HOME
CINEMA NEWS
GALLERY
TV NEWS
REVIEWS
CONTACT US
99ಕ್ಕೆ ಸೆನ್ಸಾರ್‍ನಿಂದ ಪ್ರಶಂಸೆ
ಗಣೇಶ್ ಮತ್ತು ಭಾವನಾ ಎರಡನೆ ಬಾರಿ ಜೋಡಿಯಾಗಿ ಅಭಿನಯಿಸಿರುವ ‘99’ ಚಿತ್ರವನ್ನು ಸೆನ್ಸಾರ್ ಮಂಡಳಿಯು ವೀಕ್ಷಿಸಿ ಕ್ಲೀನ್ ‘ಯು’ ಸರ್ಟಿಫೀಕೇಟ್ ನೀಡುವುದಲ್ಲದೆ ಕುಟುಂಬ ಸಮೇತ ನೋಡಬಹುದಾದ ಚಿತ್ರವೆಂದು ಪ್ರಶಂಸೆ ವ್ಯಕ್ತಿಪಡಿಸಿರುವುದು ನಿರ್ಮಾಪಕ ರಾಮು ಅವರಿಗೆ ಸಂತಸ ತಂದಿದೆ. ತಮಿಳು ಹಿಟ್ ಚಿತ್ರ 96, ಸ್ಯಾಂಡಲ್‍ವುಡ್‍ದಲ್ಲಿ ‘99’ ಹೆಸರಿನೊಂದಿಗೆ ತೆರೆಗೆ ಬರಲು ಸಿದ್ದವಾಗಿದೆ. ಮೂಲ ಸಿನಿಮಾದಲ್ಲಿ ವಿಜಯ್‍ಸೇತುಪತಿ, ತ್ರಿಶಾ ಜೋಡಿಯಾಗಿ ಅಭಿನಯಿಸಿದ್ದರು. ನಿರ್ದೇಶಕ ಪ್ರೀತಂಗುಬ್ಬಿ ಎರಡನೆ ಬಾರಿ ಗೋಲ್ಡನ್ ಸ್ಟಾರ್‍ಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಶೀರ್ಷಿಕೆ 99ರ ಇಸವಿಯ ಒಂದು ಶಾಲೆಯ ಬ್ಯಾಚನ್ನು ಸೂಚಿಸುತ್ತದೆ. ಅಂದು ಶಾಲೆಯಲ್ಲಿ ಒಟ್ಟಿಗೆ ವ್ಯಾಸಾಂಗ ಮಾಡಿದ ಇಬ್ಬರು ವಿದ್ಯಾರ್ಥಿಗಳು ಸುಮಾರು 20 ವರ್ಷಗಳ ನಂತರ ಭೇಟಿಯಾದಾಗ ಏನೇನು ನಡೆಯುತ್ತದೆ ಎಂಬುದನ್ನು ಭಾವನೆಗಳ ಮೂಲಕ ಸನ್ನಿವೇಶಗಳು ಬರುತ್ತದೆ. ಗಣೇಶ್ ಟ್ರಾವಲ್ ಫೋಟೋಗ್ರಾಫರ್ ಆಗಿದ್ದರೆ, ಗಂಭೀರ ಪಾತ್ರದಲ್ಲಿ ಭಾವನಾ ಇವರೊಂದಿಗೆ ಹೇಮಂತ್, ಸಮೀಕ್ಷ ಮುಂತಾದವರ ನಟನೆ ಇದೆ.

ಕವಿರಾಜ್ ಸಾಹಿತ್ಯ, ಅರ್ಜುನ್‍ಜನ್ಯಾ ಸಂಗೀತದ ಎಂಟು ಹಾಡುಗಳಲ್ಲಿ ಶ್ರೇಯಾಘೋಶಾಲ್ ಐದು ಗೀತೆಗಳಿಗೆ ಧ್ವನಿಯಾಗಿರುವುದು ವಿಶೇಷ. ಅಂದಹಾಗೆ ಇವರು ರಾಗ ಸಂಯೋಜಿಸಿರುವ 100ನೇ ಚಿತ್ರವೆಂಬುದು ಮತ್ತೋಂದು ಹಿರಿಮೆಯಾಗಿದೆ. ಛಾಯಾಗ್ರಹಣ ಸಂತೋಷ್‍ರೈಪಾತಾಜೆ, ಸಂಕಲನ ಕೆ.ಎಂ.ಪ್ರಕಾಶ್ ಅವರದಾಗಿದೆ. ಇದೇ 1/5/2019 ರಂದು 250 ಕೇಂದ್ರಗಳಲ್ಲಿ ರಾಜ್ಯದ್ಯಂತ ಹಾಗೂ ವಿದೇಶದಲ್ಲಿ ಏಕಕಾಲಕ್ಕೆ ರಾಮು ಫಿಲಿಂಸ್ ಮುಖಾಂತರ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
21/04/19


99ಕ್ಕೆ ಬಿಡುಗಡೆ ಮಹೂರ್ತ ಫಿಕ್ಸ್
ತಮಿಳು ಹಿಟ್ ಚಿತ್ರ 96, ಸ್ಯಾಂಡಲ್‍ವುಡ್‍ದಲ್ಲಿ ‘99’ ಹೆಸರಿನೊಂದಿಗೆ ತೆರೆಗೆ ಬರಲು ಸಿದ್ದವಾಗಿದೆ. ಮೂಲ ಸಿನಿಮಾದಲ್ಲಿ ವಿಜಯ್‍ಸೇತುಪತಿ, ತ್ರಿಶಾ ಜೋಡಿಯಾಗಿ ಅಭಿನಯಿಸಿದ್ದರು. ಇದರಲ್ಲಿ ಗಣೇಶ್ ಮತ್ತು ಭಾವನಾ ರೋಮಿಯೋ ನಂತರ ಒಟ್ಟಿಗೆ ಸೇರಿಕೊಂಡಿದ್ದಾರೆ. ನಿರ್ದೇಶಕ ಪ್ರೀತಂಗುಬ್ಬಿ ಎರಡನೆ ಬಾರಿ ಗೋಲ್ಡನ್ ಸ್ಟಾರ್‍ಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಶೀರ್ಷಿಕೆ 99ರ ಇಸವಿಯ ಒಂದು ಶಾಲೆಯ ಬ್ಯಾಚನ್ನು ಸೂಚಿಸುತ್ತದೆ. ಅಂದು ಶಾಲೆಯಲ್ಲಿ ಒಟ್ಟಿಗೆ ವ್ಯಾಸಾಂಗ ಮಾಡಿದ ಇಬ್ಬರು ವಿದ್ಯಾರ್ಥಿಗಳು ಸುಮಾರು 20 ವರ್ಷಗಳ ನಂತರ ಭೇಟಿಯಾದಾಗ ಏನೇನು ನಡೆಯುತ್ತದೆ ಎಂಬುದನ್ನು ಭಾವನೆಗಳ ಮೂಲಕ ಸನ್ನಿವೇಶಗಳು ಬರುತ್ತದೆ. ಗಣೇಶ್ ಟ್ರಾವಲ್ ಫೋಟೋಗ್ರಾಫರ್ ಆಗಿದ್ದರೆ, ಗಂಭೀರ ಪಾತ್ರದಲ್ಲಿ ಭಾವನಾ ಇವರೊಂದಿಗೆ ಹೇಮಂತ್, ಸಮೀಕ್ಷ ಮುಂತಾದವರ ನಟನೆ ಇದೆ.

ಕವಿರಾಜ್ ಸಾಹಿತ್ಯ, ಅರ್ಜುನ್‍ಜನ್ಯಾ ಸಂಗೀತದ ಎಂಟು ಹಾಡುಗಳಲ್ಲಿ ಶ್ರೇಯಾಘೋಶಾಲ್ ಐದು ಗೀತೆಗಳಿಗೆ ಧ್ವನಿಯಾಗಿರುವುದು ವಿಶೇಷ. ಅಂದಹಾಗೆ ಇವರು ರಾಗ ಸಂಯೋಜಿಸಿರುವ 100ನೇ ಚಿತ್ರವೆಂಬುದು ಮತ್ತೋಂದು ಹಿರಿಮೆಯಾಗಿದೆ. ಛಾಯಾಗ್ರಹಣ ಸಂತೋಷ್‍ರೈಪಾತಾಜೆ, ಸಂಕಲನ ಕೆ.ಎಂ.ಪ್ರಕಾಶ್ ಅವರದಾಗಿದೆ. ಕೋಟಿ ನಿರ್ಮಾಪಕರೆಂದು ಹೆಸರು ಮಾಡಿರುವ ರಾಮು ಅವರ ನಿರ್ಮಾಣದ 39ನೇ ಚಿತ್ರವಾಗಿದೆ. ಇದೇ 26ರಂದು 250 ಕೇಂದ್ರಗಳಲ್ಲಿ ರಾಜ್ಯದ್ಯಂತ ಹಾಗೂ ವಿದೇಶದಲ್ಲಿ ಏಕಕಾಲಕ್ಕೆ ರಾಮು ಫಿಲಿಂಸ್ ಮುಖಾಂತರ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/04/19



For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore