HOME
CINEMA NEWS
GALLERY
TV NEWS
REVIEWS
CONTACT US
ನೋಡುಗನಿಗೆ ಇಷ್ಟವಾಗುವ ಮೂರು ತಿರುವುಗಳು
ವಿಭಿನ್ನ, ವಿನೂತನ ಚಿತ್ರ ‘3 ಘಂಟೆ 30 ದಿನÀ 30 ಸೆಕೆಂಡ್’’ ಪ್ರೇಮಕತೆಯಲ್ಲಿ ಬೇರೆ ಏನೇ ಗೊಂದಲಗಳು ಇದ್ದರೂ ಇದನ್ನು ನೋಡಿದ ಮೇಲೆ ಮನಸ್ಸು ಹಗುರುವಾಗುತ್ತದೆ ಎಂದು ಹೇಳಬಹುದು. ಜಾಹಿರಾತುಗಳನ್ನು ನಿರ್ದೇಶಿಸಿದ ಅನುಭವ ಇರುವ ಮಧುಸೂಧನ್ ಅವರು ಮೊದಲ ಸಲ ರಚಿಸಿ ಆಕ್ಷನ್ ಕಟ್ ಹೇಳಿದ್ದು, ಪ್ರೇಕ್ಷಕನಿಗೆ ಇಷ್ಟವಾಗುವ ಎಲ್ಲಾ ಅಂಶಗಳನ್ನು ನೀಡಿದ್ದಾರೆ. ಬೋಧನೆ ಸ್ಪಲ್ಪಮಟ್ಟಿಗೆ ಹೆಚ್ಚು ಅನಿಸಿದಂತೆ ಪ್ರೀತಿ ಸುತ್ತ ನಡೆಯುವ ಚರ್ಚೆ, ವಾಗ್ವಾದಗಳು ಪ್ರಚಲಿತ ತಲೆಮಾರಿಗೆ ಅವಶ್ಯಕೆವಾಗುವಂತೆ ಬಿಂಬಿಸಿರುವುದು ಕಾಣುತ್ತದೆ. ಶೀರ್ಷಿಕೆ ನೋಡಿ ಸೆಸ್ಪನ್ಸ್ ಚಿತ್ರ ಅಂತ ಹೋದರೆ, ನೋಡುಗಿನಿಗೆ ಬೇರೆಯದೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಮೂರು ತಿರುವುಗಳಲ್ಲಿ ಸಾಗುವ ಕತೆಯಲ್ಲಿ ಇಷ್ಟಪಡುವ ಸನ್ನಿವೇಶಗಳು ಇರುವುದು ಧನಾತ್ಮಕ ಅಂಶವಾಗಿದೆ. ನಾಯಕ ಬುದ್ದಿ ಚಾತುರ್ಯದಿಂದಲೇ ನ್ಯಾಯಲಯಕ್ಕೆ ಹೋಗದೆ ಹೂರಗಡೆಯಿಂದಲೇ ಕೇಸುಗಳನ್ನು ಗೆಲ್ಲುವ ಚತುರ ವಕೀಲ. ತಾನೇ ಗೆದ್ದ ಕೇಸೊಂದು ವಾಹಿನಿಯಲ್ಲಿ ಚರ್ಚಾ ವಿಷಯವಾಗಿ ಟಿಆರ್‍ಪಿ ಗಿಮಿಕ್ ಆಗಿದೆ ಎಂದು ನಂಬುವ ಆತನಿಗೆ ವಾಹಿನಿ ಮಖ್ಯಸ್ಥೆ ಪ್ರೀತಿ ಸುಳ್ಳು, ಸತ್ಯ ಎಂಬುದನ್ನು ನನ್ನ ಮೂಲಕವೇ ಗೊತ್ತಾಗಲಿ ಅಂತ ಸವಾಲು ಹಾಕುತ್ತಾಳೆ. ಇದನ್ನು ಟೈಟಲ್‍ನಂತೆ ಹೇಗೆ ನಿಭಾಯಿಸುತ್ತಾನೆ ಎಂಬುದು ಒಂದು ಏಳೆಯ ತಿರುಳು.

ಎರಡನೆ ಚಿತ್ರದಲ್ಲಿ ನಟನೆಯನ್ನು ತೋರಿಸಿರುವ ನಾಯಕ ಅರುಣ್‍ಗೌಡ ಬಿಂದಾಸ್ ಆಗಿ ಡ್ಯಾನ್ಸ್, ಫೈಟು, ಮಾಡಿ ರಂಜಸಿದ್ದಾರೆ. ಕಾವ್ಯಶೆಟ್ಟಿ ನಾಯಕಿಯಾಗಿ ಇದ್ದಾರೆಂದು ಹೇಳಬಹುದು. ಕುರುಡನಾಗಿ ದೇವರಾಜ್ ಮತ್ತು ಸುಧಾರಾಣ ಗಮನ ಸೆಳೆಯುತ್ತಾರೆ ಉಳಿದಂತೆ ಎಡಕಲ್ಲು ಗುಡ್ಡದಮೇಲೆ ಚಂದ್ರಶೇಖರ್,ರಮೇಶ್‍ಭಟ್, ಯಮುನಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ರೀಧರ್‍ಸಂಭ್ರಮ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಶ್ರೀನಿವಾಸರಾಮಯ್ಯ ಕ್ಯಾಮಾರ ಕೆಲಸ ಅಲ್ಲಲ್ಲಿ ಕೆಲಸ ಮಾಡಿದೆ. ನಿರ್ಮಾಪಕ ಚಂದ್ರಶೇಖರ್.ಆರ್.ಪದ್ಮಶಾಲಿ ಪ್ರಥಮ ಪ್ರಯತ್ನದಲ್ಲಿ ಯಶಸ್ಸನ್ನು ಕಂಡು ಎರಡನೆ ಹಾದಿಗೆ ಪಯಣ ಸಲು ಈ ಸಿನಿಮಾವು ಸುಗಮವಾಗಿದೆ.
-21/01/18
3:30:30 ಆಗಮನಕ್ಕೆ ಸಿದ್ದತೆ
‘3 ಘಂಟೆ 30 ದಿನ 30 ಸೆಕೆಂಡ್’ ಚಿತ್ರವು ಹೊಸ ಆಯಾಮದ ಕತೆಯಾಗಿದೆ. ಬದುಕಿನಲ್ಲಿ ಲೈಫಾ,ಲವ್ವಾ ಹಾಗೆ ಪ್ರೀತಿ, ಕೀರ್ತಿ ಇವುಗಳ ಮಧ್ಯೆ ದೃಶ್ಯಗಳು ಸಾಗುತ್ತವೆ. ರಚನೆ,ಚಿತ್ರಕತೆ, ಸಂಭಾಷಣೆ, ಕೆಲವು ಹಾಡುಗಳಿಗೆ ಸಾಹಿತ್ಯ ಒದಗಿಸಿ ಚೂಚ್ಚಲಬಾರಿ ನಿರ್ದೇಶನದ ಸಾರಥ್ಯವಹಿಸಿಕೊಂಡಿರುವ ಜಿ.ಕೆ.ಮಧುಸೂಧನ್ ಹೇಳುವಂತೆ ಸನ್ನಿವೇಶಗಳು ಒಂದು ಮಗ್ಗಲಿಗೆ ಕರೆದುಕೊಂಡು ಹೋಗುತ್ತದೆ. ಶೇಕಡ 70ರಷ್ಟು ನಾಯಕ-ನಾಯಕಿ ಇಬ್ಬರು ತೆರೆಯನ್ನು ಹಂಚಿಕೊಂಡಿದ್ದಾರೆ. ಅನೂಹ್ಯ ದೃಶ್ಯಗಳು ಇರಲಿದ್ದು ಕುತೂಹಲ ಸೃಷ್ಟ್ಟಿಸಿರುವುದು ಧನಾತ್ಮಕ ಅಂಶವಾಗಿದೆ. ಪಾತ್ರಗಳು ಅವರದೆ ಆದ ರೀತಿಯಲ್ಲಿ ಸಾಗುತ್ತಿದ್ದರೆ, ಮಾತುಕತೆಗಳು ಗುಪ್ತಗಾಮಿನಿಯಂತೆ ಬರುತ್ತದೆ. ಎರಡನ್ನು ಸರಿದೂಗಿಸುವುದು ಸವಾಲಿನ ಕೆಲಸವಾಗಿತು ಎನ್ನುತ್ತಾರೆ. ಮಾಜಿ ಸೈನಿಕ ಕುರುಡನಾಗಿ ದೇವರಾಜ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಇವರು ಹೇಳುವಂತೆ ಪ್ರತಿಯೊಬ್ಬ ಕಲಾವಿದನಿಗೆ ಛಾಲೆಂಜ್ ಇರುತ್ತದೆ. ಅದರಂತೆ ಒಳ್ಳೆ ತಂಡದಲ್ಲಿ ಕೆಲಸ ಮಾಡಿದ ಖುಷಿ ಇದೆ ಎನ್ನುತ್ತಾರೆ.

ಮಧ್ಯಮ ವರ್ಗದ ತಾಯಿಯಾಗಿ ಯಮುನಾಶ್ರೀನಿಧಿ ಸೆಟ್‍ನಲ್ಲಿ ಮರೆಯಲಾಗದ ಘಟನೆಗಳನ್ನು ಹೇಳಿಕೊಂಡರು. ಪಾತ್ರ ವಕೀಲ, ಆದರೆ ಕೋರ್ಟ್ ಹೋಗದೆ ಕೇಸ್‍ಗಳನ್ನು ಡೀಲ್ ಮಾಡುತ್ತಾನೆ. ಲಾಯರ್ ಹಾಗೂ ಲವರ್ ಬಾಯ್ ಆಗಿ ಕಾಣ ಸಿಕೊಂಡಿರುವ ಅರುಣ್‍ಗೌಡ ನಾಯಕ. ಬದುಕನ್ನು ಗಂಬೀರವಾಗಿ ತೆಗೆದುಕೊಳ್ಳುವ ವಾಹಿನಿ ಮುಖ್ಯಸ್ಥನ ಮಗಳಾಗಿ ಕಾವ್ಯಶೆಟ್ಟಿ ನಾಯಕಿ. ಇಬ್ಬರು ವೈರುದ್ಯದ ಗುಣಗಳು ಇರುವಾಗ ಒಂದು ಹಂತದಲ್ಲಿ ಸಮಸ್ಯೆ ಎದುರಾದಾಗ ಶೀರ್ಷಿಕೆಯಂತೆ ಚಾಲೆಂಜ್ ಮಾಡಿ ಕೈಮಾಕ್ಸ್ 30 ಸೆಕೆಂಡ್‍ನಲ್ಲಿ ಹೇಗೆ ಬಗೆ ಹರಿಯುತ್ತದೆ ಎಂಬುದನ್ನು ನವಿರಾಗಿ ತೋರಿಸಲಾಗಿದೆ. ಗೆಳಯರೊಂದಿಗೆ ಸೇರಿಕೊಂಡು ಬ್ರೈನ್ ಶೇರ್ ಕ್ರಿಯೇಶನ್ಸ್ ಪ್ರೈ.ಲಿ. ಮೂಲಕ ಪ್ರಥಮಬಾರಿ ನಿರ್ಮಾಣ ಮಾಡಿರುವ ಚಂದ್ರಶೇಖರ್.ಆರ್.ಪದ್ಮಶಾಲಿ ಚಿತ್ರದ ಪ್ರಚಾರವನ್ನು ಚೆನ್ನಾಗಿ ಮಾಡಿದ್ದರಿಂದ ತಂಡವು ಖುಷಿಯಾಗಿದೆಯಂತೆ. ಸಚಿವನ ಮಗನಾಗಿರುವ ದರ್ಶನ್, ನೃತ್ಯ ನಿರ್ದೇಶಕ ತ್ರಿಭುವನ್ ಉಪಸ್ತಿತರಿದ್ದರು. ವಿತರಕ ಜೊಯಿಲ್ ಗಣರಾಜ್ಯೋತ್ಸವ ದಿನದಂದು ವಿದೇಶದಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು.
-21/01/18

ಜನವರಿ 19ಕ್ಕೆ 3 ಘಂಟೆ 30 ದಿನ 30 ಸಕೆಂಡ್
ವಿಭಿನ್ನ ಚಿತ್ರ ‘3 ಘಂಟೆ 30 ದಿನ 30 ಸೆಕೆಂಡ್’ ಕತೆಯು ಬದುಕಿನಲ್ಲಿ ಲೈಫಾ,ಲವ್ವಾ ಹಾಗೆ ಪ್ರೀತಿ, ಕೀರ್ತಿ. ಇವುಗಳ ಮಧ್ಯೆ ಸಿನಿಮಾ ಸಾಗುತ್ತದೆ. ರಚನೆ,ಚಿತ್ರಕತೆ, ಸಂಭಾಷಣೆ, ಕೆಲವು ಹಾಡುಗಳಿಗೆ ಸಾಹಿತ್ಯ ಒದಗಿಸಿ ಚೂಚ್ಚಲಬಾರಿ ನಿರ್ದೇಶನದ ಸಾರಥ್ಯವಹಿಸಿಕೊಂಡಿರುವ ಜಿ.ಕೆ.ಮಧುಸೂಧನ್ ಹೇಳುವಂತೆ ಸನ್ನಿವೇಶಗಳು ಒಂದು ಮಗ್ಗಲಿಗೆ ಕರೆದುಕೊಂಡು ಹೋಗುತ್ತದೆ. ಶೇಕಡ 70ರಷ್ಟು ನಾಯಕ-ನಾಯಕಿ ಇಬ್ಬರು ತೆರೆಯನ್ನು ಹಂಚಿಕೊಂಡಿದ್ದಾರೆ. ಅನೂಹ್ಯ ದೃಶ್ಯಗಳು ಇರಲಿದ್ದು ಕುತೂಹಲ ಸೃಷ್ಟ್ಟಿಸಿರುವುದು ಧನಾತ್ಮಕ ಅಂಶವಾಗಿದೆ. ಪಾತ್ರಗಳು ಅವರದೆ ಆದ ರೀತಿಯಲ್ಲಿ ಸಾಗುತ್ತಿದ್ದರೆ, ಮಾತುಕತೆಗಳು ಗುಪ್ತಗಾಮಿನಿಯಂತೆ ಬರುತ್ತದೆ. ಎರಡನ್ನು ಸರಿದೂಗಿಸುವುದು ಸವಾಲಿನ ಕೆಲಸವಾಗಿತ್ತು. ಆಕೆ ಜೀವನವನ್ನು ಗಂಭೀರವಾಗಿ ಪರಿಗಣ ಸಿದರೆ, ಆತ ಬಿಂದಾಸ್ ಆಗಿ ಇರಬೇಕೆಂಬ ಧ್ಯೇಯವಾಗಿರುತ್ತದೆ ಪ್ರೇಮಧಾಮ ಕಂತಿನಲ್ಲಿ ಮಾಜಿ ಸೈನಿಕ ಕುರುಡನಾಗಿ ದೇವರಾಜ್, ಸುಧಾರಾಣ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.

ನಾಯಕ ಅರುಣ್‍ಗೌಡ ನುರಿತ ಕಲಾವಿದರೊಂದಿಗೆ ಅಭಿನಯಿಸಿದ್ದು ಖುಷಿ ತಂದಿದೆಯಂತೆ. ಹಾಸ್ಯ ದೃಶ್ಯವನ್ನು ಐದು ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಸೆನ್ಸಾರ್‍ನವರು ಅದನ್ನು ತೆಗೆದುಹಾಕಿದ್ದಾರೆ. ಇಂತಹ ದೃಶ್ಯಗಳು ಸಾಕಷ್ಟು ಇವೆ. ಇದೊಂದು ಸಂಗೀತಮಯ ಚಿತ್ರವೆಂದು ತಂಡವು ಹೇಳಿಕೊಂಡಿದೆ. ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಸ್ವಮೇಕ್ ಚಿತ್ರವೆಂಬುದು ಧನಾತ್ಮಕ ಅಂಶವಾಗಿದೆ. ಸೆಟ್‍ನಲ್ಲಿ ನಿರ್ದೇಶಕರು ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಅಂದು ಕೊಂಡಂತೆ ಕಲಾವಿದರಿಂದ ನಟನೆಯನ್ನು ತೆಗೆಸಿಕೊಂಡಿದ್ದಾರೆ. ಹಾಡುಗಳಿಗಿಂತ ಹಿನ್ನಲೆ ಸಂಗೀತ ಹೆಚ್ಚು ಕೆಲಸ ಮಾಡಿರುವುದು ಶ್ರೀಧರ್‍ಸಂಭ್ರಮ್. ಗೆಳಯರೊಂದಿಗೆ ಸೇರಿಕೊಂಡು ಬ್ರೈನ್ ಶೇರ್ ಕ್ರಿಯೇಶನ್ಸ್ ಪ್ರೈ.ಲಿ. ಮೂಲಕ ಪ್ರಥಮಬಾರಿ ನಿರ್ಮಾಣ ಮಾಡಿರುವ ಚಂದ್ರಶೇಖರ್.ಆರ್.ಪದ್ಮಶಾಲಿ ಸಿನಿಮಾ ಕೃಷಿ ಹೊಸ ಅನುಭವವಾಗಿದೆ.
-6/01/18
3 ಘಂಟೆ 30 ದಿನ 30 ಸಕೆಂಡ್ ಟ್ರೈಲರ್ ಬಿಡುಗಡೆ
ಹುಡುಗಿಗೆ ನೆಗೆಡಿ,ಕೆಮ್ಮು ಬಂದರೆ ಬೇಗನೆ ವಾಸಿಯಾಗುತ್ತದೆ. ಅದೇ ಹುಡುಗನಿಗೆ ಡಯಾಬಿಟೀಸ್‍ಗೆ ತುತ್ತಾದಾಗ ಬಿಡದೆ ತನ್ನೆ ಜೊತೆಗೆ ಕರೆದುಕೊಂಡು ಹೋಗುತ್ತದೆ. ಬದುಕಿನಲ್ಲಿ ಲೈಫಾ,ಲವ್ವಾ ಹಾಗೆ ಪ್ರೀತಿ, ಕೀರ್ತಿ. ಇಂತಹ ಪದಗಳು ‘3 ಘಂಟೆ 30 ದಿನ 30 ಸೆಕೆಂಡ್’ ಸಿನಿಮಾದ ಟ್ರೈಲರ್‍ನಲ್ಲಿ ಕಾಣ ಸಿಕೊಂಡಿತು. ಎರಡು ಸಾವಿರಕ್ಕೂ ಹೆಚ್ಚು ಆ್ಯಡ್‍ಗಳನ್ನು ಸಿದ್ದಪಡಿಸಿ ಈಗ ಕತೆ,ಚಿತ್ರಕತೆ, ಸಂಭಾಷಣೆ, ಕೆಲವು ಹಾಡುಗಳಿಗೆ ಸಾಹಿತ್ಯ ಒದಗಿಸಿ ಚೂಚ್ಚಲಬಾರಿ ನಿರ್ದೇಶನದ ಸಾರಥ್ಯವಹಿಸಿಕೊಂಡಿರುವ ಜಿ.ಕೆ.ಮಧುಸೂಧನ್ ಹೇಳುವಂತೆ ಇಂದಿನ ತುಣುಕುಗಳು ಚಿತ್ರದ ಒಂದು ಮಗ್ಗಲನ್ನು ತೋರಿಸಲಾಗಿದೆ. ಶೇಕಡ 70ರಷ್ಟು ನಾಯಕ-ನಾಯಕಿ ಇಬ್ಬರು ತೆರೆಯನ್ನು ಹಂಚಿಕೊಂಡಿದ್ದಾರೆ. ಮಾಮೂಲಿ ಸಿನಿಮಾನಂತೆ ಇರದೆ ನೋಡುಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅನೂಹ್ಯ ದೃಶ್ಯಗಳು ಇರಲಿದ್ದು ಕುತೂಹಲ ಸೃಷ್ಟ್ಟಿಸಿರುವುದು ಧನಾತ್ಮಕ ಅಂಶವಾಗಿದೆ. ಪಾತ್ರಗಳು ಅವರದೆ ಆದ ರೀತಿಯಲ್ಲಿ ಸಾಗುತ್ತಿದ್ದರೆ, ಮಾತುಕತೆಗಳು ಗುಪ್ತಗಾಮಿನಿಯಂತೆ ಬರುತ್ತದೆ. ಎರಡನ್ನು ಸರಿದೂಗಿಸುವುದು ಸವಾಲಿನ ಕೆಲಸವಾಗಿತ್ತು. ಆಕೆ ಜೀವನವನ್ನು ಗಂಭೀರವಾಗಿ ಪರಿಗಣ ಸಿದರೆ, ಆತ ಬಿಂದಾಸ್ ಆಗಿ ಇರಬೇಕೆಂಬ ಧ್ಯೇಯವಾಗಿರುತ್ತದೆ ಇಬ್ಬರ ವೈರುದ್ಯ ಮನಸ್ಸುಗಳು ಕತೆಯನ್ನು ಯಾವ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆ. ಪ್ರೇಮಧಾಮ ಕಂತಿನಲ್ಲಿ ಮಾಜಿ ಸೈನಿಕ ಕುರುಡನಾಗಿ ದೇವರಾಜ್, ಸುಧಾರಾಣ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವುದಾಗಿ ಹೇಳುತ್ತಾ ಹೋದರು.

ನುರಿತ ಕಲಾವಿದರೊಂದಿಗೆ ಅಭಿನಯಿಸಿದ್ದು ಖುಷಿ ತಂದಿದೆ. ಹಾಸ್ಯ ದೃಶ್ಯವನ್ನು ಐದು ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಸೆನ್ಸಾರ್‍ನವರು ಅದನ್ನು ತೆಗೆದುಹಾಕಿದ್ದಾರೆ. ಇಂತಹ ದೃಶ್ಯಗಳು ಸಾಕಷ್ಟು ಇವೆ. ಇದೊಂದು ಸಂಗೀತಮಯ ಚಿತ್ರವೆಂದು ಬಣ್ಣನೆ ಮಾಡಿದ್ದು ನಾಯಕ ಅರುಣ್‍ಗೌಡ. ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಸ್ವಮೇಕ್ ಚಿತ್ರವೆಂದು ಹೇಳಲು ಸಂತೋಷವಾಗುತ್ತದೆ. ಸೆಟ್‍ನಲ್ಲಿ ನಿರ್ದೇಶಕರು ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಅಂದು ಕೊಂಡಂತೆ ಕಲಾವಿದರಿಂದ ನಟನೆಯನ್ನು ತೆಗೆಸಿಕೊಳ್ಳುತ್ತಿದ್ದರು. ಬಹುಕಾಲದ ನಂತರ ದೇವರಾಜ್‍ಗೆ ಜೋಡಿಯಾಗಿ ನಟಿಸಲಾಗಿದೆ ಎಂದು ಸುಧಾರಾಣ ಹೇಳಿಕೊಂಡರು. ಹಾಡುಗಳಿಗಿಂತ 35 ದಿನಗಳ ಕಾಲ ವಿಶೇಷವಾಗಿ ಹಿನ್ನಲೆ ಸಂಗೀತ ಕೆಲಸ ಮಾಡಿದ್ದು ಮರೆಯಲಾಗದ ಅನುಭವ ಅಂತಾರೆ ಶ್ರೀಧರ್‍ಸಂಭ್ರಮ್. ಗೆಳಯರೊಂದಿಗೆ ಸೇರಿಕೊಂಡು ಬ್ರೈನ್ ಶೇರ್ ಕ್ರಿಯೇಶನ್ಸ್ ಪ್ರೈ.ಲಿ.
ಮೂಲಕ ಪ್ರಥಮಬಾರಿ ನಿರ್ಮಾಣ ಮಾಡಿರುವ ಚಂದ್ರಶೇಖರ್.ಆರ್.ಪದ್ಮಶಾಲಿ ಹೆಚ್ಚೇನು ಮಾತನಾಡಲಿಲ್ಲ. ಜನವರಿ ಐದರಂದು ಸುಮಾರು 75 ಕೇಂದ್ರಗಳಲ್ಲಿ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟರು ವಿತರಕ ವಿಜಯ್. ನಾಯಕಿ ಕಾವ್ಯಶೆಟ್ಟಿ ಅನುಪಸ್ಥಿತಿಗೆ ಕಾರಣ ತಿಳಿಯಲಿಲ್ಲ.
-24/12/17


ವರ್ಷದ ಮೊದಲವಾರ 3:30:30 ಚಿತ್ರ ಬಿಡುಗಡೆ
ವಿನೂತನ ‘3 ಘಂಟೆ 30 ದಿನ 30 ಸೆಕೆಂಡ್’ ಅಡಿಬರಹದಲ್ಲಿ ಇದು ಪ್ರೀತಿಯ ಪೋಸ್ಟ್ ಮಾರ್ಟಮ್ ಅಂತ ಹೇಳಿಕೊಂಡಿರುವ ಚಿತ್ರವು ಸರಾಗವಾಗಿ ಚಿತ್ರೀಕರಣೋತ್ತರ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆ ಸಿದ್ದವಾಗಿದೆ. ಸಿನಿಮಾ ಕುರಿತು ಹೇಳುವುದಾದರೆ ಏನೋ ಮಾಡಲು ಹೋದರೆ ಬೇರೆನೋ ಆಗುತ್ತದೆ. ಮೂರು ಘಂಟೆಯಲ್ಲಿ ನಡೆಯುವ ಘಟನೆಯು 30 ದಿನಗಳನ್ನು ತೆಗೆದುಕೊಂಡು ಅವಸಾನದಲ್ಲಿ 30 ಸೆಕೆಂಡ್‍ಗಳಲ್ಲಿ ಸರಿ ಹೋಗುತ್ತದೆ. ಶೀರ್ಷಿಕೆಯು ಅವ್ಯವಸ್ಥೆಯಲ್ಲಿ ಇದ್ದರೂ ಪ್ರೇಕ್ಷಕರನಿಗೆ ಕೊನೆಯಲ್ಲಿ ಅರ್ಥವಾಗುವಂತೆ ಸನ್ನಿವೇಶಗಳು ಮೂಡಿಬಂದಿದೆ. ಅಲ್ಲದೆ ಜಯಂತ್‍ಕಾಯ್ಕಣ , ಮಧುಸೂಧನ್ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಿರುವ ವಿ.ಶ್ರೀಧರ್‍ಸಂಭ್ರಮ್‍ರವರ ಐದು ಹಾಡುಗಳು ಹಿಟ್ ಆಗಿರುವುದು ತಂಡಕ್ಕೆ ಧನಾತ್ಮಕ ಅಂಶವಾಗಿದೆ. ತುಮುಲಗಳನನ್ನು ತುಂಬಿಕೊಂಡಿರುವ ವಕೀಲನಾಗಿ ಆರುಗೌಡ ನಾಯಕ.

ವಾಹಿನಿ ಮುಖ್ಯಸ್ಥೆಯ ಮಗಳಾಗಿ ಕಾವ್ಯಶೆಟ್ಟಿ ನಾಯಕಿ. ಇವರೊಂದಿಗೆ ಯದ್ದದಲ್ಲಿ ಹೋರಾಡುವಾಗ ಶ್ರವಣ ಶಕ್ತಿ, ದೃಷ್ಟಿಯನ್ನು ಕಳೆದುಕೊಂಡಿರುವ ಪಾತ್ರದಲ್ಲಿ ದೇವರಾಜ್, ಜೋಡಿಯಾಗಿ ಸುಧರಾಣ , ವಾಹಿನಿ ಮುಖ್ಯಸ್ಥನ ಪಾತ್ರಕ್ಕೆ ಎಡಕಲ್ಲುಗುಡ್ಡದಮೇಲೆ ಚಂದ್ರಶೇಖರ್, ಅತಿಥಿಯಾಗಿ ಟಿ.ಎಸ್.ನಾಗಭರಣ ನಟನೆ ಇದೆ. ಛಾಯಗ್ರಹಣ ಶ್ರೀನಿವಾಸ್‍ರಾಮಯ್ಯ, ಸಂಕಲನ ಕ್ರೇಜಿಮೈಂಡ್ಸ್, ನೃತ್ಯ ತ್ರಿಭುವನ್ ಅವರದಾಗಿದೆ. ಜಾಹಿರಾತುಗಳನ್ನು ನಿರ್ದೇಶನ ಮಾಡಿರುವ ಮಧುಸೂಧನ್ ಕತೆ,ಚಿತ್ರಕತೆ ರಚಿಸಿ ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಆ್ಯಡ್ ಕಂಪನೆ ನಡೆಸುತ್ತಿರುವ ಚಂದ್ರಶೇಖರ್.ಆರ್.ಪದ್ಮಶಾಲಿ ನಿರ್ಮಾಪಕರಾಗಿ ಹೊಸ ಅನುಭವವಾಗಿರುವುದರಿಂದ ಬ್ರೈನ್‍ಶೇರ್ ಕ್ರಿಯೇಶನ್ಸ್ ಪ್ರೈ. ಲಿ. ಸಂಸ್ಥೆ ತರೆದು ಇದರ ಮೂಲಕ 11 ಗೆಳೆಯರನ್ನು ಸೇರಿಸಿಕೊಂಡು ಚಿತ್ರಕ್ಕೆ ಹಣ ಹೂಡಿದ್ದಾರೆ. ಜನವರಿ 5ರಂದು ಸುಮಾರು 100 ಕೇಂದ್ರಗಳಲ್ಲಿ ಚಿತ್ರವು ತೆರೆ ಕಾಣುವ ಸಾದ್ಯತೆ ಇದೆ.
-16/12/17


3 ಘಂಟೆ 30 ದಿನ 30 ಸೆಕೆಂಡ್ ಹಾಡುಗಳ ಔತಣ
ಸೋಮವಾರದಂದು ‘3 ಘಂಟೆ 30 ದಿನ 30 ಸೆಕೆಂಡ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ಚೌಡಯ್ಯ ಸ್ಮಾರಕ ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ಮೊದಲ ಹಾಡನ್ನು ಬಿಡುಗಡೆ ಮಾಡಿದ ಮಹರ್ಷಿ ಆನಂದ್‍ಗುರೂಜಿ ಮಾತನಾಡುತ್ತಾ ಮೂರು ಸಂಖ್ಯೆಗಳನ್ನು ಕೂಡಿದರೆ ಒಂಬತ್ತು ಬರುವುದರಿಂದ ನವಗ್ರಹಗಳ ಆರ್ಶಿವಾದ ಇದೆ. ದೇವರು ನೇರವಾಗಿ ಕಾಣದಿದ್ದರೂ ಅಪ್ಪ-ಅಮ್ಮನ ಮುಖಾಂತರ ಕಾಣ ಸಿಕೊಳ್ಳುತ್ತಾರೆ. ಅದಕ್ಕಂದೆ ಪಿತೃಪಕ್ಷದ ಹಿಂದಿನ ದಿವಸದಂದು ಮಾಡುತ್ತಿರುವುದರಿಂದ ಅವರುಗಳ ಅನುಗ್ರಹ ಇದೆ. ಮಧುಸೂಧನ್‍ರವರು ತನ್ನಳಗೊಬ್ಬ ನಿರ್ದೇಶಕನಿದ್ದಾನೆಂದು ತೋರಿಸಿಕೊಟ್ಟಿದ್ದಾರೆ. ಮುಂದೆ ದೇಶ ಕಾಯುವ ಯೋಧರ ಸಿನಿಮಾ ಮಾಡಿದಲ್ಲಿ ನಾನು ಸಹ ಜೊತೆಗೆ ಇರುವುದಾಗಿ ಭರವಸೆ ನೀಡಿ ನಿರ್ಗಮಿಸಿದರು. ಶೀರ್ಷಿಕೆಯಲ್ಲೆ ಕಿರಿಕ್ ಇರಲೆಂದು ಇದನ್ನೆ ಇಡಲಾಗಿದೆ. ಕತೆ ಬರೆಯಲು ಒಂದು ವರ್ಷ ಸಮಯ ತೆಗೆದುಕೊಂಡಿತು. ಒಂದು ಹಾಡನ್ನು ಜಯಂತ್‍ಕಾಯ್ಕಣ ಉಳಿದ ನಾಲ್ಕು ಗೀತೆಗಳನ್ನು ಬರೆಯಲಾಗಿದೆ. ಜಾಹಿರಾತುಗಳಿಗೆ ಆಕ್ಷನ್ ಕಟ್ ಹೇಳಿರುವ ನನಗೆ ಸಿನಿಮಾ ಮೊದಲ ಅನುಭವವಾಗಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು ಮಧುಸೂಧನ್. ಎರಡನೆಯದನ್ನು ಲೋಕಾರ್ಪಣೆ ಮಾಡಿದ ನಾದಬ್ರಹ್ಮ ಹಂಸಲೇಖಾ ಟೈಟಲ್ ಉದ್ದವಾಗಿದೆ. ಇದರಲ್ಲಿ ಟ್ರಿಕ್ಸ್ ಇದ್ದರೂ ಹಂಪ್ಸ್‍ಗಳು ಇವೆ. ಮೊದಲ ಮೂರು ತಕಿಟ, ಎರಡನೆಯದು ತಕಿಟ ತಕಿಟ ಮೂರನೆಯದು ತಕಿಟತಕಿಟ ತಾ. ಕು.ರಾ.ಸೀತಾರಾಮಶಾಸ್ತ್ರೀ, ವಿಜಯನರಸಿಂಹ ಕಾಲದವರಂತೆ ಜಯಂತ್ ಕಾಯ್ಕಣ , ಹುಣಸೂರುಕೃಷ್ಣಮೂರ್ತಿರವರ ಗರಡಿಯಂತೆ ನಾನು ಇದ್ದೇನೆ. ನೆನಪಿರಲಿ ಚಿತ್ರದ ಕೂರಕ್ಕೂ ಹಾಡಿಗೆ ಶ್ರೀಧರ್‍ಸಂಭ್ರಮ್ ಶ್ರಮ ಇರಲಿದ್ದು, ಇಂದು ಮೈಸೂರಿನ ನಾಡಗೀತೆ ಆಗಿದೆ. ನಿದೇಶಕರಿಗೆ ಸಹ ಕಲಾವಿದರ ಸಮಸ್ಯೆ ಇಲ್ಲ. ಯಾಕೆಂದರೆ ಸೆಟ್‍ನಲ್ಲಿ ಕಡಿಮೆ ಇದೆ ಅಂತ ಕಂಡುಬಂದಲ್ಲಿ ಡಜನ್ ಪಾಲುದಾರರಾಗಿರುವ ನಿರ್ಮಾಪಕರನ್ನು ಉಪಯೋಗಿಸಿಕೊಳ್ಳಬಹುದು ಎಂದು ನಗಿಸಿದರು.

ಚಿತ್ರೀಕರಣ ನಡೆಸುವ ಜಾಗಗಳಿಗೆ ಕರೆದುಕೊಂಡು ಹೋಗಿ ಅಲ್ಲಿಯೇ ನಟನೆಯ ತಾಲೀಮು ಮಾಡಿಸಿದ್ದಾರೆ. ವಕೀಲನಾಗಿ ಕಾಣ ಸಿಕೊಂಡಿದ್ದೇನೆ. ಡಾ.ವಿಷ್ಣು ಹುಟ್ಟುಹಬ್ಬದಂದು ಹಾಡುಗಳು ಹೊರಗೆ ಬಂದಿರುವುದು ನನ್ನ ಸುಕೃತ ಎನ್ನಬಹುದು ಎಂದು ಭಕ್ತಪ್ರಹ್ಲಾದ ಚಿತ್ರದ ಡಾ.ರಾಜ್‍ಕುಮಾರ್ ಸಂಭಾಷಣೆಯನ್ನು ಹೇಳಿ ಅಚ್ಚರಿ ಮೂಡಿಸಿದರು ನಾಯಕ ಅರುಣ್‍ಗೌಡ. ಮೂರನೆ ಗೀತೆಗೆ ಅಸ್ತು ಎಂದ ಭಗವಾನ್ ನಮ್ಮ ಕಾಲದಂತೆ ಹಾಡುಗಳು ಕಿವಿಗೆ ಇಂಪು, ಕಣ ್ಣಗೆ ತಂಪಾಗಿವೆ. ಆಡು ಭಾಷೆಯಲ್ಲಿರವ ಗೀತೆಗಳು ಬೇಗನೆ ಅರ್ಥವಾಗುತ್ತದೆ. 30 ದಿನ ಇರುವಂತೆ ಚಿತ್ರವು 100 ದಿನ ಓಡಲಿ ಎಂದರು. ನಾಲ್ಕನೆ ಹಾಡನ್ನು ಲೋಕಾರ್ಪಣೆ ಮಾಡಿದ ಸುನಿಲ್ ಕುಮಾರ್‍ದೇಸಾಯಿ ಸಿನಿಮಾವು ಎಲ್ಲಾ ನವರಸಗಳಿಂದ ಕೂಡಿದೆ. ಇಬ್ಬರಿಗೂ ಸ್ಟಾರ್ ವಾಲ್ಯೂ ಸಿಗಲಿದೆ ಅಂತ ಭವಿಷ್ಯ ನುಡಿದರು. ಪೋಸ್ಟರ್‍ನಲ್ಲಿ ಅರುಣ್‍ಗೌಡ ವರ್ಸಸ್ ಕಾವ್ಯಶೆಟ್ಟಿ ಎನ್ನುವಂತೆ ಚಿತ್ರವು ಸಿನಿಮಾ v/s ಪ್ರೇಕ್ಷಕವಾಗಲಿ ಎಂಬುದು ಹಿರಿಯ ನಿರ್ದೇಶಕ ಜೊಸೈಮನ್ ನುಡಿ. ಕೊನೆ ಗೀತೆಯನ್ನು ಭಾರ್ಗವ ಅನಾವರಣಗೊಳಿಸಿ ಮಂಗಳೂರಿನ ಹುಡುಗಿಯರು ಸುಂದರವಾಗಿರುತ್ತಾರೆ ಎಂಬುದಕ್ಕೆ ಸಾಕ್ಷಿ ಕಾವ್ಯಶೆಟ್ಟಿ. ಹರಿಣ , ಲೀಲಾವತಿ ಅಲ್ಲಿಂದಲೇ ಬಂದವರು. ನಾವುಗಳು ಚೆನ್ನಾಗಿದೆ ಎಂದು ಹೇಳುವುದಕ್ಕಿಂತ ನೀವುಗಳು ಹೇಳಿದರೆ ಗೆಲುವಿಗೆ ಕಾರಣವಾಗುತ್ತದೆ ಎಂದು ಹೇಳಿದರು. ನಾಯಕಿ ಕಾವ್ಯಶೆಟ್ಟಿ , ಮೂಲ ನಿರ್ಮಾಪಕ ಚಂದ್ರಶೇಖರ್.ಆರ್.ಪದ್ಮಶಾಲಿ ಹೆಚ್ಚೇನು ಮಾತನಾಡಲಿಲ್ಲ. ಶೀರ್ಷಿಕೆ ಗೀತೆಯನ್ನು ಶ್ರೀಧರ್‍ಸಂಭ್ರಮ್,ಚಂದನ್‍ಶೆಟ್ಟಿ ಹಾಡಿ ರಂಜಿಸಿದರು. ಕಾಮಿಡಿ ಕಿಲಾಡಿಗಳು ಖ್ಯಾತಿ ನಯನ, ಸಾಹಿತಿ ನಾಗೇಂದ್ರಪ್ರಸಾದ್, ಸಹ ನಿರ್ಮಾಪಕರುಗಳು, ಸೂರಪ್ಪಬಾಬು, ರಮೇಶ್‍ಯಾದವ್ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.
-20/09/17
ಡಿಟಿಎಸ್ ಹಂತದಲ್ಲಿ 30:30:30
ವಿನೂತನ ‘3 ಘಂಟೆ 30 ದಿನ 30 ಸೆಕೆಂಡ್’ ಅಡಿಬರಹದಲ್ಲಿ ಇದು ಪ್ರೀತಿಯ ಪೋಸ್ಟ್ ಮಾರ್ಟಮ್ ಅಂತ ಹೇಳಿಕೊಂಡಿರುವ ಚಿತ್ರವು ಸರಾಗವಾಗಿ ಚಿತ್ರೀಕರಣ ಮುಗಿಸಿ ಡಿಟಿಎಸ್ ಹಂತಕ್ಕೆ ತಲುಪಿದೆ. ಕತೆ ಕುರಿತು ಹೇಳುವುದಾದರೆ ಏನೋ ಮಾಡಲು ಹೋದರೆ ಬೇರೆನೋ ಆಗುತ್ತದೆ. ಮೂರು ಘಂಟೆಯಲ್ಲಿ ನಡೆಯುವ ಘಟನೆಯು 30 ದಿನಗಳು ಕಳೆದು ಕೊನೆಗೆ 30 ಸೆಕೆಂಡ್‍ನಲ್ಲಿ ಹೇಗೆ ಸರಿ ಹೋಗುತ್ತದೆ ಎಂಬುದು ಸಿನಿಮಾದ ತಿರುಳು. ಶೀರ್ಷಿಕೆಯು ಅವ್ಯವಸ್ಥೆಯಲ್ಲಿ ಇದ್ದರೂ ಪ್ರೇಕ್ಷಕನಿಗೆ ಕೊನೆಯಲ್ಲಿ ಅರ್ಥವಾಗುವಂತೆ ಸನ್ನಿವೇಶಗಳು ಮೂಡಿಬರಲಿದೆ. ಜಾಹಿರಾತು ಕ್ಷೇತ್ರದಲ್ಲಿ ಆ್ಯಡ್ ಫಿಲಿಂಗಳನ್ನು ಸಿದ್ದಪಡಿಸಿದ ಅನುಭವವಿರುವ ಜೆ.ಕೆ.ಮಧುಸೂಧನ್ ಕತೆ,ಚಿತ್ರಕತೆ, ಸಂಭಾಷಣೆ ರಚಿಸಿ ಮೊದಲಬಾರಿ ಆಕ್ಷನ್ ಕಟ್ ಹೇಳಿದ್ದಾರೆ. ತುಮುಲಗಳನ್ನು ತುಂಬಿಕೊಂಡಿರುವ ವಕೀಲನಾಗಿ ಆರುಗೌಡ ನಾಯಕ. ವಾಹಿನಿಯ ಮುಖ್ಯಸ್ಥೆಯ ಮಗಳಾಗಿ ಕಾವ್ಯಶೆಟ್ಟಿ ನಾಯಕಿ. ಇವರೊಂದಿಗೆ ಯುದ್ದದಲ್ಲಿ ಕಣ್ಣು,ಕಿವಿ,ಮಾತನಾಡುವ ಸಾಮಥ್ರ್ಯವನ್ನು ಕಳೆದುಕೊಂಡಿರುವ ಪಾತ್ರದಲ್ಲಿ ದೇವರಾಜ್, ಹೆಂಡತಿಯಾಗಿ ಸುಧಾರಾಣ , ಪೋಷಕನಾಗಿ ಎಡಕಲ್ಲುಗುಡ್ಡದಮೇಲೆ ಚಂದ್ರಶೇಖರ್, ಅತಿಥಿ ನಟನಾಗಿ ಟಿ.ಎಸ್.ನಾಗಭರಣ ಅಭಿನಯವಿದೆ.

ನಿರ್ದೆಶಕರು, ಜಯಂತ್‍ಕಾಯ್ಕಣ ಸಾಹಿತ್ಯದ ಐದು ಗೀತೆಗಳಿಗೆ ಶ್ರೀಧರ್‍ಸಂಭ್ರಮ್ ಸಂಗೀತ ಸಂಯೋಜನೆ ಇದೆ. ಛಾಯಗ್ರಹಣ ಶ್ರೀನಿವಾಸ್‍ರಾಮಯ್ಯ, ಸಂಕಲನ ಕ್ರೇಜಿಮೈಂಡ್ಸ್, ನೃತ್ಯ ತ್ರಿಭುವನ್ ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ತಂಡವು 40 ಲಕ್ಷ ಜನರು ಪಾಲ್ಗೋಳ್ಳುವ ರಿಯಾಲಿಟಿ ಷೋ ನಡೆಸಲು ಯೋಜನೆ ಹಾಕಿಕೊಂಡಿದೆ. ಇದರ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಜಾಹಿರಾತು ಸಂಸ್ಥೆ ನಡೆಸುತ್ತಿರುವ ಚಂದ್ರಶೇಖರ್.ಆರ್.ಪದ್ಮಶಾಲಿ ಮುಖ್ಯ ನಿರ್ಮಾಪಕರು. ಇವರೊಂದಿಗೆ 11 ಜನರು ಸೇರಿಕೊಂಡು ಬ್ರೈನ್ ಶೇರ್ ಕ್ರಿಯೇಷನ್ಸ್ ಪ್ರೈ. ಲಿ ಸಂಸ್ಥೆ ತೆರೆದು ಇದರ ಮೂಲಕ ನಿರ್ಮಾಣ ಮಾಡಿದ್ದಾರೆ. ವರ ಮಹಾಲಕ್ಷೀ ಹಬ್ಬಕ್ಕೆ ತೆರೆಕಾಣ ಸಲು ತಂಡವು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
-7/04/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/