HOME
CINEMA NEWS
GALLERY
TV NEWS
REVIEWS
CONTACT US

AATAGARA RUNNING SUCCESSFULLY
A
atagara, a film produced under the Dwarakish Chitra banner collected over Rs 2 crore in its opening weekend all over Karnataka. The movie which released on the festival day of Varamahalakshmi Vrata has lived up to expectations with Goddess Lakshmi smiling on the film’s fortunes. 

According to reports, the first week share for the producer has crossed Rs 2 crore which is said to be the biggest opening for Chiranjeevi Sarja although he is seen in a multistarrer film. The film's collections in urban centres and Bengaluru is reportedly above expectations but below expectations in semi-urban and rural centres. The film is reportedly doing quite well in multiplexes as well. 

According to reports, the movie has been able to hold on strongly to its audiences even on weekdays.

Aatagara is an edge of the seat suspense thriller and has won good reviews from media and the audiences. The movie based on Agatha Christie’s novel And There Were None and is directed by K M Chaitanya of Aa Dinagalu fame. The film has an ensemble cast comprising Chiranjeevi Sarja, Meghana Raj, Parul Yadav, Anu Prabhakar, Pavana, Achyuth Kumar, Prakash Belawadi,

Ravishankar, Sadhu Kokila, Arohita Gowda, Dwarakish and finally Anant Nag the trump card of the film among others. 
-12/09/15

ಕೌತುಕದ ನೆಲೆಯಲ್ಲಿ ನ್ಯಾಯದ ತೀರ್ಪು!
ಅದು ಜನರೇ ಇಲ್ಲದ ದುರ್ಗಮ ದ್ವೀಪ. ನಾಗರಿಕ ಬದುಕಿನಿಂದ ಬಲು ದೂರವಿರುವ ಸ್ಥಳ. ಅಲ್ಲೊಂದು ವಿಶಾಲ ಮನೆ. ಸುತ್ತಲೂ ದಟ್ಟ ಕಾಡು. ಅಲ್ಲಿಂದ ಹೊರ ಜಗತ್ತಿಗೆ ಯಾವ ಸಂಪರ್ಕವೂ ಇಲ್ಲ. ಪರಸ್ಪರ ಅಪರಿಚಿತರಾಗಿದ್ದ 10 ಮಂದಿ ‘ಆಟಗಾರ’ ಎಂಬ ರಿಯಾಲಿಟಿ ಷೋವೊಂದರ ಸ್ಪರ್ಧಿಗಳಾಗಿ ಆ ದ್ವೀಪಕ್ಕೆ ಬರುವಾಗ ಇರುವುದು ಸ್ಪರ್ಧೆಯನ್ನು ಗೆಲ್ಲುವ ಗುರಿ. ಅವರೆಲ್ಲರೂ ಸಮಾಜದ ಒಂದೊಂದು ವರ್ಗದಿಂದ ಬಂದವರು. ಒಂದು ತಿಂಗಳು ಜಗತ್ತಿನ ನಂಟು ಕಳೆದುಕೊಂಡು ಅಲ್ಲಿ ಬದುಕಬೇಕು. ಆದರೆ ದ್ವೀಪಕ್ಕೆ ಕಾಲಿಟ್ಟ ಮರುದಿನದಿಂದಲೇ ರಿಯಾಲಿಟಿ ಷೋದ ನಿಜವಾದ ಆಟ ಶುರುವಾಗುತ್ತದೆ. ಒಂದೊಂದೇ ಜೀವಗಳು ಆ ಗುಂಪಿನಿಂದ ದೂರವಾಗುತ್ತವೆ. ಕಣ್ಣೆದುರೇ ಸಾವುಗಳನ್ನು ಕಾಣುವ ಅವರಲ್ಲಿ ಮುಂದಿನ ಬಲಿ ತಾವೇ ಎಂಬ ಜೀವ ಭಯ ಹುಟ್ಟಿಕೊಳ್ಳುತ್ತದೆ. ರಿಯಾಲಿಟಿ ಷೋ ಹಿಂದಿರುವ ವಾಸ್ತವ ‘ಆಟ’ದ ಗುರಿ ಅವರಾರೂ ಮತ್ತೆ ಜೀವಂತ ದ್ವೀಪದಿಂದ ಹೊರಬರಬಾರದು. ಅದಕ್ಕೆ ಸಾಮಾಜಿಕ ನ್ಯಾಯದ ಕಾರಣವೂ ಇದೆ. ಈ ಕುತೂಹಲವನ್ನು ಆರಂಭದಿಂದ ಮೂಡಿಸುತ್ತಲೇ, ಅತ್ಯಂತ ಬಿಗಿಯಾದ ಚಿತ್ರಕಥೆಯೊಂದಿಗೆ ಅಪರೂಪದ ಚಿತ್ರ ನೀಡಿದ್ದಾರೆ ನಿರ್ದೇಶಕ ಕೆ.ಎಂ. ಚೈತನ್ಯ.
ತಮ್ಮ ಹಿಂದಿನ ಮೂರೂ ಚಿತ್ರಗಳಲ್ಲಿ ವೈವಿಧ್ಯ ತೋರಿಸಿದ್ದ ಚೈತನ್ಯ, ನಾಲ್ಕನೇ ಸಿನಿಮಾದಲ್ಲಿ ಮತ್ತೊಂದು ಹೊಸ ಪ್ರಯತ್ನ ನಡೆಸಿದ್ದಾರೆ. ‘ಆಟಗಾರ’ ಹಲವು ಸಿನಿಮಾಗಳಲ್ಲಿ ಹಲವು ರೀತಿಗಳಲ್ಲಿ ಚಿತ್ರಿತವಾದ ಸೇಡಿನ ಕಥನಗಳನ್ನು ಸಮಾಜಶುದ್ದಿಯ ಆಶಯವನ್ನೇ ಪ್ರಕಟಿಸಿದರೂ ಅದು ತೆರೆದುಕೊಳ್ಳುವ ಹಿನ್ನೆಲೆ ಮತ್ತು ನಿರೂಪಣೆ ಹೊಸ ಅನುಭವ ನೀಡುತ್ತದೆ. ಚಿತ್ರಕಥೆಯ ಹೆಣಿಗೆ, ನಿರೂಪಣೆ, ಸಂಭಾಷಣೆ, ಪಾತ್ರವರ್ಗದ ಆಯ್ಕೆ ಮತ್ತು ಸನ್ನಿವೇಶಗಳ ಚಿತ್ರಣಗಳಲ್ಲಿ ನಿರ್ದೇಶಕರು ಕಸುಬುದಾರಿಕೆ ಮೆರೆದಿದ್ದಾರೆ. ಕೊಂಚ ಎಚ್ಚರ ತಪ್ಪಿದರೂ ಚಿತ್ರ ಸಡಿಲಗೊಂಡು ಗಾಂಭೀರ್ಯ ಕಳೆದುಕೊಳ್ಳುವ ಅಪಾಯವಿತ್ತು.
ಕುತೂಹಲವನ್ನು ಉಳಿಸಿಕೊಳ್ಳುತ್ತಲೇ ಒಂದೊಂದೇ ಸಂಗತಿಗಳನ್ನು ಬಿಚ್ಚಿಡುವ ಚಿತ್ರ ಅವರೆಲ್ಲರ ಬದುಕಿನ ಇತಿಹಾಸದಲ್ಲಿನ ಕ್ರೂರಮುಖಗಳನ್ನು ಅನಾವರಣ ಮಾಡುತ್ತದೆ. ಅದಕ್ಕೆ ನ್ಯಾಯದ ‘ತೀರ್ಪು’ ನೀಡುವ ಪ್ರಯತ್ನ ಸದಾಶಯವನ್ನೇನೂ ಬಿಂಬಿಸುವುದಿಲ್ಲ. 
ತಾರಾಬಳಗದ ಆಯ್ಕೆಯಲ್ಲಿಯೂ ಚೈತನ್ಯ ಕೌಶಲ ಪ್ರದರ್ಶಿಸಿದ್ದಾರೆ. ಚಿರಂಜೀವಿ ಸರ್ಜಾ, ಪಾರುಲ್ ಯಾದವ್‌, ಮೇಘನಾ ರಾಜ್‌, ಪ್ರಕಾಶ್‌ ಬೆಳವಾಡಿ, ಅನುಪ್ರಭಾಕರ್‌ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ತಾಂತ್ರಿಕವಾಗಿಯೂ ‘ಆಟಗಾರ’ ಗಮನ ಸೆಳೆಯುತ್ತದೆ. ಸತ್ಯ ಹೆಗ್ಡೆ ಛಾಯಾಗ್ರಹಣ ಮತ್ತು ಅನೂಪ್‌ ಸೀಳಿನ್‌ ಸಂಗೀತ ಪರಿಣಾಮಕಾರಿ.
-30/08/15
ಇದು ದ್ವಾರಕೀಶ್ ಆಟ!
ಮೇಯರ್ ಮುತ್ತಣ್ಣ ಚಿತ್ರದಿಂದ ಚಿತ್ರ ಜೀವನ ಆರಂಭಿಸಿರುವ ಕರ್ನಾಟಕದ ಕುಳ್ಳ ದ್ವಾರಕೀಶ್ ಅವರು ಹಲವಾರು ಹಾಸ್ಯಭರಿತ ಮತ್ತು ಥ್ರಿಲ್ಲರ್ ಚಿತ್ರಗಳನ್ನು ನಿರ್ಮಿಸುವ ಮೂಲಕಮನ ಗೆದ್ದಿದ್ದಾರೆ. ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರುವ ದ್ವಾರಕೀಶ್ ಅವರೀಗ ಸದ್ದಿಲ್ಲದೇ ಒಂದು ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಅದು ಈ ವಾರ ತೆರೆಗೆ ಬರುತ್ತಿರುವಆಟಗಾರ!

ದ್ವಾರಕೀಶ್ ಚಿತ್ರ ಹಾಗೂ ಎಕೆಕೆ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಈ ಆಟಗಾರ ಚಿತ್ರ ನಿರ್ಮಾಣವಾಗಿದೆ. ಕಳೆದ ಈವತ್ತಮೂರು ವರ್ಷಗಳಿಂದ ಚಿತ್ರರಂಗದಲ್ಲಿರುವ ದ್ವಾರಕೀಶ್ಅವರಿಗೀಗ ೭೩ ವರ್ಷ. ಆಟಗಾರ ಅವರ ಸಂಸ್ಥೆಯಿಂದ ನಿರ್ಮಾಣಗೊಳ್ಳುತ್ತಿರುವ ೪೯ನೇ ಚಿತ್ರ ಎಂಬುದು ದ್ವಾರಕೀಶ್ ಖುಷಿಗೆ ಕಾರಣವಾಗಿದೆ. ಏಳೆಂಟು ವರ್ಷಗಳ ಹಿಂದೆ ಚೈತನ್ಯಸಿನಿಮಾ ಮಾಡಲು ಕಥೆಗಾಗಿ ಹುಡುಕುತ್ತಿದ್ದಾಗ ಗೆಳೆಯ ಕಣ್ಣನ್ ಪರಮೇಶ್ವರನ್ ಸಿಕ್ಕಿ ಈ ಕಥಾ ಎಳೆ ಹೇಳಿದ್ದರಂತೆ. ನಂತರ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದ ಚೈತನ್ಯ ಈಕಥೆಯನ್ನು ಪೆಂಡಿಂಗ್ ಇಟ್ಟಿದ್ದರಂತೆ. ನಂತರ ನಿರ್ಮಾಪಕ ಯೋಗಿ ಅವರ ಕಾರಣದಿಂದ ಆಟಗಾರ ಅಂತಿಮಗೊಂಡು ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
ಕೆ.ಎಂ. ಚೈತನ್ಯ : ನಿರ್ದೇಶಕ
ನಿರ್ದೇಶಕ ಕೆ.ಎಂ. ಚೈತನ್ಯ ಗೊತ್ತಲ್ಲ. ಸಾಹಿತಿ ಮರುಳು ಸಿದ್ದಪ್ಪನವರ ಮಗ ಮತ್ತು ಜಿ.ಎಸ್.ಶಿವರುದ್ರಪ್ಪನವರ ಮೊಮ್ಮಗ! `ಆ ದಿನಗಳು' ಎಂಬ ಅಪರೂಪದ ಸಿನಿಮಾವನ್ನುನಿರ್ದೇಶಿಸಿದವರು ಚೈತನ್ಯ. `ಆ ದಿನಗಳ' ನಂತರ ಚೈತನ್ಯ ಈ ದಿನಗಳ ತನಕ ಸಿನಿಮಾಗಳನ್ನು ನಿರ್ದೇಶಿಸುತ್ತಲೇ ಇದ್ದಾರೆ. `ಸೂರ್ಯಕಾಂತಿ', `ಪರಾರಿ'ಯಂಥ ಚಿತ್ರಗಳ ನಂತರಈಗ `ಆಟಗಾರ'ರೊಂದಿಗೆ ಮತ್ತೆ ಮುಂದಡಿಯಿಟ್ಟಿದ್ದಾರೆ.

ಈಗ `ಆಟಗಾರ' ಎನ್ನುವ ಉತ್ಸಾಹಭರಿತ ಚಿತ್ರದ ಮೂಲಕ ಚೈತನ್ಯ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ ಎಂದೇ ಹೇಳಬಹುದು. ಇದೇ ವಾರ ಸಿನಿಮಾ ರಾಜ್ಯಾದ್ಯಂತ ತೆರೆಗೆಬರುತ್ತಿದೆ. ಈಗಾಗಲೇ ಬಿಡುಗಡೆಗೊಂಡಿರುವ ಈ ಚಿತ್ರದ ಹಾಡುಗಳು ಮತ್ತು ಟ್ರೈಲರ್ `ಈ ಸಿನಿಮಾದಲ್ಲಿ ಏನೋ ಇದೆ' ಎನ್ನುವ ಕುತೂಹಲವನ್ನು ಹುಟ್ಟಿಸಿದೆ. ಈ ಊಹೆ ನಿಜವಾಗಿಈ ನಿರ್ದೇಶಕ ನಿಜಕ್ಕೂ ಚೈತನ್ಯಯುತವಾಗಿ ವಿಜೃಂಬಿಸಲಿ... ಚಿತ್ರರಂಗದಲ್ಲಿ ಅಸಲಿ ಆಟ ಶುರು ಮಾಡಲಿ.

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
`ಆಟಗಾರ' ದ್ವಾರಕೀಶ್ ಉತ್ಸಾಹ ಹೆಚ್ಚಲಿ...
ಇತ್ತೀಚೆಗೆ ದ್ವಾರಕೀಶ್ ಸಪ್ಪಗಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಅವರನ್ನು ನೋಡಿದ ಯಾರಿಗೇ ಆದರೂ ಹಾಗನ್ನಿಸದೇ ಇರಲು ಸಾಧ್ಯವಿಲ್ಲ.
ದ್ವಾರಕೀಶ್ ಇದ್ದ ಜಾಗದಲ್ಲಿ ಏನೋ ಒಂದು ಸ್ಫೋಟಕ ಸುದ್ದಿ, ಸಣ್ಣದೊಂದು ವಿವಾದ, ಒಂದಿಷ್ಟು ಮುನಿಸು ಇತ್ಯಾದಿಗಳೆಲ್ಲವೂ ಇರುತ್ತಿತ್ತು. ಇಂಥ ದ್ವಾರಕೀಶ್ ವಿಷ್ಣುವರ್ಧನ ಚಿತ್ರದನಂತರ ಒಂಚೂರು ತೆರೆಮರೆಗೆ ಸರಿದಂತೆ ಕಾಣುತ್ತಿತ್ತು. ಈಗ ಕರ್ನಾಟಕದ ಕುಳ್ಳ ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಅವರ ನಿರ್ಮಾಣದ ನಲವತ್ತೊಂಭತ್ತನೇ ಚಿತ್ರ `ಆಟಗಾರ'ಸಂಪೂರ್ಣಗೊಂಡಿದ್ದು ಇನ್ನೇನು ತೆರೆಗೆ ಬರುವ ಸಿದ್ದತೆಯಲ್ಲಿದೆ. ಇತ್ತೀಚಿಗೆ ಈ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದೆ. ಈ ಸಿಡಿ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡದ್ವಾರಕೀಶ್ ಚೂರು ಡಲ್ ಆಗಿ ಕಾಣಿಸಿದ್ದಂತೂ ನಿಜ. ಈಗಾಗಲೇ ಬರೋಬ್ಬರಿ ನಲವತ್ತೊಂಭತ್ತು ಚಿತ್ರಗಳನ್ನು ನಿರ್ಮಿಸಿ, ಹತ್ತಾರು ಚಿತ್ರಗಳನ್ನು ನಿರ್ದೇಶಿಸಿ, ನೂರಾರು ಚಿತ್ರಗಳಲ್ಲಿನಟಿಸಿರುವ ದ್ವಾರಕೀಶ್ ಸ್ವಲ್ಪ ದಣಿದಂತೆ ಕಾಣುತ್ತಿದ್ದಾರೆ. ಹಾಗೆ ನೋಡಿದರೆ ಸೋಲಿನ ಮಹಾ ಹೊಡೆತಕ್ಕೆ ಸಿಲುಕಿದಾಗಲೂ ಚುರುಕಾಗೇ ಇದ್ದವರು ಅವರು. ಆದರೆ ಈಗ ದ್ವಾರಕೀಶ್ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿದೆ. ಮಕ್ಕಳೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಗ ಯೋಗೀಶ್ `ದ್ವಾರಕೀಶ್ ಚಿತ್ರ'ದ ಸಂಪೂರ್ಣ ಹೊಣೆ ಹೊತ್ತು ತಂದೆಯನ್ನುನಿರಾತಂಕವಾಗಿರುವಂತೆ ನೋಡಿಕೊಂಡಿದ್ದಾರೆ. ಆದರೂ ದ್ವಾರಕೀಶ್‌ಗೆ ಯಾವುದೋ ಅಗೋಚರ ಚಿಂತೆ ಕಾಡುವಂತೆ ಕಾಣುತ್ತಿದೆ.

ಬಹುಶಃ ಅವರೇ ಪರಿಚಯಿಸಿದ, ಅವರಿಂದ ಬೆಳೆದ, ಅವರೊಟ್ಟಿಗೇ ದುಡಿದ ಚಿತ್ರರಂಗದ ಅನೇಕ ದಿಗ್ಗಜರ ಕಣ್ಮರೆ ದ್ವಾರಕೀಶ್ ಅವರನ್ನು ವ್ಯಾಕುಲಕ್ಕೀಡುಮಾಡಿದ್ದರೆ ಅದರಲ್ಲಿ ಯಾವಅನುಮಾನಗಳಿಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಜ್, ಅಶ್ವಥ್, ವಿಷ್ಣುರಂಥ ನಟರಿಂದ ಹಿಡಿದು ಸಿದ್ದಲಿಂಗಯ್ಯನವರಂಥ ನಿರ್ದೇಶಕರ ತನಕ ಅನೇಕಾನೇಕ ಸಾಧಕರು ದ್ವಾರಕೀಶ್ ಅವರಮುಂದೆ ಇಲ್ಲದಂತಾಗಿಹೋಗಿದ್ದಾರೆ. ಇವೆಲ್ಲಾ ಅವರನ್ನು ಹೆಚ್ಚು ಭಾವುಕರನ್ನಾಗಿಸಿರಬಹುದು.

ಇವೆಲ್ಲ ಏನೇ ಇರಲಿ, ದ್ವಾರಕೀಶ್ ಯಾವತ್ತಿಗೂ ನಗುನಗುತ್ತಾ, ಚುರುಕಾಗಿರುವುದನ್ನಷ್ಟೇ ಕನ್ನಡದ ಕಲಾರಸಿಕರು ಬಯಸುತ್ತಾರೆ.

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
ಆಟಗಾರನ ಅಧಿನಾಯಕಿ ಮೇಘನಾ!
`ಕನ್ನಡದ ಹುಡುಗಿಯರಿಗೆ ಕನ್ನಡದಲ್ಲಿ ಅವಕಾಶವಿಲ್ಲ' ಎನ್ನುವ ಮಾತೀಗ ಹಳೆಯದಾಗಿಬಿಟ್ಟಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಹುಡುಗಿಯರಿಗೇ ಯಲ್ಲಿ ಹೆಚ್ಚಿನ ಅವಕಾಶಸಿಗುತ್ತಿದೆ. ಯಾಕೆಂದರೆಮ ಸ್ಯಾಂಡಲ್‌ವುಡ್ ನಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ಬಿಜಿಯಾಗಿರುವ ನಟಿ ಮೇಘನಾ ರಾಜ್ ಅಪ್ಪಟ ಕನ್ನಡದ ಕುಡಿ. `ರಾಜ ಹುಲಿ' ಖ್ಯಾತಿಯ ಮೇಘನಾ ರಾಜ್ಇದೀಗ ಗಾಂಧಿನಗರದಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಸುಂದರ್ ರಾಜ್-ಪ್ರಮೀಳಾ ಜೋಷಾಯ್ ದಂಪತಿಗಳ ಮುದ್ದಿನ ಮಗಳು ಮೇಘನಾ ರಾಜ್ ಇದೀಗ ಕನ್ನಡ ಚಿತ್ರರಂಗದಲ್ಲಿ ಭರಪೂರ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದುಕಾಲದಲ್ಲಿ ಈಕೆಯೂ ಪರಭಾಷಾ ನಟಿಯಾಗಿ ಖ್ಯಾತಿ ಹೊಂದಿದ್ದು, ಇತ್ತೀಚೆಗೆ ಕನ್ನಡ ಇಂಡಸ್ಟ್ರಿಯಲ್ಲಿ ಸ್ವಲ್ಪ ಜಾಸ್ತಿನೇ ಸೌಂಡ್ ಮಾಡ್ತಾ ಇದ್ದಾರೆ. ಅಚ್ಚ ಕನ್ನಡದ ಹುಡುಗಿ ಮೇಘನಾರಾಜ್ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಒಟ್ಟಿಗೆ ಐದು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಚಿರಂಜೀವಿ ಸರ್ಜಾಗೆ ಜೋಡಿಯಾಗಿರುವ `ಆಟಗಾರ', ವಿಜಯ್ ರಾಘವೇಂದ್ರ ಜೊತೆ`ವಂಶೋದ್ಧಾರಕ', `ಅಲ್ಲಮ', `ಭುಜಂಗ' ಹಾಗೂ `ಲಕ್ಷ್ಮಣ' ಚಿತ್ರಗಳನ್ನ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಈಕೆ ಕನ್ನಡದ ಹುಡುಗಿಯಾದರೂ ಮೊದಲಿಗೆ ಮಿಂಚಿದ್ದು ಮಾತ್ರ ಪಕ್ಕದರಾಜ್ಯವಾದ ಕೇರಳದಲ್ಲಿ. ಅಲ್ಲಿಯ ಪ್ರೇಕ್ಷಕರ ಮನ ಗೆದ್ದು, ಮೊದಲ ಬಾರಿಗೆ ಲೂಸ್ ಮಾದ ಯೋಗೇಶ್ ಅಭಿನಯದ `ಪುಂಡ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ಎಂಟ್ರಿ ಕೊಟ್ಟರು.

ತದನಂತರ ಮೇಘನಾ ರಾಜ್ ಯಶ್ ಜೊತೆ `ರಾಜಾ ಹುಲಿ' ಅಂತಹ ಹಿಟ್ ಚಿತ್ರ ನೀಡಿದರು. ಈಗ ಒಟ್ಟೊಟ್ಟಿಗೆ ಐದಾರು ಚಿತ್ರಗಳಲಿ ನಟಿಸುತ್ತಾ ಲಕ್ಕಿ ಕ್ವೀನ್ ಎಂಬ ಪಟ್ಟವನ್ನುಅಲಂಕರಿಸಿದ್ದಾರೆ.

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
`ಆಟಗಾರ'ನೊಂದಿಗೆ ಪಾವನವಾದವಳು!
ಈ ಹುಡುಗಿಯ ಅದೃಷ್ಟ ಕುಲಾಯಿಸಿದೆ. ಆರಂಭದ ಸಿನಿಮಾಗಳಲ್ಲೇ ದೊಡ್ಡ ಬ್ಯಾನರ್‌ಗಳಲ್ಲಿ ಅವಕಾಶ ಸಿಗುವುದು ಕಷ್ಟ. ಆದರೆ ಪಾವನಾಗೆ `ದ್ವಾರಕೀಶ್ ಚಿತ್ರ'ದಂಥ ಬ್ಯಾನರ್‌ನಲ್ಲಿಅವಕಾಶ ಸಿಕ್ಕಿದೆ.
ಸಾಮಾನ್ಯವಾಗಿ ಮೊದಲ ಸಿನಿಮಾದಲ್ಲೇ ಗಮನಸೆಳೆಯುವಂಥಾ ಪಾತ್ರ ಸಿಗುವುದು, ಭಿನ್ನವಾಗಿಗುರುತಿಸುವಂತೆ ನಟಿಸುವುದು ಸವಾಲಿನ ಸಂಗತಿಗಳೇ. ಆದರೆ ಈ ಬಟ್ಟಲು ಕಣ್ಣುಗಳಹುಡುಗಿಅದರಲ್ಲಿ ಗೆದ್ದಿದ್ದಾಳೆ. ಅಂದಹಾಗೆ ಈಕೆ ಎಲ್ಲರಿಂದಲೂ ಪ್ರಶಂಸೆ ಗಿಟ್ಟಿಸಿಕೊಂಡಿರುವ ಬೊಂಬೆಗಳ ಲವ್ ಚಿತ್ರದ ನಾಯಕಿಪಾವನ.

ಪಾವನಾಗಿದು ಮೊದಲ ಸಿನಿಮಾ. ಆದರೆ ಆಕೆಯ ನಟನಾ ಚಾತುರ್ಯ ನೋಡಿದವರ್‍ಯಾರೂ ಸಹ ಅದನ್ನ ನಂಬಲು ಹಿಂದೇಟು ಹಾಕುತ್ತಾರೆ. ಗೊಂಬೆಗಳ ಲವ್ ಚಿತ್ರದಲ್ಲಿಪಾವನಳದ್ದು ಚಾಲೆಂಜಿಂಗ್ ಪಾತ್ರ. ಅದನ್ನು ಲೀಲಾಜಾಲವಾಗಿ, ಇಡಿಯಾಗಿ ಆವಾಹಿಸಿಕೊಂಡು ನಟಿಸಿ ಚಿತ್ರ ರಸಿಕರಿಂದ ಭೇಶ್ ಅನ್ನಿಸಿಕೊಂಡಿದ್ದಳು. ಮಾಧ್ಯಮಗಳು ಸಹ ಆಕೆಯನಟನೆಯನ್ನ ಮನಸಾರೆ ಮೆಚ್ಚಿಕೊಂಡಾಡಿದ್ದವು. ಆ ಮೂಲಕ ಕನ್ನಡಕ್ಕೊಬ್ಬಳು ಪ್ರತಿಭಾವಂತ ನಾಯಕಿಯ ಆಗಮನವಾಗಿರುವ ಸೂಚನೆ ನಿಚ್ಚಳವಾಗಿತ್ತು.

ನಟನೆಯನ್ನ ಅಪಾರವಾಗಿ ಹಚ್ಚಿಕೊಂಡಿದ್ದ ಪಾವನಾಗೆ ಪಕ್ಕಾ ಫ್ಲಾಟ್‌ಫಾರ್ಮ್ ಕೊಟ್ಟವರು ನಿರ್ದೇಶಕ ಗಿರಿರಾಜ್.ಗಿರಿ ಆಗ ಅಜಯ್‌ರಾವ್‌ನನ್ನು ಹಾಕಿಕೊಂಡು ಅದ್ವೈತ ಸಿನಿಮಾಮಾಡುವ ತಯಾರಿ ನಡೆಸುತ್ತಿದ್ದರು. ಅತ್ಯಂತಕಡಿಮೆ ಬಜೆಟ್ಟಿನಲ್ಲಿ ನವಿಲಾದವರುಅಂತೊಂದು ಸದಭಿರುಚಿಯ ಸಿನಿಮಾ ಮಾಡಿ ಗಮನ ಸೆಳೆದಿದ್ದ ಗಿರಿ, ಸಿನಿಮಾವೊಂದನ್ನಆರಂಭಿಸುವ ಮುನ್ನ ನಟನೆಯ ವರ್ಕ್ ಶಾಪ್ ನಡೆಸುವ ಹೊಸಾ ಆಲೋಚನೆ ಮಾಡಿದ್ದರು. ಹಾಗೊಂದು ವರ್ಕ್‌ಶಾಪಿನ ಮೂಲಕ ಪ್ರತಿಭೆಗಳನ್ನ ಗುರುತಿಸಿಚಿತ್ರದಲ್ಲಿ ಅವಕಾಶಕೊಡುವುದು ಅವರ ಉದ್ದೇಶ. ಅದ್ವೈತ ಸಿನಿಮಾದಲ್ಲೇಗಿರಿ ಆ ರೀತಿಯದ್ದೊಂದು ಪ್ಲಾನು ಮಾಡಿ ಜಾಹೀರಾತು ಕೊಟ್ಟಿದ್ದರು.

ಅದಾಗಲೇ ನಟನೆಯ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಪಾವನಾ ಆ ಜಾಹೀರಾತಿನ ಜಾಡು ಹಿಡಿದು ಗಿರಿರಾಜ್‌ರ ಸಂಪರ್ಕಕ್ಕೆ ಬಂದಳು. ಆಕೆಗೆ ನಟನಾಜಗತ್ತಿನ ಹೊಸಾಲೋಕವೊಂದು ಪರಿಚಯವಾದದ್ದು ಆವಾಗಲೇ. ಕಲಿಕೆಯ ಸಂದರ್ಭದಲ್ಲೇ ಈ ಹುಡುಗಿಯಚುರುಕುತನ, ನಟನೆಯ ಪ್ರತಿಭೆಅನಾವರಣಗೊಂಡಿತ್ತು. ಗಿರಿರಾಜ್‌ಅದ್ವೈತ ಸಿನಿಮಾದಲ್ಲಿಈಕೆಗೆ ಮುಖ್ಯ ಪಾತ್ರವೊಂದನ್ನಕೊಟ್ಟರು.ಅದು ನಿಜಕ್ಕೂಚಾಲೆಂಜಿಂಗ್‌ರೋಲ್. ಯಾಕೆಂದರದು ಮಲೆಯಾಳೀ ಹುಡುಗಿಯ ಪಾತ್ರ.ಭಾಷೆ, ಬಾಡಿ ಲಾಂಗ್ವೇಜ್ ಎಲ್ಲವನ್ನೂ ಭಿನ್ನವಾಗಿಎಕ್ಸ್ ಪೋಸ್ ಮಾಡಬೇಕಿತ್ತು. ಅದನ್ನ ಪಾವನಾ ಲೀಲಾಜಾಲವಾಗಿ ನಿರ್ವಹಿಸಿದ್ದನ್ನ ಕಂಡು ಸ್ವತಃ ಗಿರಿರಾಜ್‌ರೇ ಖುಷಿಯಾಗಿದ್ದರು. ಆದರೆ ಕಾರಣಾಂತರಗಳಿಂದಾಗಿ ಆ ಸಿನಿಮಾಬಿಡುಗಡೆಯ ಮುಹೂರ್ತ ಮುಂದೂಡುತ್ತಲೇ ಹೋಯ್ತು.

ಆದರೆ ಪ್ರತಿಭೆಯೆಂಬುದೊಂದಿದ್ದರೆ ಅವಕಾಶ ಸಿಕ್ಕೇ ಸಿಗುತ್ತದೆ.ಈ ಹುಡುಗಿಯ ವಿಚಾರದಲ್ಲೂ ಅದು ನಿಜವಾಯ್ತು. ಅದಾಗಲೇ ಸಂತೋಷ್ ಗೊಂಬೆಗಳ ಲವ್ ಚಿತ್ರಕ್ಕಾಗಿ ಕೆಲಸಆರಂಭಿಸಿದ್ದರಲ್ಲಾ, ಅದಕ್ಕೆ ಕ್ಯಾಮೆರಾಮನ್ ಆಗಿ ಕಿರಣ್ ಹಂಪಾಪುರ ಆಯ್ಕೆಯಾಗಿದ್ದರು. ಆತ ಅದ್ವೈತ ಸಿನಿಮಾಕ್ಕೂ ಕೆಮೆರಾ ಕಣ್ಣಾಗಿದ್ದವರು. ಆ ಸಂದರ್ಭದಲ್ಲಿ ಪಾವನಾಳನಟನೆಕಂಡಿದ್ದ ಕಿರಣ್ ಆಕೆಯನ್ನ ಸಂತೋಷ್‌ರಿಗೆ ಪರಿಚಯಿಸಿದರು. ಪಾವನಾ ಗೊಂಬೆಗಳ ಲವ್ ಸಿನಿಮಾದ ಭಾಗವಾಗಿದ್ದು ಹಾಗೆ.ಮತ್ತೊಂದು ವಿಶೇಷವೆಂದರೆ ಗಿರಿರಾಜ್‌ರ ಜಟ್ಟಸಿನಿಮಾಕ್ಕೂ ಆಕೆಯೇ ಮುಖ್ಯ ಪಾತ್ರಕ್ಕೆ ಆಯ್ಕೆಯಾದಳು. ಅದರಲ್ಲೂ ಸಹ ಆಕೆಯದ್ದುಡಿಫರೆಂಟ್ ಪಾತ್ರ.

ಪಾವನಾ ಮೂಲತಃ ಮಂಡ್ಯ ಸೀಮೆಯ ಬೆಳ್ಳೂರು ಕ್ರಾಸಿನ ಹುಡುಗಿ.ಆಕೆಯ ಹೆತ್ತವರು ಈಗಲೂ ಅಲ್ಲಿಯೇ ವಾಸವಿದ್ದಾರೆ. ಶಾಲಾ ದಿನಗಳಿಂದಲೂ ನಾಟಕ ಮುಂತಾದ ಸಾಂಸ್ಕೃತಿಕಚಟುವಟಿಕೆಗಳಲ್ಲಿ ಸದಾ ಮುಂದಿದ್ದ ಪಾವನಾಗೆ ಪುಟ್ಟ ವಯಸ್ಸಿನಿಂದಲೂ ನಟಿಯಾಗಬೇಕೆಂಬ ಕನಸಿತ್ತು.ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನ ನಡೆಸುತ್ತಲೇ ಮೈಸೂರಿನಲ್ಲಿಪತ್ರಿಕೋದ್ಯಮ ಪದವಿ ಪೂರೈಸಿದಳು. ಆದರೆ ಅಕ್ಷರಲೋಕದ ಸಂಪರ್ಕದಲ್ಲಿರುವ ಹೊತ್ತಲ್ಲೂ ಈ ಹುಡುಗಿಯ ಮನಸ್ಸು ಬಣ್ಣಗಳ ತೆಕ್ಕೆಯಲ್ಲಿತ್ತು. ಅದಕ್ಕೆ ಸರಿಯಾಗಿಕಾಲೇಜುಮುಗಿಯುವ ಹೊತ್ತಿಗಾಗಲೇಆ ಕನಸಿನ ಹಾದಿ ತೆರೆದುಕೊಂಡಿತ್ತು.

ಹಾಗೆ ಸಿಕ್ಕ ಅವಕಾಶವನ್ನ ಪಾವನಾ ಚೆಂದಗೆ ಬಳಸಿಕೊಂಡಿದ್ದಾಳೆ. ಅದಕ್ಕೆ ಗೊಂಬೆಗಳ ಲವ್ ಚಿತ್ರದಲ್ಲಿ ಈಕೆ ನಟಿಸಿರುವ ಪ್ರತೀ ದೃಶ್ಯಗಳೂ ಸಾಕ್ಷಿಯಂತಿವೆ. ಅದಾಗಲೇ ಈಹುಡುಗಿ ಸ್ಯಾಂಡಲ್‌ವುಡ್ಡಿನಲ್ಲಿ ನೆಲೆಗೊಳ್ಳುತ್ತಾಳೆ, ದೊಡ್ಡ ಮಟ್ಟಕ್ಕೇರುತ್ತಾಳೆಂಬ ಭವಿಷ್ಯವಾಣಿಗಳು ತಾನೇತಾನಾಗಿ ನುಡಿಯಲಾರಂಭಿಸಿವೆ. ಪ್ರತೀ ಪಾತ್ರಗಳೂ ಭಿನ್ನವಾಗಿರಬೇಕು,ಚಾಲೆಂಜಿಂಗ್ ಆಗಿರಬೇಕೆಂಬುದು ಪಾವನಾಳ ಕನಸು. ಈವರೆಗೆ ಆಕೆಗೆ ಸಿಕ್ಕಿರುವ ಮೂರುಪಾತ್ರಗಳೂ ಅದಕ್ಕೆತಕ್ಕುದಾಗಿವೆ. ಮೊದಲ ಚಿತ್ರಅದ್ವೈತದಲ್ಲಿ ಮಲೆಯಾಳಿ ಕುಟ್ಟಿಯ ಪಾತ್ರ,ಗೊಂಬೆಗಳ ಲವ್‌ನಲ್ಲಿ ಅಂಗವೈಕಲ್ಯ ಇರುವಂಥಾ ವಿಶಿಷ್ಟ ಪಾತ್ರ, ಜಟ್ಟ ಸಿನಿಮಾದಲ್ಲಿ ಬುಡಕಟ್ಟು ಜನಾಂಗದ ಮುಗ್ಧ ಕಾಡು ಹುಡುಗಿಯಾಗುವ ಅವಕಾಶ... ನಂತರ ಸೃಜನ್ಲೋಕೇಶ್ ನಟಿಸಿದ್ದ ಟಿಪಿಕಲ್ ಕೈಲಾಸ ಮತ್ತು ದುನಿಯಾ ವಿಜಿ ಜೊತೆ ಜಾಕ್ಸನ್ ಚಿತ್ರಗಳಲ್ಲೂ ಪಾವನಾ ಅಮೋಘವಾಗಿ ನಟಿಸಿದ್ದಾಳೆ. ಆ ಎಲ್ಲ ಪಾತ್ರಗಳಿಗೂ ಜೀವತುಂಬಿರುವುದುಪಾವನಾಳ ಹೆಗ್ಗಳಿಕೆ.

ಪ್ರತಿಭಾವಂತೆ ಪಾವನಾಗೆ ನಟನೆಗೆ ಸಂಭಂದಿಸಿದ ಪ್ರತಿಯೊಂದನ್ನೂ ತಿಳಿದುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿದೆ. ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನ ಓದುವುದು ಬಿಡುವಿನದಿನಚರಿ.ಇನ್ನೂ ಸಾಹಿತ್ಯದ ಪುಸ್ತಕಗಳ ಹುಚ್ಚೂ ವಿಪರೀತವಿರುವ ಪಾವನಾಗೆ ಪೂರ್ಣಚಂದ್ರ ತೇಜಸ್ವಿಯೆಂದರೆ ಪಂಚಪ್ರಾಣ.

ಬೆಳ್ಳೂರು ಕ್ರಾಸಿಂದ ಬಂದಿರುವ ಈ ಬಟ್ಟಲು ಕಣ್ಗಳ ಹುಡುಗಿ ಸ್ಯಾಂಡಲ್‌ವುಡ್ಡಲ್ಲಿಚೆಂದಗೆ ನೆಲೆಯೂರಲೆಂಬುದು ಹಾರೈಕೆ.

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
ಚೈತನ್ಯ ಮಾತು
- `ಆಟಗಾರ'ನ ಹೈಲೇಟ್ ಏನು?
ಚೈತನ್ಯ : ಸುಮಾರು 10 ಮುಖ್ಯಪಾತ್ರ, 5 ಸಹ ನಟರು 10 ಕಲಾವಿದರನ್ನಿಟ್ಟುಕೊಂಡು 'ಆಟಗಾರ'ನನ್ನು ತಯಾರು ಮಾಡಿದ್ದೇವೆ. ನವಗ್ರಹ ಸೇರಿದ್ದಂತೆ ಕನ್ನಡದಲ್ಲಿ ಬಹುಪಾತ್ರ ವೈವಿಧ್ಯ ಹೊಂದಿರುವ ಅನೇಕ ಸಿನಿಮಾಗಳಿವೆ. ಆದರೆ ಆ ಎಲ್ಲಾ ಸಿನಿಮಾಗಳಿಗಿಂತ ಆಟಗಾರ ವಿಭಿನ್ನವಾಗಿರಲಿದೆ. ಮುಖ್ಯ ಪಾತ್ರಗಳನ್ನು ನಿರ್ವಹಿಸಿರುವ ಹತ್ತು ಮಂದಿ ಅನುಭವೀ ಕಲಾವಿದರೊಂದಿಗೆ ಶೂಟಿಂಗ್ ಮಾಡಿರುವುದು ಅದ್ಭುತ ಅನುಭವ.

- ಕನ್ನಡದ ಪ್ರೇಕ್ಷಕರು ಈಗ ಯಾವ ರೀತಿಯ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಾರೆ?
ಚೈತನ್ಯ : ಸಿನಿಮಾಗಳ ಮೂಲಕ ಉದ್ದುದ್ದ ಮಾತಾಡಿ, ಅದು ಭಾಷಣದಂತಾದರೆ, ಅಂಥಾ ಸಿನಿಮಾಗಳನ್ನು ನಮ್ಮ ಜನ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಪ್ರೇಕ್ಷಕರ ಇವತ್ತಿನ ಮನಸ್ಥಿತಿಗೆ ಥ್ರಿಲ್ಲರ್ ಚಿತ್ರಗಳನ್ನು ನಮ್ಮ ಕನ್ನಡದ ಜನತೆ ಹೆಚ್ಚು ಇಷ್ಟಪಡುತ್ತಾರೆ.

- ಆಟಗಾರ ಯಾವ ಕೆಟಗರಿಗೆ ಸೇರುವ ಚಿತ್ರ?
ನಮ್ಮ ಆಟಗಾರ ಥ್ರಿಲ್ಲರ್ ಸಿನಿಮಾದ ಪಟ್ಟಿಗೆ ಸೇರಲಿದೆ ಎಂದು ಹೇಳಲು ಯಾವ ಅನುಮಾನವೂ ಇಲ್ಲ. ಆದರೆ ಥ್ರಿಲ್ಲರ್ ಚಿತ್ರವೊಂದರ ನಿರೂಪಣೆ ಬಲವಾಗಿಲ್ಲದಿದ್ದರೆ ಅದು ನಗೆಪಾಟಲಿಗೀಡಾಗುವ ಸಾಧ್ಯತೆ ಹೆಚ್ಚು. ಆದರೆ ನಮ್ಮ ಆಟಗಾರ ಚಿತ್ರ ಬಿಗಿಯಾದ ನಿರೂಪಣೆ ಹೊಂದಿದ್ದು ಎಲ್ಲ ಬಗೆಯ ಪ್ರೇಕ್ಷಕರನ್ನೂ ಸೆಳೆಯುವ ಕಥಾವಸ್ತು ಹೊಂದಿದೆ. ನಮ್ಮ ಪ್ರೇಕ್ಷಕರು ಈ ಬಗೆಯ ಚಿತ್ರಗಳನ್ನು ಉಪ್ಪುತ್ತಾರೆ ಎನ್ನುವುದಕ್ಕೆ ಇತ್ತೀಚೆಗಿನ ರಂಗಿತರಂಗ, ಉಳಿದವರು ಕಂಡಂತೆ ಚಿತ್ರಗಳೇ ಉತ್ತಮ ನಿದರ್ಶನ.

ಆಟಗಾರ ಆರಂಭವಾಗಿದ್ದು ಹೇಗೆ?
ಚೈತನ್ಯ: ಮೊದಲು ಹೊಸ ಕಲಾವಿದರನ್ನು ಹಾಕಿಕೊಂಡು ಈ ಚಿತ್ರವನ್ನು ನಿರ್ದೇಶಿಸಬೇಕು ಎನ್ನುವ ಬಯಕೆ ನನ್ನದಾಗಿತ್ತು .ಆದರೆ ನಿರ್ಮಾಪಕ ಯೋಗಿ, ಹಿರಿಯ ಕಲಾವಿದರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದರಿಂದ ಅನು ಪ್ರಭಾಕರ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲಾ, ಅತ್ಯುತ್ ಕುಮಾರ್ ಅವರಂತಹ ಅನುಭವೀ ನಟರನ್ನು ಆಯ್ಕೆ ಮಾಡಿಕೊಂಡು ಆಟಗಾರನನ್ನು ತಯಾರು ಮಾಡಿದ್ದೇವೆ. ದ್ವಾರಕೀಶ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಆ ಬ್ಯಾನರ್ ನಲ್ಲಿ ಬಂದ ಉಳಿದ ಚಿತ್ರಗಳಿಗಿಂತಲೂ ಆಟಗಾರ ವಿಭಿನ್ನವಾಗಿದೆ ಎಂದು ಹೇಳಲು ನನಗೆ ಹೆಮ್ಮೆಯೆನಿಸುತ್ತೆ.

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
ರವಿಶಂಕರ್
ಸುದೀಪ್ ಅವರು ನಟಿಸಿ ಸ್ವತಃ ನಿರ್ದೇಶಿಸಿದ್ದ `ಕೆಂಪೇಗೌಡ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು ರವಿಶಂಕರ್. ಖ್ಯಾತ ನಟ ಸಾಯಿಕುಮಾರ್ ಸಹೋದರ ಕೂಡಾ ಆಗಿರುವ ರವಿಶಂಕರ್ ನಂತರ ಕೋಟೆ, ಶರಣ್ ಅಭಿನಯದ ವಿಕ್ಟರಿ, ಅಧ್ಯಕ್ಷ, ಧ್ರುವಸರ್ಜಾ ನಟನೆಯ ಬಹದ್ದೂರ್, ದಂಡುಪಾಳ್ಯ ಹೀಗೆ ಒಂದಾ ಎರಡಾ ಅನೇಕಾನೇಕ ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸುತ್ತಾ ಕನ್ನಡಿಗರೇ ಆಗಿ ಹೋಗಿದ್ದಾರೆ . ಖಳ ನಟನ ಹುಟ್ಟುಹಬ್ಬವನ್ನೂ ಅಭಿಮಾನಿಗಳು ಆಚರಿಸುವ ಮಟ್ಟಿಗೆ ರವಿಶಂಕರ್ ಕರ್ನಾಟಕದಲ್ಲಿ ಸ್ಟಾರ್ ವರ್ಚಸ್ಸು ಪಡೆದಿದ್ದಾರೆ. ಅದಾಗಲೇ ೩೫ ವರ್ಷಗಳ ಕಾಲ ಕಲಾವಿದನಾಗಿ ಸೇವೆ ಸಲ್ಲಿಸಿರುವ ರವಿಶಂಕರ್ ತಮ್ಮ ಒಂಭತ್ತನೇ ವಯಸ್ಸಿನಲ್ಲೇ `ಆಲೋಚಿಂಚಂಡಿ' ಎಂಬ ತೆಲುಗು ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿ ಪಯಣ ಆರಂಭಿಸಿದವರು. ಅಷ್ಟೇ ಅಲ್ಲ, ರವಿಶಂಕರ್ ಅವರ ಸ್ಥಾನ ಯಾವ ಹೀರೋ ರೇಂಜ್ ಗೂ ಕಮ್ಮಿಯಿಲ್ಲದ ಮಟ್ಟದಲ್ಲಿದೆ. ಇದುವರೆಗೂ ತಮಿಳು,ತೆಲುಗು, ಕನ್ನಡ ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ಚಿತ್ರಗಳಿಗೆ ರವಿಶಂಕರ್ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ತೆರೆಯ ಹಿಂದೆ ನಿಂತು ಅವರು ನೀಡಿದ ಖಡಕ್ ಡೈಲಾಗ್ ಡೆಲಿವರಿಯಿಂದ ಅನೇಕ ಕಲಾವಿದರು ಹೆಸರುಗಳಿಸುವಂತಾಯಿತು ಎಂಬುದು ವಿಶೇಷ. ತೆಲುಗಿನ ಸೂಪರ್ ಹಿಟ್ ಚಿತ್ರವಾದ ಅರುಂಧತಿಯಲ್ಲಿ ತೆರೆಯಮೇಲೆ ಕಾಣಿಸಿಕೊಳ್ಳದ, ಧ್ವನಿಮಾತ್ರದಲ್ಲಿ ಪಾತ್ರವಾಗಿದ್ದ ಮುಖ್ಯ ಕ್ಯಾರೆಕ್ಟರ್ ಗೆ ರವಿಶಂಕರ್ ದನಿ ನೀಡಿದ್ದರು. ಹಿಂದಿಯಿಂದ ಬಂದ ಅನೇಕ ವಿಲನ್ ಗಳಿಗೆ ಸೇರಿದಂತೆ ಒಂದೇ ಚಿತ್ರದ ಏಳೆಂಟು ಪಾತ್ರಗಳಿಗೆ ಡಬ್ಬಿಂಗ್ ಮಾಡಿದ ಹಿರಿಮೆ ರವಿಶಂಕರ್ ಅವರದ್ದು. ಇಷ್ಟೆಲ್ಲಾ ಪ್ರತಿಭೆ ಹೊಂದಿರುವ ಭರತನಾಟ್ಯ ಪಟುವೂ ಹೌದು.. ಇಂಥ ರವಿಶಂಕರ್ `ಆಟಗಾರ' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆಟಗಾರ ಚಿತ್ರ ರವಿಶಂಕರ್ ಈ ವರೆಗೆ ನಟಿಸಿರುವ ಪಾತ್ರಗಳಿಗಿಂತ ವಿಭಿನ್ನವಾಗಿದ್ದು, ಅವರಿಗೆ ಹೊಸದೊಂದು ಇಮೇಜ್ ತಂದುಕೊಡಲಿದೆ ಎನ್ನುವುದು `ಆಟಗಾರ' ಚಿತ್ರತಂಡದ ನಂಬಿಕೆ.

ಚಿರಂಜೀವಿ ಸರ್ಜಾ
ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಅವತಾರವೆತ್ತಿದ ಯುವಕ ಚಿರಂಜೀವಿ ಸರ್ಜಾ. ಅರ್ಜುನ್ ಸರ್ಜಾ ಕುಟುಂಬದ ಹುಡುಗ ಚಿರು ವಾಯುಪುತ್ರ ಚಿತ್ರದ ನಂತರ ಗಂಡೆದೆ, ಚಿರು, ದಂಡಂದಶಗುಣಮ್, ಕೆಂಪೇಗೌಡ, ವರದನಾಯಕ, ವಿಜಲ್, ಚಂದ್ರಲೇಖಾ, ಅಜಿತ್, ರುದ್ರ ತಾಂಡವ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ತೆರೆಗೆ ಬರುತ್ತಿರುವ ಆಟಗಾರ ಚಿತ್ರ ಚಿರು ನಟಿಸಿದ ಲಿಸ್ಟಿಗೆ ಸೇರ್ಪಡೆಗೊಂಡ ಮತ್ತೊಂದು ಸಿನಿಮಾ.

ಈ ವರೆಗೆ ಚಿರು ನಟಿಸಿದ ಒಂದೊಂದು ಚಿತ್ರದಲ್ಲೂ ಡಿಫರೆಂಟ್ ಎನಿಸುವಂಥಾ ನಟನೆಯನ್ನು ತೋರುತ್ತಾ ಬಂದವರು. ಈಗ ಆಟಗಾರ ಸಿನಿಮಾ ಚಿರು ವೃತ್ತಿಬದುಕಿಗೆ ಹೊಸದೊಂದು ಆಯಾಮವನ್ನೇ ನೀಡಲಿದೆಯಂತೆ. ಈ ಚಿತ್ರದಲ್ಲಿ ಅನೇಕ ಕಲಾವಿದರ ದಂಡೇ ಇದ್ದರೂ ಚಿರು ನಿರ್ವಹಿಸಿರುವ ಮಾತ್ರಕ್ಕೇ ತನ್ನದೇ ಆತ ತೂಕವಿದೆಯಂತೆ.

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
ಅನೂಪ್ ಸಿಳೀನ್ ಮ್ಯೂಸಿಕ್
ಹತ್ತು ಹಲವು ವಿಶೇಷತೆಗಳನ್ನು ತನ್ನದಾಗಿಸಿಕೊಂಡಿರುವ ಆಟಗಾರ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ಹಾಡುಗಳ ಟ್ಯೂನು, ರೆಕಾರ್ಡಿಂಗು ಮತ್ತು ರೀ ರೆಕಾರ್ಡಿಂಗ್ ಗಳಲ್ಲಿ ಮಾತ್ರ ಸಂಗೀತ ನಿರ್ದೇಶಕರ ಪಾತ್ರವಿರುತ್ತದೆ. ಇನ್ನು ಆಡಿಯೋ ಬಿಡುಗಡೆಯಾದಮೇಲಂತೂ ಮ್ಯೂಸಿಕ್ ಡೈರೆಕ್ಟರ್ ಗಳು ಚಿತ್ರತಂಡದ ನಡುವೆ ಹೆಚ್ಚೂ ಕಮ್ಮಿ ಮಾಯವಾಗಿಬಿಟ್ಟಿರುತ್ತಾರೆ. ಆದರೆ, ಸಿನಿಮಾ ಆರಂಭಗೊಂಡ ದಿನದಿಂದ ಬಿಡುಗಡೆಗೆ ತಯಾರಾಗಿರುವ ಇಂದಿಗೂ ಅನೂಪ್ ಸಿಳೀನ್ ಚಿತ್ರತಂಡದ ಹೆಗಲಿಗೆ ಹೆಗಲಾಗಿ ದುಡಿಯುತ್ತಿದ್ದಾರೆ. ಈ ಚಿತ್ರದ ಪ್ರತೀ ಹಂತದಲ್ಲಿ ಪಾಲ್ಗೊಂಡ ಕಾರಣಕ್ಕೆ ಅನೂಪ್ ಸಿನಿಮಾದ ಕುರಿತು ತಾವು ತಿಳಿಯದ ಅನೇಕ ಸಂಗತಿಗಳನ್ನು ತಿಳಿದು, ಕಲಿತಿದ್ದಾರಂತೆ. ಈ ಚಿತ್ರದಲ್ಲಿ ಮ್ಯೂಸಿಕ್ ಜೊತೆಗೆ ರೀರೆಕಾರ್ಡಿಂಗ್ ಗೂ ಹೆಚ್ಚು ಮಹತ್ವ ಇರುವುದರಿಂದ ಪ್ರತಿಯೊಂದು ಕ್ಷಣಕ್ಷಣವೂ ಅನೂಪ್ ರ ಕೆಲಸ ಎದ್ದುಕಾಣಲಿದೆಯಂತೆ!

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್
ಸತ್ಯ ಹೆಗಡೆ
ಯಾವಾಗ ದುನಿಯಾ ಎನ್ನುವ ಚಿತ್ರ ಬಂತೋ… ಅವತ್ತಿನಿಂದ ಹಿಡಿದು ಇವತ್ತಿನ ತನಕ ಛಾಯಾಗ್ರಾಹಕ ಸತ್ಯ ಹೆಗಡೆ ಕ್ಯಾಮೆರಾ ಹಿಡಿದ ಸಿನಿಮಾ ಎಂದರೆ ಆ ಚಿತ್ರದಲ್ಲಿ ಏನೋ ವಿಶೇಷತೆ ಇದೆ ಅಥವಾ ಆ ಚಿತ್ರ ಭವಿಷ್ಯದ ಸೂಪರ್ ಹಿಟ್ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಹೆಸರಾಗಿದೆ. ಸಾಮಾನ್ಯವಾಗಿ, ಛಾಯಾಗ್ರಾಹಕರು, ತಮಗಿಷ್ಟವಾದ ನಿರ್ದೇಶಕರು ಅಥವಾ ತಮ್ಮ ಆಪ್ತ ನಿರ್ಮಾಪಕರ ಸಿನಿಮಾಗಳನ್ನು ಒಪ್ಪುವುದು ವಾಡಿಕೆ. ಆದರೆ, ಸತ್ಯ ಹೆಗಡೆ ವಿಶೇಷತೆಯೆಂದರೆ, ಕಲಾವಿದರಂತೆ ಇವರೂ ಕೂಡಾ ಕಥೆ ಚೆಂದ ಎನಿಸಿದರೆ ಮಾತ್ರ ಆ ಚಿತ್ರದ ಕಣ್ಣಾಗಲು ಓಕೆ ಎನ್ನುತ್ತಾರೆ. ಸತ್ಯ ಹೆಗಡೆಯವರ ಈ ನಿಲುವಿನಿಂದಲೇ ಏನೋ ಅವರು ಕೆಲಸ ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ ಮತ್ತು ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಹುಡುಕಿಕೊಂಡುಬಂದಿವೆ. ಇಂಥ ಸತ್ಯ ಹೆಗಡೆ ನಿರ್ದೇಶಕ ದುನಿಯಾ ಸೂರಿ ಅವರ ಜೊತೆ ಹೆಚ್ಚು ಗುರುತಿಸಿಕೊಂಡವರು. ಸೂರಿ ನಿರ್ದೇಶಿಸಿದ ಬಹುತೇಕ ಸಿನಿಮಾಗಳಿಗೆ ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸಿರುವ ಸತ್ಯಾ ಆರಂಭದಲ್ಲಿ ಹೆಚ್.ಸಿ. ವೇಣು ಅವರಿಗೆ ಸಹಾಯಕರಾಗಿದ್ದವರು ಎನ್ನುವುದನ್ನಿಲ್ಲಿ ಸ್ಮರಿಸಬಹುದು.

ಹೀಗೆ ಛಾಯಾಗ್ರಹಣದಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿರುವ ಸತ್ಯ ಹೆಗಡೆ ಈಗ `ಆಟಗಾರ' ಚಿತ್ರದಲ್ಲಿ ತಮ್ಮ ಕ್ಯಾಮೆರಾ ಕೈಚಳಕದಿಂದ ಹೊಸ ಹೊಸ ಬಗೆಯ ಆಟವಾಡಿದ್ದಾರೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾವಸ್ತು ಹೊಂದಿರುವ ಆಟಗಾರ ಚಿತ್ರದಲ್ಲಿ ಸತ್ಯ ಹೆಗಡೆ ಅವರ ಛಾಯಾಗ್ರಹಣದ ಪರಿಯನ್ನು ನೋಡುವುದೇ ಒಂದು ಥ್ರಿಲ್ ಎಂದರೆ ಅತಿಶಯೋಕ್ತಿಯಾಗಲಾರದೇನೋ…

-28/08/2015
-ಕೆ ಎನ್ ಎನ್ - ಸಿನಿಸರ್ಕಲ್ ನ್ಯೂಸ್

AATAGARA, MUDDU MANASE RELEASING ON AUG 28
T
wo films will be releasing to get Goddess Lakshmi’s blessings this Friday on the festive occasion of Varamahalakshmi Vrata. Aatagara and Muddu Manase will be vying with each other to engage audiences attention.

AATAGARA: This movie is Dwarakish Productions’ 49th movie and has director K M Chaitanya of Aa Dinagalu fame has roped in actors like Chiranjeevi Sarja, Meghana Raj, Parul Yadav, Anu Prabhakar, Prakash Belawadi, Sadhu Kokila, Achyuth Kumar, Balaji Manohar, Pavana and Arrohita Gowda. Dwarakish, Anant Nag, Ravishankar are playing supporting roles. The film has been shot in exotic locales. Anoop Seelin is the music director and Rohit Padaki is the dialogue writer with Kannan Parameshwaran being the writer. Satya Hegde is the cinematographer.

The film has been shot at Tilmati beach in Karwar which has black sand and a Portuguese house which is 250 years old has been used.

Aatagara is a psychological thriller and is said to be inspired from Agatha Christie's novel And Then There Were None.  Aatagara is about 10 people who go to an island and have to live in a house without any contact with the outside world. This film has shades of a vigilante film with an unknown force guiding the protagonists to be a part of this show and follows what happens when all hell breaks loose during the show.

MUDDU MANASE:  Ananth Shine has directed the movie which marks the debut of actors Arun Gowda and Nithya Ram. Muddu Manase also stars Aishwarya Nag. Jeevan Shetty, Ramesh and and Suresh have jointly produced the movie. 

Debutant Vineeth Raj has composed music for the movie. Interestingly, six leading directors -Yogaraj Bhat, A P Arjun, V Nagendra Prasad, Shashank, Suni and 'Alemari' Santhu have doubled up as lyricists by penning one song each for the movie.  The songs 'Edeyal Yaro' and 'Thinthale Thinthale' have been received well. 

A film with two seasons – summer and monsoon stars Arun Gowda playing a rugged and a robust look. Nithya Ram comes from village backdrop. Aishwarya Nag has driven a Bullet bike for the movie. Arun Gowda has two shades to his role.
-26/08/15

AATAGARA READY FOR RELEASE
A
atagara, the 49th film made under the Dwarakish Chitra banner is readying for a early release. The film is directed by K M Chaitanya and is produced by Yogi Dwarakish.

Dwarakish who is playing a role in the film said after seeing Chaitanya’s work in Aa Dinagalu he desired to have him direct a film for their production. He said he was no longer sharp in his instincts and acting abilities as before.

Rohit Padaki debuts as a writer and lyricist. He has also acted in the film. He told reporters that the film mirrors the trials and tribulations of a common man.

Music composer Anup Silin said the film was a learning experience and admitted that he was responsible for the film’s delay.

Director Chaitanya said he had met Yogi with a script for a small budget film but Yogi said the script demanded a bigger budget and a huge star cast and thus the film became a big budget film he said.

Referring to the movie, he said the time has arrived to undertake a reality check and that is the real play.

Yogish Dwarakish said Aatagara is not a total commercial film although the film has commercial elements in it.

Playwright Prakash Belawadi said he had never imagined that an engaging and a thrilling environment would exist in cinema which was mostly seen in theatre. But, he felt excited and thrilled about working in the movie.

The film stars Chiranjeevi Sarja, Meghana Raj, Anu Prabhakar, Pavana, Arohita, Anant Nag, Balaji Manohar, Sunetra and Ravishankar among others.
-19/07/15
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\