಸ್ನೇಹಿತರನ್ನು ಒಟ್ಟಾಗಿ ಸೇರಿಸಿ ಯಜ್ಘ ಮಾಡಿಸಲು ಮುಂದಾದಾಗ ಸಮಸ್ಯೆ ಕಾಣ ಸುತ್ತದೆ. ಯಾವುದಕ್ಕೆ ನಾವು ಹೆದರಬೇಕು. ಹುಡುಗ ಹೇಳಿದ ಮಾತ್ರಕ್ಕೆ ಹುಡುಕಾಟ ನಡೆಸಿದಾಗ ಹತ್ತಿರ ಇರುವ ಗೆಳಯನೆ ವಿಲನ್ ಅಂತ ಗೊತ್ತಾದಾಗ ತಿರುವುಗಳು ಪಡೆದುಕೊಳ್ಳುತ್ತದೆ. ಅದು ಏನು ಅಂತ ತಿಳಿಯಲು ಸಿನಿಮಾ ನೋಡುವುದು ಒಳಿತು.

ಚೂಚ್ಚಲಬಾರಿ ನಾಯಕನಾಗಿ ನಟಿಸಿರುವ ರಘುಭಟ್ ಅಭಿಯನಯದಲ್ಲಿ ಪಳಗಬೇಕಾಗಿದೆ. ಮತ್ತೋಂದು ಮುಖ್ಯ ಪಾತ್ರದಲ್ಲಿ ಕಾಣ ಸಿಕೊಂಡಿರುವ ತಿಲಕ್ ನಟನೆ ಪರವಾಗಿಲ್ಲ. ನಾಯಕಿ ದಿಶಾಪೂವಯ್ಯ ಹಾಡಿನಲ್ಲಿ ಚೆಂದ ಕಾಣ ಸುತ್ತಾರೆ. ಉಳಿದಂತೆ ಅವಿನಾಶ್, ರಮೇಶ್‍ಭಟ್, ಅನುಅಗರವಾಲ್, ನವ್ಯಾ ,ಶ್ರದ್ದಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಯಲಿನ್ ಹೇಮಂತ್ ಸಂಗೀತದಲ್ಲಿ ಒಂದು ಹಾಡು ಕೇಳಬಲ್. ವೇಮಗಲ್ ಜಗನ್ನಾಥ್ ನಿರ್ದೇಶನದಲ್ಲಿ ಹಾರರ್ ಎಫೆಕ್ಟ್‍ಗಳು ಜಾಸ್ತಿ ಇದೆ ಎನ್ನಬಹುದು. ಜಯರಾಂ ನಿರ್ಮಾಣ ಮಾಡಿರುವ ಹುಡುಗಾಟದ ಆಟವನ್ನು ನೋಡುವ ಬಯಕೆ ಇದ್ದಲ್ಲಿ ಅನ್ವೇಷಿಯನ್ನು ವೀಕ್ಷಿಸಬಹುದು.
-9/12/17
8ನೇ ಡಿಸೆಂಬರ್‍ಗೆ ಅನ್ವೇಷಿ
ಕಲೆಗೆ ಭಾಷೆ ಇಲ್ಲ ಅಂತಾರೆ. ಅದರಂತೆ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡಲು ಬೇರೆ ಭಾಷೆಯ ಕಲಾವಿದರು ಬರುತ್ತಿರುವುದು ಆರೋಗ್ಯಕರ ಬೆಳವಣ ಗೆಯಾಗಿದೆ. ಮೊನ್ನೆ ಚಮಕ್ ಚಿತ್ರಕ್ಕೆ ತೆಲುಗು ನಟ ವಿಜಯ್ ದೇವಕೊಂಡ ಆಗಮಿಸಿ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದ್ದರು. ಈಗ ಕಣ್ನಾಮುಚ್ಚೆ ಕಾಡೆಗೋಡೇ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ‘ಅನ್ವೇಷಿ’ ಚಿತ್ರವು ತೆರೆಗೆ ಬರುತ್ತಿರುವುದರಿಂದ ತಂಡಕ್ಕೆ ಶುಭಕೋರಲು ಎನ್‍ಟಿಆರ್ ಮೊಮ್ಮಗ ನಂದಮೂರಿ ತಾರಕರತ್ನ ಆಗಮಿಸಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿ 6ನೇ ಸೆನ್ಸ್ ಬಗ್ಗೆ ಲೇಖನ ಬರೆಯುವ ಸಂದರ್ಭದಲ್ಲಿ ಕೆಲವೊಂದು ಘಟನೆಗಳು ಬರುತ್ತವೆ. ಕಾಲೇಜಿನಲ್ಲಿ ರ್ಯಾಗಿಂಗ್, ವಿದ್ಯಾರ್ಥಿ ಕೊಲೆ ಇವೆಲ್ಲವು ಹಾರರ್, ಥ್ರಿಲ್ಲರ್ ಮಾದರಿಯಲ್ಲಿ ಬರಲಿದೆ. ತಿಲಕ್‍ಶೇಖರ್ ಮತ್ತು ಮೊದಲಬಾರಿ ನಾಯಕನಾಗಿ ನಟನೆ ಮಾಡಿರುವ ರಘುಭಟ್ ಮತ್ತು ನಾಯಕಿ ದಿಶಾಪೂವಯ್ಯ ಚುಟುಕು ಮಾತನಾಡಿದರು.

ಟ್ರೈಲರ್ ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಸಿನಿಮಾಗಳು ಬರುತ್ತಿವೆ ಅಂತ ಕೇಳಿದ್ದೇನೆ. ಅವಕಾಶ ಸಿಕ್ಕಲ್ಲಿ ನಟಿಸಲು ಸಿದ್ದ. ತಂಡಕ್ಕೆ ಒಳ್ಳೆಯದಾಗಲಿ ಎಂದರು ತಾರಕರತ್ನ. ಕತೆ,ಸಂಭಾಷಣೆ, ಚಿತ್ರಕತೆ, ನಿರ್ದೇಶನ ಮಾಡಿರುವ ವೇಮಗಲ್‍ಜಗನ್ನಾಥ್, ನಿರ್ಮಾಪಕ ವಿ.ಜಯರಾಂ ಕ್ಯೂಬ್‍ನಲ್ಲಿ ಅಳವಡಿಸುವ ಬೇಕಾಗಿರುವುದರಿಂದ ಚೆನ್ನೈ ಹೋಗಿರುವ ಕಾರಣ ಗೈರು ಹಾಜರಿದ್ದರು. ತಾರಬಳಗದಲ್ಲಿ ರಮ್ಯಬಾರ್ನಾ, ಅನುಅಗರವಾಲ್, ರಮೇಶ್‍ಭಟ್, ಅವಿನಾಶ್ ನಟನೆ ಇದೆ. ವಯಲಿನ್‍ಹೇಮಂತ್ ಸಂಗೀತದಲ್ಲಿ ಆರು ಹಾಡುಗಳು ಇದೆ.
-6/12/17
ಹೊಸ ನಿರ್ಮಾಪಕರಿಗೆ ಧೈರ್ಯ ಜಾಸ್ತಿ - ಸಾರಾ ಗೋವಿಂದು
ಯಾವುದೆ ಚಿತ್ರ ನಿರ್ಮಾಣ ಮಾಡುವಾಗ ಹಣ ವಾಪಸ್ಸು ಬರುತ್ತದೆ ಎಂಬ ಖಾತರಿಯಿಂದಲೇ ಸಾಹಸಕ್ಕೆ ಕೈ ಹಾಕುವುದು ಸಹಜ. ಕಾಲ ಬದಲಾಗಿದೆ. ಸಿನಿಮಾ ಮೇಲಿನ ವ್ಯಾಮೋಹದಿಂದ ಹೊಸದಾಗಿ ಬರುವ ನಿರ್ಮಾಪಕರು ರಿಟನ್ರ್ಸ್ ಬರೋಲ್ಲ ಅಂತ ಗೊತ್ತಿದೆ ಎನ್ನುವವರು ಇದ್ದಾರೆಂದು ವಾಣ ಜ್ಯ ಮಂಡಳಿ ಅಧ್ಯಕ್ಷ ಸಾರಾ.ಗೋವಿಂದು ‘ಅನ್ವೇಷಿ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿ ಕಟು ಸತ್ಯವನ್ನು ಹೇಳುತ್ತಿದ್ದರು. ಅವರು ಮಾತನಾಡುತ್ತಾ ನೊಂದಣ ಮಾಡಿಸುವ ಸಂದರ್ಭದಲ್ಲಿ ಆಂಗ್ಲ ಶೀರ್ಷಿಕೆ ಇಟ್ಟಲ್ಲಿ ಸರ್ಕಾರದಿಂದ ಸೌಲಭ್ಯಗಳು ಸಿಗುವುದಿಲ್ಲ. ಕನ್ನಡದಲ್ಲಿ ಟೈಟಲ್ ಸೂಕ್ತ ಎಂದು ಹೇಳಿದರೂ ಅವೆಲ್ಲವು ನಮಗೆ ಬೇಡ. ಇಂಗ್ಲೀಷ್ ಇರಲಿ ಅಂತಾರೆ. ದುಡ್ಡು ವಾಪಸ್ಸು ಬರುವುದು ಖಚಿತವಿಲ್ಲವೆಂದು ತಿಳಿದಿದ್ದರೂ ಅಮೇರಿಕಾದ ಪ್ರಜೆ ಕನ್ನಡ ಸಿನಿಮಾಕ್ಕೆ ಐದು ಲಕ್ಷ ನೀಡಿದ್ದಾರೆ. ಇಂತಹ ಸಂಗತಿಗಳು ಸದ್ಯ ನಡೆಯುತ್ತಿದೆ. ರಾಜಣ್ಣನ ಕಾಲದಲ್ಲಿ ಎಲ್ಲವನ್ನು ಪಕ್ಕಾ ಯೋಜನೆ ಸಿದ್ದಪಡಿಸಿಕೊಂಡು ಚಿತ್ರೀಕರಣ ಶುರು ಮಾಡುತ್ತಿದ್ದರು. ಇಂದು ಶೂಟಿಂಗ್ ದಿನ ಸಂಭಾಷಣೆ ಬರಯುತ್ತಾರೆ. ಕತೆಗೆ ಪ್ರಾಮುಖ್ಯತೆ ನೀಡಿದಲ್ಲಿ ಚಿತ್ರವು ಜನರಿಗೆ ತಲುಜಪುತ್ತದೆ. ಟೈಟಲ್‍ನಿಂದ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಮಾರ್ಚ್ 22 ಚಿತ್ರವು ಚೆನ್ನಾಗಿದ್ದರೂ ಶೀರ್ಷಿಕೆ ನಕರಾತ್ಮಕವಾಗಿದ್ದರಿಂದ ನೀರಸ ಗಳಿಕೆ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ತಂಡಕ್ಕೆ ಶುಭ ಹಾರೈಸಿದರು.

ಪತ್ರಿಕೋದ್ಯಮ ವಿದ್ಯಾರ್ಥಿ 6ನೇ ಸೆನ್ಸ್ ಬಗ್ಗೆ ಲೇಖನ ಬರೆಯುವ ಸಂದರ್ಭದಲ್ಲಿ ಕೆಲವೊಂದು ಅನುಭವಗಳು ಬರುತ್ತವೆ. ಅದನ್ನು ಹಾರರ್,ಥ್ರಿಲ್ಲರ್ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ವಿನೂತನ ಕತೆಯಲ್ಲಿ ವಿದ್ಯಾರ್ಥಿಗಳಿಗೆ ಸಾಮಜಿಕ ಕಳಕಳಿ ಇರುವ ಸಂದೇಶವನ್ನು ಹೇಳಲಾಗಿದೆ. ಮಂಗಳೂರು, ಕಾರವಾರ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿ ಒದಗಿಸಿದರು ನಿರ್ದೇಶಕ ವೇಮಗಲ್ ಜಗನ್ನಾಥರಾವ್. ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ತಿಲಕ್ ಹಾಗೂ ರಘುಭಟ್ ಪಾತ್ರದ ವಿವರ ತಿಳಿಸಲಿಲ್ಲ. ನಾಯಕಿಯರಾದ ಅನುಅಗರವಾಲ್, ರಮ್ಯಾಬಾರ್ನ ಪೋಸ್ಟರ್‍ನಲ್ಲಿ ಕಾಣ ಸಿಕೊಂಡರೆ, ದಿಶಾಪೂವಯ್ಯ ತ್ರಿಕೋನ ಪ್ರೇಮಕತೆಯಲ್ಲಿ ಕುತೂಹಲ ಇರುವ ಪಾತ್ರ ಎಂದಷ್ಟೇ ಹೇಳಿದರು. ಗೆಳೆಯರ ಸಲುವಾಗಿ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು ಕಿರಿಕ್‍ಕೀರ್ತಿ. ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ವಯಲಿನ್‍ಹೇಮಂತ್ ಗೈರು ಹಾಜರಿಗೆ ಕಾರಣ ತಿಳಿಯಲಿಲ್ಲ. ಕಣ್ಣಾಮುಚ್ಚೆ ಕಾಡೇಗೂಡೇ ಅಡಿಬರಹದಲ್ಲಿರುವ ಸಿನಿಮಾವನ್ನು ವಿ.ಜಯರಾಂ ನಿರ್ಮಾಣ ಮಾಡಿದ್ದಾರೆ. ಇದಕ್ಕೂ ಮುನ್ನ ಚಿತ್ರದ ಎರಡು ಹಾಡುಗಳು ಹಾಗೂ ಟ್ರೈಲರ್‍ನ್ನು ತೋರಿಸಲಾಯಿತು.
-16/09/17

ANVESHI’ TILAK HUNTS FOR CLUE
T
he talented actor from the days of Ganda Hendathi…..and a boy friend Tilak plays a major positive role in ‘Anveshi’. He is a hunter for clue in the film that went on the floor on Thursday morning at Kanteerava studios in Bangalore.

From ‘Tulasidala’ to ‘Anveshi’ senior director Vemgal Jagannath Rao travelled three decades. It is about the six sense of a journalist with doctor help the film moves in thrilling style. The shoot is scheduled at Bangalore, Udupi, Ramoji Rao Film city, Kundapura, Bangkok and Thailand. Anveshi has the caption Kanna Muchche Kaade Goode.

Producer Tagore Krishna has taken the distribution of ‘Chinnada Taali’ of Vemgal and now producing this film. Hemanth Kumar has scored five songs.

Ani Agarwal, Richa, Shradda Sharma are three heroines. Sri of Telugu films, Smart Raghu are also in the cast.

More stress is laid on the technicalities of this film says director Vemgal.
-5/06/14

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore