HOME
CINEMA NEWS
GALLERY
TV NEWS
REVIEWS
CONTACT US
ಭರ್ಜರಿ ಪೈರಸಿ ಕಾಟ
ಸಾಮಾನ್ಯವಾಗಿ ಚಿತ್ರದ ಗಳಿಕೆ ಕಡಿಮೆಯಾದರೆ ಪ್ರಚಾರವನ್ನು ಹೆಚ್ಚಿಗೆ ಮಾಡಲು ಮಾದ್ಯಮದವರನ್ನು ಭೇಟಿ ಮಾಡುವ ಪರಿಪಾಠ ಕಂಡುಬರುತ್ತದೆ. ಆದರೆ ಅಪರೂಪ ಎನ್ನುವಂತೆ ಬಿಡುಗಡೆಯಾದ ಮೂರು ದಿನದ ನಂತರ ‘ಭರ್ಜರಿ’ ತಂಡವು ಮೀಡಿಯಾ ಮುಂದೆ ಸಂತಸದಿಂದ ಹಾಜರಾಗಿತ್ತು. ವಿತರಣೆ ಮಾಡಿರುವ ಭಾಷ ಪ್ರಕಾರ ಇಲ್ಲಿಯವರೆಗೂ ಒಟ್ಟಾರೆ 25 ಕೋಟಿ ಗಳಿಕೆ ಬಂದಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ.

ಮುಂದೆ ಓದಿರಿ....................................
ಬಿಡುಗಡೆ ಖುಷಿಯಲ್ಲಿ ಒನ್ಸ್ ಮೋರ್ ಕೌರವ
‘ಒನ್ಸ್ ಮೋರ್ ಕೌರವ’ ಚಿತ್ರದ ಟ್ರೈಲರ್, ಹಾಡುಗಳನ್ನು ಅಮೇರಿಕಾದಲ್ಲಿರುವ ಕನ್ನಡಿಗರು ಇಷ್ಟಪಟ್ಟಿರುವುದು, ನಾಯಕ,ನಿರ್ಮಾಪಕ ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಪರದೆ ಮೇಲೆ ಬಿತ್ತರಗೊಂಡವು. ನಿರ್ದೇಶಕ ಎಸ್.ಮಹೇಂದರ್ ಚಿತ್ರದ ಕುರಿತು ಈ ರೀತಿ ವಿವರಣೆ ನೀಡಿದರು. ಹಳೇ, ಹೊಸ ಕಲಾವಿದರ ಸಂಗಮ ಎನ್ನಬಹುದು.

ಮುಂದೆ ಓದಿರಿ.....................................
ಹೊಸ ಅವತಾರದಲ್ಲಿ ಎಳೆಯರು ನಾವು ಗೆಳೆಯರು
ಡ್ರಾಮಾ ಜ್ಯೂನಿಯರ್ಸ್ ಮಕ್ಕಳು ನಟಿಸಿರುವ ‘ಎಳೆಯರು ನಾವು ಗೆಳೆಯರು’ ಚಿತ್ರವು ತೆರೆಕಂಡು ಜನರು ನೋಡುವ ಮೊದಲೇ ಚಿತ್ರಮಂದಿರದಿಂದ ಎತ್ತಂಗಡಿಯಾಗಿತ್ತು. ಇದನ್ನು ಮನಗಂಡ ನಿರ್ಮಾಪಕರು ಎರಡನೆ ಬಾರಿ ಧೈರ್ಯದಿಂದ ಮರುಬಿಡುಗಡೆ ಮಾಡುತ್ತಿರುವ ಪ್ರಯುಕ್ತ ವಿಷಯವನ್ನು ಹಂಚಿಕೊಳ್ಳಲು ಮಾದ್ಯಮದವರನ್ನು ಭೇಟಿ ಮಾಡಿದ್ದರು.

ಮುಂದೆ ಓದಿರಿ.....................................
3 ಘಂಟೆ 30 ದಿನ 30 ಸೆಕೆಂಡ್ ಹಾಡುಗಳ ಔತಣ
ಸೋಮವಾರದಂದು ‘3 ಘಂಟೆ 30 ದಿನ 30 ಸೆಕೆಂಡ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ಚೌಡಯ್ಯ ಸ್ಮಾರಕ ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ಮೊದಲ ಹಾಡನ್ನು ಬಿಡುಗಡೆ ಮಾಡಿದ ಮಹರ್ಷಿ ಆನಂದ್‍ಗುರೂಜಿ ಮಾತನಾಡುತ್ತಾ ಮೂರು ಸಂಖ್ಯೆಗಳನ್ನು ಕೂಡಿದರೆ ಒಂಬತ್ತು ಬರುವುದರಿಂದ ನವಗ್ರಹಗಳ ಆರ್ಶಿವಾದ ಇದೆ.

ಮುಂದೆ ಓದಿರಿ.....................................
ನನ್ ಮಗಳ ಹಾಡುಗಳು

ತಂದೆ-ಮಗಳು, ಸಿನಿಮಾ ಜಗತ್ತಿನ ಅಂತರಾಳವನ್ನು ಸಾರುವ ‘ನನ್ ಮಗಳೇ ಹಿರೋಯಿನ್’ ಪ್ರಚಾರದ ಮೊದಲ ಹಂತವಾಗಿ ಧ್ವನಿ ಸಾಂದ್ರಿಕೆಯು ಇತ್ತೀಚೆಗೆ ಲೋಕಾರ್ಪಣೆಗೊಂಡಿತು. ಮೊದಲ ಬಾರಿ ಕತೆ ಬರೆದು ನಿರ್ದೇಶನ ಮಾಡಿರುವ ಬಾಹುಬಲಿ ಮಾತನಾಡುತ್ತಾ ಸಂಗೀತ ನಿರ್ದೇಶಕರು ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಯೋಗರಾಜಭಟ್ಟರು ಒಂದು ಹಾಡನ್ನು ಬರೆದುಕೊಟ್ಟಿದ್ದರು. ಅರ್ಥವಾಗಲಿಲ್ಲವೆಂದು ಹೇಳಿದಾಗ ಕಾಫಿ ಕುಡಿಯುವದರೊಳಗೆ ಗೀತೆಯನ್ನು ರಚಿಸಿರುವುದು ಭಟ್ಟರ ದೊಡ್ಡ ಗುಣ.

ಮುಂದೆ ಓದಿರಿ.....................................
ಪಿ.ಕೆ.ಹೆಚ್. ದಾಸ್ ನಿರ್ದೇಶನದಲ್ಲಿ ಮತ್ತೊಂದು ಚಿತ್ರ
ಕನ್ನಡದ ಚಿತ್ರರಂಗದಲ್ಲಿ ಈವರೆಗೆ ನೂರಾರು ಚಲನಚಿತ್ರಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿರುವ ರಾಜ್ಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್ ಇತ್ತೀಚೆಗಷ್ಟೇ ವಿಜಯ ರಾಘವೇಂದ್ರ ಅಭಿನಯದಲ್ಲಿ ಮೂಡಿಬಂದ ಜಾನಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು. ಜಾನಿ ಅವರ ನಿರ್ದೇಶನದ ಮೊದಲ ಚಲನಚಿತ್ರವಾಗಿತ್ತು. ಆದರೆ ಜಾನಿ ನಿರೀಕ್ಷಿತ ಯಶಸ್ಸು ತಂದುಕೊಡಲಿಲ್ಲ. ಈಗ ದಾಸ್ ಮತ್ತೊಂದು ಚಲನಚಿತ್ರದ ನಿರ್ದೇಶನಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಮುಂದೆ ಓದಿರಿ.....................................
ಮಾಸ್ ಹೀರೋನ ಭರ್ಜರಿ ಸಿನಿಮಾ
ಮಾಸ್ ಹೀರೋ ಧೃವ ತನ್ನ ಮೂರನೇ ಚಿತ್ರದಲ್ಲೂ ಅಭಿಮಾನಿಗಳನ್ನು ರಂಜಿಸುವಲ್ಲಿ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ಆಗಿದ್ದಾರೆ. ಹೌದು, ಈ ಶುಕ್ರವಾರ ಬಿಡಗಡೆಯಾಗಿರುವ ಭರ್ಜರಿ ಆರಂಭದಿಂದ ಅಂತ್ಯದವರೆಗೆ ಸಖತ್ ಸೌಂಡ್ ಮಾಡುತ್ತಾ ಸಾಗುವ ಸಿನಿಮಾ ಆಗಿದೆ. ಕೆಲವರು ಹೊಡುದ್ರೆ ಮಾಸ್ ಆಗಿರುತ್ತೆ, ಇನ್ನು ಕೆಲವರು ಹೊಡುದ್ರೆ ಕ್ಲಾಸ್ ಆಗಿರತ್ತೆ, ಮತ್ತೆ ಕೆಲವರು ಹೊಡುದ್ರೆ ಕಾಮಿಡಿಯಾಗಿರುತ್ತೆ... ನಾನ್ ಹೊಡುದ್ರೆ...

ಮುಂದೆ ಓದಿರಿ.....................................
ಕಾವೇರಿಯ ರಕ್ಷಣೆಗೆ ಪಣತೊಟ್ಟ ನಾಯಕನ ಧೈರ್ಯ
ಸರಣ ಕೊಲೆಗಳ ರಹಸ್ಯವನ್ನು ಕಂಡುಹಿಡಿಯಲು ಕ್ರೈಮ್‍ಬ್ರ್ಯಾಂಚ್ ಇನ್ಸ್‍ಪೆಕ್ಟರ್ ಕ್ರ್ಯಾಕ್(ವಿನೋದ್ ಪ್ರಭಾಕರ್)ಹುಬ್ಬಳ್ಳಿಯಿಂದ ಸಿಲಿಕಾನ್ ಸಿಟಿಗೆ ವರ್ಗವಾಗಿ ಬರುತ್ತಾನೆ. ತನಿಖಾ ಹಂತದಲ್ಲಿ ಅನೇಕ ಮಹತ್ವದ ಸುಳಿವುಗಳನ್ನು ಪತ್ತೆ ಹಚ್ಚಿದ ನಾಯಕನಿಗೆ ಬೆಂಗಳೂರಿನಲ್ಲಿ ನಡೆಯುವ ಕೊಲೆಗಳಿಗೂ ಚೆನ್ನೈನಲ್ಲಿರುವ ಸುಪಾರಿ ಹಂತಕರಿಗೂ ಸಂಬಂಧವಿದೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಗುತ್ತದೆ.

ಮುಂದೆ ಓದಿರಿ.....................................

ಸಿನಿಮಾ ತಾರೆಯರ ಕಬಡ್ಡಿ ಪಂದ್ಯ
ಸಿಸಿಎಲ್ ಎನ್ನುವಂತೆ ಈಗ ‘ಸಿಕೆಎಲ್’ (ಸೆಲಬ್‍ರಿಟಿ ಕಬಡ್ಡಿ ಲೀಗ್) ಹುಟ್ಟಿಕೊಂಡಿದೆ. ಚಂದನವನದ ನಟಿಯರು ಪಂದ್ಯದಲ್ಲಿ ಸೆಣಸಾಡುವುದು ವಿಶೇಷವಾಗಿದೆ. ಗುರುವಾರದಂದು ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಕ್ಲಬ್‍ನಲ್ಲಿ ಸಿಕೆಎಲ್‍ನ ಟೀಸರ್. ಲೋಬೋ ಅನಾವರಣಗೊಂಡಿತು. ಮಹಿಳಾ ಸಬಲೀಕರಣ ಸಲುವಾಗಿ ಪಂದ್ಯವನ್ನು ಏರ್ಪಡಿಸಿರುವುದು ಸಂತಸ ತಂದಿದೆ. ಪ್ರಸಕ್ತ ಮಹಿಳೆಯರು ಸ್ಪೇಸ್‍ನಿಂದ ಪೌರಕಾರ್ಮಿಕವರೆವಿಗೂ ಕೆಲಸ ಮಾಡುತ್ತಿದ್ದಾರೆ.

ಮುಂದೆ ಓದಿರಿ.....................................

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore
LATEST GALLERY
LATEST CINEMA NEWS