HOME
CINEMA NEWS
GALLERY
TV NEWS
REVIEWS
CONTACT US

ಸೆಸ್ಪನ್ಸ್ ಥ್ರಿಲ್ಲರ್ ಚಿತ್ರ 6ನೇ ಮೈಲಿ
ಚಂದನವನದಲ್ಲಿ ವಿನೂತನ ಚಿತ್ರಗಳು ಬರುತ್ತಿರುವಂತೆ ‘6ನೇ ಮೈಲಿ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗುತ್ತಿದೆ. ಕತೆಯ ಕುರಿತು ಹೇಳುವುದಾದರೆ ಮುಂಬೈನಿಂದ ವೈಜಾಗ್ ಕಾಡಿನಲ್ಲಿ ಚಾರಣ ಮಾಡುವಾಗ ಒಬ್ಬರ ನಂತರ ಒಬ್ಬರು ಕಳೆದು ಹೋಗುತ್ತಾರೆ. ಅವರುಗಳು ಯಾತಕ್ಕಾಗಿ ಈ ರೀತಿ ಮಿಸ್ ಆಗುತ್ತಾರೆ ಎಂಬುದು ಚಿತ್ರದ ಹೂರಣವಾಗಿದೆ. ಭಯಾನಕ ದೃಶ್ಯಗಳು ಇರದೆ ಎರಡು ನೈಜ ಘಟನೆಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆಯಂತೆ. ವಿರಾಮದ ನಂತರ ಬರುವ ದೃಶ್ಯಗಳು ತಿರುಗಿನಿಂದ ಬಂದಂತೆ ಚಿತ್ರಕತೆಯನ್ನು ಹಣೆಯಲಾಗಿದೆ. ಮೊದಲ ಭಾಗದ ಗೊಂದಲವನ್ನು ಎರಡನೇ ಭಾಗವು ನಿವಾರಣೆ ಮಾಡಿಸುತ್ತದೆ. ಕತೆಗೆ ಅನುಗುಣವಾಗಿ ಸಿರಸಿ, ಯಲ್ಲಾಪುರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ಸೀನು ಅವರಿಗೆ ಇದು ಎರಡನೆ ಚಿತ್ರ.

ಮುಖ್ಯ ಪಾತ್ರದಲ್ಲಿ ಸಂಚಾರಿವಿಜಯ್, ಚಾರಣದ ತಂಡದಲ್ಲಿ ಬಿಗ್‍ಬಾಸ್‍ನ ಆರ್.ಜೆ.ನೇತ್ರ, ಆರ್.ಜೆ.ರುದ್ರೇಶ್, ಶಾಂತಲಾ , ಭರತನಾಟ್ಯ ಕಲಾವಿದೆ ಹೇಮಾ, ಸುದೇಶ್, ವಿಕಾಸ್ ಮುಂತಾದವರ ನಟನೆ ಇದೆ. ಲಂಡನ್ ತಂಡದವರು ತಮಟೆ ಗೀತೆಗೆ ಸಂಗೀತ ಸಂಯೋಜಿಸಿದ್ದು, ವಸಿಷ್ಟ.ಎನ್.ಸಿಂಹ ಹಾಡಿರುವುದು ವಿಶೇಷವಾಗಿದೆ. ಸಂಗೀತ ಸಾಯಿಕಿರಣ್, ಛಾಯಗ್ರಹಣ ಪರಮೇಶ್.ಎಂ, ಸಾಹಸ ಡಿಫರೆಂಟ್‍ಡ್ಯಾನಿ ಅವರದಾಗಿದೆ. ಇತ್ತೀಚೆಗಷ್ಟೆ ಹಾಡುಗಳನ್ನು ಕೇಳಿರುವ ಸುದೀಪ್ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಚಲಿತ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಮಾಜ ಸೇವಕ ಪ್ರಸಿದ್ದ ವೈದ್ಯ ಡಾ.ಶೈಲೇಶ್‍ಕುಮಾರ್ ನಾಗಬ್ರಹ್ಮ ಕ್ರಿಯೆಶನ್ಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರವು ಏಪ್ರಿಲ್ ಮೊದಲ ವಾರದಲ್ಲಿ ತೆರೆ ಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
28/03/18





For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore