ಒಂದು ಗನ್ನು ಆರು ಸಾವು ![]() ಜಪಾನಿ ಭಾಷೆಯ ಚಿತ್ರದ ಏಳೆ ಹೊಂದಿರುವ ‘8ಎಂಎಂ’ ಸಿನಿಮಾದ ಶೀರ್ಷಿಕೆಯು ಗನ್ ಆಗಿದ್ದು, ಪೋಲೀಸ್ ಅಧಿಕಾರಿಯು ಕರ್ತವ್ಯದಲ್ಲಿದ್ದಾಗ ಉಪಯೋಗಿಸುತ್ತಾರೆ. ಇದನ್ನು ಬೇರೆಯವರು ಬಳಸುವ ಆಗಿಲ್ಲ. ಅಕಸ್ಮಾತ್ ಬಳಸಿದಲ್ಲಿ ಕಾನೂನುಬಾಹಿರವಾಗುತ್ತದೆ. ಕತೆಯಲ್ಲಿ ಪ್ರಾಮಾಣಿಕ ಪೋಲೀಸ್ ಅಧಿಕಾರಿ ಕಾರ್ತಿಕ್ (ವಸಿಷ್ಟಸಿಂಹ) ಬಿಟಿಎಸ್ ಬಸ್ನಲ್ಲಿ ಕಳ್ಳನನ್ನು ಹಿಡಿಯುವಾಗ ಆಕಸ್ಮಿಕವಾಗಿ ಗನ್ನು ಕಳ್ಳತನವಾಗುತ್ತದೆ. ಇಲಾಖೆಯು ವಿಚಾರಣೆ ನಡೆಸಲು ತಾತ್ಕಾಲಿಕವಾಗಿ ವಜಾ ಮಾಡುತ್ತದೆ. ಸದರಿ ಗನ್ನು ಶ್ರೀನಿವಾಸ್ಮೂರ್ತಿ ಅಲಿಯಾಸ್ ಮೂರ್ತಿ (ಜಗ್ಗೇಶ್) ಖರೀದಿ ಮಾಡುತ್ತಾರೆ. ಅದನ್ನು ಬಳಸಿಕೊಂಡು ಇಬ್ಬರು ಸಹಾಯಕರೊಂದಿಗೆ ಬ್ಯಾಂಕ್ ರಾಬರಿ ಮಾಡುತ್ತಾರೆ. ಮುಂದೆ ಕಷ್ಟಗಳು ಆವರಿಸಿಕೊಂಡಾಗ ಸಹಾಯಕರು ಸೇರಿದಂತೆ ಗನ್ನಿಂದ ಆರು ಕೊಲೆಗಳು ನಡೆಯುತ್ತವೆ. ಮೂರ್ತಿ ಹಿನ್ನಲೆ, ಯಾವ ಕಾರಣಕ್ಕೆ ದರೋಡೆ ಮಾಡಿದರು, ಕೊಲೆ ಮಾಡಲು ಉದ್ದೇಶವಾದರೂ ಏನು ಎಂಬುದನ್ನು ಥ್ರಿಲ್ಲರ್ ಮಾದರಿಯಲ್ಲಿ ಇರುವುದರಿಂದ ನಾವು ಹೇಳುವುದು ಸೂಕ್ತ ಅನಿಸುವುದಿಲ್ಲ. ಅದಕ್ಕಾಗಿ ಟಾಕೀಸ್ಗೆ ಹೋದರೆ ಎಲ್ಲವು ತಿಳಿಯುತ್ತದೆ. ಜಗ್ಗೇಶ್ ಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದು ಮಾದ್ಯಮದವರಲ್ಲಿ ಸಂತಸದಿಂದ ಹೇಳಿಕೊಂಡಿದ್ದರು. ಅವರು ಹಾಗೆ ಹೇಳಿದ ಮಾತುಗಳು ಚಿತ್ರ ನೋಡುವಾಗ ಎಲ್ಲವು ನಿಜವೆಂದು ಕಂಡುಬರುತ್ತದೆ. ಲಕ್ಕಡಿ ಪಕ್ಕಡಿ ಜುಮ್ಮ ಎಂದು ನಗಿಸಿ ಎಲ್ಲಿರಿಗೂ ಇಷ್ಟವಾಗಿದ್ದ ನವರಸನಾಯಕರು, ಮೊದಲು ಎನ್ನುವಂತೆ ಗಂಭೀರ ಪಾತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಖುಷಿ ಕೊಡುತ್ತದೆ. ಖಳನಾಗಿ ರಗಡ್ ಲುಕ್ನಲ್ಲಿ ಮಿಂಚಿದ್ದ ವಸಿಷ್ಟಸಿಂಹ ನಿಷ್ಟಾವಂತ ಪೋಲೀಸ್ ಅಗಿ ಗಮನ ಸೆಳೆಯುತ್ತಾರೆ. ಚಾನಲ್ ರಿಪೋರ್ಟರ್ ಮಯೂರಿಗೆ ಎರಡು ಹಾಡು ಬಿಟ್ಟರೆ ಹೆಚ್ಚು ಅವಕಾಶಗಳು ಇಲ್ಲ. ರಾಕ್ಲೈನ್ವೆಂಕಟೇಶ್ ತನಿಖಾದಿಕಾರಿ ಪಾತ್ರಕ್ಕೆ ಸೂಟ್ ಆಗಿದ್ದಾರೆ. ಎಂದಿನಂತೆ ಶೋಭರಾಜ್ ಭ್ರಷ್ಟ ಪೋಲೀಸ್. ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಎಸ್.ಹರಿಕೃಷ್ಣ ಮೊದಲ ಪ್ರಯತ್ನದಲ್ಲೆ ಸಿಕ್ಸರ್ ಬಾರಿಸಿದ್ದಾರೆ. ಎ.ಆರ್. ವಿನ್ಸೆಂಟ್ ಕ್ಯಾಮಾರಕ್ಕೆ ಪೂರಕವಾಗಿ ಜೂಡಾಸ್ಯಾಂಡಿ ಸಂಗೀತ ಕೆಲಸ ಅಚ್ಚುಕಟ್ಟಾಗಿದೆ. ಥ್ರಿಲ್ಲರ್ಮಂಜು ಸಾಹಸಕ್ಕೆ ಸುರೇಶ್ ಆರ್ಮುಗಂ ಅದ್ಬುತವಾಗಿ ಸಂಕಲನ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಜಗ್ಗೇಶ್ ಅವರ ವಿಭಿನ್ನ ಮ್ಯಾನರಿಸಂ ನೋಡುವ ಬಯಕೆ ಇದ್ದರೆ ಖಂಡಿತ ಚಿತ್ರವನ್ನು ಮಿಸ್ ಮಾಡಿಕೊಳ್ಳಬೇಡಿ. ನಿರ್ಮಾಣ: ನಾರಾಯಣ್ಬಾಬು, ಇನ್ಫ್ಯಾಂಟಪ್ರದೀಪ್, ಸಲೀಮ್ಷಾ ಸಿನಿ ಸರ್ಕಲ್ ಇನ್ ವಿಮರ್ಶೆ ರೇಟಿಂಗ್: **** 18/11/18 |
![]() ![]() ![]() ![]() ![]() ![]() ![]() ![]() ![]() ![]() |
ಬಿಡುಗಡೆಯ ಹಾದಿಯಲ್ಲಿ 8 ಎಂಎಂ ![]() ‘8 ಎಂಎಂ’ ಚಿತ್ರಕ್ಕೆ ರಚನೆ, ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವುದು ಹರಿಕೃಷ್ಣ. ಶೀರ್ಷಿಕೆ ಒಂದು ಬುಲೆಟ್ ಹೆಸರಾಗಿದೆ. ಒಬ್ಬ ಕ್ರಿಮಿನಲ್ ಮತ್ತು ಪೋಲೀಸರ ನಡುವೆ ನಡೆಯುವ ಮೈಂಡ್ ಗೇಮ್ ಆಧಾರಿತ ಕತೆಯಾಗಿದೆ. 34 ವರ್ಷ ಸಿನಿ ಜಿರ್ನಿಯಲ್ಲಿ ಹಾಸ್ಯ, ಗಂಭೀರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಗ್ಗೇಶ್ ಚೂಚ್ಚಲಬಾರಿ ನೆಗಟೀವ್ ಶೇಡ್ನಲ್ಲಿ ನಟನೆ ಹಾಗೂ ‘ ಜಗವೇ ಘೋರ’ ಗೀತೆಗೆ ಸಾಹಿತ್ಯ ರಚಿಸಿ ಧ್ವನಿಯಾಗಿರುವುದು ವಿಶೇಷ. ಡಾಲಿ ಖ್ಯಾತಿಯ ವಸಿಷ್ಟಸಿಂಹ ಚೂಚ್ಚಲಬಾರಿ ಪ್ರಾಮಾಣಿಕ ಅಧಿಕಾರಿಯಾಗಿ ಎರಡು ಲುಕ್ನಲ್ಲಿ ಕಾಣಬಹುದಾಗಿದೆ. ಅವನದೇ ಆದ ತತ್ವ, ಸಿದ್ದಾಂತಗಳು ಇರುತ್ತವೆ. ಅವನ್ನು ಬಿಟ್ಟು ಬದುಕಲಾರ. ಮಾತು ಕಡಿಮೆ, ಎಲ್ಲಾ ಭಾವನೆಗಳನ್ನು ಒತ್ತಿ ಹಿಡಿದು ಬದುಕುವ ತುಂಬ ಡಿಸೆಂಟ್ ವ್ಯಕ್ತಿ. ಒಂದು ಘಟನೆಯಲ್ಲಿ ಬೇರೆಯವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ, ಸಮಸ್ಯೆಗಳ ಸುಳಿಗೆ ಸಿಲುಕಿ ಮಾನಸಿಕ ತೊಳಲಾಟವನ್ನು ಅನುಭವಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಲವರ್ ಆಗಿ ಮಯೂರಿ ಇವರೊಂದಿಗೆ ಆದಿಲೋಕೇಶ್, ರಾಕ್ಲೈನ್ ವೆಂಕಟೇಶ್ ಅಭಿನಯವಿದೆ. ಸಂಗೀತ ಜ್ಯೂಡೋಸ್ಯಾಂಡಿ, ನಾರಾಯಣ್ಬಾಬು , ಇನ್ಫ್ಯಾಂಟ್ಪ್ರದೀಪ್ ಮತ್ತು ಸಲೀಮ್ಷಾ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು 150 ಕೇಂದ್ರಗಳಲ್ಲಿ ಶುಕ್ರವಾಅರದಂದು ಬಿಡುಗಡೆಯಾಗಲಿದೆ. ಸಿನಿ ಸರ್ಕಲ್.ಇನ್ ನ್ಯೂಸ್ 16/11/18 |
![]() ![]() ![]() ![]() ![]() ![]() ![]() ![]() ![]() ![]() |
ಪಾತ್ರವನ್ನು ಜೀವಿಸಿದರೆ ಅನುಭವ ಜಾಸ್ತಿ ಆಗುತ್ತೆ – ಜಗ್ಗೇಶ್ ![]() ಜಗ್ಗೇಶ್ ಇದ್ದ ಕಡೆ ಹೊಸ ಕಲಾವಿದರಿಗೆ ಹಿತವಚನ ಸಿಕ್ಕಂತೆ ಆಗುತ್ತದೆ. ಅವರ ಅಭಿನಯದ ‘8 ಎಂಎಂ’ ಚಿತ್ರದ ಅಂತಿಮ ಭೇಟಿಯಲ್ಲಿ ಪ್ರಚಾರದ ಸಲುವಾಗಿ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡದೊಂದಿಗೆ ಭೇಟಿಯಾಗಿದ್ದರು. ಸರದಿಯಂತೆ ಮೊದಲು ಮಾತನಾಡುತ್ತಾ ಈಗ ದೇವರು ಎಲ್ಲವನ್ನು ನೀಡಿದ್ದಾನೆ. ಹಣಕ್ಕೋಸ್ಕರ ಸಿನಿಮಾ ಮಾಡುತ್ತಿಲ್ಲ. ಪದ್ದತಿಯಲ್ಲಿ ವ್ಯವಸ್ಥಿತವಾಗಿ ಜೀವನವನ್ನು ಸಾಗಿಸುತ್ತಿದ್ದೆನೆ. ಒಮ್ಮೆ ಕಿನ್ನತೆಯಲ್ಲಿ ಇರುವಾಗ ನಿರ್ದೇಶಕರು ಬಂದು ಈ ಸಿನಿಮಾ ಕತೆ ಹೇಳಿದರು. ನೆಗಟೀವ್ ಶೇಡ್ ಇರಲಿದೆ ಹೇಗೆ ಹೇಳುವುದು ಎಂದು ತಡವರಿಸುತ್ತಿದ್ದರು. ಎಲ್ಲವನ್ನು ಕೇಳಿ ರೋಮಾಂಚನವಾಯಿತು. ಕಲಾವಿದನಾಗಿರುವವನು ಎಲ್ಲಾ ಪಾತ್ರಗಳಿಗೂ ಒಗ್ಗಬೇಕು. ನಾನು ಸ್ಟಾರ್ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅಭಿನಯಿಸುವವನು ನಿಜವಾದ ನಟ ಆಗುತ್ತಾನೆ. ಪಾತ್ರವಾಗಿ ಜೀವಸಬೇಕು. ಆಗ ಅನುಭವ ಜಾಸ್ತಿಯಾಗುತ್ತದೆ. ಹೆಂಡತಿ, ಮಗ, ಸಂಬಂದಿಕರು ಎಲ್ಲರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ಎಲ್ಲಾ ವಯೋಮಾನದವರಿಗೂ ಇಷ್ಟವಾಗಿದೆ ಎಂದು ನಂಬಲಾಯಿತು. ಜಪಾನಿ ಭಾಷೆಯ ಸಿನಿಮಾವಾಗಿದ್ದರೂ ನಮ್ಮ ನೇಟಿವಿಟಿಗೆ ತಕ್ಕಂತೆ ಹಾಡು, ನಾಲ್ಕು ಫೈಟ್ಗಳು ಇರಲಿದೆ. ಪ್ರತಿ ಚಿತ್ರವನ್ನು ಹೊಸಬನಂತೆ ಮಾಡಿದಾಗ ಎಲ್ಲವನ್ನು ತಿಳಿಯುವ ಮನಸ್ಸು ಬರುತ್ತದೆ. ನಮ್ಮ ಕೆಲಸ ಮುಗಿದಿದೆ. ನೀವುಗಳು ಜನರ ಹತ್ತಿರ ಹೋಗುವಂತೆ ಮಾಡಬೇಕೆಂದು ವಿನಯಪೂರ್ವಕವಾಗಿ ಕೋರಿಕೊಂಡರು. ಜಗ್ಗೇಶ್ ಸರ್ ಶಿಪಾರಸ್ಸು ಮಾಡಿದ್ದಕ್ಕೆ ಥ್ಯಾಂಕ್ಸ್. ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದು, ಚಿತ್ರ ನೋಡಲು ಕಾತುರದಿಂದ ಇದ್ದೇನೆಂದು ಮಯೂರಿ ಹೇಳಿದರು. ಜಗ್ಗೇಶ್ ಸರ್ ಸಾಹಿತ್ಯಕ್ಕೆ ಕಂಠದಾನ ಮಾಡಿದ್ದು ಖುಷಿ ತಂತು. ಸಭ್ಯ ಪೋಲೀಸ್ ಪಾತ್ರಕ್ಕಾಗಿ ಗಡ್ಡ ತೆಗೆಯಬೇಕಾಯಿತು ಅಂತ ವಸಿಷ್ಟಸಿಂಹ ತಿಳಿಸಿದರು. ನಿರ್ದೇಶಕ ಹರಿಕೃಷ್ಣ.ಎಸ್., ಸಂಗೀತ ನಿರ್ದೇಶಕ ಜ್ಯೂಡೋಸ್ಯಾಂಡಿ, ನಿರ್ಮಾಪಕರುಗಳಾದೆ ನಾರಾಯಣ್ಬಾಬು, ಸಲೀಂಪಾಷ. ಇನ್ಫ್ಯಾಂಟ್ಪ್ರದೀಪ್, ನಟ ಆದಿ ಲೋಕೇಶ್ ಉಪಸ್ತಿತರಿದ್ದು ಚುಟುಕು ಮಾತಿಗೆ ವಿರಾಮ ಹಾಕಿದರು. ಕೊನೆಯಲ್ಲಿ ತಂಡವು ಆಡಿಯೋ ಸಿಡಿಯೊಂದಿಗೆ ಫೋಸ್ ಕೊಡುವುದರೊಂದಿಗೆ ಮಾತಿನ ಮಂಟಪಕ್ಕೆ ತೆರೆಬಿತ್ತು. ಚಿತ್ರಗಳು: ಕೆ.ಎನ್.ನಾಗೇಶ್ಕುಮಾರ್ ಸಿನಿ ಸರ್ಕಲ್.ಇನ್ ನ್ಯೂಸ್ 8/09/18 |
![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() |
8 ಎಂ ಎಂ ಟ್ರೈಲರ್ಗೆ ಫಿದಾ ಆದ ಸಿನಿಪಂಡಿತರು ![]() ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಬೃಹಸ್ಪತಿ’ ಚಿತ್ರದ ಆಡಿಯೋ ಬಿಡಿಗಡೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಗ್ಗೇಶ್ ಮಾತನಾಡುತ್ತಾ ರಣಧೀರ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡು ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ರವಿಚಂದ್ರನ್ ಸಿನಿಮಾವು ಹಿಟ್ ಆಗಲಿ ಅಂತ ಹರಸಿದರು. ಇದೇ ಸಂದರ್ಭದಲ್ಲಿ ಪಕ್ಕದ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಜಗ್ಗೇಶ್ ಅಭಿನಯದ ‘8 ಎಂ ಎಂ’ ಸಿನಿಮಾದ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿದ್ದವು. ಕಾರ್ಯಕ್ರಮ ಮುಗಿದ ಬಳಿಕ ಶಾಸಕ, ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ, ರಾಕ್ಲೈನ್ವೆಂಕಟೇಶ್, ಸೂರಪ್ಪಬಾಬು,, ಚಿತ್ರದ ಟ್ರೈಲರ್ನ್ನು ತೋರಿಸಲಾಯಿತು. ಜಗ್ಗೇಶ್ ಅವರು ಮಾಸ್ ಲುಕ್ನಲ್ಲಿ ಕಾರಿನಿಂದ ಹೂರಬರುವುದು, ವಿಭಿನ್ನ ನೋಟದೊಂದಿಗೆ ನೋಡುವ ದೃಶ್ಯಗಳು ಚಿತ್ರ ನೋಡುವಂತೆ ಮಾಡಿತು. ಅದ್ಬುತ ಟ್ರೈಲರ್ನ್ನು ವೀಕ್ಷಿಸಿದ ಸಿನಿಪಂಡಿತರು ಇದು ಹಿಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಹೇಳಿ ತಂಡಕ್ಕೆ ಶುಭಹಾರೈಸಿದ್ದಾರೆ. ಅಪರಾಧಿ ಮತ್ತು ಪೋಲೀಸ್ ನಡುವಿನ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿರುವ ಹರಿಕೃಷ್ಣ, ನಿರ್ಮಾಪಕರಾದ ನಾರಾಯಣಸ್ವಾಮಿ, ಇನ್ಫ್ಯಾಂಟ್ಪ್ರದೀಪ್ ಇವರೆಲ್ಲರಿಗೂ ಮೊದಲ ಅನುಭವವಾಗಿದ್ದರಿಂದ, ಗಣ್ಯರ ಹೊಗಳಿಕೆ ಮಾತುಗಳಿಂದ ಆದಷ್ಟು ಬೇಗನೆ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. -16/12/17 |
![]() ![]() ![]() ![]() |
ಚಿತ್ರರಂಗಕ್ಕೆ ಯುವ ನಾಯಕ ನಟರ ಅವಶ್ಯಕತೆ ಇದೆ – ಜಗ್ಗೇಶ್![]() ನವರಸ ನಾಯಕ ಜಗ್ಗೇಶ್ ಇದ್ದಲ್ಲಿ ಮಾತಿಗೆ ಬರವಿಲ್ಲ. ಅವರು ನಟಿಸುತ್ತಿರುವ ‘8 ಎಂಎಂ’ ಚಿತ್ರದ ಪತ್ರಿಕಾಗೋಷ್ಟಿ ನಂತರ ಮಾದ್ಯಮದೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಿದ್ದರು. ಸಾಕಷ್ಟು ನಿರ್ದೇಶಕರು ಕತೆ ಹೇಳಿದ್ದಾರೆ. ಯಾವುದನ್ನು ಒಪ್ಪಿಕೊಂಡಿಲ್ಲ. ಮೊನ್ನೆ ಸರಿಹೋಗುವಂತಹ ಕತೆಯನ್ನು ಒಬ್ದರು ಹೇಳಿದ್ದರು. ಮಗ ಅದನ್ನು ಕೇಳಿ ನಿಮಗೆ ಸೂಟ್ ಆಗುವುದಿಲ್ಲ ಎಂದು ಮನವರಿಕೆ ಮಾಡಿದ್ದ. ಹಿಂದೆ ಈ ತರಹದ ಪಾತ್ರವನ್ನು ಮಾಡಿದ್ದರಿಂದ ಬೇಡವೆಂದು ಸುಮ್ಮನಿದ್ದೆ. ಒಮ್ಮೆ ರಾಯರ ದರ್ಶನಕ್ಕೆ ಹೋದಾಗ ನನಗಾಗಿ ಒಂದು ಒಳ್ಳೆಯ ಪಾತ್ರ ಕೊಡಿ ಎಂದು ಬೇಡಿಕೊಂಡಿದ್ದೆ. ಒಂದು ವಾರದ ಬಳಿಕ ಹರಿಕೃಷ್ಣ ಇದೇ ಸಿನಿಮಾದ ತಿರುಳನ್ನು ಹೇಳಿದರು. ಜಪಾನ್ ಸಿನಿಮಾದ ಸ್ಪೂರ್ತಿ ಅಂತ ತಿಳಿದಿದೆ. ಆಗೆಲ್ಲಾ ಊಟಕ್ಕೆ, ಜೀವನಕ್ಕೆ, ಸ್ಪರ್ಧೆಗಾಗಿ ನಟಿಸಬೇಕಾಗಿತ್ತು. ಈಗ ಸಂತೋಷಕ್ಕೆ ಆತ್ಮತೃಪ್ತಿಗೆ ಮಾಡಬೇಕಾಗಿದೆ. ಈ ಚಿತ್ರ ಹೊರತುಪಡಿಸಿ ಮಾಗಡಿಪಾಂಡು ಮಕ್ಕಳು ಇಲ್ಲದ ಕುಟುಂಬದ ಕತೆಯನ್ನು ಹೇಳಿದ್ದಾರೆ. ಭಾವನೆಗಳು ಜಾಸ್ತಿ ಇರುವುದರಿಂದ ಇದನ್ನು ಮಾಡುವ ಬಗ್ಗೆ ಮನಸ್ಸು ಮಾಡಿದ್ದೇನೆ. ಭರ್ಜರಿ ಹಿಟ್ ಆಗಿದ್ದರಿಂದ ಕನ್ನಡ ಚಿತ್ರರಂಗ ಸಮೃದ್ದಿಯಾಗಿದೆ. ಇದು ಸಾಲದು. ಇಂತಹ ಹೊಸ ಯುವ ನಾಯಕ ನಟರುಗಳು ಬರಬೇಕು. ಮಂತ್ರಾಲಯ ನನಗೆ ತವರು ಮನೆ ಇದ್ದಂತೆ. ಬೇಸರವಾದಾಗಲೆಲ್ಲಾ ರಾಯರ ದರ್ಶನ ಮಾಡಿ, ಬೃಂದಾವನದ ಸಮ್ಮುಖದಲ್ಲೆ ನೆಲದ ಮೇಲೆ ಮಲಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಮಲಗುವ ಆನಂದ ಹೇಳಲು ಆಗದು. ಬೆಳಿಗ್ಗೆ ಎದ್ದಾಗ ಬರುವ ಸಂತೋಷವೇ ಬೇರೆಯಾಗಿರುತ್ತದೆ. ಭಕ್ತರಾದವರು ಸ್ವಾಮಿಗಳ ಕುರಿತು ಚಿತ್ರ ಏಕೆ ಮಾಡಬಾರದು ಅಂತ ಕೇಳಿದರೆ, ಎರಡು ಕೈ ಮುಗಿದು ಅದು ಕಷ್ಟದ ಕೆಲಸ. ಅದನ್ನು ಮಾಡಲು ಶ್ರದ್ದೆ ಇರಬೇಕು. ಅದರಿಂದಲೇ ಅಂತಹ ಕೈಂಕರ್ಯಕ್ಕೆ ಹೋಗುವ ಕೆಲಸ ಮಾಡಿಲ್ಲವೆಂದು ನಯವಾಗಿ ಜಾರಿಕೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿ ಸ್ಫರ್ದಿಸುವ ಬಗ್ಗೆ ಪಾರ್ಟಿಯಲ್ಲಿ ಚರ್ಚೆ ನಡೆಯುತ್ತಿದೆ. ಏನು ಆಗುತ್ತದೆ ಎಂದು ಈಗಲೇ ಹೇಳಲು ಬರುವುದಿಲ್ಲ. ಅಂಬರೀಷ್, ದೊಡ್ಡಣ್ಣ, ರಾಕ್ಲೈನ್ವೆಂಕಟೇಶ್ ಅವರು ಮುತುವರ್ಜಿ ವಹಿಸುತ್ತಿರುವುದರಿಂದ ಕಲಾವಿದರ ಸಂಘದ ಕಟ್ಟಡವು ಅಂತಿಮ ಹಂತಕ್ಕೆ ಬಂದು ನಿಂತಿದೆ. ಜಿಲ್ಲೆಗಳಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿ ಅದರಿಂದ ಬಂದಂತ ಹಣವನ್ನು ಕಟ್ಟಕ್ಕೆ ಉಪಯೋಗಿಸಿದಲ್ಲಿ ಅನುಕೂಲವಾಗುತ್ತದೆ. ಇದಕ್ಕಾಗಿ ಹಳಬರು, ಹೊಸಬರು ಸೇರಿಕೊಂಡು ಇದನ್ನು ನಡೆಸಿದಲ್ಲಿ ಸುಲುಭವಾಗುತ್ತದೆ. ಹಿಂದೆ ಡಾ.ರಾಜ್ಕುಮಾರ್ ಸಭೆ ಕರೆದರೆ ನಾವೆಲ್ಲಾ ಅವರನ್ನು ನೋಡಲು, ಅವರ ಮಾತುಗಳನ್ನು ಕೇಳಲು ಹೋಗುತ್ತಿದ್ದೇವು. ಅಂತಹ ಕಾಲ ಈಗಿಲ್ಲ. ದೇವರು ಎಲ್ಲವನ್ನು ಕೊಟ್ಟಿರುವುದರಿಂದ ಸುಖ, ನೆಮ್ಮದಿಯಿಂದ ಇದ್ದೇನೆ. ನಾನು ಮಲಗಿದಾಗಲೆ ರಾತ್ರಿ, ಎದ್ದಾಗಲೆ ಬೆಳಕು ಅಂತ ಸಣ್ಣ ನಗು ಚೆಲ್ಲುತ್ತಾರೆ ಜಗ್ಗೇಶ್. 26/09/17 |
ಜಗ್ಗೇಶ್ ಕೈಗೆ ಬಂತು 8ಎಂಎಂ ಶುಕ್ರವಾರ ಚಿತ್ರದ ಮಹೂರ್ತ ನಡೆಯಿತು.ಅದಕ್ಕೂ ಒಂದು ದಿನ ಮುನ್ನ ಚಿತ್ರದ ಬಗ್ಗೆ ವಿವರ ನೀಡಿದ ಜಗ್ಗೇಶ್ ಮತ್ತವರ ತಂಡ, ಕ್ರೈಮ್ ಮತ್ತು ಪೋಲೀಸರ ನಡುವೆ ನಡೆಯುವ ಮೈಂಡ್ ಗೇಮ್. ಇದೊಂದು ಜಪಾನಿನ ಚಿತ್ರ ಆಧರಿಸಿ ಮಾಡಲಾಗುತ್ತಿದೆ. ನನಗೂ ವಿಭಿನ್ನ ಪಾತ್ರ ಮಾಡು ಆಸೆ ಇತ್ತು. ಅದಕ್ಕಾಗಿ ಮೊದಲ ಭಾರಿಗೆ ರಾಯರ ಬಳಿ ಪಾತ್ರದ ಹಸಿವಿನ ಬಗ್ಗೆ ಕೋರಿಕೆ ಸಲ್ಲಿಸಿದ್ದೆ. ಅದಾದ ಒಂದು ವಾರಗಳ ಬಳಿಕ ಹರಿಕೃಷ್ಣ ಮನೆಗೆ ಬಂದು ಕತೆ ಹೇಳಿದರು. ಕಥೆ ಕೇಳಿ ಥ್ರಿಲ್ ಆದೆ. ಹಾಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಹೊಸ ಹುಡುಗರ ತಂಡ ಹೊಸತನದ ಕಥೆಯೊಂದಿಗೆ ಚಿತ್ರ ಮಾಡಲು ಮುಂದಾಗಿದೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಮಾತಿಗಿಳಿದರು. ನನಗೂ ಕಾಮಿಡಿ ಪಾತ್ರ ಮಾಡಿ ಸಾಕಾಗಿದೆ. ಒಂದು ಚೇಂಜ್ ಓವರ್ ಬೇಕು. ಈಗ 55 ವರ್ಷ. ಇರುವ ಇನ್ನು ಕೆಲವು ವರ್ಷಗಳಾದರೂ ವಿಭಿನ್ನ ಪಾತ್ರ ಮಾಡುವ ಆಸೆ. ಈ ವಯಸ್ಸಿನಲ್ಲಿ ಯುಂಗ್ ಹುಡುಗಿಯರನ್ನು ಅಕ್ಕ ಪಕ್ಕ ಇಟ್ಟುಕೊಂಡು ಮರ 34 ವರ್ಷದ ಚಿತ್ರ ಜೀವನದಲ್ಲಿ ಕಾಮಿಡಿ ಪಾತ್ರಗಳನ್ನು ಮಾಡಿ ಸಾಕಾಗಿದೆ. 140 ನಾಯಕಿಯ ಜೊತೆ ಮರ ಸುತ್ತಿದ್ದೇನೆ, ಇನ್ನೇನಿದ್ದರೂ ನನ್ನ ಖುಷಿ ಮತ್ತು ನೆಮ್ಮದಿಗಾಗಿ ಸಿನಿಮಾ ಮಾಡಬೇಕು.ಅಂತಹ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದೇ ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದೇನೆ. ಸಂಭಾವನೆ ಬಗ್ಗೆ ಮಾತನಾಡದೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಶ್ರೀರಾಮಪುರ, ಓಕಳೀಪುರ, ರೈಲು ನಿಲ್ದಾಣ ಹೀಗೆ ಬೆಂಗಳೂರಿನ ವಿವಿಧೆಡೆ ಚಿತ್ರವನ್ನು ಚಿತ್ರೀಕರಣ ಮಾಡಲಾಗುವುದು. ಇದೊಂದು ಜಪಾನ್ನಿಂದ ಸ್ಪೂರ್ತಿ ಪಡೆದ ಚಿತ್ರ. ಚಿತ್ರದಲ್ಲಿ ಸಂಪೂರ್ಣ ಕಾಮಿಡಿ ಇಲ್ಲದಿದ್ದರೂ ನಗುಸಲು ಎಷ್ಟು ಕಾಮಿಡಿ ಬೇಕೋ ಅಷ್ಠಿದೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಅವರದು. ಚಿತ್ರರಂಗದ ಕೆಲವರು ತಮ್ಮನ್ನು ಬಳಸಿಕೊಂಡು ಆ ಮೇಲೆ ಕಾಲ ಕಸದಂತೆ ಒದ್ದಿದ್ದಾರೆ. ಅವರಿಗೆಲ್ಲಾ ಈ ಚಿತ್ರ ನಿದರ್ಶನವಾಗಲಿದೆ ಚಿತ್ರತಂಡಕ್ಕೆ ಎಲ್ಲರ ಬೆಂಬಲವಿರಲಿ ಎಂದು ಕೇಳಿಕೊಂಡರು. ಪ್ರದೀಪ್, ಸಲೀಂ ಶಾ ಮತ್ತು ನಾರಾಯಣ ಸ್ವಾಮಿ, ಚಿತ್ರರಂಗದ ಬಗ್ಗೆ ಗೊತ್ತಿಲ್ಲ. ಜಗ್ಗೇಶ್ ಕಾಲ್ಶೀಟ್ ನೀಡಿದರೆ ಚಿತ್ರ ಮಾಡೋಣ ಎಂದು ನಿರ್ದೇಶಕ ಹರಿಕೃಷ್ಣ ಅವರಿಗೆ ಹೇಳಿದ್ದೆವು.ಅದರಂತೆ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ ಎಂದರು. ನಿರ್ದೇಶಕ ಹರಿಕೃಷ್ಣ, ಒಳ್ಳೆಯ ಚಿತ್ರ ಮಾಡುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು. |
![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() |
ಜಗ್ಗೇಶ್ ಕೈಲಿ 8ಎಂಎಂ ಪಿಸ್ತೂಲ್ ![]() ![]() ನವರಸ ನಾಯಕ ಜಗ್ಗೇಶ್ ಮೇಲುಕೋಟೆ ಮಂಜ ನಂತರ ಮುಗಳುನಗೆ ಚಿತ್ರದ ಹಾಡೊಂದರಲ್ಲಿ ಕಾಣ ಸಿಕೊಂಡಿದ್ದು ಬಿಟ್ಟರೆ, ಕಿರುತೆರೆಯ ಕಾಮಿಡಿ ಕಿಲಾಡಿಗಳು ಮುಖಾಂತರ ಎಲ್ಲರ ಮನ-ಮನೆಗಳಿಗೂ ತಲುಪಿದ್ದರು. ಸದ್ಯ ಅವರು ಗಾಂಧಿನಗರದಲ್ಲಿ ‘8ಒಒ’ ಪಿಸ್ತೂಲ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಇದಕ್ಕೆ ಅನ್ಯಥ ಭಾವಿಸುವುದು ಬೇಡ. ಓದುಗರನ್ನು ಹೆಚ್ಚು ಕುತೂಹಲಕ್ಕೆ ಬಿಡದೆ ನೇರವಾಗಿ ವಿಷಯಕ್ಕೆ ಬರುತ್ತೇವೆ. ಜಗ್ಗೇಶ್ರವರು ಇದೇ ಹೆಸರಿನ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಕೋಪದಿಂದ ಪಿಸ್ತೂಲ್ನ್ನು ಕಣ ್ಣನ ಬಳಿ ಇಟ್ಟುಕೊಂಡಿರುವ ಪೋಸ್ಟರ್ ನೋಡುವುದಕ್ಕೆ ಚೆಂದ ಕಾಣ ಸುತ್ತದೆ. ಇವರನ್ನು ಹೊರತು ಪಡಿಸಿದರೆ ಕಲಾವಿದರ ವಿವರಗಳು ಲಭ್ಯವಿರುವುದಿಲ್ಲ. ಕತೆ ಬರೆದು ಮೊದಲ ಬಾರಿ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿರುವುದು ಹರಿಕೃಷ್ಣ. ಛಾಯಗ್ರಹಣ ವಿನ್ಸೆಂಟ್, ಸಂಕಲನ ಸುರೇಶ್ ಆರ್ಮುಗಂ, ಹಾಡುಗಳಿಗೆ ಜ್ಯೂಡೋಸ್ಯಾಂಡಿ ಆಯ್ಕೆಯಾಗಿದ್ದಾರೆ. ನಾರಾಯಣಸ್ವಾಮಿ, ಇನ್ಫ್ಯಾಂಟ್ ಪ್ರದೀಪ್, ಸಲೀಂಷಾ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರದ ಇನ್ನಿತರ ವಿವಿರಗಳು ಸದ್ಯದಲ್ಲೆ ಹೊರಬರಲಿದೆ. ಚಿತ್ರತಂಡಕ್ಕೆ ಸಿನಿಸರ್ಕಲ್ ಡಾಟ್ ಇನ್ ಸಂಸ್ಥೆಯು ಮುಂಗಡವಾಗಿ ಶುಭಹಾರೈಸುತ್ತದೆ. -Cine Circle News -11/09/17 |