HOME
CINEMA NEWS
GALLERY
TV NEWS
REVIEWS
CONTACT US
ತೆರೆಗೆ ಸಿದ್ದ ಆಡೂ ಆಟ ಆಡೂ
ನಾಲ್ಕು ವರ್ಷದ ಕೆಳಗೆ ಸಿದ್ದಗೊಂಡಿದ್ದ ‘ಆಡೂ ಆಟ ಆಡೂ’ ಚಿತ್ರಕ್ಕೆ ಕೊನೆಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ತಮಿಳಿನ ತಿರುಟಿಪಯಲಿ ಚಿತ್ರ ಕನ್ನಡದಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದ ನಾಯಕ,ನಿರ್ಮಾಪಕ ಜಗನ್ ಪ್ರಾರಂಭದಲ್ಲಿ ನಿರ್ದೇಶನ ಮಾಡಲು ಸಂಗೀತ ನಿರ್ದೇಶಕ ವಿ.ಮನೋಹರ್ ಅವರನ್ನು ಕೋರಿಕೊಂಡಿದ್ದಾರೆ. ಅವರು ಸಾಹಿತ್ಯ, ಸಂಗೀತ ಮಾಡಲಿದ್ದು, ನಿರ್ದೇಶನದ ಜವಬ್ದಾರಿಯನ್ನು ಬುದ್ದಿವಂತ ಖ್ಯಾತಿಯ ನಿರ್ದೇಶಕ ರಾಮನಾಥ್ ಋಗ್ವೇದಿ ಇವರಿಗೆ ವಹಿಸಲು ಸಲಹೆ ನೀಡಿದ್ದಾರೆ. ಅದರಂತೆ ರಾಮನಾಥ್‍ರವರು ಕತೆಯ ಒಂದು ಏಳೆಯನ್ನು ತೆಗೆದುಕೊಂಡು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಚಿತ್ರವನ್ನು ಮುಗಿಸಿದ್ದಾರೆ. ಚಿತ್ರದ ಕುರಿತು ಹೇಳುವುದಾದರೆ ಹಳ್ಳಿಯಿಂದ ಬರುವ ಹುಡುಗ ಪಟ್ಟಣದಲ್ಲಿ ಹಣ ಮಾಡುವ ಪಸೆಯಿಂದ ಒಂದು ಕುಟುಂಬವನ್ನು ಆಟ ಆಡಿಸಲು ಹೋಗುತ್ತಾನೆ. ಮುಂದೆ ಹಲವು ತಿರುವುಗಳಿಂದ ಕುಟುಂಬದಿಂದಲೇ ಈತನಿಗೆ ಕಷ್ಟಗಳ ಸರೆಮಾಲೆಗಳು ಬರುತ್ತವೆ. ಇದೆ ಹೇಗೆ ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ.

ಮೈಸೂರು, ದೇವನಹಳ್ಳಿ ಹಾಗೂ 24 ದಿವಸ ಮಲೇಶಿಯಾದಲ್ಲಿ ಚಿತ್ರೀಕರಣ ನಡೆಸಿದ್ದರಿಂದ ಬಜೆಟ್ ಜಾಸ್ತಿಯಾಗಿದೆ. ನಂತರ ವಿಟಮಿನ್ ಎಂ ಕೊರತೆಯಿಂದ ಸಿನಿಮಾ ಪೂರ್ಣಗೊಳಿಸಿವುದು ತಡವಾಗಿದೆ. ಈಗ ಎಲ್ಲ ಕಷ್ಟಗಳಿಂದ ಪಾರಾಗಿದೆ. ಮರಾಠಿ ನಟಿ ಶೃತಿ ನಾಯಕಿ. ಜಗನ್‍ಗೆ ಒಳ್ಳೆಯದಾಗಲೆಂದು ಒಂದು ದೃಶ್ಯದಲ್ಲಿ ರವಿಚಂದ್ರನ್ ಬಂದು ಹೋಗುತ್ತಾರೆ. ಉಳಿದಂತೆ ಸುಮನ್‍ರಂಗನಾಥ್, ತಿಲಕ್, ತಬಲನಾಣ , ಮಿತ್ರ ನಟಿಸಿದ್ದಾರೆ. ನಿರ್ದೇಶಕ, ಮನೋಹರ್, ಜಗನ್ ಮೂವರು ಸ್ನೇಹಿತರಾಗಿದ್ದರಿಂದ ಚಿತ್ರಕ್ಕೆ ವಿಶೇಷವಾಗಿ ಶುಭಹಾರೈಸಿರುವುದು ವಾಣ ಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‍ಬಣಕಾರ್. ಯುಎ ಪ್ರಮಾಣಪತ್ರ ಪಡೆದಿರುವ ಚಿತ್ರವು ಕ್ಲೌಡ್ ಮೂವೀಸ್ ಮುಖಾಂತರ ಇದೇ ಶುಕ್ರವಾರದಂದು ತೆರೆಕಾಣಲಿದೆ.
-12/10/17



For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore