HOME
CINEMA NEWS
GALLERY
TV NEWS
REVIEWS
CONTACT US
ನವ ಪ್ರತಿಭೆಗಳನ್ನು ಹೊರತರುವ ನಿರ್ಮಾಣ ಸಂಸ್ಥೆ
ಕಳೆದವಾರ ಬರಹಗಾರರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ‘ರೈಟ್ ಕರ್ನಾಟಕ’ ಸಂಸ್ಥೆಯೊಂದು ಶುರುವಾಗಿತ್ತು. ಅದರಂತ ಪ್ರತಿಭೆ ಇರುವ ಕಲಾವಿದರು, ತಂತ್ರಜ್ಘರುಗಳಿಗೆ ಅವಕಾಶ ನೀಡುವ ಸಲುವಾಗಿ ನಟಿ ಅಶ್ವಿನಿಗೌಡ ‘ಎ.ಎಂ.ಜಿ.ಪ್ರೊಡಕ್ಷನ್ಸ್’ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಇವರ ಕುರಿತು ಹೇಳುವುದಾದರೆ ‘ವಾರಸುದಾರ’ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡು, ಮುಂದೆ ಮದುವೆ, ಮಕ್ಕಳು ಅಂತ ಸಮಯ ತೆಗೆದುಕೊಂಡು ಮುಂದೆ ಅಕ್ಕ, ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಕನ್ನಡ ರಕ್ಷಣಾ ವೇದಿಕೆಯಲ್ಲಿ ಸಕ್ರಿಯ ಕಾರ್ಯಕರ್ತೆ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ ಕನ್ನಡ ಪರ ಕೆಲಸಗಳನ್ನು ಮಾಡುತ್ತಿದ್ದರೂ ಮನದಲ್ಲಿ ಇದ್ದ ಕನಸು ಮಾತ್ರ ಚಿವುಟಿಲ್ಲ. ಸುಮಾರು ನಲವತ್ತು ಚಿತ್ರಗಳು, ಹದಿನೈದು ಧಾರವಾಹಿಗಳಲ್ಲಿ ಅಭಿನಯಿಸಿದ ಅನುಭವವಿದೆ.

ಪ್ರಸಕ್ತ ಪದ್ಮಾವತಿ, ಕಾವೇರಿ, ಮರಳಿ ಬಂದಳು ಸೀತೆ ಮೇಘಾ ಧಾರವಾಹಿಗಳಲ್ಲಿ ವೀಕ್ಷಕರ ಮನೆ ಮಾತಾಗಿದ್ದು, ಹಿರಿತೆರೆಯಲ್ಲಿ ಬ್ಯುಸಿ ಇದ್ದಾರೆ. ಹದಿನೈದು ವóರ್ಷದ ಅನುಭವದಿಂದ ಸಂಸ್ಥೆ ಶುರು ಮಾಡುವುದರೊಂದಿಗೆ ಬಹುಕಾಲದ ಯೋಜನೆ ಕೈಗೂಡಿದೆ. ಇದರ ಮೂಲಕ ಚಿತ್ರಗಳು, ಧಾರವಾಹಿಗಳನ್ನು ನಿರ್ಮಾಣ ಮಾಡುವುದು ಅಲ್ಲದೆ ನವ ಪ್ರತಿಭೆಗಳಿಗೆ ಅವಕಾಶ ನೀಡಿ ಭವಿಷ್ಯದಲ್ಲಿ ಅವರುಗಳು ತಾರಕಕ್ಕೆ ಹೋಗುವಂತೆ ಸಹಕಾರ ನೀಡುವುದು. ಚಿತ್ರರಂಗವು ಹಿರಿಯ ಕಲಾವಿದರನ್ನು ಮರೆತಿದೆ ಅಂತ ಎಲ್ಲರೂ ಹೇಳುತ್ತಿದ್ದಾರೆ, ಇದನ್ನು ಮನಗಂಡ ಅಶ್ವಿನಿಗೌಡರವರು ಹಿರಿಯರು ಎಲ್ಲಿಯೂ ಹೋಗಿಲ್ಲ. ಅವರು ನಮ್ಮೊಂದಿಗೆ ಇದ್ದಾರೆಂದು ಸಂಸ್ಥೆಯು ನಿರ್ಮಿಸುವ ಸಿನಿಮಾಗಳಲ್ಲಿ ಅವರಿಗೂ ಅವಕಾಶ ಮಾಡಿಕೊಡಲಾಗುವುದು. ಈಗಾಗಲೇ ಸಾಕಷ್ಟು ಸಿನಿಮಾಮೋಹಿಗಳು ಇವರೊಂದಿಗೆ ಕೈಜೋಡಿಸಲು ಮುಂದೆ ಬಂದಿದ್ದಾರೆ, ಹಲವು ನಿರ್ದೇಶಕರ ಕತೆಗಳನ್ನು ಕೇಳಲಾಗಿ, ಬಹುಶ: ಈ ವರ್ಷದ ಅಂತ್ಯದೊಳಗೆ ಚಿತ್ರವೊಂದು ಬಿಡುಗಡೆಯಾಗುವ ಸಾದ್ಯತೆ ಇದೆ. ಸಂಬಂದಿ ಮನುಗೌಡ ಸಾರಥ್ಯದ ‘ಬಾಸ್ ಅಸೋಸಿಯೇಟ್ಸ್ ‘ ಕಚೇರಿಯು ಎಎಂಜಿಗೆ ಪಾಲುದಾರಿಕೆಯನ್ನು ವಹಿಸಿಕೊಂಡಿದೆ.

ಶುಕ್ರವಾರದಂದು ಎರಡು ಕಚೇರಿಗಳು ಉದ್ಘಾಟನೆಗೊಂಡಿತು. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು, ರಾಘವೇಂದ್ರರಾಜ್‍ಕುಮಾರ್, ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಟಿ.ಎ.ನಾರಾಯಣಗೌಡ, ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಬಾ.ಮ.ಹರೀಶ್, ನಟ ಗುರುದತ್, ಗಣೇಶ್‍ರಾವ್ ಮುಂತಾದವರು ಆಗಮಿಸಿ ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
13/04/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore